ಸಮಾನತೆ ಎಂದರೆ ಸ್ವೇಚ್ಚಾಚಾರವಲ್ಲ

ಬಹಳ ಹಿಂದೆ ಕರಾವಳಿ ಪ್ರದೇಶದವರು ಎಂದರೆ ಬಹಳ ಶಾಂತಿ ಪ್ರಿಯರು. ಸಂಪ್ರದಾಯ, ಸಂಸ್ಕಾರವಂತರಷ್ಟೇ ಅಲ್ಲದೇ ಸಹೃದಯಿಗಳಾಗಿ ಕುಡಿಯಲು ನೀರು ಕೇಳಿದರೂ, ನೀರಿನ ಜೊತೆ ಸಿಹಿಯಾದ ಬೆಲ್ಲದುಂಡೆಗಳನ್ನು ನೀಡುವಂತಹ ವಿಶಾಲಹೃದಯಿಗಳು. ಇವೆಲ್ಲದರ ಜೊತೆಗೆ ಓದಿನಲ್ಲಿ ಸದಾ ಕಾಲವೂ ಮುಂದಿರುವುದಲ್ಲದೇ, ಬಹಳ ಶ್ರಮದಿಂದ ಎಂತಹ ಕೆಲಸವನ್ನು ಮಾಡಬಲ್ಲವರು ಎಂದೇ ಎಂದೇ ಪ್ರಖ್ಯಾತರಾದವರು.

hijabಆದರೆ ಇತ್ತೀಚಿನ ಕೆಲವು ತಿಂಗಳಿಂದ ಕರಾವಳಿ ಮತ್ತು ಕೇರಳದಲ್ಲಿ ನಡೆಯುತ್ತಿರುವ ಘಟನೆಗಳು ನಿಜಕ್ಕೂ ಬಹಳ ಬೇಸರವನ್ನು ತರಿಸುತ್ತಿದೆ. ಯಾವುದೋ ಮತಾಂಧರ ಮಾತುಗಳಿಗೆ ಬಲಿಯಾಗಿ ವಿದ್ಯೆಗಿಂತಲೂ ಧರ್ಮವೇ ಮುಖ್ಯ ಎಂದು ಉಡುಪಿಗಾಗಿ ಉಡುಪಿಯಿಂದ ಕೇವಲ ಬೆರಳೆಣಿಕೆಯ ಹುಡುಗಿಯರಿಂದ ಆರಂಭವಾದ ಹಿಜಾಬ್ ಖ್ಯಾತೆ, ಇಡೀ ರಾಜ್ಯಕ್ಕೇ ಹರಡಿ ದೇಶದಲ್ಲಿ ಕರ್ನಾಟಕದ ಮರ್ಯಾದೆ ಮೂರಾಬಟ್ಟೆಯಾದದ್ದು ಸುಳ್ಳಲ್ಲ. ಆರಂಭದಲ್ಲಿ ಸಂವಿಧಾನ, ಸಮಾನತೆ ಎಂದೆಲ್ಲಾ ಬೊಬ್ಬೆ ಹೊಡೆದವರು ನ್ಯಾಯಾಲಯದ ತೀರ್ಪು ಅವರ ಪರ ಇಲ್ಲದೇ ಹೋದಾಗ, ನಮಗೆ ದೇಶಕ್ಕಿಂತಲೂ, ವಿದ್ಯೆಗಿಂತಲೂ ನಮ್ಮ ಧರ್ಮವೇ ಮುಖ್ಯ ಎಂಬ ಸಂಕುಚಿತ ಭಾವನೆಯನ್ನು ತೋರಿಸುವ ಮೂಲಕ ದೇಶದ ಭಾವೈಕ್ಯತೆಗೆ ಧಕ್ಕೆ ತಂದದ್ದು ನಿಜಕ್ಕೂ ದುಃಖಕರ

