ಶ್ರೀ ಅಮರನಾಥ ಯಾತ್ರೆ

WhatsApp Image 2023-07-09 at 21.42.43ನಮ್ಮ ಸನಾತನ ಧರ್ಮದಲ್ಲಿ ಅಖಂಡ ಭಾರತವನ್ನು ಸದಾಕಾಲವೂ ಜೋಡಿಸುವ ಸಲುವಾಗಿಯೇ ದೇಶಾದ್ಯಂತ ವಿವಿಧ ಧಾರ್ಮಿಕ ಧಾಮಗಳು, ಜೋತಿರ್ಲಿಂಗಗಳು, ತೀರ್ಥಕ್ಷೇತ್ರಗಳನ್ನು, ಮಠಮಾನ್ಯಗಳನ್ನು ಕಟ್ಟಿ ಆ ಪುಣ್ಯ ಕ್ಷೇತ್ರಗಳಿಗೆ ಹೋಗಿ ಬಂದಲ್ಲಿ ನಮಗೆ ಮೋಕ್ಷ ದೊರೆಯುತ್ತದೆ ಎಂಬ ಪರಿಕಲ್ಪನೆ ಮಾಡಿದ್ದಾರೆ. ಅದರೆ ಎಲ್ಲರಿಗೂ ಎಲ್ಲಾ ಕಡೆಯೂ ಹೊಗಲು ಸಾಧ್ಯವಿರುವುದಿಲ್ಲವಾದ ಕಾರಣ ಇಂದಿನ ಆಧುನಿಕ ಯುಗದ ಸಹಾಯದಿಂದ ಕುಳಿತಲ್ಲಿಂದಲೇ ಆ ಆಕ್ಷೇತ್ರಗಳ ದರ್ಶನ ಮಾಡುವಂತಂತ ಸೌಲಭ್ಯವಿದ್ದು, ನಾವಿಂದು ನಮ್ಮ ದೇಗುಲ ದರ್ಶನ ಮಾಲಿಕೆಯಲ್ಲಿ, ಪುರಾಣ ಪ್ರಸಿದ್ಧವಾದ ಮತ್ತು ಅತ್ಯಂತ ಕಠಿಣ ಯಾತ್ರೆಗಳಲ್ಲಿ ಒಂದಾದ ಅಮರನಾಥನ ದರ್ಶನವನ್ನು ಮಾಡೋಣ ಬನ್ನಿ.

ಮಹಾಮಾಯಾ ಶಕ್ತಿ ಪೀಠದ ವಾಸಸ್ಥಾನವಾದ ಭಾರತೀಯ ಉಪಖಂಡದ 51 ಶಕ್ತಿ ಪೀಠಗಳಲ್ಲಿ ಒಂದಾಗಿರುವ, ಹಿಂದೂ ದೇವತೆ ಸತಿಯ ಬಿದ್ದ ದೇಹದ ಭಾಗಗಳ ಸ್ಥಳವನ್ನು ನೆನಪಿಸುವಂತಹ ಶ್ರೀ ಅಮರನಾಥ ದೇವಾಲಯವು ಭಾರತದ ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್ ತೆಹಸಿಲ್‌ನಲ್ಲಿರುವ ಅತ್ಯಂತ ಪವಿತ್ರವಾದ ಹಿಂದೂ ದೇವಾಲಯವಾಗಿದೆ. ಜಿಲ್ಲಾ ಕೇಂದ್ರವಾದ ಅನಂತನಾಗ್ ನಗರದಿಂದ ಸುಮಾರು 168 ಕಿಮೀ, ಶ್ರೀನಗರದಿಂದ 141 ಕಿಮೀ ದೂರದಲ್ಲಿರುವ ಗುಹಾಂತರ ದೇವಾಲಯವಾಗಿದ್ದು, ಇಲ್ಲಿ ಉಳಿದ ದೇವಾಲಗಳಂತೆ ನಿರ್ಧಿಷ್ಟವಾದ ಮೂರ್ತಿ ಇಲ್ಲದೇ, ಗುಹೆಯ ಒಂದು ಮೂಲೆಯ ಭಾಗದಲ್ಲಿ ಹಿಮದಿಂದ ನೈಸರ್ಗಿಕವಾಗಿ ಶಿನವ ಲಿಂಗದ ರೂಪದಲ್ಲಿ ನಿರ್ಮಾಣವಾದ ಹಿಮದ ಗೆಡ್ಡೆಯಾಗಿದ್ದು, ಅಲ್ಲಿನ ಪ್ರದೇಶವವು ವರ್ಷದ 365 ದಿನಗಳೂ ಸಹಾ ಹಿಮಾಚ್ಘಾದಿತ ಪ್ರದೇಶವಾಗಿರುವುದರಿಂದ ಕೇವಲ ಬೇಸಿಗೆಯ ಕೆಲವೇ ತಿಂಗಳುಗಳು ಮಾತ್ರವೇ ಈ ದೇವಾಲಯಕ್ಕೆ ಪ್ರವೇಶವಿರುವುದು ವಿಶೇಷವಾಗಿದೆ.

