ಆನೇಕಲ್ ಸುಬ್ಬರಾಯ ಶಾಸ್ತ್ರಿ

ss3ಸಾಮಾನ್ಯವಾಗಿ ವಿಮಾನವನ್ನು ಕಂಡುಹಿಡಿದವರು ಯಾರು? ಎಂದು ಕೇಳಿದ ತಕ್ಷಣವೇ ಡಿಸೆಂಬರ್ 17, 1903ರಂದು ಆರ್ವಿಲ್ಲೆ ಮತ್ತು ವಿಲ್ಬರ್ ರೈಟ್ ಅರ್ಥಾತ್ ಎಲ್ಲರಿಗೂ ಚಿರಪರಿಚಿತವಾಗಿರುವ ರೈಟ್ ಸಹೋದರರು ಎಂದೇ ಸಣ್ಣ ಮಕ್ಕಳೂ ಉತ್ತರಿಸುತ್ತಾರೆ. ಏಕೆಂದರೆ ಇದೇ ಸತ್ಯ ಎಂದು ವಿಶ್ವಾದ್ಯಂತ ನಮ್ಮ ಮಕ್ಕಳಿಗೆ ಶಾಲೆಯಲ್ಲಿ ಕಲಿಸಿಕೊಡಲಾಗಿದೆ. ನಿಜ ಹೇಳಬೇಕಂದರೆ, ರೈಟ್ ಸಹೋದರರಿಗೂ ಮುನ್ನವೇ ಕರ್ನಾಟಕದದ ಬೆಂಗಳೂರು ಬಳಿಯೇ ಇರುವ ಆನೇಕಲ್ಲಿನ ಶ್ರೀ ಸುಬ್ಬರಾಯ ಶಾಸ್ತ್ರಿಗಳು 1895ರಲ್ಲೇ ಮಾರುತ ಸಖ ಎಂಬ ಪ್ರಪ್ರಥಮ ಪ್ರಯೋಗಾತ್ಮಕ ವಿಮಾನದ ಹಾರಾಟವನ್ನು ಯಶಸ್ವಿಯಾಗಿ ಸಾಧಿಸಿದ್ದರು. ದುರಾದೃಷ್ಟವಷಾತ್ ಬ್ರಿಟೀಷರ ಕುತಂತ್ರದಿಂದಾಗಿ ಈ ಸಂಗತಿ ಇತಿಹಾಸದಲ್ಲಿ ದಾಖಲಾಗಲಿಲ್ಲ ಎಂದು ನೋಬೆಲ್ ಪ್ರಶಸ್ತಿ ಪುರಸ್ಕೃತ ಶ್ರೀ ಜಗದೀಶ ಚಂದ್ರ ಬೋಸರು ಬರೆದಿರುವ ಸುಬ್ಬರಾಯ ಶಾಸ್ತ್ರಿಗಳ ಜೀವನ ಚರಿತ್ರೆಯಲ್ಲಿ ಉಲ್ಲೇಖಿಸಿರುವ ಕಾರಣ, ನಮ್ಮ ಇಂದಿನ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಶ್ರೀ  ಸುಬ್ಬರಾಯ ಶಾಸ್ತ್ರಿಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಸುಕೊಳ್ಳೋಣ.

