ಹೇಳಿ ಕೇಳಿ ಕರ್ನಾಟಕ ಶಾಂತಿ ಪ್ರಿಯರ ನಾಡು. ಕನ್ನಡಿಗರು ಎಂದಿಗೂ ಯಾರೊಂದಿಗೂ ತಮ್ಮಿಂದ ತಾವೇ ಧಾಳಿ ಮಾಡಿದವರಲ್ಲ. ಆದರೂ ಕರ್ನಾಟಕದಲ್ಲಿ ಇತ್ತೀಚಿನ ಕೆಲವು ವರ್ಷಗಳಿಂದಲೂ ಪಕ್ಕದ ರಾಜ್ಯ ಕೇರಳದಿಂದ ಪ್ರಭಾವಿತರಾಗಿ ಅವವನ್ನೂ ಮೀರಿಸುವಷ್ಟು ಅವ್ಯಾಹತವಾಗಿ ನಡೆಯುತ್ತಿರುವ ಹಿಂದೂ ಕಾರ್ಯಕರ್ತರ ಕಗ್ಗೊಲೆ ನಿಜಕ್ಕೂ ಹಿಂದೂ ಕಾರ್ಯಕರ್ತರ ಕುಟುಂದವರನ್ನು ಬೆಚ್ಚಿ ಬೀಳಿಸುತ್ತಿದೆ.
ಇಂತಹ ಸಂಧರ್ಭದಲ್ಲಿಯೇ ಶ್ರೀ ಗಜಾನನ ಶರ್ಮಾ ಅವರ ವಿರಚಿತ
ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ| ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ||
ನೀನಿಷ್ಟದಂತೆನ್ನ ಇಟ್ಟಿರುವೆ ರಾಮ| ನನ್ನಿಷ್ಟದಂತೆಲ್ಲ ಕೊಟ್ಟಿರುವೆ ರಾಮ|
ಕಷ್ಟಗಳ ಕೊಡಬೇಡ ಎನ್ನಲಾರೆ ರಾಮ| ಕಷ್ಟ ಸಹಿಸುವ ಸಹನೆ ಕೊಡು ನನಗೆ ರಾಮ| ಎಂಬ ಹಾಡು ನೆನಪಾಗಿ ಮತಾಂಧತೆಗೆ ಇನ್ನೆಷ್ಟು ಹಿಂದೂ ಕಾರ್ಯಕರ್ತರು ಬಲಿಯಾಗ ಬೇಕೋ ರಾಮಾ? ನೆಮ್ಮದಿ ದೊರೆಯುವುದೆಂದೋ ರಾಮಾ? ಎಂಬ ಆಕ್ರೋಶ ಹಿಂದೂಗಳಲ್ಲಿ ಮೂಡುತ್ತಿರುವುದು ನಿಜಕ್ಕೂ ಛೇದವೆನಿಸುತ್ತಿದೆ.
ಶಿವಮೊಗ್ಗದಲ್ಲಿ ಹರ್ಷಾ ಮತ್ತು ಬೆಂಗಳೂರಿನ ಗೋರೀಪಾಳ್ಯದಲ್ಲಿ ಕ್ಷುಲ್ಲುಕ ಕಾರಣಕ್ಕೆ ಚಂದ್ರುವಿನ ಕೊಲೆಯಾಗಿದ್ದನ್ನು ಅರಗಿಸಿಕೊಳ್ಳುವ ಮುನ್ನವೇ, ಕರಾವಳಿ ಭಾಗದ ಬಿಜೆಪಿ ಯುವ ಮೋರ್ಚಾ ಮುಖಂಡ ಮತ್ತು ಸಾಮಾಜಿಕ ಕಾರ್ಯಕರ್ತನಾಗಿದ್ದ, ಕೇವಲ ಎರಡು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಪ್ರವೀಣ್ ನೆಟ್ಟಾರು ಎಂಬ ಯುವಕನನ್ನು ದುಷ್ಕರ್ಮಿಗಳ ತಂಡ ಬರ್ಬರವಾಗಿ ಕೊಚ್ಚಿ ಕೊಲೆಗೈದ ಘಟನೆ ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ನಡೆದಿದೆ.
