ಭಾರತದಲ್ಲಿ ಹೆಣ್ಣುಮಕ್ಕಳು ಹಣೆಗೆ ಕುಂಕುಮ ಇಡೋದು ಅಪರಾಧವೇ?

bindi2ನಮ್ಮ ಸನಾತನ ಧರ್ಮದ ಪ್ರಕಾರ ಹೆಣ್ಣು ಮತ್ತು ಗಂಡುಗಳು ಎಂಬ ಬೇಧವಿಲ್ಲದೇ, ಸಾಂಪ್ರದಾಯಿಕವಾಗಿ, ನಮ್ಮ ಮುಖದ ಮೇಲಿರುವ ಎರಡು ಹುಬ್ಬುಗಳ ನಡುವೆ ಕುಂಕುಮ, ತಿಲಕ ಇಲ್ಲವೇ ಗಂಧವನ್ನು ಇಟ್ಟುಕೊಳ್ಳುವುದು ರೂಢಿಯಲ್ಲಿದೆ. ಈ ಹುಬ್ಬುಗಳ ಮಧ್ಯೆ ಇರುವ ಸ್ಥಳವನ್ನು ಆರನೇ ಚಕ್ರ, ಆಜ್ಞಾ ಚಕ್ರ ಎಂದು ಹೇಳಲಾಗುತ್ತದೆ. ಈ ಕೇಂದ್ರದಲ್ಲಿ ಕುಂಕುಮ ಇಲ್ಲವೇ ತಿಲಕವನ್ನು ಇಡುವುದರಿಂದ ಏಕಾಗ್ರತೆಯನ್ನು ಹೆಚ್ಚಿಸುತ್ತದೆ ಎಂದು ಈಗಾಗಲೇ ವೈಜ್ಞಾನಿಕವಾಗಿಯೂ ಧೃಢಪಟ್ಟಿದೆ. ಇನ್ನು ಹೆಣ್ಣು ಮಕ್ಕಳು ಹಣೆಯಲ್ಲಿ ಧರಿಸುವ ಕುಂಕುಮವು ಅವರ ಸುಮಂಗಲೀತನವನ್ನು ತೋರಿಸುತ್ತದೆ ಅಲ್ಲದೇ ಇತರರು ಬೀರುವ ವಕ್ರದೃಷ್ಟಿಯನ್ನೂ ನಿರಾಕರಿಸುವ ದೃಷ್ಟಿ ಬಟ್ಟಿನಂತೆಯೂ ಕಾರ್ಯನಿರ್ವಹಿಸುತ್ತದೆ. ಇನ್ನೂ ವೈಜ್ಞಾನಿಕವಾಗಿ ನೋಡಿದರೆ, ಹಣ್ಣೆಯಲ್ಲಿರುವ ದೃಷ್ಟಿ ಕುಂಕುಮವು ನಮ್ಮ ಸಂಪೂರ್ಣ ಮುಖವನ್ನು ಪೂರೈಸುವ ಟ್ರೈಜಿಮಿನಲ್ ನರದ ಒಂದು ನಿರ್ದಿಷ್ಟ ಶಾಖೆಯನ್ನು ಹೊಂದಿದ್ದು, ಅದು ಮೂಗು ಮತ್ತು ಅದರ ಸುತ್ತಲಿನ ಪ್ರದೇಶಗಳನ್ನು ಪ್ರಚೋದಿಸಲ್ಪಡುತ್ತವೆ. ಹಾಗಾಗಿ ಹಣೆಯ ಮೇಲೆ ಕುಂಕುಮವನ್ನು ಇಡುವುದರಿಂದ ಮೂಗು ಮತ್ತು ಸೈನಸ್‌ಗಳ ಲೋಳೆಪೊರೆಯ ಒಳಪದರಕ್ಕೆ ರಕ್ತದ ಹರಿವನ್ನು ಉತ್ತೇಜಿಸಲು ಮತ್ತು ಹೆಚ್ಚಿಸಲು ಸಹಾಯ ಮಾಡುತ್ತದೆ.

