ಅಕ್ಕಿ ಕಡಲೇಬೇಳೆ ಪಾಯಸ

ಸಾಂಪ್ರದಾಯಕ  ಸಿಹಿ ಖಾದ್ಯವಾದ ಅಕ್ಕಿ ಕಡಲೇಬೇಳೆ ಪಾಯಸವನ್ನು ನಮ್ಮ ಮನೆಗಳಲ್ಲಿಯೇ ತಯಾರಿಸುವ ವಿಧಾನವನ್ನು ನಮ್ಮ ಅನ್ನಪೂರ್ಣ ಮಾಲಿಕೆಯ ಮೂಲಕ ತಿಳಿದು ಕೊಳ್ಳೋಣ.

ಸುಮಾರು 4-6 ಜನರಿಗೆ ಸಾಕಾಗುವಷ್ಟು ಅಕ್ಕಿ ಕಡಲೇಬೇಳೆ ಪಾಯಸ ತಯಾರಿಸಲು ಬೇಕಾಗುವ ಸಾಮಗ್ರಿಗಳು

  • ಕಡಲೇ ಬೇಳೆ – 1 ಬಟ್ಟಲು
  • ಅಕ್ಕಿ -– 1 ಬಟ್ಟಲು
  • ಪುಡಿ ಮಾಡಿದ ಉಂಡೇ ಬೆಲ್ಲ – 1 ಬಟ್ಟಲು
  • ತುರಿದ ಕೊಬ್ಬರಿ – 1 ಬಟ್ಟಲು
  • ಬಾದಾಮಿ – 2-3
  • ಗೊಡಂಬಿ – 8-10
  • ದ್ರಾಕ್ಷಿ – 8-10
  • ಏಲಕ್ಕಿ – 2-3
  • ಲವಂಗ – 2-3
  • ತುಪ್ಪ – 3-4 ಚಮಚ

 

ಅಕ್ಕಿ ಕಡಲೇಬೇಳೆ ಪಾಯಸ ತಯಾರಿಸುವ ವಿಧಾನ

  • ಅಕ್ಕಿ ಕಡಲೇಬೇಳೆ ಪಾಯಸ ತಯಾರಿಸುವ ಸುಮಾರು ಮೂರ್ನಾಲ್ಕು ಮೊದಲು ಗಂಟೆಗಳ ಮೊದಲೇ ಕಡಲೇ ಬೇಳೆಯನ್ನು ಚೆನ್ನಾಗಿ ನೆನೆಸಿಟ್ಟು ಕೊಳ್ಳಬೇಕು
  • ನೆನೆಸಿಟ್ಟು ಕೊಂಡ ಕಡಲೇ ಬೇಳೆಯನ್ನು ಚೆನ್ನಾಗಿ ತೊಳೆದ ಅಕ್ಕಿಯೊಂದಿಗೆ ಬೆರೆಸಿ ಕುಕ್ಕರಿನಲ್ಲಿ ಸುಮಾರು ನಾಲ್ಕೈದು ವಿಶಲ್ ಬರುವ ವರೆಗೂ ಬೇಯಿಸಿಕೊಂಡು ಆರಲು ಬಿಡಬೇಕು
  • ಪಾತ್ರೆಯೊಂದರಲ್ಲಿ ಬೆಲ್ಲದ ಪುಡಿಯನ್ನು ಹಾಕಿಕೊಂಡು ಅದು ಮುಳುಗುವಷ್ಟು ನೀರನ್ನು ಬೆರೆಸಿ ಬೆಲ್ಲದ ಪಾಕವನ್ನು ತಯಾರಿಸಿಕೊಂಡು ಅದನ್ನು ಶೋಧಿಸಿ ಆರಲು ಬಿಡಬೇಕು.
  • ಗೊಡಂಬಿ, ದ್ರಾಕ್ಷಿ, ಏಲಕ್ಕಿ ಮತ್ತು ಕೊಬ್ಬರಿಯನ್ನು ಮಿಕ್ಸಿಯಲ್ಲಿ ತರಿ ತರಿಯಾಗುವಂತೆ ಪುಡಿ ಮಾಡಿಕೊಳ್ಳಬೇಕು.
  • ಒಂದು ದಪ್ಪ ತಳದ ಬಾಣಲೆಯನ್ನು ತೆಗೆದುಕೊಂಡು ಅದಕ್ಕೆ ತುಪ್ಪವನ್ನು ಹಾಕಿ, ತುಪ್ಪ ಕಾದ ನಂತರ ಲವಂಗ ಮತ್ತು ದ್ರಾಕ್ಷಿಯನ್ನು ಹಾಕಿ ಚೆನ್ನಾಗಿ ಹುರಿದಿಕೊಳ್ಳಬೇಕು.
  • ಈಗ ಅದಕ್ಕೆ ಬೆಲ್ಲದ ಪಾಕ ಸೇರಿಸಿ ಅದು ಒಂದು ಕುದಿ ಬಂದ ನಂತರ ಅದಕ್ಕೆ ಬೇಯಿಸಿಟ್ಟು ಕೊಂಡಿದ್ದ ಬೇಳೆ ಮತ್ತು ಅನ್ನವನ್ನು ಸೇರಿಸಿ ಚೆನ್ನಾಗಿ ಕುದಿಯಲು ಬಿಡಬೇಕು
  • ಈಗ ಅದಕ್ಕೆ ಪುಡಿಮಾಡಿಟ್ಟು ಕೊಂಡಿದ್ದ ಗೊಡಂಬಿ, ದ್ರಾಕ್ಷಿ, ಏಲಕ್ಕಿ ಮತ್ತು ಕೊಬ್ಬರಿ ಪುಡಿಯನ್ನು ಸೇರಿಸಿ ಸ್ವಲ್ಪ ತುಪ್ಪವನ್ನು ಬೆರೆಸಿ ಮೂರ್ನಾಲ್ಕು ನಿಮಿಷಗಳಷ್ಟು ಕುದಿಸಿ ತಣ್ಣಗಾಗಲು ಬಿಟ್ಟಲ್ಲಿ ರುಚಿ ರುಚಿಯಾದ ಅಕ್ಕಿ ಕಡಲೇಬೇಳೆ ಪಾಯಸ ಸಿದ್ದ.
  • ಪಾಯಸ ಸ್ವಲ್ಪ ನೀರಾಗಿರಬೇಕೆಂದರೆ, ಸ್ವಲ್ಪ  ಹಾಲನ್ನೂ ಬೆರಸ ಬಹುದಾಗಿದೆ.