ss1ಶ್ರೀ ಭಾರದ್ವಾಜ ಮುನಿಗಳ ಸಂಸ್ಕೃತದಲ್ಲಿದ್ದ ವೈಮಾನಿಕ ಶಾಸ್ತ್ರದ ಕುರಿತಾದ ಯಂತ್ರ ಸ್ವಾರಸ್ಯ ಎಂಬ ಪುಸ್ತಕಕ್ಕೆ ಶಾಸ್ತ್ರಿಗಳು ಭಾಷ್ಯ ಬರೆದಿದ್ದ ಆನೇಕಲ್ ಶ್ರೀ ಸುಬ್ಬರಾಯ ಶಾಸ್ತ್ರಿಗಳು ಇಂದಿನ ತಮಿಳು ನಾಡಿಗೆ ಸೇರಿರುವ ಹೊಸೂರು ಬಳೀ ಇರುವ, ತೋಗೇರಿ ಅಗ್ರಹಾರ ಎಂಬ ಸಣ್ಣ ಹಳ್ಳಿಯಲ್ಲಿ ಕೃಷ್ಣಶಾಸ್ತ್ರಿಗಳು ಮತ್ತು ಲಕ್ಷ್ಮಮ್ಮ ದಂಪತಿಗಳಿಗೆ 1866 ರಲ್ಲಿ ಹಿರಿಯ ಮಗನಾಗಿ ಜನಿಸಿದರು. ಬಹಳ ಸಂಪ್ರದಾಯಸ್ಥ ಕುಟುಂಬದವರಾಗಿದ್ದು ಮನೆಯಲ್ಲಿ ಕಡು ಬಡತನವಿತ್ತು. ದುಡಿಯುವ ಕೈಗಳು ಒಂದಾದರೆ, ಉಣ್ಣುವವರು ಆರು ಎನ್ನುವಂತೆ, ಶಾಸ್ತ್ರಿಗಳಿಗೆ ಮೂವರು ಸಹೋದರರು ಹಾಗೂ ಇಬ್ಬರು ಸಹೋದರಿಯರು ಸಹ ಇದ್ದರು. ಕೇವಲ ಐದನೇ ವಯಸ್ಸಿನಲ್ಲೇ ಉಪನಯನ ಮಾಡಿಸಿ, ಎಂಟನೇ ವಯಸ್ಸಿಲ್ಲೇ ಐದು ವರ್ಷದ ನಂಜಮ್ಮ ಎಂಬ ಪುಟ್ಟ ಹುಡುಗೆಯೊಂಗಿದೆ ಸಂಪ್ರದಾಯಿಕವಾಗಿ ಬಾಲ್ಯವಿವಾಹವು ನಡೆದಿರುತ್ತದೆ.

ಶಾಸ್ತ್ರಿಗಳಿಗೆ 13 ವರ್ಷ ತುಂಬುವಷ್ಟರಲ್ಲೇ, ಅವರ ತಂದೆ-ತಾಯಿಯರು ವಿಧಿವಷರಾಗಿ ಅನಾಥರಾಗಿದ್ದಲ್ಲದೇ, ತಮ್ಮ ಒಡಹುಟ್ಟಿದವರ ಪಾಲನೆಯೂ ಇವರ ಹೆಗಲೇರಿತ್ತದೆ.ಇಷ್ಟೇ ಅಲ್ಲದೇ ತಮ್ಮ ತಂದೆಯವರು ಮಾಡಿದ ಸಾಲಗಳನ್ನು ತೀರಿಸಲು ಅವರ ಎಲ್ಲಾ ಆಸ್ತಿಯನ್ನು ಮಾರಿ ಅಕ್ಷರಶಃ ಭಿಕ್ಷೆಯನ್ನು ಬೇಡುವಂತಾಗುತ್ತದೆ. ಹಸಿವು ಮತ್ತು ಅಂದಿನ ಕಾಲದ ಸಾಂಕ್ರಾಮಿಕ ರೋಗದಿಂದಾಗಿ ಆವರ ಒಡಹುಟ್ಟಿದವರಲ್ಲಿ ಇಬ್ಬರು ಸಾವನಪ್ಪಿ ಜೀವನ ನಡೆಸುವುದದಕ್ಕೂ ಕಷ್ಟವಾಗುತ್ತದೆ. ಬರಗಾಲದಲ್ಲಿ ಅಧಿಕ ಮಾಸ ಎನ್ನುವಂತೆ, ಸಣ್ಣ ವಯಸ್ಸಿನ ಶಾಸ್ತ್ರಿಗಳಿಗೆ ಕಜ್ಜಿ ಆವರಿಸಿ ದೇಹವೆಲ್ಲಾ ವ್ರಣಗಳಾಗಿ ಕೀವು ಸೋರಲಾರಂಭಿಸಿದಾಗ, ಬೇಸತ್ತ ಶಾಸ್ತ್ರಿಗಳು ಉಳಿದ ಸಹೋದರರಿಂದ ದೂರವಾಗುತ್ತಾರೆ.

