ಮಾಡ್ದೋರ ಪಾಪಾ ಆಡ್ದೋರ ಬಾಯಲ್ಲಿ

ಪ್ರಪಂಚದಾದ್ಯಂತ ನೂರಾರು ಧರ್ಮಗಳು ಮತ್ತು ಆಧ್ಯಾತ್ಮಿಕ ನಂಬಿಕೆಗಳು ಅಸ್ತಿತ್ವದಲ್ಲಿದ್ದು ಕಾಲಕಾಲಕ್ಕೆ ನಾನಾರೀತಿಯ ಆಕ್ರಮಣಕ್ಕೆ ಸಿಕ್ಕು ತಮ್ಮ ತನವನ್ನು ಕಳೆದುಕೊಂಡಿದೆ. ಆದರೆ ಸತತವಾಗಿ ಸಾವಿರಾರು ವರ್ಷಗಳ ಕಾಲ ಹಲವಾರು ಆಕ್ರಮಣಕಾರರ ಹೊಡತಕ್ಕೆ ಸಿಕ್ಕು ರಾಜಕೀಯವಾಗಿ ಸ್ವಾತಂತ್ಯ್ರವನ್ನೇ ಕಳಿದುಕೊಂಡರೂ, ತನ್ನ ಸಹಿಷ್ಣುತೆ, ಶ್ರೇಷ್ಠತೆ ಮತ್ತು ವಿಶಾಲತೆಯ ಕಾರಣದಿಂದಾಗಿ ಇಂದಿಗೂ ಜಗತ್ತಿನಲ್ಲಿ ತಲೆ ಎತ್ತಿ ವಿಶ್ವಗುರುವಾಗಲು ಹೊರಟಿರುವ ಧರ್ಮವೆಂದರೆ ನಮ್ಮ ಸನಾತನ ಧರ್ಮ. ಇಂತಹ ಸನಾತನ ಧರ್ಮದಲ್ಲಿ ಮತ್ತು ಇಂತಹ ಧರ್ಮದಲ್ಲಿ ಹುಟ್ಟಲು ಅದು ಎಷ್ಟು ಜನ್ಮ ಪುಣ್ಯ ಮಾಡಿರಬೇಕು.

ನಮ್ಮ ಸನಾತನ ಧರ್ಮವು ಜಗತ್ತಿನ ಅತ್ಯಂತ ಪ್ರಾಚೀನ ಧರ್ಮವಾಗಿದ್ದು, ವಸುದೈವ ಕುಟುಂಬಕಂ ಅಂದರೆ ಇಡೀ ವಿಶ್ವವೇ ಒಂದು ಕುಟುಂಬ ಎನ್ನುವ ತತ್ವದಡಿಯಲ್ಲಿ ನಮ್ಮವರೆಲ್ಲರೂ ಸುಖವಾಗಿರಲಿ, ಜ್ಞಾನವೇ ಗುರಿಯಾಗಿರಲಿ ಎಂಬ ಶ್ರೇಷ್ಠ ತತ್ವಗಳ ಆಧಾರದ ಮೇಲೆ ನಿಂತಿರುವ ವಿಶಾಲ ಹಾಗೂ ಪವಿತ್ರ ಧರ್ಮವಾಗಿದೆ. ಶ್ರೇಷ್ಠ ಧರ್ಮವನ್ನು ಪಾಲಿಸುತ್ತಿದ್ದರಿಂದರ್ಲೇ ಭಾರತ ಒಂದು ಕಾಲದಲ್ಲಿ ಇಡೀ ವಿಶ್ವಕ್ಕೆ ಜ್ಞಾನದ ಬೆಳಕು ನೀಡುತ್ತಾ ವಿಶ್ವ ಗುರುವೆನಿಸಿಕೊಂಡಿತ್ತು.

