ನೂತನ ಸಂಸದ್ ಭವನದ ಮೇಲಿನ ಧಾಳಿ ಭಧ್ರತಾ ವೈಫಲ್ಯವೋ ಇಲ್ಲವೇ ಷಡ್ಯಂತರವೋ?

parliment413 ಡಿಸೆಂಬರ್ 2001 ರಂದು, ದೆಹಲಿಯ ಸಂಸತ್ತಿನಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದ್ದಂತಹ ಸಂಧರ್ಭದಲ್ಲಿ, ಐವರು ಉಗ್ರಗಾಮಿಗಳು ಗೃಹ ಸಚಿವಾಲಯ ಮತ್ತು ಸಂಸತ್ತಿನ ಲೇಬಲ್‌ಗಳನ್ನು ಹೊಂದಿರುವ ಕಾರಿನಲ್ಲಿ ಸಂಸತ್ತಿನ ಹೌಸ್‌ಗೆ ನುಗ್ಗಿ ಧಾಳಿ ನಡೆಸಿದಾಗ, ಆ ಐವರು ಶಸ್ತ್ರಸಜ್ಜಿತ ಆಕ್ರಮಣಕಾರರನ್ನು ತಡೆಯಲು ಪ್ರಯತ್ನಿಸಿದ್ದ ಆರು ದೆಹಲಿ ಪೊಲೀಸ್ ಸಿಬ್ಬಂದಿ, ಇಬ್ಬರು ಸಂಸತ್ತಿನ ಭದ್ರತಾ ಸೇವೆಯ ಸಿಬ್ಬಂದಿ, ಮತ್ತು ತೋಟಗಾರ ಸೇರಿದಂತೆ ಒಟ್ಟು ಒಂಭತ್ತು ಜನರು ಅಸುನೀಗಿದ್ದರು. ಈ ದಾಳಿಯ ನಂತರ, ತನಿಖೆಯನ್ನು ಕೈಗೆತ್ತಿಕೊಂಡ ಭಾರತೀಯ ಸೇನೆ, ಡಿಸೆಂಬರ್ 2002 ರಲ್ಲಿ ಉಗ್ರ ಸಂಘಟನೆ ಜೈಶ್-ಎ-ಮೊಹಮ್ಮದ್ ನ ನಾಲ್ವತು ಸದಸ್ಯರು ದಾಳಿಯಲ್ಲಿ ಪ್ರಮುಖ ಪಾತ್ರವಹಿಸಿರುವುದನ್ನು ಖಚಿತ ಪಡಿಸಿದ್ದಲ್ಲದೇ, ಆ ನಾಲ್ವರಲ್ಲಿ ಪ್ರಮುಖನಾದ ಮೊಹಮ್ಮದ್ ಅಫ್ಜಲ್ ಗುರು, ಅವರ ಸೋದರ ಸಂಬಂಧಿ ಶೌಕತ್ ಹುಸೇನ್ ಗುರು, ಸೈಯದ್ ಅಬ್ದುಲ್ ರಹಮಾನ್ ಗೀಲಾನಿ ಅವರಿಗೆ ಗಲ್ಲು ಶಿಕ್ಷೆಯನ್ನೂ ಸಹಾ ನೀಡಲಾಗಿತ್ತು

