ಇರಾನಿನ ಮೊಸಾಡೆಗ್ ಮತ್ತು ಇಂಡಿಯಾದ ಮೋದಿ

ಕೆಲ ವರ್ಷಗಳ ಹಿಂದೆ ಭಾರತಕ್ಕೆ ಅಗತ್ಯವಿರುವ ಹೆಚ್ಚಿನ ಭಾಗದ ಪೆಟ್ರೋಲಿಯಂ ಉತ್ಪನ್ನಗಳು ಅರಬ್ ದೇಶದಿಂದ ಬರುತ್ತಿತ್ತು. ಪ್ರಪಂಚದ ದೊಡ್ಡಣ್ಣಂದಿರು ಎಂದೇ ಭಾವಿಸಿರುವ ಅಮೇರಿಕಾ ಮತ್ತು ಇಂಗ್ಲೇಂಡ್ ಆಗ್ಗಾಗೆ ತೈಲ ಉತ್ಪಾದನಾ ರಾಷ್ಟ್ರಗಳ ಜೊತೆ ಸಂಘರ್ಷ ಮಾಡಿಕೊಳ್ಳುವ ಮೂಲಕ ತನ್ನ ಅದೇಶಗಳ ಮೇಲೆ ತನ್ನ ಪ್ರಾಭಲ್ಯವನ್ನು ಸಾಧಿಸಿ ತೈಲ ಉತ್ಪನ್ನಗಳ ಬೆಲೆಯ ಮೇಲೇ ತನ್ನ ಹಿಡಿತವನ್ನು ಸಾಧಿಸುತ್ತಿರುವುದನ್ನು ಮನಗಂಡ ಭಾರತವು ನಂತರದ ದಿನಗಳಲ್ಲಿ ಭಾರತ ತನ್ನ ಅಗತ್ಯಕ್ಕೆ ಕೇವಲ ಒಂದೇ ದೇಶವನ್ನು ನೆಚ್ಚಿಕೊಳ್ಳದೇ ವೆನಿಜುವೆಯಲಾ, ಇರಾನ್ ಇತ್ತೀಚೆಗೆ ರಷ್ಯಾ ಮುಂತಾದ ದೇಶಗಳೊಡನೆ ಒಪ್ಪಂದವನ್ನು ಮಾಡಿಕೊಂಡು ತನ್ನ ಅವಶ್ಯಕತೆಗೆ ಮತ್ತು ತನ್ನ ಅಗತ್ಯದ ಬೆಲೆಗೆ ಕೊಡಲು ಒಪ್ಪುವ ರಾಷ್ಟ್ರಗಳೊಡನೆ ಒಪ್ಪಂದ ಮಾಡಿಕೊಳ್ಳುವ ಮೂಲಕ ಉತ್ತಮ ನಡೆಯನ್ನು ಮಾಡಿದೆ.. ಅದೇ ಇಂಗ್ಲೇಂಡ್ ಮತ್ತು ಅಮೇರಿಕ ದೇಶಗಳು ತೈಲ ವ್ಯಾಪಾರದಲ್ಲಿ ಹಿಡಿತ ಸಾಧಿಸಲು ತೈಲ ಉತ್ಪನ್ನ ರಾಷ್ಟ್ರಗಳ ಸರ್ಕಾರದ ಮೇಲೆ ಹೇಗೆ ಧಾಳಿ ನಡೆಸುತ್ತವೆ ಮತ್ತು ಅಲ್ಲಿನ ಸರ್ಕಾರವನ್ನು ಹೇಗೆ ಉರುಳಿಸುತ್ತವೆ ಎಂಬುದರ ಕರಾಳ ಕಥನದ ಜೊತೆ ಅದೇ ರೀತಿಯ ಪರಿಸ್ಥಿತಿ ಭಾರತದ ಮೇಲೆ ಹೇಗೆ ನಡೆಯುತ್ತಿದೆ ಎಂಬುದನ್ನು ಅರಿಯೋಣ ಬನ್ನಿ.

mos2ಇರಾನ್ ಅತ್ಯಂತ ಹೆಚ್ಚಿನ ಪ್ರಮಾಣದ ತೈಲ ಉತ್ಪಾದನಾ ದೇಶಗಳಲ್ಲಿ ಒಂದಾಗಿದ್ದು, ಕೆಲ ದಶಕಗಳ ಹಿಂದೆ, ಮೊಹಮ್ಮದ್ ರೆಜಾ ಪಹ್ಲವಿ ಎಂಬ ಭ್ರಷ್ಟ ವ್ಯಕ್ತಿಯ ಆಳ್ವಿಕೆಯಲ್ಲಿ ಇರಾನ್ ಇದ್ದ ಕಾರಣ, ಅಲ್ಲಿನ ತೈಲ ವ್ಯಾಪಾರದಲ್ಲಿ ಬ್ರಿಟಿಷರು ಪ್ರಾಬಲ್ಯ ಹೊಂದಿ, ಇರಾನ್‌ನ ತೈಲ ಉತ್ಪಾದನೆಯ 84% ಇಂಗ್ಲೆಂಡ್ ಪಾಲಾದರೇ, ಕೇವಲ 16%ರಷ್ಟು ಮಾತ್ರಾ ಇರಾನ್‌ಗೆ ಲಭಿಸುತ್ತಿತ್ತು. 1951ರಲ್ಲಿ, ಮೊಹಮ್ಮದ್ ಮೊಸಾಡೆಗ್ ಎಂಬ ಅತ್ಯಂತ ಪ್ರಾಮಾಣಿಕ, ನಿಷ್ಠಾವಂತ ದೇಶಭಕ್ತ ಪ್ರಧಾನಿಯಾದ ನಂತರ, ಇರಾನಿನ ತೈಲ ವ್ಯಾಪಾರದಲ್ಲಿ ವಿದೇಶಿ ಕಂಪನಿಗಳ ಪ್ರಾಬಲ್ಯವನ್ನು ತೊಡೆದು ಹಾಕುವ ಸಲುವಾಗಿ, ಮಾರ್ಚ್ 15, 1951 ರಂದು ಇರಾನಿನ ಸಂಸತ್ತಿನಲ್ಲಿ ಇರಾನ್ ತೈಲ ಉದ್ಯಮದ ರಾಷ್ಟ್ರೀಕರಣದ ಮಸೂದೆಯನ್ನು ಮಂಡಿಸಿ ಅದು ಬಹುಮತದಿಂದ ಅಂಗೀಕಾರವಾದ ನಂತರ, ಕಚ್ಚಾ ತೈಲದ ರಫ್ತುಗಳಿಂದ ದೇಶದ ಆರ್ಥಿಕ ಪರಿಸ್ಥಿತಿಯೂ ಉತ್ತಮಗೊಂಡು ದೇಶ ಪ್ರಗತಿಯತ್ತ ಸಾಗಿದ್ದನ್ನು ಮನಗಂಡ ದೇಶವಾಸಿಗಳು ಸಂತೋಷ ಪಟ್ಟರು. ಇದೇ ಸಾಧನೆಗಾಗಿ ಟೈಮ್ಸ್ ನಿಯತಕಾಲಿಕವು 1951 ರಲ್ಲಿ ಮೊಸಾಡೆಗ್ ಅವರನ್ನು “ವರ್ಷದ ಮನುಷ್ಯ” ಎಂಬ ಬಿರುದನ್ನು ನೀಡಿ ಗೌರವಿಸಿತ್ತು.

