ಆತುರಗಾರನಿಗೆ ಬುದ್ಧಿ ಮಟ್ಟ!

ಕಳೆದ ರಾತ್ರಿ ಒಲಿಂಪಿಕ್ಸ್ ಇತಿಹಾಸದಲ್ಲೇ ಫೈನಲ್‌ ಪ್ರವೇಶಿಸಿದ ಮೊದಲ ಭಾರತದ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಮಹಿಳಾ ಕುಸ್ತಿಪಟು ವಿನೇಶ್ ಪೋಗಟ್ ಪಾತ್ರರಾಳಾಗುತ್ತಿದ್ದಂತೆಯೇ, ಆಷ್ಟು ತಡರಾತ್ರಿಯಲ್ಲೂ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಆಕೆಯ ಪಂದ್ಯವನ್ನು ನೋಡಿ ಸಂಭ್ರಮಿಸಿದ ಕೊಟ್ಯಾಂತರ ದೇಶಾಭಿಮಾನಿ ಭಾರತೀಯರಲ್ಲಿ ನಾನು ಸಹಾ ಒಬ್ಬ. ಅಬ್ಬಾ ಈ ಬಾರಿಯ ಓಲಂಪಿತ್ಸಿನಲ್ಲಿ ಭಾರತದ ಮಾನವನ್ನು ಕಾಪಾಡಿದ ಹೆಣ್ಮಕ್ಳೇ ಸ್ಟ್ರಾಂಗ್ ಗುರು ಎಂಬ ಶೀರ್ಷಿಕೆಯಲ್ಲಿ ಲೇಖನವನ್ನೂ ಸಿದ್ದಮಾಡಿ ಆಕೆ ಚಿನ್ನದ ಪದಕವನ್ನು ಗೆದ್ದ ನಂತರ ಪ್ರಕಟಿಸೋಣ ಎಂದು ಸುಮ್ಮನಾಗಿದ್ದೆ.

kishoreಕೇವಲ 99 ಸ್ಥಾನಗಳನ್ನು ಗಳಿಸಿದ ವ್ಯಕ್ತಿಯೊಬ್ಬ ಇಡೀ ದೇಶವನ್ನೇ ಗೆದ್ದಂತೆ ಸಂಭ್ರಮಿಸುತ್ತಿದ್ದಾನೋ ಅದೇ ಮನಸ್ಥಿತಿಯ, ಸದಾ ಕಾಲವೂ ದೇಶ ವಿರೋಧಿ ಭಾವನೆಯ ಎಡಚರನ್ನು ಸಮರ್ಥಿಸುತ್ತಾ,ದೇಶವನ್ನೇ ಖಂಡಿಸುವ ಬಹುಭಾಷಾ ನಟ ಕಿಶೋರ್‌ , ಸಾಮಾಜಿಕ ಜಾಲತಾಣದಲ್ಲಿ, ಪ್ರಧಾನಿ ಮೋದಿಯವರಿಗೆ ನೇರವಾಗಿ ಟಾಂಗ್‌ ಎನ್ನುವಂತೆ ವಿನೀಶ್‌ ಪೋಗಟ್ ಅವರಿಗೆ ಲೈಂಗಿಕ ಕಿರುಕುಳ ಕೊಟ್ಟವರ ಜೊತೆ ನಿಂತಂತಹ ನಿಮ್ಮಂತಹವರಿಗೆ ಅವರ ಗೆಲುವನ್ನು ಸಂಭ್ರಮಿಸುವ ಅಥವಾ ಹೆಮ್ಮೆ ಪಡುವ ನೈತಿಕ ಹಕ್ಕನ್ನು ನಿಮಗಿಲ್ಲ ಎನ್ನುವ ಸಂದೇಶ ಹಾಕುವ ಮೂಲಕ ದ್ವೇಷದ ಭಾವನೆಯನ್ನು ಬಿತ್ತಿರುವುದು ನೋಡಿ ಛೇ!! ಇಂತಹ ಕೀಳು ಮನಸ್ಥಿತಿಯವರಿಂದಲೇ ಈ ದೇಶ ಇನ್ನೂ ಉದ್ದಾರ ಆಗಿಲ್ಲಾ ಎಂದು ಅನಿಸಿಕೊಳ್ಳುತ್ತಿರುವಾಗಲೇ,

