ಸ್ವಾತಂತ್ರ್ಯಾನಂತರ ರಚಿತವಾದ ನಮ್ಮ ಸಂವಿಧಾನದ ಮೂರು ಪ್ರಮುಖ ಅಂಗಗಳೇ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗ. ಕಾರ್ಯಾಂಗ ಮತ್ತು ಶಾಸಕಾಂಗಗಳನ್ನು ಸರಿ ದಿಕ್ಕಿನಲ್ಲಿ ಕೊಂಡೊಯ್ಯುವ ಗುರುತುತರವಾದ ಜವಾಬ್ಧಾರಿ ನ್ಯಾಯಾಂಗಕ್ಕೆ ಇರುವುದರಿಂದ ನಮ್ಮ ದೇಶದಲ್ಲಿ ಉಚ್ಚ ನ್ಯಾಯಾಂಗದ ತೀರ್ಪುಗಳು ಅತ್ಯಂತ ಮಹತ್ವಪೂರ್ಣವಾಗಿತ್ತವೆ. ಜನತೆ ಹಾಗೂ ಸರಕಾರದ ನಡುವಿನ ಸಂಬಂಧವನ್ನೂ ನ್ಯಾಯಾಂಗ ನಿಯಂತ್ರಿಸುತ್ತದೆ. ದೇಶದ ಎಲ್ಲ ಕಾನೂನುಗಳಿಗಿಂತ ಸಂವಿಧಾನವೇ ಅತ್ಯಂತ ಮಹತ್ವಪೂರ್ಣದ್ದಾಗಿದೆ. ಸರ್ಕಾರ ಜಾರಿಗೆ ತರುವ ಪ್ರತಿಯೊಂದು ಕಾನೂನುಗಳೂ ಸಹಾ ಸಂವಿಧಾನಕ್ಕೆ ಅನುಗುಣವಾಗಿರಬೇಕು. ಮತ್ತು ಅದು ಪ್ರಜೆಗಳ ಹಕ್ಕುಗಳನ್ನು ಮತ್ತು ಕರ್ತವ್ಯಗಳನ್ನು ಸಂರಕ್ಷಿಸುವಂತಿರಬೇಕು. ಹಾಗಾಗಿ ನ್ಯಾಯಾಂಗದ ವ್ಯಾಪ್ತಿಯಲ್ಲಿ ಬರುವವರೆಲ್ಲರೂ ಯಾವುದೇ ಸೈದ್ದಾಂತಿಕ ನೆಲೆಗಟ್ಟುಗಳಿಗೆ ಒಳಗಾಗದೆ ನಿಶ್ಪಕ್ಷಪಾತವಾಗಿ ನ್ಯಾಯದ ಪರವಾದ ತೀರ್ಪನ್ನು ನೀಡುವುದು ಅವರ ಆದ್ಯ ಕರ್ತವ್ಯವಾಗಿರುತ್ತದೆ. ಆದರೆ ಬುಟ್ಟಿಗಳಲ್ಲಿಟ್ಟ ಹಣ್ಣುಗಳಲ್ಲಿ ಒಂದು ಕೊಳೆತ ಹಣ್ಣು ಮಿಕ್ಕೆಲ್ಲಾ ಹಣ್ಣುಗಳನ್ನು ಹೇಗೆ ಹಾಳು ಮಾಡುತ್ತದೆಯೋ ಹಾಗೆ ಈ ನ್ಯಾಯಾಂಗದಲ್ಲಿರುವ ಕೆಲವು ವಿಕೃತ ಮನಸ್ಸಿನವರು ತಮ್ಮ ಪ್ರಭಾವದಿಂದ ಹೇಗೆ ನ್ಯಾಯಾಂಗವನ್ನು ತಮ್ಮ ಕಪಿ ಮುಷ್ಟಿಯಲ್ಲಿಟ್ಟು ಕೊಂಡು ತಮಗೆ ಬೇಕಾದ ರೀತಿಯಲ್ಲಿ ತೀರ್ಪುಗಳನ್ನು ಪಡೆದುಕೊಂಡು ಅಟ್ಟ ಹಾಸದಲ್ಲಿ ಮೆರೆಯುತ್ತಾರೆ ಮತ್ತು ದೇಶದ ಅಧೋಗತಿಗೆ ಹೇಗೆ ಕಾರಣರಾಗುತ್ತಿದ್ದಾರೆ ಎನ್ನುವುದಕ್ಕೆ ಅತ್ಯುತ್ತಮ ಉದಾಹರಣೆಯೇ ಕಪಿಲ್ ಸಿಬಾಲ್.
