ಕೋಲಾರದಲ್ಲಿ ಆರ್. ಎಸ್. ಎಸ್. ಸ್ವಯಂಸೇವಕರ ಪಥಸಂಚಲನ

ರಾಷ್ಟ್ರೀಯ ಸ್ವಯಂಸೇವಕ ಸಂಘ ಸರಳವಾಗಿ ಹೇಳಬೇಕೆಂದರೆ RSS, ಬಹುಶಃ ಈ ಸಂಘಟನೆಯ ಹೆಸರನ್ನು ಕೇಳದ ಭಾರತೀಯರೇಕೇ? ವಿಶ್ವ ಮಟ್ಟದ ನಾಯಕರುಗಳೇ ಇಲ್ಲಾ ಎಂದು ಹೇಳಿದರು ಅತಿಶಯವಲ್ಲ. ಸೆಪ್ಟಂಬರ್ 27 1925ರ ಭಾನುವಾರ, ವಿಕ್ರಮ ನಾಮ ಸಂವತ್ಸರದ ದಕ್ಷಿಣಾಯನದ ಶರದ್ ಋತು ಅದರಲ್ಲೂ ವಿಶೇಷವಾಗಿ ವಿಜಯದಶಮಿಯಂದು ಮಹಾರಾಷ್ಟ್ರದ ನಾಗಪುರದ ಮೋಹಿತೇವಾಡ ಎಂಬ ಮೈದಾನದಲ್ಲಿ ಹತ್ತಾರು ಮಕ್ಕಳೊಂದಿಗೆ ಡಾ. ಕೇಶವ ಬಲಿರಾಮ ಹೆಡಗೇವಾರ್ ಅರ್ಥಾತ್ ಎಲ್ಲರ ಪ್ರೀತಿಯ ಡಾಕ್ಟರ್ ಜೀ ಅವರಿಂದ ಆರಂಭವಾದ ಸಂಘಕ್ಕೆ ಈಗ 100 ವರ್ಷಗಳನ್ನು ಸಂಪೂರ್ಣಗೊಳಿಸಿದ ಸಂಭ್ರಮದ ಕ್ಷಣಗಳಾಗಿವೆ.

 

ಸ್ವಾತ್ರಂತ್ರ್ಯ ಪೂರ್ವದಲ್ಲಿ ತನ್ನನ್ನು ಹಂದಿ ಎಂದು ಬೇಕಾದರೂ ಕರೆಯಿರಿ ಆದರೆ ಹಿಂದೂ ಎಂದು ಕರೆಯದಿರಿ ಎಂಬ ಹೇಳಿಕೆಯನ್ನು ಅಂದಿನ ಮಹಾನ್ ರಾಷ್ಟ್ರ ನಾಯಕರೇ ಹೇಳುವಂತ ಸಂಧರ್ಭದಲ್ಲಿ ಹಿಂದೂಗಳ ಅಸ್ಮಿತೆ ಮತ್ತು ಅಸ್ಥಿತ್ವದ ಉಳುವಿಗಾಗಿ ಸ್ವಾಮಿ ವಿವೇಕಾನಂದರು, ವೀರ ಸಾವರ್ಕರ್ ಯೋಗಿ ಅರವಿಂದರ ಬರವಣಿಗೆಗಳಿಂದ ಪ್ರಭಾವಿತರಾಗಿ ಮತ್ತು ಅಂದಿನ ಪ್ರಖ್ಯಾತ ಹೋರಾಟಗಾರರಾಗಿದ್ದಂತಹ  ಡಾ ಮುಂಜೆ  ಮತ್ತು ಲೋಕಮಾನ್ಯ ತಿಲಕರಿಂದ ಪ್ರೇರಿತರಾಗಿ ಹೇಗೆ ಛತ್ರಪತಿ ಶಿವಾಜಿ ಮಹಾರಾಜರು ಸಾಮಾನ್ಯ ಗುಡ್ಡಗಾಡಿನ ಮಕ್ಕಳನ್ನು ಒಗ್ಗೂಡಿಸಿ ಸ್ವಯಂಸೇವಕ ಸೈನ್ಯವನ್ನು ರಚಿಸಿ ಮೊಘಲರನ್ನು ಮೆಟ್ಟಿ ನಿಂತು ಹಿಂದವೀ ಸಾಮ್ರಾಜ್ಯವನ್ನು ಕಟ್ಟಿದ್ದರೋ ಮತ್ತು ಚಾಪೇಕರ್ ಸಹೋದರರು ಕಟ್ಟಿದ ತರುಣರ ಸಂಘಗಳಿಂದ ಸ್ಪೂರ್ತಿಯನ್ನು ಪಡೆದು ಡಾಕ್ಟಜೀ ಕಟ್ಟಿದ ಸಂಘ ನಂತರದ ದಿನಗಳಲ್ಲಿ ಮಾಧವ ಸದಾಶಿವ ಗೋಳ್ವಾಲ್ಕರ್ ಎಲ್ಲರ ಪ್ರೀತಿಯ ಗುರುಜೀ  ಅವರ ಸಾರಥ್ಯದಲ್ಲಿ ಹೆಮ್ಮರವಾಗಿ ಬೆಳೆಯುತ್ತಲೇ ಹೋಗಿ ಆಲದ ಮರದ ಟಿಸಿಲುಗಳಂತೆ ಸಮಾಜದ ವಿವಿಧ ಸ್ಥರಗಳಲ್ಲಿ ವಿವಿಧ ಶ್ರೇಣಿಗಳಲ್ಲಿ 500ಕ್ಕೂ ಹೆಚ್ಚಿನ ವಿವಿಧ ಸಂಘಟನೆಗಳ ಹೆಸರಿನಲ್ಲಿ ಕೆಲಸ ಮಾಡುತ್ತಾ ಇಂದು ಸಂಘಪರಿವಾರವಾಗಿ ಮಾರ್ಪಟ್ಟಿದೆ.