vhibohootiಇನ್ನು ಹಿಂದಿನ ಕಾಲದಲ್ಲಿ ದೂರದೂರದಿಂದ ಮನೆಗೆ ಬರುವ ಅತಿಥಿಗಳ ಹಣೆಯ ಮೇಲಿರುವ ವಿಭೂತಿ, ಕುಂಕುಮ, ಗಂಧ ಇಲ್ಲವೇ ಅಂಗಾರಕಗಳನ್ನು ನೋಡಿ ಅವುಗಳ ತಕ್ಕಂತೆ ಅವರಿಗೆ ಸೂಕ್ತವಾದ ಆಹಾರಗಳನ್ನು ನೀಡಲಾಗುತ್ತಿತ್ತು. ಮಟ ಮಟ ಮಧ್ಯಾಹ್ನ ಮನೆಗೆ ಬಂದ ಅತಿಥಿಗಳ ಹಣೆಯ ಮೇಲೆ ಇನ್ನೂ ವಿಭೂತಿ ಇದ್ದಲ್ಲಿ, ಅವರಿನ್ನೂ ಊಟ ಮಾಡಿಲ್ಲ ಎಂದು ತಿಳಿದು ಅವರು ಕೈಕಾಲು ತೊಳೆದ ನಂತರ ಊಟವನ್ನು ಬಡಿಸಲಾಗುತ್ತಿತ್ತು. ಅದೇ ರೀತಿ ಅವರ ಹಣೆಯ ಮೇಲೆ ಗಂಧ ಇಲ್ಲವೇ ಅಂಗಾರಕ ಇದ್ದಲ್ಲಿ ಅವರ ಊಟ ಆಗಿದೆ ಎಂದು ತಿಳಿದು ಕುಡಿಯಲು ತಂಪಾದ ಪಾನೀಯದ ಜೊತೆ ಲಘು ಉಪಹಾರವನ್ನು ನೀಡಲಾಗುತ್ತಿತ್ತು. ಹೀಗೆ ಹಣೆಯ ಮೇಲಿಡುವ ಕುಂಕುಮ ವಿವಿಧ ರೀತಿಯ ಅರ್ಥಗಳನ್ನು ನೀಡುತ್ತದೆ.

ಈ ರೀತಿಯಾದ ಸಂಪ್ರದಾಯ ದೇಶದ ಮೇಲೆ ಧಾಳಿ ಮಾಡಿದ ಮುಸಲ್ಮಾನರಲ್ಲೂ ಮತ್ತು ಕ್ರೈಸ್ತರಲ್ಲೂ ಇರದ ಕಾರಣ, ನಮ್ಮ ಇಂದಿನ ಪೀಳಿಗೆಯ ಯುವಕ ಯುವತಿಯರಿಗೆ ಹಣೆಯ ಮೇಲಿಡುವ ಕುಂಕುಮದ ಸರಿಯಾದ ತಿಳುವಳಿಕೆ ಇಲ್ಲದ ಕಾರಣ ಅಂಧ ಪಾಶ್ಚಾತ್ಯೀಕರಣದ ಪರಿಣಾಮ ಇತ್ತೀಚೆಗೆ ಬೋಳು ಹಣೆಯಲ್ಲಿ ತಿರಗಾಡುವುದೇ ಒಂದು ರೀತಿ ಫ್ಯಾಷನ್ ಆಗಿಹೋಗಿರುವುದು ನಿಜಕ್ಕೂ ವಿಷಾಧಕರವಾಗಿದೆ. ಇದಕ್ಕೆ ಇಂಬು ಕೊಡುವಂತೆ ದೇಶದಲ್ಲಿರುವ ಬಹುತೇಕ ಶಿಕ್ಷಣ ಸಂಸ್ಥೆಗಳು ಪರೋಕ್ಷವಾಗಿ ಕ್ರೈಸ್ತರ/ಕಮ್ಯೂನಿಷ್ಟರ ಕಪಿಮುಷ್ಟಿಯಲ್ಲಿರುವ ಕಾರಣ, ಅಲ್ಲಿ ಓದುವ ಹಿಂದೂ ಮಕ್ಕಳಿಗೆ ಖಡ್ಡಾಯವಾಗಿ ಹಣೆಯಲ್ಲಿ ಕುಂಕುಮ, ತಲೆಗೆ ಹೂವು ಮತ್ತು ಕೈಗಳಿಗೆ ಬಳೆಯನ್ನು ಹಾಕಿಕೊಂಡು ಬರುವುದುನ್ನು ನಿಷೇಧ ಮಾಡಿರುವುದು ದುರಾದೃಷ್ಟಕರವಾಗಿದೆ.