ಅದೇಕೋ ಎನೋ?ಬ್ರಿಟೀಷರು ಭಾರತವನ್ನು ಬಿಟ್ಟು ತೊಲಗಿ 70 ವರ್ಷಗಳು ಕಳೆದರೂ, ನಮ್ಮ ದೇಶದ ಬಗ್ಗೆ ಕಮ್ಮಿ ನಿಷ್ಠೆ ಹೊಂದಿರುವ ಕಮ್ಯೂನಿಷ್ಟರು ಅವಸಾನದ ಅಂಚಿನಲ್ಲಿದ್ದರೂ, ಬ್ರಿಟಿಷ್ ಮತ್ತು ಕಮ್ಯೂನಿಷ್ಟ್ ಮನೋಭಾವದ ಒಂದಷ್ಟು ಜನ ವಿಷ ಬೀಜಗಳಂತೆ ಸ್ವಘೋಷಿತ ಬುದ್ದಿಜೀವಿಗಳು ಎಂದು ಕರೆದುಕೊಂಡು ಅತ್ತ ಸಂಪೂರ್ಣವಾಗಿ ಸ್ವೇಚ್ಚಾಚಾರದ ಬದಕೂ ಇಲ್ಲದೇ ಇತ್ತ ತಮ್ಮ ಧರ್ಮವೂ ಇಲ್ಲದೇ ಎಡಬಿಡಂಗಿಗಳ ತರಹ ಈ ದೇಶವನ್ನೂ, ಅಗಾಧವಾದ ವಿದ್ವತ್ಭರಿತ ನಮ್ಮ ಸನಾತನ ಧರ್ಮವನ್ನೂ ತಮ್ಮ ಮಾತೃಭಾಷೆಯನ್ನೂ ಹಳಿಯುತ್ತಲೇ ತಮ್ಮ ಹೊಟ್ಟೆ ಹೊರೆದು ಕೊಳ್ಳುತ್ತಿರುವುದನ್ನು ದೇಶಾದ್ಯಂತ ಕಾಣಬಹುದಾಗಿದೆ.

ಅದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿರುವ ಕೆಲ ಬುದ್ದಿ ಜೀವಿ ಸಾಹಿತಿಗಳು ಮತ್ತು ಭಾಷಣಕಾರರು, ಆತ್ಮವಿಸ್ಮೃತಿಯಿಂದ ಸ್ವದೇಶದಲ್ಲೇ ನಮ್ಮ ಧರ್ಮದ ಬಗ್ಗೆ ಅವಳನಕಾರಿ ವಿಷಯಗಳನ್ನು ಪ್ರಚೋದಿಸುತ್ತಾ ನಮ್ಮ ದೇಶ ಮತ್ತು ಧರ್ಮವನ್ನು ವಿನಾಶದಂಚಿಗೆ ಸಾಗಿಸುವ ಪ್ರಯತ್ನದಲ್ಲಿ ತೊಡಗಿರುವುದು ದೇಶದ ಕೋಮು ಸಾಮರಸ್ಯಕ್ಕೆ ಧಕ್ಕೆ ತರುತ್ತಿರುವುದು ಕಳವಳಕಾರಿಯಾದ ಅಂಶವಾಗಿದೆ.

