ಕರ್ತವ್ಯ  ಮತ್ತು ಸೈದ್ಧಾಂತಿಕ ಭಿನ್ನಾಭಿಪ್ರಾಯ 

ನಮ್ಮ ದೇಶದಲ್ಲಿ ಅತ್ಯಂತ ಹಿಂದುಳಿದ ಕೆಲವೇ ಕೆಲವೂ ರಾಜ್ಯಗಳಲ್ಲಿ ಒರಿಸ್ಸಾ ರಾಜ್ಯವೂ ಒಂದು. ಇಂದೂ ಸಹ ದೇಶಾದ್ಯಂತ ಅದರಲ್ಲೂ ಬೆಂಗಳೂರಿನ ಅನೇಕ ಸಾಪ್ಘ್ವೇರ್ ಕಂಪನಿಗಳಲ್ಲಿ ಸೆಕ್ಯುರಿಟಿ ಗಾರ್ಡ್ ಗಳಲ್ಲಿ ಹೆಚ್ಚಿನವರು ಒರಿಸ್ಸಾದವರೇ ಆಗಿರುತ್ತಾರೆ ತಮ್ಮ SSLC ಅಥವಾ PUC ಎಲ್ಲೋ ಕೆಲವರು Degree ಮುಗಿಸಿ ತಕ್ಕ ಮಟ್ಟಿಗಿನ English ಕಲಿತರೆಂದರೆ ಅಲ್ಲಿಂದ ಬೆಂಗಳೂರು, ಹೈದ್ರಾರಾಬಾದ್ ಇಲ್ಲವೇ ಕಲ್ಕತ್ತಾದ ಕಡೆ ಉದ್ಯೋಗ ಅರಸಿಕೊಂಡು ಹೋಗುತ್ತಾರೆ. ಕ್ರಮವಾಗಿ 2004, 2009, 2014 ಮತ್ತು 2019 ರ ಅಲ್ಲಿನ ವಿಧಾನಸಭಾ ಚುನಾವಣೆಗಳಲ್ಲಿ… Read More ಕರ್ತವ್ಯ  ಮತ್ತು ಸೈದ್ಧಾಂತಿಕ ಭಿನ್ನಾಭಿಪ್ರಾಯ 

ಸಂಡಿಗೆ ಹುಳಿ (ಉಂಡೇ ಹುಳಿ)

ಹಳೇ ಮೈಸೂರಿನ ಪ್ರಾಂತ್ಯದವರ ಸಭೆ ಸಮಾರಂಭಗಳಲ್ಲಿ ಅದರಲ್ಲೂ ಮದುವೆಯ ಹಿಂದಿನ ದಿನದ ದೇವರ ಸಮಾರಾಧನೆ, ವೈಕುಂಠ ಸಮಾರಾಧನೆಗಳಲ್ಲಿ ಅದೇ ತರಕಾರಿ ಕೂಟು ಅಥವಾ ಹುಳಿದೊವ್ವೆ ಬದಲು ರುಚಿಕರವಾದ, ಪೌಷ್ಟಿಕವಾದ  ಸಂಡಿಗೆ ಹುಳಿ (ಉಂಡೇ ಹುಳಿ)  ಮಾಡುವ ಸಂಪ್ರದಾಯವಿದೆ. ಈಗ  ಸಾಂಪ್ರದಾಯಕವಾಗಿ ಮನೆಯಲ್ಲಿ ಹೇಗೆ ಅದನ್ನು  ತಯಾರಿಸಬಹುದು ಎಂಬುದನ್ನು ತೋರಿಸಿಕೊಡುತ್ತಿದ್ದೇವೆ. ಸುಮಾರು 4-6   ಜನರಿಗೆ ಸಾಕಾಗುವಷ್ಟು ಸಂಡಿಗೆ ಹುಳಿ ಮಾಡಲು ಬೇಕಾಗುವ ಸಾಮಗ್ರಿಗಳು ತೊಗರಿ ಬೇಳೆ-3 ಬಟ್ಟಲು ಬೆಲ್ಲ- 100 ಗ್ರಾಂ ಸಾರಿನಪುಡಿ- 2  ಚಮಚ ಕಾಳು ಮೆಣಸು… Read More ಸಂಡಿಗೆ ಹುಳಿ (ಉಂಡೇ ಹುಳಿ)