ಈ ರೀತಿಯ ಪದ್ದತಿಗಳು ಸುಮಾರು ವರ್ಷಗಳಿಂದಲೂ ಕ್ರಿಶ್ಚಿಯನ್ ಶಾಲೆಗಳಲ್ಲಿ ರೂಢಿಯಲ್ಲಿದ್ದು, ಅಕಸ್ಮಾತ್ ಹಬ್ಬ ಹರಿದಿನಗಳು ಮತ್ತು ಹುಟ್ಟುಹಬ್ಬದಂತಹ ವಿಶೇಷ ಸಂಧರ್ಭದಲ್ಲಿ ಈ ರೀತಿಯಾಗಿ ಹಿಂದೂ ಸಾಂಪ್ರದಾಯಿಕ ಉಡುಗೆ ತೊಡುಗೆಗಳಲ್ಲಿ ಶಾಲೆಗೆ ಹೋದಲ್ಲಿ ದಂಡ ಕಟ್ಟಿಸಿಕೊಳ್ಳುವ ಪದ್ದತಿ ಇತ್ತು ಕ್ಲೂನೀ ಕಾನ್ವೆಂಟ್ ನಲ್ಲಿ ಓದಿದ್ದ ನಮ್ಮ ಅಮ್ಮನೂ ಮತ್ತು ಮದುವೆಯಾದ ನಂತರ ನನ್ನ ಮಡದಿಯೂ ಹೀಗೆ ಹೇಳಿದ್ದರು. ಅದೃಷ್ಟ ಎಂದರೆ, ನಮ್ಮ ಅಜ್ಜ (ಅಮ್ಮನ ತಂದೆ) ಮತ್ತು ನಮ್ಮ ಮಾವ (ಮಡದಿಯ ತಂದೆ) ಇಬ್ಬರು ಶಾಲೆಗೆ ಹೋಗಿ ಪ್ರಾಂಶುಪಾಲರ ಬಳಿ ಇದರ ವಿರುದ್ಧ ಹೋರಾಟ ಮಾಡಿದ್ದ ಕಾರಣ, ಕೆಜಿಎಫ್ ಮತ್ತು ಬೆಂಗಳುರಿನ ಕ್ಲೂನೀ ಕಾನ್ವೆಂಟ್ ನಲ್ಲಿ ನನ್ನ ಅಮ್ಮ ಮತ್ತು ಮಡದಿಗೆ ವಿಶೇಷವಾಗಿ ಹಣೆಯಲ್ಲಿ ಕುಂಕುಮ, ಕೈಗೆ ಬಳೆ ಮತ್ತು ತಲೆಗೆ ಹೂವನ್ನು ಮುಡಿದು ಕೊಳ್ಳುವ ಸೌಲಭ್ಯವನ್ನು ನೀಡಲಾಗಿತ್ತು.

dhanpadಬ್ರಿಟೀಷರು ಭಾರತವನ್ನು ಬಿಟ್ಟು 75 ವರ್ಷಗಳೇ ಕಳೆದರೂ ಅವರು ಕಲಿಸಿಕೊಟ್ಟು ಹೋದ ಕೆಟ್ಟ ಚಾಳಿಗಳನ್ನು ನಮ್ಮವರು ಇನ್ನೂ ಹಾಗೆಯೇ ಮುಂದುವರಿಸಿಕೊಂಡು ಹೋಗಿ ಅದರಿಂದ ಒಬ್ಬ ವಿದ್ಯಾರ್ಥಿನಿಯು ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆಯೊಂದು ಜಾರ್ಖಂಡ್‌ನ ಧನಬಾದ್‌ನಲ್ಲಿರುವ ಸೇಂಟ್ ಕ್ಸೇವಿಯರ್ಸ್ ಶಾಲೆಯಲ್ಲಿ ನಡೆದಿದೆ. ಮೊನ್ನೆ ಸೋಮವಾರ ಜುಲೈ 10 ರಂದು ಆ ಶಾಲೆಯಲ್ಲಿ 10ನೇ ತರಗತಿ ಓದುತ್ತಿರುವ ಉಷಾ ಕುಮಾರಿ (16) ಎಂಬ ವಿದ್ಯಾರ್ಥಿನಿ ತನ್ನ ಹಣೆಗೆ ಬಿಂದಿ ಇಟ್ಟುಕೊಂಡು ಹೋಗಿದ್ದಾಳೆ. ಶಾಲೆಯ ಪ್ರಾರ್ಥನೆಯ ಸಮಯದಲ್ಲಿ ಇದನ್ನು ಗಮನಿಸಿದ ಮಹಿಳಾ ಶಿಕ್ಷಕಿಯೊಬ್ಬರು ಆಕೆಯನ್ನು ಎಲ್ಲರ ಮುಂದೆ ಖಂಡಾತುಂಡವಾಗಿ ನಿಂದಿಸಿದ್ದಲ್ಲದೇ, ನಂತರ ಕಪಾಳಮೋಕ್ಷವನ್ನೂ ಮಾಡಿದ್ದಾರೆ.

dhanbad2ಶಾಲೆಯಲ್ಲಿ ಎಲ್ಲರ ಮುಂದೇ ಈ ರೀತಿಯಾಗಿ ಮಾಡಿದ ಅವಮಾನವನ್ನು ಸಹಿಸದ ಆ ವಿದ್ಯಾರ್ಥಿನಿ, ಸಂಜೆ ಶಾಲೆಯ ನಂತರ ಹನುಮಂತನಗರ ಕಾಲೋನಿಯಲ್ಲಿರುವ ತನ್ನ ಮನೆಗೆ ಬಂದು ತೇತುಲಮರಿ ಪೊಲೀಸರನ್ನು ಉದ್ದೇಶಿಸಿ ಆತ್ಮಹತ್ಯೆ ಪತ್ರವನ್ನು ಬರೆದು, ತಾನು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ತನ್ನ ಶಾಲೆಯ ಶಿಕ್ಷಕರು ಮತ್ತು ಪ್ರಾಂಶುಪಾಲರೇ ಕಾರಣ ಎಂದು ಸ್ಪಷ್ಟವಾಗಿ ಬರೆದು ತನ್ನ ಕೊಠಡಿಯಲ್ಲಿದ್ದ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

