108 ಬಗೆಯ ದೋಸೆಗಳ ನಡುವೆ ಕಳೆದುಹೋಗುತ್ತಿದೆಯೇ ಅಪ್ಪಟ ದಕ್ಷಿಣ ಭಾರತದ ದೋಸೆ?

ಹದವಾಗಿ ರುಬ್ಬಿದ ಅಕ್ಕಿ–ಉದ್ದಿನ ಬೇಳೆಯ ಹಿಟ್ಟಿನಿಂದ ತಯಾರಾಗುತ್ತಿದ್ದ ದೋಸೆಯಿಂದ ಚೀಸ್, ಪನೀರ್, ಚಾಕೊಲೇಟ್, ನೂಡಲ್ಸ್‌ವರೆಗೆ… ಬದಲಾವಣೆ ರುಚಿಯ ವಿಸ್ತರಣೆಯೇ? ಮೂಲ ಪಾಕಪರಂಪರೆಗೆ ಧಕ್ಕೆಯೇ? ಒಂದು ಕಾಲದಲ್ಲಿ ಬೆಳಗಿನ ಉಪಾಹಾರ ಎಂದರೆ ದೊಡ್ಡ ಮೆನು ಕಾರ್ಡ್ ಬೇಕಿರಲಿಲ್ಲ. ದೋಸೆ, ಇಡ್ಲಿ, ವಡೆ, ಉಪ್ಪಿಟ್ಟು. ಅದರಲ್ಲೂ ದೋಸೆ ಎಂದರೆ, ಹದವಾಗಿ ನೆನೆಸಿದ ಅಕ್ಕಿ ಮತ್ತು ಉದ್ದಿನ ಬೇಳೆಯನ್ನು ರುಬ್ಬಿ, ನೈಸರ್ಗಿಕವಾಗಿ ಹುದುಗಿಸಿದ ಹಿಟ್ಟು. ಬಿಸಿಯಾದ ಕಾವಲಿಯ ಮೇಲೆ ಹಿಟ್ಟನ್ನು ಹರಡಿ, ಅಗತ್ಯಕ್ಕೆ ತಕ್ಕಷ್ಟು ಎಣ್ಣೆ ಅಥವಾ ತುಪ್ಪ ಹಾಕಿ, ಗರಿಗರಿಯಾದ… Read More 108 ಬಗೆಯ ದೋಸೆಗಳ ನಡುವೆ ಕಳೆದುಹೋಗುತ್ತಿದೆಯೇ ಅಪ್ಪಟ ದಕ್ಷಿಣ ಭಾರತದ ದೋಸೆ?

ನಂಬಿಕೆ ಮತ್ತು ಆತ್ಮವಿಶ್ವಾಸ

ಅದೊಮ್ಮೆ ಭಿಕ್ಷುಕನೊಬ್ಬ ರೈಲಿನಲ್ಲಿ ಹಾಗೆಯೇ ಭಿಕ್ಷೆ ಬೇಡುತ್ತಿರುವಾಗ ಸೂಟು ಬೂಟುಗಳನ್ನು ಧರಿಸಿದ್ದ ಒಬ್ಬ ಗಣ್ಯವ್ಯಕ್ತಿಯನ್ನು ನೋಡಿ ಈ ವ್ಯಕ್ತಿ ಬಹಳ ಶ್ರೀಮಂತನಾಗಿರಬೇಕು. ಅವನ ಬಳಿ ಬಿಕ್ಷೆ ಬೇಡಿದಲ್ಲಿ ಆತ ಖಂಡಿತವಾಗಿಯೂ ತುಂಬಾ ಹಣವನ್ನು ಕೊಡುತ್ತಾನೆ ಎಂದು ಭಾವಿಸಿ ಆ ವ್ಯಕ್ತಿಯ ಬಳಿ ಹೋಗಿ ಭಿಕ್ಷೆಯನ್ನು ಕೇಳಿದನು. ಆ ವ್ಯಕ್ತಿ ಭಿಕ್ಷುಕನನ್ನು ಒಮ್ಮೆ ಮೇಲಿಂದ ಕೆಳಗಿನವರೆಗೂ ನೋಡಿ, ನೀವು ಹೀಗೆ ಯಾವಾಗಲೂ ಜನರಿಂದ ಭಿಕ್ಷೆ ಕೇಳುತ್ತಲೇ ಇರುತ್ತೀರಿ. ಆದರೆ ನೀವು ಯಾರಿಗಾದರೂ ಏನನ್ನಾದರೂ ಒಮ್ಮೆ ನೀಡಿದ್ದೀರಾ? ಎಂದು ಕೇಳಿದರು.… Read More ನಂಬಿಕೆ ಮತ್ತು ಆತ್ಮವಿಶ್ವಾಸ