ಪ್ರ
ಸ್ತುತ ಲೋಕಸಭಾ ಚುನಾವಣೆ ನಡೆಯುತ್ತಿರುವ ಸಂಧರ್ಭದಲ್ಲಿ ಯಾವ ಪಕ್ಷ ಅಥವಾ ಒಕ್ಕೂಟದ ಮೈತ್ರಿಗೆ ಹೆಚ್ಚಿನ ಸ್ಥಾನ ಬರುತ್ತದೆ ಮತ್ತು ನಮ್ಮ ದೇಶದ ಮುಂದಿನ ಪ್ರಧಾನಿಗಳು ಯಾರಾಗಬಹುದು ಎಂಬ ಕುತೂಹಲ ಕೇವಲ ಭಾರತಕ್ಕಷ್ಟೇ ಅಲ್ಲದೇ ವಿದೇಶಿಗರಲ್ಲಿಯೂ ಕುತೂಹಲ ಮೂಡಿಸಿದೆ. ಸದ್ಯದ ಚುನಾವಣಾ ಪೂರ್ವ ಸಮೀಕ್ಷೆಯನ್ನು ಗಮನಿಸಿದರೆ, ಅಬ್ ಕಿ ಬಾರ್ ಚಾರ್ ಸೌ ಪಾರ್ ಎಂದು ಹೇಳುತ್ತಿರುವ NDA 400+ ಗಳಿಸದೇ ಹೋದರೂ ನಿಶ್ಚಿತವಾಗಿ ಮತ್ತೊಮ್ಮೆ ಅಧಿಕ ಹೆಚ್ಚಿನ ಸ್ಥಾನವನ್ನು ಗಳಿಸಿ ಮೋದಿಯವರು ಮಗದೊಮ್ಮೆ ಪ್ರಧಾನಿಮಂತ್ರಿಗಳಾಗುತ್ತಾರೆ ಎಂದೇೆ ಎಲ್ಲರೂ ಹೇಳುತ್ತಿರುವ ಸಂಧರ್ಭದಲ್ಲಿ 2004ರ ವಾಜಪೇಯಿಯವರ India shining ನಂತೆ ಏನಾದರೂ ಹೆಚ್ಚುಕಡಿಮೆ ಆಗಿ ಅಕಸ್ಮಾತ್ ಕಾಂಗ್ರೇಸ್ ಪಕ್ಷದ ಅಧಿನಾಯಕ ರಾಹುಲ್ ಗಾಂಧಿ ಈ ದೇಶದ ಪ್ರಧಾನಿ ಆಗಬಹುದೇ? ಎಂಬುದರ ಕುತೂಹಲಕಾರಿ ಅಂಶಗಳು ಇದೋ ನಿಮಗಾಗಿ.
19 ಜೂನ್ 1970 ರಲ್ಲಿ ಭಾರತೀಯ ಸಂಜಾತ ರಾಜೀವ್ ಗಾಂಧಿ ಮತ್ತು ಇಟಲಿಯ ಸಂಜಾತೆ ಸೋನಿಯಾಗಾಂಧಿ ಅವರ ಮಗನಾಗಿ ಜನಿಸಿದ ರಾಹುಲ್ ಗಾಂಧಿ, ಬಾಲ್ಯದಿಂದಲೂ ಚಿನ್ನದ ಚಮಚವನ್ನು ಬಾಯಲ್ಲಿ ಇಟ್ಟಿ ಕೊಂಡು ಬೆಳೆದವ ಎಂದರೂ ತಪ್ಪಾಗದು. ಆತನ ಮುತ್ತಾತ ಅಜ್ಜಿ ಮತ್ತು ತಂದೆ ಈ ದೇಶದ ಪ್ರಧಾನಿಯಾಗಿದ್ದರು. 1981 ರಿಂದ 1983 ರವರೆಗೆ ಉತ್ತರಾಖಂಡ್‌ನ ಡೆಹ್ರಾಡೂನ್‌ನಲ್ಲಿರುವ ದಿ ಡೂನ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಸಂಧರ್ಭದಲ್ಲಿ ಆತನ ಆಜ್ಜಿ. ಇಂದಿರಾ ಗಾಂಧಿಯವರ ಹತ್ಯೆಯ ನಂತರ ಈ ಕುಟುಂಬಕ್ಕೆ ಸಿಖ್ ಸಮುದಾಯದಿಂದ ಬರುತ್ತಿದ್ದ ಭದ್ರತಾ ಬೆದರಿಕೆಗಳಿಂದಾಗಿ ಅತನ ಮುಂದಿನ ಶಿಕ್ಷಣವೆಲ್ಲಾ ಮನೆಯಲ್ಲಿಯೇ ನಡೆದು, ಪದವಿಪೂರ್ವ ಶಿಕ್ಷಣಕ್ಕಾಗಿ 1989 ರಲ್ಲಿ ದೆಹಲಿಯ ಗುರುನಾನಕ್ ಕಾಲೇಜಿಗೆ ಸೇರಿದರು. ಮುಂದೆ 1995 ರಲ್ಲಿ ಕೇಂಬ್ರಿಡ್ಜ್‌ನ ಟ್ರಿನಿಟಿ ಕಾಲೇಜಿನಲ್ಲಿ ಅಭಿವೃದ್ಧಿ ಅಧ್ಯಯನದಲ್ಲಿ ಮಾಸ್ಟರ್ ಆಫ್ ಫಿಲಾಸಫಿ (ಎಂಫಿಲ್) ಅನ್ನು ಪಡೆದ ನಂತರ ಕೆಲ ಕಾಲ ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್‌ನ ಮೈಕೆಲ್ ಪೋರ್ಟರ್ ಸ್ಥಾಪಿಸಿದ ಮ್ಯಾನೇಜ್‌ಮೆಂಟ್ ಕನ್ಸಲ್ಟಿಂಗ್ ಸಂಸ್ಥೆಯಾದ ಮಾನಿಟರ್ ಗ್ರೂಪ್‌ನಲ್ಲಿ ಕೆಲಸ ಮಾಡಿದ ನಂತರ ಸಕ್ರೀಯ ರಾಜಕೀಯಕ್ಕಿಳಿದು ಪಕ್ಷದ ವಿವಿಧ ಹುದ್ದೆಗಳಲ್ಲಿ ತನ್ನ ಜವಾಬ್ಧಾರಿಯನ್ನು ನಿರ್ವಹಿಸಿದ ಎನ್ನಲಾಗುತ್ತಿದೆಯಾದರೂ ಆತನ ಶಿಕ್ಷಣದ ಬಗ್ಗೆ ಯಾರಿಗೂ ಅಧಿಕೃತವಾದ ಮಾಹಿತಿ ಇಲ್ಲವಾಗಿದೆ. ಅಂತಿಮವಾಗಿ ಮಾರ್ಚ್ 2004ರಲ್ಲಿ ತಮ್ಮ ತಂದೆಯವರು ಪ್ರತಿನಿಧಿಸುತ್ತಿದ್ದ ಉತ್ತರ ಪ್ರದೇಶದ ಅಮೇಥಿ ಕ್ಷೇತ್ರದಿಂದ ಕಾಂಗ್ರೇಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಜಯಗಳಿಸುವ ಮುಲಕ ಸಾಂಸದನಾಗಿದ್ದಲ್ಲದೇ 2009 & 2014 ರಲ್ಲಿ ಮೂರು ಬಾರಿ ಅದೇ ಕ್ಷೇತ್ರದಲ್ಲಿ ಆಯ್ಕೆಯಾಗಿ 2019ರಲ್ಲಿ ಬಿಜೆಪಿಯ ಸ್ಮೃತಿ ಇರಾನಿ ವಿರುದ್ಧ ಸೋಲುವುದನ್ನು ಮನಗಂಡು ಮುಸ್ಲಿಮ್ ಬಾಹುಳ್ಯವಿರುವ ಕೇರಳದ ವೈನಾಡಿನಿಂದ ನಾಲ್ಕನೇ ಬಾರಿಗೆ ಸಾಂಸದರಾಗಿದ್ದಾರೆ.
ವಂಶಪಾರಂಪರ್ಯವಾಗಿ ಪಕ್ಷದ ವಿವಿಧ ಹುದ್ದೆಗಳಲ್ಲಿದ್ದರೂ ಸಂಸದರಾಗುವ ಮುನ್ನಾ ದೇಶವಾಸಿಗಳಿಗೆ ಅಷ್ಟೇನೂ ಪರಿಚಯವಿರದಿದ್ದ ರಾಹುಲ್ ನಂತರ ದಿನಗಳಲ್ಲಿ ತನ್ನ ತಾಯಿಯ ಜೊತೆ ಸೇರಿಕೊಂಡು ರಿಮೋಟ್ ಕಂಟ್ರೋಲ್ ಮಾದರಿಯಲ್ಲಿ ಮನಮೋಹನ್ ಸಿಂಗ್ ಅವರನ್ನು ಪ್ರಧಾನಿಯಾಗಿಸಿ, ಹೋದ ಬಂದ ಕಡೆಯಲ್ಲೆಲ್ಲಾ, ಈ ದೇಶವನ್ನು ಹಿಯ್ಯಾಳಿಸಿ ಮಾತನಾಡುವ ಮೂಲಕ ಪ್ರಾಭಲ್ಯಗಳಿಸಿದರೂ ಎಂದರೂ ತಪ್ಪಾಗದು. 2014ರ ವರೆಗೂ ಸುಮಾರು 10 ವರ್ಷಗಳ ಕಾಲ ಅವರ ಬಳಿಯಲ್ಲೇ ಅಧಿಕಾರವಿದ್ದರೂ ಮನಮೋಹನ್ ಸಿಂಗ್ ಅವರ ಸಂಪುಟದ ಸಹೋದ್ಯೋಗಿ ಒಂದೆರದು ಪ್ರಮುಖ ಖಾತೆಗಳ ಮಂತ್ರಿಯಾಗಿ ಪಡೆಯಬಹುದಾಗಿದ್ದ ಆಡಳಿತಾತ್ಮಕ ಅನುಭವನ್ನೆಲ್ಲಾ ಬಿಟ್ಟು ಕೊಟ್ಟು ಅಂತಿಮವಾಗಿ 2014ರ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷದ ಅಧ್ಯಕ್ಷನಾಗಿ 2001 ರಿಂದ 2014 ರವರೆಗೆ ಗುಜರಾತ್ ಮುಖ್ಯಮಂತ್ರಿಯಾಗಿ ಅಪಾರ ಜನಮನ್ನಣೆ ಗಳಿಸಿದ್ದ ಶ್ರೀ ನರೇಂದ್ರ ಮೋದಿಯವರ ವಿರುದ್ಧ ಪ್ರಧಾನ ಮಂತ್ರಿಯಾಗಲು ಹೊರಟಿದ್ದೇ ಆತನ ರಾಜಕೀಯ ಅವನತಿಗೆ ಕಾರಣವಾಯಿತು ಎಂದರೂ ತಪ್ಪಾಗದು.
ಪ್ರಪಂಚದಲ್ಲಿ ಎಲ್ಲರಿಗೂ ಎಲ್ಲಾ ವಿಷಯದ ಬಗ್ಗೆ ತಿಳಿದಿರುವುದಿಲ್ಲಾ ಮತ್ತು ಏನನ್ನಾದರೂ ಕಲಿಯಲು ಯಾವುದೇ ವಯಸ್ಸಿನ ಹಂಗಿಲ್ಲ ಎನ್ನುವುದು ಹೇಗೆ ಸತ್ಯವೂ ಅದೇ ರೀತಿಯಲ್ಲೇ ಜಗತ್ತಿನಲ್ಲಿ ಎಲ್ಲವೂ ತನಗೇ ಗೊತ್ತು ಎಂದು ಮೆರೆಯುವವರಿಗೆ ಖಂಡಿತವಾಗಿ ಏನೂ ಸಹಾ ತಿಳಿದಿರುವುದಿಲ್ಲಾ ಎನ್ನುವುದೂ ಅಷ್ಟೇ ಸತ್ಯ. ಇದರಲ್ಲಿ 2ನೇ ವರ್ಗಕ್ಕೆ ಸೇರಿದವರೇ ರಾಹುಲ್ ಗಾಂಧಿ ಎಂದರೂ ತಪ್ಪಾಗದು. ಆಡಳಿತಾತ್ಮಕವಾಗಿ ಯಾವುದೇ ಅನುಭವ ಇಲ್ಲದೇ ಇದ್ದರೂ, ಕೇವಲ ನೆಹರು ವಂಶದಲ್ಲಿ ಹುಟ್ಟಿರುವ ಕಾರಣಕ್ಕಾಗಿಯೇ ತಾನು ಪ್ರಧಾನಿ ಆಗಬೇಕು ಎಂದು ಬಯಸುವುದು ಸರಿಯಲ್ಲ ಎನ್ನುವುದನ್ನು ಬಹಳಷ್ಟು ಭಾರತೀಯರು ಬಹಿರಂಗವಾಗಿಯೇ ವ್ಯಕ್ತಪಡಿಸಿದರೂ ರಾಹುಲ್ ಗಾಂಧಿ, ಅತನ ಪಕ್ಷ ಮತ್ತು ಆತನ ಕುಟುಂಬ ಅದಕ್ಕೆ ಒಪ್ಪದೇ ಇರುವುದೇ ಈ ದೇಶದ ದೌರ್ಭಾಗ್ಯವಾಗಿದೆ.
ದೇಶದ ಆಂತರಿಕ ಭಧ್ರತೆಯನ್ನೂ ಲೆಕ್ಕಿಸದೇ, ಪದೇ ಪದೇ ದೇಶ ವಿದೇಶಗಳಲ್ಲಿ ಸುತ್ತಾಡುತ್ತಾ, ಮೇಲಿಂದ ಮೇಲೆ ಭಾರತ ದೇಶದ ವಿರುದ್ಧವಾಗಿ ಮಾತನಾಡುವುದಲ್ಲದೇ, ದೇಶ ವಿದೇಶದ ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಸಮರ್ಥವಾಗಿ ಉತ್ತರಿಸಲಾಗದೇ ತಬ್ಬಿಬ್ಬಾಗುವುದು ಇಲ್ಲವೇ ಅಸಂಬದ್ದ ಉತ್ತರಗಳನ್ನು ನೀಡುವ ಮೂಲಕ ಸ್ವತಃ ನಗೆಪಾಟಲಿಗೆ ಗುರಿಯಾಗುವುದಲ್ಲದೇ, ದೇಶದ ಮಾನವನ್ನು ಹರಾಜು ಹಾಕುವುದಲ್ಲದೇ, ದೇಶದಲ್ಲಿ ಯಾವುದೇ ಸಾಂವಿಧಾನಿಕ ಪದವಿಯನ್ನು ಹೊಂದಿಲ್ಲದೇ ಇದ್ದರೂ ಭಾರತದ ಪರಮ ಶತ್ರು ಎಂದೇ ಭಾವಿಸಿರುವ ಚೀನಾ ದೇಶದ ಅಧ್ಯಕ್ಷರ ಜೊತೆ ರಹಸ್ಯ ಒಪ್ಪಂದಕ್ಕೆ ಸಹಿ ಹಾಕುವುದು ಭಾರತವನ್ನು ವಿಶ್ವಮಟ್ಟದಲ್ಲಿ ಹಣಿಯಲು ಸದಾಕಾಲವೂ ತುದಿಗಾಲಲ್ಲಿ ನಿಂತಿರುವ, ಹಂಗೇರಿಯನ್ ಮೂಲದ ಅಮೇರಿಕನ್ ಉದ್ಯಮಿ ಜಾರ್ಜ್ ಸೊರೊಸ್ ಮತ್ತು ಆತನ NGO ಗಳೊಂದಿಗೆ ನಿರಂತರವಾಗಿ ಸಂಪರ್ಕವಿಟ್ಟುಕೊಂಡು ಅವರ ಸಹಾಯ ಮತ್ತು ಕೆಲವು ಜಾಗತಿಕ ಪಟ್ಟಭದ್ರ ಹಿತಾಸಕ್ತಿಗಳನ್ನು ಹೊಂದಿರುವ ಶಕ್ತಿಗಳೊಂದಿಗೆ ರಹಸ್ಯವಾಗಿ ಕೈ ಜೋಡಿಸಿ ವಿಶ್ವ ಮಟ್ಟದಲ್ಲಿ ಭಾರತದ ಚಿತ್ರಣ ಮತ್ತು ಆರ್ಥಿಕತೆಯನ್ನು ಹಾಳುಮಾಡುವ ಮೂಲಕ ಪ್ರಧಾನಿ ಶ್ರೀ ನರೇಂದ್ರ ಮೋದಿಯವರನ್ನು ಪದಚ್ಯುತಗೊಳಿಸಿ ಅಧಿಕಾರಕ್ಕೆ ಬರಲು ಹವಣಿಸುತ್ತಿರುವ ವಿಷಯ ಈಗ ಗುಟ್ಟಾಗಿ ಉಳಿಯದ ಕಾರಣ, ಬಹುತೇಕ ಭಾರತೀಯರು ರಾಹುಲ್ ಗಾಂಧಿಯನ್ನು ದೇಶವನ್ನು ಮುನ್ನಡೆಸಬಲ್ಲ ನಾಯಕ ಎಂದು ನಂಬದೇ ಇರಲು ಪ್ರಮುಖ ಕಾರಣವಾಗಿದೆ.
ಸ್ವಾತಂತ್ರ್ಯಾ ನಂತರ 565 ಸಣ್ಣ ಸಣ್ಣರಾಜ್ಯಗಳಾಗಿ ಹರಿದು ಹಂಚಿ ಹೋಗಿದ್ದ ರಾಜ್ಯಗಳನ್ನು ಒಟ್ಟುಗೂಡಿಸಿ ಸರ್ದಾರ್ ವಲ್ಲಭಬಾಯ್ ಪಟೇಲರು ಭಾರತವೆಂಬ ಒಕ್ಕೂಟ ರಾಷ್ಟ್ರವನ್ನಾಗಿ ಮಾಡಿ, ಇದೇ ರಾಹುಲ್ ವಂಶಸ್ಥರು/ಪಕ್ಷದವರೇ ಸುಮಾರು ಆರು ದಶಕಗಳ ಕಾಲ ತಮ್ಮಿಷ್ಟ ಬಂದ ಹಾಗೆ ಆಳಿದ್ದರೂ, ಕಳೆದ ಹತ್ತು ವರ್ಷಗಳಲ್ಲಿ ನರೇಂದ್ರ ಮೋದಿಯವರು ಸುಸ್ಥಿರವಾಗಿ ದೇಶವನ್ನು ಅಳುತ್ತಿರುವ ಕಾರಣ ಮುಂದಿನ ಎರಡು ದಶಕಗಳ ಕಾಲ ಮತ್ತೆ ಕಾಂಗ್ರೇಸ್ ಅಧಿಕಾರಕ್ಕೇರುವುದು ಗಗನ ಕುಸುಮ ಎಂಬುದನ್ನರಿತು, ದೇಶದಲ್ಲಿ ಪ್ರಜಾಪಭುತ್ವ ಆತಂಕದಲ್ಲಿದೆ, ಸರ್ವಾಧಿಕಾರದತ್ತ ಸಾಗಿದೆ (1977ರಲ್ಲಿ ದೇಶದಲ್ಲಿ ಸ್ವಾರ್ಥಕ್ಕಾಗಿ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದು ಇಂದಿರಾಗಾಂಧಿ) ಎಂಬ ಸುಳ್ಳನ್ನು ಹೇಳುತ್ತಾ, ನರೇಂದ್ರ ಮೋದಿಯವರನ್ನು ಹಳಿಯುವ ಏಕೈಕ ಉದ್ದೇಶದಿಂದ ದಕ್ಷಿಣದಿಂದ ಉತ್ತರಕ್ಕೆ ಪೂರ್ವದಿಂದ ಪಶ್ಚಿಮಕ್ಕೆ ನಡೆಸಿದ ನ್ಯಾಯ ಯಾತ್ರೆಯಲ್ಲಿ ದಾರಿಯುದ್ದಕ್ಕೂ ಮೋಜು ಮಸ್ತಿಯ ಮಾಡಿದ್ದು ಬಿಟ್ಟರೆ ಆತ ಅದರಿಂದ ಸಾಧಿಸಿದ್ದೇನೂ ಇಲ್ಲಾ ಮತ್ತು ದೇಶಕ್ಕೂ ಅದರಿಂದ ಯಾವುದೇ ಲಾಭವಿಲ್ಲಾ.