ಬದುಕಿರುವಾಗ ಈ ಬುದ್ಧಿ ಜೀವಿಗಳು ತಮ್ಮ ಧರ್ಮದ ಎಲ್ಲಾ ಸಂಸ್ಕಾರಗಳನ್ನೂ, ನೀತಿ ನಿಯಮಗಳನ್ನೂ, ಆಚಾರ, ವಿಚಾರ ಮತ್ತು ಆಚಾರ ಪದ್ದತಿಗಳನ್ನೂ ಗಾಳಿಗೆ ತೂರಿ, ಪವಿತ್ರವಾದ ಗೋಮಾತೆ ಎಂದು ಪೂಜಿಸುವ ದನಗಳ ಮಾಂಸವನ್ನು ಬಹಿರಂಗವಾಗಿಯೇ ತಿನ್ನುತ್ತಾ, ಇನ್ನೂ ಕೆಲವರು ಹಿಂದೂ ದೇವರಗಳ ಮೇಲೆ ಮೂತ್ರವಿಸರ್ಜನೆ (ಮಾಡಿದ್ದರೋ ಇಲ್ಲವೋ ಆ ದೇವರಿಗೆ ಗೊತ್ತು) ಮಾಡಿದ್ದೆ ನನಗೆ ಆ ದೇವರು ಯಾವುದೇ ಶಿಕ್ಷೆಯನ್ನು ಕೊಡಲಿಲ್ಲವೆಂದರೆ ಅವನೆಂತಹ ದೇವರು ಎಂದು ನಮ್ಮ ದೇವರುಗಳ ಮೇಲೆಯೇ ಅಪನಂಬಿಕೆ ಬರುವ ಕಾಯಕದಲ್ಲಿ ನಿರತರಾಗಿರುವುದು ದುಃಖಕರ ಸಂಗತಿಯಾಗಿದೆ. ಇನ್ನು ಮಾಡುವ ಕೆಲಸದ ಆಧಾರದ ಮೇಲೆ ವಿಭಜಿಸಲ್ಪಟ್ಟಿದ್ದ ವರ್ಣಾಶ್ರಮ ಪದ್ದತಿ ಕ್ರಮೇಣ ಜಾತೀಯ ಪದ್ದತಿಯಾಗಿ ಬೆಳೆದು ಹೆಮ್ಮರವಾಗಿ ಬೆಳೆದದ್ದನ್ನೇ ಮುಂದಾಗಿಟ್ಟು ಕೊಂಡು ದೇಶವನ್ನು ಒಡೆದಿದ್ದ ಬ್ರಿಟೀಷರಂತೆ ಈ ಬುದ್ದಿಜೀವಿಗಳೂ ದಲಿತರು ಮತ್ತು ಸವರ್ಣೀಯರು ಎಂದು ಎತ್ತಿ ಕಟ್ಟಿ ದೇಶವನ್ನು ಜಾತಿ, ಧರ್ಮದಲ್ಲಿ ಓಡೆದು ಹಾಕುವ ವಿಕೃತ ಮನಸ್ಥಿತಿಯುಳ್ಳವರಾಗಿದ್ದು ಕಂಡೋರ ಮಕ್ಕಳನ್ನು ಬಾವಿಗೆ ತಳ್ಳಿ ಆಳ ನೋಡುತ್ತಾ, ಜನರ ದಿಕ್ಕನ್ನು ತಪ್ಪಿಸುತ್ತಿರುವುದು ಬೇಸರದ ಸಂಗತಿಯಾಗಿದೆ.

ಸೂಕ್ಷ್ಮವಾಗಿ ಈ ಎಲ್ಲಾ ಬುದ್ಧಿಜೀವಿಗಳನ್ನೂ ಹತ್ತಿರದಿಂದ ಗಮನಿಸಿದರೆ ಅವರ ಈ ಎಲ್ಲಾ ವೈರುದ್ಯಗಳೂ ಬೂಟಾಟಿಕೆ ಎಂದು ಸ್ಪಷ್ಟವಾಗಿ ತಿಳಿಯುತ್ತದೆ. ಸಮಾಜದಲ್ಲಿ ತಾವು ಜಾತ್ಯಾತೀತರೂ ಎಂದು ತೋರಿಸಿಕೊಳ್ಳುವ ಈ ಎಲ್ಲರೂ ಸದ್ದಿಲ್ಲದೇ ತಮ್ಮ ತಮ್ಮ ಮನೆಗಳಲ್ಲಿ ಅದೇ ಸಂಪ್ರದಾಯವನ್ನು ಪಾಲಿಸುತ್ತಿರುವ ಅನೇಕ ಉದಾಹರಣೆಗಳು ನಮ್ಮ ಕಣ್ಣ ಮುಂದೆಯೇ ಇದೆ. ಕೆಲ ದಶಕಗಳ ಹಿಂದೆ ಬೆಂಗಳೂರಿನ ರಾಜಾಜೀನಗರದಿಂದ ಎರಡ್ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಕಮ್ಯೂನಿಷ್ಟ್ ಪಕ್ಷದ ಹಿರಿಯ ನಾಯಕ, ತನ್ನನ್ನು ತಾನು ನಾಸ್ತಿಕವಾದಿ ಎಂದು ತೋರಿಸ್ಕೊಳ್ಳುತ್ತಿದ್ದ ಎಂ.ಎಸ್.ಕೃಷ್ಣನ್ ಸದ್ದಿಲ್ಲದೇ ತಮ್ಮ ಮಗನ ಉಪನಯನವನ್ನು ತಿರುಪತಿಯಲ್ಲಿ ಮಾಡಿಕೊಂಡ ವಿಷಯ ಎಲ್ಲರಿಗೂ ತಿಳಿದು ಅಪಹಾಸ್ಯಕ್ಕೆ ಈಡಾದ ಸಂಗತಿ ಈಗ ಇತಿಹಾಸ.

