ಮಾತು ಆಡಿದರೆ ಹೋಯಿತು. ಮುತ್ತು ಒಡೆದರೆ ಹೋಯಿತು ಈ ಮಾತನ್ನು ನಮ್ಮ ಹಿರಿಯರು ಬಹುಶಃ ಮುಂದೊಂದು ದಿನ ಸ್ವಘೋಷಿತ ನಾದಬ್ರಹ್ಮ, ಮಹಾಗುರು ಎಂಬ ಬಿರುದಾಂಕಿತ ಗಂಗರಾಜು ಎಂಬ ದುರಹಂಕಾರ ಅವಿವೇಕಿಗೆಂದೇ ಬರೆದಿರಬೇಕು ಎಂದರು ಅತಿಶಯವಲ್ಲ. ಒಮ್ಮೆ ಮಾಡಿದರೆ ತಪ್ಪು ಪುನಃ ಪುನಃ ಅದೇ ತಪ್ಪನ್ನು ಮಾಡಿದಲ್ಲಿ ಪ್ರಮಾದ ಎಂದಾಗುತ್ತದೆ ಎನ್ನುವ ಸಾಮಾನ್ಯ ಜ್ಞಾನ ಗಂಗರಾಜುವಿನ ಅರಿವಿಗೆ ಬರಲಿಲ್ಲವೇ?
ಕೆಲ ದಿನಗಳ ಹಿಂದೆಯಷ್ಟೇ ತನ್ನ ಸುತ್ತಲೂ ಇರುವ ವಂದಿಮಾಗಧರನ್ನು ಮೆಚ್ಚಿಸಲು ಮತ್ತವರ ಚಪ್ಪಾಳೆಗಾಗಿ ಓತಪ್ರೋತವಾಗಿ ಪೇಜಾವರ ಶ್ರೀಗಳು, ಬಿಳಿಗಿರಿರಂಗ ಮತ್ತು ಸೋಲಿಗರ ಪವಿತ್ರ ಸಂಬಂಧದ ಬಗ್ಗೆ ಅಸಭ್ಯವಾಗಿ ಸಾರ್ವಜನಿಕವಾಗಿ ಮಾತನಾಡಿ ನಂತರ ಹೇಡಿಯಂತೆ ಕಾಟಾಚಾರಕ್ಕೆ ನಾಲ್ಕು ಗೋಡೆಗಳ ಮಧ್ಯೆ ಕ್ಷಮೆ ಕೇಳಿದಂತಹ ನಾಟಕವಾಡಿ, ನಂತರ ದಲಿತ ಬಲಿತ ಎಂಬ ಹೆಸರಿನಲ್ಲಿ ಸಮಾಜವನ್ನು ಒಡೆಯುತ್ತಲೇ ಇರುವ ದ್ವಾರಕಾನಾಥ್, ಬಲ್ಪ್ ಹರೀಶ ಮತ್ತು ಚೇತನ್ ಅಹಿಂಸ ಎಂಬ ವಿದೇಶೀ ತಳಿಯನ್ನು ಬೆನ್ನ ಹಿಂದೆ ಕಟ್ಟಿ ಕೊಂಡು ಓಡಾಡುತ್ತಾ, ಎಲ್ಲಾ ಮಾತುಗಳು ವೇದಿಕೆಗಲ್ಲಾ ಎಂದು ಹೇಳುತ್ತಲೇ ತನ್ನ ಮನಸ್ಸಿನ ವಿಷವನ್ನು ಸಾರ್ವಜನಿಕವಾಗಿ ಕಕ್ಕಿದ್ದ ಗಂಗರಾಜು ಮತ್ತೊಮ್ಮೆ ಅದೇ ರೀತಿಯ ಪ್ರಮಾದವನ್ನು ಎಸೆಗಿರುವುದು ನಿಜಕ್ಕೂ ಅಕ್ಷಮ್ಯ ಅಪರಾಧವೇ ಆಗಿದೆ.