ಇನ್ನು ಮಾತೆತ್ತಿದ್ದರೆ, ಪ್ರಧಾನಿ ಮೋದಿಯವರು ಬಡವರ ಪರ ಇಲ್ಲಾ. ಆವರದ್ದೇನಿದ್ದರೂ ಅದಾನಿ, ಅಂಬಾನಿ ಪರ ಎಂದು ಹಸೀ ಸುಳ್ಳು ಹೇಳುವ ಇದೇ ರಾಹುಲ್ ಗಾಂಧಿಗೆ ಅನಿಲ್ ಅಂಬಾನಿಯವರು ಕೇಳಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ಪ್ರಶ್ನೆಗಳು ಬಹಳ ಕುತೂಹಲಕಾರಿಯಾಗಿದೆ.
ಹೋದ ಬಂದೆಡೆಯಲ್ಲೆಲ್ಲಾ, ಅಂಬಾನಿ ಕುಟುಂಬ ಈ ದೇಶವನ್ನು ಲೂಟಿ ಮಾಡಿದೆ ಎಂದು ಹೇಳುತ್ತೀರಲ್ಲಾ, ನಾನು ಮತ್ತು ನನ್ನ ಕುಟುಂಬ ಸೇರಿ ಪ್ರತಿ ವರ್ಷ ಸುಮಾರು 50000/- ಕೋಟಿ ತೆರಿಗೆಯನ್ನು ಪಾವತಿಸುವುದಲ್ಲದೇ, ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಲಕ್ಷಾಂತರ ಜನರಿಗೆ ಉದ್ಯೋಗವನ್ನು ನೀಡಿದ್ದೇವೆ. ಈಗ ನಿಮ್ಮ ಕುಟುಂಬ ಮತ್ತು ಕಾಂಗ್ರೇಸ್ ಪಕ್ಷದ ಕೊಡುಗೆಯನ್ನು ಹೇಳಿ ಎಂದು ನೇರವಾಗಿ ಕೇಳಿದ್ದಾರೆ.
ಹಾಗೇ ಮಾತನ್ನು ಮುಂದುವರೆಸಿ, ನಮ್ಮ ತಂದೆಯವರು ಪೆಟ್ರೋಲ್ ಬಂಕಿನಲ್ಲಿ ಕೆಲಸ ಆರಂಭಿಸಿ ನಂತರದ ದಿನಗಳಲ್ಲಿ ಕಷ್ಟ ಪಟ್ಟು ಈ ಪರಿಯಾಗಿ ಬೆಳೆದಿರುವ ಸಂಗತಿ ಇಡೀ ಪ್ರಪಂಚಕ್ಕೇ ತಿಳಿದಿರುವ ಸಂಗತಿಯಾಗಿದ್ದರೆ, ಯಾವುದೇ ರೀತಿಯ ವ್ಯವಹಾರವನ್ನೂ ಮಾಡದ ನಿಮ್ಮ ತಾಯಿ ವಿಶ್ವದ ನಾಲ್ಕನೇ ಶ್ರೀಮಂತ ಮಹಿಳೆ ಆಗಿರುವ ಹಿನ್ನಲೆ ತಿಳಿಸಿ ಎಂದಿರುವುದಲ್ಲದೇ, ನ್ಯಾಷಿನಲ್ ಹೆರಾಲ್ಡ್ ಪತ್ರಿಕೆಯ ಅಸ್ತಿಯ ತೆರಿಗೆ ವಂಚನೆ ಪ್ರಕರಣದಲ್ಲಿ ನಿಮ್ಮ ಇಡೀ ಕುಟುಂಬವೇ ಜಾಮೀನಿನ ಮೇಲಿರುವಾಗ ಇತರರ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ನಿಮಗೆ ಹೇಗಿಬರುತ್ತದೆ? ಎಂದು ಕೇಳಿರುವುದು ಗಮನಾರ್ಹವಾಗಿದೆ.