kissing1ಹಿಜಾಬ್ ಕೇಸ್ ಇನ್ನೂ ಉಚ್ಚನ್ಯಾಯಾಲಯದಲ್ಲೇ ಇರುವಾಗಲೇ, ಮಂಗಳೂರಿನ ಶಾಲೆಯೊಂದರ ಕೆಲವು ಅಪ್ರಾಯಸ್ತ ವಿದ್ಯಾರ್ಥಿ ವಿದ್ಯಾರ್ಥಿನಿಯರು ಶಾಲಾ ಸಮವಸ್ತ್ರ ಧರಿಸಿರುವಾಗಲೇ ಪರಸ್ಪರ ತುಟಿಗೆ ತುಟಿ ಕೊಟ್ಟು ಮುತ್ತಿಡುವ ಹಸೀ ಬಿಸಿ ವಿಡಿಯೋಗಳು ಎಲ್ಲೆಡೆಯಲ್ಲಿಯೂ ವೈರಲ್ ಆಗುವ ಮುಖಾಂತರ ಹೆಣ್ಣು ಮಕ್ಕಳನ್ನು ಶಾಲೆಗೆ ಓದಲು ಕಳುಹಿಸುವ ಹೆತ್ತವರನ್ನು ಆತಂಕಕ್ಕೀಡು ಮಾಡುತ್ತಿದ್ದಾರೆ. ತಮ್ಮ ಮಕ್ಕಳು ಕಾಲೇಜಿಗೆ ಹೋಗಿ ಪಾಠ ಕೇಳಿ ಶಾಲೆ ಬಿಟ್ಟ ನಂತರ ನೆಮ್ಮದಿಯಾಗಿ ನೇರವಾಗಿ ಮನೆ ಬರ್ತಾರೆ ಎಂದು ಕೊಂಡ್ರೇ ಹದಿ ಹರೆಯದ ವಯಸ್ಸಿನ ಯುವಕ ಯುವತಿಯರು ಉನ್ಮಾದ ಮತ್ತಿನಲ್ಲಿ ಮಾಡಬಾರಾದಂತಹ ಕೃತ್ಯಗಳಲ್ಲಿ ಭಾಗಿಗಳಾಗುತ್ತಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ.

kissing3ಆಟ ಪಾಠಗಳಲ್ಲಿ ಆರೋಗ್ಯಕರ ಪೈಪೋಟಿ ಇರವುದು ಸಹಜ ಆದರೆ. ಮಂಗಳೂರಿನ ಈ ಪ್ರತಿಷ್ಠಿತ ಕಾಲೇಜಿನ ಪಿಯುಸಿ ವಿದ್ಯಾರ್ಥಿಗಳು ಅಸಹ್ಯಕರ ಕಿಸ್ಸಿಂಗ್ ಸ್ಪರ್ಧೆ ಎನ್ನುವ ಹೆಸರಿನಲ್ಲಿ ಹುಡುಗರ ಕೊಠಡಿಗೆ ತೆರಳಿ ಖುಲ್ಲಾಂಖುಲ್ಲಾ ಚುಂಬಿಸಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಪ್ರಕರಣ ಮಂಗಳೂರು ಸಿಸಿಬಿ ಪೊಲೀಸರವರೆಗೆ ತಲುಪಿ ವಿಡಿಯೋದಲ್ಲಿದ್ದ ಮತ್ತು ಆ ವೀಡಿಯೋ ಮಾಡಿದ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದು ತನಿಖೆ ನಡೆಸುವಾಗ ಆದು ಕೇವಲ ಮತ್ತಿನ ಮುತ್ತಿಗಷ್ಟೇ ಸೀಮಿತವಾಗಿರದೇ ಅದಕ್ಕಿಂತಲೂ ಮುಂದುವರೆದಿರುವ ಆಘಾತಕಾರಿ ವಿಷಯ ಹೊರಬಿದ್ದಿದೆ.

