ಪ್ರತೀ ಬಾರಿ ರಾಹುಲ್ ಗಾಂಧಿ ವಿದೇಶೀ ಪ್ರವಾಸ ಮಾಡಿದಾಗಲೂ, ಒಂದಲ್ಲಾ ಒಂದು ರೀತಿಯ ಬಾಲಿಶ ಹೇಳಿಕೆಗಳ ಮೂಲಕ ಭಾರತದ ಮಾನವನ್ನು ವಿದೇಶೀ ನೆಲದಲ್ಲಿ ಹರಾಜು ಹಾಕುವುದನ್ನು ಕಳೆದ ಸುಮಾರು ವರ್ಷಗಳಂದಲೂ ನೋಡುತ್ತಲೇ ಬಂದಿದ್ದೇವೆ. ರಾಹುಲ್ ಗಾಂಧಿಯವರ ಈ ಹಿಂದಿನ ಬಾರಿನ ಪ್ರವಾಸಗಳಿಗೂ ಈ ಬಾರಿಯ ಪ್ರವಾಸಕ್ಕೂ ಬಹಳ ವೆತ್ಯಾಸವಿದ್ದು, ಈ ಹಿಂದೇ ಒಂದು ಪಕ್ಷದ ಸಾಂಸದರಾಗಿ ಮಾಡುತ್ತಿದ್ದ ಭಾಷಣಗಳು ಅವರ ವಯಕ್ತಿಯ ಆಭಿಪ್ರಾಯ ಎಂದು ತಳ್ಳಿ ಹಾಕಬಹುದಾಗಿತ್ತು. ಆದರೆ ಈ ಬಾರಿ ಅವರು ವಿಶ್ವದ ಅತ್ಯಂದ ದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ಭಾರತ ದೇಶದ ಅಧಿಕೃತ ವಿರೋಧ ಪಕ್ಷದ ನಾಯಕ. ಹಾಗಾಗಿ ಅವರಿಗೆ ಭಾರತದ ಅತಿದೊಡ್ಡ ಸಾಂವಿಧಾನಿಕ ಹುದ್ದೆ ಇದ್ದ ಕಾರಣ ಕಳೆದ ಮೂರು ದಿನಗಳ ಅಮೇರಿಕ ಪ್ರವಾಸದಲ್ಲಿದಲ್ಲಿ ಅತ್ಯಂತ ಜವಾಬ್ಧಾರಿಯುತರಾಗಿ ದೇಶದ ಪರ ಮಾತನಾಡುತ್ತಾರೆ ಎಂಬ ಭವವಸೆ ಎಲ್ಲರ ಭಾರತೀಯರಲ್ಲಿತ್ತು. ಆದರೆ ನಾಯಿಯ ಬಾಲ ಯಾವತ್ತಿದ್ದರೂ ಡೋಂಕೇ ಎನ್ನುವಂತೆ ತಾನೊಬ್ಬ ಪಪ್ಪು ಎಂಬುದನ್ನು ಮತ್ತೊಮ್ಮೆ ಪುನರಾವರ್ತನೆ ಮಾಡಿರುವುದಕ್ಕಾಗಿ ಇಡೀ ದೇಶವೇ ಮತ್ತೊಮ್ಮೆ ತಲೆತಗ್ಗಿಸಬೇಕಾದಂತಹ ಪರಿಸ್ಥಿತಿ ಬಂದೊದಗಿದೆ.