ನಮ್ಮ ಕುಟುಂಬ ಕಳೆದ 40 ವರ್ಷಗಳಿಂದಲೂ ವಿವಿಧ ಬ್ಯಾಂಕ್‌ಗಳಿಂದ ವ್ಯವಹಾರಕ್ಕಾಗಿ ಕೋಟ್ಯಾಂತರ ರೂಪಾಯಿ ಸಾಲವನ್ನು ತೆಗೆದುಕೊಂಡು ಅದಕ್ಕೆ ಪ್ರತೀ ತಿಂಗಳು ಕೋಟ್ಯಂತರ ರೂಪಾಯಿ ಮೌಲ್ಯದ ಬಡ್ಡಿಯನ್ನು ಸಹ ಪಾವತಿಸುವುದಲ್ಲದೇ, ಸೂಕ್ತ ಸಮಯದಲ್ಲಿ ಆ ಸಾಲಗಳನ್ನು ತೀರಿಸಿಯೂ ಇದ್ದೇವೆ. ಬ್ಯಾಂಕುಗಳು ನಮಗೆ ಹಾಗೆ ಸಾಲವನ್ನು ನೀಡಲು ಇಡುಗಂಟನ್ನು ಬಯಸುತ್ತವೆ ಆದರೆ, ಈ ರೀತಿಯ ಎಲ್ಲಾ ನಿಯಮಗಳನ್ನೆಲ್ಲಾ ಗಾಳಿಗೆ ತೂರಿ ನಿಮ್ಮ ಅಕ್ಕನ ಗಂಡ ಕೋಟ್ಯಾಂತರ ರೂಪಾಯಿ ಸಾಲವನ್ನು ಅದೂ ಬಡ್ಡಿರಹಿತವಾಗಿ ಹೇಗೆ ಪಡೆದರು? ಮಾರುಕಟ್ಟೆಯಲ್ಲಿ ಕೋಟ್ಯಾಂತರ ಬೆಲೆ ಬಾಳುವ ಸರ್ಕಾರಿ ಜಮೀನು ಅದು ಹೇಗೆ ಕನಿಷ್ಟ ಬೆಲೆಯಲ್ಲಿ ನಿಮ್ಮ ಭಾವ ರಾಬರ್ಟ್ ವಾದ್ರ ಹೇಗೆ ಪಡೆದರು? 15 ವರ್ಷಗಳ ಹಿಂದೆ ಗುಜರೀ ವ್ಯಾಪಾರ ಮಾಡುತ್ತಿದ್ದ ನಿಮ್ಮ ಭಾವ, ನಿಮ್ಮದೇ ಸರ್ಕಾರ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿದ್ದ 10 ವರ್ಷಗಳಲ್ಲಿ 10,000 ಕೋಟಿ ರೂಪಾಯಿ ಮೌಲ್ಯದ ಆಸ್ತಿಗೆ ಹೇಗೆ ಒಡೆಯರಾದರು? ಅವರಿಗೆ ಇಷ್ಟು ಹಣ ಮತ್ತು ಅಷ್ಟೊಂದು ಭೂಮಿ ಎಲ್ಲಿಂದ ಬಂತು? ಲಂಡನ್‌ನಲ್ಲಿ 2 ಬಂಗಲೆಗಳು ಮತ್ತು 6 ಫ್ಲಾಟ್‌ಗಳನ್ನು ಖರೀದಿಸಲು ಹೇಗೆ ಸಾಧ್ಯವಾಯಿತು? ಎಂದು ಕೇಳಿರುವುದು ಚರ್ಚಿಸಬೇಕಾದ ವಿಷಯವಾಗಿದೆ.
ನಿಜ ಹೇಳಬೇಕೆಂದರೆ ರಿಲಯನ್ಸ್ ಕಂಪನಿ ಪ್ರಾಭಲ್ಯಕ್ಕೆ ಬಂದದ್ದೇ ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಇರುವಾಗಲೇ ಎಂದು ಹೇಳುತ್ತಾ, ಅದಕ್ಕೆ ಪೂರಕ ಎಂಬಂತೆ ಅವರು ಹೇಳಿರುವ ವಿಷಯಗಳು ಅಚ್ಚರಿಯನ್ನು ಮೂಡಿಸುತ್ತವೆ. ಮನಮೋಹನ್ ಸಿಂಗ್ ಅವರ ಆಳ್ವಿಕೆಯ ಕಾಲದಲ್ಲಿ 5000 ಕೋಟಿ ಮೌಲ್ಯದ ದೆಹಲಿ ಏರ್‌ಪೋರ್ಟ್ ಮೆಟ್ರೋದ ಗುತ್ತಿಗೆ ಮತ್ತು 3900 ಕೋಟಿ ರೂಪಾಯಿ ಮೌಲ್ಯದ ಮುಂಬೈ ಮೆಟ್ರೋದ ಗುತ್ತಿಗೆಯನ್ನು ಸರ್ಕಾರೀ ಕಂಪನಿಗಳಿಗೆ ಕೊಡದೇ ರಿಲಯನ್ಸ್ ಕಂಪನಿಗೆ ಕೊಟ್ಟಿದ್ದೇ ಕಾಂಗ್ರೇಸ್ ಪಕ್ಷ.
ದೆಹಲಿಯಲ್ಲಿ 1200 ಕೋಟಿ ಮೌಲ್ಯದ ಡಿವಿಬಿ (ಈ ಹಿಂದೆ ಡಿಇಎಸ್‌ಯು) ವಿದ್ಯುತ್ ಪೂರೈಕೆಯ ಗುತ್ತಿಗೆಯನ್ನು ಎನ್‌ಟಿಪಿಸಿ (ಸರ್ಕಾರಿ ಕಂಪನಿ) ಬದಲಿಗೆ ಸೋನಿಯಾ ಗಾಂಧಿಯವರ ಆದೇಶದ ಮೇರೆಗೆ ಶೀಲಾ ದೀಕ್ಷಿತ್ ನಮ್ಮ ಕಂಪನಿಗೆ ಗುತ್ತಿಗೆಯನ್ನು ನೀಡಿದ್ದರು. ಅದೇ ರೀತಿಯಲ್ಲಿ 2004 ರಿಂದ 2014 ರ ನಡುವೆ, ಇದೇ ಕಾಂಗ್ರೆಸ್ ಸರ್ಕಾರವು ನಮ್ಮ ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್‌ಗೆ ಉತ್ತರ ಪ್ರದೇಶದಲ್ಲಿ 3, ಒಡಿಶಾ, ತಮಿಳುನಾಡು, ಕರ್ನಾಟಕ, ಪಂಜಾಬ್‌ನಲ್ಲಿ 8 ಒಟ್ಟು 3 ರಾಷ್ಟ್ರೀಯ ಹೆದ್ದಾರಿಗಳು ಮತ್ತು ಯೋಜನೆಗಳ ಸುಮಾರು 25,350/- ಕೋಟಿ ಮೊತ್ತದ ಕೆಲಸಗಳನ್ನು ನೀಡಿತ್ತು.