parliment3ಈ ರೀತಿಯಾಗಿ ಸಂಸತ್ತಿನ ಭವನದ ಮೇಲೆ ಧಾಳಿ ನಡೆದು ಸರಿಯಾಗಿ 22 ವರ್ಷಗಳ ನಂತರ ಅದೇ ದಿನ ನೂತನ ಸಂಸತ್ ಭವನದಲ್ಲಿ ಮತ್ತೊಂದು ಅದೇ ರೀತಿಯ ಆಘಾತಕಾರಿ ಘಟನೆ ನಡೆದುಹೋಗಿದೆ. ಬುಧವಾರ, 13 ಡಿಸೆಂಬರ್ 200೩ರಂದು ಸಂಸತ್ ಭವನದಲ್ಲಿ ನಡೆಯುತ್ತಿದ್ದ ಚಳಿಗಾಲದ ಅಧಿವೇಶನದಲ್ಲಿ ಬಿಜೆಪಿ ಸಾಂಸದರು ಎತ್ತಿದ್ದ ಪ್ರಶ್ನೆಗೆ ಚರ್ಚೆ ನಡೆಯುತ್ತಿದ್ದಂತಹ ಸಂಧರ್ಭದಲ್ಲಿ ಎತ್ತರದ ಸಂಸತ್ತಿನ ವೀಕ್ಷಕರ ಗ್ಯಾಲರಿಯಿಂದ ಏಕಾಏಕಿ ಕೆಳಗೆ ಹಾರಿದ ವ್ಯ್ಕತಿಯೊಬ್ಬ ಸಂಸತ್ ಸದಸ್ಯರ ಮೇಜಿನಿಂದ ಮೇಜಿಗೆ ಹಾರುತ್ತಾ, ಸಭಾಧ್ಯಕ್ಷರತ್ತ ಘೋಷಣೆಗಳನ್ನು ಕೂಗುತ್ತಾ ಹೋಗಲು ಪ್ರಯತ್ನಿಸಿದರೆ, ವೀಕ್ಷಕರ ಗ್ಯಾಲರಿಯಲ್ಲಿದ್ದ ಮತ್ತೊಬ್ಬ ಹಾರಲು ಆರಂಭದಲ್ಲಿ ವಿಫಲನಾಗಿ ಅಲ್ಲಿಂದಲೇ ಗ್ಯಾಸ್ ಕ್ಯಾನಿಸ್ಟರ್ ಎಸೆಯುವ ಮೂಲಕ ಹಳದೀ ಬಣ್ಣದ ದಟ್ಟವಾದ ಹೊಗೆಯನ್ನು ಎಬ್ಬಿಸುತ್ತಿದ್ದಂತೆಯೇ ಅದಾಗಲೇ ಸಂಸತ್ ಭವನದಲ್ಲಿದ್ದ ಮತ್ತೊಬ್ಬ ಆಗುಂತಕನೂ ಸಹಾ ತನ್ನ ಷೂನಲ್ಲಿದ್ದ ಗ್ಯಾಸ್ ಕ್ಯಾನಿಸ್ಟರ್ ತಗೆದು ಮತ್ತಷ್ಟು ಹೊಗೆಯನ್ನು ಭರಿಸುತ್ತಿದ್ದಂತೆಯೇ, ಸಂಸತ್ತಿನಲ್ಲಿ ಕೆಲ ಕಾಲ ಆತಂಕ ಉಂಟಾಗಿ ಅನೇಕೆ ಸಾಂಸದರು ದಿಕ್ಕಾ ಪಾಲಾಗಿ ಚಲ್ಲಾ ಪಿಲ್ಲಿಯಾಗಿ ಅತ್ತಿಂದಿತ್ತ ಓಡಿದರೆ, ಇನ್ನೂ ಕೆಲವು ಧೈರ್ಯವಂತ ಸಂಸದರು, ಸಂಘಟಿತರಾಗಿ ಆಗಂತುಕನನ್ನು ಹಿಡಿದು, ಮನಸೋ ಇಚ್ಛೆ ಥಳಿಸಿ ಸ್ಥಳೀಯ ಭದ್ರತಾ ಸಿಬ್ಬಂದಿಗೆ ಒಪ್ಪಿಸುವಷ್ಟರಲ್ಲಿ, ಗ್ಯಾಲರಿಯಲ್ಲಿದ್ದ ಮತ್ತೊಬ್ಬನನ್ನು ಕೂಡ ಬಂಧಿಸಿದರೆ, ಅದೇ ರೀತಿ ಸಂಸತ್ ಭವನದ ಹೊರೆಗೆಯೂ ಸಹಾ ಒಬ್ಬ ಮಹಿಳೆ ಸೇರಿದಂತೆ ಮತ್ತೊಬ್ಬ ವ್ಯಕ್ತಿಯು ಸಹಾ ಇದೇ ರೀತಿ ಸರ್ವಾಧಿಕಾರದ ವಿರುದ್ಧ ಧಿಕ್ಕಾರೆ ಎಂಬಂತಹ ಘೋಷಣೆಯನ್ನು ಕೂಗಿ ಅವರು ಸಹಾ ಹಳದೀ ಹೊಗೆಯನ್ನು ಹಾರಿಸಿದ್ದನ್ನು ಗಮನಿಸಿ ಅವರಿಬ್ಬರನ್ನೂ ಅಲ್ಲಿನ ಭಧ್ರತಾ ಸಿಬ್ಬಂಧಿ ಬಂಧಿಸಿ ಕೆಲ ಕಾಲ ಸಂಸತ್ ಕಲಾಪವನ್ನು ಎರಡು ಗಂಟೆಗಳ ಕಾಲ ಮುಂದು ಹಾಕಿದ ನಂತರ ಎಂದಿನಂತೆ ಕಲಾಪ ಮುಂದು ವರೆದಿದೆ.