ಕತ್ತಲಿನಿಂದ ಬೆಳಕಿನಡೆಗೆ, ಅಜ್ಞಾನದಿಂದ, ಜ್ಞಾನದ ಕಡೆಗೆ ಕರೆದೊಯ್ಯುವ ಸದ್ಭಾವನೆಯಿಂದ ದೀಪ ಬೆಳಗುವ ಮೂಲಕ ನಮ್ಮಲ್ಲಿ ಎಲ್ಲಾ ಕಾರ್ಯಗಳನ್ನು ಆರಂಭಿಸುವ ಪದ್ದತಿ ಇದೆ. ಕೆಲವರ್ಷಗಳ ಹಿಂದೆ ದಸರಾ ಉಧ್ಭಾಟನೆಗೆಂದು ಆಹ್ವಾನಿತರಾಗಿದ್ದ ಸ್ವಘೋಷಿತ ಬುದ್ದಿಜೀವಿಯೊಬ್ಬರು ದೀಪ ಹಚ್ಚುವುದು ಕೊಳ್ಳಿ ಇಟ್ಟಂತೆ ಎಂದು ದೀಪವನ್ನು ಬೆಳಗದೇ ದಸರಾ ಉಧ್ಭಾಟನೆ ಮಾಡುವ ಉದ್ದಟತನ ತೋರಿದ್ದರು. ದುರಾದೃಷ್ಟವೆಂದರೆ ಅಂದಿನ ಸರ್ಕಾರ ಅದೇ ವ್ಯಕ್ತಿಯನ್ನು ದೇಶದ ಮುಂದಿನ ಪ್ರಜೆಗಳಾದ ಮಕ್ಕಳ ಪುಸ್ತಕ ಸಂಸ್ಕರಣ ಸಮಿತಿ ಅಧ್ಯಕ್ಷರನ್ನಾಗಿ ಮಾಡಿದ್ದೇ ತಡಾ ಚಿಕ್ಕ ಮಕ್ಕಳ ಪಠ್ಯ ಪುಸ್ತಕಗಳಲ್ಲಿ ದೇಶವನ್ನು ಲೂಟಿ ಮಾಡಿದ ಧಾಳಿಕೋರರನ್ನೇ ವೈಭವೀಕರಿಸುವ ಮತ್ತು ನಮ್ಮ ಸ್ವಾತಂತ್ರ್ಯ ಹೋರಾಟಗಾರರನ್ನು ಮತ್ತು ನಮ್ಮ ಧರ್ಮವನ್ನು ತುಚ್ಚ ರೀತಿಯಲ್ಲಿ ತೋರಿಸುವ ಹಾಗೆ ಪಾಠಗಳನ್ನು ಬರೆಸಿರುವುದು ನಮ್ಮ ಕಣ್ಣ ಮುಂದೆಯೇ ಇದೇ.