ಯಾವಾಗ ಈ ರಾಹುಲ್ ಗಾಂಧಿ ಮತ್ತು ಅವರ ಕುಟುಂಬ ವಿದೇಶಿ ಏಜೆಂಟ್ ರೀತಿಯಲ್ಲಿಕ್ಷ ದೇಶದ್ರೋಹಿಗಳನ್ನು ಬೆಂಬಲಿಸುತ್ತದೆ ಎಂದು ತಿಳಿದು ಬಂದಾಗಲಿಂದಲೂ ರಿಲಯನ್ಸ್ ಕಂಪನಿಗಳು ಕಾಂಗ್ರೆಸ್ ಪಕ್ಷಕ್ಕೆ ದೇಣಿಗೆ ನೀಡುವುದನ್ನು ನಿಲ್ಲಿಸಿದ ಕೂಡಲೇ ಅವರ ಮೇಲೆ ಮುಗಿ ಬಿದ್ದಿರುವುದಲ್ಲದೇ ರಫೇಲ್ ಪ್ರಕರಣದಲ್ಲಿ ಅನಾವಶ್ಯಕವಾಗಿ ರಿಲಯನ್ಸ್ ಕಂಪನಿ ಮತ್ತು ಅಂಬಾನಿ ಕುಟುಂಬದ ಮರ್ಯಾದೆಯನ್ನು ಹಾಳು ಮಾಡಿದ್ದಕ್ಕಾಗಿ ನ್ಯಾಯಾಲಯದಿಂದ ಛೀಮಾರಿ ಹಾಕಿಸಿಕೊಂಡಿದ್ದರೂ, ಪದೇ ಪದೇ ಅಂಬಾನಿ ಕುಟುಂಬದ ವಿರುದ್ಧ ಮಾನಹಾನಿ ಮಾಡುತ್ತಿರುವುದು ರಾಹುಲ್ ಗಾಂಧಿ ಮತ್ತು ಆತನ ಪಕ್ಷದ ಸ್ವಹಿತಾಸಕ್ತಿಯನ್ನು ಎತ್ತಿ ತೋರಿಸುತ್ತದೆ.
ಇನ್ನು ಆರೋಗ್ಯದ ಸಮಸ್ಯೆಯಿಂದಾಗಿ ನೇರವಾಗಿ ಚುನಾವಣಾ ರಾಜಕೀಯದಲ್ಲಿ ಭಾಗಿಯಾಗಲು ಸಾಧ್ಯವಿಲ್ಲ ಎಂದು ರಾಜಸ್ಥಾನದಿಂದ ರಾಜ್ಯಸಭೆಗೆ ಆಯ್ಕೆಯಾದಾಗ, ರಾಹುಲ್ ಗಾಂಧಿಯವರು ತಮ್ಮ ತಾಯಿ ಮತ್ತು ಪಕ್ಷದ ಇತರೇ ಮುಖಂಡರೊಂದಿಗೆ ರಾಷ್ಟ್ರದ ಉಪರಾಷ್ಟ್ರಪತಿಗಳು ಉಪಸ್ಥಿತರಿದ್ದ ಸರ್ಕಾರಿ ಔಪಚಾರಿಕ ಸಮಾರಂಭದಲ್ಲಿ ಅತ್ಯಂತ ಕೆಟ್ಟ ಟಿಶರ್ಟ್ ಧರಿಸಿಕೊಂಡಿರುವುದಲ್ಲದೇ, ಆತ ನಿಂತಿರುವ ಭಂಗಿ, ಆತನ ದೃಷ್ಟಿ ಎಲ್ಲವೂ ಅತ್ಯಂತ ಕೀಳು ಮಟ್ಟದಲ್ಲಿದ್ದು, ಒಬ್ಬ ರಾಷ್ಟ್ರನಾಯಕನಾಗುವ ಯಾವುದೇ ಆರ್ಹತೆ ಆತನಲ್ಲಿ ಇರದೇ ಇರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.
