ಕಲ್ಲಿನ ಮರಗಿ

ಮನುಷ್ಯ ಸಂಘಜೀವಿ. ಹಾಗಾಗಿ ತನ್ನೊಂದಿಗೆ ಜೀವಿಸಲು ಸಂಗಾತಿಯನ್ನು ಹುಡುಕಿಕೊಂಡ ನಂತರ ಹೊಟ್ಟೆ ಪಾಡಿಗೆ ಗೆಡ್ಡೆ ಗೆಣಸುಗಳನ್ನು ಮತ್ತು ಪ್ರಾಣಿಗಳನ್ನು ಬೇಟೆಯಾಡಿ ತಿಂದು ಜೀವಿಸತೊಡಗಿದ. ಯಾವಾಗ ಕಲ್ಲಿಗೆ ಕಲ್ಲನ್ನು ಉಜ್ಜಿ ಘರ್ಷಣೆಯಿಂದ ಬೆಂಕಿ ಹೊತ್ತಿಸುವುದನ್ನು ಕಲಿತುಕೊಂಡನೋ ಅಂದಿನಿಂದ ತನ್ನ ಗೆಡ್ಡೆ ಗೆಣಸು ಗಳನ್ನು ಮತ್ತು ಮಾಂಸಗಳನ್ನು ಸುಟ್ಟು ತಿನ್ನುವುದನ್ನು ಕಲಿತ. ತನ್ನ ಆತ್ಮರಕ್ಷಣೆಗಾಗಿ ಮತ್ತು ತಮ್ಮ ಆಹಾರದ ಬೇಟೆಗಾಗಿ ಕಲ್ಲಿನ ಆಯುಧಗಳನ್ನು ತಯಾರಿಸಿಕೊಳ್ಳುವುದನ್ನು ಕಲಿತುಕೊಂಡ. ಆಹಾರವನ್ನು ಅರೆಯಲು, ಕುಟ್ಟಲು, ಪುಡಿ ಮಾಡಲು ರುಬ್ಬುವ ಗುಂಡು, ಒರಳು ಮತ್ತು ಬೀಸೋಕಲ್ಲುಗಳನ್ನು ತಯಾರಿಸಿಕೊಂಡ. ಕ್ರಮೇಣ ತನ್ನ ದಿನ ನಿತ್ಯದ ಆಹಾರವನ್ನು ರುಚಿ ರುಚಿಯಾಗಿ ತಯಾರಿಸಿಕೊಳ್ಳುವ ಸಲುವಾಗಿ ಕಲ್ಲಿನ ಪಾತ್ರೆಗಳನ್ನು ತಯಾರಿಸಿಕೊಂಡು ಆಹಾರಗಳನ್ನು ಅದರಲ್ಲಿ ಬೇಯಿಸಿ ತಿನ್ನುವುದನ್ನು ಕಲಿತುಕೊಂಡ. ನಾವಿಂದು ಹೇಳ ಹೊರಟಿರುವುದೇ ಅದೇ ಕಲ್ಲಿನ ಮರಗಿ ಅರ್ಥಾತ್ ಕಲ್ಲಿನ ಪಾತ್ರೆಯ ಬಗ್ಗೆಯೇ.