Screenshot 2024-08-07 at 12.50.57 PMಯಾವ ಪೋಗಟ್ ಸಾಧನೆಯನ್ನು ಬಣ್ಣಿಸಲು ಪ್ರಧಾನಿಗಳನ್ನೇ ಎದಿರು ಹಾಕಿಕೊಂಡು “ಇತಿಹಾಸವನ್ನು ಮರೆತವರಿಂದ ಇತಿಹಾಸ ಸೃಷ್ಟಿ ಸಾಧ್ಯವಿಲ್ಲ. – ಡಾ. ಬಿ.ಆರ್. ಅಂಬೇಡ್ಕರ್. ವಿನೇಶ್ ನಿಮಗೆ ಸಲಾಂ. ಇಲ್ಲಿಯ ಅಮಾನವೀಯ ವ್ಯವಸ್ಥೆ ನಿಮ್ಮನ್ನು ದೆಹಲಿಯ ಬೀದಿಗಳಲ್ಲಿ ಎಳೆದಾಡಿದ್ದರಿಂದ ಹಿಡಿದು ಒಲಿಂಪಿಕ್ ಪದಕದವರೆಗೆ, ಅಷ್ಟು ಕಹಿ ಅನುಭವಗಳ ನಂತರವೂ ನೀವು ಮಾಡಿರುವ ಈ ಸಾಧನೆ ಅಭೂತಪೂರ್ವ. ಆದರೆ ಇಂದು ಸಂಭ್ರಮಿಸುವ ಅಥವಾ ಹೆಮ್ಮೆ ಪಡುವ ನೈತಿಕ ಹಕ್ಕನ್ನು ನಾವು ಭಾರತೀಯರು ಕಳೆದುಕೊಂಡಿದ್ದೇವೆ. ನಾವು ನಿಮ್ಮೊಂದಿಗೆ ನಿಲ್ಲುವ ಅಗತ್ಯವಿದ್ದಾಗ ನಿಮ್ಮನ್ನು ಸೋಲಿಸಿ ನಿಮಗೆ ಲೈಂಗಿಕ ಕಿರುಕುಳ ಕೊಟ್ಟವರ ಜೊತೆ ನಿಂತಿದ್ದೆವು. ಧಿಕ್ಕಾರವಿರಲಿ ಮೋದಿ, ಬ್ರಿಜ್‌ಭೂಷಣ್, ** ನೆಕ್ಕುವ ಗೋದೀ ಮಾಧ್ಯಮಕ್ಕೆ ಮತ್ತು ಆ ವಿಕೃತ ಮನಸ್ಥಿತಿಯ ಸಮಾಜಕ್ಕೆ” ಎಂದಿದ್ದ ಕಿಶೋರ್, ಈಗ ಅದೇ ವಿನೀಶ್ ಪೋಗೋಟ್ ಮಾಡಿದ ಸಣ್ಣ ತಪ್ಪಿನಿಂದಾಗಿ ಆಕೆ ಒಲಂಪಿಕ್ಸ್ ಸ್ಪರ್ಧೆಯಿಂದಲೇ ಅನರ್ಹಗೊಂಡಿರುವ ಆಘಾತಕಾರಿ ವಿಷಯ ಹೊರಬಿದಿದ್ದುದ್ದು ಇ ಆತುರಗಾರನಿಗೆ ಬುದ್ಧಿ ಮಟ್ಟ ಎನ್ನುವಂತಾಗಿದ್ದು ಈಗ ಕಿಶೋರ್ ನಂತಹ ಎಡಬಿಡಂಗಿ ದೇಶವಿರೋಧಿಗಳು ಇಂಗು ತಿಂದ ಮಂಗನಂತಾಗಿದ್ದಾರೆ..

priyankajantar_manthar

ಕುಸ್ತಿ ಫೆಡರೇಷನ್‌ನ ಮಾಜೀ ಅಧ್ಯಕ್ಷ ಬ್ರಿಜ್‌ ಭೂಷಣ ಸಿಂಗ್‌ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪಿಸಿ ಆತನ ವಿರುದ್ಧ ತೊಡೆ ತಟ್ಟಿದ್ದ ಮಹಿಳಾ ಕುಸ್ತಿಪಟುಗಳಲ್ಲಿ ವಿನೀತ್ ಪೋಗಟ್ ಸಹಾ ಒಬ್ಬಳಾಗಿದ್ದು. ದೆಹಲಿಯ ಜಂತರ್‌ ಮಂತರ್‌ನಲ್ಲಿ ಬಜರಂಗ ಪುನಿಯಾ, ಸಾ‍ಕ್ಷಿ ಮಲಿಕ್ ಸೇರಿ ಹಲವು ಕುಸ್ತಿ ಪಟುಗಳ ಸಮ್ಮುಖದಲ್ಲಿ ಉಗ್ರ ಹೋರಾಟವನ್ನು ಮಾಡಿ, ಬ್ರಿಜ್‌ ಭೂಷಣ್‌ ಸಿಂಗ್‌ ಅವರನ್ನು ಅಧಿಕಾರದಿಂದ ವಜಾ ಮಾಡಬೇಕೆಂದು ಒತ್ತಾಯಿಸಿದ್ದಾಗಲೂ ಕೇಂದ್ರ ಸರ್ಕಾರ ಮಾತ್ರ ಈ ಪ್ರತಿಭಟನೆ ಕಡೆ ತಿರುಗಿಯೋ ನೋಡದೆ, ಬ್ರಿಜ್ ಭೂಷಣ್ ಪರವಾಗಿಯೂ ನಿಲ್ಲದೇ ತಟಸ್ಥವಾಗಿ, ನ್ಯಾಯಾಲಯದ ಆದೇಶದಂತೆ ನಡೆದುಕೊಂಡಿತ್ತು.