WhatsApp Image 2023-07-10 at 06.40.10ಈಗಾಗಲೇ ತಿಳಿಸಿರುವಂತೆ ಈ ದೇಗುಲದಲ್ಲಿರುವ ಶಿವಲಿಂಗವು ಸ್ವಯಂಭೂಲಿಂಗವಾಗಿದ್ದು, ಈ ಲಿಂಗವು ಸುಮಾರು 5,186 ಮೀಟರ್ (17,014 ಅಡಿ) ಶಿಖರವನ್ನು ಹೊಂದಿರುವ ಅಮರನಾಥ ಪರ್ವತದ ಮೇಲೆ 3,888 ಮೀ (12,756 ಅಡಿ) ಎತ್ತರದಲ್ಲಿ 40 ಮೀ (130 ಅಡಿ) ಎತ್ತರದ ಗುಹೆಯೊಳಗೆ ನೈಸರ್ಗಿಕ ಸುಣ್ಣಕಲ್ಲು ಮತ್ತು ಮಂಜಿನ ಮಿಶ್ರಣದ ರಚನೆಯಾಗಿದೆ. ಗುಹೆಯ ಮೇಲ್ಛಾವಣಿಯಿಂದ ಒಸರುವ ನೀರಿನ ಹನಿಗಳ ಘನೀಕರಣದ ಕಾರಣದಿಂದಾಗಿ ಈ ರೀತಿಯ ರಚನೆಯಾಗಿ ಶಿವನ ಭೌತಿಕ ಅಭಿವ್ಯಕ್ತಿಯಾದ ಲಿಂಗದ ರೂಪವನ್ನು ಪಡೆದುಕೊಂಡರೆ, ಅದರ ಪಕ್ಕದಲ್ಲೇ ಇರುವ ಮತ್ತೆರಡು ಸಣ್ಣ ಈ ರಚನೆಯು ಪಾರ್ವತಿ ಮತ್ತು ಗಣೇಶನನ್ನು ಪ್ರತಿನಿಧಿಸುತ್ತವೆ ಎಂದು ನಂಬಲಾಗುತ್ತದೆ. ಗುಹೆಯ ಮೇಲಿರುವ ಹಿಮಾಲಯದಲ್ಲಿ ಹಿಮ ಕರಗಿ, ಗುಹೆಯ ಬಂಡೆಗಳೊಳಗೆ ನೀರು ಹರಿಯುವುದರಿಂದ, ಮೇ ನಿಂದ ಆಗಸ್ಟ್ ಅವಧಿಯಲ್ಲಿ ಲಿಂಗದ ರಚನೆಯಾದರೆ, ನಂತರದ ದಿನಗಳಲ್ಲಿ ಈ ಲಿಂಗವು ಕ್ರಮೇಣ ಕ್ಷೀಣಿಸುತ್ತಾ ಹೋಗೆ ಮತ್ತೇ ಬೇಸಿಗೆಯ ಸಮಯದಲ್ಲಿ ಅದರ ಎತ್ತರ ಏರುತ್ತಾ ಹೋಗುತ್ತದೆ.