ಮನುಷ್ಯರ ಬುದ್ಧಿಮತ್ತೆ ಹೆಚ್ಚಾಗುತ್ತಿದ್ದಂತೆಯೇ ಮಣ್ಣಿನಲ್ಲಿರುವ ಲೋಹದ ಅದಿರನ್ನು ಬೇರ್ಪಡಿಸಿ ಲೋಹಗಳಲ್ಲಿ ತನಗೆ ಬೇಕಾದಂತಹ ಪಾತ್ರೆ ಪಗಡಗಳನ್ನು ಮತ್ತು ಆಯುಧಗಳನ್ನು ತಯಾರಿಸಿಕೊಳ್ಳಲಾರಂಭಿಸಿದ. ಹಾಗೆ ಲೋಹದಿಂದ ತಯಾರಿಸಿದ ಅಡುಗೆಗೆ ಬಳೆಸುತ್ತಿದ್ದ ಹಿತ್ತಾಳೆ ಮತ್ತು ತಾಮ್ರದ ಪಾತ್ರೆಗಳು ನೈಸರ್ಗಿಕ ಕಾರಣದಿಂದಾಗಿ ರಾಸಾಯನಿಕ ಪ್ರಕ್ರಿಯೆಯ ಪರಿಣಾಮವಾಗಿ ಕಿಲುಬು ಕಟ್ಟಿಕೊಳ್ಳುತ್ತಿದ್ದವು. ಇನ್ನು ಕಬ್ಬಿಣದ ಪಾತ್ರೆಗಳು ಬಲು ಬೇಗ ತುಕ್ಕು ಹಿಡಿಯುತ್ತಿದ್ದ ಕಾರಣ ಅವುಗಳಲ್ಲಿ ತಯಾರಿಸಿದ ಆಹಾರಗಳು ವಿಷಪೂರಿತವಾಗುತ್ತಿದ್ದವು. ಹಾಗಾಗಿ ತಾಮ್ರ ಮತ್ತು ಹಿತ್ತಾಳೆ ಪಾತ್ರೆಗಳಿಗೆ ಕಲಾಯಿ ಹಾಕಿಸಿ ಉಪಯೋಗಿಸಬೇಕಿತ್ತು. ಇಲ್ಲವೇ ಕಂಚಿನ ಪಾತ್ರೆಗಳನ್ನು ಬಳೆಸಬೇಕಾಗಿತ್ತು. ಕಲಾಯಿ ಹಾಕಿಸುವುದು ಮತ್ತು ಕಂಚಿನ ಪಾತ್ರೆಗಳು ಬಲು ದುಬಾರಿಯಾಗಿದ್ದ ಪರಿಣಾಮವೇ ಜನರು ತಮ್ಮ ಸುತ್ತಲು ದೊರೆಯುತ್ತಿದ್ದ ನುಣಾಪಾದ ಬಳದ ಕಲ್ಲುಗಳಿಂದ ಪಾತ್ರೆಗಳನ್ನು ತಯಾರು ಮಾಡಿಕೊಂಡು ಅವುಗಳನ್ನು ತಮ್ಮ ದೈನಂದಿನ ಅಡಿಗೆಯ ಪರಿಕರಗಳಾಗಿ ಉಪಯೋಗಿಸತೊಡಗಿದರು.

ಭೂಗರ್ಭದಲ್ಲಿ ದೊರೆಯುವ ವಿಶಿಷ್ಟವಾದ ನುಣುಪಾದ ಬಳಪದ ಕಲ್ಲುಗಳನ್ನು ಬೇಕಾದ ಆಕಾರದಲ್ಲಿ ಕತ್ತರಿಸಿ ಅವುಗಳನ್ನು ಅರದಲ್ಲಿಯೋ ಇಲ್ಲವೇ ಮತ್ತೊಂದು ಕಲ್ಲಿನಿಂದ ಉಜ್ಜಿ ನುಣುಪಾಗಿಸಿ ತಮಗೆ ಬೇಕಾದ ರೀತಿಯ ಡಬರಿಗಳು, ಸಣ್ಣ ಡಬ್ಬಿಗಳು, ಸೌಟುಗಳು, ಕಾವಲಿಗಳು, ಪಡ್ಡು ಮಾಡುವ ಪರಿಕರ, ದೇವರ ದೀಪಗಳು ಈ ರೀತಿಯಾಗಿ ತರತರಹದ ಆಕಾರಗಳಲ್ಲಿ ತಮ್ಮ ಅನುಕೂಲಕ್ಕೆ ತಕ್ಕಂತೆ ಪಾತ್ರೆಗಳನ್ನು ತಯಾರಿಸಿ ಬಳೆಸಲು ಆರಂಭಿಸಿದರು. ಈ ಕಲ್ಲಿನ ಪಾತ್ರೆಗಳ ಮೇಲೆ ತಮ್ಮ ಸೃಜನಶೀಲತೆಗೆ ಒಪ್ಪುವ ಹಾಗೆ ಚಿತ್ರಗಳನ್ನು ಬಿಡಿಸುವ ಮೂಲಕ ತಮ್ಮ ಕಲಾ ನೈಪುಣ್ಯತೆಯನ್ನು ಪ್ರಸರ್ಶಿಸುತ್ತಿದ್ದರು.

