ಕೂರೋನಾ ಮತ್ತು ಕಾಂಗ್ರೇಸ್

ಕೂರೋನಾ ಮಹಾಮಾರಿಯಿಂದಾಗಿ ಇಡೀ ಪ್ರಪಂಚವೇ ನಲುಗಿ ಹೋಗಿದೆ. ಜಗತ್ತಿನ ಅತ್ಯಂತ ಮುಂದುವರಿದ ಅದೆಷ್ಟೋ ದೇಶಗಳಲ್ಲಿ ಜನರು ದೀಪದ ಹುಳುವಿನಂತೆ ರಸ್ತೆಗಳಲ್ಲಿ ದಿಕ್ಕು ದಿಸೆಯಿಲ್ಲದೇ ಸಾವನ್ನಪ್ಪುತ್ತಿದ್ದಾರೆ.  ಆದರೆ ಜನಸಂಖ್ಯೆಯಲ್ಲಿ ವಿಶ್ವದ ಎರಡನೇ ಅತಿ ದೊಡ್ಡದಾದ ರಾಷ್ಟ್ರವಾದ ನಮ್ಮ ದೇಶದಲ್ಲಿ  ಪರಿಸ್ಥಿತಿ  ವಿಭಿನ್ನವಾಗಿದೆ.  ಇದಕ್ಕೆ ತದ್ವಿರುದ್ಧವಾಗಿದೆ.  ಪರಿಸ್ಥಿತಿ ಕೈ ಜಾರುವ ಮುನ್ನವೇ ಪ್ರಧಾನಿಗಳು ದೇಶಾದ್ಯಂತ  ಲಾಕ್ ಡೌನ್ ಹೇರಿದ ಪರಿಣಾಮ, ಕೆಲವು ಅವಿವೇಕಿಗಳ ಹೊರತು ಪಡಿಸಿ,  ಬಹುತೇಕರು ಮನೆಯಲ್ಲಿಯೇ ಭಧ್ರವಾಗಿದ್ದ ಕಾರಣ,   ಕೊರೋನಾದ  ದುಷ್ಪರಿಣಾಮ ಅಷ್ಟೇನೂ ಭಯಂಕರವಾಗಿರದೇ, ಪರಿಸ್ಥಿತಿ ನಿಯಂತ್ರಣದಲ್ಲಿತ್ತು.  ಒಂದೆರಡು ತಿಂಗಳುಗಳು ಇಡೀ ದೇಶವೇ ಸ್ಥಭ್ಧವಾದಾಗ  ಅನೇಕರು ಅದರಲ್ಲಿಯೂ ದಿನ ನಿತ್ಯದ ಕೂಲೀ ಕಾರ್ಮಿಕರು ಕೆಲಸ ಕಳೆದು ಕೊಂಡಿದ್ದು ಹೌದಾದರೂ, ಹಲವಾರು ಸ್ವಯಂ ಸೇವಾ ಸಂಘಟನೆಗಳು, ದಾನಿಗಳು ಮತ್ತು ಕೇಂದ್ರ, ರಾಜ್ಯ ಸರ್ಕಾರಗಳು ನೇರವಾಗಿ ಫಲಾನುಭವಿಗಳಿಗೇ ಬಿಡುಗಡೆ ಮಾಡಿದ ಕೆಲವು ತುರ್ತು ಪರಿಹಾರ ನಿಧಿಗಳಿಂದಾಗಿ ಪರಿಸ್ಥಿತಿ ಸುಧಾರಿಸುತ್ತಿತ್ತು.  ಇನ್ನೇನು  ಹಂತ ಹಂತವಾಗಿ ಲಾಕ್ ಡೌನ್ ಸಡಿಲಿಸಿ ಕೆಲಸಕಾರ್ಯಗಳನ್ನು ಆರಂಭಿಸುವ ಮೂಲಕ ದೇಶದ ಪರಿಸ್ಥಿತಿಯನ್ನು ಮೊದಲಿನ ಸ್ಥಿತಿಗೆ ತರುವ ನಿರ್ಧಾರವನ್ನು ಪ್ರಧಾನಿಗಳು ಮಾಡುವವರಿದ್ದರು.    ನಮ್ಮ ದೇಶ ಕೂರೋನಾ ಸಾಂಕ್ರಾಮಿಕ ಮಹಾಮಾರಿಯನ್ನು   ಸೂಕ್ತವಾಗಿ ನಿಭಾಯಿಸಿದ ರೀತಿ ಅಂತರಾಷ್ಟ್ರೀಯ ಮನ್ನಣೆಗೆ ಪಾತ್ರವಾಯಿತಲ್ಲದೇ, ನಮ್ಮ ಪ್ರಧಾನಿಗಳನ್ನು ವಿಶ್ವದ ನಾನಾ ನಾಯಕರು ಕೊಂಡಾಡುತ್ತಿದ್ದರೆ, ಕೆಲವು ಪಟ್ಟಭಧ್ರ ಹಿತಾಸಕ್ತಿಯ ವರ್ಗದವರಿಗೆ ಇದನ್ನು ಸಹಿಸಲಾಗಲಿಲ್ಲ. ಅದರಲ್ಲೂ   ಮೋದಿಯವರ ವಿರುದ್ಧ ಎರಡು ಬಾರಿ ತೊಡೆತಟ್ಟಿ   ಸೋತು ಸುಣ್ಣವಾಗಿರುವ ಕಾಂಗ್ರೇಸ್ ಪಕ್ಷಕ್ಕಂತೂ ಇದು ನುಂಗಲಾರದ ತುತ್ತಾಗಿತ್ತು.  ಆಗಲೇ ದೇಶಾದ್ಯಂತ ಇದ್ದಕ್ಕಿದ್ದಂತೆಯೇ ವಲಸೆ ಕಾರ್ಮಿಕರ ಅಂತರಿಕ ದಂಗೆಗಳು ಏಳಲಾರಂಭಿಸಿತು.