ಹೌದು ನಿಜ ನಮ್ಮ ಸಂವಿಧಾನದಲ್ಲಿ ಅಭಿವ್ಯಕ್ತಿ ಸ್ವಾಂತ್ರಂತ್ಯವಿದೆ ಎಂದ ಮಾತ್ರಕ್ಕೇ ಹೋದ ಬಂದ ಕಡೆಯಲ್ಲೆಲ್ಲಾ, ದೇಶದ ಮಾನ ಹರಾಜು ಹಾಕಲು ನಮ್ಮ ಸಂವಿಧಾನ ಅಧಿಕಾರ ನೀಡಿಲ್ಲ. ಆತನಿಗೆ ಸಂಘ, ಸಂಘ ಪರಿವಾರ ಬಿಜೆಪಿ ಮತ್ತು ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರೊಂದಿಗೆ ಸೈದ್ಧಾಂತಿಕ ವಿರೋಧ ಇದ್ದು ಅದರ ಕುರಿತು ಆತ ಮಾತನಾಡಲು ಯಾವುದೇ ಆಕ್ಷೇಪಣೆ ಇಲ್ಲಾ. ಆದರೆ ತನ್ನ ಸೈಧ್ಧಾಂತಿಕ ವಿರೋಧಕ್ಕಾಗಿ ಪದೇ ಪದೇ ಭಾರತ ದೇಶವೇ ಸರಿಯಿಲ್ಲಾ. ಇಲ್ಲಿ ಚುನಾವಣೆಗಳು ನಿಶ್ಪಕ್ಷಪಾತವಾಗಿ ನಡೆಯೋದಿಲ್ಲ, ನಿರುದ್ಯೋಗ ಸಮಸ್ಯೆ ಇದೆ, ಅಲ್ಪಸಂಖ್ಯಾತರು ಭಯದಿಂದ ಜೀವಿಸಬೇಕಿದೆ, ಇಲ್ಲಿ ಸಂವಿಧಾನಕ್ಕೆ ಬೆಲೆ ಇಲ್ಲಾ, ಸರ್ವಾಧಿಕಾರ ಇದೆ ಎಂದು ತನ್ನ ಅಧಿಕಾರದ ತೆವಲಿಗಾಗಿ ಭಾರತವನ್ನು ಮಟ್ಟ ಹಾಕಲು ಬಯಸುತ್ತಿರುವ ವಿದೇಶೀ ಪಟ್ಟ ಭಧ್ರ ಹಿತಾಸಕ್ತಿಗಳ ನೆಲದ ಮೇಲೇ ಹೇಳಿ ಅವರ ಸಹಕಾರ ಕೋರುವುದರ ಮೂಲಕ ಮತ್ತೊಮ್ಮೆ ದಾಸ್ಯದ ಸಂಕೋಲೆಗೆ ಈಡಾಗಬೇಕೆಂಬ ಕನಿಷ್ಠ ಪ್ರಮಾಣದ ಬುದ್ದಿಯೂ ಇಲ್ಲದೇ ಇರುವುದು ನಿಜಕ್ಕೂ ಆಶ್ವರ್ಯವಾಗುತ್ತದೆ.
ರಾಹುಲ್ ಗಾಂಧಿಯ ಗಾಡ್ ಫಾದರ್ ಅಂಕಲ್ ಸ್ಯಾಮ್ ಅರ್ಥಾತ್ ಸ್ಯಾಮ್ ಪಿತ್ರೋಡ (ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ) ಮೊನ್ನೆಯಷ್ಟೇ ರಾಹುಲ್ ಗಾಂಧಿ ಕುರಿತಾಗಿ ಸುಧೀರ್ಘವಾದ ಮಾತುಗಳನ್ನು ಆಡಿದ್ದು, ಬಿಜೆಪಿಯವರು ಹೇಳುವಂತೆ ರಾಹುಲ್ ಪಪ್ಪೂ ಅಲ್ಲಾ. ಅವರು ಹೆಚ್ಚು ವಿದ್ಯಾವಂತರು, ಚೆನ್ನಾಗಿ ಓದುತ್ತಾರೆ, ಯಾವುದೇ ವಿಷಯದ ಬಗ್ಗೆ ಆಳವಾದ ಚಿಂತನೆಯನ್ನು ಹೊಂದಿರುವ ತಂತ್ರಜ್ಞರು. ಆತ ವಿಭಿನ್ನ ಕಾರ್ಯಸೂಚಿಯನ್ನು ಹೊಂದಿದ್ದು, ತನ್ನ ದೂರದೃಷ್ಟಿತನದಿಂದ ದೀರ್ಘಕಾಲದ ಸಮಸ್ಯೆಗಳನ್ನು ಪರಿಹರಿಸುವಷ್ಟು ಪ್ರಬುದ್ಧನಾಗಿದ್ದಾನೆ. ಎಲ್ಲರಿಗೂ ಆತನನ್ನು ಅರ್ಥಮಾಡಿಕೊಳ್ಳುವುದು ತುಂಬಾ ಸುಲಭವಲ್ಲ. ಪ್ರಸ್ತುತ ಆತ ಚಾಂಪಿಯನ್ ಆಗಿರುವುದು ನನಗೆ ತುಂಬಾ ಸಂತೋಷ ತಂದಿದೆ ಎಂದಿದ್ದಾರೆ.