ಈ ಬಳಪದ ಕಲ್ಲಿನ ಪಾತ್ರೆಗಳು ಅರ್ಥಾತ್ ಕಲ್ಲಿನ ಮರಗಿಗಳು ಅಥವಾ ಕಲಸೋರೆ ಹಲವಾರು ವಿಶೇಷತೆಯಿಂದ ಕೂಡಿವೆ

  • ಕಲ್ಲಿನ ಮರಗಿಗಳಲ್ಲಿ ಅಡುಗೆ ಮಾಡುವುದರಿಂದ ಯಾವುದೇ ರೀತಿಯ ರಾಸಾಯನಿಕ ಪ್ರಕ್ರಿಯೆಗಳು ನಡೆಯುವುದಿಲ್ಲವಾದ್ದರಿಂದ ಆಹಾರಗಳ ರುಚಿ ನೈಸರ್ಗಿಕವಾಗಿರುತ್ತದೆ ಮತ್ತು ಆರೋಗ್ಯಕರವಾಗಿರುತ್ತದೆ.
  • ಕಲ್ಲುಗಳು ಉಷ್ಣಾಂಶವನ್ನು ಬಹಳ ಕಾಲ ತೆಡೆದಿಟ್ಟು ಕೊಳ್ಳುವುದರಿಂದ ಅದರಲ್ಲಿ ತಯಾರಾದ ಆಹಾರಗಳು ಬಹಳ ಕಾಲ ಬಿಸಿಯಗಿರುತ್ತದೆ.
  • ಕಲ್ಲಿನ ಮರಗಿ ಮಡಕೆಯಂತೆ ಸೂಕ್ಷ್ಮವಾಗಿರದ ಕಾರಣ ಆ ಪಾತ್ರೆಗಳು ದೀರ್ಘಕಾಲ ಬಾಳಿಕೆ ಬರುತ್ತದೆ.
  • ಕಲ್ಲಿನ ಮರಗಿಯಲ್ಲಿಟ್ಟ ಮಜ್ಜಿಗೆ ಆದಷ್ಟು ಬೇಗ ಹುಳಿಯಾಗುವುದಿಲ್ಲ.
  • ಕಲ್ಲಿನ ಮರಗಿಯಲ್ಲಿಟ್ಟ ಕಲ್ಲುಪ್ಪು ಬಲು ಬೇಗ ನೀರಾಗುವುದಿಲ್ಲ
  • ಕಲ್ಲಿನ ಮರಗಿಯಲ್ಲಿಟ್ಟ ಉಪ್ಪಿನಕಾಯಿಗಳಿಗೆ ಹುಳ ಹತ್ತುವುದಿಲ್ಲ.
  • ಅಕಸ್ಮಾತ್ ಬಳಪದ ಕಲ್ಲಿನ ಮರಗಿಗಳು ಕೈಜಾರಿ ಬಿದ್ದು ಒಡೆದು ಹೋದರೆ, ಅದನ್ನು ಬಿಸಾಡದೆ ಮನೆಯ ಮುಂದೆ ರಂಗೋಲಿಗಳನ್ನು ಇಡಲು ಬಳೆಸಿಕೊಳ್ಳುತ್ತಿದ್ದರು.