vaimanikaಹೀಗೆ ಜೀವನದಲ್ಲಿ ಜಿಗುಪ್ಸೆಗೊಂಡು ಊರೂರು ಅಲೆಯುತ್ತಾ ಕೋಲಾರ ಜಿಲ್ಲೆಯ ಆವನಿ ಬೆಟ್ಟವನ್ನು ತಲುಪಿ ಅಲ್ಲಿ ಸುಮಾರು ಒಂಭತ್ತು ವರ್ಷಗಳ ಕಾಲ ಅಲ್ಲಿನ ಪ್ರಕೃತಿಯೊಂದಿಗೆ ಜೀವಿಸುತ್ತಾರೆ. ರಾಮಾಯಣ ಕಾಲದಲ್ಲಿ ವಾಲ್ಮೀಕಿ ಮುನಿಗಳ ಆಶ್ರಮ ಆವನಿ ಬೆಟ್ಟದಲ್ಲೇ ಇದ್ದು ಸೀತಾಮಾತೆ ಲವಕುಶರೊಂದಿಗೆ ಅಲ್ಲಿಯೇ ಇದ್ದರು ಎನ್ನುವ ಪ್ರತೀತಿ ಮತ್ತು ಅದಕ್ಕೆ ಸೂಕ್ತವಾದ ಪುರಾವೆಗಳು ಅಲ್ಲಿವೆ. ಆ ಬೆಟ್ಟದಲ್ಲಿ ಪವಾಡವೆಂಬಂತೆ ಶಾಸ್ತ್ರಿಗಳಿಗೆ ಒಬ್ಬ ತೇಜಸ್ವಿ ಮಹಾ ಪುರುಷರ ಪರಿಚಯವಾಗಿ ಅವರಿಂದ ಸೂಕ್ತವಾದ ಚಿಕಿತ್ಸೆ ದೊರೆತು ಅವರು ಸಂಪೂರ್ಣವಾಗಿ ಗುಣಮುಖರಾಗುವುದಲ್ಲದೇ. ತಮ್ಮ ಬಾಲ್ಯದಲ್ಲಿ ಯಾವುದೇ ಶಾಲೆಗೆ ಹೋಗದೆ ಅಕ್ಷರಾಭ್ಯಾಸವೂ ಇಲ್ಲದೆ ಅನಕ್ಷರಸ್ಥರಾಗಿದ್ದ ಶ್ರೀ ಸುಬ್ಬರಾಯಶಾಸ್ತ್ರಿಗಳು, ಆ ಪವಾಡ ಪುರುಷರ ಕಠಾಕ್ಷದಿಂದ, ವಿಶೇಷ ಜ್ಞಾನಿಗಳಾಗುತ್ತಾರೆ. ಅದರಲ್ಲೂ ವಿಶೇಷವಾಗಿ ಭೌತಿಕ ಶಾಸ್ತ್ರದ ಬಗ್ಗೆ ಜ್ಞಾನ ಪಡೆದದ್ದಲ್ಲದೇ, ತಮ್ಮ ಜ್ಞಾನ ಪ್ರಭೆಯ ದಿವ್ಯ ದರ್ಶನದಿಂದ ವೇದ ವಿಜ್ಞಾನದ ಬಗ್ಗೆ ಹಾಗೂ ಪಂಚಭೂತಗಳ ಬಗ್ಗೆ ಅಪಾರ ಜ್ಞಾನ ಪಡೆದು ಹಾಗೆ ಪಡೆದ ಜ್ಞಾನವನ್ನು ಹತ್ತಾರು ಜನರಿಗೆ ಧಾರೆ ಎರೆಯುವ ಸಲುವಾಗಿ ಪಟ್ಟಕ್ಕೆ ಬಂದು ವಿಮಾನ ನಿರ್ಮಾಣದ, ವೈಮಾನಿಕ ಶಾಸ್ತ್ರದ ಬಗ್ಗೆ ಎಲ್ಲರಿಗೂ ವಿವರಿಸಿರುವುದು ಗಮನಾರ್ಹವಾಗಿದೆ.

