ಬಟ್ಟಾ ಮಜಾರ್

batta1

ನಮಸ್ತೇ ಶಾರದಾದೇವೀ, ಕಾಶ್ಮೀರಪುರವಾಸಿನಿ| ತ್ವಾಮಹಂ ಪ್ರಾರ್ಥಯೇ ನಿತ್ಯಂ ವಿದ್ಯಾದಾನಂಚ ದೇಹೀಮೇ | ಎಂದು ಪ್ರತೀದಿನವೂ ಪಠಿಸುವ ಶ್ಕೋಕದ ಆ ಶಾರಮಂದಿರ ಕಾಶ್ಮೀರದಲ್ಲಿತ್ತು. 9 ನೇ ಶತಮಾನದಲ್ಲಿ ಆದಿಶಂಕರಾಚಾರ್ಯರು ಪ್ರಪ್ರಥಮಬಾರಿಗೇ ಆ ದೇವಸ್ಥಾನದ ದಕ್ಷಿಣದ ಬಾಗಿಲನ್ನು ತೆರೆಸಿ ಅದರ ಮೂಲಕವೇ ಪ್ರವೇಶಿಸಿ. ಕಾಶ್ಮೀರೀ ಪಂಡಿತರನ್ನು ಧರ್ಮ ಶಾಸ್ತ್ರದ ವಾದದಲ್ಲಿ ಸೋಲಿಸಿ ಸರ್ವಜ್ಞಪೀಠಾರೋಹಣವನ್ನು ಆರೋಹಣ ಮಾಡಿದ್ದರು. ಇಂತಹ ಪವಿತ್ರವಾದ ಪುಣ್ಯಕ್ಷೇತ್ರವಿದ್ದ ಕಾಶ್ಮೀರದ ಕಣಿವೆಯಲ್ಲಿ ಹದಿಮೂರನೇ ಶತಮಾನದ ಆರಂಭದವರೆಗಿಗೂ ಹಿಂದೂಗಳದ್ದೇ ಪ್ರಾಭಲ್ಯವಿತ್ತು. ಅದರಲ್ಲೂ ಕಾಶ್ಮೀರೀ ಪಂಡಿತರೆಂದೇ ಖ್ಯಾತರಾಗಿದ್ದ ಬ್ರಾಹ್ಮಣರೇ ಆ ಪ್ರದೇಶದಲ್ಲಿ ಹೆಚ್ಚಾಗಿದ್ದು ತಮ್ಮ ಸದ್ವಿಚಾರ ಆಚಾರ ಪದ್ದತಿ ಮತ್ತು ಸಂಪ್ರದಾಯಗಳೊಂದಿಗೆ ನೆಮ್ಮದಿಯಾಗಿ ವಾಸ ಮಾಡುತ್ತಿದ್ದರು. ಸುಮಾರು 13ನೇ ಶತಮಾನದ ಅಂತ್ಯದ ಸಮಯದಲ್ಲಿ ಸದ್ಯದ ಆಫ್ಫಾನಿಸ್ಥಾನದ ಮೂಲಕ ಕಾಶ್ಮೀರವನ್ನು ಪ್ರವೇಶಿಸಿದ ಅರಬ್ ಮೂಲದ ಮುಸ್ಲಿಂ ಮೂಲಭೂತವಾದಿಗಳು ಅಥವಾ ಮತಾಂಧರುಗಳು ಕಾಶ್ಮೀರದಲ್ಲಿದ್ದ ಹಿಂದೂಗಳ ಮೇಲೇ ಧಾಳಿ ನಡೆಸಿ ತಮ್ಮ ದಬ್ಬಾಳಿಕೆಯ ಮೂಲಕ ಭಯಪಡಿಸಿ ಬಲವಂತದಿಂದ ಹಿಂದೂಗಳನ್ನು ಹಿಂಸಿಸತೊಡಗಿದರು. ಅದರಲ್ಲೂ ಸುಲ್ತಾನ್ ಸಿಕಂದರ್ (1389- 1413) ಕಾಲದಲ್ಲಿ ಕಣಿವೆಯ ಹಿಂದೂಗಳ ಮೇಲೆ ಹೇಳಲಾಗದ ರೀತಿಯಲ್ಲಿ ದಬ್ಬಾಳಿಕೆ ನಡೆಸಿದರು ಹಿಂದೂಗಳ ದೇವಾಲಯಗಳ ಮೇಲೆ ಧಾಳಿ ನಡಿಸಿ, ದೇವಾಸ್ಥಾನ ಮತ್ತು ದೇವರ ವಿಗ್ರಹಗಳನ್ನು ಯಾವುದೇ ಕರುಣೆಯಿಲ್ಲದೆ ಧ್ವಂಸಗೊಳಿಸಿದ್ದಲ್ಲದೇ ಅವರನ್ನು ಹಿಂಸಿಸಿ, ಕೊಂದು ನಾಶಪಡಿಸಿದರು. ಪ್ರಸಿದ್ಧ ದೇವಾಲಯಗಳಾದ ವಿಜೇಶ್ವರ’ ಮತ್ತು ಮಾರ್ತಂಡ ದೇವಾಲಯವನ್ನು ಹಾಳು ಗೆಡವಿದರು. ಮತಾಂಧ ನಿರಂಕುಶಾಧಿಕಾರಿ ಮತ್ತು ಕ್ರೂರತೆಗೆ ಹೆಸರಾಗಿದ್ದ ಸಿಕಂದರ್ ಕಾಶ್ಮೀರೀ ಪಂಡಿತರನ್ನು ಒಂದೆಡೆಗೆ ಸೇರಿಸಿ ಅವರಿಗೆ 3 ಆಯ್ಕೆಗಳನ್ನು ನೀಡಿದರು.

