13ನೇ ಶತಮಾನದಲ್ಲಿ ದೆಹಲಿಯನ್ನು ಆಳಿದ ಸುಲ್ತಾನ ಮಹಮ್ಮೊದ್ ಬಿನ್ ತುಘಲಕ್ ತನ್ನ ರಾಜಧಾನಿಯನ್ನು ದೆಹಲಿಯಿಂದ ದೇವಗಿರಿಗೆ ನಂತರ ದೇವಗಿರಿಯಿಂದ ದೆಹಲಿಗೆ ಏಕಾಏಕಿ ರಾಜಧಾನಿಯನ್ನು ಬದಲಿಸುತ್ತಾ, ಚಿನ್ನದ ನಾಣ್ಯಗಳಿಂದ ಬೆಳ್ಳಿಗೆ, ನಂತರ ಬೆಳ್ಳಿ ನಾಣ್ಯಗಳಿಂದ ತಾಮ್ರದ ನಾಣ್ಯಕ್ಕೆ ಬದಲಿಸುತ್ತಾ ಹುಚ್ಚಾ ಪಟ್ಟೇ ಸರ್ಕಾರ ನಡೆಸಿದ್ದಕ್ಕಿಂತಲೂ ಕೆಟ್ಟದಾಗಿ ಪ್ರಸ್ತುತ ಕರ್ನಾಟಕದ ಸಿದ್ದರಾಮಯ್ಯನವರ ಕಾಂಗ್ರೇಸ್ ಸರ್ಕಾರ ಆಡಳಿತ ನಡೆಸುತ್ತಿದೆ ಎಂಬುದಕ್ಕೆ ಅಂಗೈಯಲ್ಲಿ ಆದ ಹುಣ್ಣಿಗೆ ಕನ್ನಡಿ ಬೇಕೆ ಎಂಬಂತೆ ಹಲವಾರು ಸಾಕ್ಷಿಗಳು ಕಣ್ಣಮುಂದೆಯೇ ರಾಚುತ್ತಿದೆ.
ಕಳೆದ ವಾರವಷ್ಟೇ ಕರ್ನಾಟಕದ ಮುಖ್ಯಮಂತ್ರಿಗಳು ಈ ಕೇಂದ್ರ ಶರ್ಕಾರ, ಕರ್ನಾಟಕ ರಾಜ್ಯದ ಬಗ್ಗೆ ಮಲತಾಯಿ ಧೋರಣೆ ತೋರುತ್ತಿದೆ. ನಮ್ಮ ರಾಜ್ಯದಿಂದ ಸಂಗ್ರಹಿಸಿದ ತೆರಿಗೆ ಬೇರೆ ರಾಜ್ಯಗಳಿಗಳಿಗೆ ಕೊಡುವ ಮೂಲಕ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಬಳಿಯಲಾಗುತ್ತಿದೆ ಎಂದು ಅಬ್ಬಿರಿದು ಬೊಬ್ಬಿರಿದು ಇಡೀ 136 ಕಾಂಗ್ರೇಸ್ ಶಾಸಕರನ್ನು ದೆಹಲಿಗೆ ಕರೆದುಕೊಂಡು ಜಂತರ್ ಮಂತರ್ ಮುಂದೆ ಪ್ರತಿಭಟನೆ ಮಾಡಿ ದೇಶದ ಗಮನ ಸೆಳೆದ ನಂತರ ಕೇಂದ್ರ ವಿತ್ತ ಸಚಿವೆ ಎಳೆ ಎಳೆಯಾಗಿ ಕೇಂದ್ರದಿಂದ ಕೊಟ್ಟ ಎಲ್ಲಾ ಅನುದಾನಗಳನ್ನೂ ಬಿಚ್ಚಿಟ್ಟಾಗ, ಅಂಡು ಸುಟ್ಟ ಬೆಕ್ಕಿನಂತೆ ಬಾಲ ಮುಚ್ಚಿಕೊಂಡು ನಾವು ಕೇಂದ್ರ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡುವುದಿಲ್ಲಾ ಎಂದು ಹೇಳುತ್ತಾ, ಪರೋಕ್ಷವಾಗಿ ಈ ತುಘಲಕ್ ವಾಟ್ಯಾಪ್ ಸರ್ಕಾರ ಒಪ್ಪಿಕೊಂಡಂತಿದೆ.