 

ಕೇವಲ ದೇಶವಷ್ಟೆ ಅಲ್ಲದೇ ಪ್ರಪಂಚದಲ್ಲಿ ನಡೆಯುವ  ಪ್ರತಿಯೊಂದು ಅಗು ಹೋಗುಗಳಿಗೂ ಸಂಘದ ಕಡೆಯಿಂದ ಪರಿಹಾರವನ್ನು ಯಾಚಿಸುವಂತೆ ಬೆಳೆದಿರುವುದು ನಿಜಕ್ಕೂ ಸುಲಭದ ಮಾತೇನಲ್ಲ. ದೇಶದ ಯಾವುದೇ ಮೂಲೆಗಳಲ್ಲಿ ವಿಪತ್ತು ಸಂಭವಿಸಿದರೂ ಕೆಲವೇ ಕ್ಷಣಗಳಲ್ಲಿ ಸಂಘದ ಸ್ವಯಂಸೇವಕರು ಆಯಾಯಾ ಸ್ಥಳಕ್ಕೆ ತಲುಪಿ ನಿಸ್ವಾರ್ಥವಾಗಿ ಸೇವೆಸಲ್ಲಿಸುವ  ಪ್ರಕ್ತಿಯೆಯನ್ನು ಸಂಘವನ್ನು ವಿರೋಧಿಸುವವರು ಅಲ್ಲಗಳೆಯಲಾರರು. ಆರಂಭದಲ್ಲಿ ಕೇವಲ ಪುರುಷರಿಗಷ್ಟೇ ಸೀಮಿತವಾಗಿದ್ದ ಸಂಘ ನಂತರದ ದಿನಗಳಲ್ಲಿ ಸೇವಿಕಾ ಸಮಿತಿಯ ಹೆಸರಿನಲ್ಲಿ ಹೆಣ್ಣುಮಕ್ಕಳಲ್ಲೂ ರಾಷ್ಟ್ರೀಯತೆಯ ಭಾವ ಮತ್ತು ಶಿಸ್ತನ್ನು ಕಲಿಸಲಾರಂಭಿಸಿದೆ.

