ಅಸ್ಸಾಂನ ಬಿಹು ನೃತ್ಯ. ಮೂರು ಬಿಹುಗಳ ವೈಶಿಷ್ಟ್ಯವೇನು? ಕರ್ನಾಟಕದ ಜನಪದ ಕಲೆಗಳೊಂದಿಗಿನ ಸಾಮ್ಯತೆಗಳೇನು?

ಅಸ್ಸಾಂನ ಸಂಸ್ಕೃತಿ ಎಂದಾಕ್ಷಣ ನೆನಪಾಗುವುದು ಬಿಹು. ಇದು ಕೇವಲ ನೃತ್ಯ ಅಥವಾ ಉತ್ಸವವಲ್ಲ. ಅಸ್ಸಾಂನ ಕೃಷಿ ಬದುಕು, ಋತುಚಕ್ರ, ಪ್ರಕೃತಿಯೊಂದಿಗಿನ ಸಂಬಂಧ, ಪ್ರೀತಿ, ಸಂಭ್ರಮ ಮತ್ತು ಸಮುದಾಯದ ಒಗ್ಗಟ್ಟನ್ನು ಪ್ರತಿಬಿಂಬಿಸುವ ವಿಶಿಷ್ಟ ಸಾಂಸ್ಕೃತಿಕ ಪರಂಪರೆ. ವರ್ಷದಲ್ಲಿ ಮೂರು ಬಾರಿ ಆಚರಿಸುವ ಬಿಹುವಿನ ಪ್ರತಿಯೊಂದು ರೂಪಕ್ಕೂ ವಿಭಿನ್ನ ಉದ್ದೇಶ ಮತ್ತು ಆಚರಣೆಗಳಿವೆ. ಅದರಲ್ಲಿಯೂ ಬಣ್ಣಬಣ್ಣದ ವೇಷಭೂಷಣ, ಚುರುಕಾದ ಹೆಜ್ಜೆಗಳು ಮತ್ತು ವಿಶಿಷ್ಟ ವಾದ್ಯಗಳ ನಾದದಿಂದ ಕಂಗೊಳಿಸುವ ಬಿಹು ನೃತ್ಯ ಅಸ್ಸಾಂನ ಸಾಂಸ್ಕೃತಿಕ ಗುರುತಾಗಿ ವಿಶ್ವದಾದ್ಯಂತ ಪ್ರಸಿದ್ಧಿ ಪಡೆದಿದೆ. ಕನ್ನಡಿಗರಿಗೆ… Read More ಅಸ್ಸಾಂನ ಬಿಹು ನೃತ್ಯ. ಮೂರು ಬಿಹುಗಳ ವೈಶಿಷ್ಟ್ಯವೇನು? ಕರ್ನಾಟಕದ ಜನಪದ ಕಲೆಗಳೊಂದಿಗಿನ ಸಾಮ್ಯತೆಗಳೇನು?

ಬಾಳಗಂಚಿ ಚೋಮನ ಹಬ್ಬ

ಹಾಸನ ಜಿಲ್ಲೆಯ, ಚೆನ್ನರಾಯಪಟ್ಟಣ ತಾಲೂಕಿನ, ಹಿರೀಸಾವೆ ಹೋಬಳಿಯ ಬಳಿಯ ಪುಟ್ಟದಾದ ಹಳ್ಳಿಯೇ ನಮ್ಮೂರು ಬಾಳಗಂಚಿ. ಸದ್ಯಕ್ಕೆ 350-500 ಮನೆಗಳು ಇದ್ದು ಸುಮಾರು ಹಲವರು ಈಗಾಗಲೇ ಕೆಟ್ಟು ಪಟ್ಟಣಕ್ಕೆ ಸೇರು ಎನ್ನುವಂತೆ ದೇಶಾದ್ಯಂತ ವಿವಿಧ ನಗರ ಪ್ರದೇಶಗಳಿಗೆ ವಲಸೆ ಹೋಗಿರುವ ಕಾರಣ, ಸದ್ಯಕ್ಕೆ ಎರಡು ಮೂರು ಸಾವಿರದವರೆಗೂ ಜನಸಂಖ್ಯೆ ಇರುವಂತಹ ಹಳ್ಳಿ. ಹೆಸರಿಗಷ್ಟೇ ಚಿಕ್ಕದಾದರೂ ಇತಿಹಾಸ ಇಣುಕಿ ನೋಡಿದರೆ ಗುರು ವಿದ್ಯಾರಣ್ಯರ ತವರೂರು ಎಂದು ಖ್ಯಾತಿ ಹೊಂದಿದೆ. ಇನ್ನು ಕೆಲವರು ಗುರು ವಿದ್ಯಾರಣ್ಯರು ವಾಸಿಸಿದ ಸ್ಥಳವೆಂದು ಇಲ್ಲವೇ ತಪಸ್ಸನ್ನು… Read More ಬಾಳಗಂಚಿ ಚೋಮನ ಹಬ್ಬ