ಈ ಎಲ್ಲಾ ಕಾರಣಗಳಿಂದಾಗಿ ಬಹುತೇಕರ ಮನೆಗಳಲ್ಲಿ ಸುಮಾರು 60-70 ವರ್ಷಗಳ ಹಿಂದೆ ಅಡುಗೆಯ ಮನೆಯಲ್ಲಿ ಕಲ್ಲಿನ ಮರಗಿಗಳನ್ನೇ ಬಳೆಸುತ್ತಿದ್ದರು. ಆದರೆ ಕಾಲ ಕ್ರಮೇಣ ಕಿಲುಬು,ತುಕ್ಕು ಹಿಡಿಯದ ಮತ್ತು ಹಗುವಾದ ಆದರೆ ಬಹುಕಾಲ ಬಾಳಿಕೆ ಬರುವ, ಕೈಗೆಟುಕುವ ಬೆಲೆಯಲ್ಲಿ ಸಿಗುವ ಅಲ್ಯೂಮಿನಿಯಂ ಮತ್ತು ಸ್ಟೀಲ್ ಪಾತ್ರೆಗಳು ಜನಪ್ರಿಯವಾದ ಕೂಡಲೇ ಈ ಕಲ್ಲಿನ ಮರಗಿಗಳು ಜನಮಾನಸದಿಂದ ದೂರವಾಗ ತೊಡಗಿದವು.

ನನಗೆ ಬುದ್ಧಿ ತಿಳಿಯುವ ಹೊತ್ತಿಗೆ ನಮ್ಮ ಅಜ್ಜಿನ ಮನೆಯಲ್ಲಿ ಕಲ್ಲಿನ ಮರಗಿಗಳನ್ನು ಕಲ್ಲುಪ್ಪು ಮತ್ತು ಮಜ್ಜಿಗೆಯನ್ನು ಇಡಲು ಹಾಗೆಯೇ ದನಕರುಗಳ ಕಲಗಚ್ಚುಗಳಿಗೆ ಮಾತ್ರವೇ ಉಪಯೋಗಿಸುತ್ತಿದ್ದರು. ಕಲ್ಲಿನ ಮರಗಿಯಲ್ಲಿ ಮಾಡಿದ ಮಜ್ಜಿಗೆ ಹುಳಿ ತುಂಬಾ ರುಚಿಯಾಗಿರುತ್ತದೆ ಎಂಬ ಕಾರಣದಿಂದ ಮಜ್ಜಿಗೆ ಹುಳಿಮಾಡುವ ಸಮಯದಲ್ಲಿ ಮಾತ್ರವೇ ಕಲ್ಲಿನ ಮರಗಿಯನ್ನು ಉಪಯೋಗಿಸುತ್ತಿದ್ದದ್ದು ಇನ್ನೂ ನನ್ನ ಮನಸ್ಸಿನಲ್ಲಿ ಹಚ್ಚ ಹಸಿರಾಗಿದೆ.

ಇಂದಿನ ಆಧುನಿಕ ಯುಗದಲ್ಲಿ ದಿನದಿಂದ ದಿನಕ್ಕೆ ತಂತಜ್ಞಾನ ಬದಲಾಗುತ್ತಿದೆ. ತಂತ್ರಜ್ಞಾನದ ಜೊತೆಗೆ ಜನರ ಜೀವನ ಶೈಲಿ, ವೇಷ-ಭೂಷಣ, ಉಡುಗೆ-ತೊಡುಗೆ ಅಷ್ಟೇ ಏಕೆ ಅಡುಗೆ ಮಾಡುವ ಪಾತ್ರೆಗಳು ಬದಲಾಗುತ್ತಿವೆಯಾದರೂ ನಮ್ಮ ಜನರು ಪುನಃ ತಮ್ಮ ಪಾರಂಪರಿಕ ವೈಭವವನ್ನು ಹಾಗೆಯೇ ಉಳಿಸಿಕೊಂಡು ಹೋಗುವ ಮನಸ್ಥಿತಿಗೆ ಹಲವರು ಬಂದಿರುವ ಕಾರಣ ಮತ್ತೆ ಸುಮಾರು ಮನೆಗಳಲ್ಲಿ ಬಳಪದ ಕಲ್ಲಿನ ಪಾತ್ರೆಗಳನ್ನು ಬಳೆಸಲು ಆರಂಭಿಸಿದ್ದಾರೆ. ಹಿಂದೆ ತಾವೇ ಖುದ್ದಾಗಿ ಕಲ್ಲಿನ ಪಾತ್ರೆಗಳನ್ನು ತಯಾರಿಕೊಳ್ಳುತ್ತಿದ್ದರು ಇಲ್ಲವೇ ಗುಡಿ ಕೈಗಾರಿಕೆಯ ಭಾಗವಾಗಿ ತಯಾರಾಗುತ್ತಿತ್ತು. ಇಂದು ಈ ಪಾತ್ರೆಗಳನ್ನು ತಯಾರಿಸಲೆಂದೇ ಹಲವಾರು ಯಂತ್ರಗಳಿದ್ದು, ಯಾವುದೇ ಆಧುನಿಕ ಪಾತ್ರೆಗಳಿಗೆ ಭಿನ್ನವಿಲ್ಲದಂತೆ ಬಗೆ ಬಗೆಯ ರೂಪಗಳಲ್ಲಿ ಲಭ್ಯವಿದ್ದು ಗ್ರಾಹಕರ ಮನಸ್ಸೆಳೆಯುತ್ತಿವೆ.