ಹಿಂದೂ ಪುರಾಣಗಳ ಪ್ರಕಾರ ಪ್ರಕಾರ, ಪಾರ್ವತಿ ಶಿವನನ್ನು ಜೀವನ ಮತ್ತು ಶಾಶ್ವತತೆಯ ರಹಸ್ಯವನ್ನು ತಿಳಿಸಿಸಲು ಕೇಳಿಕೊಂಡಾಗ, ಆತ ಅದನ್ನು ಹೇಳಲು ಆರಂಭದಲ್ಲಿ ನಿರಾಕರಿಸಿದನು. ಆದರೇ ಮೇಲಿಂದ ಮೇಲೆ ಪಾರ್ವರ್ತಿಯು ಶಿವನನ್ನು ಒತ್ತಾಯಿಸಿದ ಪರಿಣಾಮ ಶಿವನು ಆ ರಹಸ್ಯವನ್ನು ಬಹಿರಂಗಪಡಿಸಲು ನಿರ್ಧರಿಸಿ, ಆವರಿಬ್ಬರೂ ಕೈಲಾಸ ಪರ್ವತವನ್ನು ತೊರೆದು ನಂತರ ಒಂದೊಂದಾಗಿ ತಮ್ಮ ಆಪ್ತರನ್ನು ತ್ಯಜಿಸುತ್ತಾ ಬಂದರು ಎನ್ನುವುದಕ್ಕೆ ಉದಾಹರಣೆಯಾಗಿ ಪಹಲ್ಗಾಮ್‌ನಲ್ಲಿ ನಂದಿ, ಚಂದನ್ವಾರಿಯಲ್ಲಿ ತನ್ನ ಜಟೆಯಲ್ಲಿದ್ದ ಚಂದ್ರನನ್ನು ಬಿಚ್ಚಿಟ್ತರೆ, ಶೇಷನಾಗ್ ಸರೋವರದ ದಡದಲ್ಲಿ ತನ್ನ ಕೊರಳಿಗೆ ಸುತ್ತಿಕೊಂಡಿದ್ದ ಹಾವನ್ನು ಬಿಟ್ಟಿ ಅಂತಿಮವಾಗಿ ಮಹಾಗುಣ ಪರ್ವತದಲ್ಲಿ ಗಣೇಶನನ್ನು ಬಿಟ್ಟ ಪರಿಣಾಮ ಅದು ಮಹಾಗಣೇಶ ಪರ್ವತ ಎಂದೇ ಹೆಸರಾಗಿದ್ದು, ಉಳಿದೆಲ್ಲಾ ಪ್ರದೇಶಗಳಲ್ಲಿ ಆ ಕುರುಹುಗಳನ್ನು ಇಂದಿಗೂ ಕಾಣಬಹುದಾಗಿದೆ.

tandavaಆದಾದ ನಂತರ ಪ್ರಕೃತಿಯ ಐದು ಅಂಶಗಳಾದ, ಆಕಾಶ, ಭೂಮಿ, ವಾಯು ನೀರು, ಮತ್ತು ಬೆಂಕಿಯನ್ನು ಪಂಚತಾರ್ಣಿಯಲ್ಲಿ ತ್ಯಾಗ ಮಾಡುತ್ತಾ ಶಿವಪಾರ್ವತಿಯರಿಬ್ಬರೂ ಸೇರಿ ತಾಂಡವ ನೃತ್ಯ ಮಾಡಿ ದಣಿವಾದ ನಂತರ ಅವರಿಬ್ಬರೂ ಗುಹೆಯನ್ನು ಪ್ರವೇಶಿಸಿ, ಅಲ್ಲಿ ಯಾರೂ ಸಹಾ ತಮ್ಮ ಮಾತನ್ನು ಕೇಳುತ್ತಿಲ್ಲಾ ಎಂಬುದನ್ನು ಖಚಿತಪಡಿಸಿಕೊಳ್ಳಲು, ತಮ್ಮ ಸುತ್ತಲೂ ಅಗ್ನಿ ಜ್ವಾಲೆಯನ್ನು ಹಾಕಿಕೊಂದರೂ, ಶಿವನ ಕೆಳಗೆ ಒಂದು ಪಾರಿವಾಳ ಉಳಿದು ಬಿಟ್ಟಿತು. ಇದನ್ನರಿಯದ ಶಿವನು ಪಾರ್ವತಿಗೆ ಅಮರತ್ವದ ರಹಸ್ಯವನ್ನು ಹೇಳುವಾಗ, ಅದನ್ನು ಆಲ್ಲಿದ್ದ ಪಾರಿವಾಳವೂ ಕೇಳಿಸಿಕೊಂಡ ಪರಿಣಾಮ, ಇಂದಿಗೂ ಅಂತಹ ಕೊರೆಯುವ ಚಳಿಯಲ್ಲೂ ಅಮರನಾಥ ದೇವಾಲಯಕ್ಕೆ ಭೇಟಿ ನೀಡುವ ಭಕ್ತರು ಆ ಗುಹೆಯೊಳಗೆ ಜೋಡಿ ಪಾರಿವಾಳಗಳನ್ನು ಕಾಣಬಹುದಾಗಿರುವುದು ಗಮನಾರ್ಹವಾಗಿದೆ, ಹೀಗೆ ಅಮರತ್ವದ ರಹಸ್ಯವನ್ನು ಶಿವನು ಆ ಸ್ಥಳದಲ್ಲಿ ಪಾರ್ವತಿಗೆ ಹೇಳಿದ್ದರಿಂದ ಆ ಗುಹೆಯು ಅಮರನಾಥ ಎಂದೇ ಪ್ರಸಿದ್ಧಿಯಾಯಿತು. ಅಂತಿಮವಾಗಿ, ಶಿವ ಮತ್ತು ಪಾರ್ವತಿ ಇಬ್ಬರೂ, ಅಲ್ಲಿ ಮಂಜುಗಡ್ಡೆಯಿಂದ ಮಾಡಿದ ಲಿಂಗವಾಗಿ ಕಾಣಿಸಿಕೊಂಡರು. ಶಿವನು ಮಂಜುಗಡ್ಡೆಯ ಲಿಂಗವಾದನು ಮತ್ತು ಪಾರ್ವತಿಯು ಬಂಡೆಯ ಯೋನಿಯಾದಳು ಎಂಬುದೇ ಎಲ್ಲರ ನಂಬಿಕೆಯಾಗಿದೆ.