ಬಿಸಿ ಬಿಸಿಯಾದ, ಸಿಹಿಯಾದ ಅಕ್ಕಿ ಕಡಲೇಬೇಳೆ ಪಾಯಸ ಮಾಡುವುದನ್ನು ಈ ವೀಡೀಯೋ ಮೂಲಕವೂ ನೋಡಿ ತಿಳಿಯ ಬಹುದಾಗಿದೆ.

ಇನ್ನೇಕೆ ತಡಾ ನೋಡ್ಕೋಳ್ಳಿ, ಓದ್ಕೋಳ್ಳಿ, ಮಾಡ್ಕೋಳ್ಳಿ , ತಿನ್ಕೊಳ್ಳಿ

ಏನಂತೀರೀ?

ಮನದಾಳದ ಮಾತು : ಸಾಮಾನ್ಯವಾಗಿ ಮನೆಗಳಲ್ಲಿ ದಿಢೀರ್ ಎಂದು ಅಥವಾ ಯಾವುದೇ ಸಮಾರಂಭ ಅಥವಾ  ದೇವಸ್ಥಾನಗಳಲ್ಲಿ ಹೆಚ್ಚಿನ ಜನರಿಗೆ ಒದಗಿಸಬೇಕಾದರೆ ಅಕ್ಕಿ ಕಡಲೇಬೇಳೆ ಪಾಯಸ ಅತ್ಯಂತ ಸುಲಭವಾದ ಸಿಹಿ ತಿಂಡಿಯಾಗಿದೆ. ಕಡಲೇಬೇಳೆ ಮತ್ತು ಬೆಲ್ಲ ಬಳಸಿ ತಯಾರಿಸಿರುವ ಈ ಸಿಹಿ ಖಾದ್ಯ ಆರೋಗ್ಯಕ್ಕೂ ಒಳ್ಳೆಯದು. ಇದಕ್ಕೆ ಒಂದು ಚೂರು ಪಚ್ಚ ಕರ್ಪೂರ ಸೇರಿಸಿದಲ್ಲಿ ರುಚಿಯೂ ಹೆಚ್ಚುವುದಲ್ಲದೇ ಆರೋಗ್ಯಕ್ಕೂ ಉತ್ತಮ.

 

 

 

#ಅನ್ನಪೂರ್ಣ

#ಪಾಯಸ

#ಸಾಂಪ್ರದಾಯಕ

#ಅಕ್ಕಿ_ಕಡಲೇಬೇಳೆ_ಪಾಯಸ

#ಕಡಲೇಬೇಳೆ_ಪಾಯಸ

#ಏನಂತೀರೀ?

2 comments

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s