ಆಂಬೋಡೆ ಮತ್ತು ಮಸಾಲ ವಡೆ

ಶುಭ ಇರಲಿ ಅಶುಭ ಇರಲಿ ಎರಡೂ ಕಾರ್ಯಕ್ರಮಗಳಲ್ಲಿಯೂ ನೈವೇದ್ಯಕ್ಕೆ ಸಲ್ಲುವ  ಸಾಂಪ್ರದಾಯಕ ಖಾದ್ಯವಾದ ಆಂಬೊಡೆ ಮತ್ತು ಜಿಹ್ವಾ ಚಪಲಕ್ಕಾಗಿ ಮಾಡುವ ಮಸಾಲ ವಡೆಯನ್ನು ಮಾಡುವುದನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ ತಿಳಿದುಕೊಳ್ಳೋಣ.

ಸುಮಾರು 4-6 ಜನರಿಗೆ ಸಾಕಾಗುವಷ್ಟು ಆಂಬೋಡೆ ತಯಾರಿಸಲು ಬೇಕಾಗುವ ಸಾಮಗ್ರಿಗಳು

  • ನೆನೆಸಿದ ಕಡಲೇ ಬೇಳೆ – 1 ಬಟ್ಟಲು
  • ಹಸಿರು ಮೆಣಸಿನಕಾಯಿ – 8-10
  • ಶುಂಠಿ – 1 ಇಂಚು
  • ಸ್ವಲ್ಪ ಕೊತ್ತಂಬರಿ ಸೊಪ್ಪು
  • ಸ್ವಲ್ಪ ಕರಿಬೇವು
  • ರುಚಿಗೆ ತಕ್ಕಷ್ಟು ಉಪ್ಪು
  • ಕರಿಯಲು ಅಡುಗೆ ಎಣ್ಣೆ

ಮಸಾಲ ವಡೆಗೆ ಬೇಕಾದ ಸಾಮಗ್ರಿಗಳು

  • ಕತ್ತರಿಸಿದ ಸಬ್ಸೀಗೆ ಸೊಪ್ಪು – 1/2 ಕಟ್ಟು
  • ಕತ್ತರಿಸಿದ ಈರುಳ್ಳಿ – 1
  • ಸ್ವಲ್ಪ ಪುದಿನ
  • ಚಕ್ಕೆ ಪುಡಿ – 1/2 ಚಮಚ

ಆಂಬೋಡೆ ತಯಾರಿಸುವ ವಿಧಾನ

  • ಆಂಬೊಡೆ ಮಾಡುವುದಕ್ಕೆ ಒಂದೆರಡು ಗಂಟೆಯ ಮುನ್ನ ಕಡಲೇಬೇಳೆಯನ್ನು ನೀರಿನಲ್ಲಿ ಚೆನ್ನಾಗಿ ನೆನಸಿಟ್ಟುಕೊಳ್ಳಿ
  • ನೆನೆಸಿಟ್ಟು ಕೊಂಡ ಕಡಲೇಬೇಳೆ, ಶುಂಠಿ, ಹಸೀ ಮೆಣಸಿನಕಾಯಿಯನ್ನು ಮಿಕ್ಸಿಯಲ್ಲಿ ಹಾಕಿಕೊಂಡು ತರಿ ತರಿಯಾಗಿ ರುಬ್ಬಿಕೊಳ್ಳಬೇಕು.
  • ರುಬ್ಬಿಕೊಂಡ ಮಿಶ್ರಣಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಕತ್ತರಿಸಿದ ಕೊತ್ತಂಬರಿ ಮತ್ತು ಕರಿಬೇವು ಸೊಪ್ಪನ್ನು ಸೇರಿಸಿ ಚೆನ್ನಾಗಿ ಕಲೆಸಿಕೊಳ್ಳಿ
  • ಕಲೆಸಿಕೊಂಡ ಮಿಶ್ರಣವನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿಕೊಂಡು ಅಂಗೈಯಲ್ಲಿ ತಟ್ಟಿ ದಪ್ಪ ತಳದ ಬಾಣಲೆಯಲ್ಲಿ ಎಣ್ಣೆ ಹಾಕಿ, ಎಣ್ಣೆ ಕಾದ ನಂತರ ಚೆನ್ನಾಗಿ ಕೆಂಪಾಗಿ ಬರುವ ವರೆಗೂ ಕರಿದಲ್ಲಿ ರುಚಿ ರುಚಿಯದ ಆಂಬೊಡೆ ಸಿದ್ದ.