ಸರ್ಕಾರ ಶ್ರಮಿಕ್ ರೈಲುಗಳನ್ನು ಚಾಲನೆ ನೀಡುವ ಮೂಲಕ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ವಲಸೆ ಕಾರ್ಮಿಕರಿಗೆ ತಮ್ಮತಮ್ಮ ಊರುಗಳಿಗೆ ಉಚಿತವಾಗಿ ಪಯಣಿಸಲು ಅನುವು ಮಾಡಿಕೊಡುತ್ತಿದ್ದರೆ, ಕಾಂಗ್ರೇಸ್  ತನ್ನ ಛೇಲಾಗಳ ಮುಖಾಂತರ  ಕೆಲಸಕ್ಕಾಗಿ  ದೇಶದ ನಾನಾ ಕಡೆಗೆ ವಲಸೆ ಹೋಗಿದ್ದ ಕಾರ್ಮಿಕರನ್ನು ಸದ್ದಿಲ್ಲದೆ ಗುಳೇ ಎಬ್ಬಿಸುವ ಕಾರ್ಯದಲ್ಲಿ ನಿರತವಾಯಿತು.  ಎಂದಿನಂತೆ ತಮ್ಮ ಲೂಟಿಯನ್ಸ್  ಮಾಧ್ಯಮದ ಸಹಾಯದಿಂದ ದೇಶಾದ್ಯಂತ, ಸಾವಿರಾರು ಕಿಲೋಮೀಟರ್ ನಡೆದು ಹೋಗುವ ಕಾರ್ಮಿಕರ ಚಿತ್ರಗಳನ್ನು ಸೆರೆಹಿಡಿದು ಅದಕ್ಕೆ ತಕ್ಕುದಾದ ಬಣ್ಣ ಕಟ್ಟಿ ಬಿತ್ತರಿಸುವಂತೆ ಮಾಡಲಾಯಿತು. ಅ ವಲಸೇ ಕೆಲಸಗಾರಿಗೆ ಬಹುತೇಕ ಮಾಲಿಕರು ಸಾಲಾ ಸೋಲಾ ಮಾಡಿ ಸಂಬಳ, ವಸತಿ ,ಊಟ ಕೊಡುತ್ತಿದ್ದರೂ, ತಮ್ಮಪಕ್ಷದ ಏಜಂಟರ ಮುಖಾಂತರ  ಹಣದ ಆಮಿಷವೊಡ್ದಿ, ಸದ್ಯಕ್ಕೆ ಇಲ್ಲಿಂದ ಜಾಗ ಖಾಲಿ ಮಾಡಿ.  ಇನ್ನಾರು ತಿಂಗಳು ನಂತರ ನಮ್ಮ ಪಕ್ಷವೇ ನಿಮ್ಮನ್ನು ಇಲ್ಲಿಗೆ ಪುನಃ ಕರೆಸಿಕೊಳ್ಳುತ್ತೇವೆ  ಎನ್ನುವ ನಾನಾ ರೀತಿಯ ಪುಸಲಾಯಿಸಿ ರಾತ್ರೋ ರಾತ್ರಿ ಮಾಲಿಕರಿಗೂ ಹೇಳದಂತೆ, ಲಾರಿಗಳಲ್ಲಿ, ಡೊಡ್ಡ ದೊಡ್ಡ ಕಂಟೇನರ್ಗಳಲ್ಲಿ, ಸಿಮೆಂಟ್ ಕಾಂಕ್ರೀಟ್ ಮಿಕ್ಸಿಂಗ್ ಲಾರಿಗಳ ಮುಖಾಂತರವೋ ಇಲ್ಲವೇ  ಕಾಲ್ನಡಿಗೆಯೋ ಒಟ್ಟಿನಲ್ಲಿ ಯಾವುದೋ ಒಂದು ರೀತಿಯ ವ್ಯವಸ್ಥೆ ಮಾಡಿ ಅವರನ್ನೆಲ್ಲಾ ಗುಳೇ ಎಬ್ಬಿಸಿ ದೇಶದಲ್ಲಿ ನಕಲಿ ದಂಗೆಯನ್ನೆಬ್ಬಿಸುವ ಪ್ರಯತ್ನಮಾಡಿಯೇ ಬಿಟ್ಟಿತು. ಇನ್ನು ಕಾಂಗ್ರೇಸ್ ಯುವರಾಜ ರಾಹುಲ್ ಗಾಂಧಿ ರಸ್ತೆಯ ಮದ್ಯದಲ್ಲಿಯೇ  ವಲಸೇ ಕಾರ್ಮಿಕರ  ಸಂದರ್ಶನ ಮಾಡಿ ಬಿಟ್ಟಿ ಪ್ರಚಾರ ಗಿಟ್ಟಿಸಿದರೆ, ಅವನ ತಂಗಿ ಪ್ರಿಯಾಂಕ  ವಲಸೇ ಕಾರ್ಮಿಕರ ಸಾಗಣಿಕೆಗೆ ಕಾಂಗ್ರೇಸ್ ಪಕ್ಷದ ವತಿಯಿಂದ 1000  ಬಸ್ ವ್ಯವಸ್ಥೆ ಮಾಡುತ್ತೇನೆಂದು ಬೂಸಿ ಬಿಟ್ಟು ವಾಹನಗಳ ನೊಂದಾವಣಿ ಸಂಖ್ಯೆ ನೀಡಲು ಪರದಾಡಿ ಎಲ್ಲರ ಮುಂದೆ ನಗೆಪಾಟಲಾಗಿದ್ದು ಈಗ  ಇತಿಹಾಸ.

