ಐಎಎಸ್ ಅಧಿಕಾರಿ ಆರತಿ ಡೋಗ್ರಾ 

ಮನುಷ್ಯರಿಗೆ ಎಲ್ಲವೂ ಸರಿ ಇದ್ದಾಗಲೇ ಅಡಿ ಕೊಳ್ಳುವವರಿಗೇನೂ ಬರ ಇಲ್ಲ. ಅಂತಹದ್ದರಲ್ಲಿ ದೈಹಿಕವಾಗಿ ನ್ಯೂನತೆ ಇದ್ದರಂತೂ ಹೇಳತೀರದು. ಅಂತಹದ್ದರಲ್ಲಿ ಕೇವಲ 3 ಅಡಿ 2 ಇಂಚು ಎತ್ತರದ ತರುಣಿ, ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವಂತೆ 2006ರ ಬ್ಯಾಚ್’ನ IAS ಪರಿಕ್ಷೆಯಲ್ಲಿ ಉತ್ತಿರ್ಣರಾಗಿ ರಾಜಾಸ್ಥಾನದ ಅಜ್ಮೀರ್ ಜಿಲ್ಲಾಧಿಕಾರಿಯಾಗಿ ಬಹಳಷ್ಟು ದಿಟ್ಟತನದಿಂದ ಕರ್ತವ್ಯ ನಿಭಾಯಿಸಿದ ಅಧಿಕಾರಿಯಾದ ಆರತಿ ಡೋಗ್ರಾ ಅವರ ಸಾಧನೆಯ ಬಗ್ಗೆ ತಿಳಿಯೋಣ.

ಡೆಹ್ರಾಡೂನ್‌ನ ವಿಜಯ್ ಕಾಲೋನಿಯಲ್ಲಿ ವಾಸಿಸುತ್ತಿದ್ದ ಕರ್ನಲ್ ರಾಜೇಂದ್ರ ದೋಗ್ರಾ ಮತ್ತು ಖಾಸಗಿ ಶಾಲೆಯಲ್ಲಿ ಮುಖ್ಯೋಪಾಧ್ಯಾನಿಯಾಗಿರುವ ಕುಂಕುಮ್ ಎಂಬ ದಂಪತಿಗಳಿಗೆ ಜುಲೈ 1979ರಲ್ಲಿ ಹೆಣ್ಣು ಮಗಳ ಜನನವಾಗುತ್ತದೆ. ಮನೆಗೆ ಬಂದ ಮಹಾಲಕ್ಷ್ಮಿಯನ್ನು ಬಹಳ ಸಂತೋಷದಿಂದ ಸ್ವಾಗತಿಸಿದ ಆ ದಂಪತಿಗಳು ಆಕೆಗೆ ಅರತಿ ಡೋಗ್ರಾ ಎಂದು ನಾಮಕರಣ ಮಾಡುತ್ತಾರೆ. ಆದರೆ ಹುಟ್ಟುವಾಗ ಮಗುವಿನ ಆರೋಗ್ಯ ಎಲ್ಲಾ ಮಕ್ಕಳಂತೆಯೇ ಸಹಜವಾಗಿದ್ದರೂ ದಿನಕಳೆದಂತೆ ಆಕೆ ಕುಬ್ಜೆ ಎನ್ನವ ವಿಚಾರ ಅವರ ಗಮನಕ್ಕೆ ಬರುತ್ತದೆ. ಅವರ ಸಂಬಂಧೀಕರು ಮತ್ತು ನೆರೆಹೊರೆಯವರು ಆರತಿಯ ಭೌತಿಕ ರಚನೆಯ ಬಗ್ಗೆ ಆಕ್ಷೇಪಗಳನ್ನು ಎತ್ತಲಾರಂಭಿಸಿದರೂ ಆಕೆಯ ಪೋಷಕರು ಧೃತಿಗೆಡಲಿಲ್ಲ. ಈಗೆಯನ್ನು ನೋಡಿಕೊಳ್ಳುವ ಸಲುವಾಗಿಯೇ ಆವರು ಇನ್ನೊಂದು ಮಕ್ಕಳನ್ನು ಬಯಸದೇ ತಮ್ಮೆಲ್ಲಾ ಗಮನವನ್ನು ಅರತಿಯ ಆರೈಕೆಗೇ ಮೀಸಲಾಗಿಡುತ್ತಾರೆ ಮತ್ತು ತಮ್ಮ ಮಗಳನ್ನು ಇತರ ಎಲ್ಲಾ ಮಕ್ಕಳೊಂದಿಗೆ ಸಾಮಾನ್ಯ ಶಾಲೆಗೆ ಸೇರಿಸುತ್ತಾರೆ.