 

ಇಂದು ಸಂಘ ಕಾರ್ಯಗಳು  ಕೇವಲ ಭಾರತವಲ್ಲದೇ ವಿದೇಶಗಳಲ್ಲಿಯೂ ವಿವಿಧ ಹೆಸರುಗಳಿಂದ ವಿಸ್ತಾರಗೊಂಡಿದೆಯಲ್ಲದೇ ಸದ್ಯಕ್ಕೆ ಸಂಘದಿಂದ ಶಿಕ್ಷಣ ಪಡೆದ ಸಾವಿರಾರು ಶಾಸಕರು, ನೂರಾರು ಸಾಂಸದರು, ಹತ್ತಾರು ರಾಜ್ಯಗಳ ಮುಖ್ಯಮಂತ್ರಿಗಳು, ರಾಜ್ಯ ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು, ರಾಜ್ಯಪಾಲರು, ಉಪರಾಷ್ಟ್ರತಿ ಮತ್ತು ರಾಷ್ಟ್ರಪತಿಗಳಷ್ಟೇ ಅಲ್ಲದೇ ದೇಶದ ಪ್ರಧಾನ ಮಂತ್ರಿಗಳು ಸಂಘದ ಸ್ವಯಂಸೇವಕರೇ ಆಗಿರುವುದು ಗಮನಾರ್ಹವಾಗಿದೆ.

 

ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವದ ಹಿನ್ನಲೆಯಲ್ಲಿ ೨೦೨೫ರ ಜನವರಿ ೪,   ಭಾನುವಾರದಂದು ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳನ್ನು ಒಳಗೊಂಡ ಆರ್‌ಎಸ್‌ಎಸ್ ವಿಭಾಗೀಯ ಕಾರ್ಯಕರ್ತರು ಕೋಲಾರದಿಂದ ಸುಮಾರು  15 ಕಿ.ಮೀ. ದೂರದಲ್ಲಿರುವ ವಕ್ಕಲೇರಿ ಗ್ರಾಮದಿಂದ ಕೋಲಾರದ ವರೆಗು ಗಣವೇಷಧಾರಿಗಳಾಗಿ ಸಂಘದ ಘೋಷ್ ನೊಂದಿಗೆ ಪಥಸಂಚಲನ ನಡೆಸುವ ಮೂಲಕ ಅಪೂರ್ವ ಧಾಖಲೆಯನ್ನು ನಿರ್ಮಿಸಿದೆ.

 

ಸಾಮಾನ್ಯವಾಗಿ ಸಂಘದ ಪಥಸಂಚಲನ 2.5-3 ಕಿಮೀ ದೂರದವರೆಗೂ ಇರುತ್ತದೆ.  ಆದರೆ ಸ್ಥಳೀಯ ಸ್ವಯಂಸೇವಕರ ಅಭಿಲಾಷೆಯ ಮೆರೆಗೆ ಈ ಬೃಹತ್ ಪಥಸಂಚಲನವನ್ನು ಸುಮಾರು 15 ದಿನಗಳ ಹಿಂದೆಯೇ ತೀರ್ಮಾನಿಸಿ ಇದರ ಕುರಿತಾಗಿ ಸ್ಥಳೀಯ ಜಿಲ್ಲಾಡಳಿತಕ್ಕೆ ಮಾಹಿತಿಯನ್ನು ನೀಡಲಾಗಿತ್ತು. ವಕ್ಕಲೇರಿ ಗ್ರಾಮದ ಕಡೆಯಿಂದ ಕೋಲಾರಕ್ಕೆ ತಲುಪುವ ಮಾರ್ಗದಲ್ಲಿ ಮುಸ್ಲಿಂ ಬಾಹುಳ್ಯದ ಪ್ರದೇಶವಾದ ಕ್ಲಾಕ್‌ಟವರ್‌ಗೆ ಮೂಲಕವೇ ಹಾದು ಹೋಗುತ್ತದೆ ಎಂದು ಸ್ಪಷ್ಠವಾಗಿ ತಿಳಿಸಲಾಗಿತ್ತು. ಹಿಂದೂಗಳೇ ಬಹುಸಂಖ್ಯಾತರಾಗಿದ್ದರೂ, ಜಾತ್ಯಾತೀತ ಎಂಬ ಸೋಗಿನಲ್ಲಿ  ಒಂದು ಕೋಮಿನವರನ್ನೇ ಓಲೈಕೆಯನ್ನೇ ಮಾಡಿಕೊಂಡು ಬರುವ ಪದ್ದತಿ ನಮ್ಮ ದೇಶದಲ್ಲಿ ಹಿಂದಿನಿಂದಲೂ ಇದ್ದು ಈ ಪ್ರಸಂಗದಲ್ಲೂ ಅದರ ಹೊರತಾಗಿರಲಿಲ್ಲ.  ಆರಂಭದಲ್ಲಿ ಸಂಘ ಮತ್ತು ಸ್ಥಳೀಯ ಮುಸ್ಲಿಂ ಮುಖಂಡರನ್ನು ಭೇಟಿ ಮಾಡಿದ ಜಿಲ್ಲಾಡಳಿತ ಸಂಘದ ಕಾರ್ಯಕರ್ತರು ಯಾವುದೇ ಘೋಷಣೆಗಳಿಲ್ಲದೇ ಭಾರತಮಾತೆಯ ಫೋಟೋದಿಂದಿಗೆ ಪಥಸಂಚಲನ ಮಾಡಿಕೊಂಡು ಹೋಗುವುದಕ್ಕೆ ಯಾವುದೇ ತೊಂದರೆಯಾಗದಂತೆ ಅನುವು ಮಾಡಿಕೊಡ ಬೇಕೆಂದು ಸ್ಥಳೀಯ ಮುಸ್ಲಿಮ್ಮರಲ್ಲಿ ಕೇಳಿದಾಗ ಆರಂಭದಲ್ಲಿ ಉತ್ತಮ ರೀತಿಯಲ್ಲಿ ಸ್ಪಂದಿಸಿದವರು ಅಂತಿಮ ಗಳಿಗೆಯಲ್ಲಿ ಕೆಲವು ಕಾಣದ ಕೈಗಳಿಂದಾಗಿ ವಿರೋಧ ವ್ಯಕ್ತಪಡಿಸಿದಾಗ, ಜಿಲ್ಲಾಡಳಿತವು ಶನಿವಾರ ಬೆಳಿಗ್ಗೆ ಸಂಘದ ಹಿರಿಯ ಅಧಿಕಾರಿಗಳಿಗೆ ಮಾರ್ಗವನ್ನು ಬದಲಿಸಿ ಟೇಕಲ್ ಮಾರ್ಗವಾಗಿ ಪಥಸಂಚಲನವನ್ನು ನಡೆಸಲು ಕೇಳಿಕೊಂಡಿದ್ದಕ್ಕೆ ಸಂಘದವರು  ಮಣಿಯದಿದ್ದಾಗ, ಜಿಲ್ಲಾಡಳಿತವು ಶನಿವಾರ ರಾತ್ರಿಯೊಂದಲೇ ಜಾರಿಗೆ ಬರುವಂತೆ ಆ ಭಾಗದಲ್ಲಿ 144ನೇ ವಿಧಿಯಂತೆ ನಿಷೇದಾಜ್ಞೆ ಜಾರಿಗೊಳಿಸಿದ ಪರಿಣಾಮ ಸಂಘದ ಸ್ವಯಂಸೇವಕರಲ್ಲಿ ಪಥಸಂಚಲನ ನಡೆಯುತ್ತದೆಯೋ ಇಲ್ಲವೋ ಎಂಬ ಆತಂಕಕ್ಕೆ ಎಣೆ ಮಾಡಿತು.

 