ಮಾನವೀಯತೆ,  ಅಂತಃಕರಣ, ದೇಶಭಕ್ತಿ, ಸ್ವಾಭಿಮಾನವೇ ಇಲ್ಲದ ಕೇವಲ ಸ್ವಾರ್ಥ ಕುಟುಂಬ ರಾಜಕಾರಣ ಮತ್ತು  ಅಧಿಕಾರದ ಲಾಲಸೆಯ ಕಾಂಗ್ರೇಸ್ಸಿನ ಈ ನಡೆ ಸುಮಾರು 26 ವರ್ಷಗಳ ಹಿಂದೆ ನಡೆದ ಒಂದು ಘಟನೆಯನ್ನು ನೆನಪಿಗೆ ತಂದಿತು.

WhatsApp Image 2020-05-24 at 2.36.53 PMಈ  ಮೇಲೆ ನೋಡುತ್ತಿರುವ ಹೃದಯವಿದ್ರಾವಕ  ಚಿತ್ರವನ್ನು ತೆಗೆದವರು ದಕ್ಷಿಣ ಆಫ್ರಿಕಾದ ಫೋಟೊ ಜರ್ನಲಿಸ್ಟ್  ಆಗಿದ್ದ ಶ್ರೀ ಕೆವಿನ್ ಕಾರ್ಟರ್.  1993 ರಲ್ಲಿ ಸುಡಾನ್‌ನಲ್ಲಿನ ಕ್ಷಾಮವನ್ನು ಚಿತ್ರಿಸುವ ಸಂದರ್ಭದಲ್ಲಿ ಈ ಚಿತ್ರವನ್ನು  ಅಚಾನಕ್ಕಾಗಿ ಚಿತ್ರೀಕರಿಸಿದ್ದರು ಮತ್ತು ಇದನ್ನು ದಿ ನ್ಯೂಯಾರ್ಕ್ ಟೈಮ್ಸ್ ಗೆ ಪತ್ರಿಕೆಗೆ  ಮಾರಾಟವನ್ನೂ ಮಾಡಿದ್ದರು.  ಆದರೆ ಇದೇ ಚಿತ್ರ ಅವರ ಬದುಕಿನಲ್ಲಿ ಅದೃಷ್ಟ ಮತ್ತು ದುರಾದೃಷ್ಟ  ಎರಡನ್ನೂ ತಂದಿತು ಎಂದರೆ  ಅತಿಶಯೋಕ್ತಿಯೇನಲ್ಲ. ಈ ಚಿತ್ರಕ್ಕಾಗಿ 1994 ರಲ್ಲಿ ಪ್ರಖ್ಯಾತ  ಪುಲಿಟ್ಜೆರ್ ಪ್ರಶಸ್ತಿಯನ್ನೂ ತಂದು ಕೊಟ್ಟಿತಲ್ಲದೇ, ಈ ಪ್ರಶಸ್ತಿ ಮತ್ತು  ಚಿತ್ರ ಕುರಿತಂತೆ ನಾನಾ ಮಾಧ್ಯಮಗಳು ನಡೆಸುತ್ತಿದ್ದ  ಸಂದರ್ಶನಗಳ ಸಮಯದಲ್ಲಿ , ಒಬ್ಬ  ಟೆಲಿಫೋನ್ ಸಂದರ್ಶಕ