ಕಿಸ್ಸಿಂಗ್ ಸ್ಪರ್ಧೆ ಹೆಸರಿನಲ್ಲಿ ಲಿಪ್ ಲಾಕ್ ಮಾಡಿದ ಬಳಿಕ ವಿದ್ಯಾರ್ಥಿನಿ ವಿದ್ಯಾರ್ಥಿಗಳು ಪೂರ್ತಿ ನಗ್ನವಾಗಿ ತಮ್ಮ ಹದಿಹರೆಹದ ವಾಂಛೆಗಳನ್ನು ತೀರಿಸಿಕೊಂಡಿರುವ ಇಲ್ಲಿ ಬರೆಯಲೂ ಅಸಹ್ಯ ಎನಿಸುವಷ್ಟರ ಮಟ್ಟಿಗೆ ಇರುವ ವಿಡಿಯೋ ಸಹಾ ಪೋಲಿಸರ ಕೈಗೆ ಸಿಕ್ಕು ಪ್ರಕರಣ ಬಹಳ ಗಂಭಿರ ಪರಿಸ್ಥಿತಿಯನ್ನು ತಲುಪಿದೆ. ಕಾಲೇಜಿನ ಯೂನಿಫಾರಂನ ಜೊತೆ ಗುರುತಿನ ಕಾರ್ಡ್ ಕೊರಳಿಗೇ ಹಾಕಿಕೊಂಡು ಈ ಕುಕೃತ್ಯದಲ್ಲಿ ಭಾಗಿಗಳಾಗುವ ಮೂಲಕ ಆ ಕಾಲೇಜಿನ ಮರ್ಯದೆಯನ್ನೂ ಸಹಾ ಹರಾಜಿಗೆ ಹಾಕಿದ್ದಾರೆ. ಸೂಕ್ಷ್ಮವಾಗಿ ಆ ವಿಡೀಯೊವನ್ನು ಗಮನಿಸಿದಾಗ ಈ ಕೃತ್ಯ ಕಾಲೇಜಿನ ಆವರಣದಲ್ಲಿ ನಡೆಯದೇ ಯಾವುದೋ ವಿದ್ಯಾರ್ಧಿಯ ಖಾಸಗಿ ಕೋಣೆಯಲ್ಲಿ ಶೂಟ್ ಮಾಡಿರುವುದು ಸ್ಪಷ್ಟವಾಗಿ ತಿಳಿದು ಬರುತ್ತಿದೆ.

pubಈ ಪ್ರಕರಣ ನಾಡಿನಾತ್ಯಂತ ವೈರಲ್ ಆಗಿ ಪೋಲೀಸರೂ ಸಹಾ ಅದೇ ಪ್ರಕರಣದ ಕುರಿತಂತೆ ತನಿಖೆ ನಡೆಸುತ್ತಿರುವಾಗಲೇ, ಇದಾವುದಕ್ಕೂ ತಲೆಯನ್ನೇ ಕೆಡೆಸಿಕೊಳ್ಳದ ಮಂಗಳೂರಿನ ಮತ್ತೊಂದು ಕಾಲೇಜಿನ ಹುಡುಗ ಹುಡುಗಿಯರು ಫೇರ್ವೆಲ್ ಪಾರ್ಟಿ ಎಂಬ ನೆಪದಲ್ಲಿ ಪಬ್ಬಿನಲ್ಲಿ ಕುಡಿದು ತೂರಾಡುತ್ತಿರುವ ವಿಷಯವೂ ಹೊರಬಿದ್ದಿದೆ. ಮಂಗಳೂರು ನಗರದ ಜ್ಯೋತಿ ವೃತ್ತದ ಬಳಿಯಲ್ಲಿರುವ  ಪಬ್ಬಿನಲ್ಲಿ ತಡ ರಾತ್ರಿಯಲ್ಲೂ ಭರ್ಜರಿಯಾಗಿ ಪಾರ್ಟಿ ನಡೆದಿದ್ದು, ಅಲ್ಲಿದ್ದ ಬಹುತೇಕ ವಿದ್ಯಾರ್ಥಿ ವಿದ್ಯಾರ್ಥಿನಿಯರು ಮದ್ಯಪಾನ ಮಾಡುತ್ತಾ, ಮದ್ಯದ ನಶೆಯಲ್ಲಿ ಮೋಜು ಮಸ್ತಿ ಮಾಡುತ್ತಿದ್ದದ್ದು ಸ್ಥಳೀಯ ಭಜರಂಗದಳ ಕಾರ್ಯಕರ್ತರಿಗೆ ತಿಳಿದು ಅವರುಗಳು ಕುಡಿದು ತೂರಾಡುತ್ತಿದ್ದ ವಿದ್ಯಾರ್ಥಿಗಳನ್ನು ತರಾಟಿಗೆ ತೆಗೆದುಕೊಳ್ಳುತ್ತಿರುವಾಗಲೇ ಸಿನಿಮಾಗಳಲ್ಲಿ ಪೋಲೀಸರು ಬರುವಂತೆ ಅಲ್ಲಿಗೆ ಆಗಮಿಸಿದ ಪೋಲಿಸರು ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ಕ್ರಮ ಕೈಗೊಂಡಿದ್ದಾರೆ.