ಮತ್ತೊಂದು ದಂತಕಥೆಯ ಪ್ರಕಾರ, ನೀರಿನಲ್ಲಿ ಮುಳುಗಿದ್ದ ಇಡೀ ಕಾಶ್ಮೀರದ ಕಣಿವೆಯನ್ನು ಕಶ್ಯಪ ಋಷಿಗಳು ನದಿಗಳ ಮೂಲಕ ಆ ನೀರನ್ನೆಲ್ಲಾ ಬರಿದು ಮಾಡಿದ ನಂತರ ಭೃಗು ಮರ್ಷಿಗಳು ಅಮರನಾಥದಲ್ಲಿ ಶಿವನ ದರ್ಶನವನ್ನು ಮೊದಲು ಪಡೆದ ನಂತರ, ಇದು ಪವಿತ್ರ ಕ್ಷೇತ್ರವಾಗಿ ಪರಿಗಣಿಸಿ, ಭಕ್ತಾದಿಗಳು ಪ್ರತೀ ವರ್ಷ ಜುಲೈ ಮತ್ತು ಆಗಸ್ಟ್‌ನಲ್ಲಿ ಬರುವ ಶ್ರಾವಣ ಮಾಸದಲ್ಲಿ ಈ ಪವಿತ್ರ ಕ್ಷೇತ್ರಕ್ಕೆ ಬರಲು ಆರಂಭಿಸಿದರು. ಅಮರನಾಥ ದೇವಾಲಯದ ಅಮರೇಶ್ವರರ ಬಗ್ಗೆ ರಾಜತರಂಗಿಣಿ ಎಂಬ ಪುಸ್ತಕದಲ್ಲಿಯೂ ಉಲ್ಲೇಖವಿದೆ ನಂತರ 11 ನೇ ಶತಮಾನದದಲ್ಲಿ ರಾಣಿ ಸೂರ್ಯಮತಿ ಈ ಅಮರನಾಥ ದೇವಾಲಯಕ್ಕೆ ತ್ರಿಶೂಲ, ಬಾಣಲಿಂಗಗಳು ಮತ್ತು ಪವಿತ್ರ ಲಾಂಛನಗಳನ್ನು ಉಡುಗೊರೆಯಾಗಿ ನೀಡಿದ್ದು ಇಂದಿಗೂ ಅದನ್ನು ನೋಡಬಹುದಾಗಿದೆ. ನಂತರ 15 ನೇ ಶತಮಾನದಲ್ಲಿ, ಬೂಟಾ ಮಲಿಕ್ ಎಂಬ ಕುರಿಕಾಯುವ ಕುರುಬನಿಗೆ ಕಲ್ಲಿದ್ದಲು ತುಂಬಿದ ಚೀಲವನ್ನು ಸಂತರೊಬ್ಬರು ಕೊಟ್ಟಾಗ ಅದನ್ನು ತೆಗೆದುಕೊಂಡು ಮನೆಗೆ ಹೋಗಿ ನೋಡಿದಾಗ ಆ ಚೀಲದ ಪೂರ್ತಿ ಚಿನ್ನದ ನಾಣ್ಯವಾಗಿರುವುದನ್ನು ಕಂಡು ಆಶ್ಚರ್ಯ ಚಕಿತನಾಗಿ ಆ ಸಂತರನ್ನು ಹುಡುಗಿಕೊಂಡು ಬಂದ ಸಂದರ್ಭದಲ್ಲಿ ಶಿವಲಿಂಗವಿರುವ ಈ ಗುಹೆಯನ್ನು ಕಂಡು ನಂತರ ಅದು ಮತ್ತೆ ಪ್ರವರ್ಧಮಾನಕ್ಕೆ ಬಂದು ಹಿಂದೂಗಳ ಪವಿತ್ರ ತೀರ್ಥಯಾತ್ರೆ ಯ ಸ್ಥಳವಾಯಿತು ಎಂದು ಹೇಳಲಾಗುತ್ತದೆ.

