ದೇವರ ಲೆಕ್ಕಾಚಾರ
ಒಮ್ಮೆ ಇಬ್ಬರು ವ್ಯಕ್ತಿಗಳು ಅರಳೀ ಕಟ್ಟೆಯ ಬಳಿ ಕುಳಿತು ಲೋಕೋಭಿರಾಮವಾಗಿ ಹರಟುತ್ತಿದ್ದರು. ಅದಾಗಲೇ ಸಂಜೆಯಾಗಿದ್ದು ದಟ್ಟವಾದ ಕಾರ್ಮೋಡ ಕವಿದಿತ್ತು. ಅಷ್ಟೊತ್ತಿಗೆ ಅಲ್ಲಿಗೆ ಅಪರಿಚಿತ ವ್ಯಕ್ತಿಯೊಬ್ಬರ ಆಗಮನವಾಗಿ, ಅಭ್ಯಂತರವಿಲ್ಲದಿದ್ದರೆ, ನಾನೂ ನಿಮ್ಮೊಂದಿಗೆ ಸೇರಿಕೊಳ್ಳಬಹುದೇ ಎಂದು ಕೇಳಿದಾಗ ಅವರಿಬ್ಬರೂ ಓಹೋ ಅಗತ್ಯವಾಗಿ ಎಂದು ಹೇಳಿದರು. ಅವರೆಲ್ಲರೂ ತಮ್ಮ ಮಾತುಕಥೆ ಮುಂದುವರೆಸುತ್ತಿದ್ದಂತೆಯೇ, ಜೋರಾಗಿ ಮಳೆ ಬರಲು ಪ್ರಾರಂಭಿಸಿದಾಗ ಎಲ್ಲರೂ ಹತ್ತಿರದ ದೇವಸ್ಥಾನದ ಒಳಗೆ ಹೋಗಿ ಮಳೆಯಿಂದ ತಮ್ಮನ್ನು ರಕ್ಷಿಸಿಕೊಂಡರು. ಆಷ್ಟರಲ್ಲಿ ಆ ಆಗಂತುಕನು ನನಗೆ ಹಸಿವಾಗುತ್ತಿದೆ ಎಂದಾಗ ಉಳಿದ್ದಬ್ಬರೂ ಸಹಾ ಹೌದು… Read More ದೇವರ ಲೆಕ್ಕಾಚಾರ