ಬೆಳ್ಳಾರೆಯಲ್ಲಿ ವೃತ್ತಿಯಲ್ಲಿ ಕೋಳಿ ಅಂಗಡಿ ನಡೆಸುತ್ತಾ ಪ್ರವೃತ್ತಿಯಲ್ಲಿ ಹಿಂದೂ ಧಾರ್ಮಿಕ ಚಟುವಟಿಕೆಗಳಲ್ಲಿ ಅಗ್ರೇಸರನಾಗಿದ್ದ ಪ್ರವೀಣ್ ನೆಟ್ಟಾರು ರಾತ್ರಿ ಅಂಗಡಿ ಮುಚ್ಚುವ ವೇಳೆಗೆ ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಏಕಾ ಏಕಿ ಪ್ರವೀಣನ ಮೇಲೆ ಧಾಳಿ ನಡೆಸಿ, ನಂತರ ಕಾರಿನಲ್ಲಿ ಪರಾರಿಯಾಗಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಪ್ರವೀಣ್‌ನನ್ನು ಪುತ್ತೂರು ಆಸ್ಪತ್ರೆಗೆ ಸಾಗಿಸುವ ದಾರಿಯ ಮಧ್ಯೆಯೇ ಆತ ಮೃತಪಟ್ಟಿರುವುದು ನಿಜಕ್ಕೂ ದುಃಖಕರ ಸಂಗತಿಯಾಗಿದೆ.
ಕೆಲ ದಿನಗಳ ಹಿಂದಷ್ಟೇ ಬೆಳ್ಳಾರೆಯಲ್ಲಿ ಕಾಸರಗೋಡು ನಿವಾಸಿ ಮಸೂದ್(18) ಎಂಬಾತನ ಕೈ ಸುಧೀರ್ ಎಂಬುವವನಿಗೆ ತಗುಲಿದ್ದ ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ಮಸೂದನಿಗೆ ಬಾಟಲಿಯಿಂದ ತಲೆಗೆ ಹಲ್ಲೆ ನಡೆದಿದ್ದು, ಚಿಕಿತ್ಸೆ ಫಲಿಸದೇ ಮಸೂದ್ ಸಾವನ್ನಪ್ಪಿದ್ದಕ್ಕೆ ಪ್ರತೀಕಾರವಾಗಿ ಆ ಪ್ರಕರಣದಲ್ಲಿ ಭಾಗಿಯೇ ಆಗಿರದ ಬಿಜೆಪಿ ಮುಖಂಡ ಪ್ರವೀಣನನ ಕೊಲೆ ಮಾಡಿರಬಹುದು ಎಂದು ಪೋಲೀಸರು ಶಂಕೆ ವ್ಯಕ್ತಪಡಿಸಿ ಈ ಕುರಿತಂತೆ ಕೆಲವು ಶಂಕಿತರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಮೃತಪಟ್ಟವರ ಕುಟುಂಬದ ಆಕ್ರೋಶ ಮುಗಿಲು ಮುಟ್ಟಿದ್ದರೆ, ಯಥಾ ಪ್ರಕಾರ ಹಿಂದೂ ಪರ ಸಂಘಟನೆಗಳು, ಈ ರೀತಿಯ ಅವಘಡಗಳು ಇದೇ ಕೊನೆಯಾಗಲೀ, ಮುಂದೆಂದೂ ನಮ್ಮ ಹಿಂದೂ ಕಾರ್ಯಕರ್ತರ ಹತ್ಯೆಗಳಾಗದಿರಲಿ ಎಂದು ಆಶೀಸುತ್ತಾ, ಮತಾಂಧರ ದಾಳಿಗೆ ಬಲಿಯಾದ ಕಾರ್ಯಕರ್ತರ ಕುಟುಂಬಕ್ಕೆ ಆರ್ಥಿಕ ನೆರವನ್ನು ನೀಡುವ ಸಲುವಾಗಿ ಕೊಟ್ಟ ಬ್ಯಾಂಕ್ ಅಕೌಂಟ್ ನಂಬರಿಗೆ ಹಣ ಹಾಕಲು ಕೋರಿದರೆ, ಅದಕ್ಕೆ ದೇಶಾದ್ಯಂತ ಅಸಂಖ್ಯಾತ ವಿಶಾಲ ಹೃದಯೀ ಹಿಂದೂಗಳೂ ಸಹಾ ಸತ್ತವನು ತಮ್ಮ ಸಮೀಪದ ಬಂಧುವೇನೋ ಎನ್ನುವಂತೆ, ಇದೇ ತಮ್ಮ ಕೊನೆಯ ಸಹಾಯವಾಗಲಿ, ಮತ್ತಿನ್ನೆಂದೂ ಈ ರೀತಿ ನಮ್ಮ ಹಿಂದೂ ಕಾರ್ಯಕರ್ತರ ಪ್ರಾಣ ಬಲಿಗೆ ಸಹಾಯ ನೀಡದಂತಾಗಲೀ ಎಂದು ಪ್ರಾರ್ಥಿಸುತ್ತಲೇ ತಮ್ಮ ಕೈಲಾದ ಮಟ್ಟಿಗಿನ ಸಹಾಯ ಮಾಡಲು ಮುಂದಾಗುತ್ತಿದ್ದಾರೆ.