ಭಾರತ್ ಜೋಡೋ ಸಮಯದಲ್ಲಿ ಆತನ ಜೊತೆಗಿದ್ದ ದೇಶದ್ರೋಹಿಗಳ ಜೊತೆ ನಡೆದುಕೊಂಡ ರೀತಿ, ಲೋಕಸಭಾ ಚುನಾವಣಾ ಸಮಯದಲ್ಲಿ ಮತ್ತು ಅಪರೂಪಕ್ಕೆ 99 ಸ್ಥಾನಗಳನ್ನು ಗಳಿಸಿದ ನಂತರ ಇಡೀ ದೇಶವನ್ನೇ ಗೆದ್ದ ರೀತಿಯಲ್ಲಿ ಸಂಭ್ರಮಿಸಿದ ಪರಿ ಮತ್ತು ವಿರೋಧಪಕ್ಷದ ನಾಯಕನಾಗಿ ಸಂಸತ್ತಿನಲ್ಲಿ ಆತ ಮಾಡಿದ ಚೊಚ್ಚಲ ಭಾಷಣ, ನಂತರದ ದಿನಗಳಲ್ಲಿ ದೇಶಾದ್ಯಂತ ಮಾಡಿದ ಚುನಾವವಣಾ ಭಾಷಣ ಮತ್ತು ಇತ್ತೀಚಿನ ಅಮೇರಿಕಾ ಪ್ರವಾಸದಲ್ಲಿನ ಆತ ನಡೆದುಕೊಂಡ ರೀತಿ, ವಿದೇಶೀ ಪತ್ರಕರ್ತರ ಜೊತೆ ನಡೆಸಿದ ಸಂದರ್ಶನ ಮತ್ತು ಮಾಡಿದ ಭಾಷಣಗಳಲ್ಲಿ ಅಂಕಲ್ ಸ್ಯಾಮ್ ಹೇಳಿದಂತಹ ಪ್ರಬುದ್ಧತೆಯನ್ನು ತೋರಿಸಿದ್ದಲ್ಲಿ ಈ ಲೇಖನ ಬರೆಯುವ ಪ್ರಮೇಯವೇ ಬರುತ್ತಿರಲಿಲ್ಲ.
ಅಮೇರಿಕಾದಲ್ಲಿ ಭಾಷಣ ಮಾಡುತ್ತಿದ್ದ ಸಮಯದಲ್ಲಿ ಅಲ್ಲಿದ್ದ ಸಿಖ್ ಯುವಕನನ್ನು, ಏನು ನಿನ್ನ ಹೆಸರು ಏನು ಎಂದು ಕೇಳಿ, ಆತ ಬಲ್ವೀಂದರ್ ಸಿಂಗ್ ಎಂದು ಹೇಳಿದಕೂಡಲೇ, ಭಾರತದಲ್ಲಿ ಸಿಖ್ಖರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಅವರು ನಿರ್ಭಯವಾಗಿ ಪಗಡಿಯನ್ನು (ಪೇಟ) ಧರಿಸದಂತಹ ವಾತಾವರಣವಿದೆ. ಕೃಪಾಣು (ಸಣ್ಣ ಚೂರಿ) ಇಟ್ಟುಕೊಳ್ಳಲು ಅವಕಾಶ ನೀಡುತ್ತಿಲ್ಲ. ಅವರು