ಪಾನಿಪುರಿ ಹುಡುಗ, ಯಶಸ್ವಿ ಜೈಸ್ವಾಲ್ ಯಶೋಗಾಥೆ

ಪ್ರತಿಭೆಯ ಜೊತೆಗೆ ಕಠಿಣ ಪರಿಶ್ರಮ ಇದ್ದರೂ, ಆರ್ಥಿಕವಾಗಿ ಸದೃಢರಾಗಿರದಿದ್ದ ಕಾರಣ, ಉತ್ತರ ಪ್ರದೇಶದ ಯುವ ಕ್ರಿಕೆಟಿಗ, ಮುಂಬೈನ ಆಜಾದ್ ಮೈದಾನದಲ್ಲೇ ಆಶ್ರಯ ಪಡೆದು, ಜೀವನೋಪಾಯಕ್ಕಾಗಿ ಪಾನಿಪುರಿ ಮಾರುತ್ತಾ, ಅಂತಿಮವಾಗಿ ಭಾರತದ ಕಿರಿಯರ ತಂಡದ ಅತ್ಯಂತ ಯಶಸ್ವಿ ಆಟಗಾರನಾಗಿ ಈ ಬಾರಿಯ 9 ಐಪಿಎಲ್ ಪಂದ್ಯಗಳಲ್ಲಿ,47.56 ಸರಾಸರಿಯಲ್ಲಿ 428 ಓಟಗಳನ್ನು ಗಳಿಸುವ ಮೂಲಕ ಆರೆಂಜ್ ಕ್ಯಾಪ್ ಗಾಗಿ ಫಾಫ್ ಡ್ಲೂಪ್ಲೆಸೀಯ ಜೊತೆಯಲ್ಲಿ ಹಗ್ಗ ಜಗ್ಗಾಟದಲ್ಲಿ ಇರುವ 21ರ ಹರೆಯದ ಕ್ರಿಕೆಟಿಗ ಯಶಸ್ವಿ ಜೈಸ್ವಾಲ್ ಯಶೋಗಾಥೆ ನಿಜಕ್ಕೂ ನಮ್ಮ ಇಂದಿನ ಯುವ ಜನರಿಗೆ ಪ್ರೇರಣೆಯಾಗುವಂತಿದೆ.… Read More ಪಾನಿಪುರಿ ಹುಡುಗ, ಯಶಸ್ವಿ ಜೈಸ್ವಾಲ್ ಯಶೋಗಾಥೆ

ಅಪ್ಪಾ

ರಮೇಶ ಹಳ್ಳಿಯೊಂದರಲ್ಲಿರಲ್ಲಿ ಆರತಿಗೊಬ್ಬಳು ಮಗಳು, ಕೀರ್ತಿಗೊಬ್ಬ ಮಗ ಎನ್ನುವಂತೆ ನಾವಿಬ್ಬರು ನಮಗಿಬ್ಬರು ಎಂಬು ಮುದ್ದಾದ ಸಂಸಾರವಿತ್ತು. ಪಿತ್ರಾರ್ಜಿತವಾಗಿ ಬಂದಿದ್ದ ಅಲ್ಪ ಸ್ವಲ್ಪ ಹೊಲ ಗದ್ದೆಯಲ್ಲೇ ಮಳೆಯಾಧಾರಿತವಾಗಿ ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿದ್ದ. ಮಗಳು ಹತ್ತನೇ ತರಗತಿಯಲ್ಲಿ ಇಂಗ್ಲೀಶ್, ಗಣಿತದಲ್ಲಿ ಫೇಲ್ ಆಗಿ ಮುಂದೆ ಓದಲಾರೆ ಎಂದಾಗ ಮಗಳನ್ನು ಬಲವಂತ ಮಾಡದೇ, ಮನೆಯಲ್ಲೇ ಹಾಡು ಹಸೆ, ಆಡುಗೆ, ಶಾಸ್ತ್ರ ಸಂಪ್ರದಾಯಗಳನ್ನೆಲ್ಲಾ ಕಲಿಸಿ ವಯಸ್ಸು 18 ಆಗುತ್ತಿದ್ದಂತೆಯೇ ಹತ್ತಿರದ ಪಟ್ಟಣವೊಂದರಲ್ಲಿ ಕೆಲಸ ಮಾಡುತ್ತಿದ ಹುಡುಗನೊಂದಿಗೆ ಮದುವೆ ಮಾಡಿಕೊಟ್ಟಿದ್ದ. ಹೆಂಡತಿಯ ಕೋರಿಕೆಯ… Read More ಅಪ್ಪಾ

ಗೋವು ಕಳ್ಳರು

ಹೇಳಿ ಕೇಳಿ ಮನುಷ್ಯ ಸಂಘ ಜೀವಿ. ಹಾಗಾಗಿಯೇ ತಾನೊಬ್ಬನೇ ಒಂಟಿಯಾಗಿ ಇರಲು ಸಾಧ್ಯವಿರದೇ ಅನೇಕರ ಜೊತೆಗೆ ಗುಂಪು ಗುಂಪಾಗಿ ಒಟ್ಟೊಟ್ಟಿಗೆ ಒಂದು ಕಡೆ ವಾಸಿಸಲು ಆರಂಭಿಸಿದ ಕಾರಣದಿಂದಲೇ ಊರು ಮತ್ತು ಕೇರಿಗಳು ಆರಂಭವಾಯಿತು. ಕೇವಲ ಮನುಷ್ಯರೇ ತನ್ನೊಂದಿಗೆ ಇದ್ದರೆ ಸಾಲದು ತನ್ನ ಜೊತೆ ಪಶು ಪ್ರಾಣಿ ಪಕ್ಷಿಗಳೂ ಇದ್ದರೆ ಚೆನ್ನಾ ಎಂದೆನಿಸಿದಾಗ ಆತ ಕಾಡಿನಿಂದ ಸಾಧು ಪ್ರಾಣಿಗಳನ್ನು ಹಿಡಿದು ತಂದು ಅವುಗಳನ್ನು ಪಳಗಿಸಿ ತನ್ನ ಸಾಕು ಪ್ರಾಣಿಗಳನ್ನಾಗಿ ಮಾಡಿಕೊಂಡಿದ್ದಲ್ಲದೇ, ಅವುಗಳನ್ನು ತನ್ನ ದಿನನಿತ್ಯದ ಜೀವನ ಪದ್ದತಿಗಳಲ್ಲಿ ಭಾಗವಾಗುವಂತೆ… Read More ಗೋವು ಕಳ್ಳರು