WhatsApp Image 2024-08-07 at 15.55.11

ಇಷ್ಟೆಲ್ಲಾ ಅಪಸವ್ಯಗಳ ನಡುವೆಯೂ ಆಕೆ ಪ್ಯಾರೀಸ್ ಓಲಂಪಿಕ್ಸ್ ಅರ್ಹತೆಯನ್ನು ಪಡೆದು ನೆನ್ನೆ ಒಂದೇ ದಿನ ಮೂರು ಸ್ಪರ್ಧೆಗಳಲ್ಲಿ ಪಾಲ್ಗೊಂಡು ಖ್ಯಾತ ನಾಮರನ್ನು ಮಣ್ಣು ಮುಕ್ಕಿಸಿ ಕೊನೆಗೂ ಭಾರತದ ಪರವಾಗಿ ಚಿನ್ನ ಇಲ್ಲವೇ ಬೆಳ್ಳಿ ಪದಕವನ್ನು ಪದಕದ ಆಸೆಯನ್ನು ಜೀವಂತವಾಗಿಸಿದ್ದರು. ಒಲಿಂಪಿಕ್ಸ್‌ ಇತಿಹಾಸದಲ್ಲಿ ಫೈನಲ್‌ ತಲುಪಿದ ಪ್ರಥಮ ಭಾರತೀಯ ಮಹಿಳಾ ಕುಸ್ತಿ ಪಟು ಎಂಬ ಸಾಧನೆಗೆ ಪಾತ್ರರಾಗಿ ಎಲ್ಲರೂ ಆಕೆ ಚಿನ್ನದ ಪದಕವನ್ನು ಗೆಲ್ಲಲಿ ಎಂದು ಪ್ರಾರ್ಥಿಸುತ್ತಿರುವಾಗಲೇ, ಸಕಲ ಭಾರತೀಯರಿಗೂ ಹೃದಯವಿದ್ರಾವಕ ಸಂಗತಿ ಎನ್ನುವಂತೆ ವಿನೇಶ್ ಫೋಗಟ್ ಮಹಿಳೆಯರ 50 ಕೆಜಿ ವಿಭಾಗದಲ್ಲಿ 100 ಗ್ರಾಂ ಅಧಿಕ ತೂಕ ಹೊಂದಿದ್ದಕ್ಕಾಗಿ ಇಂದು ಬೆಳಿಗ್ಗೆ ಪ್ಯಾರಿಸ್ 2024 ರ ಒಲಿಂಪಿಕ್ಸ್ ಕುಸ್ತಿ ಸ್ಪರ್ಧೆಯಿಂದ ಅನರ್ಹರಾಗುವ ಮೂಲಕ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿರುವುದು ನಿಜಕ್ಕೂ ವಿಷಾಧನೀಯವಾಗಿದೆ.

ಪ್ಯಾರಿಸ್ 2024 ರಲ್ಲಿ, ಇಡೀ ಸ್ಪರ್ಧೆಯನ್ನು ಎರಡು ದಿನಗಳಲ್ಲಿ ನಡೆಸುವಂತೆ ಆಯೋಜಿಸಲಾಗಿದ್ದು. ಎಲ್ಲಾ ಸ್ಪರ್ಧಾರ್ಥಿಗಳ ವೈದ್ಯಕೀಯ ನಿಯಂತ್ರಣ ಮತ್ತು ತೂಕವನ್ನು ಮೊದಲ ಸ್ಪರ್ಧೆಯ ದಿನದ ಬೆಳಿಗ್ಗೆ ಮತ್ತು ಫೈನಲ್‌ಗೆ ಅರ್ಹತೆ ಪಡೆದ ಕುಸ್ತಿಪಟುಗಳ ತೂಕವನ್ನು ಮತ್ತೊಮ್ಮೆ ಎರಡನೇ ಮಾಡಲಾಗುತ್ತಗೆ. ಹೀಗೆ ಫೈನಲ್ ಪಂದ್ಯದ ಬೆಳಿಗ್ಗೆ ತೂಕ ಮಾಡುವಾಗ 50 ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದ ವಿನೇಶ್ ಫೋಗಟ್ ಅವರ ತೂಕ ಸುಮಾರು 100 ಗ್ರಾಂ ಹೆಚ್ಚಾಗಿರುವ ಕಾರಣ, ಆಕೆ ಫೈನಲ್ನಿಂದ ಅನರ್ಹಗೊಳಿಸಿದ ಸುದ್ದಿಯನ್ನು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (ಐಒಎ) ವಿಷಾದದಿಂದ ಅಧಿಕೃತವಾಗಿ ಹಂಚಿಕೊಂಡಿದೆ. ಕುಸ್ತಿ ನಿಯಮಗಳ ಪ್ರಕಾರ, ಕುಸ್ತಿಪಟು ಸ್ಪರ್ಧೆಯ ಎರಡೂ ದಿನದಂದು (ಪೂರ್ವಭಾವಿ, ಮತ್ತು ರಿಪೆಚೇಜ್ ಮತ್ತು ಅಂತಿಮ ಸುತ್ತುಗಳು) ತೂಕದಲ್ಲಿ ವಿಫಲವಾದರೆ, ಅವರು ಸ್ಪರ್ಧೆಯಿಂದ ಹೊರಹಾಕಲ್ಪಡುತ್ತಾರೆ.