ಕಪಿಲ್ ಸಿಬಲ್ ಮೂಲತಃ ಉಚ್ಚ ನ್ಯಾಯಾಲದ ಹಿರಿಯ ವಕೀಲರು, ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿದ್ದವರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಅಪ್ಪಟ ರಾಜಕಾರಣಿ. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ವಿವಿಧ ಸಚಿವಾಲಯಗಳ ಚುಕ್ಕಾಣಿಯಲ್ಲಿ ಸೇವೆ ಸಲ್ಲಿಸಿದರು, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದಿಂದ ಪ್ರಾರಂಭಿಸಿ, ನಂತರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಮತ್ತು ನಂತರ ಸಂವಹನ ಮತ್ತು ಐಟಿ ಸಚಿವಾಲಯ, ಮತ್ತು ಕಾನೂನು ಮತ್ತು ನ್ಯಾಯ ಸಚಿವಾಲಯ ಹೀಗೆ ಕಾಂಗ್ರೇಸ್ ಅಧಿಕಾರದಲ್ಲಿದ್ದಾಗಲೆಲ್ಲಾ ಆಯಕಟ್ಟಿನ ಜಾಗಗಳಲ್ಲಿಯೇ ಅಧಿಕಾರದ ರುಚಿಯನ್ನು ಸವಿದವರು. ಹಾಗಾಗಿ ಉಚ್ಚನ್ಯಾಯಾಲಯದ ನ್ಯಾಯಾಧೀಶರನ್ನು ಸೇವಾಧಾರಿತವಾಗಿ ರಾಷ್ಟ್ರಪತಿಗಳೇ ನೇಮಿಸುತ್ತಾರಾದರೂ, ತಮ್ಮ ರಾಜಕೀಯ ಪ್ರಭಾವದಿಂದಾಗಿ ತಮಗೆ ಅನುಕೂಲವಾಗ ಬಲ್ಲಂತಹವರನ್ನೇ ರಾಷ್ಟ್ರಪತಿಗಳ ಮೂಲಕ ಅಂಗೀಕಾರಗೊಳಿಸಿ ಅವರನ್ನು ಉಚ್ಚನ್ಯಾಯಾಧೀಶರಾಗಿ ನೇಮಕಮಾಡಿಸುವಷ್ಟರ ಮಟ್ಟಿಗಿನ ಪ್ರಭಾವೀಶಾಲೀ ವ್ಯಕ್ತಿಯಾಗಿ ಬೆಳೆದು ಬಿಟ್ಟರು.