ನಾನಂದು ಆ ರೀತಿ ಮಾತನಾಡಿದ್ದು ನನ್ನ ಮನೆಯೊಡತಿಗೂ ಇಷ್ಟ ಆಗಲಿಲ್ಲ ಅದಕ್ಕಾಗಿ ಕ್ಷಮೆ ಕೇಳುತ್ತಿದ್ದೇನೆ ಎಂದಿದ್ದ ಗಂಗರಾಜು ಗಾಂಧಿ ಭವನದಲ್ಲಿ ನಡೆದ ಎಸ್.ಜಿ.ಸಿದ್ದರಾಮಯ್ಯ ಅವರ ಆತ್ಮ ಕಥನ ‘ಯರೆಬೇವು’ ಪುಸ್ತಕ ಬಿಡುಗಡೆ ಹಾಗೂ ಡಾ.ಎಂ ಎಂ ಕಲಬುರ್ಗಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾತನಾಡುತ್ತಾ, ನಿಮಗೆ ಧೈರ್ಯವನ್ನು ನೀಡಲೆಂದೇ ನಿಮ್ಮನ್ನು ಇಲ್ಲಿಗೆ ಕರೆಸಿದ್ದೇವೆ ಎಂದು ಆಯೋಜಕರು ಹೇಳಿದಾಗ, ನಾನು ಮಾಗಡಿ ರೋಡ್‍ನಲ್ಲಿ ದೊಡ್ಡ ದೊಡ್ಡ ಪೋಲಿ ಆಟವನ್ನು ಆಡಿ ಬಂದವನು ದೊಡ್ಡ ತಂಡವನ್ನು ಕಟ್ಟಿಕೊಂಡಿದ್ದೆ ಹಾಗಾಗಿ ನನಗೇನೂ ಭಯವಿಲ್ಲ ಎಂದು ಮತ್ತೊಮ್ಮೆ ತಾನು ಬೂದಿ ಮುಚ್ಚಿದ ಕೆಂಡ ಎಂದು ತೋರಿಸಿಕೊಂಡಿದ್ದಲ್ಲದೇ, ಈಗ ನನಗೆ ಎಪ್ಪತ್ತು. ತಿನ್ನೋದು ಒಪ್ಪತ್ತು ಉಳಿದ ಇನ್ನೂ 2 ಹೊತ್ತು ಏನು ಹಸಿವು ಆಗುತ್ತದೆ. ಅದೇನು ಹಸಿವಾ? ಅದು ಬರೀ ಬಸವಾ, ಬಸವನ ಹಸಿವು ಇನ್ನೂ ಎರಡು ಹೊತ್ತಿಗೂ ಪ್ರೋಟಿನ್ಸ್ ಕೊಡುತ್ತೆ. ಒಂದು ಹೊತ್ತು ತಿನ್ನುತ್ತೇವೆ. 70 ಆದರೆ ಏನಂತೆ ಇನ್ನೊಂದಷ್ಟು ವರ್ಷ ಇರತ್ತೇವೆ. ಜೀವನದಲ್ಲಿ ಅಂದುಕೊಂಡದನ್ನ ಸಾಧಿಸಿ ಬಿಟ್ಟು ಹೋಗೋದಿದೆ. ಅದಷ್ಟೇ ನಮ್ಮ ಗುರಿ ಅದನ್ನು ಮಾಡೋದಕ್ಕೆ ನಾವು ಸಿದ್ದವಾಗಿದ್ದೇವೆ ಎಂದು ಹೇಳುತ್ತಲೇ ಕಡೆಯಲ್ಲಿ ಧರ್ಮೋಕ್ರಸಿ ತೊಲಗಲಿ, ಡೆಮಾಕ್ರಸಿ ಗೆಲ್ಲಲಿ ಎಂದು ಹೇಳುತ್ತಲೇ ವೇದಿಕೆಯ ಮೇಲಿದ್ದ ರಾಜ್ಯ ಕಂಡ ಅತ್ಯಂತ ಭಂಡ ರಾಜಕಾರಣಿ ಸಿದ್ಧಾರಾಮಯ್ಯ ಮತ್ತೊಮ್ಮೆ ಸಿಎಂ ಆಗಲಿ ಎಂದಿರುವ ಸಾಲುಗಳು ಒಂದಷ್ಟು ಪ್ರಶ್ನೆಗಳು ಮತ್ತು ಚರ್ಚೆಯನ್ನು ಹುಟ್ಟು ಹಾಕಿದೆ.
