ಅದು ಸ್ವಾತಂತ್ರ್ಯ ಪೂರ್ವದ ದಿನಗಳು ಅದೊಂದು ದಿನ ಅಯ್ಯರ್ ಎಂಬ ವ್ಯಕ್ತಿ ಮತ್ತು ಬ್ರಿಟಿಷ್ ವ್ಯಕ್ತಿಯೊಬ್ಬ ಮದ್ರಾಸ್ನಿಂದ ಕಲ್ಕತ್ತಾಗೆ ಹೌರಾ ಮೇಲ್ ನಲ್ಲಿ ಮೊದಲನೇ ದರ್ಜೆಯ ಕೋಚ್ ನಲ್ಲಿ ಪ್ರಯಾಣಿಸುತ್ತಿದ್ದರು. ನಿಗಧಿಯಂತೆ ರೈಲು ರಾತ್ರಿ 8 ಗಂಟೆಗೆ ಮದ್ರಾಸ್ ಸೆಂಟ್ರಲ್‌ನಿಂದ ಹೊರಟಿತು. ಮಾರನೇ ದಿನ ಬೆಳಿಗ್ಗೆ 7 ಗಂಟೆಗೆಯ ಹೊತ್ತಿಗೆ ವಿಜಯವಾಡ ತಲುಪಿತ್ತು. ಇಬ್ಬರೂ ಸಹಾ ತಮ್ಮ ಪ್ರಾರ್ಥರ್ವಿಧಿಗಳನ್ನು ಮುಗಿಸಿ, ಬ್ರಿಟಿಷ್ ವ್ಯಕ್ತಿ ಅಲ್ಲಿಯೇ ಸ್ಟೇಷನ್ನಿನಲ್ಲಿ ಸಿಕ್ಕ ರುಚಿಕರವಾದ ಉಪಹಾರವನ್ನು ಮಾಡಿದರೆ, ಅಯ್ಯರ್ ತನ್ನ 4-ಹಂತದ ಟಿಫಿನ್ ಕ್ಯಾರಿಯರ್ ತೆಗೆದು ಅದರ ಮೊದಲಿನ ಡಬ್ಬದಲ್ಲಿದ್ದ ನಾಲ್ಕು ಇಡ್ಲಿಗಳನ್ನು ಸೇವಿಸಿ ನೀರು ಕುಡಿದು ಆರಾಮವಾಗಿದ್ದರು.
ಮಧ್ಯಾಹ್ನ ರೈಲು ವಿಶಾಖಪಟ್ಟಣ ತಲುಪಿದಾಗ ಬ್ರಿಟಿಷ್ ವ್ಯಕ್ತಿ ಸ್ಥಳೀಯ ರೈಲ್ವೆ ರಿಫ್ರೆಶ್‌ಮೆಂಟ್ ಸ್ಟಾಲ್‌ನಿಂದ ಭರ್ಜರಿಯಾದ ಊಟವನ್ನು ಖರೀದಿಸಿ ಊಟ ಮಾಡಿದರೆ, ಅಯ್ಯರ್ ಮತ್ತೆ ತನ್ನ ಟಿಫಿನ್ ಕ್ಯಾರಿಯರ್ ತೆಗೆದು, ಎರಡನೇ ಡಬ್ಬಿಯನ್ನು ಮಾತ್ರವೇ ತೆರೆದು ಮತ್ತೆ 4 ಇಡ್ಲಿಗಳನ್ನು ಸಂತೋಷದಿಂದ ಸೇವಿಸಿದರು. ಇದನ್ನೇ ಗಮನಿಸುತ್ತಿದ್ದ ಬ್ರಿಟಿಷ್ ವ್ಯಕ್ತಿಗೆ ಬಹಳ ಕುತೂಹಲ ಎನಿಸಿತು..
ರಾತ್ರಿ ರೈಲು ಬೆರ್ಹಾಂಪುರಕ್ಕೆ ಬಂದಾಗಲೂ ಊಟದ ಸಮಯದಲ್ಲಿ ಅದೇ ಈ ದೃಶ್ಯವು ಪುನರಾವರ್ತನೆಯಾದಾಗ, ಇನ್ನು ಹೆಚ್ಚಿನ ಕುತೂಹಲವನ್ನು ತಡೆದುಕೊಳ್ಳಲಾಗದ, ಬ್ರಿಟಿಷ್ ವ್ಯಕ್ತಿಯು, ಕ್ಷಮಿಸಿ, ನೀವು ಬೆಳಗಿನಿಂದಲೂ ಸೇವಿಸುತ್ತಿರುವ ಆ ಬಿಳಿ ವಸ್ತುಗಳು ಯಾವುದು ಎಂದು ತಿಳಿಸುವಿರಾ? ಎಂದಾಗ, ಅಯ್ಯರ್ ಸರ್, ಇವುಗಳು ಐಕ್ಯೂ ಮಾತ್ರೆಗಳು. ನಾವು ದಕ್ಷಿಣ ಭಾರತೀಯರು ನಿಯಮಿತವಾಗಿ ತೆಗೆದುಕೊಳ್ಳುವ ಕಾರಣ ಬುದ್ದಿವಂತರಾಗಿಯೂ ಮತ್ತು ದಷ್ಟ ಪುಷ್ಠವಾಗಿದ್ದೇವೆ ಎನ್ನುತ್ತಾನೆ.