arthi2ಓದಿನಲ್ಲಿ ಚುರುಕಾಗಿದ್ದ ಆರತಿ ಉತ್ತಮ ಅಂಕಗಳೊಡನೆ ತನ್ನ ಪದವಿ ಪೂರ್ಣ ಶಿಕ್ಷಣವನ್ನು ಮುಗಿಸಿ ಪದವಿಗಾಗಿ ದೆಹಲಿ ವಿಶ್ವವಿದ್ಯಾಲಯದ ಪ್ರತಿಷ್ಠಿತ ಲೇಡಿ ಶ್ರೀ ರಾಮ್ ಕಾಲೇಜನ್ನು ಸೇರಿ ಅಲ್ಲಿ ಅರ್ಥಶಾಸ್ತ್ರದಲ್ಲಿ ಪದವಿ ಪಡೆಯುತ್ತಾಳೆ ನಂತರ ತನ್ನ ಸ್ನಾತಕೋತ್ತರ ಪದವಿಗಾಗಿ ಡೆಹ್ರಾ ಡನ್‌ಗೆ ಹೋಗುತ್ತಾರೆ. ಇದೇ ಸಂದರ್ಭದಲ್ಲಿ ಆಕೆ ಐಎಎಸ್ ಅಧಿಕಾರಿಯಾಗಿದ್ದ ಮನೀಶಾ ಪನ್ವಾರ್ ಅವರನ್ನು ಭೇಟಿಯಾಗುವ ಮೂಲಕ ಅವರ ಬದುಕಿನಲ್ಲಿ ಮಹತ್ತರ ತಿರುವನ್ನು ಪಡೆಯುತ್ತದೆ. ಆಕೆ ಅರತಿಗೆ ಮನಸ್ಥೈರ್ಯವನ್ನು ತುಂಬಿ ಆಕೆ ಐಎಎಸ್ ಪರೀಕ್ಷೆಯನ್ನು ತೆಗೆದುಕೊಳ್ಳಲು ಪ್ರೇರೇಪಿಸುತ್ತಾರೆ. ಆರಂಭದಲ್ಲಿ ಆರತಿ ಅಳುಕಿದರೂ ನಂತರ ಆತ್ಮವಿಶ್ವಾಸದಿಂದ ಮತ್ತು ದಿಟ್ಟತನದಿಂದ ಐಎಎಸ್ ಪರೀಕ್ಷೆಯನ್ನು ಎದುರಿಸಿದ್ದಲ್ಲದೇ, 2006ರ ಬ್ಯಾಚ್ ನಲ್ಲಿ ತನ್ನ ಮೊದಲ ಪ್ರಯತ್ನದಲ್ಲಿಯೇ ದೇಶದ ಅತಿದೊಡ್ಡ ಪರೀಕ್ಷೆಯಾದ IAS ಪರಿಕ್ಷೆಯಲ್ಲಿ ಉತ್ತಿರ್ಣವಾಗುವ ಮೂಲಕ ಮಹತ್ತರ ಸಾಧನೆಯನ್ನು ಸಾಧಿಸಿದ್ದಲ್ಲದೇ, ರಾಜಾಸ್ಥಾನದ ಅಜ್ಮೇರ್ ಕಲೆಕ್ಟರ್ ಆಗಿ ನೇಮವಾಗುತ್ತಾರೆ.