kissing5ಮಂಗಳೂರಿನ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗಳ ಅಶ್ಲೀಲ ವಿಡಿಯೋ ವೈರಲ್ ಆದಾಗಲೇ ಬಜರಂಗದಳ ಇಂತಹ ಕೃತ್ಯದ ಹಿಂದೆ ಡ್ರಗ್ ಮಾಫಿಯಾ, ಸೆಕ್ಸ್ ಮಾಫಿಯಾ ಜಾಲ ಇರಬಹುದು ಎಂದು ಶಂಕೆ ವ್ಯಕ್ತಪಡಿಸಿ ಆದರ ಕುರಿತಂತೆ, ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿದ್ದಲ್ಲದೇ, ಅದೇ ಕಾಲೇಜಿನ ವಿದ್ಯಾರ್ಥಿನಿಯರು ಕೆಲ ತಿಂಗಳ ಹಿಂದೆ ಮಾದಕ ವಸ್ತು ಸೇವನೆ ಮಾಡಿ ಬೀದಿ ಹೊಡೆದಾಟ ಮಾಡಿ, ಪೊಲೀಸರ ಕೈಗೆ ಸಿಕ್ಕಿಕೊಂಡಿದ್ದ ವಿಷಯವನ್ನೂ ಬಜರಂಗದಳದ ಕಾರ್ಯಕರ್ತರು ನೆನಪಿಸಿರುವುದು ಅಭಿನಂದನಾರ್ಹವಾಗಿದೆ

ಈಗಾಗಲೇ ತಿಳಿಸಿದಂತೆ ಮಂಗಳೂರು, ಉಡುಪಿ, ಚಿಕ್ಕಮಗಳೂರು ಜೆಲ್ಲೆಗಳು ಜ್ಞಾನಾರ್ಜನೆಯ ಪ್ರಮುಖ ಕೇಂದ್ರಗಳಾಗಿದ್ದು ಒಂದು ಕಾಲದಲ್ಲಿ ಬಹುತೇಕ ಎಲ್ಲಾ ಪರೀಕ್ಷೇಗಳಲ್ಲಿಯೂ ರಾಜ್ಯಕ್ಕೆ ಮೊದಲ ಸ್ಥಾನದಲ್ಲಿ ಇರುತ್ತಿದ್ದ ಕಾರಣ, ಅಂತಹ ಉತ್ತಮ ಪರಿಸರದಲ್ಲಿ ತಮ್ಮ ಮಕ್ಕಳೂ ಚನ್ನಾಗಿ ಓದಲೆಂದು ರಾಜ್ಯದ ನಾನಾ ಭಾಗಗಳಲ್ಲದೇ, ದೇಶ ವಿದೇಶಗಳಿಂದಲು ವಿದ್ಯಾರ್ಥಿಗಳನ್ನು ಈ ಪ್ರದೇಶಗಳಿಗೆ ಕಳುಹಿಸಿದರೆ, ವಿದ್ಯಾರ್ಜನೆ ಮಾಡುವುದನ್ನು ಬಿಟ್ಟು ಡ್ರಗ್ ಮಾಫಿಯಾ, ಸೆಕ್ಸ್ ಮಾಫಿಯಾಗಳ ಜಾಲಕ್ಕೆ ಸಿಲುಕಿ ನಲುಗುತ್ತಿರುವುದು ನಿಜಕ್ಕೂ ಆತಂಕದ ವಿಷಯವಾಗಿದೆ. ಇಲ್ಲಿ ಸಿಕ್ಕಿ ಹಾಕಿಕೊಂಡಿರುವ ಬಹುತೇಕರು ಅಪ್ರಾಪ್ತ ವಯಸ್ಸಿನವರಾಗಿರುವ ಕಾರಣ ಪೊಲೀಸರು ಸಹಾ ಆ ವಿದ್ಯಾರ್ಥಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದು ಸಹಾ ಕಾನೂನಿನ ಪ್ರಕಾರ ತೊಂದರೆಯಾಗಿರುವುದನ್ನೇ ಆ ವಿದ್ಯಾರ್ಥಿಗಳು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೇನೋ ಎನ್ನುವ ಅನುಮಾನ ಮೂಡುತ್ತಿರುವುದೂ ಸುಳ್ಳಲ್ಲ.