ಅದಕ್ಕೆ ಅಹುದಹುದು ನೀವು ಬುದ್ಧಿವಂತರೆಂಬುದರಲ್ಲಿ ಆಶ್ಚರ್ಯವೇನಿಲ್ಲ ಎಂದು ಉದ್ಗರಿಸಿದ ಬ್ರಿಟಿಷ್ ವ್ಯಕ್ತಿ, ನೀವು ಅವರನ್ನು ಹೇಗೆ ತಯಾರಿಸುತ್ತೀರಿ? ಎಂದು ಕೇಳಿದನು.
ಅದಕ್ಕುತ್ತರವಾಗಿ ಅಯ್ಯರ್ ಇಡ್ಲೀ ತಯಾರು ಮಾಡಲು ಬೇಕಾಗುವ ಕಚ್ಚಾ ವಸ್ತುಗಳು ಮತ್ತು
ತಯಾರಿಕೆಯ ಪ್ರಕ್ರಿಯೆಗಳನ್ನು ಸವಿಸ್ತಾರವಾಗಿ ವಿವರಿಸಿದರು.
ಅದರಿಂದ ಸಂತೃಷ್ಟರಾದ ಆ ಬ್ರಿಟಿಷ್ ವ್ಯಕ್ತಿ, ನಿಮಗೆ ಆಭ್ಯಂತರವಿಲ್ಲದಿದ್ದರೆ, ನನಗೂ ಒಂದೆರಡು ಕೊಡಬಹುದೇ? ನೀವು ಕೇಳಿದಷ್ಟು ಬೆಲೆಯನ್ನು ನಾನು ಕೊಡಲು ಸಿದ್ಧನಿದ್ದೇನೆ ಎಂದು ಕೇಳಿಕೊಂಡರು.
ರೊಟ್ಟಿ ಜಾರಿ ತುಪ್ಪಕ್ಕೆ ಬಿತ್ತು ಎಂದೆಣಿಸಿದ ಅಯ್ಯರ್ ಸುಮ್ಮನೇ ಕೆಲ ಸಮಯ ಯೋಚನೆ ಮಾಡಿದಂತೆ ನಟಿಸಿ, ಸದ್ಯಕ್ಕೆ ನನ್ನ ಬಳಿ ನಾಳಿನ ಉಪಾಹಾರಕ್ಕಾಗಿ ಕೇವಲ ಮೂರು ಮಾತ್ರ ಉಳಿದಿದೆ. ಹೇಗೂ ನಾಳೆ ಬೆಳಗ್ಗೆಯ ಹೊತ್ತಿಗೆ ಕಲ್ಕತ್ತಾ ತಲುಪುವುದರಿಂಡ ನಾನು ನನ್ನ ಸಂಬಂಧಿಯ ಮನೆಯಲ್ಲಿಯೇ ತಿಂಡಿ ತಿನ್ನುತ್ತೇನೆ, ಹಾಗಾಗಿ ಅವುಗಳನ್ನು ನಿಮಗೆ ಕೊಡುತ್ತೇನೆ. ಆದರೆ ಅವುಗಳಿಗೆ ತಲಾ 20 ರೂಪಾಯಿ ಕೊಡಬೇಕಾಗುತ್ತದೆ ಎಂದರು.
ಆ ಬ್ರಿಟಿಷರ್ ಅಧಿಕಾರಿ ಸ್ವಲ್ಪವೂ ಹಿಂದೆ ಮುಂದೆ ಯೋಚಿಸದೇ, 60 ರೂಪಾಯಿಗಳನ್ನು (ಆ ದಿನಗಳಲ್ಲಿ ಅದರ ಬೆಲೆ ಬಹಳಷ್ಟು ಇತ್ತು) ಕೊಟ್ಟು ಇಡ್ಲಿಗಳನ್ನು ಪಡೆದುಕೊಂಡರು.