rliment6ಸದನದಲ್ಲಿ ದಾಂದಲೆ ನಡೆಸಿದ ಇಬ್ಬರು ಯುವಕರು ಮತ್ತು ಸಂಸತ್ತಿನ ಹೊರಗೆ ಕೂಡ ಬಣ್ಣದ ಸ್ಪ್ರೇ ಎರಚುತ್ತಾ ಸರ್ವಾಧಿಕಾರ ನೆಡೆಯೋದಿಲ್ಲ ಧಿಕ್ಕಾರ ಎನ್ನುವ ಘೋಷಣೆ ಕೂಗುತ್ತಿದ್ದ ಯುವಕ ಯುವತಿಯರನ್ನು ಬಂಧಿಸಿದ ರಕ್ಶಣಾ ಸಿಬ್ಬಂದಿ ನಡೆಸಿದ ಆರಂಭಿಕ ತನಿಖೆಯಲ್ಲಿ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತು ಕಲಾಪ ವೀಕ್ಷಿಸುತ್ತಾ ಇದ್ದಕ್ಕಿದ್ದಂತೆ ಸದಕ್ಕೆ ಧುಮುಕಿದ್ದ ಯುವಕನ ಹೆಸರು ಸಾಗರ್ ಶರ್ಮ ಎಂಬುದಾಗಿದ್ದರೆ, ಅದೇ ರೀತಿ ಗ್ಯಾಲರಿಯಿಂದ ಧುಮುಕಲು ಸಾಧ್ಯ ಆಗದೇ ಅಲ್ಲಿಂದಲೇ ಸ್ಪ್ರೇ ಎರಚಿದ್ದ ಯುವಕನ ಹೆಸರು ಮನೋರಂಜನ್ ಎಂಬುದಾಗಿದ್ದು ಇನ್ನು ಸಂಸತ್ ಭವನದ ಹೊರಗೆ ಪ್ರತಿಭಟನೆ ನಡೆಸಿದ್ದ ಯುವತಿಯ ಹೆಸರು ನೀಲಾ ಎಂಬುದಾಗಿದ್ದು, ಈಕೆ ಕೇಂದ್ರ ಸರ್ಕಾರದ ವಿರುದ್ಧ ನೆಡೆದ ಇತ್ತೀಚಿನ ಅನೇಕ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ವಿವರಗಳು ಲಭಿಸಿದ್ದು, ಈ ಪ್ರಕರಣದ ಹಿಂದೆ ಯಾವುದಾದರೂ ಸಂಘಟನೆಯ ಕೈವಾಡವಿದೆ? ಈ ಧಾಳಿಯ ಹಿನ್ನಲೆ ಏನು? ಈ ಹಿಂದೆ ಡಿಸೆಂಬರ್ ೧೩ನೇ ತಾರೀಖಿನಿಂದೇ ಸಂಸತ್ ಭವನದ ಮೇಲೆ ಧಾಳಿ ನಡೆಸುವುದಾಗಿ ಹೇಳಿಕೆ ನೀಡಿದ್ದ ಸಿಖ್ ಸಂಘಟನೆಯ ಪನ್ನುಗೂ ಇದಕ್ಕೂ ಏನಾದರೂ ಸಂಭಂಧ ಇದೇಯೇ? ಎಂಬ ವಿವರಗಳೆಲ್ಲವೂ ತನಿಖೆಯ ಸಮಯದಲ್ಲಿ ಹೊರ ಬರಬೇಕಾಗಿದೆ.