mos1ಮೊಸ್ಸಾಡೆಗ್ ಪ್ರಭಾವದಿಂದಾಗಿ ಬ್ರಿಟಿಷರಿಗೆ ಇರಾನಿನ ತೈಲ ವ್ಯಾಪರದ ಹಿಡಿತ ತಪ್ಪಿದ ಕಾರಣ ಆತನನ್ನು ಅಧಿಕಾರದಿಂದ ತೆಗೆದುಹಾಕಲು ಅನೇಕ ಪ್ರಯತ್ನಗಳಲ್ಲಿ ಮೊಸ್ಸಾಡಿಗ್ ಅವರುಗೇ ನೇರವಾಗಿ ಲಂಚ ನೀಡಲು ಪ್ರಯತ್ನಿಸಿ, ಅತ ಅದಕ್ಕೆ ಒಪ್ಪದಿದ್ದಾಗ, ಅತನ ಹತ್ಯೆಗೆ ಪ್ರಯತ್ನಿಸಿದ್ದಲ್ಲದೇ, ಆಂತರಿಕ ಮಿಲಿಟರಿ ದಂಗೆಗೂ ಪ್ರಯತ್ನಿಸಿದರಾದರೂ, ಮೊಸಾಡೆಗ್ ಬಹಳ ಅನುಭವಿ ಮತ್ತು ಬುದ್ಧಿವಂತರಾಗಿದ್ದರಿಂದ ಆ ಎಲ್ಲಾ ಯೋಜನೆಗಳು ವಿಫಲವಾಗಿದ್ದಲ್ಲದೇ, ತನ್ನ ಜನಪರ ಯೋಜನೆಗಳು ಮತ್ತು ದೇಶದ ಅಭಿವೃದ್ಧಿಯಿಂದ ದಿನೇ ದಿನೇ ಮೊಸ್ಸಾಡೆಗ್ ಇರಾನಿನಲ್ಲಿ ಅತ್ಯಂತ ಜನಪ್ರಿಯವಾಗತೊಡಗಿದರು.