ಗುರುದ್ವಾರಕ್ಕೆ ಹೋಗಲು ಕೂಡ ಭಯಪಟ್ಟುಕೊಳ್ಳುತ್ತಿದ್ದಾರೆ ಎನ್ನುತ್ತಾನೆ. ಹೀಗೆ ಆತ ಹೇಳುವ ಸಮಯದಲ್ಲೇ ಬೆಂಗಳೂರಿನಲ್ಲೇ, ಕಲೆಗೆ ಧರ್ಮ, ಜಾತಿ ಮತ್ತು ಭಾಷೆಯ ಹಂಗಿಲ್ಲ ಎಂದು ಕೃಷ್ಣಂ ಪ್ರಣಯ ಸಖಿ ಚಿತ್ರದ ಅತ್ಯಂತ ಜನಪ್ರಿಯ ದ್ವಾಪರ ಹಾಡನ್ನು ಹಾಡಿರುವ ಪಗಡಿ ತೊಟ್ಟ ಪಂಜಾಬಿ ಯುವಕ ಜಸ್ಕರಣ್ ಸಿಂಗ್ ಹತ್ತಾರು ಛಾನಲ್ಲಳಲ್ಲಿ ಮತ್ತು ನೂರಾರು ವೇದಿಗಳಲ್ಲಿ, ಲಕ್ಷಾಂತರ ಜನರ ಮೆಚ್ಚುಗೆ ಗಳಿಸಿದ್ದಾನೆ. ಎಲ್ಲಿಯ ಪಂಜಾಬ್ ಎಲ್ಲಿಯ ಕರ್ನಾಟಕ? ಭಾರತದಲ್ಲಿ ಬಿಡಿ, ಪಂಜಾಬಿನಲ್ಲಾದರೂ ಪಂಜಾಬಿಗಳಿಗೆ ಪಪ್ಪೂ ಹೇಳಿದಂತಹ ಭಯದ ವಾತಾವರಣವಿದೆಯೇ? ಅವರಿಗೆ ನಮ್ಮ ದೇಶದಲ್ಲಿರುವಷ್ಟು ಸ್ವಾತಂತ್ರ್ಯ ಬೇರೆಲ್ಲೂ ಇಲ್ಲ. ಸೇನೆಯಲ್ಲಿಯೂ ಪಗಡಿ ಧರಿಸಿದವರಿಗೆ ವಿನಾಯಿತಿ ಇದೆ. ಇನ್ನು ಅವರಿಗೆ ಹೆಲ್ಮೆಟ್ ನಿಂದಲೂ ವಿನಾಯಿತಿಯಿದ್ದು, ವಿಮಾನ ಪ್ರಯಾಣದ ಸಮಯದಲ್ಲೂ ನಿರ್ಭಯವಾಗಿ ಕೃಪಾಣು ಸಹಿತ ಪ್ರಯಾಣಿಸಬಹುದಾದ ಅವಕಾಶ ಕಲ್ಪಿಸಿರುವುದು ಪಪ್ಪೂಗೆ ತಿಳಿದಿಲ್ಲವೇ? ಪಂಜಾಬಿನಲ್ಲಿ ಬಿಜೆಪಿಗೆ ಒಂದು ಸ್ಥಾನವೂ ಬಾರದಿದ್ದರೂ, ನರೇಂದ್ರ ಮೋದಿಯವರ ಸರ್ಕಾರದಲ್ಲಿ ಇಬ್ಬರು ಪ್ರಭಾವಿ ಖಾತೆಯನ್ನು ಸಿಖ್ ಮಂತ್ರಿಗಳಿರುವುದು ಗಮನಾರ್ಹವಾಗಿದೆ.
