2024 ರಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬಹುದೇ?

ಲೋಕಸಭಾ ಚುನಾವಣೆಗೆ ಇನ್ನೂ 4 ವರ್ಷಗಳು ಇರುವಾಗ ಇಂತಹ ಪ್ರಶ್ನೆ ಸೂಕ್ತವೇ ? ಎಂದು ಎಲ್ಲರಿಗೂ ಅನಿಸಬಹುದು. ಆದರೆ ಪ್ರಸ್ತುತ ದೇಶದ ರಾಜಕೀಯ ಮತ್ತು ಆರ್ಥಿಕ ಸನ್ನಿವೇಶವನ್ನು ಗಮನಿಸಿದರೆ, ಮುಂದಿನ ಚುನಾವಣೆಗಳಲ್ಲಿ ಬಿಜೆಪಿ ಇನ್ನೂ ತನ್ನ ಅಧಿಕಾರವನ್ನು ಉಳಿಸಿಕೊಳ್ಳುತ್ತದೆಯೇ? ಅಥವಾ ಪಕ್ಷದ ಜನಪ್ರಿಯತೆ ಕುಸಿಯುತ್ತಿದೆಯೇ? ಎಂಬುದರ ಬಗ್ಗೆ ಅನೇಕ ಜಿಜ್ಞಾಸೆಗಳು ಮೂಡುತ್ತಿರುವುದು ಸುಳ್ಳಲ್ಲ. ಪ್ರಸಕ್ತ ರಾಜಕೀಯ ಸ್ಥಿತಿಗತಿಯನ್ನು ಅವಲೋಕನ ಮಾಡಿದಲ್ಲಿ , ಕಾಂಗ್ರೆಸ್ ಸಹಿತ ಎಲ್ಲಾ ಪ್ರಾದೇಶಿಕ ಪಕ್ಷಗಳೂ ಸಂಘಟಿತವಾಗಿ, ನಿಸ್ವಾರ್ಥವಾಗಿ ಮತ್ತು ದೇಶದ ಹಿತ ದೃಷ್ಟಿಯಿಂದ… Read More 2024 ರಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬಹುದೇ?

ಇತ್ತೀಚಿನ ದಿನಗಳಲ್ಲಿ ಭಾರತೀಯರು ಮೋದಿಯವರನ್ನು ಮತ್ತು ಬಿಜೆಪಿಯನ್ನು ಇಷ್ಟ ಪಡುತ್ತಿಲ್ಲವೇ?

ಇತ್ತೀಚಿನ ದಿನಗಳಲ್ಲಿ ಬಹುಪಾಲು ಭಾರತೀಯರು ಶ್ರೀ ನರೇಂದ್ರ ಮೋದಿಯನ್ನು ಇಷ್ಟಪಡುತ್ತಿಲ್ಲ ಎಂದು ಖಡಾ ಖಂಡಿತವಾಗಿ ಹೇಳಲಾಗುವುದಿಲ್ಲವಾದರೂ, ಭಾರತೀಯರು ಬಿಜೆಪಿಯಿಂದ ಸ್ವಲ್ಪ ಅಂತರವನ್ನು ಕಾಪಾಡಿಕೊಳ್ಳಲು ಬಯಸುತ್ತಿದ್ದಾರೆ ಎಂದು ಮಾತ್ರ ಹೇಳಬಲ್ಲೆ. ಅದಕ್ಕೆ ಉತ್ತರವನ್ನು ಹುಡುಕುವುದು ತುಂಬಾ ಸುಲಭ. ಪ್ರಧಾನಿಗಳಾಗಿ ಮೋದಿಯವರ ಕಾರ್ಯತತ್ಪರತೆಯನ್ನು ದೇಶ ವಿದೇಶಗಳಲ್ಲಿ ಇರುವ ಕೋಟ್ಯಾಂತರ ಭಾರತೀಯರು ಬಹಳವಾಗಿ ಇಷ್ಟು ಪಡುತ್ತಾರೆ. ದಿನದ ಹದಿನೆಂಟು ಗಂಟೆಗಳ ಕಾಲ ದೇಶಕ್ಕಾಗಿಯೇ ನಿಸ್ವಾರ್ಥವಾಗಿ ದುಡಿಯುತ್ತಿರುವುದನ್ನು ಜನರು ಗೌರವಿಸುತ್ತಾರೆ. ನಿಜವಾಗಿಯೂ ಮೋದಿಯವರು ಪ್ರಧಾನಿಗಳಾದ ಮೇಲೆ ನಮ್ಮ ವಿದೇಶೀ ಬಾಂಧವ್ಯ ಬಹಳಷ್ಟು ಸುಧಾರಣೆಯಾಗಿದೆ.… Read More ಇತ್ತೀಚಿನ ದಿನಗಳಲ್ಲಿ ಭಾರತೀಯರು ಮೋದಿಯವರನ್ನು ಮತ್ತು ಬಿಜೆಪಿಯನ್ನು ಇಷ್ಟ ಪಡುತ್ತಿಲ್ಲವೇ?