ನಿಜ ಹೇಳ ಬೇಕೆಂದರೆ, ದುಷ್ಕರ್ಮಿಗಳಿಂದ ವಿನಾಕಾರಣ ಪೆಟ್ಟು ತಿಂದು ಸತ್ತು ಸತ್ತು ಬದುಕಿದವರನ್ನು ಮತ್ತು ಅವರ ಕುಟುಂಬದ ಬವಣೆಗಳನ್ನು ಹತ್ತಿರದಿಂದ ನೋಡಿರುವುದಲ್ಲದೇ, ಪರೋಕ್ಷವಾಗಿ ಅದರ ಪರಿಣಾಮವನ್ನು ಇಂದಿಗೂ ವಯಕ್ತಿಕವಾಗಿ ಅನುಭವಿಸುತ್ತಿರುವವರಲ್ಲಿ ನಾನೂ ಒಬ್ಬ. ಕೆಲ ವರ್ಷಗಳ ಹಿಂದೆ, ಬೆಂಗಳೂರಿನ ವಿದ್ಯಾರಣ್ಯಪುರದ ನಮ್ಮ ಆತ್ಮೀಯರೊಬ್ಬರಿಗೆ ಕಾರಣವಿಲ್ಲದೇ ದುಷ್ಕರ್ಮಿಗಳು ಮಾರಾಣಾಂತಿಕ ಹಲ್ಲೆ ನಡೆದಾಗ, ಅದಕ್ಕೆ ಹಿಂದೂ ಪರ ಸಂಘಟನೆಗಳು ಮತ್ತು ಸಮಾಜ ಸ್ಪಂದಿಸಿದ ರೀತಿ ಒಂದು ಕಡೆಯಾದರೇ, ಯಥಾ ಪ್ರಕಾರ ಆಡಳಿತ ಪಕ್ಷ /ವಿರೋಧ ಪಕ್ಷದ ನಾಯಕರುಗಳು ಈ ಪ್ರಕರಣದಲ್ಲಿ ತಮ್ಮ ಬೇಳೆ ಬೇಯಿಸಿಕೊಂಡರೆ, ಇನ್ನು ಅಪರಾಧಿಗಳು ಯಾರೆಂದು ಗೊತ್ತಿದ್ದರೂ, ಅದಾವುದೋೂ ಒತ್ತಡಕ್ಕೆ ಮಣಿದು ತನಿಖೆಯ ಹೆಸರಿನಲ್ಲಿ ಪೋಲೀಸರು ತಿಪ್ಪೇ ಸಾರಿಸಿದ್ದನ್ನು ಕಂಡಿದ್ದೇನೆ.