ಭಕ್ತಾದಿಗಳು ಆಮರನಾಥಕ್ಕೆ ನೇರವಾಗಿ ಏಕಾಏಕಿ ಈ ದೇವಾಲಯಕ್ಕೆ ಬರಲು ಸಾಧ್ಯವಿಲ್ಲ. ಇದಕ್ಕಾಗಿಯೇ ಯಾತ್ರಿಕರು ತಿಂಗಳುಗಳ ಮುಂಚಿತವಾಗಿ ಮುಂಗಡವಾಗಿ ನೋಂದಾಯಿಸಿಕೊಳ್ಳಬೇಕು ಮತ್ತು ಪ್ರತೀ ರಾಜ್ಯಕ್ಕೆ ಅನುಗುಣವಾಗಿ ಕೋಟಾಗಳನ್ನು ನಿಗದಿಪಡಿಸಿ ದರ ಅನುಗುಣವಾಗಿ, ಯಾತ್ರಾರ್ಥಿಗಳ ಆರೋಗ್ಯ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಂಡು ಅವರಿಂದ ನಿಗಧಿತವಾದ ನೊಂದಾವಣಿ ಹಣವನ್ನು ಕಟ್ಟಿಸಿಕೊಂಡು, ಪ್ರತೀ ಯಾತ್ರಿ ಮತ್ತು ವಾಹನಕ್ಕೆ ವಿಶಿಷ್ಟವಾದ ಮತ್ತು ರುರ್ತುಪರಿಸ್ಥಿತಿಯಲ್ಲಿ ಗುರುತಿಸಬಹುದಾದಂತಹ ಗುರುತಿನ ಟ್ಯಾಗ್ ಅನ್ನು ನೀಡಲಾಗುತ್ತದೆ. ಇದನ್ನು ಯಾತ್ರಾರ್ಥಿಗಳು ಯಾತ್ರೆಯ ಪೂರ್ತಿಯೂ ಕೇಳಿದ ಕಡೆಯಲ್ಲೆಲ್ಲಾ ತೋರಿಸ ಬೇಕಾಗುತ್ತದೆ.

ಅಷ್ಟೆಲ್ಲಾ ಪೂರ್ವತಯಾರಿಯನ್ನು ನಡೆಸಿದ ನಂತರವೇ ಅತ್ಯಂತ ಶ್ರಧ್ಧಾ ಭಕ್ತಿಗಳಿಂದ ತಮ್ಮ ಬಂಧು ಮಿತ್ರರೊಡಗೂಡಿ ಯಾತ್ರಾರ್ಥಿಗಳು ಈ ಹಿಮಚ್ಛಾಧಿತ ದುರ್ಗಮವಾದ ಪ್ರದೇಶಕ್ಕೆ ತಮ್ಮ ಜೀವನದ ಹಂಗನ್ನು ತೊರೆದು ಇಲ್ಲಿಗೆ ಬಂದು ನೈಸರ್ಗಿಕವಾದ ಅಮರನಾಥನ ದರ್ಶನ ಪಡೆದು ಕೃತಾರ್ಥರಾಗುತ್ತಾರೆ. ಪ್ರಸ್ತುತವಾಗಿ ಈ ಪ್ರದೇಶಕ್ಕೆ ಬರಲು 2 ಮಾರ್ಗಗಳಿವೆ, ಮೊದಲನೆಯದುದು ಪಹಲ್ಗಾಮ್‌ನಲ್ಲಿರುವ ನುನ್ವಾನ್ ಮತ್ತು ಚಂದನ್ವಾರಿ ಬೇಸ್‌ಕ್ಯಾಂಪ್‌ನಿಂದ 43 ಕಿಲೋಮೀಟರ್ ಪರ್ವತದ ಚಾರಣದೊಂದಿಗೆ ಪ್ರಾರಂಭವಾಗುತ್ತದೆ ಮತ್ತು ಶೇಷನಾಗ್ ಸರೋವರ ಮತ್ತು ಪಂಚತಾರ್ನಿ ಶಿಬಿರಗಳಲ್ಲಿ ರಾತ್ರಿಯ ತಂಗುದಾಣದ ನಂತರ ಗುಹೆ-ದೇಗುಲವನ್ನು ತಲುಪುತ್ತದೆ. ಪಹಲ್ಗಾಮ್‌ನಿಂದ ಪ್ರಯಾಣವು ಸುಮಾರು ಐದು ದಿನಗಳನ್ನು ತೆಗೆದುಕೊಳ್ಳುತ್ತದೆ. ಇದು ಪಹಲ್ಗಾಮ್‌ನಿಂದ (ಜಮ್ಮು-ಶ್ರೀನಗರ NH ನಲ್ಲಿ) ಚಂದನ್ವಾರಿ ಬೇಸ್‌ಕ್ಯಾಂಪ್ (9,500 ಅಡಿ) – 16 ಕಿಮೀ, ಪಿಸ್ಸು ಟಾಪ್ – 3 ಕಿಮೀ, ಝೋಜಿ ಬಾಲ್-ನಾಗ ಕೋಟಿ-ಶೇಷನಾಗ್ (11,730 ಅಡಿ) – 9 ಕಿಮೀ, ವಾರಿಬಾಲ್-ಮಹಾಗುನ್ಸ್ ಯೋಪ್ (ಗಣೇಶ್ ಟಾಪ್) ವರೆಗೆ ಸಾಗುತ್ತದೆ. , 14,500 ಅಡಿ) – 4.6 ಕಿಮೀ, ಪಬಿಬಲ್-ಪಂಚತಾರ್ಣಿ (22,729 ಅಡಿ)-ಸಂಗಮ್ (ಬಲ್ಟಾಲ್ ಮೂಲಕ ಉತ್ತರ ಮಾರ್ಗಕ್ಕಾಗಿ ಟಿ-ವಿಭಾಗ) – 6 ಕಿಮೀ, ಅಮರನಾಥ ಗುಹೆ – 3 ಕಿಮೀ. ಸಂಪೂರ್ಣ ಕಾಲು ಮಾರ್ಗವು 3 ರಿಂದ 5 ದಿನಗಳು ಒಂದು ಮಾರ್ಗವನ್ನು ತೆಗೆದುಕೊಳ್ಳುತ್ತದೆ.

