ಅಳಿಲು ಸೇವೆ

ಅದು ಎಂಭತ್ತನೇ ದಶಕದ ಆರಂಭದ ದಿನಗಳು. ನಾನಾಗ ಇನ್ನೂ ಮಿಡ್ಲ್ ಸ್ಕೂಲಿನಲ್ಲಿ ಓದುತ್ತಿದ್ದೆ. ಅದೊಂದು ರಾತ್ರಿ ನನ್ನ ತಂಗಿಗೆ ಜ್ವರ ಬಂದಿದ್ದ ಕಾರಣ ಆಕೆಯನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಆಕೆಯನ್ನು ಸೈಕಲ್ಲಿನ ಮುಂದುಗಡೆಯ ಬಾರ್ ಮೇಲಿನ ಚಿಕ್ಕ ಸೀಟಿನಲ್ಲಿ ಕೂರಿಸಿಕೊಂಡು ಮನೆಗೆ ಹಿಂತಿರುಗುವಾಗ ಇಳಿಜಾರಿನಲ್ಲಿ ಆಕೆ ಅಚಾನಕ್ಕಾಗಿ ಸೈಕಲ್ ಮುಂದಿನ ಚಕ್ರಕ್ಕೆ ತನ್ನ ಕಾಲು ಕೊಟ್ಟ ಪರಿಣಾಮ ಆಕೆಯ ಕಾಲಿನ ಹಿಮ್ಮಡಿ ಕಿತ್ತು ಬಂದು ಎಂಟು ಹತ್ತು ಹೊಲಿಗೆ ಹಾಕಿದ್ದಲ್ಲದೇ ಸಣ್ಣ ಪುಟ್ಟ ಗಾಯಗಳಾಗಿದ್ದವು. ಸೈಕಲ್ಲಿನಿಂದ ಕೆಳಗೆ… Read More ಅಳಿಲು ಸೇವೆ

ನಂಬಿಕೆ

ಇಂದಿನ ನಮ್ಮ ಬಹುತೇಕ ಯುವ ಜನಾಂಗವನ್ನು ಕರೆದು, ಈ ಕಾರ್ಯವನ್ನು ನಿಮ್ಮಿಂದ ಸಾಧಿಸಲು ಸಾಧ್ಯವೇ ? ಎಂದು ಒಂದು ಸಾಮಾನ್ಯ ಕೆಲಸವನ್ನು ತೋರಿಸಿದರೂ, ಅವರಿಂದ ಮೊದಲು ಬರುವ ಉತ್ತರವೇ ಇಲ್ಲಾ. ಇದು ಸಾಧ್ಯವಿಲ್ಲ. ಅದು ಏಕೆ ಸಾಧ್ಯವಿಲ್ಲಾ ಎಂದು ನಾವು ಕೇಳುವುದಕ್ಕೆ ಮುಂಚೆಯೇ, ಅದಕ್ಕೆ ನಾನಾ ರೀತಿಯ ಕಾರಣಗಳನ್ನು ನೀಡಲು ಆರಂಭಿಸುತ್ತಾರೆ. ಅರೇ ಅದೇಕೆ ಸಾಧ್ಯವಿಲ್ಲಾ? ನೀವು ಹೀಗೆ ಮಾಡಿದರೆ ಖಂಡಿತವಾಗಿಯೂ ನಿಮ್ಮ ಕೆಲಸ ಕಾರ್ಯಸಾಧುವಾಗುತ್ತದೆ ಎಂದು ತಿಳಿಸಿದಾಗ ಹಾಂ!! ಹೌದು. ನಿಜ. ನೀವು ಹೇಳಿದ ಹಾಗೆ… Read More ನಂಬಿಕೆ

ಕಾಮನ ಹುಣ್ಣಿಮೆ / ಹೋಳಿ ಹಬ್ಬ

ಶಿಶಿರ ಋತುವಿನ ಫಾಲ್ಗುಣ ಮಾಸದ ಪೌರ್ಣಿಮೆ ದಿನದಂದು ದೇಶಾದ್ಯಂತ ಅತ್ಯಂತ ಸಡಗರ ಸಂಭ್ರಮಗಳಿಂದ ಆಚರಿಸಲ್ಪಡುವ ಕಾಮನ ಹುಣ್ಣಿಮೆ, ವಸಂತ ಹುಣ್ಣಿಮೆ ಅರ್ಥಾತ್ ಹೋಳಿ/ಹೋಲಿ ಹಬ್ಬದ ಪೌರಾಣಿಕ ಹಿನ್ನಲೆ ಮತ್ತು ಅದರ ಆಚರಣೆ ಸವಿವರಗಳು ಇದೋ ನಿಮಗಾಗಿ… Read More ಕಾಮನ ಹುಣ್ಣಿಮೆ / ಹೋಳಿ ಹಬ್ಬ

ರಾಮ ಹೆಚ್ಚೋ, ರಾವಣ ಹೆಚ್ಚೋ‌

ಎರಡನೆಯ ಮಗುವಿನ‌ ನಿರೀಕ್ಷೆಯಲ್ಲಿದ್ದ ಒಬ್ಬ ತಾಯಿ ತನ್ನ ಎಂಟು ವರ್ಷದ ಮಗಳನ್ನು ರಾತ್ರಿ ಮೆಲ್ಲಗೆ ತಲೆ ಸವರುತ್ತಾ ಹಾಸಿಗೆಯ ಮೇಲೆ ಮಲಗಿಸುತ್ತಾ ಕುತೂಹಲದಿಂದ ಮಗಳನ್ನು ಕೇಳುತ್ತಾಳೆ. ಪುಟ್ಟೀ ನಿನಗೆ ತಮ್ಮ ಪಾಪು ಬೇಕಾ, ಇಲ್ಲವೇ ತಂಗಿ ಪಾಪು ಬೇಕಾ ಎಂದು. ತಾಯಿ ಕೇಳಿದ ಪ್ರಶ್ನೆಗೆ ಮಗಳು ಅಷ್ಟೇ ಮುಗ್ಧವಾಗಿ ನನಗೆ ತಂಗಿ ಪಾಪು ಬೇಡ ತಮ್ಮ ಪಾಪು ಬೇಕು ಅಂತ ಹೇಳುತ್ತಾಳೆ. ಪಾಪ ಮುಗ್ಧ ಮಗುವಿಗೆ ಏನೂ ತಿಳಿಯದು ‌ಎಂದು ಭಾವಿಸಿದ ತಾಯಿ ಮಾತು ಮುಂದುವರೆಸುತ್ತಾ, ಅಲ್ಲಾ… Read More ರಾಮ ಹೆಚ್ಚೋ, ರಾವಣ ಹೆಚ್ಚೋ‌