ಮೂರು ಬಾರಿಯ ಕಾಮನ್‌ವೆಲ್ತ್ ಕ್ರೀಡಾಕೂಟದ ಚಾಂಪಿಯನ್ ವಿನೇಶ್ ಆರಂಭಿಕ ಸುತ್ತಿನಲ್ಲಿ ಅಗ್ರ ಶ್ರೇಯಾಂಕದ ಮತ್ತು ಹಾಲಿ ಒಲಿಂಪಿಕ್ ಚಾಂಪಿಯನ್ ಜಪಾನ್‌ನ ಯುಯಿ ಸುಸಾಕಿ ಅವರನ್ನು ಸೋಲಿಸಿದರು. ಕ್ವಾರ್ಟರ್-ಫೈನಲ್‌ನಲ್ಲಿ, ಅವರು ಸೆಮಿಸ್‌ನಲ್ಲಿ ಹಾಲಿ ಪ್ಯಾನ್ ಅಮೇರಿಕನ್ ಗೇಮ್ಸ್ ಚಾಂಪಿಯನ್ ಕ್ಯೂಬಾದ ಯುಸ್ನೆಲಿಸ್ ಗುಜ್‌ಮನ್‌ರನ್ನು ಬೆಸ್ಟ್ ಮಾಡುವ ಮೊದಲು ಮಾಜಿ ಯುರೋಪಿಯನ್ ಚಾಂಪಿಯನ್ ಉಕ್ರೇನ್‌ನ ಒಕ್ಸಾನಾ ಲಿವಾಚ್ ಅವರನ್ನು ಸೋಲಿಸುವ ಮೂಲಕ ಶ್ರೇಯಾಂಕ ರಹಿತರಾಗಿದ್ದ ವಿನೇಶ್ ಬುಧವಾರ ನಡೆದ ಮೂರು ಸತತ ಪಂದ್ಯಗಳಲ್ಲಿ ಗೆದ್ದು ಫೈನಲ್‌ಗೆ ಅರ್ಹತೆ ಪಡೆದು ಫೈನಲ್‌ನಲ್ಲಿ ಆರನೇ ಶ್ರೇಯಾಂಕದ ಯುಎಸ್‌ಎಯ ಸಾರಾ ಹಿಲ್ಡೆಬ್ರಾಂಡ್‌ರನ್ನು ಎದುರಿಸಲಿದ್ದರು.

ಅನುಭವಿ ಕುಸ್ತಿಪಟು ವಿನೇಶ್ ಫೋಗಟ್ ಹೀಗೆ ಅಧಿಕ ತೂಕದಿಂದ ಸ್ಪರ್ಧೆಯಿಂದ ಅನರ್ಹರಾಗಿದ್ದು ಇದೇ ಮೊದಲಲ್ಲ. ಸಾಮಾನ್ಯವಾಗಿ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸುವ ಫೋಗಟ್ 2020ರ ಒಲಿಂಪಿಕ್ ಅರ್ಹತಾ ಪಂದ್ಯಗಳಲ್ಲಿಯೂ ಇದೇ ತೂಕದ ಕಾರಣಕ್ಕಾಗಿ ಹಿನ್ನಡೆ ಅನುಭವಿಸಿದ್ದರು. ನಂತರದ ದಿನಗಳಲ್ಲಿ ತಮ್ಮ ತೂಕವನ್ನು ಕಡಿಮೆ ಮಾಡಿಕೊಂಡ ವಿನೇಶ್ 50 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿ ಮತ್ತೇ ಅದೇ ರೀತಿ ಅರ್ನಹಗೊಂಡಿರುವುದು ನಿಜಕ್ಕೂ ಅಕ್ಷಮ್ಯ ಅಪರಾಧವಾಗಿದೆ.

ತಡವಾಗಿ ತಿಳಿದು ಬಂದ ವಿಷಯವೆಂದರೆ, ಸತತ ಕುಸ್ತಿ ಪಂದ್ಯ ನಡೆಯುವ ಮುನ್ನಾ 50 ಕೆಜಿ ತೂಕವಿದ್ದ ವಿನೇಶ್, ತಡರಾತ್ರಿಯ ಎಲ್ಲಾ ಪಂದ್ಯಗಳೂ ಮುಗಿದು ಫೈನಲ್ ತಲುಪಿದಾಗ ಅವರ ತೂಕ 52 ಕೆಜಿ ಆಗಿದ್ದನ್ನು ಗಮನಿಸಿ ಹೆಚ್ಚಾದ ತೂಕವನ್ನು ಇಳಿಸುವ ಸಲುವಾಗಿ ಏನನ್ನೂ ತಿನ್ನದೇ, ಇಡೀ ರಾತ್ರಿ ನಿದ್ದೆಯನ್ನೂ ಮಾಡದೆ, ಸ್ಕಿಪ್ಪಿಂಗ್, ಸೈಕ್ಲಿಂಗ್ ಮುಂತಾದ ಕಸರತ್ತುಗಳನ್ನು ಮಾಡಿಯೂ ಅವರ ತೂಕ ಅಗತ್ಯಕ್ಕಿಂತ ಹೆಚ್ಚಾಗಿದ್ದರಿಂದ ತಲೆಕೂದಲನ್ನು ಕತ್ತರಿಸಿಕೊಂಡ ನಂತರವೂ ತೂಕ 150 ಗ್ರಾಂ ಅಧಿಕವಿತ್ತು. ಅಧಿಕ ತೂಕವನ್ನು ಕಡಿಮೆ ಮಾಡಿಕೊಳ್ಳಲು ಒಲಂಪಿಕ್ಸ್ ಅಧಿಕಾರಿಗಳು ಮೊದಲು 30 ನಿಮಿಷ ಅವಕಾಶ ನೀಡಿ ನಂತರ ಮತ್ತೆ 15 ನಿಮಿಷಗ ಸಮಯ ನೀಡಿದ ಬಳಿಕವೂ 100-150 ತೂಕ ಹೆಚ್ಚಿತ್ತು. ವೈದ್ಯರು ಇದಕ್ಕಿಂತ ಹೆಚ್ಚು ಏನು ಮಾಡಲು ಸಾಧ್ಯವಿಲ್ಲ. ಏನಾದರೂ ಮಾಡಿದರೆ ಜೀವಕ್ಕೆ ಅಪಾಯ ಎಂದು ಹೇಳಿದ್ದ ಪರಿಣಾಮ ವಿಧಿ ಇಲ್ಲದೇ ಆಕೆಯನ್ನು ಪಂದ್ಯಾವಳಿಯಿಂದ ಅನರ್ಹಗೊಳಿಸಲಾಗಿದೆ 

fb_img_17230390430248500491209206634122ವಿನೇಶ್ ಫೋಗಟ್ ನೆನ್ನೆ ರಾತ್ರಿ ಫೈನಲ್ ತಲುಪಿದ ಕೂಡಲೇ, ಇದ್ದಕ್ಕಿದ್ದಂತೆಯೇ ಜಾಗೃತಗೊಂಡ ಕಿಶೋರ್ ಅಷ್ಟೇ ಅಲ್ಲದೇ, ದೇಶವಿರೋಧಿ ಮನಸ್ಥಿತಿಯ ವ್ಯಕ್ತಿಗಳು ಮತ್ತು‌ ರಾಜ್ಯ ಕಾಂಗ್ರೆಸ್ ಸಹಾ ಸಾಮಾಜಿಕ ಜಾಲ ತಾಣಗಳಲ್ಲಿ ಪೋಗೋಟ್ ಪದಕ ಗೆಲ್ಲುತ್ತಿದ್ದಂತೆಯೇ ಮೋದಿಯವರೇ ಆಕೆಗೆ ಮೊದಲು ಕರೆ ಮಾಡಿ ಅದರ ಎಲ್ಲಾ ಶ್ರೇಯಗಳನ್ನೂ ಪಡೆದುಕೊಳ್ಳುತ್ತಾರೆ. ಲಜ್ಜೆಗೆಟ್ಟ ಪ್ರಧಾನಿ ಹಾಗೇ ಹೀಗೆ ಎಂದು ಪುಂಖಾನು ಪುಂಖವಾಗಿ ಪುಟಗಟ್ಟಲೆ ಬರೆದಂತಹ ವ್ಯಕ್ತಿಗಳು ಈಗ ಏನು ಹೇಳುತ್ತಾರೆ?ನೂರಾರು ಕುಸ್ತಿ ಪಂದ್ಯಾವಳಿಗಳಲ್ಲಿ ಭಾಗವಹಿಸಿರುವ ಅನುಭವ ಹೊಂದಿರುವಂತಹ ಮತ್ತು ಕೋಟ್ಯಾಂತರ ರೂಪಾಯಿ ಭಾರತೀಯರ ತೆರಿಗೆ ಹಣದಿಂದ ಒಲಂಪಿಕ್ಸ್ ನಂತಹ ಪ್ರತಿಷ್ಠಿತ ಪಂದ್ಯಾವಳಿಗಳಲ್ಲಿ ಭಾಗವಹಿಸಿ, ಸತತ ಮೂರು ಪಂದ್ಯಗಳನ್ನು ಗೆದ್ದು ಫೈನಲ್ ಪ್ರವೇಶಿಸಿ ಇನ್ನೇನು ದೇಶಕ್ಕೆ ಚಿನ್ನ ಇಲ್ಲವೇ ಬೆಳ್ಳಿ ಪದಕ ನಿಶ್ಚಿತ ಎಂದು ಇಡೀ ದೇಶವೇ ಸಂಭ್ರಮಿಸುತ್ತಿರುವಂತಹ ಸಂಧರ್ಭದಲ್ಲಿ ವಿನೇಶ್ ಪೋಗಟ್ ಮತ್ತು ಆಕೆಯ ತರಭೇತುದಾರ ಅತಿಯಾದ ಆತ್ಮವಿಶ್ವಾಸದಿಂದಲೋ ಅಥವಾ ತಾತ್ಸಾರ ಮನೋಭಾವದಿಂದಲೂ ಆಕೆಯ ಆಹಾರದ ಬಗ್ಗೆ ಎಚ್ಚರಿಗೆ ವಹಿಸದೇ ಇಂತಹ ಕ್ಷುಲ್ಲಕ ಕಾರಣದಿಂದ ಅನರ್ಹಗೊಂಡಿರುವುದು ನಿಜಕ್ಕೂ ಬೇಸರದ ಸಂಗತಿಯಗಿದೆ.