  • ಈ ಪೋಟೋ ತೆಗೆದ ನಂತರ ಆ ಹುಡುಗಿಯ ಕಥೆ ಏನಾಯಿತು? ಎಂದು ಕುತೂಹಲದಿಂದ  ಕೇಳಿದ ಪ್ರಶ್ನೆಗೆ,
  • ಅಷ್ಟೇ ಸಹಜವಾಗಿ ಉತ್ತರಿಸಿದ ಕಾರ್ಟರ್ ಆ ರಣಹದ್ದು ಓಡಿಸಿದ ನಂತರ ಆಕೆ ಚೇತರಿಸಿಕೊಂಡು ಅಮೇರಿಕಾ ದೇಶ ವಿತರಿಸುತ್ತಿದ್ದ ಆಹಾರ ಕೇಂದ್ರವನ್ನು ತಲುಪಿರಬಹುದು. ಕಾರ್ಯಬಾಹುಳ್ಯದಿಂದಾಗಿ ನಾನು ಆಕೆಯ ಬಗ್ಗೆ ಹೆಚ್ಚಿನ ಗಮನ ಹರಿಸಲಿಲ್ಲ ಎಂದರು.
  • ಸಂದರ್ಶಕ ಪುನಃ ಪ್ರಶ್ನಾವಳಿಯನ್ನು ಮುಂದುವರಿಸಿ,
  • ಆ ಸಂದರ್ಭದಲ್ಲಿ ಅಲ್ಲಿ ಎಷ್ಟು ರಣಹದ್ದುಗಳು ಇದ್ದವು? ಎಂಬುದನ್ನು ತಿಳಿಸಬಹುದೇ ಎಂದಾಗ,
  • ಮತ್ತದೇ ನಿರ್ಲಿಪ್ತತೆಯಿಂದ ಆ ಚಿತ್ರವೇ ತಿಳಿಸುವಂತೆ ಒಂದೇ ಒಂದು  ರಣಹದ್ದು  ಇತ್ತು  ಎಂದು ಕಾರ್ಟರ್ ತಿಳಿಸಿದರು.
  • ಆ ಕೂಡಲೇ ಆ ಸಂದರ್ಶಕ ಕಾರ್ಟರ್ ಅವರ ಮಾತನ್ನು ತುಂಡರಿಸಿ, ಕ್ಷಮಿಸಿ, ನನಗೆ ತಿಳಿದಂತೆ ಆ ಸಂದರ್ಭದಲ್ಲಿ ಕೇವಲ ಒಂದೇ ಒಂದು ರಣಹದ್ದಲ್ಲದೇ, ಅಲ್ಲಿ ಎರಡು ರಣಹದ್ದುಗಳಿದ್ದವು. ಚಿತ್ರದಲ್ಲಿರುವ ರಣಹದ್ದು ಒಂದಾದಾರೇ, ಮತ್ತೊಂದು ಕ್ಯಾಮರಾದಲ್ಲಿ ಮೂಲಕ ಆ ರಣಹದ್ದನ್ನು ಸೆರೆಹಿಡಿಯುತ್ತಿತ್ತು ಎಂದು ಹೇಳಿದರು.

