ಒಂದು, ಎರಡು, ಮೂರು ನಾಲ್ಕು
ಸಾಲ್ತಿಲ್ಲ ನೀರ್ದೋಸೆ ಇನ್ನೂ ಹಾಕು
ಮನೇಲೀ ಇರೋರಿಗೆ ಎಲ್ರಿಗೂ ಬೇಕು
ಹೆಂಡ್ತಿ ಹೇಳಿದ್ಮೇಲೆ ಒಪ್ಗೋಳ್ಳಲೇ ಬೇಕು.
ಇಷ್ಟು ಹೇಳಿಯೂ ಐದ್ನೇ ನೀರ್ದೋಸೆ ತಟ್ಟೇಲಿ ಬಿತ್ತು
ಇದೇ ನೋಡಿ ಗಂಡ-ಹೆಂಡ್ರ ಪ್ರೀತಿಯ ಗಮ್ಮತ್ತು
ಇದನ್ನು ಒಪ್ಪೋರು, ಕೊಡ್ರೀ ನಿಮ್ಮಾಕಿಗೆ ಒಂದು ಸಿಹಿ ಮುತ್ತು
ಏಕೆಂದ್ರೇ ಖಂಡಿತವಾಗಿಯೂ ಆಕೆನೇ ನಮ್ಮನೇ ಸಂಪತ್ತು.
ಏನಂತೀರೀ?
ಇಂದು ನಮ್ಮಾಕಿ ಮಾಡಿಕೊಟ್ಟ ಬಿಸಿ ಬಿಸಿಯಾದ ಗರಿ ಗರಿಯಾದ ನೀರು ದೋಸೆ ಮತ್ತು ಕಾಯಿ ಚಟ್ನಿ ತಿಂದ ಮೇಲೆ ಬರೆದ ಪದ್ಯ
Like this:
Like Loading...
Related
Author: ಶ್ರೀಕಂಠ ಬಾಳಗಂಚಿ
ಶ್ರೀಕಂಠ ಬಾಳಗಂಚಿ ಎಂಬ ನಾಮದೇಯನಾದ ನಾನು, ಮೂಲತಃ ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣ ತಾಲ್ಲೂಕ್ಕಿನ ಬಾಳಗಂಚಿ ಗ್ರಾಮದ ಖ್ಯಾತ ವಾಗ್ಗೇಯಕಾರರೂ, ಗಮಕಿಗಳು ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ಗಮಕಿ ದಿ. ಶ್ರೀ ನಂಜುಂಡಯ್ಯನವರ ಮೊಮ್ಮಗ ಮತ್ತು ಗಮಕಿ ದಿ. ಶ್ರೀ ಶಿವಮೂರ್ತಿಗಳ ಸುಪುತ್ರ. ಪ್ರಸ್ತುತ ಬೆಂಗಳೂರಿನ ವಿಶ್ವವಿಖ್ಯಾತ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರೂ ಹವ್ಯಾಸಿ ಬರಹಗಾರ. ಕ್ರೀಡೆ, ಸಾಮಾಜಿಕ ಮತ್ತು ಪ್ರಸ್ತುತ ವಿಷಯಗಳ ಬಗ್ಗೆ ಸಮಯ ಸಿಕ್ಕಾಗಲೆಲ್ಲಾ ಲೇಖನ ಬರೆದು ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಕಟಿಸಿದ್ದೇನೆ. ಕನ್ನಡ ನಾಡು, ಭಾಷೆ, ನುಡಿಗಳ ಬಗ್ಗೆ ಅಪಾರವಾದ ಗೌರವ ಮತ್ತು ಪ್ರೇಮ ಇರುವವ.
ಜಿ.ಪಿ.ರಾಜರತ್ನಂರವರ ನರಕಕ್ಕಿಳ್ಸಿ ನಾಲ್ಗೆ ಸೀಳ್ಸಿ ಬಾಯ್ ಒಲ್ಸಾಕಿದ್ರೂನೂ ಮೂಗ್ನಲ್ ಕನ್ನಡ್ ಪದ್ವಾಡ್ತೀನಿ ಅಂತಾ ಹೇಳಿರುವುದನ್ನು ಅಕ್ಷರಶಃ ಪಾಲಿಸುತ್ತಿರುವವನು.
View all posts by ಶ್ರೀಕಂಠ ಬಾಳಗಂಚಿ
“ ಏಕೆಂದ್ರೇ ಖಂಡಿತವಾಗಿಯೂ ಆಕೆನೇ ನಮ್ಮನೇ ಸಂಪತ್ತು.”
This was favorite line , very well written “ ಚೆನ್ನಾಗಿ ಬರೆಯಲಾಗಿದೆ“
LikeLiked by 1 person