ಬಿಟ್ಟಿ ಭಾಗ್ಯಗಳ ಸರ್ಕಾರ
2023ರ ಮೇ ತಿಂಗಳಿನಲ್ಲಿ ಕೇವಲ ಗ್ಯಾರಂಟಿ ಎಂಬ ಉಚಿತಗಳ ಆಮೀಷಗಳ ಮೂಲಕ ಅಧಿಕಾರಕ್ಕೆ ಬಂದ ಈ ಕಾಂಗ್ರೇಸ್ ಸರ್ಕಾರ ಕೇವಲ 9 ತಿಂಗಳುಗಳಲ್ಲಿ ಹೆಜ್ಜೆ ಹೆಜ್ಜೆಗೂ ತಪ್ಪನ್ನು ಎಸಗುವ ಮೂಲಕ ಥೂ!, ಛೇ!! ಇಂತಹ ದರಿದ್ರ ಸರ್ಕಾರವನ್ನು ಆರಿಸುವ ಮೂಲಕ ಬಾಣಲೆಯಿಂದ ನೇರವಾಗಿ ಬೆಂಕಿಗೆ ಬಿದ್ದ ಹಾಗಾಯ್ತು ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ನಾವು ಅಧಿಕಾರಕ್ಕೆ ಬಂದ 24 ಗಂಟೆಗಳ ಒಳಗೆ ಎಲ್ಲಾ ಗ್ಯಾರಂಟಿಗಳನ್ನೂ ಜಾರಿಗೆ ತರುತ್ತೇವೆ ಮಹದೇವಪ್ಪಾ.. ಕಾಕಾ ಪಾಟೀಲ್ 200 ಯೂನಿಟ್ ವಿದ್ಯುತ್ ನಿನಗೂ ಫ್ರೀ ನಿಮ್ಮ ಹೆಂಡತಿಗೂ ಬಸ್ ಫ್ರೀ.. ಅತ್ತು ಕೆಜಿ ಅಕ್ಕಿ ಬೇಕೋ ಬೇಡ್ವಾ!! ಎಂದು ಬಹಿರಂಗವಾಗಿ ಹೇಳಿದವರು ನಂತರದ ದಿನಗಳಲ್ಲಿ ಹೇಳಿದ್ದೆಲ್ಲವನ್ನೂ ಜಾರಿಗೆ ತರಲು ಆಗುತ್ತದೇಯೇ? ಚುನಾವಣೆ ಸಮಯದಲ್ಲಿ ಏನೋ ಹೇಳ್ತೀವಪ್ಪಾ! ಎಂದು ಸದನದಲ್ಲೇ ಲಜ್ಜೆಗೆಟ್ಟು ಹೇಳಿ ನಂತರ ವಿವಿಧ ಷರತ್ತುಗಳೊಡನೆ ಕಾಟಾಚಾರಕ್ಕೆ ಹೇಳಿದ ಗ್ಯಾರಂಟಿಗಳನ್ನು ಜಾರಿಗೆ ತರುತ್ತಿದ್ದಂತೆಯೇ, ಜನರಿಗೂ ಸಹಾ ಮುಂದಿನ ಲೋಕಸಭೆಯ ನಂತರ ಈ ಗ್ಯಾರಂಟಿಗಳು ಬಿಡಿ, ಸಿದ್ದರಾಮಯ್ಯನವರ ಈ ಸರ್ಕಾರ ಉಳಿಯುತ್ತದೆಯೋ ಇಲ್ಲವೋ ಎಂಬ ಗ್ಯಾರಂಟಿಯೇ ಇಲ್ಲದಂತಾಗಿದೆ.