ಈ ಧಾಳಿ ನಡೆದ ಸಂಧರ್ಭದಲ್ಲಿ ಅದೃಷ್ಟವಷಾತ್ ಪ್ರಧಾನ ಮಂತ್ರಿಗಳು, ಗೃಹಮಂತ್ರಿಗಳು, ವಿರೋಧ ಪ್ರಮುಖ ನಾಯಕರುಗಳು ಸಂಸತ್ ಭವನದಲ್ಲಿ ಇಲ್ಲದೇ ಹೋಗಿದ್ದದ್ದು ಗಮನಾರ್ಹವಾಗಿದೆ. ಈ ಘಟೆನೆ ಕುರಿತು ಕೂಡಲೇ ಗೃಹ ಇಲಾಖೆಗೆ ಪತ್ರವನ್ನು ಬರೆದಿರುವ ಸಭಾಧ್ಯಕ್ಷ ಓಂ ಬಿರ್ಲಾರವರು ಮೇಲ್ನೋಟಕ್ಕೆ ಇದು ಸಂಸತ್ ಭವನದ ಭದ್ರತಾ ವೈಫಲ್ಯ ಎದ್ದು ಕಾಣುತ್ತಿದ್ದು, ಈ ಕುರಿತಂತೆ ಸೂಕ್ತವಾದ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣವಾದ ಶಿಕ್ಷೆಯನ್ನು ಕೊಡುವುದಲ್ಲದೇ, ಮುಂದೆ ಈ ರೀತಿ ಆಗದಂತೆ ಎಚ್ಚರ ವಹಿಸಬೇಕೆಂದು ಕಿವಿ ಮಾತನ್ನು ಹೇಳಿದ್ದಾರೆ. ಅದೇ ರೀತಿಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಸದನದ ಕಲಾಪವನ್ನು ವೀಕ್ಷಿಸಲು ಸಾಂಸಂದರ ಶಿಫಾರಸ್ಸಿನ ಮೇಲೆ ಕೊಡುತ್ತಿದ್ದ ಪಾಸುಗಳನ್ನು ತತ್ ಕ್ಷಣದಿಂದಲೇ ನಿಷೇಧಿಸಿದ್ದಾರೆ.

ಇವೆಲ್ಲದರ ನಡುವೆ ಈ ಧಾಳಿಯ ಪ್ರಮುಖ ರೂವಾರಿ ಮನೋರಂಜನ್ ಮೈಸೂರಿನ ಮೂಲದ ವ್ಯಕ್ತಿಯಾಗಿದ್ದು ಆತನ ಮನೆ ಮೈಸೂರು ಕೊಡಗು ಸಂಸದರ ಕಚೇರಿ ಜಲದರ್ಶಿನಿ ಹತ್ತಿರವೇ ಇದ್ದು, ದೆಹಲಿಯಲ್ಲಿ ನೂತನ ಸಂಸತ್ ಭವನ ನೋಡಲು ಪಾಸ್ ಕೊಡಿಸ ಬೇಕೆಂದು ಸುಮಾರು ಮೂರು ತಿಂಗಳಿಂದ ಸಂಸದ ಪ್ರತಾಪ್ ಸಿಂಹ ಅವರ ಹಿಂದೆ ಬಿದ್ದಿದ್ದ ಎಂಬ ವಿಷಯ ತಿಳಿದು ಬಂದಿದ್ದು, ಯಾವುದೇ ಪಕ್ಷ ಅಥವಾ ಸಂಘಟನೆಯೊಂದಿಗೆ ಗುರಿಸಿಕೊಂಡಿರದ ಆತನ ತಂದೆಯವರಾದ ಶ್ರೀ ದೇವೇಗೌಡರ ಪರಿಚಯ ಸಂಸದರಿಗೆ ಇದ್ದ ಕಾರಣ, ಎರಡು ಪಾಸುಗಳನ್ನು ಕೊಡಲಾಗಿತ್ತು ಎಂದು ಸಂಸದ ಪ್ರತಾಪ್ ಸಿಂಹ ಅವರಿಂದ ತಿಳಿದು ಬಂದಿದೆ. ಮೊದಲನೇ ಪಾಸಿನಲ್ಲಿ ಮನೋರಂಜನ್ ಮತ್ತು ಆತನ ಸ್ನೇಹಿತ ಸಾಗರ್ ಶರ್ಮನಿಗೆ ಸಂಸತ್ ಭವನದೊಳಗೆ ಬಂದರೆ, ಇನ್ನೊಂದು ಪಾಸ್ ನಲ್ಲಿ ಒಬ್ಬ ಯುವತಿ ಹಾಗೂ ಆಕೆಯ ಸ್ನೇಹಿತ ಕೂಡ ಸಂಸತ್ತಿನ ಒಳಗೆ ಪ್ರವೇಶಿಸಲು ಪ್ರಯತ್ನಿಸಿದರೂ, ಆಕೆ ತನ್ನ ಜೊತೆಗೆ ಮಗುವನ್ನು ಕರೆ ತಂದಿದ್ದರಿಂದ ಆಕೆಗೆ ಪ್ರವೇಶವನ್ನು ನಿರಾಕರಿಸಲಾಗಿತ್ತು ಎಂದು ತಿಳಿದು ಬಂದಿದೆ.