ಮತ್ತೊಂದು ಮಾರ್ಗವು ತುಸು ದೂರದ ಮಾರ್ಗವಾಗಿದ್ದು, ಬಾಲ್ಟಾಲ್ ಬೇಸ್‌ಕ್ಯಾಂಪ್‌ನಿಂದ ಡೊಮೈಲ್‌ಗೆ ಸಾಗುತ್ತದೆ – 2 ಕಿಮೀ, ಬರಾರಿ – 5 ಕಿಮೀ, ಸಂಗಮ್ (ಪಹಲ್ಗಾಮ್-ಚಂದನ್ವಾರಿ ಮೂಲಕ ದಕ್ಷಿಣ ಮಾರ್ಗಕ್ಕಾಗಿ ಟಿ-ವಿಭಾಗ) – 4 ಕಿಮೀ, ಅಮರನಾಥ ಗುಹೆ – 3 ಕಿಮೀ. ಬಾಲ್ಟಾಲ್ ಮತ್ತು ಬಾಲ್ಟಾಲ್-ಅಮರನಾಥ್ ಕಾಲುದಾರಿ 1 ರಿಂದ 2 ದಿನಗಳ ವಾಪಸಾತಿಯನ್ನು ತೆಗೆದುಕೊಳ್ಳುವವರೆಗೆ ಈ ಟ್ರ್ಯಾಕ್ ಮೋಟಾರು ಮಾಡಬಹುದು. ಮಹಾಗುನ್ಸ್ ಟಾಪ್ (ಗಣೇಶ್ ಟಾಪ್) ಅಡಿಯಲ್ಲಿ ಶೇಷನಾಗ್-ಸಂಗಮ್ ಸುರಂಗ ಸೇರಿದಂತೆ ಪಹಲ್ಗಾಮ್-ಚಂದನ್ವಾರಿಯಿಂದ ಬಾಲ್ಟಾಲ್‌ಗೆ NH501 ಪೂರ್ಣಗೊಂಡ ನಂತರ, ಸಂಗಮ್‌ನಿಂದ ಅಮರನಾಥ ಗುಹೆವರೆಗಿನ ಕೊನೆಯ 3 ಕಿಮೀ ಹೊರತುಪಡಿಸಿ ಈ ಮಾರ್ಗವು ಮೋಟಾರುಯೋಗ್ಯವಾಗುತ್ತದೆ. ಈ ಕಡಿಮೆ ಮಾರ್ಗವು ಕೇವಲ 14 ಕಿಮೀ ಉದ್ದವಾಗಿದೆ, ಆದರೆ ತುಂಬಾ ಕಡಿದಾದ ಗ್ರೇಡಿಯಂಟ್ ಹೊಂದಿದೆ ಮತ್ತು ಏರಲು ತುಂಬಾ ಕಷ್ಟ. ಈ ಮಾರ್ಗವು ಅಮರನಾಥ ಕಣಿವೆಯ ಉದ್ದಕ್ಕೂ ಇದೆ ಮತ್ತು ಮಾರ್ಗದ ಉದ್ದಕ್ಕೂ ಅಮರನಾಥ ಗ್ಲೇಸಿಯರ್‌ನಿಂದ ಹುಟ್ಟುವ ಅಮರಾವತಿ ನದಿಯನ್ನು (ಚೆನಾಬ್‌ನ ಉಪನದಿ) ನೋಡಬಹುದು.