ಆಕೆ ಕುಬ್ಜೆ ಎಂದು ತಿಳಿದಾಗ ಬಹುತೇಕರು ಇಂತಹ ಹೆಣ್ಣು ಮಕ್ಕಳು ಮುಂದೆ ಹೊರೆಯಾಗುತ್ತಾರೆ. ಹಾಗಾಗಿ ಆಕೆಯನ್ನು ಉಳಿಸಿಕೊಳ್ಳುವುದಕ್ಕಿಂತಲೂ ಕೊಲ್ಲುವುದೇ ಲೇಸು ಎಂಬ ಸಲಹೆಯನ್ನು ನೀಡಿದ್ದವರೇ ಹೆಚ್ಚು. ಮುಂದೆ ಆಕೆ ಬೆಳೆದು ದೊಡ್ಡವಳಾದಾಗ ಆಕೆಯ ಕುಬ್ಜತೆಯನ್ನು ನೋಡಿ ನಗುತ್ತಾ, ಅಪಹಾಸ್ಯ ಮಾಡಿದವರೆಲ್ಲರೂ ಮೂಗಿನ ಮೇಲೆ ಬೆರಳಿರುವಂತಹ ಸಾಧನೆಯನ್ನು ಮಾಡಿ ತನ್ನ ಮೇಲೆ ನಂಬಿಕೆ ಇಟ್ಟು ಪ್ರೀತಿಯಿಂದ ಸಾಕಿ ಸಲಹಿದ ಪೋಷಕರು ತನ್ನ ಮೇಲೆ ಇಟ್ಟಿದ್ದ ನಂಬಿಕೆಯನ್ನು ಎತ್ತಿ ಮೆರೆದ ದಿಟ್ಟ ತನದ ಹೆಣ್ಣು ಮಗಳು ಆರತಿ ಡೋಗ್ರ ಎಂದರೂ ತಪ್ಪಾಗಲಾರದು.

ಅಧಿಕಾರವನ್ನು ವಹಿಸಿಕೊಂಡಾಗಲಿಂದಲೂ ಆಕೆಗೆ ತನ್ನ ಕುಬ್ಜತೆ ಎಂದೂ ಅಡ್ಡಿಯಾಗಲೇ ಇಲ್ಲ. ರಾಜಸ್ಥಾನದ ಅಜ್ಮೀರ್‌ನ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿ ನೇಮಕ ಆದಾಗಲಿಂದಲು ಅನೇಕ ಉತ್ತಮ ಕಾರ್ಯಗಳನ್ನು ಜಾರಿಗೆ ತರುವ ಮೂಲಕ ಜನಮಾನಸದಲ್ಲಿ ಮನ್ನಣೆ ಗಳಿಸುವ ಮೂಲಕ ಅನೇಕ ಮಹಿಳೆಯರಿಗೆ ಸ್ಪೂರ್ತಿಯಗಿದ್ದಾರೆ ಎಂದರೂ ತಪ್ಪಾಗಲಾರದು.

arthi3ಹೇಳಿ ಕೇಳಿ ರಾಜಾಸ್ಥಾನ ಮರುಭೂಮಿಯ ಪ್ರದೇಶ ಅತ್ಯಂತ ಹಿಂದುಳಿದವರೇ ಹೆಚ್ಚಾಗಿ ವಾಸಿರುವ ಪ್ರದೇಶವದು ಅಲ್ಲಿಯ ಹೆಣ್ಣುಮಕ್ಕಳು ಬಹಿರ್ದಶಗೆ ಮನೆಯಿಂದ ದೂರ ದೂರದಲ್ಲಿರುವ ಬಯಲಿನಲ್ಲಿಯೇ ಬೆಳಕು ಹರಿಯುವ ಮುನ್ನವೇ ಇಲ್ಲಾ ಸಂಜೆ ಕತ್ತಲಾದ ನಂತರವೇ ಹೋಗಬೇಕಾದಂತಹ ಪರಿಸ್ಥಿತಿ ಇತ್ತು. ಇದನ್ನು ಸೂಕ್ಷ್ಮವಾಗಿ ಗಮನಿಸಿಸಿದ ಬಿಕಾನೆರ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿದ್ದ ಆರತಿ ಡೋಗ್ರಾ, ಬಾಕಾ ಬಿಕೋ ಎಂಬ ಅಭಿಯಾನವನ್ನು ಪ್ರಾರಂಭಿಸಿದರು. ಈ ಮೂಲಕ ಗ್ರಾಮ-ಗ್ರಾಗಳಲ್ಲಿಯೂ ಕಾಂಕ್ರೀಟ್ ಶೌಚಾಲಯಗಳನ್ನು ನಿರ್ಮಿಸಲಾಯಿತು ಮತ್ತು ಪ್ರತಿಯೊಬ್ಬರ ಮನೆಗಳಲ್ಲಿಯೂ ತಮ್ಮದೇ ಆದ ಶೌಚಾಲಯವನ್ನು ಕಟ್ಟಿಸಿಕೊಳ್ಳಲು ಜನರಿಗೆ ಸರ್ಕಾರದ ಕಡೆಯಿಂದ ಸಹಕಾರ ನೀಡಲಾಯಿತು. ಆರತಿ ಯವರೇ ಖುದ್ದಾಗಿ ಆ ಎಲ್ಲಾ ಗ್ರಾಮಗಳಿಗೂ ಹೋಗಿ ಅಲ್ಲಿಯ ಜನರಿಗೆ ಬಯಲಿನಲ್ಲಿ ಮಲವಿಸರ್ಜನೆ ಮಾಡದಿರಲು ಕೋರಿದ್ದಲ್ಲದೇ, ಆರಂಭದ ಕೆಲವು ದಿನಗಳು ಮುಂಜಾನೆಯೇ ತಮ್ಮ ಅಧಿಕಾರಿಗಳೊಂದಿಗೆ ಗ್ರಾಮಕ್ಕೆ ತೆರಳಿ ಜನರು ತೆರೆದ ಮಲವಿಸರ್ಜನೆ ಮಾಡುವುದನ್ನು ತಡೆದರು.