ಕೆಲ ದಶಕಗಳ ಹಿಂದೆ ಹುಡುಗ ಮತ್ತು ಹುಡುಗಿಯರಿಗೆಂದೇ ಪ್ರತ್ಯೇಕ ಶಾಲಾ ಕಾಲೇಜುಗಳು ಇರುತ್ತಿದ್ದರೆ, ಇನ್ನು ಒಟ್ಟಿಗೆ ಓದುವ ಕಾಲೇಜುಗಳಲ್ಲಿ ಹುಡುಗ ಹುಡುಗಿಯರು ಪರಸ್ವರ ದೂರ ಕುಳಿತುಕೊಂಡು ಒಂದು ರೀತಿಯ ಅಂತರ ಕಾಪಾಡಿಕೊಂಡು ಹೋಗುತ್ತಿದ ಕಾಲವಿತ್ತು. ಚಿಕ್ಕ ಮಕ್ಕಳಿಗೆ ನೀತಿ ಶಿಕ್ಷಣವನ್ನು (moral science) ಕೊಡುವ ಮೂಲಕ ನಮ್ಮ ಸಂಪ್ರದಾಯ ಸಂಸ್ಕಾರಗಳನ್ನು ಹೇಳಿಕೊಡಲಾಗುತ್ತಿತ್ತು. ಆದರೆ ಇಂದು ಹುಡುಗ ಹುಡುಗಿಯರಲ್ಲಿ ಯಾವುದೇ ರೀತಿಯ ಲಿಂಗ ತಾರತಮ್ಯ ಬೇಡ. ಅವರಿಬ್ಬರೂ ಸರಿಸಮಾನರು ಎಂದು ಪಾಶ್ವಾತ್ಯ ಸಂಸ್ಕೃತಿಯಿಂದ ಪ್ರಭಾವಿತರಾದ ಕೆಲವು ಮಹಿಳಾ ಸಂಘಟನೆಗಳು ಗೀಳಿಡಲು ಶುರುಮಾಡಿದದ ಕೂಡಲೇ, ಸಮಾನತೆ ಹೆಸರಿನಲ್ಲಿ ಸ್ವೇಚ್ಚಾಚಾರಕ್ಕೆ ಇಳಿದು ಹೋಗಿರುವುದು ಈ ಸಮಾಜಕ್ಕೆ ಮಾರಕವಾಗಿದೆ. 18 ವರ್ಷ ತುಂಬುವಷ್ಟರಲ್ಲಿಯೇ ಎಲ್ಲಾ ರೀತಿಯ ತೆವಲುಗಳನ್ನು ತೀರಿಸಿಕೊಳ್ಳುವ ಬಯದಲ್ಲಿ ಕಾಮಾತುರಾಣಾಂ ನ ಭಯಂ ನ ಲಜ್ಜಾ ಎಂಬ ಸುಭಾಷಿತವನ್ನು ಅಕ್ಷರಶಃ ನಿಜ ಮಾಡಲು ಹೊರಟಿರುವುದು ನಿಜಕ್ಕೂ ಹೇಯಕರವಾಗಿದೆ.