ಮುಳ್ಳನ್ನು ಮುಳ್ಳಿನಿಂದಲೇ ತೆಗಬೇಕು ಎನ್ನುವ ಜಗದ ನಿಯಮದಂತೆ  ಇಂತಹ ಸಂಧಿಗ್ಧ ಪರಿಸ್ಥಿತಿಯನ್ನು ಭಾವನಾತ್ಮಕವಾಗಿ ಪರಿಹರಿಸುವುದಕ್ಕಿಂತಲೂ, ಕಾನೂನಾತ್ಮಕವಾಗಿಯೇ ಪರಿಹರಿಸಿಕೊಳ್ಳುವುದು ಉತ್ತಮ ಎಂದು ನಿರ್ಧರಿಸಿದ ಸಂಘದ ಹಿರಿಯ ಅಧಿಕಾರಿಗಳು ಭಾನುವಾರ ಬೆಳಿಗ್ಗೆ ಇದರ ವಿರುದ್ಧ  ಹೈಕೋರ್ಟ್ ಮೊರೆ ಹೋಗಲು ನಿರ್ಧರಿಸಲಾಯಿತು. ಸಂಘದ ಸ್ವಯಂಸೇವಕರು Nation first everything is next, ಎಂಬ ಮನಸ್ಥಿತಿಯವರಾಗಿದ್ದು, ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ ಎನ್ನುವುದನ್ನು ಅಕ್ಷರಶಃ ಪಾಲಿಸುತ್ತಾರೆ ಎಂಬುದಕ್ಕೆ  ಸಂಘದ ಸ್ವಯಂಸೇವಕರು ಮತ್ತು ಖ್ಯಾತ ನ್ಯಾಯವಾದಿಗಳಾದ  ಶ್ರೀ ಅರುಣ್ ಶ್ಯಾಮ್ ಅವರೇ ಜ್ವಲಂತ ಉದಾರಣೆಯಾದರು. ತಮ್ಮ ತಂದೆಯವರ ವಿಯೋಗದಿಂದಾಗಿ ದುಃಖದಲ್ಲಿ ಮುಳುಗಿದ್ದರೂ,  ಕೋಲಾರದ ಈ ಪಥಸಂಚಲನಕ್ಕೆ ಜಿಲ್ಲಾಡಳಿತ ಹಾಗು ಕಾಂಗ್ರೆಸ್ ಸರ್ಕಾರ ನಿರಾಕರಿಸಿದರ ವಿರೋಧವಾಗಿ  ಹೈಕೋರ್ಟ್ ನಲ್ಲಿ ಸಲ್ಲಿಸಲು ಅವಶ್ಯಕವಿದ್ದ ಎಲ್ಲಾ ದಾಖಲೆಗಳನ್ನು ಸಿದ್ಧಪಡಿಸಿ, ತಮ್ಮ ಕಛೇರಿಯ ಸಹೋದ್ಯೋಗಿಗಳ ಮೂಲಕ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿ ನ್ಯಾಯಾಲಯದಿಂದ ಜಿಲ್ಲಾಡಳಿತದ ಆದೇಶದ ವಿರುದ್ಧ ತಡೆಯಾಜ್ಞೆ ಸಲ್ಲಿಸುವಲ್ಲಿ ಭಾನುವಾರ ಮಧ್ಯಾಹ್ನ ಯಶಸ್ವಿಯಾಗುತ್ತಿದ್ದಂತೆಯೇ ಸಂಘದ ಸ್ವಯಂಸೇವಕರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು.

 

ಭಾನುವಾರ ಮಧ್ಯಾಹ್ನ ಹೈಕೋರ್ಟ್ ಆದೇಶವು ಜಿಲ್ಲಾಡಳಿತಕ್ಕೆ ತಲುಪುತ್ತಿದ್ದಂತೆಯೇ, ಕೇಂದ್ರ ವಲಯ ಐ.ಜಿ ಲಾಬೂರಾಂ ಅವರೇ ಮುಂದಾಳತ್ವ ವಹಿಸಿ ಜಿಲ್ಲೆಯ ಉಳ್ದಿದ ಐವರು ಎಸ್ಪಿಗಳು, 5 ಡಿವೈಎಸ್ಪಿಗಳು ಮತ್ತು ಸುಮಾರು 600 ಮಂದಿ ಪೊಲೀಸರನ್ನು ಲಗುಬಗನೆ ಕ್ಲಾಕ್‌ಟವರ್‌ನಲ್ಲಿ ಸುತ್ತಮುತ್ತಲೂ  ನಿಯೋಜಿಸಿ ಬಿಗಿ ಬಂದೋ ಬಸ್ತ್ ವ್ಯವಸ್ಥೆ ಮಾಡಲಾಯಿತು.