ಇದೇ ರೀತಿಯಲ್ಲಿ ಲೋಕಸಭೆಯಲ್ಲಿ ಇದ್ದಕ್ಕಿದ್ದಂತೆಯೇ ಹೌದು ನಾನು ಪಪ್ಪು ಎಂದು ಒಪ್ಪಿಕೊಂಡಿದ್ದು, ನಾನು ಲೋಕಸಭೆಯಲ್ಲಿ ಬಾಯಿ ಬಿಟ್ಟರೆ ಇಡೀ ಸುನಾಮಿಯಾಗುತ್ತದೆ ಎನ್ನುವುದು, ನೋಟ್ ಅಮಾನ್ಯವಾದ ಸಂಧರ್ಭದಲ್ಲಿ ಹರಿದ ಜೋಬಿನ ಬಟ್ಟೆ ಧರಿಸಿ ನನ್ನ ಬಳಿ ದುಡ್ಡಿಲ್ಲಾ ಎಂದು ಹೇಳುತ್ತಲೇ ಮೋಜು ಮಸ್ತಿಗೆ ವಿದೇಶಕ್ಕೆ ಹತ್ತು ಹಲವಾರು ಬಾರಿ ಹೋಗಿದ್ದು, ಪದೇ ಪದೇ ಮೋದಿಯವರನ್ನು ವಯಕ್ತಿಕವಾಗಿ ನಿಂದಿಸಿ, ನ್ಯಾಯಾಲಯದ ಮುಂದೆ ಕ್ಷಮೆಯನ್ನು ಕೇಳುವುದು, ಲೋಕಸಭೆಯಲ್ಲಿ ಏಕಾಏಕಿ ತನ್ನ ಸ್ಥಾನದಿಂದ ಎದ್ದು ಹೋಗಿ ಪ್ರಧಾನಿ ಮೋದಿಯವರನ್ನು ತಬ್ಬಿಕೊಳ್ಳುವುದು, ಸಂಸತ್ತಿನ ಅಧಿವೇಷನದ ಸಮಯದಲ್ಲಿ ಹೆಣ್ಣು ಮಕ್ಕಳಿಗೆ ಕಣ್ ಹೊಡೆಯುವುದು, ಅಧಿವೇಷನಕ್ಕೆ ತಡವಾಗಿ ಬಂದು ಇತರರ ಭಾಷಣಕ್ಕೆ ಅಡ್ಡಿ ಪಡಿಸುವುದು,, ಸಾರ್ವಜನಿಕ ಸಭೆಯಲ್ಲಿ ಎಲ್ಲರ ಮುಂದೆ ಅಸಹ್ಯಕರವಾಗಿ ತನ್ನ ತಂಗಿಗೆ ಮುತ್ತು ಕೊಡುವುದು ಇದನ್ನೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿದರೆ, ಈತ ಎಂದಾದರೂ ಭಾರತ ಪ್ರಧಾನಿಯಾದರೆ ವಿಶ್ವದ ಮುಂದೆ ಆತನ ನಡವಳಿಕೆಯನ್ನು ಕಲ್ಪಿಸಿಕೊಳ್ಳುವುದಕ್ಕೂ ಭಯವಾಗುತ್ತದೆ.
ಒಟ್ಟಿನಲ್ಲಿ ಹೇಳಬೇಕೆಂದರೆ, ರಾಹುಲ್ ಗಾಂಧಿ ಯುವಕನಲ್ಲ. ಹಾಗೆಯೇ ವಯಸ್ಸಿಗೆ ತಕ್ಕ ಘನತೆ ಮತ್ತು ಗೌರವವಂತೂ ಇಲ್ಲವೇ ಇಲ್ಲಾ. ಇನ್ನು ಆತನ ಸಾರಥ್ಯದಲ್ಲಿ ಕಾಂಗ್ರೇಸ್ ಪಕ್ಷ ಪದೇ ಪದೇ ಚುನಾವಣೆಯಲ್ಲಿ ಸೋಲುತ್ತಿರುವ ಕಾರಣ, ಆತ ದೇಶವನ್ನು ಮನ್ನಡೆಸುವ ನಾಯಕನಂತೂ ಅಲ್ಲವೇ ಅಲ್ಲ. ಪ್ರಧಾನಿ ಅಗಬೇಕೆಂದು ಬಯಸುವವನು ಸ್ವಕ್ಷೇತ್ರ ಬಿಟ್ಟು ಪದೇ ಪದೇ ಕ್ಷೇತ್ರವನ್ನು ಬದಲಿಸುತ್ತಾ, ತನ್ನ ಬುಡವೇ ಅಭದ್ರತೆ ಇದೆ ಎಂದು ತೋರಿಸುವ ದೇಶವನ್ನು ಹೇಗೆ ಸುಭಧ್ರವಾಗಿ ಕಾಪಾಡಬಲ್ಲ? ಹೀಗಾಗಿ ರಾಹುಲ್ ಗಾಂಧಿ ಬಿಡಿ ಆತನ ಕುಟುಂಬದ ಯಾವುದೇ ಸದಸ್ಯರೂ ಸಹಾ ಇನ್ನು ಮುಂದೆ ನಮ್ಮ ಭಾರತ ದೇಶದ ಪ್ರಧಾನಿಯಾಗುವುದು ನಮ್ಮ ಜನ್ಮ ಸಿದ್ಧ ಹಕ್ಕು ಎನ್ನುವುದನ್ನು ಹೇಳುವುದು ಬಿಡಿ ಊಹಿಸಲೂ ಸಾಧ್ಯವಿಲ್ಲಾ ಅಲ್ವೇ?
ಏನಂತೀರೀ?
ಸೃಷ್ಟಿಕರ್ತ ಉಮಾಸುತ