ಕಪಿಲ್ ಸಿಬಲ್ ಅವರ ತಂದೆ ಖ್ಯಾತ ವಕೀಲ ಎಚ್.ಎಲ್. ಸಿಬಲ್ ಅವರ ಕುಟುಂಬವು 1947 ರ ಭಾರತ ಮತ್ತು ಪಾಕೀಸ್ಥಾನದ ವಿಭಜನೆಯ ಸಮಯದಲ್ಲಿ ಭಾರತಕ್ಕೆ ವಲಸೆ ಬಂದವರು. ವಕೀಲಿಯಲ್ಲಿನ ಅವರ ಪಾಂಡಿತ್ಯಕ್ಕಾಗಿ 1994 ರಲ್ಲಿ, ಅವರಿಗೆ ಇಂಟರ್ನ್ಯಾಷನಲ್ ಬಾರ್ ಅಸೋಸಿಯೇಷನ್ ಲಿವಿಂಗ್ ಲೆಜೆಂಡ್ ಆಫ್ ದಿ ಲಾ ಎಂದೂ ಗೌರವಿಸಿದರೆ, ಭಾರತದ ಸರ್ಕಾರವೂ ಸಾರ್ವಜನಿಕ ವ್ಯವಹಾರಗಳ ಕ್ಷೇತ್ರದಲ್ಲಿ ಅವರು ಮಾಡಿದ ವಿಶೇಷ ಸೇವೆಗಳಿಗಾಗಿ ಅವರಿಗೆ 2006 ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಇಂತಹ ಕುಟುಂಬದಲ್ಲಿ ಕಪಿಲ್ ಸಿಬಲ್ 1948 ರ ಆಗಸ್ಟ್ 8 ರಂದು ಪಂಜಾಬ್‌ನ ಜಲಂಧರ್‌ನಲ್ಲಿ ಜನಿಸಿ, ಆರಂಭಿಕ ವಿದ್ಯಾಭ್ಯಾಸವನ್ನು ಅಲ್ಲಿಯೇ ಮುಗಿಸಿ ಉನ್ನತ ವಿದ್ಯಾಭ್ಯಾಸಕ್ಕಾಗಿ 1964 ರಲ್ಲಿ ದೆಹಲಿಗೆ ಬಂದು ದೆಹಲಿ ವಿಶ್ವವಿದ್ಯಾಲಯದ ಕಾನೂನು ವಿಭಾಗದಿಂದ ಎಲ್.ಎಲ್.ಬಿ ಪದವಿ ಪಡೆದರು ಮತ್ತು ನಂತರ ಇತಿಹಾಸದಲ್ಲಿ ಎಂ.ಎ. ಪಡೆದ ನಂತರ ಹಾವರ್ಡ್ ವಿಶ್ವವಿದ್ಯಾನಿಯದಲ್ಲಿ ಕಾನೂನು ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದರೆ. ಇವರ ಇಬ್ಬರೂ ಮಕ್ಕಳೂ ಸಹಾ ವಕೀಲೀ ವೃತ್ತಿಯಲ್ಲಿಯೇ ಮಂದುವರಿದ್ದಾರೆ.
ಇಡೀ ಕುಟುಂಬ ವರ್ಗವೇ ಕಾನೂನು ವಿಭಾಗದಲ್ಲಿದ್ದು ಎಲ್ಲರಿಗೂ ಸೂಕ್ತ ರೀತಿಯಲ್ಲಿ ಕಾನೂನಾತ್ಮಕವಾಗಿ ಸಲಹೆಗಳನ್ನು ನೀಡದ್ದಲ್ಲಿ ಯಾವುದೇ ಸಮಸ್ಯೆ ಇರುತ್ತಿರಲಿಲ್ಲ ಮತ್ತು ಈ ಲೇಖನ ಬರೆಯುವ ಪ್ರಮೇಯವೇ ಬರುತ್ತಿರಲಿಲ್ಲ layers are liaers ಎನ್ನುವ ಆಂಗ್ಲ ನಾನ್ನುಡಿಯಂತೆ, ಕಪಿಲ್ ಸಿಬಲ್ ಸತ್ಯದ ಪರ ವಾದಿಸಿದ್ದಕ್ಕಿಂತ ಸುಳ್ಳು, ದೇಶದ್ರೋಹ ವಂಚನೆ, ಹಣದ ದುರ್ವ್ಯವಹಾರಿಗಳ ಪರ ವಕಾಲತ್ತು ವಹಿಸಿದ್ದೇ ಹೆಚ್ಚು. ಇವರು ವಕೀಲಿಕೆ ನಡೆಸಿದ ಕೆಲವೊಂದು ಪ್ರಕರಣಗಳನ್ನು ಗಮನಿಸಿದಲ್ಲಿ ಅವರ ಮನೋಸ್ಥಿತಿಯ ಅರಿವಾಗುತ್ತದೆ
- ದೇಶದ ಅತಿ ದೊಡ್ಡ ಟೆಲಿಕಾಂ 2G Spectrum ಹಗರಣದಲ್ಲಿ ಆರೋಪಿಗಳಾದ ಕನಿಮೋಳಿ ಮತ್ತು ರಾಜಾ ಪರ ವಕಾಲತ್ತು