dhanbad3ಮನೆಗೆ ಬಂದ ಮಗಳು ಎಷ್ಟು ಹೊತ್ತಾದರೂ ತನ್ನ ಕೊಠಡಿಯಿಂದ ಹೊರ ಬಾರದೇ ಇದ್ದದ್ದನ್ನು ಕಂಡ ಆಕೆಯ ಕುಟುಂಬದವರಿಗೆ ಅನುಮಾನವಾಗಿ ಬಾಗಿಲನ್ನು ಒಡೆದು ನೋಡಿದಾಗ, ಮಗಳ ಅ ದೃಶ್ಯ ಅವರ ಹೃದಯವನ್ನು ನುಚ್ಚು ನೂರು ಮಾಡಿದೆ. ಕೂಡಲೇ ಹತ್ತಿರದ ಪೋಲೀಸರಿಗೆ ಘಟನೆಯ ಬಗ್ಗೆ ದೂರು ನೀಡಿ, ಪೋಲಿಸರು ಸ್ಥಳಕ್ಕೆ ಬಂದು ವಿಚಾರಣೆ ನಡೆಸಿದ ವೇಳೆಯಲ್ಲಿ ಆಕೆಯ ಸಮವಸ್ತ್ರದಲ್ಲಿದ್ದ ಆತ್ಮಹತ್ಯೆ ಪತ್ರ ಸಿಕ್ಕಿ ಘಟನೆಯ ಸಂಪೂರ್ಣ ವಿವರಗಳು ಎಲ್ಲರಿಗೂ ತಿಳಿಯಲ್ಪಟ್ಟಿದೆ. ಮಗಳ ಉಜ್ವಲ ಭವಿಷ್ಯವನ್ನು ಕಾಣುತ್ತಿದ್ದ ಪೋಷಕರು ಈ ಆಘಾತಕಾರಿ ಘಟನೆಯಿಂದ ದಿಗ್ಭ್ರಾಂತರಾಗಿ, ಆರೋಪಿ ಶಿಕ್ಷಕಿ ಮತ್ತು ಪ್ರಾಂಶುಪಾಲರ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಳ್ಳ ಬೇಕೆಂದು ಪೋಲೀಸರನ್ನು ಓತ್ತಾಯಿಸಿದರೆ, ಇದಕ್ಕೆ ಬೆಂಬಲವಾಗಿ ಸ್ಥಳೀಯರು ಸಹಾ ಮಂಗಳವಾರ ಶಾಲೆಯ ಮುಂದೆ ಪ್ರತಿಭಟನೆ ನಡೆಸಿ, ಪೊಲೀಸರು ನಿಶ್ಪಕ್ಷಪಾತವಾಗಿ ತನಿಖೆ ನಡೆಸಿ ಆರೋಪಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕೇಳಿಕೊಂಡಿದ್ದಾರೆ.

ಘಟನೆ ಬೆಳಕಿಗೆ ಬಂದ ಕೂಡಲೇ ಪೋಲೀಸರು ಆರೋಪಿ ಶಿಕ್ಷಕಿಯನ್ನು ಬಂಧಿಸಿದ್ದಾರೆ ಎಂದು ಜಾರ್ಖಂಡ್‌ನ ಧನಬಾದ್‌ನ ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲ್ಯೂಸಿ) ಅಧ್ಯಕ್ಷ ಉತ್ತಮ್ ಮುಖರ್ಜಿ ಹೇಳಿದ್ದಾರಲ್ಲದೇ, ಆ ಶಾಲೆಯು ಸಿಬಿಎಸ್‌ಇ ಮಂಡಳಿಗೆ ಸೇರಿಲ್ಲವಾದರೂ, ಇದು ಗಂಭೀರ ವಿಷಯವಾಗಿರುವ ಕಾರಣ, ಜಿಲ್ಲಾ ಶಿಕ್ಷಣ ಅಧಿಕಾರಿಗಳು ಇದರ ಕುರಿತಾಗಿ ಸೂಕ್ತವಾದ ಕ್ರಮವನ್ನು ತೆಗೆದುಕೊಳ್ಳಲು ಸೂಚಿಸಿದ್ದಾರೆ. ಸ್ಥಳೀಯ ಟೆತುಲ್ಮರಿ ಪೊಲೀಸ್ ಠಾಣೆಯ ಎಸ್‌ಎಚ್‌ಒ ಆಶಿಶ್ ಕುಮಾರ್ ಯಾದವ್ ಅವರು,  ದೂರು ಬಂದ ಕೂಡಲೇ, ಸೇಂಟ್ ಕ್ಸೇವಿಯರ್ಸ್ ಶಾಲೆಯ ಆರೋಪಿ ಶಿಕ್ಷಕಿ ಮತ್ತು ಪ್ರಾಂಶುಪಾಲರು ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್‌ಸಿಪಿಸಿಆರ್) ಅಧ್ಯಕ್ಷ ಪ್ರಿಯಾಂಕ್ ಕಾನೂಂಗೊ ಸಹಾ ಈ ವಿಷಯದ ಬಗ್ಗೆ ಗಂಭೀರವಾಗಿ ಗಮನಹರಿಸಿ ಹೆಚ್ಚಿನ ತನಿಖೆ ನಡೆಸಲು ಸೂಚಿಸಿದ್ದಾರೆ.