80% ಕಮಿಷನ್ ಸರ್ಕಾರ
ಅಧಿಕಾರಕ್ಕೆ ಬಂದ ನಂತರ ಕೋಟಾ ಪದ್ದತಿಯಲ್ಲಿ ತಂದೆಯವರ ಅರ್ಹತೆಯ ಮೇಲೆ ಪ್ರಿಯಾಂಕ್ ಖರ್ಗೆ, ಮಧು ಬಂಗಾರಪ್ಪ ಅಂತಹ ಪಿಯೂಸಿ ಫೇಲ್ ಅದವರನ್ನು ಮಂತ್ರಿಗಳನ್ನಾಗಿ ಮಾಡಿದ ಮೇಲಂತೂ ಜನರಿಗೆ ಈ ಸರ್ಕಾರದ ಮೇಲಿನ ನಂಬಿಕೆಯೇ ಹೊರಟು ಹೋಗಿದ್ದಕ್ಕೆ ಪುಷ್ಟಿಕೊಡುವಂತೆ ಹಿಂದಿನ ಸರ್ಕಾರ ಜಾರಿಗೆ ತಂದಿದ್ದ ಪಠ್ಯಪುಸ್ತಕವನ್ನು ಕಿತ್ತು ಬಿಸಾಕಿದ್ದೇವೆ ಎಂದು ಉದ್ಧಟತನದಿಂದ ಮಾತನಾಡುವ ಮಧು ಬಂಗಾರಪ್ಪಾ ಮತ್ತು ತನ್ನ ಖಾತೆಯನ್ನು ಬಿಟ್ಟು ಉಳಿದೆಲ್ಲಾ ಮಂತ್ರಿಗಳ ಖಾತೆಗಳಲ್ಲೂ ಅನಗತ್ಯವಾಗಿ ಮೂಗು ತೂರಿಸುತ್ತಾ, ತಾನೊಬ್ಬ ಮಹಾನ್ ಪ್ರಭೂತಿ ಎಂದು ಸರ್ಕಾರದ ಎಲ್ಲಾ ನಡೆಗಳನ್ನೂ ಸಮರ್ಥನೆ ಮಾಡುತ್ತಾ ತನ್ನ ಆಷಾಡಭೂತಿ ತನ ತೋರಿಸುವ ಮರಿ ಖರ್ಗೆ ಮತ್ತು ಸಿನಿಮಾ ಡೈಲಾಗ್ ಮೂಲಕ ಅಚಾನಕ್ ಆಗಿ ಆಯ್ದೆಯಾದ ಚಿಕ್ಕಬಳ್ಳಾಪುರದ ಪಿಯೂಸಿ ಪಾಸ್ ಬಫೂನ್ ಪ್ರದೀಪ್ ಈಶ್ವರ್ ಅವರ ಕಾಟ ಒಂದೆಡೆಯಾದರೆ ಕಳೆದ ಸರ್ಕಾರವನ್ನು 40% ಕಮಿಷನ್ ಸರ್ಕಾರ ಎಂಬ ಸುಳ್ಳನ್ನು ಹೇಳೀ ಅಧಿಕಾರಕ್ಕೆ ಬಂದು ಈಗ 80% ಕಮಿಷನ್ ಪಡೆಯುತ್ತಿದೆ ಎಂದು ಖುದ್ದು ಗುತ್ತಿಗೆದಾರ ಸಂಘದ ಅಧ್ಯಕ್ಷರಾದ ಕೆಂಪಣ್ಣನವರೇ ಹೇಳುವ ಮೂಲಕ ಸಾಕಪ್ಪಾ ಸಾಕು ಈ ಸರ್ಕಾರ ಎಂದು ಜನರು ಆಡಿಕೊಳ್ಳುತ್ತಿರುವುದು ಈಗ ಗುಟ್ಟಾಗೇನು ಉಳಿದಿಲ್ಲ.