ಹಿತಶತೃಗಳು

ಅದೊಂದು ಸಂಪದ್ಭರಿತವಾದ ರಾಜ್ಯ. ಆಲ್ಲಿಯ ರಾಜ ತುಂಬಾ ಸಾತ್ವಿಕ ಸ್ವಭಾವದವನು. ತಾನಾಯಿತು ತನ್ನ ಪ್ರಜೆಗಳಾಯಿತು ಎಂದು ಸುಖಃ ಶಾಂತಿಯಿಂದ ನೆಮ್ಮೆಯಿಂದ ರಾಜ್ಯಭಾರವನ್ನು ಮಾಡುತ್ತಿರುತ್ತಾನೆ. ಆದರೆ ಅಕ್ಕ ಪಕ್ಕದ ರಾಜ್ಯಗಳಿಗೆ ಈ ರಾಜ್ಯದ ಸಂಪತ್ತಿನ ಮೇಲೆಯೇ ಕಣ್ಣು ಹಾಗಾಗಿ ಪ್ರತೀಬಾರಿಯೂ ಒಂದಲ್ಲಾ ಒಂದು ರೀತಿಯಾಗಿ ಕೀಟಲೆ ಕೊಡುತ್ತಾ ಈ ದೇಶವನ್ನು ವಶಪಡಿಸಿಕೊಳ್ಳಲು ಹೊಂಚು ಹಾಕುತ್ತಲೇ ಇರುತ್ತವೆ. ನೆರೆ ರಾಜ್ಯಗಳ ಇಂತಹ ಕುಕೃತ್ಯಗಳಿಂದ ಬೇಸತ್ತ ರಾಜ ತನ್ನ ನಂಬಿಕಸ್ಥ ಮಂತ್ರಿ ಮತ್ತು ಸೇನಾಧಿಪತಿಯನ್ನು ಕರೆದು ರಹಸ್ಯ ಸಭೆ ಮಾಡಿ ದೇಶದ… Read More ಹಿತಶತೃಗಳು

ಕರ್ನಾಟಕ ಸಿಂಹಾಸನ ಪ್ರತಿಷ್ಠಾಪನಾಚಾರ್ಯ ಶ್ರೀ ವಿದ್ಯಾರಣ್ಯರು

ದಕ್ಷಿಣ ಭಾರತದ ಅತಿ ದೊಡ್ಡ ಹಿಂದೂ ಸಾಮಾಜ್ಯದ ರೂವಾರಿಗಳಾದ, ದಕ್ಷಿಣಾಮ್ನೇಯ ಶೃಂಗೇರೀ ಪೀಠದ 12ನೇಯ ಜಗದ್ಗುರುಗಳಾಗಿದ್ದಂತಹ ಶ್ರೀ ಶ್ರೀ ಶ್ರೀ ವಿದ್ಯಾರಣ್ಯರ ಜನ್ಮ ದಿನದಂದು ಹೈಂದವೀ ಸಾಮ್ರಾಜ್ಯಕ್ಕೆ ಅವರ ಕೊಡುಗೆಗಳನ್ನು ಮೆಲುಕು ಹಾಕುವ ಸಣ್ಣ ಪ್ರಯತ್ನ, ಇದೋ ನಿಮಗಾಗಿ… Read More ಕರ್ನಾಟಕ ಸಿಂಹಾಸನ ಪ್ರತಿಷ್ಠಾಪನಾಚಾರ್ಯ ಶ್ರೀ ವಿದ್ಯಾರಣ್ಯರು

ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರ ರಾಜಕೀಯ ಭವಿಷ್ಯ

ನಿಜವಾಗಿ & ಖಡಾಖಂಡಿತವಾಗಿ ಹೇಳಬೇಕೆಂದರೆ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರ ರಾಜಕೀಯ ಭವಿಷ್ಯ ಅಷ್ಟೇನೂ ಉತ್ತಮವಾಗಿಲ್ಲ ಮತ್ತು ಅದನ್ನು ಉತ್ತಮ ಪಡಿಸಿಕೊಳ್ಳಲು ಅವರು ಪ್ರಯತ್ನಿಸುತ್ತಲೇ ಇಲ್ಲ. ಅವರ ಸದ್ಯದ ಮನೋಸ್ಥಿತಿ ಹೇಗಿದೆಯೆಂದರೆ ರಾಹುಲ್ ಮತ್ತು ಪ್ರಿಯಾಂಕಾ ಇಬ್ಬರೂ ಸಹಾ ತಾವು ಪ್ರಧಾನ ಮಂತ್ರಿಯಾಗಲೆಂದೇ ಹುಟ್ಟಿದವರು ಎಂದೇ ನಂಬಿದ್ದಾರೆ ಅಥವಾ ಅವರ ಸುತ್ತಮುತ್ತಲಿರುವ ಅವರ ವಂದಿಮಾಗದರು ಅವರನ್ನು ಹಾಗೇ ನಂಬಿಸಿದ್ದಾರೆ. ಅವರ ಮುತ್ತಾತ, ಅಜ್ಜಿ ಮತ್ತು ಅಚಾನಕ್ಕಾಗಿ ಅವರ ತಂದೆ ಪ್ರಧಾನಿಯಾಗಿದ್ದರಿಂದ ಪ್ರಧಾನಮಂತ್ರಿಯ ಹುದ್ದೆ ತಮ್ಮ… Read More ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರ ರಾಜಕೀಯ ಭವಿಷ್ಯ