ಮರುದಿನ ಬೆಳಿಗ್ಗೆ ರೈಲು ಹೌರಾ ನಿಲ್ದಾಣಕ್ಕೆ ಬಂದು ತಲುಪಿದಾಗ, ಇನ್ನೇನು ಇಬ್ಬರು ರೈಲಿನಿಂದ ಇಳಿದು ತಮ್ಮ ತಮ್ಮ ಪ್ರದೇಶಗಳಿಗೆ ಹೋಗಬೇಕು ಎನ್ನುವಾಗ, ಆ ಬ್ರಿಟೀಷ್ ವ್ಯಕ್ತಿ ನೀವು ಹೇಳಿದ ಪರಿಕರಗಳು ಮತ್ತು ಪ್ರಕ್ರಿಯೆಗಳನ್ನು ಸರಿಯಗಿ ತಿಳಿಸಿದ್ದೀರಿ ಎಂದು ಭಾವಿಸುತ್ತೇನೆ ಎಂದರು.
ಅದಕ್ಕೆ ಅಯ್ಯರ್ ಅವರು, ಹೌದು, ನಾನು ನಿಮಗೆ ಎಲ್ಲಾ ವಿವರಗಳನ್ನೂ ಸರಿಯಾಗಿ ತಿಳಿಸಿದ್ದೇನೆ ಎಂದರು.
ಹಾಗಾದರೆ ಆ ಮಾತ್ರೆಗಳು ಏಕೆ ಅಷ್ಟೊಂದು ದುಬಾರಿಯಾಗಿದೆ? ಎಂದು ಬ್ರಿಟಿಷ್ ವ್ಯಕ್ತಿ ಪ್ರಶ್ನಿಸಿದರು.
ಅದಕ್ಕೆ ಅಯ್ಯರ್ ಆವರು ನಗುನಗುತ್ತಲೇ, ನೆನಪಿಡಿ, ಅದು ಐಕ್ಯೂ ಟ್ಯಾಬ್ಲೆಟ್‌ಗಳು ಎಂದು ನಾನು ನಿಮಗೆ ಹೇಳಿದ್ದೇ. ಕಳೆದ ರಾತ್ರಿ ನೀವು ಕೇವಲ ಅಂತಹ 3 ಮಾತ್ರೆಗಳನ್ನು ಮಾತ್ರಾ ತೆಗೆದುಕೊಂಡಿದ್ದೀರಿ ಈಗ ಅದು ಕೆಲಸ ಮಾಡುತ್ತಿದೆ. ಎಂದು ತಮ್ಮ ಹಾದಿ ಹಿಡಿದರು.
ಇಡ್ಲಿ(ಇಂಗು) ತಿಂದ ಮಂಗನಂತೆ, ಬೆಪ್ಪಗಾದ ಬ್ರಿಟಿಷ್ ವ್ಯಕ್ತಿ ಹ್ಯಾಪು ಮೋರೆ ಹಾಕಿ ಕೊಂಡು ಮುಖ ಮೆಚ್ಚಿಕೊಂಡು ಅವರ ಹಾದಿ ಹಿಡಿದರು.
Indian Rocks & British Shocks ಅಲ್ವೇ? 😁🤣
ಏನಂತೀರೀ?
ನಿಮ್ಮವನೇ ಉಮಾಸುತ
ಸಾಮಾಜಿಕ ಜಾಲತಾಣವೊಂದರಲ್ಲಿ ಓದಿದ ಆಂಗ್ಲ ಸಂದೇಶವೊಂದರ ಭಾವಾನುವಾದ
2021ನೇ ಇಸವಿಯಲ್ಲೇ ಒಂದು ಇಡ್ಲಿಗೆ 20 ರೂಪಾಯಿ ಜಾಸ್ತಿ ಎನಿಸುತ್ತದೆ. ಆದರೆ ಸ್ವಾತಂತ್ರ್ಯ ಪೂರ್ವದಲ್ಲಿ ಒಂದು ಇಡ್ಲಿಗೆ 20 ರೂಪಾಯಿ ತೆಗೆದುಕೊಂಡರೆ ಸಿಕ್ಕಾಪಟ್ಟೆ ಜಾಸ್ತಿ ಆಯಿತಲ್ಲ! ಐಕ್ಯೂ ವಿಚಾರ ಬೇರೆ.
LikeLiked by 1 person
ನಮ್ಮ ಸಿಂಪಲ್ಲ , ಸುಂದರ ಇಡ್ಲಿಯಿಂದ ಘಮಂಡಿ ಅಂಗ್ರೇಜಗನನ್ನು ಇಂಗು ತಿಂದ ಮಂಗನನ್ನಾಗಿ ಮಾಡಿದ ಅಯ್ಯರವರ ಸ್ವಾರಸ್ಯಕರವಾದ ಸನ್ನಿವೇಷ ನಿಜವಾಗಿಯೂ ಹಾಸ್ಯಭರಿತವಾಗಿದೆ .
ಇಡ್ಲಿ IQ Tablet ಎಂಬುವದರಲ್ಲಿ ಸಂದೇಹವಿಲ್ಲ
LikeLiked by 1 person