  1. ಪ್ರಾಣ ರಕ್ಷಣೆಗಾಗಿ ಕಾಶ್ಮೀರದ ಕಣಿವಿಯಿಂದ ಸ್ವಯಂ ಗಡಿ ಪಾರಾಗುವುದು
  2. ತಾವು ಧರಿಸಿದ್ದ ಜನಿವಾರ ಕಿತ್ತು ಹಾಕಿ ಇಸ್ಲಾಂಗೆ ಮತಾಂತರ ಹೊಂದುವುದು
  3. ಇಸ್ಮಾಮಿಗೆ ಮತಾಂತರವಾಗದವರು ಮುಸ್ಮಿಮ್ಮರ ಮಾರಣ ಹೋಮಕ್ಕೆ ಬಲಿಯಾಗುವುದು.

ತಮ್ಮ ಆತ್ಮ ರಕ್ಷಣೆಗಾಗಿ ಕೆಲವೇ ಕೆಲವು ಕಾಶ್ಮೀರಿಗಳು ಕಣಿವೆಯನ್ನು ಬಿಟ್ಟು ಇತರೇ ಪ್ರದೇಶಗಳತ್ತ ವಲಸೆ ಹೋದರೆ, ಹೆಚ್ಚಿನವರು ಇಸ್ಲಾಂ ಧರ್ಮಕ್ಕೆ ಮತಾಂತರವಾಗಲು ವಿರೋಧ ವ್ಯಕ್ತಪಡಿಸಿದಾಗ ಅವರನ್ನು ಬರ್ಬರವಾಗಿ ಹತ್ಯೆಮಾಡಲಾಯಿತು. ಹಾಗೆ ಹತರಾದ ಕಾಶ್ಮೀರೀ ಪಂಡಿತರ ಜನಿವಾರಗಳ ತೂಕವೇ ಸುಮಾರು ಏಳು ಮಾಂಡ್‌ಗಳು (ಸುಮಾರು 900 ಪೌಂಡ್) ತೂಕವಿತ್ತು. ಅದನ್ನು ಅವರು ದೊಡ್ಡ ರಾಶಿ ಮಾಡಿ ಬೆಂಕಿ ಹಚ್ಚಿ ನಾಶ ಮಾಡಿದರು. ಇತಿಹಾಸಕಾರ ಜಾನ್ ರಾಜ್ ಅವರು ಹೇಳುವ ಪ್ರಕಾರ, ಕೆಲವು ಕಾಶ್ಮೀರಿ ಪಂಡಿತರನ್ನು ಹೊಡೆದು, ಇನ್ನೂ ಕೆಲವರನ್ನು ವಿಷ ಪ್ರಾಶನದಿಂದ ಮತ್ತೆ ಹಲವರನ್ನು ಹಗ್ಗಗಳಿಂದ ನೇತು ಹಾಕಿ ಸಾಯಿಸಿದರೆ, ಸುಮಾರು ಜನರನ್ನು ದಾಲ್ ಸರೋವರದಲ್ಲಿ ಮುಳುಗಿಸಿ ಸಾಯಿಸಿದರೆ ಇತರರು ಪ್ರಪಾತಕ್ಕೆ ಹಾರಿ ಪ್ರಾಣ ತೆತ್ತರೆ, ಉಳಿದವರನ್ನು ಬರ್ಬರವಾಗಿ ಸುಟ್ಟುಹಾಕಿದರು. ಹಿಂದೂಗಳ ಎಲ್ಲಾ ಪವಿತ್ರ ಪುಸ್ತಕಗಳನ್ನು ದಾಲ್ ಸರೋವರಕ್ಕೆ ಎಸೆಯಲಾಯಿತು ಹೀಗೆ ಲಕ್ಷಾಂತರ ಕಾಶ್ಮೀರೀ ಪಂಡಿತರನ್ನು ಕೊಂದು ಹಾಕಿದ ಶ್ರೀನಗರದ ನಗರದ ರೈನವರಿಯ ಸುತ್ತಮುತ್ತಲಿನ ಪ್ರದೇಶವನ್ನು ಅಂದಿನಿಂದ ಬಟ್ಟಾ ಮಜಾರ್ (ಭಟ್ಟರ ಸಮಾಧಿ ಪ್ರಾಂಗಣ) ಎಂದು ಕರೆಯಲಾಯಿತು.

ಬಟ್ಟಾ ಮಜಾರ್, ಕಾಶ್ಮೀರದ ರಾಜಧಾನಿ ಶ್ರೀನಗರದ ರೈನವರಿಯ ಸುತ್ತಮುತ್ತಲಿನಲ್ಲಿ ಇಂದಿಗೂ ಅಸ್ಥಿತ್ವದಲ್ಲಿ ಇರುವ ಒಂದು ಸ್ಥಳ. ಭಟ್ಟ ಎಂದರೆ ಕಾಶ್ಮೀರಿ ಪಂಡಿತರು ಮತ್ತು ಮಜಾರ್ ಎಂದರೆ ಸಮಾಧಿ ಅಥವಾ ಗೋರಿ ಎಂದರ್ಥ. 14ನೇಯ ಶತಮಾನದಲ್ಲಿ ಕಾಶ್ಮೀರೀ ಪಂಡಿತರ ಮೇಲೆ ನಡೆದ ನರಮೇಧಕ್ಕೆ ಇಂದಿಗೂ ಬದುಕುಳಿದಿರುವ ಬೆರಳೆಣಿಕೆಯಷ್ಟು ಕಾಶ್ಮೀರಿ ಹಿಂದೂಗಳಿಗೆ ತಮ್ಮ ಪೂರ್ವಜರ ಮೇಲಾದ ದೌರ್ಜನ್ಯದ ಜ್ಞಾಪಕವಾಗಿ ಉಳಿದಿದೆ.

kash2

ಕಾಶ್ಮೀರಿ ಹಿಂದೂಗಳ ಮೇಲಿನ ಈ ರೀತಿಯಾದ ದಬ್ಬಾಳಿಕೆ, ಚಿತ್ರಹಿಂಸೆ ಮತ್ತು ಹತ್ಯೆಗಳು ಹಾಗೆಯೇ ಶತಶತಮಾನಗಳವರೆಗೂ ಮುಂದುವರೆದು, ಒಂದು ಕಾಲದಲ್ಲಿ ಬಹುಸಂಖ್ಯಾತರಾಗಿದ್ದ ಹಿಂದೂಗಳು ಬಲವಂತವಾಗಿ ಇಸ್ಲಾಂಗೆ ಮತಾಂತರಗೊಂಡು ಕ್ರಮೇಣವಾಗಿ ಕಣಿವೆ ಪ್ರದೇಶಗಳಲ್ಲಿ ಹಿಂದೂಗಳೇ ಅಲ್ಪಸಂಖ್ಯಾತರಾಗಿ ಹೋದದ್ದು ವಿಷಾಧನೀಯ.