ಬಲಮುರಿ ಪ್ರವಾಸ ಭಾಗ-1

ಕಳೆದ ಒಂದೂವರೆ ತಿಂಗಳಿಂದ ಕೂರೋನಾ ಮಹಾಮಾರಿಯಿ ಸೋಂಕಿನಿಂದಾಗಿ ಎಲ್ಲರೂ ಮನೆಯಲ್ಲಿಯೇ ಕುಳಿತುಕೊಂಡು ಬೇಜಾರಾಗಿ ಹೋಗಿದೆ. ಎಲ್ಲಾ ಸರಿ ಇದ್ದಿದ್ರೇ ಈ ಬೇಸಿಗೆ ರಜೆಯಲ್ಲಿ ಸಂಸಾರ ಸಮೇತ ಯಾವುದಾದರೂ ಪ್ರವಾಸೀ ತಾಣಗಳಿಗೆ ಹೋಗಿ ಒಂದಷ್ಟು ದಿನ ಆರಾಮಾಗಿ ಇದ್ದು ಬರ್ತಾ ಇದ್ವಿ ಅನ್ಸತ್ತೆ . ಅದಕ್ಕೆ ಈಗ ಕುಳಿತಲ್ಲಿಂದಂದಲೇ ನಾವು ಸುಮಾರು ಮೂವತ್ತು ವರ್ಷಗಳ ಹಿಂದೆ ಕಾಲೇಜಿನಲ್ಲಿರುವಾಗ ಬಲಮುರಿಗೆ ಹೋಗಿದ್ದ ರೋಚಕ ಪ್ರವಾಸದ ಅನುಭವವನ್ನು ಹಂಚಿಕೊಳ್ತಾ ಇದ್ದೀನಿ. ಓದಿ ನೀವೂ ಕುಳಿತಲ್ಲಿಂದಲೇ ಆನಂದಿಸಿ. ಆಗ 1992ನೇ ಇಸ್ವಿ. ನಾವಾಗ… Read More ಬಲಮುರಿ ಪ್ರವಾಸ ಭಾಗ-1

ಶ್ರೀ ರಾಮಾನುಜಾಚಾರ್ಯರು

ಎಂಟನೇ ಶತಮಾನದ ಅಂತ್ಯ ಮತ್ತು ಒಂಬತ್ತನೇ ಶತಮಾನದಲ್ಲಿ ವಿವಿಧ ಧರ್ಮಗಳ ಸೆಳೆತಕ್ಕೆ ಸಿಕ್ಕಿ ಸನಾತನ ಧರ್ಮ ಆವಸಾನದ ಅಂಚಿನಲ್ಲಿದ್ದಾಗ ಹಿಂದೂ ಧರ್ಮದ ಪುನರುತ್ಥಾನದ ಆಶಾಕಿರಣವಾಗಿ ಶ್ರೀ ಶಂಕರಾಚಾರ್ಯರ ಆಗಮನವಾಗಿ ಅನ್ಯಧರ್ಮೀಯರನ್ನು ಸಮರ್ಥವಾಗಿ ವಾದದಲ್ಲಿ ಸೋಲಿಸಿ ತಮ್ಮ ಅಹಂ ಬ್ರಹ್ಮಾಸ್ಮಿ ಎನ್ನುವ ಅದ್ವೈತ ತತ್ವದ ಮೂಲಕ ಸನಾತನ ಧರ್ಮವನ್ನು ಎತ್ತಿಹಿಡಿದ ಪರಂಪರೆಯನ್ನು 10 ಮತ್ತು 11ನೇ ಶತಮಾನದಲ್ಲಿ ಮುಂದುವರಿಸಿದ ಕೀರ್ತಿ ಶ್ರೀ ರಾಮಾನುಜಾಚಾರ್ಯರಿಗೆ ಸಲ್ಲುತ್ತದೆ. ಈ ಇಬ್ಬರು ಮಹಾನ್ ಆಚಾರ್ಯರ ನಡುವೆ ಹಲವಾರು ಸಾಮ್ಯಗಳಿದ್ದು ಮೊದಲನೆಯದಾಗಿ ಈ ಇಬ್ಬರೂ… Read More ಶ್ರೀ ರಾಮಾನುಜಾಚಾರ್ಯರು