ಮುಂದಿನ ಚುನಾವಣೆಯಲ್ಲಿ ತಾನು ಗೆಲ್ಲ ಬಲ್ಲ ಕ್ಷೇತ್ರವೇ ಸಿಗದೇ ಕರ್ನಾಟಕಾದ್ಯಂತ ಅಂಡು ಸುಟ್ಟ ಬೆಕ್ಕಿನಂತೆ ಗೆಲ್ಲಬಲ್ಲ ಸುರಕ್ಷಿತ ಕ್ಷೇತ್ರಕ್ಕಾಗಿ ಅಲೆಯುತ್ತಿರುವ ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿಯಾಗಲಿ ಎಂದು ಗಂಗರಾಜು ಹೇಳಿದರೆ ಅದು ಅವರ ಅಭಿವ್ಯಕ್ತಿ ಸ್ವಾತಂತ್ರ ಅದಕ್ಕೆ ಯಾರದ್ದೇ ಅಕ್ಷೇಪವೂ ಇಲ್ಲ. ಆದರೆ ಅದಕ್ಕೂ ಮೊದಲು ಹೇಳಿದ ಪದ ಇದೆಯಲ್ಲಾ ಧರ್ಮೋಕ್ರೆಸಿ ಅದರ ಕುರಿತಾಗಿ ಖಂಡಿತವಾಗಿಯೂ ಈ ದೇಶದ ಜನರ ಮುಂದೆ ಸ್ಪಷ್ಟನೆ ನೀಡಲೇ ಬೇಕಾಗುತ್ತದೆ. ಸಂಗೀತಕ್ಕೆ ಅನುಗುಣವಾಗಿ ಪಡ್ಡೇ ಹುಡುಗರ ಮನ ಸೆಳೆಯಲು ಹೊಸಾ ಹೊಸಾ ಪೋಲಿ ಪದಗಳ ರಚನೆ ಮಾಡುವುದರಲ್ಲಿ ಗಂಗರಾಜು ನಿಸ್ಸೀಮರು ಎಂಬುದು ಈಗಾಗಲೇ ಎಲ್ಲರಿಗೂ ತಿಳಿದಿರುವ ವಿಷಯ. ಅದರೆ ಇಂದು ಅವರಾಡಿದ ಆ ಧರ್ಮೋಕ್ರಸಿ ಎಂದರೆ ಏನರ್ಥ? ಧರ್ಮೋಕ್ರಸಿ ಎಂದರೆ ಧರ್ಮ ಆಧಾರಿತ ಆಡಳಿತವೇ? ಅಥವಾ ಈ ದೇಶದಲ್ಲಿ ಧರ್ಮ ನಾಶವಾಗಬೇಕೇ? ಎನ್ನುವುದಕ್ಕೆ ಮತ್ತೆ ಸಾರ್ವಜನಿಕವಾಗಿಯೇ ಉತ್ತರ ನೀಡಬೇಕಾಗುತ್ತದೆ.