ಈ ಮಾತು   ಕಾರ್ಟರ್ ಮನಸ್ಸಿನ ಮೇಲೆ  ಸಿಡುಲು ಬಡಿಯುವಂತೆ ಅಪ್ಪಳಿಸಿ ಬಲು ತೀಕ್ಷ್ಣವಾಗಿಯೇ ಪರಿಣಾಮವನ್ನು ಬೀರಿ, ಅತ ಮಾನಸಿಕ ಖಿನ್ನತೆಗೆ ಒಳಗಾಗಿ ತಮ್ಮ  33 ನೇಯ ವಯಸ್ಸಿಗೇ ಜೀವನದಲ್ಲಿ ಬೇಸತ್ತು ಅಂತಿಮವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದು ನಿಜಕ್ಕೂ ಅತ್ಯಂತ ದುಃಖಕರವಾದ ವಿಷಯ.

ಆ ಕ್ಷಣದಲ್ಲಿ ಕಾರ್ಟರ್  ನಿಜಕ್ಕೂ ಒಬ್ಬ ಮಾನವೀಯ ಅಂತಃಕರಣ ಉಳ್ಳ ವ್ಯಕ್ತಿಯಾಗಿದ್ದಲ್ಲಿ, ಹಸಿವಿನಿಂದ ಬಳಲುತ್ತಿರುವ ಆ ಮಗುವನ್ನು ರಣಹದ್ದಿನಿಂದ ರಕ್ಷಿಸಿ, ಅಲ್ಲಿಯೇ ಹತ್ತಿರವಿದ್ದ  ಅಮೇರಿಕಾ ದೇಶದ ಆಹಾರ ಕೇಂದ್ರಕ್ಕೆ ಕರೆದೊಯ್ಯಬಹುದಿತ್ತು. ಆದರೆ  ತನ್ನ ಸ್ವಾರ್ಥಕ್ಕಾಗಿ ಆ ಮಗುವಿನ ಪೋಟೋವನ್ನು ತೆಗೆದು ಕೊಂಡನೇ ಹೊರತು, ಆ ಮಗುವಿನ ಪರಿಸ್ಥಿತಿಯ ಬಗ್ಗೆ ಕೊಂಚವೂ ಕಾಳಜಿ ವಹಿಸಲಿಲ್ಲ ಎನ್ನುವುದು ನಿಜಕ್ಕೂ ಅಕ್ಷಮ್ಯ ಅಪರಾಧವೇ ಸರಿ.

ಚಿತ್ರದಲ್ಲಿರುವ ರಣಹದ್ದಿನ ರೂಪದಲ್ಲಿ ಕೂರೋನಾ ಮಾಹಾಮಾರಿ ಇದ್ದರೇ ಆ ಪುಟಾಣಿ ಮಗುವಿನ ರೂಪದಲ್ಲಿದೆ ನಮ್ಮದೇಶ. ಅದನ್ನು ಸರಿಪಡಿಸಲು ಪ್ರಯತ್ನಿಸದೇ  ಅದಕ್ಕೆ ನಾನಾ ರೀತಿಯ ಬಣ್ಣ ಕಟ್ಟಿ ವಿಭಿನ್ನವಾದ ರೀತಿಯಿಂದ ದೇಶದ ಜನರ ಮುಂದೆ ಲೂಟಿಯನ್ ಮಾಧ್ಯಮಗಳ ಮುಖಾಂತರ  ತೋರಿಸುತ್ತಿರುವ ಕಾಂಗ್ರೇಸ್ ಮತ್ತೊಂದು ಘನಘೋರ ರಣಹದ್ದಾಗಿದೆ.