mos3ಮೊಸ್ಸಾಡಿಗ್ ಜನಾನುರಾಗಿ ಮತ್ತು ಜನಪ್ರಿಯವಾಗಿದ್ದ ಕಾರಣ ಮಿಲಿಟರಿ ದಂಗೆ ಸಾಧ್ಯವಾಗದೇ ಹೋದಾಗ, ಬ್ರಿಟೀಷರು ಅಂತಿಮವಾಗಿ, ಈ ಮೊಸ್ಸಾಡಿಗ್ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಕಾರ್ಯಕ್ಕೆ ಅಮೆರಿಕದ ಸಹಾಯವನ್ನು ಕೋರಿದರು. ಅಮೆರಿಕದ CIA ಮೊಸ್ಸಾಡೆಗ್ ಅನ್ನು ತೆಗೆದುಹಾಕಲು ಅಂದಿನ ಕಾಲಕ್ಕೇ $1 ಮಿಲಿಯನ್ ಹಣವನ್ನು ಕೇಳಿತ್ತು. ಶತಾಯಗತಾಯ ಅವರನ್ನು ಕೆಳಗಿಳಸಲೇ ಬೇಕು ಎಂದು ನಿರ್ಧರಿಸಿದ್ದ ಇಂಗ್ಲೇಂಡ್ ಇರಾನಿನ ಹಣದಲ್ಲಿ 1 ಮಿಲಿಯನ್ ಡಾಲರ್ ಎಂದರೆ ಸುಮಾರು 4250 ಕೋಟಿ ರಿಯಾಲ್ ಹಣವನ್ನು ಇರಾನ್ ರಾಜಧಾನಿ ಟೆಹ್ರಾನ್ ನಲ್ಲಿದ್ದ ಅಮೇರಿಕಾದ ರಾಯಭಾರಿಗೆ ರಹಸ್ಯವಾಗಿ ಹಣವನ್ನು ತಲುಪಿಸಿತು. ಅದೇ ಸಮಯದಲ್ಲಿ ಇರಾನ್‌ನಲ್ಲಿ ರಾಜಪ್ರಭುತ್ವವನ್ನು ಸಂಪೂರ್ಣವಾಗಿ ಕೊನೆಗೊಳಿಸಲು ಮತ್ತು ಸಂಸತ್ತಿಗೆ ಎಲ್ಲಾ ಅಧಿಕಾರವನ್ನು ನೀಡಲು ಮೊಸಾಡೆಗ್ ಬಯಸಿದ್ದರು, ಇಂಗ್ಲೇಂಡ್ ನೀಡಿದ್ದ ಹಣವನ್ನು ಅಮೇರಿಕ ಮೊದಲು ಇರಾನ್ ಚಕ್ರವರ್ತಿಯನ್ನು ತನ್ನ ಕೈವಶಮಾಡಿಕೊಳ್ಳಲು ಬಳಸಿಕೊಂಡು ಆತನನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದಲ್ಲದೇ, ಮೊಸಾಡೆಗ್ ವಿರುದ್ಧ ನಕಲಿ ಜನಾಂಧೋಳನವನ್ನು ನಡೆಸಿ ಅತನ ವಿರುದ್ದ ಸಾರ್ವಜನಿಕವಾಗಿ ಅಸಮಾಧಾನವನ್ನು ಹುಟ್ಟುಹಾಕುವ ಮೂಲಕ ಜನರಲ್ಲಿ ಆನತ ವಿರುದ್ಧ ತಿರಸ್ಕಾರದ ಮನೋಭಾವನೆಯನ್ನು ಮೂಡುವಂತೆ ಮಾಡಿದ್ದಲ್ಲದೇ, ಆತನದ್ದೇ ಪಕ್ಷದ ಕೆಲವು ಸಂಸದರನ್ನು ತಮ್ಮ ವಶಕ್ಕೆ ತೆಗೆದುಕೊಂಡು ಅಂತಹ ಭ್ರಷ್ಟ ಸಂಸದರ ಸಹಾಯದಿಂದ ಅವರ ಸರ್ಕಾರವನ್ನು ಉರುಳಿಸುವುದು ಅವರ ಯೋಜನೆಯಾಗಿತ್ತು. ಈ ಯೋಜನೆಯಡಿಯಲ್ಲಿಯೇ, ಇರಾನಿನ ಅನೇಕ ಪತ್ರಕರ್ತರು, ಪತ್ರಿಕಾ ಸಂಪಾದಕರು, ಮುಸ್ಲಿಂ ಧರ್ಮಗುರುಗಳಿಗೆ ಅಮೇರಿಕಾ ಸುಮಾರು 631 ಕೋಟಿ ರಿಯಾಲ್‌ಗಳನ್ನು ನೀಡಿದ ಪರಿಣಾಮ ಅವರೆಲ್ಲರೂ ಮೊಸಾಡೆಗ್ ವಿರುದ್ಧ ಮುಗಿ ಬಿದ್ದರು.

mos5ಇರಾನಿನ ಕೆಲ ಭ್ರಷ್ಟ ಸಂಸಾದರು, ತಲಾ 46 ಮಿಲಿಯನ್ ರಿಯಾಲ್‌ಗಳನ್ನು ಪಡೆದು ಮೊಸಾಡಿಕ್ ವಿರುದ್ಧ ಸುಳ್ಳು ಪ್ರತಿಭಟನೆನ್ನು ನಡೆಸಿದ್ದಲ್ಲದೇ ಅದರಲ್ಲಿ ಭಾಗವಹಿಸಲು ಸಾವಿರಾರು ಇರಾನಿಯನ್ನರು ಬಾಡಿಗೆಗೆ ಕರೆತಂದು ಸಂಸತ್ತಿ ಮುಂದೆ ಮೆರವಣಿಗೆ ನಡೆಸಿದರೆ, ಈ ಭ್ರಷ್ಟ ಸಾಂಸದರು ಸಂಸತ್ತಿನ ಒಳಗೆ ಗದ್ದಲ ಎಬ್ಬಿಸಿದರು. ಸಾವಿರ ಸುಳ್ಳು ಹೇಳಿ ಅದನ್ನೇ ನಿಜ ಮಾಡುವ ಗೊಬೆಲ್ಸ್ ತಂತ್ರದಂತೆ ಇಲ್ಲಿಯೂ ಈ ಸುದ್ದಿಯನ್ನು ಜಗತ್ತಿನಾದ್ಯಂತ ದೊಡ್ಡ ಮಾಧ್ಯಮಗಳಲ್ಲಿ ಪ್ರಕವಾಗಿ ಎಲ್ಲರಲ್ಲೂ ಮೊಸಾಡೆಗ್ ಒಬ್ಬ ಭ್ರಷ್ಟ ಎಂಬಂತೆ ಬಿಂಬಿಸಲು ಸಫಲವಾಯಿತು. ಯಾವ ದಿ ನ್ಯೂಯಾರ್ಕ್ ಟೈಮ್ಸ್ 1951ರಲ್ಲಿ ಮೊಸಾಡೆಗ್ ಅವರನ್ನು ವರ್ಷದ ವ್ಯಕ್ತಿಯನ್ನಾಗಿ ಗೌರವಿಸಿತ್ತೋ ಈಗ ಅದೇ ನ್ಯೂಯಾರ್ಕ್ ಟೈಮ್ಸ್ ಮೊಸಾಡೆಗ್ ಅವರನ್ನು ದಿ ಡಿಕ್ಟೇಟರ್ ಅರ್ಥಾತ್ ಸರ್ವಾಧಿಕಾರಿ ಎಂದು ಉಲ್ಲೇಖಿಸಿತು. ಅಷ್ಟೇ ಅಲ್ಲದೇ ತನ್ನ ನಿಯತಕಾಲಿಕೆಯಲ್ಲಿ ನಿರಂತವಾಗಿ ಅತ್ಯಂತ ಕೀಳು ಮಟ್ಟದಲ್ಲಿ ಮಟ್ಟದಲ್ಲಿ ಆತನ ವ್ಯಕ್ತಿತ್ವವನ್ನು ಬಿಂಬಿಸಿ ವ್ಯಂಗ್ಯಚಿತ್ರಗಳ ಮೂಲಕ ಅವನನ್ನು ಸಲಿಂಗಕಾಮಿ ಎಂದು ಚಿತ್ರಿಸಲಾಯಿತು.