ಇಡೀ ಪ್ರಪಂಚಕ್ಕೇ ಗೊತ್ತಿರುವಂತೆ ಭಾರತ ದೇಶ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ (ಡೆಮೆಕ್ರೆಸಿ) ದೇಶವಾಗಿರಬೇಕಾದರೆ, ಇಲ್ಲಿ ಪ್ರಜೆಗಳಿಂದಲೇ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರವೇ, ಸಂವಿಧಾನಾತ್ಮಕವಾಗಿ ಆಯ್ಕೆಯಾದ ಜನಪ್ರತಿನಿಧಿಯ ಸರ್ಕಾರವನ್ನು ವಿರೋಧಿಸುವಷ್ಟು ಗಂಗರಾಜುವಿಗೆ ದಾಷ್ಟ್ಯತನವೇ? ಬಹುಶಃ 70ರ ದಶಕದಲ್ಲಿ ಈ ದೇಶದ ಮೇಲೆ ಇದೇ ಸಿದ್ದರಾಮಯ್ಯನವರ ಪಕ್ಷದ ಇಂದಿರಾಗಾಂಧಿಯವರು ಹೇರಿದ್ದ ತುರ್ತುಪರಿಸ್ಥಿತಿ ಮತ್ತು 90ರ ದಶಕದಲ್ಲಿ ಬಾಬರೀ ಮಸೀದಿ ಧ್ವಂಸದ ಸಮಯದಲ್ಲಿ ಅಂದಿನ ಪ್ರಧಾನಮಂತ್ರಿಗಳಾಗಿದ್ದ ನರಸಿಂಹರಾವ್ ಅವರು ರಾಜಸ್ಥಾನ, ಮಧ್ಯಪ್ರದೇಶ ಮತ್ತು ಹಿಮಾಚಲ ಪ್ರದೇಶದ ಬಿಜೆಪಿ ಚುನಾಯಿತ ಸರ್ಕಾರಗಳನ್ನು ವಜಾಗೊಳಿಸಿದಾಗ ಪ್ರಜಾಪ್ರಭುತ್ವದ ಕಗ್ಗೊಲೆಯ ಹೊರತಾಗಿ ಉಳಿದೆಲ್ಲಾ ಸಮಯದಲ್ಲೂ ಡೆಮಾಕ್ರಸಿಗೇ ಗೆಲುವಾಗಿರುವಾಗ, ಯಾವಾಗ ಡೆಮಾಕ್ರಸಿಗೆ ಸೋಲಾಯಿತು? ಇಂದಿಗೂ ಈ ದೇಶದಲ್ಲಿ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎನ್ನುವ ಸರ್ಕಾರಗಳೇ ಇರುವಾಗ ಧರ್ಮಾಧಾರಿತವಾಗಿರುವುದು ಯಾವಾಗ?
ಇನ್ನು ಸಿದ್ಧರಾಮಯ್ಯ ಮತ್ತೊಮ್ಮೆ ಸಿಎಂ ಆಗಲಿ ಎಂದಿದ್ದಾರೆ. ಹಾಗಾದರೇ ಸಿದ್ಧರಾಮಯ್ಯ ಮುಖ್ಯಮಂತ್ರಿಯಾದರೆ ಮಾತ್ರವಷ್ಟೇ ಡೆಮಾಕ್ರಸಿಯೇ? ಬೇರೆಯವರು ಸಂವಿಧಾನಾತ್ಮಕವಾಗಿ ಮುಖ್ಯಮಂತ್ರಿ ಆದಲ್ಲಿ ಧರ್ಮಾಕ್ರೆಸಿಯೇ? ಈ ರೀತಿ ಸಾರ್ವಜನಿಕವಾಗಿ ಒಬ್ಬ ವ್ಯಕ್ತಿಯನ್ನು ಆರಾಧಿಸುವುದು ವ್ಯಕ್ತಿ ಪೂಜೆಯಾಗಿ ಸರ್ವಾಧಿಕಾರಿ ಧೊರಣೆಯಾಗುತ್ತದೆಯೇ ಹೊರತು ಪ್ರಜಾಪ್ರಭುತ್ವ ಹೇಗಾದೀತು?