- ಅಯೋಧ್ಯೆಯಲ್ಲಿ ರಾಮ ಜನ್ಮಭೂಮಿಯ ಕೇಸಿನಲ್ಲಿ ಸುನ್ನಿ ವಕ್ಫ್ ಮಂಡಳಿ ಪರವಾಗಿ ವಾದ
- ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಪರವಾಗಿ ಸುಪ್ರೀಂ ಕೋರ್ಟಿನಲ್ಲಿ ವಾದ
- ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ನಂತರ ನಂತರಾ ನಡೆದ ಗಲಭೆಕೋರರ ಪರ ವಾದ
- ಐಎನ್‌ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಪ್ರಮುಖ ಆರೋಪಿ ಮಾಜೀ ಗೃಹ ಸಚಿವ ಪಿ ಚಿದಂಬರಂ ಪರ ವಕಾಲತ್ತು
- ಜಮ್ಮು ಮತ್ತು ಕಾಶ್ಮೀರ ಮಾಜೀ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಬಂಧನದಿಂದ ಬಿಡುಗಡೆ ಕೋರವಂತೆ ವಾದ
- ಸಿಎಎ ಸಾಂವಿಧಾನಿಕತೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಸಿರುವ ಕೇಸ್ನಲ್ಲಿ ಸರ್ಕಾರದ ವಿರುದ್ಧ ವಾದ
ಹೀಗೆ ಹೇಳುತ್ತಾ ಹೋದಲ್ಲಿ ಇಡೀ ದಿನವೇ ಸಾಕಾಗುವುದಿಲ್ಲ. ಇವುಗಳೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿದಲ್ಲಿ ಸಿಬಲ್ ವಕಾಲತ್ತು ವಹಿಸಿದ್ದೇಲ್ಲಾ ಸರ್ಕಾರದ ವಿರುದ್ಧ, ಭ್ರಷ್ಟಾಚಾರಿಗಳ ಮತ್ತು ದೇಶವಿದ್ರೋಹಿಗಳ ಪರವಾಗಿಯೇ. To know about you, tell me about your friends ಎನ್ನುವ ಆಂಗ್ಲಪದದ ಗಾದೆಯಂತೆ ಸಿಬಲ್ ಅವರ ಮನಸ್ಥಿತಿಯನ್ನು ಅರಿಯಲು ಅವರು ವಕಾಲತ್ತು ವಹಿಸಿದ ಕೇಸಗಳೇ ಹೇಳುತ್ತವೆ. ಒಬ್ಬ ವಕೀಲನಾಗಿ ಯಾರ ಪರವಾಗಿಯಾದರೂ ವಾದ ಮಾಡಬಹುದು ಎಂಬ ವಿತಂಡ ವಾದವನ್ನು ಮಾಡಬಹುದಾದರೂ, ಇದುವರೆವಿಗೂ ಒಬ್ಬ ಸತ್ಯದ ಪರವಾಗಿ ನ್ಯಾಯ ರೀತಿಯಲ್ಲಿ ವಾದ ಮಾಡಿದ ಉದಾಹರಣೆಯೇ ಇಲ್ಲ
ಅವರು ಟೆಲಿಕಾಂ ಮಂತ್ರಿಯಾಗಿದ್ದ ಅವಧಿಯಲ್ಲಿ ನ್ಯಾಯಾಂಗದ ಮೇಲೆ ತಮ್ಮ ಪ್ರಭಾವ ಬಳಸಿ ತಾವೇ ಆರೋಪಿಗಳ ಪರ ವಕಾಲತ್ತು ವಹಿಸಿದ್ದ 2 ಜಿ ಸ್ಪೆಕ್ಟ್ರಮ್ ಪ್ರಕರಣ ಒಂದು ಪ್ರಕರಣವೇ ಅಲ್ಲ ಅದೊಂದು ಕಟ್ಟು ಕತೆ. ಆದರಲ್ಲಿ ಆರೋಪಿಸಿದಂತೆ ಲಕ್ಷಾಂತರ ಕೋಟಿ ನಷ್ಟವು ಕೇವಲ ಕಲ್ಪನೆಯಾಗಿದೆ ಎಂಬ ತೀರ್ಪು ಬರಲು ಕಾರಣವಾದವರೂ ಇದೇ ಸಿಬಲ್ ಎಂಬ ಆರೋಪ ಕೇಳಿಬಂದಿದ್ದು ಸತ್ಯವೇ ಸರಿ.
