ಡೊಡ್ಡಪತ್ರೇ ಸೊಪ್ಪಿನ ತೊಕ್ಕು

ದೋಸೆ, ಇಡ್ಲಿ, ಚಪಾತಿಗಳ ಜೊತೆಗೆ ನೆಂಚಿಕೊಳ್ಳಲು ಸಾಧಾರಣವಾಗಿ ಎಲ್ಲರ ಮನೆಗಳಲ್ಲಿಯೂ ಬಗೆ ಬಗೆಯ ಚೆಟ್ನಿಗಳೋ, ಪಲ್ಯವೋ ಇಲ್ಲವೇ ಸಾಗು ಮಾಡುವುದು ಸಹಜ. ಅದೇ ಚೆಟ್ನಿ, ಪಲ್ಯ, ಸಾಗು ತಿಂದು ಬೇಜಾರು ಆಗಿರುವವರಿಗೆ ಸ್ವಲ್ಪ ವಿಭಿನ್ನವಾಗಿರುವ ಮತ್ತು ಅರೋಗ್ಯಕರವಾದ ಡೊಡ್ಡಪತ್ರೇ ಸೊಪ್ಪಿನ ತೊಕ್ಕು ಮಾಡುವ ವಿಧಾನವನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ ತಿಳಿಸಿಕೊಡುತ್ತಿದ್ದೇವೆ.

ಸುಮಾರು 4-5 ಜನರು ಸವಿಯಬಹುದಾದಷ್ಟು ಡೊಡ್ಡಪತ್ರೇ ಸೊಪ್ಪಿನ ತೊಕ್ಕು ತಯಾರಿಸಲು ಬೇಕಾಗುವ ಸಾಮಗ್ರಿಗಳು

 • ದೊಡ್ಡಪತ್ರೆ – 20 ರಿಂದ 25 ಎಲೆ
 • ಹುಣಸೇಹಣ್ಣು – ನಿಂಬೆ ಹಣ್ಣಿನ ಗಾತ್ರದ್ದು
 • ಧನಿಯಾ – 2 ಚಮಚ
 • ಮೆಂತ್ಯ – 1 ಚಮಚ
 • ಕಾಳು ಮಣಸು – 1/2 ಚಮಚ
 • ಸಾಸಿವೆ – 1/2 ಚಮಚ
 • ಜೀರಿಗೆ – 1 ಚಮಚ
 • ಚಿಟುಕೆ ಇಂಗು
 • ರುಚಿಗೆ ತಕ್ಕಷ್ಟು ಉಪ್ಪು, ಅಚ್ಚ ಮೆಣಸಿನಪುಡಿ, ಒಣ ಮೆಣಸಿನಕಾಯಿ ಮತ್ತು ಬೆಲ್ಲ.

ಡೊಡ್ಡಪತ್ರೇ ಸೊಪ್ಪಿನ ತೊಕ್ಕು ತಯಾರಿಸುವ ವಿಧಾನ

 • ಒಂದು ಸಣ್ಣ ಬಾಣಲೆಯಲ್ಲಿ ಜೀರಿಗೆ, ಮೆಂತ್ಯ, ದನಿಯ ಮತ್ತು ಕಾಳು ಮೆಣಸನ್ನು ಹಸೀ ಹೋಗುವರೆಗೂ ಹುರಿದುಕೊಳ್ಳಿ
 • ಹುರಿದುಕೊಂಡ ಈ ಎಲ್ಲಾ ಪರಿಕರಗಳನ್ನು ನುಣ್ಣಗೆ ಪುಡಿ ಮಾಡಿಕೊಂಡು ಅದಕ್ಕೆ ಹುಣಸೇ ರಸ, ಉಪ್ಪು, ಅಚ್ಚಮೆಣಸಿನಪುಡಿ, ಬೆಲ್ಲ ಮತ್ತು ದೊಡ್ಡಪತ್ರೆಗಳನ್ನು ಹಾಕಿಕೊಂಡು ನೀರನ್ನು ಬೆರೆಸದೇ ಗಟ್ಟಿಯಾಗಿ ರುಬ್ಬಿಕೊಳ್ಳಿ
 • ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಸಾಸಿವೆ ಮತ್ತು ಇಂಗನ್ನು ಹಾಕಿ, ಸಾಸಿವೆ ಸಿಡಿದ ನಂತರ, ಕರಿಬೇವು ಮತ್ತು ತುಂಡರಿಸಿದ ಕೆಂಪು ಮೆಣಸಿನಕಾಯಿಯನ್ನು ಸೇರಿಸಿ ಹುರಿದುಕೊಳ್ಳಿ
 • ಈ ಒಗ್ಗರಣೆಗೆ ರುಬ್ಬಿಟ್ಟುಕೊಂಡಿದ್ದ ಮಿಶ್ರಣವನ್ನು ಸೇರಿಸಿ ಚೆನ್ನಾಗಿ ಎಣ್ಣೆ ಬಿಡುವವರೆಗೂ ಬಾಡಿಸಿದರೆ ರುಚಿ ರುಚಿಯಾದ ದೊಡ್ಡ ಪತ್ರೇ ತೊಕ್ಕು ಸವಿಯಲು ಸಿದ್ದ.