ಸ್ವಾತಂತ್ರ್ಯಾನಂತರ ಭಾರತದ ಭಾಗವಾಗಲು ರಾಜಾ ಹರಿಸಿಂಗ್ ಸಹಿಮಾಡಿದ ನಂತರ 1947 ರಿಂದ ಆಗಸ್ಟ್ 1953 ರವರೆಗೆ ಶೇಕ್ ಮೊಹಮ್ಮದ್. ಅಬ್ದುಲ್ಲಾ ಅವರು ರಾಜ್ಯದ ಪ್ರಧಾನ ಮಂತ್ರಿಗಳಾದಾಗ , ಅಳುದುಳಿದಿದ್ದ ಕಾಶ್ಮೀರಿ ಪಂಡಿತರು ಸ್ವಾತಂತ್ರ್ಯ ಭಾರತದಲ್ಲಿ ತಮ್ಮ ಬದುಕು ಹಸನಾಗಿರುತ್ತದೆ ತಾವು ಸುರಕ್ಷಿತವಾಗಿರಬಹುದೆಂದು ಭಾವಿಸಿದರು. ಆದರೆ ಅವರ ನಂಬಿಕೆಗಳೆಲ್ಲವೂ ಹುಸಿಯಾಗ ತೊಡಗಿತು. ವಿದ್ಯಾವಂತ ಕಾಶ್ಮೀರಿ ಪಂಡಿತ್ ಯುವಕರಿಗೆ ಅಲ್ಲಿನ ಶಿಕ್ಷಣ ಸಂಸ್ಥೆಗಳಲ್ಲಿ ಅಥವಾ ಸರ್ಕಾರೀ ಕಛೇರಿಗಳಲ್ಲಿ ಉದ್ಯೋಗದ ನೇಮಕಾತಿಯಲ್ಲಿ ತಾರತಮ್ಯ ನೀತಿಯನ್ನು ಅನುಸರಿಸಿದವು. ಸುಖಾ ಸುಮ್ಮನೆ ಇಲ್ಲ ಸಲ್ಲದ ಕಾರಣವನ್ನು ನೀಡಿ ಅವರಿಗೆ ಉದ್ಯೋಗವನ್ನು ನಿರಾಕರಿಸಿದಾಗ ತಮ್ಮ ಬದಕನ್ನು ಅರಸುತ್ತಾ ಸಾವಿರಾರು ಜನರು ತಮ್ಮ ತಾಯ್ನಾಡಿಗೆ ವಿದಾಯ ಹೇಳಿ ದೇಶದ ವಿವಿಧ ಭಾಗಗಳಿಗೆ ವಲಸೆ ಹೋದರು.