talpadeಅಸಾಧಾರಣ ಪಾಂಡಿತ್ಯ ಮತ್ತು ಜ್ಞಾನ ಸಂಪತ್ತಿನ ಪ್ರತಿಭೆಯ ಖನಿಯಾಗಿದ್ದ ಸುಬ್ಬರಾಯ ಶಾಸ್ತ್ರಿಗಳ ಸಂಪರ್ಕಕ್ಕೆ ಬೆಂಗಳೂರಿನ ಮೇಯರ್ ಆಗಿದ್ದ ಕೆ. ಪಿ. ಪುಟ್ಟಣ್ಣ ಚೆಟ್ಟಿ, ಕೃಷ್ಣಮೂರ್ತಿ, ನಿಟ್ಟೂರು ಶ್ರೀನಿವಾಸಮೂರ್ತಿ, ಸರ್.ಎಂ.ವಿಶ್ವೇಶ್ವರಯ್ಯ ಮುಂತಾದವರು ಬಂದಿದ್ದಲ್ಲದೇ, ಅವರ ಜ್ಞಾನ ಸಂಪತ್ತಿನ ಕುರಿತಾಗಿ ಶ್ರೀ. ಬಿ. ಸೂರ್ಯನಾರಾಯಣರಾವ್ ಅವರು ಭೌತಿಕ ಕಲಾನಿಧಿ ಎಂಬ ನಿಯತಕಾಲದಲ್ಲಿ ಪರಿಚಯ ಲೇಖನವನ್ನು ಪ್ರಕಟಿಸುತ್ತಾರೆ. ಸುಬ್ಬರಾಯರ ಕೀರ್ತಿ ಅಂದಿನ ಮೈಸೂರು ಸಂಸ್ಥಾನದಿಂದ ಮುಂಬಯಿಗೂ ಹರಡಿದ್ದಲ್ಲದೇ, ಮುಂಬಯಿ ನಗರದ ಬಾಬುಭಾಯ್ ಈಶ್ವರದಾಸ್ ಇಚ್ಛಾರಾಮ್ ರವರು ಶಾಸ್ತಿಗಳನ್ನು ಮುಂಬೈ ನಗರಕ್ಕೆ ಕರೆಸಿಕೊಂಡು ಅವರಿಗೆ ಅರ್ಥಿಕ ನೆರವನ್ನು ನೀಡುವುದಲ್ಲದೇ. ಅವರ ವಾಸ್ತವ್ಯಕ್ಕೂ ವ್ಯವಸ್ಥೆಯನ್ನು ಮಾಡಿಕೊಡುತ್ತಾರೆ. ಅದಾಗಲೇ ವಿಮಾನ ನಿರ್ಮಾಣದ ಪ್ರಯೋಗಗಳಲ್ಲಿ ಆಸಕ್ತಿ ಹೊಂದಿದ್ದ ಶಿವಕರ್ ಬಾಪೂಜಿ ತಲ್ಪಾಡೆ ಎಂಬ ದಂಪತಿಗಳು ಶಾಸ್ತ್ರಿಗಳ ಸಂಪರ್ಕಕ್ಕೆ ಬಂದು ಅವರೊಂದಿಗೆ ಸೇರಿಕೊಂಡು 1895ರಲ್ಲೇ ಮಾರುತ ಸಖ ಎಂಬ ಪ್ರಥಮ ಪ್ರಯೋಗ ವಿಮಾನದ ಹಾರಾಟವನ್ನು ಯಶಸ್ವಿಯಾಗಿ ಸಾಧಿಸುತ್ತಾರೆ. ಇದರ ಕುರಿತಂತೆ ಮುಂಬಯಿನಲ್ಲಿ ನಡೆದ ಪತ್ರಿಕಾಗೋಷ್ಠಿಗಳ ವರದಿಗಳ ವಿವರಗಳನ್ನು ಇಂದಿಗೂ ಸಹಾ ಮೇಲುಕೋಟೆ ಸಂಸ್ಕೃತ ಅಕಾಡೆಮಿಯ ಶ್ರೀಲಕ್ಷ್ಮೀ ತಾತಾಚಾರ್ಯರ ಸಂಗ್ರಹದಲ್ಲಿ ಕಾಣಬಹುದಾಗಿದೆ. ಮಾರುತ ಸಖದ ಬಗ್ಗೆ ಲಿಖಿತ ದಾಖಲೆಗಳು ಲಭ್ಯವಿದೆ. ಈ ಸಾಹಸದ ಕುರಿತಾಗಿ ಲಂಡನ್ನಿನ ಸುದ್ದಿ ಪತ್ರಿಕೆಯೊಂದು ಪ್ರಪಂಚದಲ್ಲಿ ಮೊತ್ತ ಮೊದಲ ಸ್ವದೇಶಿ ವಿಮಾನವನ್ನು ಹಾರಿಸಿದ ಕೀರ್ತಿ ಭಾರತೀಯರದ್ದಾಗಿದೆ ಎಂದು ತಿಳಿಸಿರುವುದಲ್ಲದೇ ಅದೇ ಲೇಖನದಲ್ಲಿ, ವಿಜ್ಞಾನಿ ದಂಪತಿಗಳಾದ ತಲ್ಪಾಡೆಯವರ ಶ್ರಮವನ್ನು ಕೊಂಡಾಡಲಾಗಿದೆ.

rukmaಸ್ವಾತ್ರಂತ್ಯ ಬಂದ ನಂತರ 1952ರಲ್ಲಿ ಮರಾಠಿ ದೈನಿಕ ವಂದೇ ಮಾತರಂ ಮತ್ತು ಅದೇ ವರ್ಷದ ಸೆಪ್ಟಂಬರ್ ತಿಂಗಳಿನ ಮರಾಠಿ ಸಾಪ್ರಾಹಿಕ ವಿವಿಧ ವೃತ್ ಎಂಬ ಪತ್ರಿಕೆಯಲ್ಲಿಯೂ ಮಾರುತ ಸಖದ ಕುರಿತಾಗಿ ಸವಿಸ್ತಾರವಾಗಿ ಬರೆಯಲಾಗಿದೆ. ಪಾಟ್ನದ ಪತ್ರಿಕೆ ಸರ್ಚ್ ಲೈಟ್ ಆವೃತ್ತಿಯಲ್ಲಿ ಮತ್ತು ವೇದ ವಿಜ್ಞಾನ ಮಹಾಪೀಠದ ಕೃತಿಯಲ್ಲಿ, ಕೇಸರಿ ದಿನಪತ್ರಿಕೆಯಲ್ಲಿ ಪೂನಾದ ಡಿ.ಬಿ.ಬಿ.ಗೋವಿಂದೆ ಎಂಬುವವರು ಅಲ್ಲದೇ, ಅದೇ ವರ್ಷ ಅಕ್ಟೋಬರ್ 6ರ ಆರ್ಗನೈಸರ್ ನಿಯತಕಾಲಿಕೆಯ ಸಂಚಿಕೆಯಲ್ಲೂ ಮಾರುದ ಸಖನ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಸುಬ್ಬರಾಯ ಶಾಸ್ತ್ರಿಗಳ ವಿಮಾನದ ಹಾರಟದ ಕುರಿತಾಗಿ ಅಧಿಕೃತ ಧಾಖಲಾಗಿದೆ.