ಇಪ್ಪತ್ತೆರಡು ವರ್ಷಗಳ ಹಿಂದೆ ನಡೆದ ಸಂಸತ್ತಿನ ಮೇಲಿನ ದಾಳಿಯ ವಾರ್ಷಿಕ ದಿನದ ಸಂದರ್ಭದಲ್ಲೇ ಈ ರೀತಿಯ ಕೃತ್ಯದ ಯೋಜನೆ ರೂಪಿಸಲಾಗಿದ್ದು, ಮೇಲ್ನೋಟಕ್ಕೆ ಇದು ಗಂಭೀರ ಭದ್ರತಾ ಲೋಪದಂತೆ ಕಾಣುತ್ತಿದೆಯಲ್ಲದೇ ಸ್ಪ್ರೇ ಜಾಗದಲ್ಲಿ ಮಾರಕ ಆಯುಧಗಳನ್ನು ಹೊಂದಿದ್ದರೆ ಪರಿಸ್ಥಿತಿ ಏನಾಗುತ್ತಿತ್ತು ಎನ್ನುವ ಆತಂಕ ಪಕ್ಷಾತೀತವಾಗಿ ಸಂಸದರೆಲ್ಲಾ ತೋರಿದ್ದಾರೆ.

ಸಾಮಾನ್ಯವಾಗಿ ಯಾವುದೇ ಸಾಂಸದರು ಮತ್ತು ಶಾಸಕರುಗಳು ತಮ್ಮ ಕ್ಷೇತ್ರದವರು ಸಂಸತ್/ವಿಧಾನ ಸಭಾ ಅಧಿವೇಶನದಲ್ಲಿ ವೀಕ್ಷಕರಾಗಲು ಬಂದಾಗ ಸಹಜವಾಗಿಯೇ ಕೆಲವೊಂದು ಪ್ರಶ್ನೆಗಳನ್ನು ಕೇಳಿ ಅದು ಸಮಾಧಾನಕರ ಎನಿಸಿದಲ್ಲಿ, ಅವರಿಗೆ ಪಾಸುಗಳನ್ನು ಕೊಡುವುದು ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿರುವಂತಹ ಸಂಪ್ರದಾಯವಾಗಿದ್ದು ಅದನ್ನೇ ಮೈಸೂರಿನ ಪ್ರತಾಪ್ ಸಿಂಹ ಅವರೂ ಮಾಡಿರುವ ಕಾರಣ ಈ ಪ್ರಕ್ತಿಯೆಯನ್ನು ಹೆಚ್ಚಿನ ರಾಜಕೀಯ ಗೊಳಿಸುತ್ತಿರುವುದು ನಿಜಕ್ಕೂ ಹೇಯಕರ ಎನಿಸುತ್ತದೆ. ಆದರೆ ನೆನ್ನೆ ಮಧ್ಯಾಹ್ನದಿಂದಲೇ ಕರ್ನಾಟಕದ ಮುಖ್ಯಮಂತ್ರಿಗಳ ಆದಿಯಾಗಿ ಬಹಳಷ್ಟು ಕಾಂಗ್ರೇಸ್ ನಾಯಕರುಗಳು ಪ್ರತಾಪ್ ಸಿಂಹ ವರನ್ನು ಬಂಧಿಸಿ ತೀವ್ರವಾಗಿ ತನಿಖೆ ನಡೆಸಬೇಕು ಎಂದು ಪುಂಖಾನಪುಂಖವಾಗಿ ಭಾಷಣ ಮಾಡುತ್ತಿರುವುದಲ್ಲದೇ, ಒಂದೆರಡು ಕಡೆ ಪ್ರತಿಭಟನೆಯನ್ನೂ ಮಾಡಿರುವುದನ್ನು ನೋಡಿದರೆ, ಇದು ಚುನಾವಣೆಗು ಮುನ್ನಾ ಪ್ರತಾಪ್ ಸಿಂಹ ವರಿಗೆ ಕೆಟ್ಭ್ಸ ಹೆಸರನ್ನು ತರಲು ಕಾಂಗ್ರೇಸ್ ಮಾಡಿರುವ ಮತ್ತೊಂದು ಟೂಲ್ ಕಿಟ್ ಇರಬಹುದೇ ಎನ್ನುವುದೂ ಸಹಾ ಜನರ ಅಭಿಪ್ರಾಯವಾಗಿದೆ.