ಬಳಪದ ಕಲ್ಲಿನ ಪಾತ್ರೆಗಳನ್ನು ಕೊಳ್ಳುವ ಇಚ್ಚೆಯಿದ್ದಲ್ಲಿ ಇದೋ ನಮಗಿದೆ ಸುವರ್ಣಾವಕಾಶ.

ಮಲ್ಲೇಶ್ವರಂ ಸಂತೆ 2019ರ ಭಾಗವಾಗಿ ಅಜ್ಜಿಯ ಅರಮನೆ (Grandma’s Palace) ಸಂಸ್ಥೆಯು ನಮ್ಮ ಸಾಂಪ್ರದಾಯಿಕ ಬಳಪದ ಕಲ್ಲಿನ ಪಾತ್ರೆಗಳ ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆಯನ್ನು ಮಾಡಿದ್ದಾರೆ. ಕಾರ್ಯಕ್ರಮದ ವಿವರ ಹೀಗಿದೆ.

ದಿನಾಂಕ: -ಡಿಸೆಂಬರ್15, 2019, ಭಾನುವಾರ
ಸಮಯ: ಬೆಳಿಗ್ಗೆ 10 ರಿಂದ ರಾತ್ರಿ 8 ರವರೆಗೆ
ಸ್ಥಳ: MEWS ಲೇಡೀಸ್ ಕ್ಲಬ್
“ಭೂಮಾ” # 37, 17 ಅಡ್ಡ ರಸ್ತೆ,
4 ‘& 6’ ಮುಖ್ಯ ರಸ್ತೆಯ ಮಧ್ಯೆ
ಮಲ್ಲೇಶ್ವರಂ, ಬೆಂಗಳೂರು-55

ಹೆಚ್ಚಿನ ವಿವರಗಳಿಗಾಗಿ ಇವರನ್ನು ಸಂಪರ್ಕಿಸ ಬಹುದಾಗಿದೆ.
9945435897 ರೇವತಿ ವೆಂಕಟೇಶ್
9008533433 ಸುಮಾ ವಿಎಸ್

ಕಲ್ಲಿನ ಮರಗಿಗಳು ಪಾರಂಪರವಾಗಿಯೂ, ಸಾಂಪ್ರದಾಯಿಕವಾಗಿಯೂ, ಮತ್ತು ಕೈಗೆಟಕುವ ಬೆಲೆಯಲ್ಲಿ ಲಭ್ಯವಿರುವ ಕಾರಣ, ಇನ್ನೇಕೆ ತಡ, ಬನ್ನಿ ಖರೀದಿಸಿ ಉಪಯೋಗಿಸೋಣ ಮತ್ತು ಆರೋಗ್ಯಕರವಾಗಿ ರುಚಿ ರುಚಿಯಾದ ಅಡುಗೆಗಳನ್ನು ತಯಾರಿಸಿ ನಮ್ಮ ನಾಲಿಗೆಗೆ ನಮ್ಮ ಅಜ್ಜಿಯ ಅಡುಗೆಯ ರುಚಿಯ ಸ್ಪರ್ಶವನ್ನು ನೆನಪಿಸುವಂತೆ ಮಾಡೋಣ.

ಏನಂತೀರೀ?

One thought on “ಕಲ್ಲಿನ ಮರಗಿ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s