ಸುಮಾರು ಒಂದೂವರೆ ವರ್ಷದ ಹಿಂದೆ ನ್ಯಾಯಾಧೀಶರ ಕೊಲೇಜಿಯಂ ವಿರುದ್ಧವಾಗಿ ದೇಶದ ಇತಿಹಾಸದಲ್ಲಿ ಪ್ರಪ್ರಥಮಬಾರಿಗೆ ಉಚ್ಚ ನ್ಯಾಯಾಲಯದ ಕೆಲ ನ್ಯಾಯಾಧೀಶರು ಸಿಡಿದ್ದೆದ್ದ ಪ್ರಕರಣದ ಹಿಂದಿನ ರೂವಾರಿಯೂ ಸಹಾ ಇದೇ ಸಿಬಲ್ ಎಂಬ ಆರೋಪವಿದೆ.
ದೇಶದ ವಿವಿಧ ನ್ಯಾಯಾಲಯಗಳಲ್ಲಿ ಖಾಲಿ ಇರುವ ಭಾರಿ ಹುದ್ಧೆಗಳನ್ನು ಭರ್ತಿ ಮಾಡುವ ಅಥವಾ ಆಯಕಟ್ಟಿನ ಸ್ಥಳಗಳಿಗೆ ತಮಗೆ ಬೇಕಾದವರನ್ನು ವರ್ಗಾವಣೆ ಮಾಡಿಸಲು ಸಂಶಯಾಸ್ಪದ ವ್ಯಕ್ತಿಗಳೊಡನೆ ಕಪಿಪ್ ಸಿಬಲ್ ವ್ಯವಹಾರ ನಡೆಸಿದ್ದಾರೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಗಂಭೀರ ರೀತಿಯಲ್ಲಿ ಆರೋಪಿ ಅದರ ಬಗ್ಗೆಯೂ ತನಿಖೆ ನಡೆಯುತ್ತಿದೆ.
ದೇಶದ್ರೋಹ ಮತ್ತು ಭ್ರಷ್ಟಾಚಾರ ಆರೋಪ ಹೊತ್ತಿದ್ದ ಆರೋಪಿಯೊಬ್ಬನ ವಿರುದ್ಧ ಟಿವಿ ಸಂಸ್ಥೆ ನಡೆಸಿದ ಕುಟುಕು ಗುಪ್ತ ಕಾರ್ಯಾಚರಣೆಯಲ್ಲಿ ಕಪಿಲ್ ಸಿಬಾಲ್ ಇರುವ ವರೆಗೂ ತಮಗೆ ಯಾವುದೇ ಶಿಕ್ಷೆ ಯಾಗದೇ ನಿರಪರಾಧಿಯಾಗಿ ಹೊರಬರುವುದಾಗಿ ತಿಳಿಸಿ ಎಲ್ಲರನ್ನೂ ಬೆಚ್ಚಿಬೀಳಿಸಿದ್ದರು. ಅದು ಹೇಗೆ ಅಷ್ಟು ಖಡಾ ಖಂಡಿತವಾಗಿ ಹೊರಬರುತ್ತೀರಿ ? ಎಂದು ಕೇಳಿದಾಗ ಸದ್ಯದಲ್ಲಿ ಸುಪ್ರೀಂ ಕೋರ್ಟಿನಲ್ಲಿರುವ ಬಹುತೇಕ ನ್ಯಾಯಾಧೀಷರು ಕಪಿಲ್ ಸಿಬಾಲ್ ಕೃಪಾಶೀರ್ವಾದದಿಂದಲೇ ಆಯ್ಕೆಯಾಗಿರುವ ಕಾರಣ ನನಗೆ ಯಾವುದೇ ಅಪರಾಧವಾಗುವುದಿಲ್ಲ ಎಂದು ತಿಳಿಸಿದ್ದು ಗಮನಾರ್ಹವಾಗಿದೆ.