miltಹೀಗೆ ವರ್ಷಕ್ಕೊಮ್ಮೆ ಇಲ್ಲಿಗೆ ಬರುವ ಯಾತ್ರಾರ್ಥಿಗಳ ಮೇಲೆ ತೆರಿಗೆಯನ್ನು ವಿಧಿಸುವ ಮೂಲಕ ರಾಜ್ಯ ಸರ್ಕಾರ ಆದಾಯವನ್ನು ಗಳಿಸಿದರೆ, ಇನ್ನು ಸ್ಥಳೀಯ ಮುಸ್ಲಿಂ ಬಕರ್ವಾಲ್-ಗುಜ್ಜರ್‌ಗಳು ಹಿಂದೂ ಯಾತ್ರಾರ್ಥಿಗಳಿಗೆ ವಿವಿಧ ರೀತಿಯ ಸೇವೆಗಳನ್ನು ನೀಡುವ ಮೂಲಕ ತಮ್ಮ ಜೀವನವನ್ನು ನಡೆಸುತ್ತಾರೆ. ಇಷ್ಟೆಲ್ಲಾ ಆದಾಯವಿದ್ದರೂ ಕೆಲವು ಮತಾಂಧ ಉಗ್ರಗಾಮಿಗಳು ಈ ಯಾತ್ರಾರ್ಥಿಗಳಿಗೆ ಬೆದರಿಕೆ ಹಾಕುವುದಲ್ಲದೇ, ಅನೇಕ ಬಾರಿ ಕಿರುಕುಳ ನೀಡಿರುವುದಲ್ಲದೇ, ಏಕಾ ಏಕಿ ಧಾಳಿಯನ್ನು ಮಾಡಿರುವುದು ನಿಜಕ್ಕೂ ಖಂಡನಾರ್ಹವಾಗಿದೆ. ಭಯೋತ್ಪಾದಕರ ಇಂತಹ ಬೆದರಿಕೆಗಳಿಂದ ಯಾತ್ರಾರ್ಥಿಗಳಿಗೆ ಭದ್ರತೆಯನ್ನು ಒದಗಿಸಲು ಸಾವಿರಾರು ಕೇಂದ್ರ ಸಶಸ್ತ್ರ ಪಡೆಗಳು ಮತ್ತು ರಾಜ್ಯ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. CRPF, BSF, ITBP, NDRF/SDRF ಮತ್ತು ರಾಜ್ಯ ಪೊಲೀಸ್ ಮತ್ತು ಟ್ರಾಫಿಕ್ ಪೋಲಿಸ್ ನಂತಹ ರಕ್ಷಣಾ ಪಡೆಗಳು ಬೇಸ್ ಕ್ಯಾಂಪ್ ಮತ್ತು ಮಾರ್ಗದುದ್ದಕ್ಕೂ ಹಾಗೂ ದೇಗುಲದ ಪರಿಧಿಯಲ್ಲಿ ಭಕ್ತಾದಿಗಳಿಗೆ ರಕ್ಷಣೆಯನ್ನು ಒದಗಿಸುತ್ತದೆ.

ಯಾತ್ರಾಥಿಗಳಿಗೆ ಪಹಲ್ಗಾಮ್-ಚಂದನ್ವಾರಿ ಮಾರ್ಗದಲ್ಲಿ ಯಾತ್ರಾರ್ಥಿಗಳಿಗೆ ಉಚಿತ ಸಮುದಾಯ ಅಡುಗೆ ಆಹಾರವನ್ನು ಒದಗಿಸುವ ಪಂಂಡಲ್ ಟೆಂಟ್‌ಗಳನ್ನು ಅಧಿಕೃತವಾಗಿ, ಶ್ರೀ ಅಮರನಾಥ ಶ್ರೈನ್ ಬೋರ್ಡ್ (SASB) ಸಹಯೋಗದೊಂದಿಗೆ ಸರ್ಕಾರವು ಯಾತ್ರೆಯನ್ನು ಆಯೋಜಿಸುತ್ತದೆ. ವಿವಿಧ ಏಜೆನ್ಸಿಗಳು ಯಾತ್ರೆಯ ಅವಧಿಯಲ್ಲಿ ಮಾರ್ಗದುದ್ದಕ್ಕೂ ಅಗತ್ಯ ಸೌಲಭ್ಯಗಳನ್ನು ಒದಗಿಸುತ್ತವೆ, ಇದರಲ್ಲಿ ಪೋನುಗಳ ಸಂಪರ್ಕ, ವಿದ್ಯುತ್ ಸರಬರಾಜು, ದೂರಸಂಪರ್ಕ ಸೌಲಭ್ಯಗಳು, ಉರುವಲು ಮತ್ತು ಅಗತ್ಯ ವಸ್ತುಗಳು ಸಹಾ ಒಳಗೊಂಡಿರುತ್ತದೆ.