ಹೆಲ್ಲೆಗೊಳಗಾದ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸುವುದರಿಂದ ಹಿಡಿದು, ಆಸ್ಪತ್ರೆಯಿಂದ ಬಿಡುಗಡೆ ಮಾಡಿ ಮನೆಗೆ ಕಳುಹಿಸುವವರೆಗೂ, ವಿವಿಧ ಸಂಘಟನೆಗಳ ಕಾರ್ಯಕರ್ತರು ಆಸ್ಪತ್ರೆಯಲ್ಲಿ ತಮ್ಮ ಒಡಹುಟ್ಟಿದವರಿಗಿಂತಲೂ ಹೆಚ್ಚಿಗೆ ಆರೈಕೆ ಮಾಡಿರುವುದಲ್ಲದೇ, ನೂರಾರು ಮನೆಗಳಿಂದ ಕಾಲ ಕಾಲಕ್ಕೆ ಸರಿಯಾಗಿ ಊಟ ತಿಂಡಿ ಹಣ್ಣು ಹಂಪಲುಗಳ ವ್ಯವಸ್ಥೆ ಮಾಡಿದ್ದದ್ದನ್ನು ನೋಡಿದ ಹಲ್ಲೆಗೆ ಒಳಗಾದ ವ್ಯಕ್ತಿಯ ತಾಯಿ, ಇಷ್ಟು ದಿನ ನನಗೆ ಒಬ್ಬನೇ ಮಗ ಎಂದು ಕೊಂಡಿದ್ದೆ. ಈಗ ನನಗೆ ನೂರಾರು ಮಕ್ಕಳಿದ್ದಾರೆ ಎಂದಿದ್ದಲ್ಲದೇ, ಅದೇ ರೀತಿ ಪೋಲೀಸರೊಂದಿಗೆ ಆರೋಪಿಗಳ ಬಂಧನಕ್ಕೆ ಓಡಾಡುತ್ತಿದ್ದ ನನ್ನನ್ನು ಕರೆದು, ದಯವಿಟ್ಟು ನಮ್ಮ ಮನೆಯಲ್ಲೂ ಹೆಣ್ಣು ಮಕ್ಕಳಿದ್ದಾರೆ. ಹಾಗಾಗಿ ಸುಮ್ಮನೇ ಆ ದುಷ್ಕರ್ಮಿಗಳನ್ನು ಎದುರಿ ಹಾಕಿಕೊಳ್ಳುವುದು ಬೇಡ. ಹೇಗೂ ಮಗ ಪ್ರಾಣಾಪಾಯದಿಂದ ಬದುಕುಳಿದು ಬಂದಿರುವ ಕಾರಣ ತನಿಖೆಯನ್ನು ಇಲ್ಲಿಗೇ ಬಿಟ್ಟು ಬಿಡುವುದು ಒಳ್ಳೆಯದು ಎನ್ನುವ ಭಯದ ಆತಂಕ ವ್ಯಕ್ತಪಡಿಸಿದ್ದು ಇನ್ನೂ ನನ್ನ ಮನದಲ್ಲಿ ಹಚ್ಚ ಹಸಿರಾಗಿಯೇ ಇದೆ.
ಈ ಪ್ರಕರಣ ನಡೆದ ನಂತರ ಅನೇಕ ನನ್ನ ಹಿತೈಷಿಗಳು ಮನೆಗೆ ಬಂದು ನನ್ನೆ ಮಡದಿಯ ಬಳಿ ನೆನ್ನೆ ಅವರಿಗೆ ಆಗಿದ್ದು ನಾಳೆ ನಿಮ್ಮ ಮನೆಯವರ ಮೇಲೂ ಆಗಬಹುದು. ಹಾಗಾಗಿ ಇನ್ನು ಮುಂದೆ ಸುಮ್ಮನೇ ನಿಮ್ಮ ಮನೆಯವರಿಗೆ ಯಾವುದೇ ಸಂಘಟನೆಗಳಿಗೆ ಹೋಗುವುದಾಗಲೀ ಅಥವಾ ಅವರ ಪರ ವಿರೋಧವಾಗಲೀ ಲೇಖನ ಬರೆಯದಂತೆ ಹೇಳಮ್ಮಾ ಎಂದು ಎಂದು ಹೇಳಿದರೆ, ಇನ್ನೂ ಕೆಲವರು ನೇರವಾಗಿ ನನಗೇ ಇದೇ ರೀತಿಯ ಆತಂಕವನ್ನು ವ್ಯಕ್ತ ಪಡಿಸಿ ಎಚ್ಚರಿಯನ್ನೂ ನೀಡಿದ್ದು ಇನ್ನೂ ಮರಯಲಾಗದು. ಇದನ್ನೆಲ್ಲಾ ಕೇಳಿ ಮನೆಯಲ್ಲಿ ದೇವರ ಮೇಲೆ, ಹೆಂಡತಿ ಮಕ್ಕಳ ಮೇಲೇ ಕುಟುಂಬದವರು ಆಣೆ ಪ್ರಮಾಣ ಮಾಡಿಸಿಕೊಂಡದ್ದೂ ಆಗಿದೆ.