ಇಷ್ಟೆಲ್ಲಾ ಆರೋಗಳನ್ನು ಹೊತ್ತಿರುವಂತಹ ಕಪಿಲ್ ಸಿಬಲ್ ಈಗ ದೇಶಾದ್ಯಂತ ನ್ಯಾಯಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿಮಾಡುವಾಗ ಸರ್ಕಾರ ಆರ್‌ಎಸ್‌ಎಸ್ ಸಿದ್ಧಾಂತ ಹೊಂದಿರುವ ಸ್ಥಾಪಿಸಲು ಪ್ರಯತ್ನಿಸುತ್ತಿದೆ ಎಂಬ ಆರೋಪವನ್ನು ಮಾಡುವ ಮೂಲಕ ತಮ್ಮ ಕಾಂಗ್ರೆಸ್ ಪರಮೋಚ್ಚ ಕುಟುಂಬವನ್ನು ಮೆಚ್ಚಿಸಲು ಹೊರಟಿರುವುದು ಹಾಸ್ಯಾಸ್ಪದವಾಗಿರುವುದಲ್ಲದೇ, ತೊಳ ಬಂತು ತೋಳ ಕಥೆಯನ್ನು ನೆನಪಿಸುವಂತಿದೆ.
ಇಷ್ಟೆಲ್ಲಾ ಕೆಲಸ ಕಾರ್ಯಗಳ ನಡುವೆಯೂ ಕಪಿಲ್ ಸಿಬಲ್ 2016 ರ ಹಿಂದಿಯ ಶೋರ್ಗುಲ್ ಚಲನಚಿತ್ರಕ್ಕಾಗಿ ತೇರೆ ಬಿನಾ ಮತ್ತು ಮಸ್ತ್ ಹವಾ ಎಂಬ ಹಾಡುಗಳನ್ನು ಬರೆದಿದ್ದಾರೆ ಎಂಬುದೂ ಗಮನಾರ್ಹವಾದ ಸಂಗತಿ
ಒಟ್ಟಿನಲ್ಲಿ ಕಾಂಗ್ರೆಸ್ ಪಕ್ಷದ ಉನ್ನತ ಕಾನೂನು ಮಿದುಳುಗಳಾದ ಕಪಿಲ್ ಸಿಬಲ್ , ಅಭಿಷೇಕ್ ಸಿಂಗ್ವಿ, ಪಿ ಚಿದಂಬರಂ ಮತ್ತು ಸಲ್ಮಾನ್ ಖುರ್ಷಿದ್ ಅಂತಹವರು ದೇಶದಲ್ಲಿ ಸದಾ ಅರಾಜಕತೆಯನ್ನು ಉಂಟು ಮಾಡುವವರ ಪರವಾಗಿಯೇ ವಾದ ಮಾಡುತ್ತಾ ದೇಶದಲ್ಲಿ ಅಶಾಂತಿಯನ್ನು ಉಂಟು ಮಾಡುವುದರಲ್ಲಿ ಗಂಭೀರವಾದ ಪಾತ್ರವಹಿಸಿಸುತ್ತಿರುವುದು ಅಂಗೈಯಲ್ಲಿರುವ ಗೆರೆಗಳಂತೆ ಸ್ಮಪ್ಷವಾಗಿ ಕಾಣತೊಡಗಿದ್ದರೂ ಕೆಲ ಸ್ವಯಘೋಷಿತ ಬುದ್ಧಿಜೀವಿಗಳು ಅವರ ವಿರುದ್ಧದ ಆರೋಪಗಳನ್ನು ಬೂದುಗಾಜಿನಲ್ಲಿ ಹುಡಕಲು ಹೊರಟಿರುವುದು ಕುಚೋದ್ಯವೇ ಸರಿ.
ಏನಂತೀರೀ?