mos4ಭ್ರಷ್ಟ ಸಂಸದರಿಂದ ತನ್ನ ಸರ್ಕಾರವನ್ನು ಉರುಳಿ ಹೋಗುತ್ತದೆ ಎಂಬುದನ್ನು ಅರಿತ ಮೊಸ್ಸಾಡೆಗ್ ತಮ್ಮ ಸಂಸತ್ತನ್ನು ವಿಸರ್ಜಿಸಿದಾಗ, ಅಮೇರಿಕಾದ ತನ್ನ ಕೈಗೊಂಬೆಯಾಗಿದ್ದ ಇರಾನಿನ ಚಕ್ರವರ್ತಿಗೆ ಮೊಸಾಡೆಗ್ ನನ್ನು ಪ್ರಧಾನ ಮಂತ್ರಿ ಹುದ್ದೆಯಿಂದ ಕಿತ್ತೊಗೆಯುವಂತೆ ಆದೇಶಿಸಿತು. ಅಕಸ್ಮಾತ್ ಆ ಆದೇಶವನ್ನು ಮೊಸಾಡಿಗ್ ತಿರಸ್ಕರಿಸಿದರೆ ಆತನನ್ನು ಬಂಧಿಸುವಂತೆಯೂ ಒತ್ತಾಯಿಸಿತು. ಹಾಗೆ ಮೊಸ್ಸಾಡೆಗ್ ನನ್ನು ಬಂಧಿಸಲು ಬಂದ ನಕಲಿ ಸೈನಿಕರನ್ನು ಇರಾನ್ ಸೇನಾ ತುಕಡಿಯು ಬಂಧಿಸಿದ್ದನ್ನು ಕೇಳಿದ ಇರಾನ್ ಚಕ್ರವರ್ತಿ ಬಾಗ್ದಾದ್ ಗೆ ತಲೆಮರಸಿಕೊಂಡು ಓಡಿಹೋದನು.

ಅಂತಿಮವಾಗಿ, ಅಮೇರಿಕ 210 ಮಿಲಿಯನ್ ರಿಯಾಲ್‌ಗಳ ಲಂಚವನ್ನು ನೀಡುವ ಮೂಲಕ, ಇರಾನಿನ ರಾಜಧಾನಿಯಲ್ಲಿ ನಕಲಿ ಗಲಭೆಗಳನ್ನು ಪ್ರಚೋದಿಸಿತು, ಎರಡೂ ಕಡೆಯ ಬಾಡಿಗೆ ಹೋರಾಟಗಾರರು ಅಮೇರಿಕಾದ ನಿರ್ದೇಶನದಂತೆ ಮೊಸ್ಸಾಡೆಗ್ ಅವರ ಮನೆಯ ಮೇಲೆ ದಾಳಿ ಬಲವಂತವಾಗಿ ಪಲಾಯನ ಮಾಡುವಂತೆ ಒತ್ತಾಯಿಸಲಾಯಿತಾದರೂ ಅದಕ್ಕೆ ಮೊಸಾಡಿಗ್ ಬಗ್ಗದೇ ಹೋದಾಗ, ಕೆಲ ಕಾಲ ಅಲ್ಲಿ ಮಿಲಿಟರಿ ಅಧಿಕಾರವನ್ನು ವಹಿಸಿಕೊಂಡು ಅದರ ತಾಳಕ್ಕೆ ಕುಣಿಯುವಂತಹ ಪ್ರಧಾನಿಯೊಬ್ಬನ ನೇಮಕವಾದ ನಂತರ ಚಕ್ರವರ್ತಿ ಇರಾನ್‌ಗೆ ಹಿಂದಿರುಗಿದಾಗ, ಮೊಸ್ಸಾಡೆಗ್ ಅಂತಿಮವಾಗಿ ಸರ್ಕಾರಕ್ಕೆ ಶರಣಾಗುತ್ತಾನೆ. ಕಾಟಾಚಾರಕಕ್ಕೆ ವಿಚಾರಣೆ ನಡೆಸಿ ಕೆಲ ಕಾಲ ಸೆರೆಮನೆಯಲ್ಲಿರಿಸಿ ಅಂತಿಮವಾಗಿ ಆತ ತನ್ನ 85ನೇ ವಯಸ್ಸಿನಲ್ಲಿ ಮರಣದವರೆಗೂ ಗೃಹಬಂಧನದಲ್ಲಿ ಇರಿಸಲಾಯಿತು.