ಆದಿ ಗುರು‌ ಶ್ರೀ ಶಂಕರಾಚಾರ್ಯರು

ಅದು ಕ್ರಿ.ಶ, ಏಳನೇ ಶತಮಾನ. ಭಾರತದ ಸನಾತನ ಧರ್ಮಕ್ಕೆ ಅತ್ಯಂತ ಕ್ಲಿಷ್ಟಕರವಾದ ಸಂದಿಗ್ಧ ಪರಿಸ್ಥಿತಿಯಿದ್ದ ಕಾಲವದು. ಒಂದು ಕಡೆ ಅಹಿಂಸಾ ಪರಮೋಧರ್ಮಃ ಎಂದು ಹೇಳುತ್ತಲೇ ಬೌದ್ಧ ಧರ್ಮ ಭಾರತದಲ್ಲೆಲ್ಲಾ ಅತ್ಯಂತ ವೇಗವಾಗಿ ಹರಡಿದ್ದಲ್ಲದೇ ವಿದೇಶಗಳಿಗೂ ತನ್ನ ಅನುಯಾಯಿಗಳನ್ನು ಕಳುಹಿಸಿಯಾಗಿತ್ತು. ಸನಾತನ ಧರ್ಮದ ಕಟ್ಟುಪಾಡು ಮತ್ತು ಅತೀಯಾದ ಆಚಾರ ಮಡಿ ಹುಡಿಗಳಿಂದ ಬೇಸತ್ತವರು ಬೌದ್ಧ ದರ್ಮದ ಕಡೆ ಆಕರ್ಷಿತರಾತೊಡಗಿದ್ದರೆ ಮತ್ತೊಂದೆಡೆ, ದೇವರು ಎಂಬುವುದೇ ಇಲ್ಲ ಅದೆಲ್ಲಾ ಕಟ್ಟು ಕಥೆ ಎನ್ನುವಂತಹ ಚಾರ್ವಾಕರ ಹಾವಳಿ. ನಮ್ಮ ಸನಾತನ ಧರ್ಮಕ್ಕೆ ವೇದವೇ… Read More ಆದಿ ಗುರು‌ ಶ್ರೀ ಶಂಕರಾಚಾರ್ಯರು

ಕೂರೋನ ಇನ್ನೆಷ್ಟೂ ಅಂತಾ ಮನೆಯೊಳಗೇ ಕೂರೋಣಾ?

ಚೀನಾದ ದೇಶದ ವುಹಾನ್ ಪಟ್ಟಣದಲ್ಲಿ ಬಾವಲಿಗಳಿಂದ ಮೊದಲು ಕಾಣಿಸಿಕೊಂಡ ಕೂರೋನ ಎಂಬ ಮಹಾಮಾರಿ ಸೋಂಕು ನೋಡ ನೋಡುತ್ತಿದ್ದಂತೆಯೇ ಕೆಲವೇ ಕೆಲವು ದಿನಗಳಲ್ಲಿ ಪ್ರಪಂಚಾದ್ಯಂತ ತನ್ನ ಕಬಂಧ ಬಾಹುಗಳನ್ನು ಚಾಚಿ ಲಕ್ಷಾಂತರ ಜನರನ್ನು ಬಲಿ ತೆಗೆದುಕೊಂಡಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಈ ಸೋಂಕು ನಮ್ಮ ದೇಶದಲ್ಲಿ ಹರಡಬಾರದೆಂಬ ಮುಂಜಾಗೃತಾ ಕ್ರಮವಾಗಿ ಆರಂಭದಲ್ಲಿ ಏಪ್ರಿಲ್ 14 ರವಗೆ ದೇಶಾದ್ಯಂತ ಲಾಕ್ ಡೌನ್ ಮಾಡಲಾಗಿ, ಪರಿಸ್ಥಿತಿ ಸುಧಾರಿಸದ ಕಾರಣ ಅದನ್ನು ಎರಡನೆಯ ಬಾರಿಗೆ ಮೇ 3 ರವರೆಗೆ ವಿಸ್ತರಿಸಲಾಗಿದೆ. ಈಗ ಬಲ್ಲ… Read More ಕೂರೋನ ಇನ್ನೆಷ್ಟೂ ಅಂತಾ ಮನೆಯೊಳಗೇ ಕೂರೋಣಾ?