ಹಿಂದೂ ವಿರೋಧಿ ಭಾವನೆಯ ಸರ್ಕಾರ
ಕೆಲ ವಾರಗಳ ಹಿಂದೆಯಷ್ಟೇ ಸರ್ಕಾರೀ ಶಾಲೆಗಳು ಮತ್ತು ಹಾಸ್ಟೆಲ್ಲುಗಳಲ್ಲಿ ರಾಷ್ಟ್ರೀಯ ಹಬ್ಬಗಳನ್ನು ಹೊರತು ಪಡಿಸಿ ಯಾವುದೇ ಧಾರ್ಮಿಕ ಹಬ್ಬಗಳನ್ನು ಆಚರಿಸುವಂತಿಲ್ಲಾ ಎಂಬ ಆದೇಶ ಹೊರಡಿಸಿ ಅದಕ್ಕೆ ಅಕ್ಷೇಪಣೇ ವ್ಯಕ್ತವಾಗುತ್ತಿದ್ದಂತೆಯೇ ಅದೇ ಸಂಜೆಯೇ ತನ್ನ ಆದೇಶವನ್ನು ಹಿಂದುರಿಗೆ ಪಡೆದಿತ್ತು. ಇದಕ್ಕೆ ಪುಷ್ಟಿ ಕೊಡುವಂತೆ ಕಳೆದ ವಾರ ಗುಲ್ಬರ್ಗಾದ ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿ ವಿದ್ಯಾರ್ಥಿಗಳು ಶ್ರದ್ಧೆಯಿಂದ ಹತ್ತಾರು ವರ್ಷಗಳಿಂದ ಅನೂಚಾನವಾಗಿ ನಡೆಸುಕೊಂಡು ಬರುತ್ತಿದ್ದ ವಸಂತ ಪಂಚಮಿ ಆಚರಣೆಯನ್ನು ವಿರೋಧಿಸುತ್ತಾ, ಇದೇನು ವಿಶ್ವವಿದ್ಯಾಲಯವೋ? ಇಲ್ಲಾ ಹಿಂದೂ ದೇವಸ್ಥಾನವೋ ಎಂದು ಅಬ್ಬಿರಿದು ಬೊಬ್ಬಿರಿದ್ದ ವಿಡಿಯೋ ವೈರಲ್ ಆಗಿದ್ದಕ್ಕೂ ಪರೋಕ್ಷವಾಗಿ ಕಮ್ಯೂನಿಸ್ಟ್ ವಿದ್ಯಾರ್ಥಿ ಸಂಘಟನೆ ಮತ್ತು ಕಾಂಗ್ರೇಸ್ ಪಕ್ಷದ ಬೆಂಬಲ ಇತ್ತೆಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.
Telegram/WhatsApp/Instagram ಸರ್ಕಾರ
ಗುರು ಹಿರಿಯರಿಗೆ, ಮಠ ಮಾನ್ಯಗಳಿಗೆ ಕೈ ಮುಗಿದು ನಮಸ್ಕಾರ ಮಾಡುವುದು ಅನೂಚಾನವಾಗಿ ನಡೆದುಕೊಂಡು ಬಂದಿರುವಂತಹ ನಮ್ಮ ಈ ದೇಶದ ಸಂಸ್ಕಾರ ಮತ್ತು ಸಂಸ್ಕೃತಿ ಆದರೆ, ಸಿದ್ದರಾಮಯ್ಯನವರ ಪ್ರಸ್ತುತ ಸರ್ಕಾರ ಆಡಳಿತಕ್ಕೆ ಬಂದ ನಂತರ ಸರ್ಕಾರದ ಕೆಲವು ಹಿರಿಯ ಅಧಿಕಾರಿಗಳಿಗೆ ಕೈ ಮುಗಿದು ಒಳಗೆ ಬರುವುದು ಹಿಂದೂ ಗುಲಾಮಿಗಿರಿಯ ಪದ್ದತಿ ಹಾಗಾಗಿ ಅದನ್ನು ಬದಲಿಸಬೇಕೆಂಬ ಆಲೋಚನೆ ಬಂದ ಕೂಡಲೇ, ಮಣಿವಣ್ಣನ್ ಎಂಬ IAS ಅಧಿಕಾರಿ ತಮ್ಮ ಅಧೀನದ ಸಮಾಜ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ಬರುವ ಎಲ್ಲಾ ವಸತಿ ಗೃಹಗಳಲ್ಲಿಯೂ ಮೌಕಿಕ ಮತ್ತು WhatsApp ಆದೇಶದ ಮೇರೆಗೆ, ಹತ್ತಾರು ವರ್ಷಗಳಿಂದಲೂ ಇದ್ದ ಜ್ಞಾನ ದೇಗುಲವಿದು ಕೈಮುಗಿದು ಒಳಗೆ ಬನ್ನಿ ಎಂಬ ಧ್ಯೇಯ ವಾಕ್ಯವನ್ನು ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ ಎಂದು ಬರೆಯಿಸಿ ಎಂದು ಆಜ್ಞಾಪಿಸಿದ್ದಾರೆ.
ಇದಕ್ಕೆ ಪ್ರತಿರೋಧವನ್ನು ವ್ಯಕ್ತಪಡಿಸಿದ ಕೆಲವರಿಗೆ ಇದು ನನ್ನ ಆಜ್ಣೇ ಇದನ್ನು ಯಾರೂ ಪ್ರಶ್ನಿಸುವ ಹಾಗಿಲ್ಲಾ! ಈ ಕೂಡಲೇ ಧ್ಯೇಯವಾಕ್ಯವನ್ನು ಬದಲಿಸಬೇಕು ಎಂದು ಮಣಿವಣ್ಣನ್ ಉದ್ಧಟನದಿಂದ ಹೇಳಿರುವ ವಿಡೀಯೋ ವೈರಲ್ ಆಗಿದೆ, ವಿಧಿ ಇಲ್ಲದೇ ಹಿರಿಯ ಅಧಿಕಾರಿಗಳ ಆಜ್ಞಾಪಾಲಕರಾಗಿ ಧ್ಯೇಯವಾಕ್ಯವನ್ನು ಬರೆಯಿಸಿ ಅದರ ಕೆಳಗೆ ಆಯಾಯಾ ವಸತಿಗೃಹಗಳ ಅಧಿಕಾರಿಗಳು ನಿಂತಿರುವ ಪೋಟೋಗಳು ವೈರಲ್ ಆಗುತ್ತಿದ್ದಂತೆಯೇ, ಮಾಧ್ಯಮಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಅಂತಿಮವಾಗಿ ವಿಧಾನಸಭೆಯಲ್ಲೂ ವಿರೋಧ ಪಕ್ಷದ ನಾಯಕರುಗಳು ಆಡಳಿತ ಪಕ್ಷವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆಯೇ ಸಂಬಂಧ ಪಟ್ಟ ಇಲಾಖೆಯ ಮಂತ್ರಿಗಳಾದ ಶ್ರೀ ಮಹದೇವಪ್ಪನವರು, ಈ ಕುರಿತಂತೆ ಸರ್ಕಾರ ಯಾವುದೇ ಅಧಿಕೃತ ಆದೇಶವನ್ನು ಹೊರಡಿಸಿಲ್ಲಾ ಎಂಬ ಅಚ್ಚರಿಕೆಯ ಹೇಳಿಕೆಯನ್ನು ನೀಡುವ ಮೂಲಕ ಈ ಸರ್ಕಾರದಲ್ಲಿ ಮಂತ್ರಿಗಳು ಮತ್ತು ಸರ್ಕಾರದ ಆದೇಶಕ್ಕೆ ಯಾವುದೇ ಕಿಮ್ಮತ್ತಿಲ್ಲದೇ ಕೇವಲ ಅಧಿಕಾರಿಗಳ ಮೌಕಿಕ ಇಲ್ಲವೇ Telegram/WhatApp/Instagram ಸಂದೇಶಗಳ ಮೂಲಕವೇ ನಡೆಯುತ್ತಿದೆ ಎಂಬುದು ಜಗಜ್ಜಾಹೀತಾಗಿದೆ. ಯಥಾಪ್ರಕಾರ, ಮರಿ ಖರ್ಗೆ ಈ ವಿಷಯದಲ್ಲಿಯೂ ಮೂಗು ತೂರಿಸಿ ಬದಲಾವಣೆ ಎಂಬುದು ಜಗದ ನಿಯಮ, ಪ್ರಶ್ನೆ ಮಾಡುವುದು ಪ್ರಭುದ್ಧತೆಯ ಸಂಕೇತ ಎಂದು ಹೇಳುವ ಮೂಲಕ ಮತ್ತೊಮ್ಮೆ ತನ್ನ ಬೌದ್ಧಿಕತೆಯ ಅಪ್ರಬುದ್ಧತೆಯನ್ನು ಮೆರೆದಿರುವುದು ಸಹಾ ನಾಚಿಕೆಗೇಡಿನ ಸಂಗತಿಯಾಗಿದೆ.