ಈ ರೀತಿ ವಲಸೇ ಕಾರ್ಮಿಕರ ಗುಳೇ ಎಬ್ಬಿಸಿದರೆ  ಕಾಂಗ್ರೇಸ್  ಪಕ್ಷಕ್ಕೆ ಆಗುವ  ಲಾಭವಾದರೂ ಏನು ತಿಳಿದರೇ ನಿಜಕ್ಕೂ ಹೊಟ್ಟೆ ಉರಿಯುತ್ತದೆ ಮತ್ತು ಸ್ವಾಭಿಮಾನ ಕೆರಳುತ್ತದೆ.  ಪ್ರಸಕ್ತ ಸರಕಾರ ಮತ್ತು ಕಾರ್ಖಾನೆ ಮಾಲಿಕರು ಕಾರ್ಖಾನೆಗಳನ್ನು ಪುನರಾರಂಭಿಸಲು ಸಿದ್ದವಾಗಿದ್ದರೂ, ಕೆಲಸಗಾರರು ಗುಳೇ ಹೋದ ಪರಿಣಾಮ  ಕೆಲಸಗಾರರಿಲ್ಲದೇ ಕಾರ್ಖಾನೆ ನಡೆಯದೆ  ಕಾರ್ಖಾನೆ ಲಾಸ್ ಆಗತ್ತದೆ ಮತ್ತು ಕೆಲವು ಕಡೆ ಶಾಶ್ವತವಾಗಿ ಮುಚ್ಚಿಯೂ ಹೋಗಬಹುದು. ಈಗ ಕೇವಲ  ದೊಡ್ಡ ದೊಡ್ಡ ಪಟ್ಟಣಗಳಿಗಷ್ಟೇ ಸೀಮಿತವಾಗಿರುವ ಕೂರೋನಾ ಮಹಾಮಾರಿ, ಈ ವಲಸೇ ಕಾರ್ಮಿಕರಿಂದಾಗಿ ಸಣ್ಣ ಸಣ್ಣ ಹಳ್ಳಿಗಳನ್ನೂ ತಲುಪುತ್ತದೆ.  (ಮುಂಬೈನಿಂದ ಆಗಮಿಸಿದ ಬಹುತೇಕ ವಲಸೇ ಕಾರ್ಮಿಕರಿಂದಲೇ ಮಂಡ್ಯಾದಲ್ಲಿ 100ಕ್ಕೂ ಅಧಿಕ  ಕೂರೋನಾ ಸೋಂಕಿತರು ಏಕಾಏಕಿ ಪತ್ತೆಯಾಗಿದ್ದು)  ಈಗ ನಿಯಂತ್ರಣದಲ್ಲಿರುವ  ಕೂರೋನಾ ಎಲ್ಲಾ ಕಡೆ  ಹರಡುವ ಮೂಲಕ  ಪ್ರಧಾನಿಗಳಿಗೆ ಕೆಟ್ಟ ಹೆಸರು ಬರುತ್ತದೆ. ದೇಶದ ಆರ್ಥಿಕ ಪರಿಸ್ಥಿತಿ ಮತ್ತಷ್ಟೂ ಬಿಗಡಾಯಿಸುತ್ತದೆ, ತನ್ನ ಒಂದು ಕಣ್ಣು ಹೋದರೂ ಪರವಾಗಿಲ್ಲ ತನ್ನ ವಿರೋಧಿಗಳ ಎರಡೂ ಕಣ್ಣುಗಳು ಹೋಗಬೇಕು ಎನ್ನುವ ಕೆಟ್ಟ ಮನೋಭಾವದ ಕಾಂಗ್ರೇಸ್ ಆಗ  ಬಿಜೆಪಿಯವರಿಂದಾಗಿ ದೇಶಾದ್ಯಂತ ನಿರುದ್ಯೋಗ ತಾಂಡವವಾಡುತ್ತಿದೆ. ಆರ್ಥಿಕ ಪರಿಸ್ಥಿತಿ ಹದೆಗೆಟ್ಟಿದೆ ಎಂದು ಬೊಬ್ಬೆ ಹೊಡೆದು ಜನರನ್ನು ರೊಚ್ಚಿಗೆಬ್ಬಿಸಿ  ಪುನಃ ಅಧಿಕಾರಕ್ಕೆ ಬರಬಹುದೆಂಬ ಭ್ರಮೆಯಲ್ಲಿದ್ದಾರೆ. ಒಟ್ಟಿನಲ್ಲಿ ಕಂಡೋರ ಮಕ್ಕಳನ್ನು ಭಾವಿಗೆ ದೂಡಿ, ಭಾವಿಯ  ಆಳವನ್ನು ನೋಡುವ ಚಾಳಿಯನ್ನು ಕಾಂಗ್ರೇಸ್ ಪಕ್ಷ ಮಾಡುತ್ತಿರುವುದು  ದೇಶದ ಹಿತದೃಷ್ಟಿಯಿಂದ ನಿಜಕ್ಕೂ ಮಾರಕವಾಗಿದೆ.