ಸುಬ್ಬರಾಯ ಶಾಸ್ತ್ರಿಗಳು ಮುಂಬೈಯಲ್ಲಿದ್ದಾಗ, ನೊಬೆಲ್ ಪ್ರಶಸ್ತಿ ವಿಜೇತ ಖ್ಯಾತ ವಿಜ್ಞಾನಿಗಳಾಗಿದ್ದ ಸರ್.ಜಗದೀಶ್ ಚಂದ್ರಬೋಸ್ ಆವರು ಶಾಸ್ತ್ರಿಗಳನ್ನು ಭೇಟಿ ಮಾಡಿ ಭೌತ ಶಾಸ್ತ್ರದ ಕುರಿತಾಗಿ ಅನೇಕ ವಿಚಾರಗಳನ್ನು ಚರ್ಚಿಸಿದ್ದಲ್ಲದೇ, ಅವರ ಮುಂದಿನ ಸಂಶೋಧನೆಗಳ ಕುರಿತಾಗಿ ರಚನಾತ್ಮಕ ಸಲಹೆ ಮತ್ತು ಸೂಚನೆಗಳನ್ನು ಪಡೆದಿದ್ದರು ಎಂದರೆ ಶಾಸ್ತ್ರಿಗಳ ಜ್ಞಾನ ಎಷ್ಟರ ಮಟ್ಟಿಗೆ ಇತ್ತು ಎಂಬುದರ ಅರಿವಾಗುತ್ತದೆ. ಪ್ರಚಾರ ಪ್ರಿಯತೆಯಿಂದ ಸದಕಾಲವೂ ದೂರವೇ ಇರುತ್ತಿದ್ದ ಸುಬ್ಬರಾಯಶಾಸ್ತ್ರಿಗಳ ಪರಿಚಯ ಮುಂದಿನ ಜನಾಂಗಕ್ಕೆ ದೊರಕಬೇಕು ಎಂಬ ಉತ್ಕಟವಾದ ಹಂಬಲದಿಂದ ಜಗದೀಶ ಚಂದ್ರ ಬೋಸರು ಶಾಸ್ತ್ಕಿಗಳಿಗೆ ಆತ್ಮಕಥನವನ್ನು ಬರೆಯಲು ಸೂಚಿಸುತ್ತಾರೆ. ಆರಂಭದಲ್ಲಿ ಅದಕ್ಕೊಪ್ಪದ ಶಾಸ್ತ್ರಿಗಳು ನಂತರ ಬೋಸರ ಒತ್ತಡಕ್ಕೆ ಮಣಿದು ಬೆಂಗಳೂರಿಗೆ ಹಿಂತಿರುಗಿದ ನಂತರ ತಮ್ಮ ಆತ್ಮಕಥನವನ್ನು ಬರೆದು, ಶ್ರೀ ಜಿ.ವೆಂಕಟಾಚಲ ಶರ್ಮ ಅವರ ಸಹಾಯದಿಂದ ಇಂಗ್ಲೀಷ್ ಭಾಷೆಗೆ ನೆರವಿನಿಂದ ಭಾಷಾಂತರಿಸುತ್ತಾರೆ.