 

ಅತ್ತ ಬಂದ ಸಂಕಷ್ಟವೆಲ್ಲವೂ ನೀರಿನಂತೆ ಕರಗಿದ್ದರಿಂದ ನಿಗಧಿತ ಸಮಯಕ್ಕೆ ಸರಿಯಾಗಿ ವಕ್ಕಲೇರಿಯಲ್ಲಿ ಧ್ವಜಾರೋಹಣ ನಡೆದು  ಪ್ರಾಂತ ಪ್ರಚಾರಕರಾದ ಶ್ರೀ ಗುರುಪ್ರಸಾದದು ರಾಷ್ಟ್ರ ರಕ್ಷಣೆಯ ಸಂಕಲ್ಪ ತೊಟ್ಟು ಹಳ್ಳಿಹಳ್ಳಿಗಳಲ್ಲಿಯೂ ಸಂಘದ ಶಾಖೆಗಳನ್ನು ನಡೆಸುವ ಮೂಲಕ   ದೂರ ದೃಷ್ಟಿಯ ಚಿಂತನೆಯೊಂದಿಗೆ ಪ್ರತಿಯೊಬ್ಬರು ಕ್ರಿಯಾಶೀಲರಾಗಿ  ರಾಷ್ಟ್ರ ನಿರ್ಮಾಣ ಮಾಡುವ ಗುರುತವಾದ ಜವಬ್ಧಾರಿಯನ್ನು ಹೊರುವಂತಹ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.  ನಂತರ ಮಾಜಿ ಸಂಸತ್ ಸದಸ್ಯ ಎಸ್.ಮುನಿಸ್ವಾಮಿ ಸೇರಿದಂತೆ ಸುಮಾರು 3000 ಗಣವೇಷಧಾರಿಗಳು ಮಧ್ಯಾಹ್ನ 2:30ಕ್ಕೆ ಘೋಷ್ ವಾದನಕ್ಕೆ ಅನುಗುಣವಾಗಿ ಹೆಜ್ಜೆಯನ್ನು ಹಾಕುತ್ತಾ ಪಥಸಂಚಲನ ಆರಂಭಿಸಿ ಬೆಟ್ಟಬೆಣಜೇನಹಳ್ಳಿ ಮಂಗಸಂದ್ರ ಮತ್ತು ಅಮ್ಮೇರಹಳ್ಳಿಗಳಲ್ಲಿ ಕೆಲಕಾಲದ ವಿಶ್ರಾಂತಿಯ ನಂತರ ಸಂಜೆ ಕೋಲಾರದ ಎಪಿಎಂಸಿ ಬಳಿ ಬರುವಷ್ಟರಲ್ಲಿ  ಗಂಟೆ 7 ಆಗಿತ್ತು. ಅಷ್ಟರಲ್ಲಾಗಲೇ ಸಂಘದ ಪಥಸಂಚಲನಕ್ಕೆ ಹೇಗಾದರೂ ಅಡ್ಡಿ ಪಡಿಸಲೇಬೇಕೆಂದೇ, ಕ್ಲಾರ್ಕ್ ಟವರ್ ಸಮೀಪ ಕೆಲವು ಮುಸ್ಲಿಂ ಯುವಕರುಗಳು ತ್ರಿವರ್ಣಧ್ವಜ ಹಿಡಿದು ಪೋಷಣೆಗಳನ್ನು ಕೂಗುತ್ತಿದ್ದದ್ದನ್ನು ಗಮನಿಸಿದ ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್ ಪೋಲೀಸರ ಸಹಾಯದೊಂದಿಗೆ ಅ ಗುಂಪನ್ನು ಚದುರಿಸುವ ಮೂಲಕ ಯಾವುದೇ  ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಂಡು ಇಡೀ ಪಥಸಂಚಲನ ಕ್ಲಾರ್ಕ್ ಟವರ್ಸ್ ದಾಟುತ್ತಿದ್ದಂತೆಯೇ ಪೋಲೀಸರು ನಿಟ್ಟುಸಿರು ಬಿಡುತ್ತಿದ್ದರೆ, ಸ್ವಯಂಸೇವಕರು ನಿಗಧಿಯಂತೆ ಜ್ಯೂನಿಯರ್ ಕಾಲೇಜ್ ಮೈದಾನಕ್ಕೆ ತಲುಪಿ ಸುಧೀರ್ಘ  ಪಥಸಂಚಲನ ಮುಗಿಸಿ  ಅದಾಗಲೇ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿದ್ದ ಊಟೋಪಚಾರವನ್ನು ಮುಗಿಸಿದ ನಂತರ ಪೋಲಿಸರ ಬಂದೋಬಸ್ತಿನಲ್ಲಿ ಸ್ವಯಂಸೇವಕರು ತಮ್ಮ ತಮ್ಮ ಊರುಗಳತ್ತ ಪಯಣಿಸುವ ಮೂಲಕ ಎಲ್ಲವು ಸುಸಂಪನ್ನವಾಗಿ ನಡೆಯಿತು.