ಆದರೆ ಏನು ಮಾಡುವುದು, ಹುಟ್ಟು ಗುಣ ಸುಟ್ಟರೂ ಹೋಗದು ಎನ್ನುವಂತೆ ಇಂತಹ ಘಟನೆಗಳು ನಡೆದಾಗ ಒಂದೆರಡು ದಿನ ಮನೆಯಲ್ಲೇ ಸುಮ್ಮನಿದ್ದು ನಂತರ ದಿನಗಳಲ್ಲಿ ಇಲ್ಲೇ ಬಂದೆ ಎಂದು ವಿವಿಧ ಸಂಘಟನೆಗಳ ಚಟುವಟಿಕೆಗಳಲ್ಲಿ ಭಾಗವಹಿಸುತ್ತಲೇ ಬಂದಿದ್ದೇನೆ. ಇಂದಿಗೂ ಸಹಾ ರಾಜಕೀಯ ಅಥವಾ ಧರ್ಮ ಸೂಕ್ಷ್ಮಾಧಾರಿತ ಲೇಖನಗಳನ್ನು ಬರೆದಲ್ಲಿ, ಮನೆಯಲ್ಲೇ ನ್ಯಾಯಾಲಯಕ್ಕೂ ಮೀರಿಸುವಷ್ಟು ಹೆಂಡತಿ ಮಕ್ಕಳ ವಿಚಾರಣೆ ಆರಂಭವಾಗಿ, ನಿಮಗೆ ಇದು ಬೇಕಿತ್ತಾ? ದೇಶ, ಧರ್ಮ, ಸಮಾಜ ಅಂತಾ ಮೂರು ಹೊತ್ತೂ ಓಡಾಡ್ತೀರಲ್ಲಾ, ನಿಮ್ಮನ್ನು ನೆಚ್ಚಿಕೊಂಡು ನಾವೆಲ್ಲರೂ ಇದ್ದೀವಿ ಎಂಬುದು ನೆನಪೇ ಆಗೋದಿಲ್ವಾ? ನಾಳೆ ಅದ್ಯಾವನೋ ತಲೆ ಕೆಟ್ಟವನು ನಿಮಗೆ ಹೆಚ್ಚು ಕಡಿಮೆ ಮಾಡಿದರೆ ಅನುಭವಿಸುವವರು ನಾವೇ ಅಲ್ವೇ ? ಎಂದು ಭಾವನಾತ್ಮಕವಾಗಿ ಬ್ಲಾಕ್ಮೇಲ್ ಮಾಡುತ್ತಲೇ ಇರುತ್ತಾರೆ. ಇದನ್ನೇ ನೆನ್ನೆ ಪ್ರವೀಣ್ ಅವರ ಹೆಂಡತಿಯೂ ಹೇಳಿದ್ದು. ಹರ್ಷನ ಅಕ್ಕನೂ ಕೆಲ ದಿನಗಳ ಹಿಂದೆ ಸನ್ಮಾನ್ಯ ಗೃಹಮಂತ್ರಿಗಳಲ್ಲಿ ಇದನ್ನೇ ಕೇಳಿಕೊಂಡಿದ್ದು.
ಇದುವರೆವಿಗೂ ಕೊಲೆ ಆದ ಬಹುತೇಕ ಪ್ರಕರಣಗಳಲ್ಲಿ ಕೊಲೆ ಮಾದಿದ ಆರೋಪಿಗಳನ್ನು ಗಮನಿಸಿದಲ್ಲಿ ಅವರೆಲ್ಲರೂ ಒಂದೇ ಕೋಮಿಗೆ ಸೇರಿದ್ದು ಬಹುತೇಕರು ಅನಕ್ಷರಸ್ಥರು ಮತ್ತು ಒಂದಲ್ಲಾ ಒಂದು ಚಟಕ್ಕೆ ಬಿದ್ದ ವ್ಯಸನಿಗಳಾಗಿರುತ್ತಾರೆ. ಅಂತಹವರಿಗೆ ಧರ್ಮದ ಅಫೀಮನ್ನು ತಿನ್ನಿಸಿ, ನಿಮಗೇನಾದರೂ ನಿಮ್ಮ ಕುಟುಂಬವನ್ನು ನಾವು ನೋಡಿಕೊಳ್ಳುತ್ತೇವೆ. ಸತ್ತು ಸ್ವರ್ಗಕ್ಕೆ ಹೋದರೆ, 72 ಕನ್ಯಾಮಣಿಗಳು ನಿಮ್ಮ ಸೇವೆಗೆ ಸಿದ್ಧರಿರುತ್ತಾರೆ ಎಂದು ಕಾಣದ ಲೋಕದ ಆಸೆಯನ್ನು ತೋರಿಸಿ ಪ್ರೇರೇಪಿಸಿ ನಡೆಸಿದ ಕುಕೃತ್ಯಗಳೇ ಹೆಚ್ಚಾಗಿರುತ್ತವೆ. ಇನ್ನು ಯಾವುದೇ ಪಕ್ಷದ ಸರ್ಕಾರಗಳು ಬಂದರೂ ಆ ಒಂದು ಕೋಮಿನ ಓಟಿನಾಸೆಗೆ ಬಂಧಿಸುವ ನಾಟಕವಾಡಿ, ಸೆರೆಮನೆಗೆ ತಳ್ಳಿ, ಜನರ ತೆರಿಗೆ ಹಣದಲ್ಲಿ ಬಿರ್ಯಾನಿ ತಿನ್ನಿಸುತ್ತಾ, ಕಾಲಕಾಲಕ್ಕೆ ಅವರಿಗೆ ಮತ್ತು ಅವರ ಕುಟುಂಬಕ್ಕೆ ಹಣ ಕೊಡುತ್ತಾ ಜೈಲಿನಿಂದಲೇ online meeting, Reals ಮಾಡುತ್ತಾ ಮೋಜು ಮಸ್ತಿಯಲ್ಲಿ ಇರಲು ಬಿಡುವುದಲ್ಲದೇ, ವಸತಿ, ಊಟ, ತಿಂಡಿಯ ಜೊತೆಗೆ ದಿನವೊಂದಕ್ಕೆ 550/- ಕೂಲಿ ನೀಡುತ್ತಿರುವಾಗ, ಅಪರಾಧಿಗಳಿಗೆ ಹೊರಗೆ ಇರುವುದಕ್ಕಿಂತಲೂ ಸುರಕ್ಷಿತವಾಗಿ ಒಳಗೇ ಕೆಲ ವರ್ಷಗಳ ಕಾಲ ಆರಾಮಾಗಿ ಇರಿಸಿ, ನಂತರದ ದಿನಗಳಲ್ಲಿ ಅವರ ಪರವಾದ ಸರ್ಕಾರ ಬಂದಾಗ ಬಿಟ್ಟು ಕಳಿಸುವುದರಿಂದ ಮತಾಂಧರಿಗೆ/ದುಷ್ಕರ್ಮಿಗಳಿಗೆ ಭಯವೇ ಇಲ್ಲದಂತಾಗಿದೆ.
ಹಾಗಾಗಿ ಹಿಂದೂಗಳ ಮೇಲಿನ ಹತ್ಯೆ, ಬೆದರಿಗೆ, ಕೊಲೆಗಳಿಗೆ ಆಡಳಿತ ಸರ್ಕಾರವಾಗಲೀ, ರಾಜಕೀಯ ವ್ಯಕ್ತಿಗಳನ್ನಾಗಲೀ ದೂಷಿಸುವುದು ಸರಿಕಾಣದು. ಏಕೆಂದರೆ ಯಾವ ಪಕ್ಷ ಆಡಳಿತಕ್ಕೆ ಬಂದರೂ ಇದೊಂದು ವಿಷಯದಲ್ಲಿ ಯಾವ ಬದಲಾವಣೆಯೂ ಆಗದಿರುವ ಕಾರಣ, ಅವರನ್ನು ದೂಷಿಸುವ ಬದಲು ನಾವು ನಮ್ಮ ಮಠ ಮಾನ್ಯಗಳನ್ನೇ ಹೊಣೆಗಾರಿಕೆ ಮಾಡಬೇಕು. ಹೆಸರಿಗಷ್ಟೇ ಜಾತ್ಯಾತೀತ ರಾಷ್ಟ್ರವಾದರೂ, ಜಾತಿಗೊಂದು ಮಠ ಅದಕ್ಕೊಬ್ಬರು ಮಠಾಧಿಪತಿಗಳು, ಮೂರು ದಿನಕ್ಕೊಮ್ಮೆ ಸರದಿ ಸಾಲಿನಂತೆ ನಮ್ಮ ಜಾತಿಗೆ ಹೆಚ್ಚಿನ ಮೀಸಲಾತಿ ಕೊಡಿ, ನಮ್ಮ ಜಾತಿಯವರನ್ನು ಶಾಸಕ/ಸಾಂಸದರನ್ನು ಮಾಡಿ, ನಾವು ಹೇಳಿದವರನ್ನೇ ಮಂತ್ರಿ ಮುಖ್ಯಮಂತ್ರಿ ಮಾಡಿ ಎಂದು ಬೀದಿಗಿಳಿದು ಪ್ರತಿಭಟನೆ ಮಾಡುವ ವಿವಿಧ ಹಿಂದೂ ಮಠಾಧಿಪತಿಗಳು, ಹಿಂದೂಗಳ ಹತ್ಯೆಯಾದಾಗ ಅದೇಕೆ ದಿವ್ಯ ಮೌನವನ್ನು ವಹಿಸುತ್ತವೇ? ಅದ್ಯಾಕೆ ಒಗ್ಗಟ್ಟಾಗಿ ಹಿಂದೂ ಪರ ಬೀದಿಗಿಳಿದು ಪ್ರತಿಭಟನೆ ನಡೆಸುವುದಿಲ್ಲ?