ಹೀಗೆ ಒಬ್ಬ ಧೀಮಂತ ನಾಯಕನನ್ನು ನೇಪತ್ಯಕ್ಕೆ ಸರಿಸಿದ ನಂತರ ಅಮೆರಿಕ ಮತ್ತು ಇಂಗ್ಲೆಂಡ್ ಇರಾನಿನ ತೈಲದ ವ್ಯಾಪಾರವನ್ನು 40% – 40% ಹಂಚಿಕೊಂಡು ಉಳಿದ 20% ಇತರ ಯುರೋಪಿಯನ್ ಕಂಪನಿಗಳಿಗೆ ನೀಡುವ ಮೂಲಕ ಇರಾನನ್ನು ಅಕ್ಷರಶಃ ನಿರ್ಲಕ್ಷ ಮಾಡಲಾಯಿತು. ಸುಮಾರು ದಶಕಗಳ ಕಾಲ ಇರಾನಿನ ಜನರು ಷಾ ಅವರ ಸರ್ವಾಧಿಕಾರದ ಅಡಿಯಲ್ಲಿ ಬದುಕಬೇಕಾಗಿ ನಂತರ ಆ ದೇಶದಲ್ಲಾದ ಕ್ರಾಂತಿಯಿಂದಾಗಿ ರಾಜಪ್ರಭುತ್ವವನ್ನು ಕೊನೆಗೊಳಿಸಿ, ಖೊಮೇನಿ ಎಂಬ ಮತಾಂಧನ ಕೈಗೆ ಅಧಿಕಾರ ದೊರೆತ ನಂತರ ಇರಾನಿನ ಪರಿಸ್ಥಿತಿ ಮತ್ತಷ್ತು ಹದೆಗೆಟ್ಟು, ಬಾಣಲೆಯಿಂದ ಬೆಂಕಿಗೆ ಬಿದ್ದ ಹಾಗಾಗಿತ್ತು ಎಂದರೂ ತಪ್ಪಾಗದು.

ವಿಶ್ವದಲ್ಲಿ ಅತ್ಯಧಿಕ ತೈಲಸಂಪತ್ತನ್ನು ಹೊಂದಿದ್ದರೂ ಅದರ ಸಂಪೂರ್ಣ ಲಾಭ ಇಂಗ್ಲೇಡ್ ಪಾಲಾಗುತ್ತಿದ್ದರ ವಿರುದ್ಧ, ಮೊಸಾಡೆಗ್ ನಮ್ಮ ದೇಶದ ವಲಯಗಳು ವಿದೇಶಿ ಕಂಪನಿಗಳ ಬದಲಿಗೆ ಸ್ವದೇಶಿ ಕಂಪನಿಗಳ ಪ್ರಾಬಲ್ಯವನ್ನು ಹೊಂದಿರಬೇಕು ಎಂದು ನಡೆಸಿದ ಹೋರಾಟದ ಫಲವಾಗಿಯೇ ಇರಾನ್ ಆರ್ಥಿಕವಾಗಿ ಬಲವಾಗಿದ್ದಲ್ಲದೇ, ರಾಜನೀತಿಯಿಂದ ನಿಧಾನವಾಗಿ ಪ್ರಜಾಪ್ರಭುತ್ವದತ್ತ ಹೊರಳುತ್ತಿದ್ದಂತಹ ಸಂಧರ್ಭದಲ್ಲಿಯೇ ಇಂಗ್ಲೇಡ್ ಮತ್ತು ಅಮೇರಿಕಾ ದೇಶಗಳ ಕುತಂತ್ರ ಮತ್ತು ಇರಾನಿನ ಭ್ರಷ್ಟ ಸಂಸದರು, ಪತ್ರಕರ್ತರು, ಪತ್ರಿಕಾ ಸಂಪಾದಕರು, ಮತ್ತು ಬಾಡಿಗೆ ಪ್ರತಿಭಟನಾಕಾರರಿಂದಾಗಿ ದೇಶ ಭಕ್ತ ಮೊಸ್ಸಾಡೆಗ್ ಸರ್ಕಾರ ಉರುಳಿ ಹೋಗಿದ್ದಲ್ಲದೇ, ಮತಾಂಧರ ಕೈಗಳಲ್ಲಿ ನರಳುವಂತಾಗಿ ದೇಶದ ಆರ್ಥಿಕ ಪರಿಸ್ಥಿತಿ ಗಂಭೀರವಾಗಿ ಹದೆಗೆಟ್ಟು ಹೋಗಿದ್ದದ್ದು ನಿಜಕ್ಕೂ ವಿಷಾಧಕರವೇ ಸರಿ.

ಅತ್ಯಂತ ಶ್ರೀಮಂತ ಭವಿಷ್ಯವನ್ನು ಹೊಂದಿದ್ದ ಇರಾನ್ ಕೆಲ ದೇಶದ್ರೋಹಿ ಸ್ವಾರ್ಥಿಗಳಿಂದಾಗಿ ಕೇವಲ ಒಂದು ಮಿಲಿಯನ್ ಡಾಲರ್‌ಗಳಿಗೆ ಮಾರಾಟವಾದ ಕ್ರೂರ ಸಂಗತಿಯು ನಂತರದ ದಿನಗಳಲ್ಲಿ ಇರಾನಿನ ಜನರ ಅರಿವಿಗೆ ಬರಲು ಹೆಚ್ಚು ಸಮಯ ಬೇಕಾಗಲಿಲ್ಲ. 1979 ರಲ್ಲಿ, ಇರಾನಿಯನ್ನರು ಅಮೇರಿಕಾ ರಾಯಭಾರ ಕಚೇರಿಯಲ್ಲಿ ಅಮೆರಿಕ ಸಿಬ್ಬಂಧಿವರ್ಗದವರನ್ನು ಸುಮಾರು 444 ದಿನಗಳವರೆಗೆ ಬಂಧಿಸಿದ್ದಲ್ಲದೇ, ಆಲ್ಲಿನ ರಾಯಭಾರ ಕಚೇರಿಯಲ್ಲಿ ಪತ್ತೆಯಾದ ದಾಖಲೆಗಳ 77 ಸಂಪುಟಗಳನ್ನು ಬಿಡುಗಡೆ ಮಾಡುವ ಮೂಲಕ ಅಮೇರಿಕವು ಇರಾನ್‌ನ ಪಟ್ಟಭದ್ರ ಹಿತಾಸಕ್ತಿಗಳಿಗೆ ಹೇಗೆ ಪರೋಕ್ಷವಾಘಿ ಸಹಾಯ ಮಾಡಿದೆ ಎಂಬುದನ್ನು ಸಾಕ್ಷಿಸಮೇತ ಬಿಡುಗಡೆ ಮಾಡಿದಾಗಲೇ ಇರಾನಿಯ ಜನರು ಅಮೆರಿಕವನ್ನು ಸೈತಾನನ ದೇಶ ಎಂದು ಕರೆಯಲು ಆರಂಭಿಸಿದರು.