1986 ರ ಆರಂಭದಲ್ಲಿ, ಜಮ್ಮುವಿನಲ್ಲಿ ನಡೆದ ಒಂದು ಸಣ್ಣ ಘಟನೆಯು ಹಿಂದೂಗಳು ಮತ್ತು ಮುಸ್ಲಿಮರ ನಡುವಿನ ಘರ್ಷಣೆಗೆ ಕಾರಣವಾಯಿತು. ಇದನ್ನೇ ದುರ್ಬಳಕೆ ಮಾಡಿಕೊಂಡ ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯಲ್ಲಿ ಕೆಲವು ಸ್ಥಳೀಯ ರಾಜಕೀಯ ಮುಖಂಡರು ಮತ್ತು ಅಂದಿನ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಮುಫ್ತಿ ಮೊಹಮ್ಮದ್ ಸೇರಿದಂತೆ ಕೆಲವು ಪಾಕಿಸ್ತಾನಿ ಏಜೆಂಟರು ಕೇಂದ್ರ ಗೃಹ ಸಚಿವರ ಮಾರ್ಗದರ್ಶನದಲ್ಲಿ ಹಿಂದೂ ದೇವಾಲಯಗಳ ಮೇಲೆ ಮತ್ತು ಸಾವಿರರು ಕಾಶ್ಮೀರಿ ಪಂಡಿತರ ಮನೆಗಳ ಮೇಲೆ ಹಲವಾರು ಹಳ್ಳಿಗಳಲ್ಲಿ ದಾಳಿ ಮಾಡಿ ಧ್ವಂಸಗೊಳಿಸಲಾಯಿತು. ಸಾವಿರಾರು ಹಿಂದೂ ಮಹಿಳೆಯರ ಮೇಲೆ ಅತ್ಯಾಚಾರಗಳಾಗತೊಡಗಿದವು.

ಸೆಪ್ಟೆಂಬರ್ 1989 ರ ನಂತರದ ಘಟನೆಗಳು ಭಾರತದ ಜಾತ್ಯತೀತ ನಂಬಿಕೆಯ ಬುನಾದಿಯನ್ನೇ ಅಲುಗಾಡಿಸಿತು ಎಂದರೂ ತಪ್ಪಾಗಲಾರದು. ಸತತವಾಗಿ ಕಾಶ್ಮೀರಿ ಹಿಂದೂಗಳ ಮೇಲೆ ನಡೆದ ಜನಾಂಗೀಯ ಹತ್ಯಾಕಾಂಡದ ಪರಿಣಾಮವಾಗಿ ಲಕ್ಷಾಂತರ ಕಾಶ್ಮೀರೀ ಪಂಡಿತರು ತಮ್ಮ ಆತ್ಮರಕ್ಷಣೆಗಾಗಿ ಜನವರಿ 20,1990 ರಿಂದ ಕಣಿವೆಯಿಂದ ಸಾಮೂಹಿಕವಾಗಿ ನಿರ್ಗಮಸಿ ದೇಶದ ನಾನಾಕಡೆ ಹರಿದು ಹಂಚಿಹೋದರು. ಅದರಲ್ಲಿ ಕೆಲವರು ಇಂದಿಗೂ ಸಹಾ ದೇಶದ ರಾಜಧಾನಿ ದೆಹಲಿಯಲ್ಲಿ ಕಾಶ್ಮೀರೀ ನಿರಾಶ್ರಿತರ ತಾಣಗಳಲ್ಲಿ ಡೇರೆಗಳಲ್ಲಿ ವಾಸಿಸುವುದನ್ನು ಕಾಣಬಹುದಾಗಿದೆ.

ಹದಿನಾಲ್ಕನೆಯ ಶತಮಾನದ ಆದಿಯಲ್ಲಿಕಾಶ್ಮೀರದ ಕಣಿವೆಯಲ್ಲಿ ಇಸ್ಲಾಂನ ಆಗಮನದಿಂದ ಹಿಂದೂಗಳ ವಿರುದ್ಧ ಪ್ರಾರಂಭವಾದ ಕಿರುಕುಳ, ದಮನ ಮತ್ತು ಹತ್ಯೆಗಳ ಪ್ರಕ್ರಿಯೆಯು ಕತ್ತಿಯ ಸಹಾಯದಿಂದ ಪರಾಕಾಷ್ಠೆಯನ್ನು ತಲುಪಿ, ಈಗ ಖಡ್ಗದ ಬದಲು ಕಲಾಶ್ನಿಕೋವ್ಸ್, ಎಕೆ -47, ಗ್ರೆನೇಡ್, ಲೈಟ್ ಮೆಷಿನ್ ಗನ್, ರಾಕೆಟ್ ಲಾಂಚರ್ ಮತ್ತು ಮುಂತಾದವುಗಳೊಂದಿಗೆ ಬದಲಾಗಿಹೋಗಿದೆ ಹೆಸರಿಗಷ್ಟೇ ಕಾಶ್ಮೀರವು ಭಾರತದ ಪ್ರಜಾಪ್ರಭುತ್ವದ ಅಂಗವಾಗಿದ್ದರೂ ಅಲ್ಲಿ ಭಾರತೀಯ ವಿರೋಧಿ ‍ಚಟುವಟಿಕೆಗಳ ತಾಣವಾಗಿ ಪ್ರತ್ಯೇಕ ವ್ಯವಸ್ಥೆಯೇ ಜಾರಿಯಲ್ಲಿದ್ದು ಕಾಶ್ಮೀರಿ ಹಿಂದೂಗಳು ತಮ್ಮ ದೇಶದಲ್ಲಿ ನಿರಾಶ್ರಿತರಾಗಿದ್ದಾರೆ.