ಕೇಂದ್ರ ಸರ್ಕಾರದ ತನಿಖೆ ಬಗ್ಗೆ ಮತ್ತು ದೆಹಲಿ ಪೋಲೀಸರ ಮೇಲೆ ಅಪರಿಮಿತ ವಿಶ್ವಾಸವಿದ್ದು, ದೇಶದ್ರೋಹಿಗಳು ಮತ್ತು ಈ ಧಾಳಿಯ ಹಿಂದಿರುವ ನಿಜವಾದ ಕಾಣದ ಕೈಗಳು ಮತ್ತು ರಾಜಕೀಯ ಕಾರಣಗಳಿಗೆ ಪ್ರತಾಪ್ ಸಿಂಹ ವರನ್ನು ದೂಷಿಸುತ್ತಿರುವ ಕಾಂಗ್ರೆಸ್ ನರಿ ಬುದ್ದಿ ಅನಾವರಣಗೊಳ್ಳಲಿದೆ.

WhatsApp Image 2023-12-14 at 22.55.21ಹಾ! ಮೂರ್ನಾಲ್ಕು ತಿಂಗಳುಗಳ ಹಿಂದೆ ವಯೋವೃದ್ಧರೊಬ್ಬರು ತಾನೊಬ್ಬ ಶಾಸಕ ಎಂದು ಹೇಳಿಕೊಂಡು ರಾಜ್ಯಪಾಲರ ಭಾಷಣ ನಡೆಯುತ್ತಿದ್ದಾಗ ಕೆಲವು ನಿಮಿಷಗಳ ಕಾಲ ವಿಧಾನಸಭಾಂಗಣದಲ್ಲಿ ಕುಳಿತುಕೊಂಡಿದ್ದಾಗ ಭಧ್ರತಾ ಲೋಪಕವಾಗಿರಲಿಲ್ಲವೇ? ಆ ಪ್ರಕರಣದ ತನಿಖೆ ಏನಾಯಿತು? ಅದರಕ್ಕೆ ಗೃಹಮಂತ್ರಿಗಳು ಮತ್ತು ಮುಖ್ಯಮಂತ್ರಿಗಳನ್ನು ಹೊಣಗಾರಿಗೆ ಮಾಡಲಾಗುತ್ತದೆಯೇ? ಕಾಕತಾಳೀಯವೋ ಅಥವಾ ಪೂರ್ವ ನಿರ್ಧಾರಿತವೋ ಎನ್ನುವಂತೆ ಹಳದೀ ಹೊಗೆ ಕಾಣಿಸುತ್ತಿದ್ದಂತೆಯೇ ಸಂಸದರೆಲ್ಲಾ ಚೆಲ್ಲಾಪಿಲ್ಲಿಯಾಗಿ ಓಡುತ್ತಿರುವಾಗ ರಾಹುಲ್ ಗಾಂಧಿ ಮಾತ್ರಾ ಮಾತ್ರ ಸ್ವಲ್ಪವೂ ವಿಚಲಿತರಾಗದೇ ವೀಕ್ಷಿಸುತ್ತಿದ್ದದ್ದೂ ಅನುಮಾನ ಮೂಡಿಸುತ್ತದೆ ಎಂದು ಜನರು ಮಾತಾಡಿಕೊಳ್ಳುತ್ತಿದ್ದಾರೆ. ಬೆಂಕಿ ಇಲ್ಲದೇ ಹೊಗೆ ಆಡುವುದಿಲ್ಲ ಅಲ್ವೇ?