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಇತ್ತೀಚಗೆ ಸಾಮಾಜಿಕ ಜಾಲತಾಣದಲ್ಲಿ ನೋಡಿದ ಎರಡು ವಿಷಯಗಳನ್ನು ಇಲ್ಲಿ ಪ್ರಸ್ತಾಪಿಸಲೇ ಬೇಕು. ಮೊದಲನೆಯದಾಗಿ ಇದೇ ರೀತಿಯ ಶಾಲೆಯೊಂದರಲ್ಲಿ ಓದುತ್ತಿರುವ ಹುಡುಗ Good morning, afternoon, evening ಬದಲಾಗಿ ಜೈ ಶ್ರೀ ಕೃಷ್ಣ ಹೇಳುತ್ತಿರುವುದನ್ನು ಖಂಡಿಸಿದ ಆಕೆಯ ಶಿಕ್ಷಕಿ ಇದು ಆಂಗ್ಲ ಮಾಧ್ಯಮದ ಶಾಲೆ ಇಲ್ಲಿ ಎಲ್ಲವೂ ಇಂಗ್ಲೀಷ್ ರೀತಿಯಲ್ಲೇ ನಡೆಯಬೇಕು ಎಂದು ತಾಕೀತು ಮಾಡಿ ಆತನ ಪೋಷಕರನ್ನು ಕರೆ ತರಲು ಹೇಳುತ್ತಾರೆ. ಆಕೆಯನ್ನು ಕಾಣಲು ಬಂದ ಆ ಹುಡುಗನ ತಂದೆಯವರು ಸಹಾ ನಮಸ್ಕಾರ, ಜೈ ಶ್ರೀ ಕೃಷ್ಣ ಪದಗಳನ್ನೇ ಉಪಯೋಗಿಸಿದಾಗ ಆ ಶಿಕ್ಷಕಿಯ ಪಿತ್ತ ನೆತ್ತಿಗೆ ಏರಿ? ಇದು ಕೇವಲ ಈ ಹುಡುಗನ ಸಮಸ್ಯೆ ಎಂದು ಭಾವಿಸಿದ್ದರೆ, ಇದು ಇಡೀ ಕುಟುಂಬದ ಸಮಸ್ಯೆ ಎಂದು ಜೋರು ಮಾಡುತ್ತಾಳೆ

tulasiಅದೇ ರೀತಿ ಅಪಾರ್ಟ್ಮೆಂಟಿನಲ್ಲಿ ಒಂದು ಹಿಂದೂ ಮತ್ತೊಂದು ಕ್ರಿಶ್ಚಿಯನ್ ಕುಟುಂಬ ಎದುರು ಬದಿರಿನ ಮನೆಗಳಲ್ಲಿ ವಾಸಿಸುತ್ತಿರುತ್ತಾರೆ. ಸಾಂಪ್ರದಾಯಕ ಕುಟುಂಬಸ್ಥರಾದ ಹಿಂದೂ ಮನೆಯ ಮುಂಭಾಗ ಸಣ್ಣದಾದ ತುಳಸೀ ಕಟ್ಟೆಯನ್ನು ಇಟ್ಟು ಪ್ರತೀ ದಿನವೂ ಅದಕ್ಕೆ ಪೂಜೆ ಮಾಡಿ ಊದುಕಡ್ಡಿ ಹಚ್ಚುತ್ತಿರುತ್ತಾರೆ. ಅದೇ ರೀತಿಯಲ್ಲಿ ವಾರಕ್ಕೊಮ್ಮೆ ಭಜನೆ ಮಾಡುತ್ತಿರುತ್ತಾರೆ. ಹಾಗೆ ಅವರು ಹಚ್ಚುವ ಊದುಕಡ್ಡಿಯ ವಾಸನೆ ನಮಗೆ ತಡೆಯಲಾಗದು ಮತ್ತು ಅವರ ಭಜನೆ ನಮಗೆ ಕೇಳಲಾಗದು ಎಂದು ಎದುರು ಮನೆಯ ಕ್ರಿಶ್ಚಿಯನ್ ಅವರು ಹಿಂದೂ ಮನೆಯವರ ಮೇಲೆ ಜೋರು ಮಾಡುತ್ತಾರೆ. ಆದರೆ ಅದೇ ಸಮಯದಲ್ಲಿ ಕ್ರಿಸ್ಮಸ್ ಬಂದಾಗ ಇಡೀ ಡಿಸೆಂಬರ್ ತಿಂಗಳು ಮನೆಯ ಮುಂದೆ ಸ್ಟಾರ್ ಹಾಕಿದ್ದಲ್ಲದೇ ಜೋರು ಜೋರಾಗಿ ಹತ್ತಾರು ಜನರನ್ನು ಕರೆದುಕೊಂಡು ಬಂದು ಹೊತ್ತಲ್ಲದ ಹೊತ್ತಿನಲ್ಲಿ ಕ್ಯಾರೆಲ್ ಹಾಡುತ್ತಿರುತ್ತಾರೆ. ಇದನ್ನು ಪ್ರಶ್ನಿಸಿದ ಹಿಂದೂಗಳಿಗೆ ಕೋಮುವಾದಿಗಳು ಎಂದು ಜರಿದಿದ್ದಲ್ಲದೇ ಅವರ ವಿರುದ್ಧ Building Maintenance ಆವರಿಗೆ ದೂರು ನೀಡಿ ಇವರಿಂದ ನಮಗೆ ತೊಂದರೆ ಆಗುತ್ತಿದ್ದು, ದಯವಿಟ್ಟು ಇವರ ಮನೆಯಿಂದ ಖಾಲಿ ಮಾಡಿಸಿ ಎನ್ನುವಷ್ಟರ ಮಟ್ಟಿಗೆ ಹೆಚ್ಚಿಕೊಂಡಿರುತ್ತಾರೆ.