ಇಷ್ಟು ದಿನಗಳವರೆಗೆ ಅಲ್ಪಸಂಖ್ಯಾತರು ಎಂದರೆ ಕೇವಲ ಮುಸಲ್ಮಾನರು ಎಂದು ವಾದಿಸುತ್ತಿದ್ದ ಪಪ್ಪೂ ಈಗ ಸಿಖ್ಖರ ಬಗ್ಗೆ ಮಾತನಾಡುವುದರ ಹಿಂದೆ ಇನ್ನೇನು ಕೆಲವೇ ದಿನಗಳಲ್ಲಿ ನಡೆಯಲಿರುವ ಹರ್ಯಾಣದ ಚುನಾವಣೆಯ ಓಲೈಕೆಯ ರಾಜಕಾರಣವಿದೆ. CAA & NRC ಸಮಯದಲ್ಲಿ ದೆಹಲಿಯ ಶಾಹಿನ್ ಭಾಗ್ ನಲ್ಲಿ ನಡೆದ ಸಿಖ್ಖರ ಹೋರಾಟಕ್ಕೆ ಪರೋಕ್ಷವಾಗಿ ಬೆಂಬಲ ನೀಡಿದ ಕೇಜ್ರೀವಾಲ್ ಪಂಜಾಬ್ ಗೆದ್ದ ತಂತ್ರವನ್ನೇ ಈಗ ರಾಹುಲ್ ಮಾಡಲು ಹೊರಟಿದ್ದಾನೆ. ದುರಾದೃಷ್ಟವಷಾತ್ ಬ್ರಿಟಿಷರಂತೆ ಹಿಂದೂ ಮತ್ತು ಸಿಖ್ಖರನ್ನು ಬೇರ್ಪಡಿಸಲು ಹೊರಟಿರುವುದು ಖಲಿಸ್ತಾನಿಗಳನ್ನು ಪ್ರಚೋದಿಸಿ, ಅವರ ದೇಶದ್ರೋಹಿ ಕೃತ್ಯಗಳಿಗೆ ಇನ್ನಷ್ಟು ತುಪ್ಪ ಹಾಕಿದಂತಾಗಿದೆ ಎಂಬದು ಆತನಿಗೆ ಅರಿವಿಲ್ಲದಿರುವುದು ವಿಪರ್ಯಾಸವಾಗಿದೆ. ಇದೇ ರೀತಿ ಪಪ್ಪೂ ಅಜ್ಜಿ ಇಂದಿರಾಗಾಂಧಿ ಬಿಂದ್ರನ್ ವಾಲೆ ಎಂಬುವನನ್ನು ಬೆಳಸಿ ಆತ ತನ್ನ ಕೈಮೀರಿ ಹೋದಾಗ, ಆತನನ್ನು ಮಟ್ಟ ಹಾಕಲು ಮಾಡಿದ ಆಪರೇಷನ್ ಬ್ಲೂ ಸ್ಟಾರ್ ನ ಪ್ರತ್ಯುತ್ತರವಾಗಿಯೇ ಆಕೆ ತನ್ನ ಪ್ರಾಣವನ್ನು ಕಳೆದುಕೊಳ್ಳಬೇಕಾಯಿತು ಎಂಬ ಕಠು ಸತ್ಯವನ್ನು ಪಪ್ಪೂ ಮರೆತಂತಿದೆ. ರಾಹುಲ್ ಗಾಂಧಿಯ ಈ ಭಾಷಣವನ್ನು ಕೆನಡಾದಲ್ಲಿ ಕುಳಿತಿರುವ ಖಲೀಸ್ಥಾನಿ ನಾಯಕ ಪನ್ನೂ ಸ್ವಾಗತಿಸಿದಿದ್ದು ಈ ಹೇಳಿಕೆ ಪ್ರತ್ಯೇಕ ಖಲಿಸ್ತಾನ್ ಸಮರ್ಥಿಸುವಂತಿದೆ ಎಂದಿರುವುದು ಆತಂಕಕಾರಿಯಾಗಿದೆ.