ಇನ್ನು ವಿನೇಶ್ ಪೋಗಟ್ ಪದಕದ ಹೊಸ್ತಿಲಲ್ಲಿ ಇದ್ದಾಳೆ ಎಂದಾಕ್ಷಣ ಮಳೆಗಾಲದಲ್ಲಿ ಹುಟ್ಟಿಕೊಳ್ಳುವ ನಾಯಿ ಕೊಡೆಗಳಂತೆ ಪೊಗೊಟ್ ಬಗ್ಗೆ ಉದ್ದುದ್ದ ಪೋಸ್ಟ್ ಹಾಕುತ್ತಾ ದೇಶಾದ್ಯಂತೆ ದ್ವೇಷವನ್ನು ಬಿತ್ತುತ್ತಿರುವ ವಿಕೃತ ಮನಸ್ಸುಗಳು ಅದೇ ಒಂದು ವಾರದ ಹಿಂದೆ ಮನು ಭಾಕರ್ ಶೂಟಿಂಗ್ ನಲ್ಲಿ ಎರಡು ಪದಕವನ್ನು ಗೆದ್ದು ಮೂರನೆಯದ್ದನ್ನು ಕೂದಲೆಳೆಯಲ್ಲಿ ತಪ್ಪಿಸಿಕೊಂಡು ಒಂದೇ ಒಲಂಪಿಕ್ಸಿನಲ್ಲಿ ಎರಡು ಪದಕಗಳನ್ನು ಗೆದ್ದ ಸಾಧನೆಯನ್ನು ಮಾಡಿದಾಗ, ಅಕೆಯನ್ನು ಅಭಿನಂಧಿಸದೇ ಇದ್ದದ್ದನ್ನೂ ಸಹಾ ಭಾರತೀಯರು ಗಮನಿಸಿದ್ದಾರೆ,

ಸತತವಾಗಿ ಸರ್ಕಾರವನ್ನು ವಿರೋಧಿಸಿದ್ದಲ್ಲದೇ ಲಜ್ಜೆಯಿಲ್ಲದೇ ಬಹಿರಂಗವಾಗಿ ಕಾಂಗ್ರೇಸ್ ಪಕ್ಷದ ನೆರವನ್ನು ಪಡೆಯುವ ಮೂಲಕ ಕ್ರೀಡೆಯಲ್ಲೂ ರಾಜಕೀಯದ ವಿಷವನ್ನು ಬಿತ್ತಿದ್ದರೂ ಮೋದಿಯವರ ಸರ್ಕಾರ ಆಕೆಯನ್ನು ಒಲಿಂಪಿಕ್ಸ್‌ಗೆ ಕಳುಹಿಸಲಾಯಿತು ಮತ್ತು ಆಕೆಯ ಗೆಲುವನ್ನು ತಡರಾತ್ರಿಯಲ್ಲಿಯೂ ಸಂಭ್ರಮಿಸಿ ರಾಷ್ಟ್ರೀಯವಾದಿಗಳಾದರೇ, ಆಕೆ ಪದಕ ಗೆಲ್ಲುವ ಮೊದಲೇ ಅಟ್ಟಹಾಸದಿಂದ ದೇಶವಿರೋಧಿ ಮನೋಭಾವನೆಯನ್ನು ಹೊರ ಹಾಕುವ ಮೂಲಕ ಅವರೆಲ್ಲರೂ ದೇಶವಿರೋಧಿಗಳು ಎಂಬುದನ್ನು ಸಾಭೀತು ಮಾಡಿಕೊಂಡಿದ್ದಾರೆ ಎಂದರೂ ತಪ್ಪಾಗದು.