Punit_Noticeಅದೇ ರೀತಿ ಮೊನ್ನೆ ಭಾನುವಾರ ಮೆಜಿಸ್ಟಿಕ್ ಸಮೀಪದ ಅಶ್ವತ್ಧಕಟ್ಟೆಯಲ್ಲಿ ಪೂಜೆ ಮಾಡಲು ಹೋಗಿದ್ದ ಹಿಂದೂಪರ ಹೋರಾಟಗಾರ ಪುನೀತ್ ಕೆರೆಹಳ್ಳಿಯವರಿಗೆ ಸ್ಥಳೀಯ ಪೋಲಿಸರು, ದೇವಸ್ಥಾನದಲ್ಲಿ ಪೂಜೆ ಮಾಡಲು BBMP ಅನುಮತಿ ಪಡೆದಿರಲಿಲ್ಲ ಎಂದು ಪೂಜೆಗೆ ತಯಾರಿ ನಡೆಸುತಿದ್ದ ಪುನೀತ್ ರನ್ನು ಕರೆದುಕೊಂಡು ಹೋದ ಉಪ್ಪಾರಪೇಟೆ ಪೊಲೀಸರು ನೋಟೀಸ್ ನೀಡಿ ಕಳುಹಿಸಿದ್ದಾರೆ.

namazಈ ಎಲ್ಲಾ ಘಟನೆಗಳನ್ನೂ ಒಂದೊಂದಾಗಿ ಕೂಲಂಕುಶವಾಗಿ ಪರಿಶೀಲಿಸಿದರೆ, ಹಿಂದೂಸ್ಥಾನದಲ್ಲಿ ಇರುವ ಹಿಂದೂಗಳ ಪರಿಸ್ಥಿತಿ ಯಾವ ರೀತಿಗೆ ತಲುಪಿದೆ ಎಂಬುದರ ಅರಿವಾಗುತ್ತಲ್ಲದೇ, ಸ್ಪಷ್ಟವಾಗಿ ಇವೆಲ್ಲದರ ಹಿಂದೆ ಒಂದು ಷಡ್ಯಂತ್ರವಿದೆ ಎಂಬುವ ಅನುಮಾನ ಮೂಡಿಸುತ್ತದೆ. ಹಿಂದೂಗಳು ಹೋಳಿ, ಗಣೇಶನ ಹಬ್ಬ, ಶ್ರೀರಾಮ ನವಮಿ, ದಸರ, ದೀಪಾವಳಿ ಮಾಡಬೇಕೆಂದರೆ ನೂರಾರು ಶರತ್ತುಗಳನ್ನು ವಿಧಿಸುವ ಎಲ್ಲಾ ಸರ್ಕಾರಗಳು ಅದೇ ಅನ್ಯ ಕೋಮಿನವರು ಪ್ರತೀ ದಿನವೂ ಐದು ಸಾರಿ ಕಿವಿ ಕಿತ್ತುಹೋಗುವಷ್ಟರ ಮಟ್ಟಿಗೆ ಪ್ರಾರ್ಥನೆ ಮಾಡುತ್ತಾ, ಪ್ರತೀ ವಾರ ಸಾರ್ವಜನಿಕರ ರಸ್ತೆಗಳ ಮೇಲೇ ಪ್ರಾರ್ಥನೆ ಮಾಡುವುವರ ವಿರುದ್ಧ ಸೊಲ್ಳೇ ಎತ್ತುವುದಿಲ್ಲ. ಇನ್ನು ಶಾಲೆ, ಕಾಲೇಜು ಬಿಡಿ ಕಛೇರಿಗಳಲ್ಲಿಯೂ ಸಹಾ ಹಿಂದು ಮತ್ತು ನಮ್ಮ ಶಾಸ್ತ್ರ ಮತ್ತು ಸಂಪ್ರದಾಯಗಳ ಬಗ್ಗೆ ಮಾತನಾಡುವುದೇ ಒಂದು ದೊಡ್ಡ ಅಪರಾಧವಾಗಿರುವುದು ನಿಜಕ್ಕೂ ಅಚ್ಚರಿ ಎನಿಸುತ್ತದೆ. 