ಮೊದಲೇ ತಿಳಿಸಿದಂತೆ ಈ ತೊಕ್ಕನ್ನು ದೋಸೆ, ಇಡ್ಲಿ, ಚಪಾತಿಗಳಲ್ಲದೇ ಅನ್ನದ ಜೊತೆಯೂ ಕಲೆಸಿ ಕೊಂಡು ತಿನ್ನಲು ಮಜವಾಗಿರುತ್ತದೆ

ಇನ್ನೇಕೆ ತಡಾ, ಓದ್ಕೋಳೀ, ಮಾಡ್ಕೊಳೀ, ತಿನ್ಕೋಳಿ.

ಏನಂತೀರೀ?

ಮನದಾಳದ ಮಾತು : ದೊಡ್ಡಪತ್ರೆ ಸೊಪ್ಪು ವರ್ಷದ ಎಲ್ಲಾ ಸಮಯದಲ್ಲಿಯೂ ಬಹುತೇಕರ ಮನೆಯ ಕೈತೋಟದಲ್ಲಿ ದೊರೆಯುವುದಲ್ಲದೇ, ಉತ್ತಮ ಆರೋಗ್ಯಕ್ಕೂ ಸಹಕಾರಿಯಾಗಿದೆ. ಚರ್ಮ ಸಂಬಂಧಿತ ಅಲರ್ಜಿ ಮತ್ತು ಅಸಿಡಿಡಿ ಸಮಸ್ಯೆಗೆ ದೊಡ್ಡಪತ್ರೆ ಸೊಪ್ಪು ರಾಮಬಾಣವಾಗಿದೆ. ಇನ್ನು ಚಿಕ್ಕ ಮಕ್ಕಳಿಗೆ ಶೀತ ಮತ್ತು ಕೆಮ್ಮಿಗೆ ದೊಡ್ಡೀಪತ್ರೇ ಸೊಪ್ಪನ್ನು ಅರೆದು ಅದರ ರಸವನ್ನು ಜೇನು ತುಪ್ಪದೊಡನೆ ಮಕ್ಕಳಿಗೆ ಕುಡಿಸಿದಲ್ಲಿ ಮಕ್ಕಳ ಶೀತ ಮತ್ತು ಕೆಮ್ಮು ಮಾಯವಾಗುವುದಲ್ಲದೇ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗಿದೆ. ರಸ ಹಿಂಡಿದ ನಂತರ ಉಳಿದ ಸೊಪ್ಪನ್ನು ಹಾಗೇ ಬಿಸಾಡದೇ ಸಣ್ಣ ಮಕ್ಕಳ ಮೈಯ್ಯಿಗೆ ಸವರುವ ಮೂಲಕ ಮಕ್ಕಳಲ್ಲಿ ಕಾಣಬರುವ ಸಣ್ಣ ಸಣ್ಣ ಗಂಧೆಗಳನ್ನು ನಿವಾರಿಸ ಬಹುದಾಗಿದೆ.