ಇದೇ ಸಿದ್ದರಾಮಯ್ಯ ಅಧಿಕಾರದಲ್ಲಿ ಇದ್ದಾಗ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಎನ್ನುವಂತೆ ಶಾದಿ ಭಾಗ್ಯ ಕೊಟ್ಟಿದ್ದು, ಕೆಲವೇ ಕೆಲವು ಜಾತಿಯ ಶಾಲಾ ಮಕ್ಕಳಿಗೆ ತಿನ್ನಲು ಮೊಟ್ಟೆ, ಪ್ರವಾಸಕ್ಕೆ ಕರೆದುಕೊಂಡು ಹೋಗುವುದು, ಅನ್ಯ ಕೋಮಿನವರನ್ನು ಓಲೈಸುವ ಸಲುವಾಗಿ ಛದ್ಮ ವೇಷಧಾರಿಯಾಗುವುದು, ತಾನು ಮತ್ತೊಮ್ಮೆ ಮುಖ್ಯಮಂತ್ರಿಯಾದರೆ ಒಂದು ಧರ್ಮಕ್ಕೆ ಸಾವಿರಾರು ಕೋಟಿ ಅನುದಾನವನ್ನು ಕೊಡುತ್ತೇನೆ ಎಂದು ಸಾರ್ವಜನಿಕವಾಗಿ ಹೇಳಿಕೆ ಕೊಡುವುದು ಡೆಮಾಕ್ರೆಸಿಯೋ? ಧರ್ಮಾಕ್ರೆಸಿಯೋ?
ನೀವೇ ಹೇಳಿಕೊಂಡಂತೆ ಈ 70ರ ಇಳೀ ವಯಸ್ಸಿನಲ್ಲಿ ಪದೇ ಪದೇ ಈ ರೀತಿಯಾಗಿ ಅಸಂಬದ್ಧ ಹೇಳಿಕೆಗಳನ್ನು ಆಡುವ ಮೂಲಕ ಅದಾವ ರಹಸ್ಯ ಕಾರ್ಯಸೂಚಿಯನ್ನು ತರಲು ಬಯಸುತ್ತಿದ್ದೀರೀ? ಚಪ್ಪಾಳೆ ತಟ್ಟುವ ಜನರು ಸುತ್ತಮುತ್ತಲೂ ಇದ್ದ ಕೂಡಲೇ ನಿಮ್ಮ ಮನಸ್ಸು ಸ್ಥಿಮಿತವನ್ನು ಕಳೆದು ಕೊಂಡು ನಾಲಿಗೆಯನ್ನು ಓತ ಪ್ರೋತವಾಗಿ ಹರಿಸುತ್ತಿದೆ ಎಂದಾದಲ್ಲಿ ದಯವಿಟ್ಟು ಯಾವುದಾದರೂ ಬಲಿತ ವೈದ್ಯರು (ಮತ್ತೇ ದಲಿತ ವೈದ್ಯರ ಬಳಿ ಚಿಕಿತ್ಸೆ ಪಡೆದಲ್ಲಿ ನಿಮ್ಮ ವ್ಯಾಧಿ ಹೆಚ್ಚಾಗುವ ಅಪಾಯವಿದೆ) ಬಳಿ ಹೋಗಿ ಚಿಕಿತ್ಸೆ ಪಡೆದು ಮಾನಸಿಕ ಸ್ಥಿಮಿತವನ್ನು ಕಂಡುಕೊಳ್ಳಿ. ಇಲ್ಲವೇ, ನಿಮಗೆ ವಯಸ್ಸಾಯಿತು ಎಂದು ಕೊಂಡು ಮನೆಯಲ್ಲಿ ಕುಳಿತು ರಾಮ ಕೃಷ್ಣ ಗೋವಿಂದಾ (ಅಯ್ಯೋ ದೇವರನ್ನು ನೆನೆಸಿಕೊಂಡಲ್ಲಿ ಕೋಮುವಾದವೆನಿಸಿ ಮನುವಾದಿ ಆಗುವ ಭಯ ಕಾಡಬಹುದೇನೋ? ) ಎಂದು ಭಗವಂತನ ಧ್ಯಾನ ಮಾಡಿದರೆ ನಿಮಗೂ ಒಳ್ಳೆಯದೂ ಸಮಾಜಕ್ಕೂ ಒಳ್ಳೆಯದು.