vivekananda3ಇಷ್ಟೆಲ್ಲಾ ಮುನ್ನೆಚರಿಕೆಯನ್ನು ಮಾಡಿದ್ದರೂ, ಕೆಲವೊಮ್ಮೆ ಪ್ರಕೃತಿ ವಿಕೋಪದಿಂದ ಅವಗಢಗಳು ಸಂಭವಿಸುತ್ತಲೇ ಇದ್ದರೂ, ಸರ್ಕಾರದ ಭಧ್ತತೆಯಿಂದಾಗಿ ವರ್ಷದಿಂದ ವರ್ಷಕ್ಕೆ ಈಲ್ಲಿಗೆ ಬರುವ ಭಕ್ತಾದಿಗಳ ಸಂಖ್ಯೆಯೂ ಸಹಾ ಗಣನೀಯವಾಗಿ ಹೆಚ್ಚುತ್ತಿದೆ. ಸೋದರಿ ನಿವೇದಿತಾ ಅವರು ಸ್ವಾಮಿ ವಿವೇಕಾನಂದರೊಂದಿಗಿನ ಕೆಲವು ಅಲೆದಾಟಗಳ ಎಂಬ ಟಿಪ್ಪಣಿಗಳಲ್ಲಿ 1898ರಲ್ಲಿ ಸ್ವಾಮಿ ವಿವೇಕಾನಂದರು ಇದೇ ಅಮನಾಥಕ್ಕೆ ಭೇಟಿ ನೀಡಿ ಶಿವನ ಆಶೀರ್ವಾದವನ್ನು ಪಡೆದಿದ್ದರು ಎಂಬ ಸಂಗತಿಯನ್ನು ತಿಳಿಸಿದ್ದಾರೆ.

WhatsApp Image 2023-07-10 at 06.40.10ಇಷ್ಟೆಲ್ಲಾ ಕಷ್ಟ ನಷ್ಟಗಳನ್ನು ಅನುಭವಿಸಿ ಅಂತಿಮವಾಗಿ ಅಮರನಾಧನ ದರ್ಶನ ಮಾಡುತ್ತಿದ್ದಂತೆಯೇ ಪ್ರಯಾಣದ ಆಯಾಸವೇಲ್ಲಾ ಕ್ಷಣ ಮಾತ್ರದಲ್ಲಿ ಪರಿಹಾರವಾಗುತ್ತದೆ ಎಂಬುದು ಅನೇಕ ಯಾತ್ರಾರ್ತಿಗಳ ಅನುಭವವಾಗಿದೆ. ನಾವೀಗ ಕಣ್ತುಂಬ ನೋಡಿದ ಶ್ರೀ ಅಮರನಾಧನ ದೃಶ್ಯವು ೨೦೨೩ರ ಜುಲೈ ಮೊದಲ ವಾರದಲ್ಲಿ ಆರಂಭವಾದ ವಾರ್ಷಿಕ ತೀರ್ಥಯಾತ್ರೆಯ ಪ್ರಥಮ ಪೂಜೆಗೆ ಸರಿಯಾಗಿ ಆಲ್ಲಿಗೆ ಹೋಗಿದ್ದ ನಮ್ಮ ಆತ್ಮೀಯರು ಕಳುಹಿಸಿಕೊಟ್ಟ ವೀಡಿಯೋ ಆಗಿದ್ದು, ಮುಂದೆ ಎಂದಾದರೂ ನಮ್ಮೆಲ್ಲರಿಗೂ ನೇರವಾಗಿಯೇ ಆ ಅಮರನಾಥನ ದರ್ಶನ ಪಡೆಯುವಂತಹ ಭಾಗ್ಯವನ್ನು ಆ ಅಮರನಾಥನೇ ನಮಗೆ ಕರುಣಿಸಲಿ ಎಂದು ಕೇಳಿಕೊಳ್ಳೋಣ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

2 thoughts on “ಶ್ರೀ ಅಮರನಾಥ ಯಾತ್ರೆ

  1. ಎಲ್ಲಿಂದ ಸಂಪಾದಿಸುತ್ತೀರಿ ಈ ವಿವರಗಳನ್ನು? ಲೇಖನ ತುಂಬಾ ಚೆನ್ನಾಗಿದೆ 🙏🙏

    Like

Leave a reply to ವಿ ಲೋಕೇಶ್ Cancel reply