ನಮ್ಮ ತೆರಿಗೆ ಹಣ, ಕೇರಳ ಪಾಲು

ಇವಿಷ್ಟೇ ಆಗಿದ್ದರೆ ಸುಮ್ಮನಾಗಬಹುದಿತ್ತೋ ಏನೋ? ನಮ್ಮ ತೆರಿಗೆ ನಮ್ಮ ಹಕ್ಕು ಎಂದು ವಾರದ ಹಿಂದೆಯಷ್ಟೇ ದೇಶಾದ್ಯಂತ ಗಲಾಟೆ ಮಾಡಿದ್ದ ಇದೇ ಸಿದ್ದರಾಮಯ್ಯನವರ ಸರ್ಕಾರ ಈಗ ಸದ್ದಿಲ್ಲದೇ, ತಮ್ಮ ಪಕ್ಷದ ಚಿರಯೌವನಿಗ ಮತ್ತು ಭಾವಿ ಪ್ರಧಾನಿ ಎಂದು ಎರಡು ದಶಕಗಳಿಂದ ಬಿಂಬಿತವಾಗಿರುವ, ಚುನಾವಣಾ ಸಮಯದಲ್ಲಿ ಭಾರತ್ ಜೋಡೋ ನ್ಯಾಯ ಯಾತ್ರೆ ಎಂದು ಪೂರ್ವದಿಂದ ಪಶ್ಚಿಮ ರಾಜ್ಯಗಳ ಕಡೆಯಲ್ಲಿ ಸುತ್ತುತ್ತಾ ಮಜಾ ಮಾಡುತ್ತಿರುವ ರಾಹುಲ್ ಗಾಂಧಿಯನ್ನು ಓಲೈಸುವ ಸಲುವಾಗಿ, ಆತ ಪ್ರತಿನಿಧಿಸುತ್ತಿರುವ ವೈನಾಡಿನಲ್ಲಿ ಆನೆ ತುಳಿತಕ್ಕೆ ಒಳಗಾದ ವ್ಯಕ್ತಿಯೊಬ್ಬರಿಗೆ, ಸಂಬಂಧವೇ ಪಡದ ಕರ್ನಾಟಕದ ಸರ್ಕಾರದ ವತಿಯಿಂದ 15ಲಕ್ಷಗಳ ಪರಿಹಾರವನ್ನು ಕೊಡಿಸುವ ಮೂಲಕ ಮತ್ತೊಮ್ಮೆ ತನ್ನ ಕಾಲ ಮೇಲೇ ತಾನೇ ಬಂಡೆಯನ್ನು ಎಳೆದುಕೊಂಡಿದೆ ಎಂದರೂ ತಪ್ಪಾಗದು.
ಕೆಲ ದಿನಗಳ ಹಿಂದೆ ಕೇರಳದ ವಯನಾಡ್ ಕ್ಷೇತ್ರಕ್ಕೆ ಬರುವ ಮಾನಂದವಾಡಿಯಲ್ಲಿ (ಕೇರಳ ಮತ್ತು ಕರ್ನಾಟಕದ ಗಡಿ ಪ್ರದೇಶ) ಕಾಡಾನೆ ದಾಳಿಗೆ ಅಜೀಶ್ ಮತ್ತು ಪಕತ್ ಪೌಲ್ ತುತ್ತಾಗಿದ್ದಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆಯೇ, ಮೃತಪಟ್ಟ ವ್ಯಕ್ತಿಗಳ ಕುಟುಂಬಕ್ಕೆ ಸಾಂತ್ವನ ಹೇಳಲು ತಮ್ಮ ನ್ಯಾಯ್ ಯಾತ್ರೆಯನ್ನು ಮೊಟಕುಗೊಳಿಸಿ ಧಾವಿಸಿ ಬಂದ ರಾಹುಲ್ ಗಾಂಧಿ, ಮೃತಪಟ್ಟ ವ್ಯಕ್ತಿಗಳಿಗೆ ತಮ್ಮದೇ INDIA ಒಕ್ಕೂಟದ ಭಾಗವಾದ ಕೇರಳದ ಪಿಣರಾಯಿ ಸರ್ಕಾರದ ಮೂಲಕ ಪರಿಹಾರದ ಹಣ ಕೊಡಿಸದೇ, ಸದ್ದಿಲ್ಲದೇ ತಮ್ಮ ಪ್ರಭಾವ ಬಳಸಿಕೊಂಡು ಕರ್ನಾಟಕ ಸರ್ಕಾರದ ಮೂಲಕ 15ಲಕ್ಷ ಪರಿಹಾರ ಕೊಡಿಸಿರುವುದು ಕನ್ನಡಿಗರನ್ನು ಕೆರಳಿಸಿದೆ. ಮಾನವೀಯತೆಗೆ ಸದಾಕಾಲವೂ ಮರುಗುವ ಕನ್ನಡಿಗರು ನಮ್ಮ ತೆರಿಗೆ, ನಮ್ಮಹಕ್ಕು ಎಂದು ಬೊಬ್ಬಿರಿದ್ದ ಕಾಂಗ್ರೇಸ್ಸಿಗೆ ನಿಜವಾಗಿಯೂ ಕಾಳಜಿ ಇದ್ದಲ್ಲಿ ತಮ್ಮ ಪಕ್ಷದಿಂದಲೋ ಅಥವಾ ರಾಹುಲ್ ಗಾಂಧಿ/ಸಿದ್ದರಾಮಯ್ಯನವರು ವಯಕ್ತಿಕವಾಗಿ ಹಣ ಕೊಡಬೇಕಿತ್ತೇ ಹೊರತು, ಇನ್ನೇನು ಕೆಲವೇ ವಾರಗಳಲ್ಲಿ ನಡೆಯಲಿರುವ ಚುನಾವಣೆಯನ್ನು ಗಮನದಲ್ಲಿಟ್ಟು ಕೊಂಡು ರಾಹುಲ್ ಗಾಂಧಿಯ ಕ್ಷೇತ್ರದ ಜನರನ್ನು ಓಲೈಸಿಕೊಳ್ಳುವ ಸಲುವಾಗಿ ಕನ್ನಡಿಗರಿಂದ ಕರ್ನಾಟಕದಲ್ಲಿ ಸಂಗ್ರಹಿಸಿ ತೆರಿಗೆ ಹಣವನ್ನು ಕೊಡುವ ಔಚಿತ್ಯವೇನಿತ್ತು? ಎಂದು ಧೈರ್ಯವಾಗಿ ಪ್ರಶ್ನಿಸುತ್ತಿರುವುದು ತಪ್ಪಿಲ್ಲಾ ಅಲ್ವೇ?
ಗ್ಯಾರಂಟಿಗಳಿಂದಾಗಿ ಅಚಾನಕ್ಕಾಗಿ ಕಳೆದ ವಿಧಾನ ಸಭೆಯಲ್ಲಿ ಭಾರೀ ಬಹುಮತಗಳಿಸಿ ಆಡಳಿತಕ್ಕೆ ಬಂದು ಅದೇ ಬೆಂಬಲವನ್ನು ಲೋಕಸಭಾ ಚುನಾವಣೆಯಲ್ಲೂ ಗಳಿಸುತ್ತೇವೆ ಎಂಬ ಭ್ರಮೆಯಲ್ಲಿ ತಮ್ಮಿಚ್ಚಿಯಂತೆ ಆದೇಶಗಳನ್ನು ಹೊರಡಿಸಿ, ಜನರ ಆಕ್ರೋಶವನ್ನು ತಡೆಯಲಾರದೇ ತುಘಲಕ್ ರೀತಿಯಲ್ಲಿ ಅದೇ ಆದೇಶವನ್ನು ಹಿಂಪಡೆಯುವ ಮತ್ತು ತಮ್ಮ ಅಧಿಕಾರದ ತೆವಲಿಗಾಗಿ ಗ್ಯಾರಂಟಿಗಳನ್ನು ಕೊಟ್ಟು ರಾಜ್ಯವನ್ನು ದೀವಾಳಿಗೆ ಅಂಚಿಗೆ ತಂದು ಅದನ್ನು ಮರೆಮಾಚಲು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ತಂತ್ರವನ್ನು ಮಾಡುತ್ತಿರುವ ಕಾಂಗ್ರೇಸ್ಸಿಗರಿಗೆ, ದೀಪ ಆರುವ ಮುನ್ನಾ ಜೋರಾಗಿ ಉರಿಯುತ್ತದೆ ಎನ್ನುವ ಗಾದೆ ಮರೆತಂತಿದೆ ಅಲ್ವೇ? ಹಾಗೆ ಅವರು ಮರೆತರೂ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅದನ್ನು ನೆನಪಿಸಲು ಜನರಂತೂ ಸಿದ್ಧವಾಗಿದ್ದಾರೆ ಅಲ್ವೇ?
ಏನಂತೀರೀ?
ಸೃಷ್ಟಿಕರ್ತ ಉಮಾಸುತ
ಭಾರತದ 2 ನೇ ಶ್ರೀಮಂತ ರಾಜ್ಯ ನಮ್ಮ ಕರ್ನಾಟಕ, ಇನ್ನು 5 ವರ್ಷಗಳ್ಳಳ್ಳಿ ಅತಂತ್ಯ ಬಡ ರಾಜ್ಯವಾಗುತ್ತದೆ ಈ ಸರ್ಕಾರ ದಿಂದ
LikeLike