ಕಾಂಗ್ರೇಸ್ ಎಂಬ  ರಣಹದ್ದುಗಳಿಗೆ ನಿಜಕ್ಕೂ ದೇಶ ಮತ್ತು ದೇಶದ ವಲಸೇ ಕಾರ್ಮಿಕರ ಬಗ್ಗೆ ಸಹಾನುಭೂತಿ ಮತ್ತು ಮಾನವೀಯತೆ ಇದ್ದಲ್ಲಿ ಅವರನ್ನು ಗುಳೇ ಎಬ್ಬಿಸಿ ಅವರ ಸಾವು ನೋವಿನ ಚಿತ್ರಣದ   ಸುದ್ದಿಯನ್ನು  ತಮ್ಮ ಲೂಟಿಯನ್ಸ್  ಮಾಧ್ಯಮಗಳ ಮುಖಾಂತರ ಪ್ರಸಾರ ಮಾಡಿ ತಮ್ಮ ಪಕ್ಷದ  ವರ್ಚಸ್ಸನ್ನು  ಹೆಚ್ಚಿಸಿ ಕೊಳ್ಳುವುದಕ್ಕಿಂತ, ಆ ಕಾರ್ಮಿಕರಿಗೆ ಮಾನಸಿಕ ಸ್ಥೈರ್ಯ ತುಂಬಿ, ಹೇಗೂ ಲಾಕ್ ಡೌನ್ ಭಾಗಶಃ ತೆರವುಗೊಳಿಸಿಯಾಗಿದೆ. ಸಣ್ಣ ಪುಟ್ಟ ರೀತಿಯಲ್ಲಿ ಕೆಲಸಕಾರ್ಯಗಳೂ ಆರಂಭವಾಗಿವೆ. ಇಲ್ಲಿಯೇ ಇದ್ದು ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ನಿಮ್ಮ ನಿಮ್ಮ ಕಾರ್ಯಗಳನ್ನು ಮುಂದು ವರೆಸಿಕೊಂಡು ಹೋಗಿ ಎಂದು ಹೇಳಬಹುದಾಗಿತ್ತು. ಅದು ಬಿಟ್ಟು ಸುಮ್ಮನೇ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ, ರೈಲ್ವೇ ನಿಲ್ದಾಣದಲ್ಲಿ,  ಬೆಂಗಳೂರಿನ ಅರಮನೆ ಮೈದಾನದ ಮುಂದೆ ಅನಗತ್ಯವಾಗಿ ತಮ್ಮ ಪಟಾಲಂ ಸಹಿತ ದೊಂಬರಾಟವನ್ನು ಪ್ರದರ್ಶಿಸಿ ಜನರ ಮುಂದೆ ಹಾಸ್ಯಾಸ್ಪದವಾಗುವ ಔಚಿತ್ಯವೇನಿತ್ತು?

ಕುಸಿದಿರುವ ದೇಶದ ಆರ್ಥಿಕತೆಯನ್ನು ಎತ್ತಲು  ಪ್ರಧಾನಿಗಳು ದೇಶವಾಸಿಗಳಿಗೆ ಸ್ವದೇಶಿಗರಾಗಿ ಮತ್ತು ಸ್ವಾವಲಂಭಿಗಳಾಗಿರಿ  ಎಂದು ಕರೆ ನೀಡಿ ಸುಮಾರು ಇಪ್ಪತ್ತು ಲಕ್ಷ ಕೋಟಿ ಪರಿಹಾರ ನಿಧಿ (ದಯವಿಟ್ಟು ಗಮನಿಸಿ ಇದು ಸಾಲವಲ್ಲ)ಯನ್ನು ಘೋಷಿಸಿ ಈ ನಿಧಿಯನ್ನು ಸದ್ವಿನಿಯೋಗ ಮಾಡಿಕೊಂಡು ಸ್ವಾವಲಂಭಿಗಳಾಗಿ ಕೈಗಾರಿಕೆಗಳು, ವ್ಯಾಪಾರವನ್ನು ಆರಂಭಿಸುವ ಮೂಲಕ ಸ್ವದೇಶೀ ಉತ್ಪನ್ನಗಳನ್ನು ತಯಾರಿಸಿ ಅದರ ಮೂಲಕ ಸ್ಥಳೀಯರಿಗೆ ಉದ್ಯೋಗವನ್ನು ಕೊಡುವಂತಹ ಸುಂದರ ಕಲ್ಪನೆಯನ್ನು ಎಲ್ಲರ ಮನದಲ್ಲಿ ಮೂಡಿಸುತ್ತಿದ್ದರೆ, ಸಿದ್ದರಾಮಯ್ಯನವರನ್ನು ಒಳಗೊಂಡಂತಹ ಬಹುತೇಕ ಕಾಂಗ್ರೇಸ್ ನಾಯಕರು, ಈ ಸುಂದರ ಕಲ್ಪನೆಯನ್ನು ಲೇವಡಿ ಮಾಡುತ್ತಾ ಜನರಲ್ಲಿ ತಪ್ಪು ಕಲ್ಪನೆಯನ್ನು ಮೂಡಿಸುತ್ತಾ,  ದೇಶವಾಸಿಗಳು ಸ್ವಾವಲಂಭಿಗಳಾಗುವುದಕ್ಕಿಂತಲೂ, ಪರಾವಲಂಭಿಗಳಾಗಿ ಸದಾ ಸರ್ಕಾರ ಕೊಡುವ ಎಂಜಿಲು ಕಾಸಿಗೆ ಕೈ ಚಾಚುಚಂತೆ ಸೋಮಾರಿಗಳಾಗಿಯೇ ಇರುವಂತೆ  ಪ್ರಚೋದಿಸುತ್ತಿರುವುದು ನಿಜಕ್ಕೂ ಅಕ್ಷಮ್ಯ   ಅಪರಾಧವೇ ಸರಿ.