ಈ ಪ್ರಕ್ರಿಯೆ 195 ಗ್ರಾಮ ಪಂಚಾಯಿತಿಗಳಿಗೆ ವಿಸ್ತರಿಸುವ ಮೂಲಕ ಬಾಕಾ ಬಿಕೊ ಆಭಿಯಾನ ಯಶಸ್ವಿಯಾದ ನಂತರ, ಇತರೇ ಜಿಲ್ಲೆಗಳು ಸಹ ಈ ಮಾದರಿಯನ್ನು ಅಳವಡಿಸಿಕೊಂಡಿದ್ದಲ್ಲದೇ, ಈ ಸಾಧನೆಗಾಗಿ ಆರತಿ ಡೋಗ್ರಾ ಅವರಿಗೆ ರಾಷ್ಟ್ರೀಯ ಮತ್ತು ರಾಜ್ಯಮಟ್ಟದ ಅನೇಕ ಪ್ರಶಸ್ತಿಗಳು ಹುಡುಕಿ ಕೊಂಡು ಬಂದವು. ಅವರು ಬಿಕಾನೆರ್‌ನಲ್ಲಿ ಮಿಷನ್ ಎಗೇನ್ಸ್ಟ್ ರಕ್ತಹೀನತೆ (ಎಂಎಎ) ಪ್ರಾರಂಭಿಸಿದರು. ಬಿಕಾನೆರ್‌ನ ಡಿಎಂ ಆಗಿದ್ದಾಗ, ಆರತಿ ಡೋಗ್ರಾ ಅನೇಕ ಅನಾಥ ಹುಡುಗಿಯರಿಗೆ ಸಹಾಯ ಮಾಡಿದ್ದಲ್ಲದೇ ಇಂದಿಗೂ ಸಹಾ ಅವರ ಜೊತೆ ಸಂಪರ್ಕದಲ್ಲಿದ್ದಾರೆ.

ಅಜ್ಮೇರಿನ ನಂತರ ಜೋಧಪುರ್ ಡಿಸ್ಕಾಂನ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕಗೊಂಡ ಮೊದಲ ಮಹಿಳಾ ಐಎಎಸ್ ಅಧಿಕಾರಿ ಆರತಿ. ಜೋಧ್‌ಪುರ ಡಿಸ್ಕಾಂನಲ್ಲಿನ ವಿದ್ಯುತ್ ತ್ಯಾಜ್ಯ, ವಿದ್ಯುತ್ ತ್ಯಾಜ್ಯವನ್ನು ನಿಯಂತ್ರಿಸುವ ಜವಾಬ್ದಾರಿಯನ್ನು ಅತ್ಯಂತ ಯಶಸ್ವಿಯಗಿ ನಿಭಾಯಿಸಿದ್ದಲ್ಲದೇ, ಎನರ್ಜಿ ಸೇಫ್ಟಿ ಸರ್ವಿಸ್ ಮೂಲಕ 3 ಲಕ್ಷ 27 ಸಾವಿರಕ್ಕೂ ಅಧಿಕ ಎಲ್ಇಡಿ ಬಲ್ಬ್ ವಿತರಿಸುವ ಮೂಲಕ ವಿದ್ಯುತ್ ಬಳಕೆಯನ್ನು ನಿಯಂತ್ರಿಸಲ್ಪಟ್ಟಿತು. ಅದಲ್ಲದೇ ದೂರ ದೂರದ ವಿದ್ಯುತ್ ಇಲ್ಲದಿದ್ದ ಪ್ರದೇಶಗಳ್ಲಿಯೂ ವಿದ್ಯುದೀಕರಣ ಮಾಡುವುದರಲ್ಲಿ ಸಫಲರಾದರು.