ಈ ಆಹಾರ ಪದ್ದತಿಯನ್ನು ನಮ್ಮೊಂದಿಗೆ ಹಂಚಿಕೊಂಡ ಶ್ರೀಮತಿ ಮಾಧುರ್ಯ ಮುರಳೀಧರ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇವೆ

Author: ಶ್ರೀಕಂಠ ಬಾಳಗಂಚಿ

ಶ್ರೀಕಂಠ ಬಾಳಗಂಚಿ ಎಂಬ ನಾಮದೇಯನಾದ ನಾನು, ಮೂಲತಃ ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣ ತಾಲ್ಲೂಕ್ಕಿನ ಬಾಳಗಂಚಿ ಗ್ರಾಮದ ಖ್ಯಾತ ವಾಗ್ಗೇಯಕಾರರೂ, ಗಮಕಿಗಳು ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ಗಮಕಿ ದಿ. ಶ್ರೀ ನಂಜುಂಡಯ್ಯನವರ ಮೊಮ್ಮಗ ಮತ್ತು ಗಮಕಿ ದಿ. ಶ್ರೀ ಶಿವಮೂರ್ತಿಗಳ ಸುಪುತ್ರ. ಪ್ರಸ್ತುತ ಬೆಂಗಳೂರಿನ ವಿಶ್ವವಿಖ್ಯಾತ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರೂ ಹವ್ಯಾಸಿ ಬರಹಗಾರ. ಕ್ರೀಡೆ, ಸಾಮಾಜಿಕ ಮತ್ತು ಪ್ರಸ್ತುತ ವಿಷಯಗಳ ಬಗ್ಗೆ ಸಮಯ ಸಿಕ್ಕಾಗಲೆಲ್ಲಾ ಲೇಖನ ಬರೆದು ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಕಟಿಸಿದ್ದೇನೆ. ಕನ್ನಡ ನಾಡು, ಭಾಷೆ, ನುಡಿಗಳ ಬಗ್ಗೆ ಅಪಾರವಾದ ಗೌರವ ಮತ್ತು ಪ್ರೇಮ ಇರುವವ. ಜಿ.ಪಿ.ರಾಜರತ್ನಂರವರ ನರಕಕ್ಕಿಳ್ಸಿ ನಾಲ್ಗೆ ಸೀಳ್ಸಿ ಬಾಯ್ ಒಲ್ಸಾಕಿದ್ರೂನೂ ಮೂಗ್ನಲ್ ಕನ್ನಡ್ ಪದ್ವಾಡ್ತೀನಿ ಅಂತಾ ಹೇಳಿರುವುದನ್ನು ಅಕ್ಷರಶಃ ಪಾಲಿಸುತ್ತಿರುವವನು.

3 thoughts on “ಡೊಡ್ಡಪತ್ರೇ ಸೊಪ್ಪಿನ ತೊಕ್ಕು”

 1. ದೊಡ್ಡಪತ್ರೆ ತಂಬುಳಿಯನ್ನು ಕೇಳಿದ್ದೆ ಮತ್ತು ಹಲವಾರು ಬಾರಿ ತಿಂದಿದ್ದೆ. ಆದರೆ ತೊಕ್ಕು ತಿಂದಿರಲಿಲ್ಲ. ತಂಬುಳಿಗೆ ಮೊಸರು ಹಾಕಿ ಮಾಡುತ್ತಾರೆ. ಇನ್ನು ಕೆಲವರು ಮೊಸರು ಹಾಕದೆ ತೆಂಗಿನ ತುರಿಯಿಂದ ಚಟ್ನಿ ತರಹ ಕೂಡ ಮಾಡುತ್ತಾರೆ. ಹೆಚ್ಚು ಕಡಿಮೆ ನೀವು ಹೇಳಿರುವ ತೊಕ್ಕೂ ಕೂಡ ಅದೇರೀತಿ ಇದ್ದಹಾಗೆ ಕಾಣುತ್ತೆ. ಆದರೂ ಹೊಸ ಅಡುಗೆಯನ್ನು ಬರೆದಿದ್ದೀರಿ. ಒಟ್ಟಿನಲ್ಲಿ ದೊಡ್ಡಪತ್ರೆ ಸೊಪ್ಪು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅದನ್ನು ಹೇಗೆ ತಿಂದರೂ ರುಚಿಕರ ಹಾಗೂ ಆರೋಗ್ಯಕರವೆ. ತಾವು ತಿಳಿಸಿದ್ದಕ್ಕಾಗಿ ಧನ್ಯವಾದಗಳು

  Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s