ದೇಶದ ಯಾವುದೇ ಮೂಲೆಯಲ್ಲಿ ದೇಶವಿರೋಧಿ ಕೃತ್ಯ ನಡೆದು, ಆದರ ಆರೋಪಿಗಳನ್ನು ಆರಕ್ಷಕರು ಬಂಧಿಸಿದ ಕೂಡಲೇ ತಮ್ಮದೇ ಅಣ್ಣ ತಮ್ಮಂದಿರನ್ನು ಬಂಧಿಸಿದ್ದಾರೇನೋ ಎನ್ನುವಂತೆ ಪ್ರತಿಭಟನೆ ನಡೆಸುವ ಮತ್ತು ಸದಾಕಾಲವೂ ಹಿಂದೂಗಳ ವಿರುದ್ಧ ಮಸಲತ್ತು ನಡೆಸುವವರ ಪರವೇ ವಕಾಲತ್ತು ವಹಿಸುವ ಈ ಬುದ್ದಿಜೀವಿಗಳು ಸತ್ತ ಕೂಡಲೇ, ಅವರ ನಂಬಿಕೆ ಸಿದ್ದಾಂತ, ವೇದಾಂತಗಳೆಲ್ಲವೂ ಮರೆಯಾಗಿ ಅವರ ಜನ್ಮತಃ ಧರ್ಮದ ರೀತಿಯಲ್ಲಿಯೇ ಅಂತ್ಯ ಸಂಸ್ಕಾರ ನಡೆಸುವುದು ನಿಜಕ್ಕೂ ವಿಪರ್ಯಾಸವೇ ಸರಿ.

ಬದುಕಿರುವಾಗ ಜಾತೀನೇ ಇಲ್ಲಾ ಎಂದು ಬೊಬ್ಬಿರಿದಿದ್ದ, ಯು. ಆರ್ ಅನಂತಮೂರ್ತಿ, ಗೌರೀ ಲಂಕೇಶ್ ಈಗ ರವೀ ಬೆಳಗೆರೆಯಂತಹ ಸ್ವಘೋಷಿತ ಬುದ್ದಿ ಜೀವಿಗಳು ಸತ್ತ ಕೂಡಲೇ ಅವರ ಸನಾತನಧರ್ಮದ ವಿರುದ್ಧ ಮಾಡಿದ ಅವಹೇಳನಗಳೆಲ್ಲವೂ ಮಾಯವಾಗಿ ಹೋದೋರೆಲ್ಲಾ ಒಳ್ಳೆಯವರು ಹರಸೋ ಹಿರಿಯರು ಎನ್ನುವಂತೆ ಅವರವರ ಜಾತಿಯ ಸಂಪ್ರದಾಯದ ಪ್ರಕಾರವೇ ಅವರ ವಿಧಿ ವಿಧಾನ ನಡೆಸಿದ್ದು ನಿಜಕ್ಕೂ ಸರಿ ಕಾಣಲಿಲ್ಲ.