ಇತ್ತೀಚೆಗೆ 81 ಐಎಎಸ್ ಅಧಿಕಾರಿಗಳನ್ನು ರಾಜಸ್ಥಾನದಲ್ಲಿ ವರ್ಗಾಯಿಸಲಾಯಿತು. ಆ ವರ್ಗವಣೆಯಲ್ಲಿ ಅತ್ಯಂತ ಹೆಚ್ಚಾಗಿ ಚರ್ಚೆಗೆ ಬಂದ ಹೆಸರೇ ಮಹಿಳಾ ಐಎಎಸ್ ಅಧಿಕಾರಿ ಆರತಿ ಡೋಗ್ರಾ ಅವರದ್ದಾಗಿತ್ತು. ಅವರ ಜನಪ್ರಿಯತೆ ಮತ್ತು ವಿಭಿನ್ನ ಶೈಲಿಯ ಕೆಲಸ ಕಾರ್ಯಗಳಿಂದ ಎಲ್ಲರಿಗೂ ಆಕೆಯನ್ನು ತಮ್ಮ ಜಿಲ್ಲೆಗೆ ವರ್ಗಾವಣೆ ಮಾಡಿಸಿಕೊಳ್ಳಬೇಕೆಂದು ಆಶಿಸುತ್ತಿದ್ದರೆಂದರೆ ಆಕೆಯ ಕರ್ತವ್ಯ ನಿಷ್ಟೆ ಹೇಗಿತ್ತೆಂಬುದು ತಿಳಿದು ಬರುತ್ತದೆ. ಇದುವರೆವಿಗೂ ಆಕೆ ಕೆಲಸ ಮಾಡಿರುವ ಎಲ್ಲಾ ಇಲಾಖೆಯವರೂ ಆಕೆಯ ಕೆಲಸದ ಬಗ್ಗೆ ಎಷ್ಟು ಪ್ರಭಾವಿತರಾದರುಂದರೆ ಅವರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಮೆಚ್ಚುಗೆಯ ಭಾವನೆಗಳನ್ನು ಹಂಚಿಕೊಳ್ಳುವ ಮೂಲಕ ರಾಜಾಸ್ಥಾನದಾದ್ಯಂತ ಆರತಿ ಡೋಗ್ರಾ ಪ್ರಸಿದ್ಧಿಯಾಗುವಂತೆ ಮಾಡಿದ್ದಾರೆ

ಆರತಿ ಡೋಗ್ರಾರವರ ಆಡಳಿತಾತ್ಮಕ ನಿರ್ಧಾರಗಳೊಂದಿಗೆ, ರಾಜಸ್ಥಾನ ಮಾತ್ರವಲ್ಲ, ದೇಶಾದ್ಯಂತದ ಮಹಿಳೆಯರಿಗೆ ಪ್ರೇರಣೆಯಾಗಿರುವುದಲದೇ, ರಾಜಸ್ಥಾನದ ಬಿಕಾನೆರ್, ಜೋಧ್‌ಪುರ ಮತ್ತು ಬುಂಡಿ ಜಿಲ್ಲೆಗಳಲ್ಲಿ ಸಂಗ್ರಾಹಕರಾಗಿದ್ದಾಗ, ಆರತಿ ದೊಡ್ಡ ನಿರ್ಧಾರಗಳನ್ನು ಮತ್ತು ಸಮಾಜದ ಹಿತದೃಷ್ಟಿಯಿಂದ ಆಕೆ ಮಾಡಿದ ಸಾಧನೆಗಳಿಂದ, ಸಮಾಜದಲ್ಲಾದ ಬದಲಾವಣೆಯ ಪರ್ವ ಪ್ರಧಾನಿ ನರೇಂದ್ರ ಮೋದಿಯವರ ವರೆಗೂ ತಲುಪಿ ಅವರೂ ಸಹಾ ಆಕೆಯ ಕಾರ್ಯಗಳನ್ನು ಮನಃಪೂರ್ವಕವಾಗಿ ಶ್ಲಾಘಿಸಿದ್ದಾರೆ.