ನಿಜ ಹೇಳ ಬೇಕೆಂದರೆ ಪ್ರತಿಯೊಂದು ಮಠಗಳೂ ಒಗ್ಗಟ್ಟಾಗಿ ಜಾತಿ ಮತ ಮೇಲು ಕೀಳು ಹಂಗಿಲ್ಲದೇ, ಹಳ್ಳಿ ಹಳ್ಳಿಗಳಲ್ಲಿ ಮಠ, ಮಂದಿರಗಳನ್ನು ಕಟ್ಟಿ, ದಿನನಿತ್ಯವೂ ಆರೋಗ್ಯಕರವಾದ ರೀತಿಯಲ್ಲಿ ಒಂದಲ್ಲಾ ಒಂದು ಧಾರ್ಮಿಕ ಚಟುವಟಿಕೆಗಳನ್ನು ನಡೆಸಿ ನಾವೆಲ್ಲಾ ಹಿಂದೂ ನಾವೆಲ್ಲಾ ಒಂದು ಎಂಬ ಘೋಷಣೆಯನ್ನು ಅಕ್ಷರಶಃ ಜಾರಿಗೆ ತಂದಲ್ಲಿ, ಅದ್ಯಾವ ಶಕ್ತಿ ಈ ರೀತಿ ಹಿಂದೂಗಳ ಮೇಲೆ ಧಾಳಿ ಮಾಡಲು ಮುಂದಾಗುತ್ತದೆ? ಅದ್ಯಾವ ಮಿಷಿನರಿಗಳು ಮತಾಂತರ ಮಾಡಲು ಬರುತ್ತಾರೆ? ಆದ್ಯಾವ ಗಂಡು ಲವ್ ಜಿಹಾದ್ ಮಾಡಲು ಮುಂದಾಗುತ್ತಾನೆ? ಎಂಬುದನ್ನು ನೋಡೇ ಬಿಡುವ.