ವಿಶ್ವದ ಎರಡು ಮಹಾಶಕ್ತಿ ಹೊಂದಿದ್ದ ದೇಶಗಳ ವಿರುದ್ಧ ತೊಡೆ ತಟ್ಟಿ ವಿದೇಶಿ ಕಂಪನಿಗಳ ಪ್ರಾಬಲ್ಯವನ್ನು ಮುರಿಯುವ ಮತ್ತು ಸ್ವದೇಶಿ ಕಂಪನಿಗಳನ್ನು ಉತ್ತೇಜಿಸುವ ನೀತಿಯನ್ನು ತರಲು ಮುಂದಾಗಿದ್ದ ಮೊಸಾಡೆಗ್ ನನ್ನು ನಾಲ್ಕಾರು ಎಂಜಿಲು ಕಾಸಿನಾಸೆ ತೋರಿಸಿ ಅತನನ್ನು “ಕುಮ್ಶಾ” ಎಂದು ಕರೆದು ಅವಮಾನಿಸಿ ಸೆರೆಮನೆಗೆ ಕಳುಹಿಸಿ ಇರಾನಿನ ಸಂಪೂರ್ಣ ತೈಲ ಸಂಪತ್ತು ವಿದೇಶಿಗರ ಪಾಲಾಗಿ ಇಡೀ ದೇಶವನ್ನು ಹಾಳುಗೆಡವಿದ ವಿಷಯ ಪ್ರಪಂಚಕ್ಕೆ ತಿಳಿಯುವಷ್ಟರಲ್ಲಿ ಮೊಸಡೆಗ್ ಮರಣ ಹೊಂದಿದ್ದ ಇರಾನ್ ಮತಾಂಧರ ಕೈಗೆ ಸಿಕ್ಕು ಮತ್ತಷ್ಟು ನಲುಗಿ ಹೋಗಿತ್ತು.

ABVಪ್ರಸ್ತುತ ಭಾರತದ ಪರಿಸ್ಥಿತಿಯೂ ಅದಕ್ಕಿಂತಲೂ ಭಿನ್ನವಾಗಿಲ್ಲ. ಸುಮಾರು 40 ವರ್ಷಗಳ ಕಾಲ ಆಳಿದ ಸರ್ವಾಧಿಕಾರಿ ಧೋರಣೆಯ ಅಪ್ಪಾ ಮತ್ತು ಮಗಳು ದೇಶವನ್ನು ನಿರೀಕ್ಷಿತ ಮಟ್ಟಕ್ಕೆ ಬೆಳಸುವುದು ಬಿಡಿ, ಒಂದು ಕಾಲದಲ್ಲಿ ಕ್ಷಾತ್ರ ತೇಜಕ್ಕೆ ಹೆಸರಾಗಿದ್ದ ಭಾರತೀಯರನ್ನು ಕೈಲಾಗದವರು ಎನ್ನುವ ಮಟ್ಟಕ್ಕೆ ಮಾನಸಿಕವಾಗಿ ದುರ್ಬಲರಾಗಿಸಿರಿದ್ದರು. 90ರ ದಶಕದಲ್ಲಿ ಈ ನಾಡು ಕಂಡ ಶ್ರೇಷ್ಠ ಪ್ರಧಾನಿಗಳಲ್ಲಿ ಅಗ್ರಸರ ಎನಿಸಿರುವ ಅಟಲ್ ಬಿಹಾರಿ ವಾಜಪೇಯಿಯವರು ಪ್ರಧಾನಿಗಳಾಗಿ ಉತ್ತಮವಾದ ಆಡಳಿತವನ್ನು ನೀಡಿ ಅಪಾರವಾದ ಜನಮನ್ನಣೆ ಗಳಿಸಿದರೂ ಕಾಂಗ್ರೇಸ್ ಮತ್ತು ಕೆಲ ವಿದೇಶೀ ಕೈವಾಡದಿಂದಾಗಿ ಮೋಸದಿಂದ ಭಾರತೀಯರಲ್ಲಿ ವಾಜಪೇಯಿ ಅವರ ಸರ್ಕಾರದ ವಿರುದ್ಧ ಸುಳ್ಳು ಮಾಹಿತಿಗಳನ್ನೇ ಹರಿಬಿಟ್ಟು ಅವರು ಮತ್ತೊಮ್ಮೆ ಅಧಿಕಾರಕ್ಕೆ ಬರದಂತೆ ಮಾಡಿದ ಕಾಂಗ್ರೇಸ್

UPA2ನಂತರದ ಹತ್ತು ವರ್ಷಗಳ ಕಾಲ ಸರಳ ಸಜ್ಜನರಾದರೂ, ಜನರಿಂದ ನೇರವಾಗಿ ಆಯ್ಕೆಯಾಗಲೂ ಸಾಮರ್ಥ್ಯವಿಲ್ಲದ ಈ ದೇಶ ಕಂಡ ಅತ್ಯಂತ ದುರ್ಬಲ ಪ್ರಧಾನಿಯನ್ನು ಶ್ರೀ ಮನಮೋಹನ ಸಿಂಗ್ ಅವರ ರೂಪದಲ್ಲಿ ಕಾಣುವ ದೌರ್ಭಾಗ್ಯ ನಮ್ಮದಾಗಿತ್ತು. ಪ್ರಪಂಚದ ಅತ್ಯುತ್ತಮ ಅರ್ಥಶಾಸ್ತ್ರಜ್ಞ ಎನಿಸಿಕೊಂಡಿದ್ದರೂ, ನರಸಿಂಹ ರಾವ್ ಅವರ ಸಂಪುಟದಲ್ಲಿ ಹಣಕಾಸಿನ ಮಂತ್ರಿಯಾಗಿ ಹೆಸರುವಾಸಿಯಾದರೂ, ಕಾಂಗ್ರೇಸ್ ಅಧಿನಾಯಕಿ ಮತ್ತು ಆಕೆಯ ಮಗನ ಹಿಂಬಾಗಿಲಿನ ಅಧಿಕಾರಕ್ಕೆ ಕೈಗೊಂಬೆಯಾಗಿ ಹತ್ತಾರು ಭ್ರಷ್ಟಾಚಾರಗಳು ಈ ಕಾಲದಲ್ಲಿ ದೇಶವನ್ನು ಮತ್ತೆ ಹಿಂಬದಿಗೆ ದೂಡಲ್ಪಟ್ಟಿದ್ದು ಈಗ ಇತಿಹಾಸ.

modi32014 ರಿಂದ 2024ರ ವರೆವಿಗೂ ಹತ್ತು ವರ್ಷಗಳ ಕಾಲ ದೇಶದ ಚುಕ್ಕಾಣಿಯನ್ನು ಶ್ರೀ ಮೋದಿಯವರು ಅತ್ಯಂತ ಸಮರ್ಥವಾಗಿ ನಿಭಾಯಿಸಿದ್ದಾರೆ. ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಮೊದಲನೇ ದಿನನೇ ನ ಮೈ ಖಾವುಂಗಾ, ನಾ, ಖಾನೇ ದೂಂಗಾ, ನಾನೂ ಸಹಾ ಭ್ರಷ್ಟಾಚಾರದಲ್ಲಿ ಭಾಗಿಯಾಗುವುದಿಲ್ಲ ಮತ್ತು ಇತರನ್ನೂ ಭ್ರಷ್ಟಾಚಾರ ಮಾಡಲು ಬಿಡುವುದಿಲ್ಲಾ ಎಂದು ಶಪಥ ಮಾಡಿದ್ದಲ್ಲದೇ, ಉತ್ತಮವಾದ ವಿದೇಶಾಂಗ ನೀತಿಯಿಂದಾಗಿ ಮೋದಿಯವರು ಇಂದು ಕೇವಲ ಭಾರತದ ನಾಯಕರಾಗಿಯಷ್ಟೇ ಉಳಿಯದೇ ವಿಶ್ವಮಾನ್ಯ, ವಿಶ್ವವಂದ್ಯ ನಾಯಕರಾಗಿ ವಿರಾಜಮಾನರಾಗುತ್ತಿರುವುದಲ್ಲದೇ, ಅವರ ಕಾಲದಲ್ಲಿ ಭಾರತ ವಿಶ್ವ ಆರ್ಥಿಕತೆಯಲ್ಲಿ 5ನೇ ಸ್ಥಾನದಲ್ಲಿದ್ದು ಮುಂದಿನ ಐದು ವರ್ಷಗಳಲ್ಲಿ 3ನೇ ಸ್ಥಾನಕ್ಕೇರುವ ಭರವಸೆ ಮೂಡಿಸಿರುವುದಲ್ಲದೇ, make in indiaಗೆ ಸಾಕಷ್ಟು ಒತ್ತು ನೀಡುತ್ತಿರುವ ಕಾರಣ ಸಹಜವಾಗಿ ದೇಶದ ಪ್ರಮುಖ ವಿರೋಧ ಪಕ್ಷಗಳಿಗೆ ಮತ್ತು ಕೆಲ ವಿದೇಶಿ ಶಕ್ತಿಗಳು ಇರಾನಿನ ಮೊಸಾಡೆಗ್ ಆವರಿಗೆ ಮಾಡಿದಂತೆ ಪದೇ ಪದೇ ಮೋದಿಯವರ ವಿರುದ್ಧ ಷಡ್ಯಂತ್ರಗಳನ್ನು ನಡೆಸುತ್ತಲೇ ಇವೆ. ಇದಕ್ಕೆ ತುಪ್ಪಾ ಸುರಿಯುವಂತೆ. ಕೆಲವು ಭ್ರಷ್ಟ ಮಾಧ್ಯಮಗಳು ಮತ್ತು ದೇಶ ವಿರೋಧಿಗಳು ಸಹಾ ದೇಶ ಮತ್ತು ಮೋದಿಯವರ ವಿರುದ್ಧ ಅಪಪ್ರಚಾರಕ್ಕೆ ಇಳಿದಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ.

abv2ನಮ್ಮ ದೇಶಭಕ್ತ ಭಾರತೀಯರು ಈ ಕುಂತಂತ್ರವನ್ನು ಅರಿತು ಶ್ರೇಷ್ಠ ನಾಯಕರುಗಳಾದ ಇರಾನಿನ ಮೊಸಾಡಿಗ್ ಮತ್ತು ಭಾರತದ ಅಟಲ್ ಬಿಹಾರಿ ವಾಜಪೇಯಿಯವರ ಸರ್ಕಾರವನ್ನು ಬದಲಿಸಿದಂತೆ ಈ ಬಾರಿ ಮಾಡದೇ, ದೇಶದ ಅಸ್ತಿತ್ವ, ಅಸ್ಮಿತೆ ಮತ್ತು ಅಭಿವೃದ್ಧಿಗಾಗಿ ಮತ್ತೊಮ್ಮೆ ಸಮರ್ಥ ಮತ್ತು ಸ್ಥಿರ ನಾಯಕತ್ವವನ್ನು ಕೊಡಬಲ್ಲಂತಹ ಶಕ್ತಿಯನ್ನು ಹೊಂದಿರುವಂತಹ ಶ್ರೀ ನರೇಂದ್ರ ಮೋದಿಯವರ ಬೆನ್ನಿಗೆ ಗಟ್ಟಿಯಾಗಿ ನಿಲ್ಲಲೇ ಬೇಕಿದೆ.