ಹಿಂದಿನ ಕಾಲದಲ್ಲಿ ಗುರುಗಳು ತಪ್ಪು ಮಾಡಿದ ವಿದ್ಯಾರ್ಥಿಗಳಿಗೆ ಕಿವಿ ಹಿಂಡಿ, ಅಗತ್ಯ ಬಿದ್ದಾಗ ದಂಡಂ ದಶಗುಣಂ ಎಂದು ಕೈಯ್ಯಲ್ಲಿ ಹಿಡಿದ ಬೆತ್ತದಿಂದ ಚುರುಕು ಮುಟ್ಟಿಸುತ್ತಿದ್ದ ಕಾರಣ ಮಕ್ಕಳೆಲ್ಲರೂ ಶಿಸ್ತು ಸಂಯಮವನ್ನು ಕಲಿಯುತ್ತಿದ್ದರು. ಅದೇ ರೀತಿ ಮನೆಯಲ್ಲಿಯೂ ತಂದೆ ತಾಯಿಯರೂ ಹಿರಿಯರು ಸಹಾ ಮಕ್ಕಳಿಗೆ ಸಂಸ್ಕಾರಗಳನ್ನು ಹೇಳಿಕೊಡುತ್ತಿದ್ದರು. ಆದರೆ ಇಂದು ಟಿವಿ ಮತ್ತು ಮೊಬೈಲ್ ಗಳಿಂದಾಗಿ ಅವೆಲ್ಲವೂ ಮರೆಯಾಗಿ ಮಕ್ಕಳ ಕೈಗೆ ಮೊಬೈಲ್ ಕೊಟ್ಟು ಅಪ್ಪಾ ಅಮ್ಮಂದಿರು ಟಿವಿಯ ಮುಂದೆ ಗಂಟೆ ಗಟ್ಟಲೆ ಕೂರಲು ಆರಂಭಿಸಿದ ಸಮಯದಲ್ಲೇ, ಕರೋನ ಆನ್ ಲೈನ್ ಕ್ಲಾಸ್ ಜೊತೆಗೆ ಅಗ್ಗದ ಮೊಬೈಲ್ ಡೇಟಾ ದೊರತ ಮೇಲಂತೂ ಮಕ್ಕಳು ತಂದೆ ತಾಯಿಯರ ಹತೋಟಿ ಕೈ ತಪ್ಪಿದ್ದರು ಎಂದರೂ ತಪ್ಪಾಗದು.

kissing2ಮೊಬೈಲ್ ಕಂಪನಿಗಳು ಪೈಪೋಟಿಯಲ್ಲಿ ಅಗ್ಗದ ಬೆಲೆಯಲ್ಲಿ ಡಾಟಾ ಕೊಟ್ಟ ಮೇಲಂತೂ ಯುವ ಪೀಳಿಗೆ ಇಡೀ ಜಗತ್ತೇ ಮುಷ್ಟಿಯಲ್ಲಿ ದೊರೆತದ್ದಲ್ಲದೇ, ಈ ಸುವರ್ಣಾವಕಾಶಾವನ್ನು ಶಿಕ್ಶಣಕ್ಕಾಗಿ ಬಳಸಿಕೊಳ್ಳದೇ ಆಶ್ಲೀಲ, ಲೈಂಗಿಕ ವೆಬ್ ಸೈಟುಗಳಿಗೆ ಲಗ್ಗೆ ಹಾಕಿದ ಪರಿಣಾಮ ಶಾಲಾ ಕಾಲೇಜುಗಳ ಪರಿಸ್ಥಿತಿ ಹದಗೆಡುತ್ತಿದೆ. ಮನೆಗಳಲ್ಲಿ ಸಂಸ್ಕಾರದ ಕೊರತೆಯ ಜೊತೆಯಲ್ಲೇ ಅತಿಯಾದ ಸ್ವಾತಂತ್ರ್ಯ, ಸವಲತ್ತುಗಳೇ ಮಕ್ಕಳಿಗೆ ಮಾರಕವಾಗಿದೆ.

WhatsApp Image 2022-07-26 at 13.51.04ಇನ್ನು ದೇಶದಲ್ಲೇ ಅತ್ಯಂತ ಸುಶೀಕ್ಷಿತ ಜನರು, ದೇವರು ನಾಡಿನವರು ಎಂದೇ ಹೆಮ್ಮೆ ಪಡುವ ಕೇರಳದಲ್ಲೂ ಹೆಣ್ಣು ಮತ್ತು ಗಂಡು ಮಕ್ಕಳು ಒಟ್ಟಿಗೆ ಕೂರಬೇಡಿ ಎಂದು ಕಾಲೇಜಿನಲ್ಲಿ ಹೇಳಿದ್ದನ್ನು ವಿರೋಧಿಸುವ ಭರದಲ್ಲಿ ಹುಡುಗಿಯರು ಹುಡುಗರ ತೊಡೆಯ ಮೇಲೆ ಕುಳಿತುಕೊಂಡು ಪ್ರತಿಭಟಿಸಿರುವ ಘಟನೆಯನ್ನೂ ಸಹಾ ಮಾಧ್ಯಮದಲ್ಲಿ ನೋಡಿದಾಗ, ಇದೇನಾ ಸಭ್ಯತೇ? ಇದೇನಾ ಸಂಸ್ಕೃತಿ? ಎಂದು ಕಲ್ಪನಾ ನಟನೆಯ ಚಿತ್ರದ ಹಾಡು ನೆನಪಾಗಿದ್ದು ಸುಳ್ಳಲ್ಲ.