WhatsApp Image 2020-07-26 at 11.33.43 PMಕಿರಣ್ ಬೇಡಿ ಮೊತ್ತ ಮೊದಲ ಮಹಿಳಾ ಐಪಿಎಸ್ ಅಧಿಕಾರಿಯಾಗಿ ತನ್ನ ಕಾರ್ಯಗಳಿಂದ ದೇಶಾದ್ಯಂತ ಅನೇಕ ಮಹಿಳೆಯರಿಗೆ ಪ್ರೇರಣಾದಾಯಕರಾದರೆ, ಆರತೀ ಡೋಗ್ರಾ ತಮ್ಮೆಲ್ಲಾ ನೂನ್ಯತೆಗಳನ್ನೂ ಬದಿಗಿಟ್ಟು ಮಹಿಳೆಯರಿಗೆ ಮತ್ತು ಅಂಗವಿಕಲರಿಗೆ ಮಾದರಿಯಾಗಿದ್ದಾರೆ. ಜಗತ್ತು ಏನೇ ಹೇಳಲೀ, ಅಥವಾ ಇಡೀ ಸಮಾಜವೇ ತನ್ನ ವಿರುದ್ಧವಿದ್ದರೂ, ಪೋಷಕರ ಪ್ರೋತಾಹ ಮತ್ತು ತಮ್ಮ ಸ್ವಸಾಮರ್ಥ್ಯದಿಂದ ಎಂತಹ ಬದಲಾವಣೆಯನ್ನಾದರೂ ತರಬಹುದು ಎಂಬುದಕ್ಕೆ ಆರತಿ ಡೋಗ್ರಾ ಅವರು ಜ್ಚಲಂತ ಉದಾಹರಣೆಯಾಗಿದ್ದಾರೆ ಎಂದರೆ ಅತಿಶಯೋಕ್ತಿ ಏನಲ್ಲ.

 

ಏನಂತೀರೀ?

Author: ಶ್ರೀಕಂಠ ಬಾಳಗಂಚಿ

ಶ್ರೀಕಂಠ ಬಾಳಗಂಚಿ ಎಂಬ ನಾಮದೇಯನಾದ ನಾನು, ಮೂಲತಃ ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣ ತಾಲ್ಲೂಕ್ಕಿನ ಬಾಳಗಂಚಿ ಗ್ರಾಮದ ಖ್ಯಾತ ವಾಗ್ಗೇಯಕಾರರೂ, ಗಮಕಿಗಳು ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ಗಮಕಿ ದಿ. ಶ್ರೀ ನಂಜುಂಡಯ್ಯನವರ ಮೊಮ್ಮಗ ಮತ್ತು ಗಮಕಿ ದಿ. ಶ್ರೀ ಶಿವಮೂರ್ತಿಗಳ ಸುಪುತ್ರ. ಪ್ರಸ್ತುತ ಬೆಂಗಳೂರಿನ ವಿಶ್ವವಿಖ್ಯಾತ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರೂ ಹವ್ಯಾಸಿ ಬರಹಗಾರ. ಕ್ರೀಡೆ, ಸಾಮಾಜಿಕ ಮತ್ತು ಪ್ರಸ್ತುತ ವಿಷಯಗಳ ಬಗ್ಗೆ ಸಮಯ ಸಿಕ್ಕಾಗಲೆಲ್ಲಾ ಲೇಖನ ಬರೆದು ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಕಟಿಸಿದ್ದೇನೆ. ಕನ್ನಡ ನಾಡು, ಭಾಷೆ, ನುಡಿಗಳ ಬಗ್ಗೆ ಅಪಾರವಾದ ಗೌರವ ಮತ್ತು ಪ್ರೇಮ ಇರುವವ. ಜಿ.ಪಿ.ರಾಜರತ್ನಂರವರ ನರಕಕ್ಕಿಳ್ಸಿ ನಾಲ್ಗೆ ಸೀಳ್ಸಿ ಬಾಯ್ ಒಲ್ಸಾಕಿದ್ರೂನೂ ಮೂಗ್ನಲ್ ಕನ್ನಡ್ ಪದ್ವಾಡ್ತೀನಿ ಅಂತಾ ಹೇಳಿರುವುದನ್ನು ಅಕ್ಷರಶಃ ಪಾಲಿಸುತ್ತಿರುವವನು.

2 thoughts on “ಐಎಎಸ್ ಅಧಿಕಾರಿ ಆರತಿ ಡೋಗ್ರಾ ”

  1. Carry on u are are doing good job.and good person’s Achievement’s which are not at all know anybody.my wishes always with you.

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s