2019 ರಲ್ಲಿ ಕೇಂದ್ರ ಸರ್ಕಾರ ಕಾಶ್ಮೀರಿ ಹಿಂದೂಗಳ ಮೇಲೆ ಆಗುತ್ತಿದ್ದ ಅನಾಚಾರಗಳಿಗೆ ಕಡಿವಾಣ ಹಾಕುವ ಸಲುವಾಗಿ ದಿಟ್ಟ ತನದಿಂದ ಕಾಶ್ಮೀರಿಗಳಿಗೆ ನೀಡಿದ್ದ ವಿಶೇಷ ಸವಲತ್ತುಗಳಾದ Ariticle 370 & 35A ತೆಗೆದು ಹಾಕುವ ಮೂಲಕ ಒಂದು ದೇಶ ಒಂದೇ ಕಾನೂನು ಎಂಬ ನೀತಿಯನ್ನು ಕಠಿಣವಾಗಿ ಜಾರಿಗೆ ತರುವುದರ ಮೂಲಕ ಕಾಶ್ಮೀರೀ ಕಣಿವೆಯಲ್ಲಿ ನಮ್ಮ ಸೈನಿಕರ ಮೇಲೆ ಪ್ರತಿ ನಿತ್ಯವೂ ನಡೆಯುತ್ತಿದ್ದ ಕಲ್ಲಿನ ಮಳೆಗೆ ಮತ್ತು ಭಯೋತ್ಪಾದನಾ ಧಾಳಿಯನ್ನು ಹತ್ತಿಕ್ಕುವ ಮೂಲಕ ಕಾಶ್ಮೀರೀ ಕಣಿವೆಯಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ಮೂಲಕ ಅಲ್ಲಿ ನಡೆಯುತ್ತಿದ್ದ ಅರಾಜಕತೆಗೆ ಕೊನೆ ಹಾಡುವ ಪ್ರಯತ್ನದಲ್ಲಿದೆ. ಕೇಂದ್ರ ಸರ್ಕಾರದ ಈ ಎಲ್ಲಾ ಪ್ರಯತ್ನಗಳು ಸಫಲವಾಗಿ ಮತ್ತೆ ನಿರಾಶ್ರಿತರಾಗಿರುವ ಲಕ್ಷಾಂತರ ಕಾಶ್ಮೀರೀ ಹಿಂದೂಗಳು ತಮ್ಮ ತಾಯ್ನಾಡಿಗೆ ಮತ್ತೆ ಆತೀ ಶೀಘ್ರದಲ್ಲಿಯೇ ಸೇರುವಂತಾಗಲೀ ಎಂದು ಆಶೀಸೋಣ.

ಏನಂತೀರೀ?

ನಿಮ್ಮವನೇ ಉಮಾಸುತ

One thought on “ಬಟ್ಟಾ ಮಜಾರ್

  1. ನಡೆದು ಹೋದ ಇತಿಹಾಸ ಓದುತ್ತಿರುವಾಗ ಮನಸ್ಸಿಗೆ ತುಂಬಾ ನೋವಾಗುತ್ತೆ. ಮುಂದಾದರು ಅವರೆಲ್ಲರೂ ಅವರ ತಾಯ್ನಾಡಿಗೆ ಹೋಗುವಂತಾಗಲಿ.

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s