 

ಹತ್ತು ದಶಕಗಳ ಸಂಘದ ಬೆಳವಣಿಗೆ ಎಂದಿಗೂ ಸಹಾ ಸುಲಭವಾಗಿರದೇ ನಾನಾ ರೀತಿಯ ಸಂಕಷ್ಟಗಳನ್ನು ಸಮರ್ಥವಾಗಿ ಎದುರಿಸಿ ಬೆಳೆದು ಬಂದಿದೆ. ಬ್ರಿಟೀಷ್ ಸರ್ಕಾರವಲ್ಲದೇ ಸ್ವಾತಂತ್ರ್ಯಾ ನಂತರ ಹಲವಾರು ಸಮಯಗಳಲ್ಲಿ ಸಂಘವನ್ನು ನಿಷೇಧ ಮಾಡಲು ಹುನ್ನಾರ ನಡೆಸಿದರೂ, ಎಂದಿಗೂ ಕಾನೂನನ್ನು ಕೈಗೆತ್ತಿಕೊಳ್ಳದೇ ಸಾಂವಿಧಾನಾತ್ಮಕವಾಗಿಯೇ ಕಾನೂನಾತ್ಮಕ ಹೋರಾಟಗಳನ್ನು ನಡೆಸಿ ತನ್ನ ಮೇಲೆ ಬಂದಿದ್ದ ಎಲ್ಲಾ ಆರೋಪಗಳೂ ನಿರಾಧಾರವಾದದ್ದು ಎಂಬುದನ್ನು ಸಾಭೀತು ಪಡಿಸಿ,  ಅಗ್ನಿ ಪರೀಕ್ಷೆಯಲ್ಲಿ ಸೀತಾ ಮಾತೆ  ಪವಿತ್ರಳಾಗಿ ಹೊರಬಂದಂತೆ ಸಂಘವೂ ಸಹಾ ಹೊತಬಂದಿದ್ದಲ್ಲದೇ,  ತನ್ನ ವಿರೋಧಿಗಳಿಗೆ ಕಾಲ ಕಾಲಕ್ಕೆ ತಕ್ಕ ಉತ್ತರವನ್ನು ನೀಡುವಷ್ಟು ಸಮರ್ಥವಾಗಿ ಬೆಳೆದುಬಂದಿದೆ. ಇದೇ ಕಾರಣದಿಂದಲೇ ಇಂದಿಗೂ ಭಾರತದಲ್ಲಿ ಶಾಂತಿ ಸುವ್ಯವಸ್ಥೆ, ಕೋಮು ಸೌಹಾರ್ಧತೆಗಳು ಮುಂದುವರಿದುಕೊಂಡು ಹೋಗಲು ಸಂಘದ ಪಾತ್ರ ಮಹತ್ತವಾಗಿದೆ ಎಂದು ಪರಮ ವಿರೋಧಿಗಳೂ ಒಪ್ಪುವುದೇ ಸಂಘದ ನಿಜವಾದ ಕಳಸ ಪ್ರಾಯವಾಗಿದೆ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

 

2 thoughts on “ಕೋಲಾರದಲ್ಲಿ ಆರ್. ಎಸ್. ಎಸ್. ಸ್ವಯಂಸೇವಕರ ಪಥಸಂಚಲನ

  1. ಸಮಗ್ರ ಭಾರತೀಯರ ಕಣ್ಣು ತೆರುಸುವ ಉತ್ತಮ ಲೇಖನ, ಹಿಂದೂಗಳು ಒಂದಾಗದಿದ್ದರೆ ಮುಂದಿನ ಜನಾಂಗ ಮತೀಯ ಶಕ್ತಿಗಳಿಗೆ ಗುಲಾಮರು ಆಗುತ್ತಾರೆ

    Liked by 1 person

Leave a reply to scpkumar Cancel reply