ಅಕಸ್ಮಾತ್ ಅದೇ ಕುಸ್ತಿಪಟುಗಳು ಅದೇ ರೀತಿಯಾಗಿ ಜಂತರ್ ಮಂತರ್‌ನಲ್ಲಿ ಕಾಂಗ್ರೆಸ್ ಸರ್ಕಾರ ಮತ್ತು ಗಾಂಧಿ ಕುಟುಂಬದವರೊಬ್ಬರ ವಿರುದ್ಧ ಈ ರೀತಿಯಾಗಿ ಪ್ರತಿಭಟನೆ ನಡೆಸುತ್ತಿದ್ದರೆ, ಅವರ ವೃತ್ತಿಜೀವನದ ಭವಿಷ್ಯ ಏನಾಗುತ್ತಿತ್ತು? ಅಂತಹ ವ್ಯಕ್ತಿಗಳು ಮತ್ತೊಮ್ಮೆ ಒಲಂಪಿಕ್ಸ್ ಬಿಡಿ ದೇಸೀ ಪಂದ್ಯಾವಳಿಗಳಲ್ಲಿಯೂ ಭಾಗವಹಿಸಲೂ ಆಗುತ್ತಿರಲಿಲ್ಲ ಎನ್ನುವುದಂತೂ ಸುಳ್ಳಲ್ಲ. ವಿನೇಶ್ ಪೋಗಟ್ ಅನರ್ಹಳಾಗದೇ, ಇಂದು ಯಾವುದೇ ಪದಕವನ್ನು ಗೆದ್ದಿದ್ದ ಪಕ್ಷದಲ್ಲಿ ಆಕೆಯ ಗೆಲುವು ಸಕಲ 140 ಕೋಟಿ ಭಾರತೀಯರ ಗೆಲುವು ಎಂದು ಇಡೀ ದೇಶ ಸಂಭ್ರಮಿಸುತ್ತಿತ್ತೇ ಹೊರತು ಕಾಂಗ್ರೇಸ್ ಪಕ್ಷದ ಸಮರ್ಥಕಿ ಗೆದ್ದ ಪದಕ ಎಂದು ಖಂಡಿತವಾಗಿಯೂ ಮೂದಲಿಸುತ್ತಿರಲಿಲ್ಲ.

Modi_Xಪಟ್ಟಬದ್ಧ ಹಿತಾಸಕ್ತಿಯ ಕಾಂಗ್ರೇಸ್ ಮತ್ತು ಕಮ್ಯೂನಿಸ್ಟ್ ಸಮರ್ಥಕರು ಪ್ರಧಾನಿಗಳ ವಿರುದ್ಧ ಅಷ್ಟೆಲ್ಲಾ ಆರೋಪ ಮಾಡುತ್ತಿದ್ದರೂ ಅದೆಕ್ಕೆಲ್ಲಾ ಸೊಪ್ಪನ್ನು ಹಾಕದ ಪ್ರಧಾನಿಗಳು ಎಂದಿನಂತೆ ವಿನೇಶ್ ಅವರಿಗೆ ಕರೆ ಮಾಡಿ ನೀವು ಚಾಂಪಿಯನ್‌ಗಳಲ್ಲಿ ಚಾಂಪಿಯನ್ ಎಂದು ಸಮಾಧಾನ ಪಡಿಸಿರುವುದಲ್ಲದೇ, ಅದರ ಕುರಿತಾಗಿ ಎಕ್ಸ್‌ನಲ್ಲಿ ಸಮಾಧಾನಕರ ಹೇಳಿಕೆಯನ್ನೂ ನೀಡಿ ಬೆಂಬಲ ವ್ಯಕ್ತಪಡಿಸುವ ಮೂಲಕ ಸಬ್ಕಾ ಸಾತ್, ಸಬ್ಕಾ ವಿಶ್ವಾಸ್ ತಮ್ಮ ತನವನ್ನು ಎತ್ತಿ ಹಿಡಿದಿರುವುದನ್ನು ಇಡೀ ದೇಶವೇ ಮೆಚ್ಚುತ್ತಿದೆ. ಮೊದಲ ಬಾರಿ ಚಂದ್ರಯಾನ ವಿಫಲವಾದಾಗ ಮತ್ತು ಭಾರತ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಸೋತಾಗಲೂ ಸಹಾ ಪ್ರಧಾನಿಯವರು ಇದೇ ರೀತಿಯಾಗಿ ಇಸ್ರೋ ಮತ್ತು ಭಾರತದ ತಂಡದ ಪರವಾಗಿದ್ದದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