ಸಂದರ್ಶನಕಾರ ಹೇಳಿದ ಆ ಒಂದು ಮಾತು ಮಾನವೀಯತೆಯನ್ನೇ ಮರೆತು, ಸ್ಚಾರ್ಥಿಯಾಗಿದ್ದ ಕೆವಿನ್ ಕಾರ್ಟರ್ ಅವರ ಮನಸ್ಸಿನಲ್ಲಿ ಮಾನವಿಯತೆಯನ್ನು ಜಾಗೃತಗೊಳಿಸಿತ್ತು. ಆತ ಮಾಡಿದ ತಪ್ಪು ಆತನಿಗೇ ಅರಿವಾಗಿ ತನ್ನ ತಪ್ಪಿನ ಪ್ರಾಯಶ್ಚಿತ್ತಕ್ಕಾಗಿ ಆತ್ಮಹತ್ಯೆಯಂತಹ ಘೋರ ಶಿಕ್ಷೆಯನ್ನು ಅನುಭವಿಸುವಂತೆ ಮಾಡಿತು. ಆದರೆ ಕಾಂಗ್ರೇಸ್ ಪಕ್ಷ ಎಂಬ ರಣಹದ್ದಿಗೆ ಈ ರೀತಿಯ ಯಾವುದೇ ಅಂತಃಕರಣ, ದೇಶಭಕ್ತಿ, ಸ್ವಾಭಿಮಾನ, ಮಾನವೀಯತೆ ಇಲ್ಲವಾಗಿ ಕೇವಲ ಅಧಿಕಾರಕ್ಕಾಗಿ ಸದಾಕಾಲವೂ ದೇಶದಲ್ಲಿ ಆಂತರಿಕ ಕ್ಷೋಭೆಯನ್ನು ಹರಡುವ ಕಾರ್ಯದಲ್ಲಿ ನಿರತವಾಗಿರುವುದು ಕ್ಷಮಿಸಲಾರದ ಅಪರಾಧವಾಗಿದೆ. ಕೂರೋನಾ ಮಾಹಾಮಾರಿಗೆ ಔಷಧಿಯನ್ನು ಕಂಡು ಹಿಡಿಯುವ ನಿಟ್ಟಿನಲ್ಲಿ ವಿಜ್ಞಾನಿಗಳು ನಿರತವಾಗಿದ್ದರೆ, ದೇಶಕ್ಕೆ ಕೂರೋನಾಕ್ಕಿಂತಲೂ ಹೆಮ್ಮಾರಿಯಾದ ಕಾಂಗ್ರೆಸ್ಸಿನ ಈ ಘನಘೋರ ಅಪರಾಧಕ್ಕಾಗಿ ಮುಂದಿನ ದಿನಗಳಲ್ಲಿ ಮುಂದೇದೂ ಎಚ್ಚೆತ್ತು ಕೊಳ್ಳಲಾಗದಂತಹ ಕಠಿಣವಾದ ಸಜೆಯನ್ನು ಜನರು ನೀಡಿಯೇ ತೀರುತ್ತಾರೆ ಎಂಬುದು ನಿಶ್ಚಿತವಾಗಿ ಗೋಚರಿಸುತ್ತಿದೆ. ದೀಪ ಆರುವುದಕ್ಕೆ ಮುಂಚೆ, ಜೋರಾಗಿ ಉರಿಯುತ್ತದೆ ಎನ್ನುವಂತೆ ಮುಂಬರುವ ದಿನಗಳಲ್ಲಿ ಕೂರೋನಾ ಮತ್ತು ಕಾಂಗ್ರೇಸ್ಸಿನ ಈ ಆರ್ಭಟಗಳು ಶಾಶ್ವತವಾಗಿ ನಂದಿ ಹೋಗುತ್ತದೆ.

ಏನಂತೀರೀ?

ಏನಂತೀರೀ?

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s