ss21918-1923 ರ ಅವಧಿಯಲ್ಲಿ ಪಂಡಿತ್ ಸುಬ್ಬರಾಯ ಶಾಸ್ತ್ರಿಗಳು ಶ್ರೀ ಭಾರದ್ವಾಜ ಮುನಿಗಳ ಸಂಸ್ಕೃತದಲ್ಲಿದ್ದ ವೈಮಾನಿಕ ಶಾಸ್ತ್ರದ ಕುರಿತಾದ ಗ್ರಂಥಕ್ಕೆ ಹೊಸ ಭಾಷ್ಯವನ್ನು ಬರೆಯುವ ಮೂಲಕ ವಿಮಾನಯಾನಕ್ಕೆ ನಾಂದಿ ಹಾದಿದ್ದರು. 1959ರಲ್ಲಿ ಆ ಪುಸ್ತವನ್ನು ಹಿಂದಿ ಭಾಷೆಗೆ ಅನುವಾದಿಸಿ ಪ್ರಕಟವಾದರೆ, 1973 ರಲ್ಲಿ ಅದೇ ಪುಸ್ತಕ ಇಂಗ್ಲಿಷ್ ಭಾಷೆಗೆ ಅನುವಾದವಾಗಿದೆ. ಈ ಪುಸ್ತಕದಲ್ಲಿ ಸುಮಾರು 8 ಅಧ್ಯಾಯಗಳಿಂದ ಕೂಡಿದ 3000 ಶ್ಲೋಕಗಳನ್ನು ಒಳಗೊಂಡಿದೆ. ಈ ಮಹಾಕಾವ್ಯಗಳಲ್ಲಿ ಸುಧಾರಿತ ವಾಯುಬಲ ವೈಜ್ಞಾನಿಕ ಹಾರುವ ವಾಹನಗಳಾಗಿವೆ ಅರ್ಥಾತ್ ವಿಮಾನಗಳಾಗಿವೆ.

prapataಇತಿಹಾಸದ ಪುಟಗಳಲ್ಲಿ ಕಾಣದಂತೆ ಮಾಯವಾದ ಈ ಸತ್ಯವನ್ನು ಎಲ್ಲರಿಗೂ ತಿಳಿಸುವ ಇಚ್ಚೆಯಿಂದ ನಟ, ನಿರ್ದೇಶಕ ಸುಚೇಂದ್ರ ಪ್ರಸಾದ್ ಅವರು ಪ್ರಪಾತ ಎಂಬ ಸಿನಿಮಾವನ್ನು ಸಹಾ ನಿರ್ಮಿಸಿರುವುದು ಗಮನಾರ್ಹವಾಗಿದೆ. ಸುಮಾರು 76 ವರ್ಷಗಳ ಕಾಲ ಜೀವಿಸಿದ್ದ ಶಾಸ್ತ್ರಿಗಳು 1940ರಲ್ಲಿ ವಯೋಸಹಜವಾಗಿ ನಿಧನರಾದರು. ಬ್ರಿಟಿಷರ ಕುಯುಕ್ತಿಯಿಂದಾಗಿ ಶಾಸ್ತ್ರಿಗಳ ಸಾಧನೆಗೆ ಮತ್ತು ಅವರ ಜ್ಞಾನಕ್ಕೆ, ಸಲ್ಲಬೇಕಾದ ಮನ್ನಣೆ, ಗೌರವ ದೊರೆಯದೇ ಹೊದದ್ದು ನಿಜಕ್ಕೂ ವಿಷಾಧನೀಯವೇ ಸರಿ. ಭೌತಶಾಸ್ತ್ರ ಮತ್ತು ವೈಮಾನಿಕ ಶಾಸ್ತ್ರಕ್ಕೆ ಸುಬ್ಬರಾಯ ಶಾಸ್ತ್ರಿಗಳು ಅಪಾರವಾದ ಕೊಡುಗೆಯನ್ನು ಸಲ್ಲಿಸಿರುವ ಕಾರಣ ಅವರು ನಮ್ಮ ಹೆಮ್ಮೆಯ ಕನ್ನಡಿಗರೇ ಸರಿ.

ಏನಂತೀರೀ?
ನಿಮ್ಮವನೇ ಉಮಾಸುತ

2 thoughts on “ಆನೇಕಲ್ ಸುಬ್ಬರಾಯ ಶಾಸ್ತ್ರಿ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s