ದೇಶಕ್ಕೇನಾದರೂ ಆಗಲೀ ತಮ್ಮ ಕುಟುಂಬ ಮೊದಲು ಎಂಬ ಮನಸ್ಥಿತಿಯವರಿಗೆ, ದೇಶ ಮೊದಲು ಎಂಬ ಮನಸ್ಥಿತಿಯ ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ ಎಂಬ ಭಾವನೆಯನ್ನು ಹೊಂದಿರುವ ಜನರ ಭಾವನೆಗಳು ಹೇಗೇ ತಾನೆ ಅರ್ಥವಾದೀತು. ವಿನೇಶ್ ಪೋಗಟ್ ಫೈನಲ್ ಪಂದ್ಯದಿಂದ ಅನರ್ಹಳಾದಳು ಎಂಬ ಸಂಗತಿ ನಿಸ್ಸಂದೇಹವಾಗಿ ನಮ್ಮೆಲ್ಲರನ್ನೂ ಕಾಡುತ್ತದಾದರೂ, ಈ ರೀತಿಯ ಅಪಸವ್ಯಗಳಿಂದ ದೇಶವನ್ನು ವಿರೋಧಿಸುವ ಮತ್ತು ದೇಶವನ್ನು ಪ್ರೀತಿಸುವ ಜನರು ಯಾರು ಮತ್ತು ಅವರ ನಡುವಿನ ವ್ಯತ್ಯಾಸ ಏನು ಎಂಬುದು ಜಗಜ್ಜಾಹೀರಾಗಿದ್ದಂತೂ ಸತ್ಯ. ಹೇಗೆ ಕ್ರಿಕೆಟ್ ಆಟದಲ್ಲಿ 99 ಓಟಗಳನ್ನು ಗಳಿಸಿದರೂ ಶತಕ ವಂಚಿತ ಎಂದೇ ಪರಿಗಣಿಸುತ್ತಾರೋ ಹಾಗೆಯೇ ನೆನ್ನೆ ರಾತ್ರಿಯಿಂದ ವಿನೇಶ್ ಪರವಾಗಿ ಹೋಗಳುವ ಭರದಲ್ಲಿ ವಾಚಾಮಗೋಚರವಾಗಿ ದೇಶ ಮತ್ತು ಕೇಂದ್ರ ಸರ್ಕಾರವನ್ನು ತೆಗಳಿದವರು, ನಾವು ಹೇಳಿದ್ದು ಹಾಗಲ್ಲಾ ಹೀಗೆ ಎಂದು ಯಾವುದೇ ರೀತಿಯಲ್ಲಿ ತಿಪ್ಪೇ ಸಾರಿಸಿದರೂ, ಅವರೆಂದೂ ದೇಶಪ್ರೇಮಿಗಳಾಗಲು ಸಾಧ್ಯವಿಲ್ಲಾ! ಅಲ್ವೇ? ನಾಯಿ ಬಾಲಕ್ಕೆ ಎಷ್ಟೇ ದಬ್ಬೆ ಕಟ್ಟಿದರೂ ಅದೂ ಡೊಂಕೇ!

ಏನಂತೀರೀ?
ಸೃಷ್ಟಿಕರ್ತ ಉಮಾಸುತ

2 thoughts on “ಆತುರಗಾರನಿಗೆ ಬುದ್ಧಿ ಮಟ್ಟ!

  1. ದೇಶ ಮರೆತು ಈ ರೀತಿ ನಮ್ಮ ಆಟಗಾರರ ತೇಜೋವಧೆ ಮಾಡೋ ನಿಮ್ಮ ವಿಕೃತ ಮನಸ್ಥಿಗೆ ಈ ಜನ್ಮದಲ್ಲೇ ಬುದ್ಧಿ ಬರಲ್ಲ, ನಾಚಿಕೆ ಆಗಬೇಕು ಅಷ್ಟೇ ನಿಮ್ಮ ಆಲೋಚನೆಗೆ

    Like

    1. ಸ್ವಾಮೀ‌ ಲೇಖನವನ್ನು ಸರಿಯಾದ ದೃಷ್ಟಿಯಿಂದ ಓದಿದ್ದಲ್ಲಿ‌, ಖಂಡಿತವಾಗಿಯೂ ಈ ರೀತಿಯಾಗಿ ಪ್ರತಿಕ್ರಿಯೆ ನೀಡುತ್ತಿರಲಿಲ್ಲ.

      ನಮಗೆ ದೇಶ ಮೊದಲು‌ ಉಳಿದ್ದೆಲ್ಲವೂ ಅನಂತರ. ದೇಶವಿರೋಧಿಗಳ ಕೈ ಜೋಡಿಸಿ ಪ್ರತಿಭಟನೆ ನಡೆಸಿದ್ದನ್ನೂ‌ ಮರೆತು‌ ಕೋಟ್ಯಾಂತರ ರೂಪಾಯಿ ಹಣ ಖರ್ಚು‌ ಮಾಡಿ‌ ಒಲಂಪಿಕ್ಸ್ ‌ಕಳುಹಿಸಿದರೆ, ಒಂದು ಸಣ್ಣ ವಯಕ್ತಿಕ ತಪ್ಪಿನಿಂದ ಪದಕ ಕಳೆದುಕೊಂಡ 140 ಕೋಟಿ‌ ಭಾರತೀಯನೊಬ್ಬನ ಅಳಲು.

      ಇಂತಹ ಸೂಕ್ಷ್ಮತೆಯನ್ನೂ ಅರ್ಥ ಮಾಡಿ ಕೊಳ್ಳದ ನಿಮ್ಮಂತಹವರಿಗೆ ಆ ಭಗವಂತ ಸದ್ಬುದ್ದಿಯನ್ನು ನೀಡಲಿ

      Like

Leave a comment