ಹಿಂದೂಗಳಲ್ಲಿ ಅಂದು, ಇಂದು ಒಗ್ಗಟ್ಟಿಲ್ಲದಿರುವುದನ್ನೇ ಬಂಡವಾಳ ಮಾಡಿಕೊಂಡೇ, ಅನ್ಯಧರ್ಮೀಯರು ಮತ್ತು ಕೆಲ ರಾಜಕೀಯ ಪಕ್ಷಗಳು ನಮ್ಮಲ್ಲೇ ದಲಿತ, ಬಲಿತ, ಮೇಲು ಕೀಳು ಎಂದು ಮತ್ತೆ ಮತ್ತೆ ಹಿಂದೂ ಸಮಾಜವನ್ನು ಒಡೆಯುತ್ತಲೇ ಹೋಗುತ್ತಿರುವುದೇ ಇಂತಹ ಕುಕೃತ್ಯಗಳಿಗೆ ಕಾರಣವಾಗಿದೆ. ಇಡೀ ಪ್ರಪಂಚದಲ್ಲಿ ಅನ್ಯ ಧರ್ಮೀಯರಿಗೆ ನೂರಾರು ದೇಶಗಳಿದ್ದರೆ, ಹಿಂದೂಗಳಿಗೆ ಇರುವುದು ಕೇವಲ ಮತ್ತು ಕೇವಲ ಭಾರತವೊಂದೇ. ಹಾಗಾಗಿ ಕೈಲಾಗದ ಈ ಸರ್ಕಾರವನ್ನೇ ಟೀಕಿಸುತ್ತಾ, ನಮ್ಮ ವಿರೋಧಿಗಳಿಗೆ ನಾವೇ ಜಾಗ ಮಾಡಿಕೊಡುವ ಬದಲು ನಮ್ಮ ತತ್ವ, ಸಿದ್ಧಾಂತ, ಬದ್ದತೆ ಮತ್ತು ಕಾರ್ಯತತ್ಪರತೆಗಳನ್ನು ಒಗ್ಗಟ್ಟಾಗಿ ಪ್ರದರ್ಶಿಸೋಣ. ನೆನ್ನೆ ಸ್ಥಳೀಯ ಸಾಂಸದ ಮತ್ತು ಆಡಳಿತ ಪಕ್ಷದ ರಾಜ್ಯಾಧ್ಯಕ್ಷರ ಕಾರನ್ನು ಅಲುಗಾಡಿಸಿದ್ದಕ್ಕೇ ಇಂದು ನಡೆಯಬೇಕಾಗಿದ್ದ ಜನೋತ್ಸವವನ್ನು ತುರಾತುರಿಯಲ್ಲಿ ನಿಲ್ಲಿಸುತ್ತಾರೆ ಎಂದರೆ, ಹಿಂದೂಗಳು ಸೆಟೆದೆದ್ದು ಒಂದಾಗಿ ನಿಂತಲ್ಲಿ ಖಂಡಿತವಾಗಿಯೂ ಈ ನರ ಸತ್ತ ನಾಯಕರ ಜಾಗದಲ್ಲಿ ಮೋದಿ ಅಥವಾ ಯೋಗಿಯಂತಹ, ದುಷ್ಕರ್ಮಿಗಳಿಗೆ ಅಲ್ಲೇ ಡ್ರಾ ಅಲ್ಲೇ ಬಹುಮಾನದ ರೀತಿಯಲ್ಲಿ ಹೆಡೆಮುರಿ ಕಟ್ಟುವ ತಾಕತ್ತಿರುವ ನಿಷ್ಠಾವಂತ ಸಮರ್ಥ ನಾಯಕರು ಮತ್ತೆ ಅಧಿಕಾರಕ್ಕೆ ಬಂದು ಹಿಂದೂಗಳ ರಕ್ಷಣೆ ಮಾಡಬಹುದು ಎನ್ನುವ ಆಶಯವಾಗಿದೆ.
ಹಾಂ!! ಕಡೆಯದಾಗಿ ಇದು ಪ್ರವೀಣ್ ನೆಟ್ಟಾರ್ ಅವರ ಪತ್ನಿ ಶ್ರೀಮತಿ ನೂತನ ಕುಮಾರಿ ಅವರ ಬ್ಯಾಂಕ್ ಖಾತೆ ವಿವರ:
Branch : ಯೂನಿಯನ್ ಬ್ಯಾಂಕ್ ಆಫ್ ಇಂಡಿಯ, ಪುತ್ತೂರು ದರ್ಬೆ ಬ್ರಾಂಚ್
Account No. : 520101024484349
FSC Code : UBIN0920029
ನಿಮ್ಮ ಕೈಲಾದ ಸಹಾಯವನ್ನು ಖಂಡಿತವಾಗಿಯೂ ಮಾಡ್ತೀರೀ ಎನ್ನುವ ನಂಬಿಕೆ ನಮಗಿದೆ. ಏಕೆಂದರೆ ನಮ್ಮವರಿಗಾಗಿ ನಾವೇ ಸಹಾಯ ಮಾಡ್ಬೇಕೇ ಹೊರ್ತು ಅದ್ಯಾವುದೋ ರಾಜಕಾರಣಿಗಳು ಕೊಡುವ ಎಂಜಲು ಕಾಸಿಗೆ ನಾಲಿಕೆ ಚಾಚುವವರು ನಾವಲ್ಲ. ಎಷ್ಟಾದರು ನಾವು ಸ್ವಾಭಿಮಾನೀ, ಸ್ವಾವಲಂಭಿ ಹಿಂದುಗಳು ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