ಈ ಎಲ್ಲಾ ಘಟನೆಗಳಿಗೆ ಕೇವಲ ವಿದ್ಯಾರ್ಥಿಗಳನ್ನು ಮತ್ತು ಶಿಕ್ಷಕರನ್ನು ದೂಷಿಸುವ ಬದಲು, ತಾವು ಚಿಕ್ಕವರಿದ್ದಾಗ ತಮಗೆ ಸಿಗದೇ ಹೋದ ಸೌಲಭ್ಯಗಳು ತಮ್ಮ ಮಕ್ಕಳಿಗೆ ಸಿಗದೇ ಹೋಗಬಾರದು ಎಂದು ಮಕ್ಕಳು ಕೇಳಿದ್ದನ್ನೆಲ್ಲವನ್ನೂ ಅಥವಾ ಕೇಳುವ ಮೊದಲೇ, ದುಬಾರಿಯಾದ ಬೈಕ್, ಮೊಬೈಲು, ವಾಚು ಕನ್ನಡಕಗಳನ್ನು ಕೊಡಿಸಿ ಅಗತ್ಯಕ್ಕಿಂತಲೂ ಹೆಚ್ಚಾದ ಹಣವನ್ನು ಮಕ್ಕಳ ಕೈಗಿತ್ತು, ಅದರ ಲೆಕ್ಕವನ್ನು ಕೇಳದೇ ಹೋದಾಗ, ಮಕ್ಕಳು ಶೋಕಿಯ ಜೊತೆ ಹಾದಿ ತಪ್ಪಿದ್ದರಲ್ಲಿ ಪೋಷಕರದ್ದೇ ಹೆಚ್ಚಿನ ತಪ್ಪು ಎಂದೇ ಭಾವಿಸ ಬೇಕಾಗುತ್ತದೆ. ಹಾಗಾಗಿ ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಒಳ್ಳೆಯ ಸಂಸ್ಕಾರ, ಸಂಪ್ರದಾಯಗಳನ್ನು ಹೇಳಿಕೊಟ್ಟು ತಪ್ಪು ಮಾಡಿದಾಗ ಕಿವಿ ಹಿಂಡಿ, ಸರಿ ಮಾಡಿದಾಗ ಬೆನ್ನು ತಟ್ಟಿ ಶಿಸ್ತಿನಿಂದ ಬೆಳೆಸಿದರೆ ಮಕ್ಕಳು ಈ ರೀತಿಯಲ್ಲಿ ದಾರಿ ತಪ್ಪುವ ಸಾಧ್ಯತೆ ಕಡಿಮೆ ಇರುತ್ತದೆ. ಯಥಾ ರಾಜಾ ತಥಾ ಪ್ರಜೆ ಎನ್ನುವುದು ಖಂಡಿತಾ ಸತ್ಯವಲ್ಲವೇ? ಹಾಗಾಗಿ ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಎಂಬುದನ್ನು ಮನದಲ್ಲಿಟ್ಟುಕೊಂಡು ಮುಳ್ಳಿನ ಮೇಲೆ ಬಿದ್ದ ಪಂಚೆಯನ್ನು ಜೋಪಾನವಾಗಿ ಎತ್ತಿಕೊಳ್ಳದೇ ಹೋದಲ್ಲಿ ಪಂಚೆಯೇ ಹರಿಯುವಂತೆ, ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ? ಎನ್ನುವಂತೆ ಚಿಕ್ಕಂದಿನಿಂದಲೇ ಸರಿಯಾಗಿ ಬುದ್ಧಿ ಕಲಿಸದೇ ಹೋದಲ್ಲಿ, ಮಕ್ಕಳ ಭವಿಷ್ಯವನ್ನು ಪೋಷಕರೇ ಹಾಳು ಮಾಡಿದಂತಾಗುತ್ತದೆ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

Leave a comment