UPAಹಾಗಾಗದೇ ಹೋದಲ್ಲಿ ಇರಾನ್ ಮತ್ತು UPA-1&2 ನಲ್ಲಿ ಆದಂತಹ ಅನಾಹುತ ಅನಿವಾರ್ಯವಾಗಿ ಹೇರಲ್ಪಡುತ್ತದೆ. ಇದಕ್ಕಾಗಿಯೇ ಪ್ರಪಂಚಾದ್ಯಂತ ಇರುವ ದೊಡ್ಡ ಬಂಡವಾಳಶಾಹಿ ರಾಷ್ಟ್ರಗಳ ಗುಪ್ತಚರ ಸಂಸ್ಥೆಗಳು ಹಗಲಿರುಳು ಕೆಲಸ ಮಾಡುತ್ತಿದ್ದು, ಈ ಗುಪ್ತಚರ ಸಂಸ್ಥೆಗಳಿಗೆ ನಮ್ಮದೇ ದೇಶದ ಅನೇಕ ಭ್ರಷ್ಟ ರಾಜಕಾರಣಿಗಳು ಮತ್ತು ಕೆಲ ಮತಾಂಧರುಗಳು ಏಜೆಂಟರಂತೆ ಕೆಲಸ ಮಾಡುತ್ತಿದ್ದು, ಅವರು ಕೊಡುವ ಎಂಜಿಲು ಕಾಸಿಗೆ ಈ ದೇಶವನ್ನೇ ಹಾಳು ಮಾಡಲು ಹೊರಟಿರುವುದು ನಿಜಕ್ಕೂ ಕಳವಳಕಾರಿಯಾಗಿದೆ.

modi2ಈ ಬಾರಿಯ 2024ರ ಚುನಾವಣೆಯು ಕೇವಲ ಆಡಳಿತ ಮತ್ತು ವಿರೋಧ ಪಕ್ಷದ ನಡುವೆ ಮಾತ್ರಾ ನಡೆಯುತ್ತಿರದೇ, ನಮ್ಮ ದೇಶದ ಭಧ್ರತೆ, ಆರ್ಥಿಕತೆ ಮತ್ತು ಅಸ್ತಿತ್ವ ಮತ್ತು ದೇಶವಿರೋಧಿ ಪಟ್ಟಭದ್ರ ಹಿತಾಸಕ್ತಿಗಳು ಮತ್ತು ಭಾರತವನ್ನು ತುಳಿಯಲು ಹವಣಿಸುತ್ತಿರುವ ಹಲವಾರು ವಿದೇಶಿ ಶಕ್ತಿಗಳ ನಡುವೆ ನಡೆಯುತ್ತಿರುವುದರಿಂದ, ಚುನಾವಣೆಯ ರಜೆಯ ದಿನ ಮೋಜು ಮಸ್ತಿಗಳಿಗೆ ಸೀಮಿತಗೊಳಿಸದೇ, ಪ್ರತಿಯೊಬ್ಬ ಮತದಾರರೂ ಚುನಾವಣೆಯಲ್ಲಿ ತಮ್ಮ ಮತವನ್ನು ಭಾರತದ ಪರ ಚಲಾಯಿಸುವ ಮೂಲಕ ಭಾರತವನ್ನು ಮತ್ತೆ ವಿದೇಶಿಗರ ದಾಸ್ಯದಿಂದ ತಪ್ಪಿಸಬೇಕಾಗಿದೆ. ನಮ್ಮ ದೇಶದ ಭವಿಷ್ಯವನ್ನು ನಿರ್ಧರಿಸುವವರು ನಾವೇ ಆಗಿದ್ದು ಅದರ ಸಂಪೂರ್ಣ ಜವಾಬ್ಧಾರಿ ಈಗ ನಮ್ಮ ಕೈಯಲ್ಲಿದ್ದು ಅದನ್ನು ನಾವು ನೀವು ಅದನ್ನು ಸರಿಯಾಗಿ ಅರ್ಥ ಮಾಡಿಕೊಂಡು ದಿಟ್ಟ, ನೇರ ನಿರಂತರ ಮತ್ತು ಸಮರ್ಥ ನಾಯಕರನ್ನು ಆಯ್ಕೆ ಮಾಡೋಣ ಅಲ್ವೇ?

ದೇಶ ಉಳಿದರೆ ಮಾತ್ರಾವೇ ನಾವೂ ನೀವು ಉಳಿಯುತ್ತೇವೆ ಎನ್ನುವುದನ್ನು ಮರೆಯದಿರೋಣ ಅಲ್ವೇ?

ಏನಂತೀರೀ?
ಸೃಷ್ಟಿಕರ್ತ ಉಮಾಸುತ

ಸೂಚನೆ: ಇದು ಇರಾನ್‌ನಲ್ಲಿ ಭಾರತದ ರಾಯಭಾರಿಯಾಗಿದ್ದಂತಹ IFS ಅಧಿಕಾರಿಗಳಾದ ಶ್ರೀ ಡಿ. ಪಿ. ಶ್ರೀವಾಸ್ತವ್ ಅವರ ಆಂಗ್ಲ ಭಾಷೆಯ ಲೇಖನದ ಭಾವಾನುವಾದವಾಗಿದೆ.

One thought on “ಇರಾನಿನ ಮೊಸಾಡೆಗ್ ಮತ್ತು ಇಂಡಿಯಾದ ಮೋದಿ

Leave a comment