ನಿಮ್ಮ ಅರ್ಥದಲ್ಲಿ ಭಾರತ ಧರ್ಮಾಕ್ರೇಸಿ ಆಗಿದಲ್ಲಿ, ಪಾಕಿಸ್ತಾನ, ಅಫ್ಘಾನಿಸ್ತಾನ, ವ್ಯಾಟಿಕನ್ ಸಿಟಿಯಂತ ದೇಶಗಳಲ್ಲಿ ಡೆಮಾಕ್ರೆಸಿ ಇದೆಯೇ? ಭಾರತದಲ್ಲಿ ಧರ್ಮಾಕ್ರಸಿ ಇದ್ದಿದ್ದರೇ ನೀವಿಂದು ಈ ರೀತಿಯಾಗಿ ದೇಸಿ ಸಂಗೀತಗಾರರಾಗುವುದು ಬಿಡಿ ಈ ರೀತಿಯಾಗಿ ಹುಚ್ಚುಚ್ಚಾಗಿ ಮಾತನಾಡಲು ಸಹಾ ಆಗುತ್ತಿರಲಿಲ್ಲ ಎನ್ನುವುದರ ಅರಿವಿದೆಯೇ?
ಸಂಗೀತಕ್ಕೆ ಯಾವುದೇ ಧರ್ಮ , ಜಾತಿ ಭಾಷೆ ಇಲ್ಲ ಎಂದು ಹೇಳುತ್ತಲೇ, ಹೇಳುವುದು ಶಾಸ್ತ್ರ ತಿನ್ನುವುದು ಬದನೇಕಾಯಿ ಎನ್ನುವಂತೆ, ಈ ದೇಶದಲ್ಲಿ ಎಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ ಎಂದು ಈ ಪರಿಯಾಗಿ ಜನರನ್ನು ಭಾಷೆ, ಜಾತಿ, ಧರ್ಮಧಾರಿತವಾಗಿ ಕೆಣಕುವುದು ಎಷ್ಟು ಸರಿ? ಪದೇ ಪದೇ ಸಿದ್ದರಾಮಯ್ಯರೇ ಮುಂದಿನ ಮುಖ್ಯಮಂತ್ರಿ ಆಗಬೇಕು ಎನ್ನುವ ಗುಜರಿ, ವಾಚ್ಮನ್ ಜಮೀರನ ಮಟ್ಟಕ್ಕೆ ನೀವೇಕೆ ಇಳಿದಿರಿ ಗಂಗರಾಜು? ಸಾರ್ವಜನಿಕವಾಗಿ ಮೇಲಿಂದ ಮೇಲೆ ತಪ್ಪು ಮಾಡುತ್ತಾ, ಕಡೆಗೆ ಮಡದಿಯ ಸೆರಗನ್ನು ಗುರಾಣಿ ಮಾಡಿಕೊಳ್ಳುವುದು ನಿಮಗೇ ಅವಮಾನ ಎನಿಸುವುದಿಲ್ಲವೇ?
ಒಮ್ಮೆ ಆದ ತಪ್ಪಿಗೇ ಸ್ವಘೋಷಿತ ನಾದ್ರಬ್ರಹ್ಮ ಮಹಾಗುರು ಬಿಡಿ ನಿಮ್ಮ ಅಂಕಿತನಾಮ ಹಂಸಲೇಖ ಎಂಬ ಹೆಸರೇ ಜನರಿಂದ ಮಾಯವಾಗಿ ಸಾಧಾರಣ ಗಂಗರಾಜುವಾಗಿ ಹೋಗಿದ್ದೀರೀ. ಅಂದು ಆಡಿದ ಒಂದು ಮಾತಿನಿಂದಲೇ ನಿಮ್ಮ ಜೀ ಸರಿಗಮಪ ಕಾರ್ಯಕ್ರಮದ ಟಿ.ಆರ್.ಪಿ ಬಿದ್ದು ಹೋಗಿ ಅದನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ರವಿಚಂದ್ರನ್, ಅನಿಲ್ ಕುಂಬ್ಲೆ ಈಗ ಟಿವಿ ಧಾರವಾಹಿಯ ವಿವಿಧ ಖ್ಯಾತ ನಾಮರ ಮೊರೆ ಹೋಗಬೇಕಾಗಿರುವ ದೈನೇಸಿ ಸ್ಥಿತಿ ತಲುಪಿಯಾಗಿದೆ. ಈಗ ಈ ರೀತಿ ಧರ್ಮಾಕ್ರೇಸಿ ಅಳಿಯಲಿ ಡೆಮಾಕ್ರೆಸಿ ಗೆಲ್ಲಲ್ಲಿ ಎನ್ನುವ ಅಸಂಬದ್ಧ ಮಾತಿನ ಮೂಲಕ ನಿಮ್ಮ ಮನಸ್ಸಿನಲ್ಲಿರುವ ಕಾರ್ಕೋಟಕ ವಿಷವನ್ನು ಮತ್ತೊಮ್ಮೆ ಕಕ್ಕುವ ಮೂಲಕ ಈ ನಾಡಿನಲ್ಲಿ ನೀವು ಖಂಡಿತವಾಗಿಯೂ ಅಪ್ರಸ್ತುತವಾಗುತ್ತಿದ್ದೀರೀ ಎನಿಸುತ್ತಿಲ್ಲವೇ? ಇಷ್ಟು ವರ್ಷ ನೀವೇ ಕಷ್ಟ ಪಟ್ಟು ಕಟ್ಟಿಕೊಂಡಿದ್ದ ನಿಮ್ಮ ಘನತೆ ಗೌರವವನ್ನು ನಿಮ್ಮೀ ಅಸಂಬದ್ಧ ಪ್ರಲಾಪಗಳ ಮೂಲಕ ನೀವೇ ಹಾಳು ಮಾಡಿಕೊಳ್ಳುತ್ತಿದ್ದೀರಲ್ಲವೇ?
ಇನ್ನು ನಾನು ಮಾಗಡಿ ರೋಡಿನ ಮಹಾ ಪೋಲಿ ನನಗೇಗೆ ಭಯ ? ಎನ್ನುವ ಆಣಿಮುತ್ತನ್ನೂ ಉದುರಿಸಿದ್ದೀರಿ. ದಯವಿಟ್ಟು ನಿಮ್ಮ ಆ ಪೋಲಿತನವೆಲ್ಲಾ ನಿಮ್ಮ ಮನೆ ಮತ್ತು ನಾಲ್ಕು ಗೋಡೆಗಳ ಮಧ್ಯೆ ನೀವು ಹೇಳುವ ಅಸಂಬದ್ಧಕ್ಕೆಲ್ಲಾ ಚಪ್ಪಾಳೆ ತಟ್ಟಿ ಕೇಕೇ ಹಾಕುವ, ಮಾತು ಮಾತಿಗೂ ಬಹುಪರಾಕ್ ಹೇಳುವ ವಂಧಿಮಾದಿಗರಿಗಷ್ಟೇ ಸೀಮಿತವಾಗಿರಬೇಕೇ ಹೊರತು ಪ್ರಬುದ್ಧ ಸಮಾಜದ ಮುಂದಲ್ಲಾ ಎನ್ನುವುದು ನೆನಪಿರಲಿ.
ಧರ್ಮೋ ರಕ್ಷತಿ ರಕ್ಷಿತಃ. ಮಾತು ಆಡಿದರೆ ಹೋಯಿತು. ಮುತ್ತು ಒಡೆದರೆ ಹೋಯಿತು. ಜಾಣನಿಗೆ ಮಾತಿನ ಪೆಟ್ಟು ಕೋಣನಿಗೆ ದೊಣ್ಣೆ ಪೆಟ್ಟು. ಎನ್ನುವ ಗಾದೆ ಮಾತುಗಳು ನಿಮಗೆ ಬಹುಶಃ ತಿಳಿದಿರಬಹುದು. ವೇದ ಸುಳ್ಳಾದರು ಗಾದೆ ಸುಳ್ಳಾಗದು. ಅಲ್ವೇ ಗಂಗರಾಜು?
ಏನಂತೀರಿ?
ನಿಮ್ಮವನೇ ಉಮಾಸುತ