WhatsApp Image 2023-12-14 at 22.51.54ಬೆಂಗಳೂರಿಗೆ ಹೋಗುವೆ ಎಂದು ಹೇಳಿ ಹೋಗಿದ್ದ ನಮ್ಮ ಮಗ ಈ ರೀತಿಯಾಗಿ ಮಾಡಿದ್ದಾನೆ ಎಂದರೆ ನಂಬಲೂ ಆಗುತ್ತಿಲ್ಲ. ಇಂಜಿನಿಯರೀಂಗ್ ಓದಿ ಕೆಲಸಕ್ಕೆ ಹೋಗದೇ, ಊರೂರು ಅಲೆಯುತ್ತಿದ್ದ ನಮ್ಮ ಮಗನಿಗೆ ಯಾವುದೇ ಸಂಘಟನೆಯಾಗಲಿ ಅಥವಾ ರಾಜಕೀಯ ಪಕ್ಷದೊಂದಿಗೆ ಸಂಪರ್ಕ ಇರಲಿಲ್ಲ ತೋಟ ಕೆಲಸ ಮಾಡಿಕೊಂಡಿದ್ದ ಎಂದು ಹೇಳಿರುವ ಮನೋರಂಜನ್ ಅವರ ತಂದೆಯವರು ಹೇಳಿದ್ದರೂ, ಮನೋರಂಜನ್ SFI ಸಮ್ಮೇಳನದಲ್ಲಿ ಕ್ಷೇತ್ರದ ಪ್ರಜೆಯಾಗಿ ಭಾಗವಹಿಸಿದ್ದಲ್ಲದೇ, ಆ ಕೃತ್ಯದಲ್ಲಿ ಭಾಗಿಗಳಾಗಿದ್ದ ಉಳಿದವರೊಡನೇ ಸುದೀರ್ಘವಾದ ಸಂಪರ್ಕ ಹೊಂದಿದ್ದ ಎನ್ನುವುದು ಆರಂಭಿಕೆ ತನಿಖೆಗಳ ಮೂಲಕ ತಿಳಿದು ಬಂದಿದೆ.