ದೆಹಲಿ ಚುನಾವಣಾ ಪೂರ್ವ ಸಮೀಕ್ಷೆ

ಈ ಬಾರಿಯ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಯಾರು ಗೆಲ್ಲಬಹುದು ಎಂದು ಎರಡು ಮೂರು ವಾರಗಳ ಹಿಂದೆ ಕೇಳಿದ್ದರೆ, ಕೇಜ್ರಿವಾಲ್ ನಾಯಕತ್ವದ ಎಎಪಿ ಅತ್ಯಂತ ಸುಲಭವಾಗಿ ಮತ್ತೊಮ್ಮೆ ವಿಜಯಶಾಲಿಯಾಗುತ್ತದೆ ಎಂದು ಹೇಳಬಹುತಾಗಿತ್ತು. ಕಳೆದ ಬಾರಿಯಂತೆ ಅಭೂತಪೂರ್ವ ಯಶಸ್ಸಲ್ಲದಿದ್ದರೂ 70ಸೀಟಿನಲ್ಲಿ 45-55 ಮಂದಿ ಶಾಸಕರು ಗೆದ್ದು ಬಹಳ ಸುಲಭವಾಗಿ ಅಧಿಕಾರಕ್ಕೆ ಮತ್ತೊಮ್ಮೆ ಬರುತ್ತಾರೆ ಎಂದು ಹೇಳಬಹುದಾಗಿತ್ತು. ಆದರೆ ಕಳೆದ ಒಂದು ವಾರದಲ್ಲಿ ಈ ಚಿತ್ರ ಸಂಪೂರ್ಣವಾಗಿ ಬದಲಾಗಿ ಹೋಗಿ ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿ ಮತ್ತು ಎಎಪಿ ನಡುವೆ 50:50 ಆಗಿದೆ… Read More ದೆಹಲಿ ಚುನಾವಣಾ ಪೂರ್ವ ಸಮೀಕ್ಷೆ

ಭಾರತೀಯ ಜ್ಯೋತಿಷ್ಯದ ಪ್ರಕಾರ ಬಿಜೆಪಿ ಪಕ್ಷದ ಭವಿಷ್ಯವೇನು?

ಇಂಡಿಯನ್ ಕೌನ್ಸಿಲ್ ಆಫ್ ಜ್ಯೋತಿಷ್ಯ ವಿಜ್ಞಾನದಲ್ಲಿ (1997) ಎಮ್ಎ ಮಾಡಿರುವಂತಹ ವೈದಿಕ ಜ್ಯೋತಿಷ್ಯವನ್ನು ಅಭ್ಯಾಸ ಮಾಡುತ್ತಿರುವ, ಶ್ರೀಯುತರಾದ ರಾಜೀವ್ ಸೇಥಿ ಅವರು ಹೇಳುವ ಪ್ರಕಾರ ಇಂಟರ್ನೆಟ್ನಲ್ಲಿ ಲಭ್ಯವಿರುವ ಮಾಹಿತಿ ಪ್ರಕಾರ ಬಿಜೆಪಿ ಪಕ್ಷವು 6/4/1980 ರಂದು ದೆಹಲಿಯಲ್ಲಿ ಬೆಳಿಗ್ಗೆ 11.45 ಕ್ಕೆ ರಚನೆಯಾಯಿತು ಎಂದು ತಿಳಿಯಬರುತ್ತದೆ. ಇದನ್ನೇ ಮೂಲವಾಗಿಟ್ಟುಕೊಂಡು ಲೆಕ್ಕ ಹಾಕಿದಲ್ಲಿ, ಬಿಜೆಪಿ 23/02/2019 ರಿಂದ 16/08/2020 ರವರೆಗೆ ಚಂದ್ರ ಮಹಾದಾಶ-ರಾಹು ಭುಕ್ತಿ ನಡೆಸುತ್ತಿದೆ. ಚಂದ್ರ ಮತ್ತು ರಾಹು ಪರಸ್ಪರ ಶತೃಗಳು ಮತ್ತು ಅವರ ದಶಾ-ಅಂತರ್ದಶಾ ಸರಿಯಾಗಿಲ್ಲದ… Read More ಭಾರತೀಯ ಜ್ಯೋತಿಷ್ಯದ ಪ್ರಕಾರ ಬಿಜೆಪಿ ಪಕ್ಷದ ಭವಿಷ್ಯವೇನು?

ಉಚಿತ ಆಮಿಷಗಳು ಮತ್ತು ದೇಶದ ಆರ್ಥಿಕತೆ

ಚುನಾವಣೆಯಲ್ಲಿ ನಾವುಗಳು ಮಾಡುವುದು ಮತದಾನ. ದಾನ ಮಾಡುವ ಕೈಗಳು ಅರ್ಥಾತ್ ಕೊಡುವ ಕೈಗಳು ಎಂದಿಗೂ ಮೇಲೆ ಇರುತ್ತವೆಯೇ ಹೊರತು, ಬೇಡುವ ರೀತಿಯಲ್ಲಿ ಇರುವುವುದಿಲ್ಲ. ಹಾಗಾಗಿ ಚುನಾವಣಾ ಸಮಯದಲ್ಲಿ ರಾಜಕೀಯ ಪಕ್ಷಗಳು ನೀಡುವ ಹಣ, ಹೆಂಡ ಮತ್ತು ಗೃಹೋಪಯೋಗಿ ವಸ್ತುಗಳ ಉಚಿತ ಆಮೀಷಗಳಿಗೆ ಬಲಿಯಾಗಿ ದೇಶದ ಆರ್ಥಿಕತೆಯನ್ನು ಅಧೋಗತಿಗೆ ತಳ್ಳದೇ, ಸ್ವಾಭಿಮಾನಿಗಳಾಗಿ, ಸ್ವಾವಲಂಭಿಗಳಾಗಿ, ನಮ್ಮ ರಾಜ್ಯದ ಒಳಿತಿಗಾಗಿ ಮೇ 10ರಂದು ನಿರ್ಭೆಡೆಯಿಂದ ತಪ್ಪದೇ ಮತದಾನ ಮಾಡೋಣ ಅಲ್ವೇ?… Read More ಉಚಿತ ಆಮಿಷಗಳು ಮತ್ತು ದೇಶದ ಆರ್ಥಿಕತೆ