ಕಳೆದ 10 ವರ್ಷಗಳಿಂದ ಭಾರತದಲ್ಲಿ ಹದಗೆಟ್ಟು ಹೋಗಿದ್ದ ಪ್ರಜಾಪ್ರಭುತ್ವ ಈಗ ತನ್ನ ಮೊದಲಿನ ಸ್ಥಿತಿಗೆ ಮರಳಲು ಹೋರಾಟ ನಡೆಸುತ್ತಿದೆ. ಭಾರತದಲ್ಲಿ ಚುನಾವಣಾ ವ್ಯವಸ್ಥೆ ಸರಿಯಿಲ್ಲ. ಚುನಾವಣಾ ಆಯೋಗ ಬಿಜೆಪಿ ಪರವಾಗಿದ್ದ ಕಾರಣದಿಂದಲೇ ಅಕ್ರಮವಾಗಿ ಅವರು 240 ಸ್ಥಾನ ಗೆದ್ದಿದ್ದಾರಾದರೂ, ತಮ್ಮ ಒಕ್ಕೂಟಕ್ಕೆ ಮಾನಸಿಕ ಗೆಲುವು ದೊರೆತಿದ್ದು, ಈ ಮೂಲಕ ಮೋದಿ ಎಂಬ ಗುಮ್ಮವನ್ನು ನಿವಾರಿಸಲಾಗಿದೆ ಎಂದು ಪ್ರತಿಪಾದಿಸಿದ್ದಾನೆ. ತಮ್ಮ ಒಕ್ಕೂಟ ಅಧಿಕಾರಕ್ಕೆ ಬಂದರೆ ಅಂಬಾನಿ, ಅದಾನಿಗಳಿಗೆ ಅವಕಾಶ ನೀಡುವುದಿಲ್ಲ. ಪರಿಶಿಷ್ಟ ಜಾತಿ/ವರ್ಗಗಳಿಗೆ ಸಿಗುತ್ತಿರುವ ರಕ್ಷಣೆಯನ್ನು ನಿಲ್ಲಿಸುತ್ತೇನೆ ಎಂದು ಘೋಷಿಸುವ ಮೂಲಕ ಇನ್ನು ಕೆಲವೇ ವರ್ಷಗಳಲ್ಲಿ ಭಾರತದಿಂದ ಮೀಸಲಾತಿಯನ್ನು ಸಂಪೂರ್ಣವಾಗಿ ತೆಗೆದು ಹಾಕುತ್ತೇನೆ ಎಂದು ಮಾಡಿದ ಭಾಷಣಕ್ಕೆ ಭಾರತದಲ್ಲಿ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಯಥಾ ಪ್ರಕಾರ U-Turn ಹೊಡೆದು, ನನ್ನ ಮಾತನ್ನು ತಿರುಚಲಾಗಿದೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಶೇ50ಕ್ಕೂ ಅಧಿಕ ವೀಸಲಾತಿ ನೀಡಲು ಬದ್ಧವಾಗಿದೆ ಎಂದು ಹೇಳಿರುವುದನ್ನು ಕಂಡ ಸ್ಯಾನ್ ಫ್ರಾನ್ಸಿಸ್ಕೋದ ಪತ್ರಿಕೆಯೊಂದು ಈತ ಬಂದಿರುವುದು ಭಾರತದಿಂದಲೋ, ಪಾಕಿಸ್ತಾನದಿಂದಲೋ ಎಂದು ತಲೆ ಬರೆಹದ ಲೇಖನ ಬರೆದಿದೆ ಎಂದರೆ, ವಿದೇಶಿಗೂ ಆತನ ಮನಸ್ಥಿತಿಯ ಅರ್ಥವಾಗಿದೆ ಎಂದು ತಿಳಿಯುತ್ತದೆ.