WhatsApp Image 2023-12-13 at 22.40.33ತನಿಖೆಯ ಮುಂದುವರೆದ ಭಾಗವಾಗಿ ಈ ನಾಲ್ವರಲ್ಲದೇ ಗುರುಗ್ರಾಮದಲ್ಲಿ ಸೆಕ್ಯುರಿಟಿ ಆಗಿ ಕೆಲಸ ಮಾಡುತ್ತಿರುವಾತ ಮತ್ತು ಆತನ ಪತ್ನಿಯನ್ನು ಸಹಾ ಬಂಧಿಸಿರುವುದಲ್ಲದೇ, ಇವರೆಲ್ಲರಿಗೂ ಪ್ರೇರೇಪಣೆ ಮಾಡಿದಂತಹ ಮತ್ತು ಸಂಸದ್ ಭವನದ ಹೊರಗೆ ನಡೆಯುತ್ತಿದ್ದ ಪ್ರತಿಭಟನೆಯನ್ನು ವೀಡೀಯೋ ಮಾಡಿ ಅದನ್ನು ಪಶ್ಚಿಮ ಬಂಗಾಳದಲ್ಲಿ ಎ.ಜಿ.ಓ ನಡೆಸುತ್ತಿರುವ ತನ್ನ ಸ್ನೇಹಿತನಿಗೆ ಕಳುಹಿಸಿ ಈಗ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ತಲೆ ಮರೆಸಿಕೊಂಡಿರುವ ಆರೋಪಿ ಲಲಿತ್ ಝಾ ಎಂಬುವನ ಬೆನ್ನ ಹಿಂದೆ ಪೋಲೀಸರು ಬಿದ್ದಿದ್ದು ಪ್ರಾಥಮಿಕ ತನಿಖಾ ಹಂತದಲ್ಲಿ ಈ ಎಲ್ಲಾ ಆರೋಪಿಗಳು ಭಗತ್ ಸಿಂಗ್ ಅಭಿಮಾನಿಗಳ ಸಂಘದೊಂದಿಗೆ ಸಂಬಂಧ ಹೊಂದಿದ್ದರು ಎಂಬ ಅಂಶವೂ ಬೆಳಕಿಗೆ ಬಂದಿದ್ದೂ ತನಿಖೆ ಮುಂದುವರೆದಂತೆಲ್ಲಾ ಇವರೆಲ್ಲರ ಬಣ್ಣ ಸಂಪೂರ್ಣ ಬಯಲಾಗಿಯೇ ತೀರುತ್ತದೆ.

WhatsApp Image 2023-12-14 at 22.40.03ಅದೇ ರೀತಿ INDIA ಒಕ್ಕೂಟದ ಪಕ್ಷಗಳು ಸಿಕ್ಕಾ ಪಟ್ಟೇ ಹಾರಾಡುತ್ತಿರುವುದನ್ನು ಸೂಕ್ಷ್ಮವಾಗಿ ಗಮನನಿಸಿದರೆ ಸಂಸದ ಪ್ರತಾಪ್ ಸಿಂಹರಿಗೆ ಮತ್ತು ಮೋದಿಯವರಿಗೆ ಕೆಟ್ಟ ಹೆಸರು ತರುವ ಸಲುವಾಗಿಯೇ, ಈ ಕಾಂಗ್ರೆಸಿಗರು ಮತ್ತು ದೇಶದ ಬಗ್ಗೆ ಕಮ್ಮಿ ನಿಷ್ಠೆ ಹೊದಿರುವ ಕಮ್ಯೂನಿಷ್ಠರ ಕೈವಾಡದ ಬಗ್ಗೆಯೂ ಅನುಮಾನ ಮೂಡುತ್ತಿದ್ದು ಏನೇ ಆಗಲಿ, ಈ ಕುರಿತಾಗಿ ಉನ್ನತ ಮಟ್ಟದ ತನಿಖೆ ನಡೆದು ನಿಜವಾದ ಅಪರಾಧಿಗಳಿಗೆ ಕಠಿಣವಾದ ಶಿಕ್ಷೆಯಾಗಲೀ ಮತ್ತು ಈ ಘಟನೆಯ ಮೂಲಕ ನಮ್ಮ ಸಂಸತ್ ಭವನದ ರಕ್ಷಣಾ ವ್ಯವಸ್ಥೆ ಇನ್ನಷ್ತು ಸುಧಾರಿಸಲಿ ಎನ್ನುವುದೇ ಎಲ್ಲರ ಆಶಭಾವನೆಯಾಗಿದೆ ಅಲ್ವೇ?

ಏನಂತೀರೀ?
ಸೃಷ್ಟಿಕರ್ತ ಉಮಾಸುತ

One thought on “ನೂತನ ಸಂಸದ್ ಭವನದ ಮೇಲಿನ ಧಾಳಿ ಭಧ್ರತಾ ವೈಫಲ್ಯವೋ ಇಲ್ಲವೇ ಷಡ್ಯಂತರವೋ?

Leave a reply to scpkumar Cancel reply