policeಇನ್ನು ವಾಹನ ಸವಾರರು ಹೆಲ್ಮೆಟ್ ಇಲ್ಲದೇ ಓಡಿಸಿದರೆ, ಛಂಗ್ ಎಂದು ಹಾರಿ ಹೋಗಿ ಹಿಡಿದು ಸಾವಿರಾರು ರೂಪಾಯಿ ದಂಡ ವಿಧಿಸುವ ಪೋಲೀಸರು, ಶುಕ್ರವಾರ ಮಧ್ಯಾಹ್ನ, ಪೋಲೀಸ್ ಠಾಣೆಯ ಮುಂದೆಯೇ, ಒಂದೇ ಗಾಡಿಯ ಮೇಲೆ ಮೂರ್ನಾಲ್ಕು ಜನರು ತಲೆಯ ಮೇಲೆ ತೂತು ತೂತಿನ ಟೋಪಿ ಹಾಕಿಕೊಂಡು ಹೋದರೂ ತಮಗೆ ಸಂಬಂಧಿಸಿದ್ದಲ್ಲಾ ಎಂದು ಸುಮ್ಮನಾಗುವುದು ಏಕೋ?

ಭಾನುವಾರ ಬೆಳ್ಳಗ್ಗಿನಿಂದ ಮಧ್ಯಾಹ್ನದ ವರೆಗೂ ಚರ್ಚಿನ ಮುಂದೆ ಅಡ್ಡಾ ದಿಡ್ಡಿ ವಾಹನಗಳನ್ನು ನಿಲ್ಲಿಸುವವರ ವಿರುದ್ಧ ಯಾವುದೇ ಕ್ರಮವನ್ನು ಜರುಗಿಸದ ಯಾವುದೇ ಸರ್ಕಾರಗಳು ಹಿಂದೂಗಳ ಮೇಲೆ ಮಾತ್ರಾ ಈ ರೀತಿಯ ಗಧಾ ಪ್ರಹಾರ ಏಕೆ? ಎಂಬುದೇ ಎಲ್ಲರ ಪ್ರಶ್ನೆಯಾಗಿದೆ. ಬಹುಶಃ ಇವೆಲ್ಲಕ್ಕೂ ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಏಕರೂಪ ನಾಗರೀಕ ಸಂಹಿತೆ ಒಂದೇ ಸೂಕ್ತವಾದ ಪರಿಹಾರ ಆಗಬಲ್ಲದು. ಒಂದು ದೇಶ ಒಂದು ಕಾನೂನು. ಇಡೀ ದೇಶದವರೆಲ್ಲಾ ಈ ಮಣ್ಣಿನ ಸಂಸ್ಕಾರ, ಸಂಪ್ರದಾಯ ಮತ್ತು ಕಾನೂನುಗಳಿಗೆ ಬದ್ಧರಾಗಿದ್ದು, ತಮ್ಮ ತಮ್ಮ ಆಚರಣೆಗಳನ್ನು ತಮ್ಮ ಮನೆಯ ನಾಲ್ಕು ಗೋಡೆಗಳ ಮಧ್ಯಕ್ಕೆ ಸೀಮಿತಗೊಳಿಸವಂತಾದಗಲೇ ಇವೆಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗುವಂತಾಗುತ್ತದೆ.

ಹಿಂದೂ ಉಳಿದರೆ ಈ ದೇಶ ಉಳಿದೀತು. ದೇಶ ಉಳಿದರೆ ಮಾತ್ರವೇ ಪ್ರಪಂಚ ಉಳಿದೀತು.

ಏನಂತೀರೀ?
ಸೃಷ್ಟಿಕರ್ತ, ಉಮಾಸುತ

ಈ ಲೇಖನ ವಿಕ್ರಮ ವಾರಪತ್ರಿಕೆಯ ಜುಲೈ 30 ರ ಸಂಚಿಕೆಯಲ್ಲಿ ಪ್ರಕಟವಾಗಿದೆ

Vikrama_Kunkuma

4 thoughts on “ಭಾರತದಲ್ಲಿ ಹೆಣ್ಣುಮಕ್ಕಳು ಹಣೆಗೆ ಕುಂಕುಮ ಇಡೋದು ಅಪರಾಧವೇ?