ಮಹಾರಾಷ್ಟ್ರದಲ್ಲಿ ನಮ್ಮ ಶಾಸಕರನ್ನು ಖರೀದಿಸಿ, ನಮ್ಮ ಸರ್ಕಾರವನ್ನು ಕಿತ್ತುಕೊಂಡ್ದದ್ದನ್ನು ನನ್ನ ಸ್ವಂತ ಕಣ್ಣುಗಳಿಂದ ನೋಡಿದ್ದೇನೆ. ಹೀಗೆ ಎಲ್ಲಾ ವಿಷಯದಲ್ಲಿ ಭಾರತದಲ್ಲಿ ಪ್ರಜಾಪ್ರಭುತ್ವ ಆಕ್ರಮಣಕ್ಕೆ ಒಳಗಾಗಿದೆ. ಅತ್ಯಂತ ಕೆಟ್ಟದಾಗಿ ದುರ್ಬಲಗೊಂಡಿದೆ. ಈಗ ಅದು ಮತ್ತೆ ಹೋರಾಡುತ್ತಿದ್ದು, ಹಿಂದಿನ ಸ್ಥಿತಿಗೆ ಮರಳುತ್ತದೆ ಎಂಬ ವಿಶ್ವಾಸ ನನಗಿದೆ ಎಂದಷ್ಟೇ ಹೇಳಿದರೆ, ಮಹಾರಾಷ್ಟ್ರದಲ್ಲಿ ಚುನಾವಣಾ ಪೂರ್ವ ಮೈತ್ರಿಯಾಗಿದ್ದ ಬಿಜೆಪಿ ಮತ್ತು ಶಿವಸೇನೆಯನ್ನೇ ಜನರು ಆಯ್ಕೆ ಮಾಡಿದ್ದರು. ತಾವು ಶಿವಸೇನೆಯ ಉದ್ದವ್ ಠಾಕ್ರೆಗೆ ಅಧಿಕಾರದ ಆಸೆ ತೋರಿಸಿ ಬಲವಂತವಾಗಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಟ್ಟೆವು ಎಂಬ ಸತ್ಯವನ್ನು ಅಪ್ಪಿ ತಪ್ಪಿಯೂ ಹೇಳದೇ ಜಾಣ ಮೌನವನ್ನು ಪಪ್ಪು ವಹಿಸಿಸುತ್ತಾನೆ. ನನ್ನ ಮೇಲೆ 20ಕ್ಕೂ ಹೆಚ್ಚು ಪ್ರಕರಣಗಳಿದ್ದು, ಇಡಿ ಇಲಾಖೆ ನನ್ನೊಂದಿಗೆ ಸುದೀರ್ಘವಾದ ತನಿಖೆ ನಡೆಸಿದರೂ ಏನೂ ಮಾಡಲಾಗಲಿಲ್ಲ. ನಮ್ಮ ಒಕ್ಕೂಟದ ಅನೇಕ ಮುಖ್ಯಮಂತ್ರಿ ಮತ್ತು ಮಂತ್ರಿಗಳನ್ನು ಅಕ್ರಮವಾಗಿ ಸೆರೆಮನೆಗೆ ತಳ್ಳಲಾಗಿದೆ ಎಂದು ಹೇಳುವ ಪಪ್ಪೂ, ನ್ಯಾಷಿನಲ್ ಹೆರಾಲ್ಡ್ ಕೇಸಿನಲ್ಲಿ ಅಮ್ಮಾ ಮಗ ಸೇರಿಕೊಂಡು ಕೋಟ್ಯಾಂತರ ಹಣವನ್ನು ದೋಚಲು ಹೊರಟಿದ್ದ ಸಂಗತಿ ಹೇಳುವುದೇ ಇಲ್ಲಾ.
ಇನ್ನು ಕೊನೆಯದಾಗಿ ಭಾರತೀಯರು ಆತನ್ನನ್ನು ಪಪ್ಪು ಎಂದೇಕೆ ಕರೆಯುತ್ತಾರೆ ಎಂಬುದಕ್ಕೆ ಒಂದೊಳ್ಳೇ ಪ್ರಹಸನಕ್ಕೆ ರಾಹುಲ್ ಕಾರಣೀಭೂತರಾದ ಪರಿಸ್ಥಿತಿ ನಿಜಕ್ಕೂ ಶೋಚನೀಯವಾಗಿತ್ತು. ಅಮೇರಿಕಾದ ಜಾರ್ಜ್‌ಟೌನ್ ವಿಶ್ವವಿದ್ಯಾಲಯದಲ್ಲಿ ನಡೆದ ಸಂವಾದದ ಸಂದರ್ಭದಲ್ಲಿ, ಅಲ್ಲಿನ ವಿದ್ಯಾರ್ಥಿಯೊಬ್ಬ ವಿರೋಧ ಪಕ್ಷವನ್ನು INDI ಅಲಯನ್ಸ್ ಎಂದು ಉಲ್ಲೇಖಿಸಿದ ತಕ್ಷಣ, ರಾಹುಲ್ ಅದು INDI ಅಲ್ಲಾ INDIA ಅಲಯನ್ಸ್ ಎಂದು ಸರಿಪಡಿಸಿ 2024 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ಒಗ್ಗೂಡಿದ ವಿರೋಧ ಪಕ್ಷಗಳ ಒಕ್ಕೂಟ. ಭಾರತದ ಮೇಲೆ ಬಿಜೆಪಿಯಿಂದ ಸತತ ದಾಳಿಯಾಗುತ್ತಿದೆ ಎಂದು ಜನರಿಗೆ ತಿಳಿಸುವುದಕ್ಕಾಗಿ INDIA Alliance ಎನ್ನುವುದೇ ಸೂಕ್ತ ಎಂಬ ಅಪ್ರಬುದ್ಧವಾದವನ್ನು ಮಂಡಿಸಿದಾಗ, ಆ ಹುಡುಗ I.N.D.I.A. ಎಂದರೆ Indian National Developmental Inclusive Alliance ಎಂದಾಗುತ್ತದೆ. I.N.D.I.A ಎಂಬ ಪದದ ಕೊನೆಯ ಅಕ್ಷರದ ಬಗ್ಗೆ ನಿಮ್ಮ ನಿಲುವು ಏನು? ಎಂದಾಗ ರಾಹುಲ್ ಅದು Alliance (ಮೈತ್ರಿ) ಯನ್ನು ಸೂಚಿಸುತ್ತದೆ ಎಂದಾಗ, ಆ ಹುಡುಗ INDIA Alliance ಎಂದು ಹೇಳುವುದು ಅನಗತ್ಯವಲ್ಲವೇ? ಎಂದದ್ದಕ್ಕೆ ಅಲ್ಲಿದ್ದ ಇಡೀ ಸಮೂಹವೇ ಗೊಳ್ ಎಂದು ನಕ್ಕಾಗ, ಯಥಾ ಪ್ರಕಾರ ತಬ್ಬಿಬ್ಬಾದ ಪಪ್ಪೂ, ನಂತರ ಸಾವರಿಸಿಕೊಂಡು ದೇಶಾವರಿ ನಗು ಬೀರುತ್ತಾ, ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲಾ ಎಂಬಂತೆ ನಟಿಸಿದರೂ ಅದರಿಂದ ಆದ ಅವಮಾನವನ್ನು ಪಪ್ಪೂ, ಅಂಕಲ್ ಸ್ಯಾಮ್ ಮತ್ತು ಕಾಂಗ್ರೇಸ್ಸಿಗರು ಸಹಿಸಿಕೊಳ್ಳಬಹುದು. ಆದರೆ ಯಾವುದೇ ಸ್ವಾಭಿಮಾನೀ ಮತ್ತು ದೇಶಾಭಿಮಾನಿ ಭಾರತೀಯ ಅದನ್ನು ಎಂದಿಗೂ ಸಹಿಸಿಕೊಳ್ಳಲಾರ.
ತನ್ನ ದೇಶದ ಬಗ್ಗೆ ಸದಾ ನಕಾರಾತ್ಮಕವಾಗಿ ಮಾತನಾಡುವ ರಾಹುಲ್ ಗಾಂಧಿಗೆ ಭಾರತೀಯರು ಏಕೆ ಮತ ಹಾಕುತ್ತಾರೆ? ಎಂದು ಅಮೆರಿಕದ ಶ್ವೇತಭವನದ ಉದ್ಯೋಗಿ ಮೇರಿ ಬಿಲ್ಮನ್ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಪಪ್ಪೂವಿನ ಕುರಿತಾಗಿ ಇಷ್ಟೆಲ್ಲಾ ಅಪಸವ್ಯಗಳನ್ನು ತಿಳಿದ ನಂತರವೂ, ಎಲ್ಲರಿಗೂ ಕಟ್ಟ ಕಡೆಯದಾಗಿ ಕಾಡುವ ಪ್ರಶ್ನೇ, ಬಿಟ್ಟಿ ಭಾಗ್ಯಗಳ ಆಸೆಗಾಗಿ ಭಾರತೀಯ ಮತದಾರ ಇನ್ನೂ ಎಷ್ಟು ದಿನಗಳ ಕಾಲ ಈ ಪಪ್ಪು ಮತ್ತು ಕಾಂಗಿಗಳನ್ನು ಸಹಿಸಿಕೊಳ್ಳಬೇಕು?
ಏನಂತೀರೀ?
ಸೃಷ್ಟಿಕರ್ತ ಉಮಾಸುತ