ಜೀವನವಿಡೀ ನಮ್ಮ ಸನಾತನ ಧರ್ಮವನ್ನು ತಾವೂ ಧಿಕ್ಕರಿಸಿದ್ದಲ್ಲದೇ, ತಮ್ಮ ಲೇಖನ ಮತ್ತು ಭಾಷಣಗಳ ಮೂಲಕ ಉಳಿದವರಿಗೂ ದಿಕ್ಕರಿಸುವಂತೆ ಪ್ರೇರೇಪಿಸಿ‌ದ ಈ ವ್ಯಕ್ತಿಗಳ ನಂಬಿಕೆಗೆ ವಿರುದ್ದವಾಗಿ ಅವರ ಕುಟುಂಬ ಅಂತಿಮ ಸಂಸ್ಕಾರ ಸಲ್ಲಿಸಿದಾಗ ನಿಜವಾದ ಹಿಂದೂಗಳಿಗೆ ಖಂಡಿತವಾಗಿಯೂ ಕಸಿವಿಸಿಯಾಗುವುದಷ್ಟೇ ಅಲ್ಲದೇ, ಬದುಕಿದ್ದಾಗ ಬಡಬಡಿಸಿದ್ದನ್ನು ಸತ್ತಾಗ ಅಳವಡಿಸಿಕೊಳ್ಳದ, ಕೈಲಾಗದ ಕಿಸ್ಬಾಯಿ ದಾಸ, ಇವರೆಂತಹ ಬುದ್ದಿ ಜೀವಿಗಳು ಎಂದೆನಿಸಿ ಅದುವರೆಗೂ ಅವರ ಮೇಲಿದ್ದ ಗೌರವ ಖಂಡಿತವಾಗಿಯೂ ಕಡಿಮೆಯಾಗುತ್ತದೆ, ಅದುವರೆಗೂ ಅವರು ಪ್ರತಿಪಾದಿಸಿದ ಎಲ್ಲಾ ವಿಷಯಗಳ ಸತ್ವವೂ ಅಡಗಿ ಹೋಗುತ್ತದೆ. ಬುದ್ದಿಜೀವಿಗಳ ಈ ನಡೆ, ಅತ್ತೆ, ಸೊಸೆಗೆ ಬುದ್ದಿ ಹೇಳಿ ಕಡೆಗೆ ಅದೇ ಅತ್ತೇನೇ ಯಾರ ಹಿಂದೇನೋ ಓಡಿ ಹೋದ್ಲಂತೆ ಅನ್ನೋ‌ ಹಾಗಾಗುತ್ತದೆಯಲ್ಲವೇ? ಅದಕ್ಕೇ ಹೇಳುವುದನ್ನೇ ಮಾಡಬೇಕು. ಮಾಡಬಹುದಾದ್ದನ್ನೇ ಹೇಳಬೇಕು ಎಂದು ನಮ್ಮ ಹಿರಿಯರು ಹೇಳಿರುವುದು.

ಬದುಕಿದ್ದಾಗ ಎಲ್ಲರನ್ನೂ, ಎಲ್ಲವನ್ನೂ ಪ್ರಶ್ನಿಸುತ್ತಾ ತಾವೊಬ್ಬರೇ ಜ್ಞಾನಿಗಳು ಎಂಬ ಭ್ರಮೆಯಲ್ಲಿ ಓಲಾಡುವ ಈ ಬುದ್ಧಿಜೀವಿಗಳು ಸತ್ತಮೇಲೆ ಆಗುವ ಈ ಕಸಿವಿಸಿಯನ್ನು ಪ್ರಶ್ನಿಸಿದವರನ್ನೇ ಧರ್ಮಭ್ರಷ್ಟರು ಎನ್ನುವಂತೆ ಮುಗಿಬೀಳುವ ತಂಡವೇ ಸಿದ್ಧವಾಗಿರುತ್ತದೆ. ಅಂತಹ ಅಂಧಾಭಿಮಾನಿಗಳು ನಿಜವಾಗಿಯೂ ತಿಳಿಯಬೇಕಾದ್ದದ್ದೇನೆಂದರೆ ಈ ಎಲ್ಲಾ ಬುದ್ಧಿ ಜೀವಿಗಳು ಪುಗಸಟ್ಟೆ ಪ್ರಚಾರ ಮತ್ತು ತಮ್ಮ ನಿತ್ಯ ಜೀವನದ ಗಂಜಿಗಾಗಿ ಮಾತ್ರಾ ತೋರಿಕೆಯ ಜಾತ್ಯಾತೀತತೇಯಷ್ಟೇ. ಅವರ ಈ ಜಾತ್ಯಾತೀತತೇ ಏನಿದ್ದರೂ ಗುಂಡು, ತುಂಡು ಬಾಯಿ ಚಪಲಕ್ಕೆ ಮಾತ್ರಾ ಎಂಬುದನ್ನು ಅವರಿಂದ ತಮ್ಮ ಬದುಕಿನ ದಿಕ್ಕನ್ನು ತಪ್ಪಿಸಿಕೊಂಡು ಅಬ್ಬೇಬ್ಬಾರಿ ಆಗುವ ಅವರ ಅಂಧಾಭಿಮಾನಿಗಳು ಈಗಲಾದರೂ ತಿಳಿದುಕೊಳ್ಳುವುದು ಒಳಿತು. ಇಂತಹ ಬುದ್ದಿಜೀವಿಗಳು, ಗಡಿಗೇ ಸಿದ್ದ ಒಳಗೊಳಗೇ ಮೆದ್ದ ಎನ್ನುವಂತೆ ಸದ್ದಿಲ್ಲದೆ ತಮ್ಮ ತಮ್ಮ ಮನೆಯಲ್ಲಿ ಹೆಂಡತಿ ಹೇಳಿದಳು ಇಲ್ಲವೇ ಕುಟುಂಬದವರ ಒತ್ತಾಯ ಪಡಿಸಿದರು ಎಂಬ ನೆಪದಲ್ಲಿ ಎಲ್ಲಾ ರೀತಿಯ ಆಚರಣೆಗಳನ್ನು ಮಾಡುತ್ತಲೇ ಸಮಾಜದ ಸಾಮರಸ್ಯತೆಯನ್ನು ಹಾಳುಮಾಡುತ್ತಿರುತ್ತಾರೆ. ಸೈದ್ಧಾಂತಿಕವಾಗಿ ಸಾತ್ವಿಕ ವಿರೋಧವಿರಲಿ ಅದರ ಕುರಿತಾಗಿ ಆರೋಗ್ಯಕರ ಚರ್ಚೆ ನಡೆಸುವ ಮನೋಭಾವ ಬೆಳಸಿಕೊಳ್ಳೋಣ. ಅದು ಬಿಟ್ಟು ಸುಮ್ಮನೆ ಯಾರದ್ದೋ ಅಂಧಾಮಿಮಾನದಿಂದ ಮತ್ತಾರನೋ ಅವಹೇಳನ‌ ಮಾಡುವುದು‌ ಸರಿಯಲ್ಲ ಅಲ್ವೇ.