  1. Very sad to know about this incident….
    But ithinking of that girls parents …how r they ..wht they r going through …16years old girl decides to suicide her self …is not good …..but our own neighbours and sorrounded people r ..trying to avoid all our traditions….unfortunately only few of our people r raising voice about this ..others r silent ….first ..b Indian …follow all our traditions ..respect our rituals …its necessary to teach this generation kids ….Jai Shree Krishna 🙏🙏🙏🙏❤

    Liked by 1 person

      1. Sir nice we support ur article we should raise our voice for our children future Never spare people who are trouble sanaathana Dharma

        Liked by 1 person

  2. ಸ್ವಾಮಿ ವಿವೇಕಾನಂದರು ಭಾರತದ ಸಿಂಹಗಳೇ ಜಾಗೃತರಾಗಿರಿ ಎಂದು ಕಂಠ ಶೋಷಣೆ ಮಾಡಿಕೊಂಡರು, ಲೋಕಮಾನ್ಯ ತಿಲಕರು ಮಸೀದಿ ಯಲ್ಲಿ ಧ್ವನಿವರ್ಧಕ ಏಕೆ ನಿಮ್ಮ ಅಲ್ಲಾ ಕಿವುಡನೇ ಎಂದು ಕೇಳಿದರು. ಪೂರ್ವೋತ್ತರ ರಾಜ್ಯಗಳ ವರ್ಣರಂಜಿತ ಸಂಸ್ಕೃತಿಯನ್ನು ಬಿಳೀ ನಿಲುವಂಗಿಯು ನುಂಗಿ ನೀರು ಕುಡಿಯಿತು, ಆದರೂ ನಮ್ಮ ಜನರು ಕಲಿಯಲಿಲ್ಲ. ನನ್ನ ಎರಡೂ ಮಕ್ಕಳನ್ನು ಹಿಂದೂ ಸಂಸ್ಕೃತಿಯ ಶಾಲೆಗಳಲ್ಲೇ ಓದಿಸಿದೆ, ವಿದೇಶದಲ್ಲಿದ್ದು ಇನ್ನೂ ಓದಲು ಬಾರದ ನಾಲ್ಕು ವರ್ಷ ತುಂಬದ ಮೊಮ್ಮಗ ಭಗವದ್ಗೀತೆಯ ಮೊದಲ 25 ಶ್ಲೋಕಗಳನ್ನು ತಾಯಿಯಿಂದ ಕಲಿತಿದ್ದಾನೆ. ಅಲ್ಲಿದ್ದರೂ ಯಾವುದೇ ಹಬ್ಬ ಹರಿದಿನ, ಸಂಕಷ್ಟಹರ ಚತುರ್ಥಿಗಳನ್ನು ಅವರು ತಪ್ಪಿಸುವುದಿಲ್ಲ, ತಂದೆ – ತಾಯಿಯನ್ನು ಮೊಮ್ಮಗ ಅಪ್ಪ ಅಮ್ಮ ಎಂದೇ ಕರೆಯುತ್ತಾನೆ. ನಾವು ಬೆಳೆಸಿದಂತೆ ಮಕ್ಕಳು. ಸಂಸ್ಕೃತಿಯ ಪಾಠ ಮನೆಯಲ್ಲೇ ಆರಂಭವಾಗಬೇಕು. ಇಷ್ಟು ಮಾಡಿ ದೇಶ ಧರ್ಮಕ್ಕೆ ನನ್ನ ಕಿಂಚಿತ್ ಸೇವೆ ಮಾಡಿದೆ ಎಂಬ ಅಲ್ಪ ತೃಪ್ತಿ ನನಗಿದೆ.
    ಇನ್ನೊಂದು ಉದಾಹರಣೆ. ನಮ್ಮ ಮನೆಯ ಬಳಿಯ ತರಕಾರಿ ಅಂಗಡಿಯಲ್ಲಿ ಒಬ್ಬ ಮಹಿಳೆ ತನ್ನ ಮಗನಿಗೆ ಆನೆ ಅಂದರೆ elephant ಎಂದು ಹೇಳಿಕೊಡುತ್ತಿದ್ದಳು, ನಾನು ಆಕೆಗೆ “ಹಾಗಲ್ಲ ಎಲಿಫೆಂಟ್ ಅಂದರೆ ಆನೆ ಅಂತ ಹೇಳಿಕೊಡಿ, ಮಾತೃಭಾಷೆ ಚೆನ್ನಾಗಿ ಕಲಿತರೆ ಬೇರೆ ಭಾಷೆ ಕಲಿಯಲು ಸುಲಭ ” ಎಂದಾಗ ಪೆಚ್ಚಾಗಿದ್ದಳು. ಪರಭಾಷೆ, ವೇಷಗಳಿಗೆ ಬಗ್ಗುವ ನಮ್ಮ ಮೂಲ ಸ್ವಭಾವದಲ್ಲೇ ಬದಲಾವಣೆ ಅಗತ್ಯ.

    Liked by 1 person

Leave a comment