ಮಸಾಲೆ ವಡೆ ತಯಾರಿಸುವ ವಿಧಾನ

  • ರುಬ್ಬಿಕೊಂಡ ಬೇಳೆ ಮಿಶ್ರಣಕ್ಕೆ ಕತ್ತರಿದ ಈರುಳ್ಳಿ, ಸಬ್ಸೀಗೆ ಸೊಪ್ಪು ಮತ್ತು ಚಕ್ಕೆ ಪುಡಿಯನ್ನು ಸೇರಿಸಿ ಚೆನ್ನಾಗಿ ಕಲೆಸಿಕೊಳ್ಳಿ
  • ಕಲೆಸಿದ ಮಿಶ್ರಣವನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿಕೊಂಡು ಅಂಗೈಯಲ್ಲಿ ತಟ್ಟಿ ದಪ್ಪ ತಳದ ಬಾಣಲೆಯಲ್ಲಿ ಎಣ್ಣೆ ಹಾಕಿ, ಎಣ್ಣೆ ಕಾದ ನಂತರ ಚೆನ್ನಾಗಿ ಕೆಂಪಾಗಿ ಬರುವ ವರೆಗೂ ಕರಿದಲ್ಲಿ ರುಚಿ ರುಚಿಯದ ಮಸಾಲೆ ವಡೆ ಸಿದ್ದ.

ಈ ಆಂಬೊಡೆಯನ್ನು ಕಾಯಿ ಚೆಟ್ನಿಯೊಂದಿಗೂ ಮಸಾಲೆ ವಡೆಯನ್ನು ಚಿತ್ರಾನ್ನ, ಪಲಾವ್ ಮತ್ತು ಮೊಸರನ್ನದೊಡನೆ ಸವಿಯಲು ಮಜವಾಗಿರುತ್ತದೆ.

ಸಾಂಪ್ರದಾಯಕವಾದ ಆಂಬೊಡೆ ಮತ್ತು ಮಸಾಲೆ ವಡೆಯನ್ನು  ಮಾಡುವುದನ್ನು ಈ ವೀಡೀಯೋ ಮೂಲಕವೂ ನೋಡಿ ತಿಳಿಯ ಬಹುದಾಗಿದೆ.

 

ಇನ್ನೇಕೆ ತಡಾ ನೋಡ್ಕೋಳ್ಳಿ, ಓದ್ಕೋಳ್ಳಿ, ಮಾಡ್ಕೋಳ್ಳಿ, ತಿನ್ಕೊಳ್ಳಿ

ಏನಂತೀರೀ?

ಮದದಾಳದ ಮಾತು :  ಮನೆಯಲ್ಲಿಯೇ ಇರಬಹುದಾದ ಪರಿಕರಗಳಿಂದ ಅತ್ಯಂತ ಕಡಿಮೆ ಸಮಯದಲ್ಲಿ ತಯಾರಿಸಿದ ಈ ಅಂಬೋಡೆ ಮತ್ತು ಮಸಾಲಾವಡೆ ಈ ಮಳೆಗಾಲದಲ್ಲಿ ಸಂಜೆ ಹೊತ್ತು ಕಾಫೀ ಇಲ್ಲವೇ ಟೀ ಜೊತೆಯಲ್ಲಿ ತಿನ್ನಲು ಚೆನ್ನಾಗಿರುತ್ತದೆ.  ಕಡಲೇಬೇಳೆ ಹೊರತಾಗಿ ಬೇಯಿಸಿದ ಅವರೇಕಾಳು, ಮೆಕ್ಕೆಜೋಳ ಇಲ್ಲವೇ ನೆನೆಸಿಟ್ಟ ಹಲಸಂದೆ ಕಾಳು, ಹುರುಳೀ ಕಾಳಿನೊಂದಿಗೂ ಇದೇ ರೀತಿಯಲ್ಲಿ ವಡೆ ಮಾಡಬಹುದಾಗಿದೆ.

2 thoughts on “ಆಂಬೋಡೆ ಮತ್ತು ಮಸಾಲ ವಡೆ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s