ಮಾಡ್ದೋರ ಪಾಪಾ ಆಡ್ದೋರ ಬಾಯಲ್ಲಿ ಅಂತಾ ನಮಗೇಗೆ ಉಸಾಬರೀ ಅಂತ ಸುಮ್ಮನೇ ಕೂರದೇ ನಾಲ್ಕಾರು ಜನರಿಗೆ ಈ ಸತ್ಯವನ್ನು ತಿಳಿಸ ಬಹುದಲ್ವೇ?

ಏನಂತೀರೀ?

4 thoughts on “ಮಾಡ್ದೋರ ಪಾಪಾ ಆಡ್ದೋರ ಬಾಯಲ್ಲಿ

  1. ನಮಸ್ಕಾರ ಶ್ರೀಕಂಠ ಜೀ… ಯುಆರ್ ಅನಂತಮೂರ್ತಿ, ರವಿಬೆಳಗೆರೆ ಅನ್ನೋ ಬುದ್ಧಿ ಜೀವಿಗಳ ಬರೆದಿರುವ ಲೇಖನ ನೂರಕ್ಕೆ ನೂರರಷ್ಟು ಸತ್ಯ ಬದುಕಿರುವಾಗ ಆಚರಣೆ ಮಾಡದವರಿಗೂ ನಮ್ಮ ಸಂಸ್ಕೃತಿ ಪ್ರಕಾರ ಅಪರ ಕರ್ಮಗಳು ಮಾಡಿರುವುದು ಅವರ ಕುಟುಂಬದವರು ಅವರ ಕುಟುಂಬದವರಿಗೆ ನಮ್ಮ ಸಂಸ್ಕೃತಿ ಮೇಲೆ ಈಗ ವ್ಯಾಮೋಹ ಬಂದಿರಬೇಕು…

    ಸುಬ್ರಮಣ್ಯ ಟಿ ಎನ್

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s