ಹಿತಶತೃಗಳು

ಅದೊಂದು ಸಂಪದ್ಭರಿತವಾದ ರಾಜ್ಯ. ಆಲ್ಲಿಯ ರಾಜ ತುಂಬಾ ಸಾತ್ವಿಕ ಸ್ವಭಾವದವನು. ತಾನಾಯಿತು ತನ್ನ ಪ್ರಜೆಗಳಾಯಿತು ಎಂದು ಸುಖಃ ಶಾಂತಿಯಿಂದ ನೆಮ್ಮೆಯಿಂದ ರಾಜ್ಯಭಾರವನ್ನು ಮಾಡುತ್ತಿರುತ್ತಾನೆ. ಆದರೆ ಅಕ್ಕ ಪಕ್ಕದ ರಾಜ್ಯಗಳಿಗೆ ಈ ರಾಜ್ಯದ ಸಂಪತ್ತಿನ ಮೇಲೆಯೇ ಕಣ್ಣು ಹಾಗಾಗಿ ಪ್ರತೀಬಾರಿಯೂ ಒಂದಲ್ಲಾ ಒಂದು ರೀತಿಯಾಗಿ ಕೀಟಲೆ ಕೊಡುತ್ತಾ ಈ ದೇಶವನ್ನು ವಶಪಡಿಸಿಕೊಳ್ಳಲು ಹೊಂಚು ಹಾಕುತ್ತಲೇ ಇರುತ್ತವೆ. ನೆರೆ ರಾಜ್ಯಗಳ ಇಂತಹ ಕುಕೃತ್ಯಗಳಿಂದ ಬೇಸತ್ತ ರಾಜ ತನ್ನ ನಂಬಿಕಸ್ಥ ಮಂತ್ರಿ ಮತ್ತು ಸೇನಾಧಿಪತಿಯನ್ನು ಕರೆದು ರಹಸ್ಯ ಸಭೆ ಮಾಡಿ ದೇಶದ ಭದ್ರತೆಗಾಗಿ ಮತ್ತು ಪ್ರಜೆಗಳ ರಕ್ಷಣೆ ಗಾಗಿ ಕೆಲವೊಂದು ನಿರ್ಣಯಗಳನ್ನು ತೆಗೆದುಕೊಳ್ಳುತ್ತಾರೆ. ಆ ನಿರ್ಣಯಗಳನ್ನು ಜಾರಿಗೆ ತರುವಷ್ಟರಲ್ಲಿಯೇ ಶತೃರಾಷ್ಟ್ರಗಳು ಅದಕ್ಕೆ ತಕ್ಕ ಸಿದ್ಧತೆಯನ್ನು ಮಾಡಿಕೊಂಡಿರುತ್ತವೆ. ಇದನ್ನು ಗಮನಿಸಿದ ರಾಜನಿಗೆ ಆಶ್ಚರ್ಯವಾಗಿ ಮತ್ತೊಮ್ಮೆ ಅದೇ ನಂಬಿಕಸ್ಥ ಮಂತ್ರಿ ಮತ್ತು ಸೇನಾಧಿಪತಿಯ ಜೊತೆ ರಹಸ್ಯ ಸಭೆ ಮಾಡಿ ಕೆಲವೊಂದು ಹೊಸಾ ನಿರ್ಣಯಗಳನ್ನು ತೆಗೆದುಕೊಂಡು ಅದನ್ನು ಜಾರಿಗೆ ಮಾಡುವಷ್ಟರಲ್ಲಿ ಪುನಃ ಅವರು ಕೈಗೊಂಡ ನಿರ್ಣಯಗಳೆಲ್ಲವೂ ಶತೃವಿಗೆ ಅರಿವಾಗಿಬಿಟ್ಟಿರುತ್ತದೆ. ಈಗ ರಾಜನಿಗೆ ತಾವು ರಹಸ್ಯವಾಗಿ ಕೈಗೊಳ್ಳುವ ನಿರ್ಣಯಗಳೆಲ್ಲವೂ ಶತೃಗಳಿಗೆ ತಿಳಿಯುತ್ತಿದೆ ಎನ್ನುವುದಾದರೇ ಈ ಮೂವರೊಳಗೊಬ್ಬರು ಶತೃವಿನ ಜೊತೆ ಶಾಮೀಲಾಗಿದ್ದಾರೆ ಎನ್ನುವುದು ಖಚಿತವಾಗುತ್ತದೆಯಾದರೂ ಯಾರ ಮೇಲೂ ಅನುಮಾನ ಪಡಲಾಗದ ಸ್ಥಿತಿಗೆ ತಲುಪಿರುತ್ತಾನೆ. ತಮ್ಮ ತಂದೆಯ ಕಾಲದಿಂದಲೂ ಮಾಹಾ ಮಂತ್ರಿಗಳು ದಕ್ಷತೆಗೆ ಹೆಸರಾಗಿದ್ದಾರೆ. ಇನ್ನು ಸೇನಾಧಿಪತಿಯೋ ತನ್ನ ಬಾಲ್ಯ ಸ್ನೇಹಿತ. ಚಿಕ್ಕ ವಯಸ್ಸಿನಿಂದಲೂ ತನ್ನ ಜೊತೆಗೇ ಬೆಳೆದವ. ಹಾಗಾಗಿ ಇದ್ದವರು ಮೂರು ಕದ್ದವರು ಯಾರು? ಎನ್ನುವ ಗಲಿಬಿಲಿ. ಕೊನೆಗೆ ರಾಜ ಸಮಚಿತ್ತದಿಂದ ತಮ್ಮ ಸಭೆಯ ಕುರಿತಂತೆ ತನಗೆ ತಾನೇ ಅವಲೋಕನ ಮಾಡಿಕೊಳ್ಳುವಾಗ ಥಟ್ಟನೆ ನೆನಪಿಗೆ ಬಂದು, ಕೂಡಲೇ ತಮ್ಮ ಅರಮನೆಯ ಪರಿಚಾರಿಕೆಯನ್ನು ಕರೆಯಿಸಿ ಸುದೀರ್ಘವಾದ ವಿಚಾರಣೆ ನಡೆಸಿದ ನಂತರ ಆಕೆ ತಾನು ನೆರೆರಾಷ್ಟ್ರಗಳ ಗುಪ್ತಚಾರಿಣಿಯಾಗಿ ಕಾರ್ಯನಿರ್ವಹಿಸುತ್ತಿದ್ದದ್ದನ್ನು ಒಪ್ಪಿಕೊಳ್ಳುತ್ತಾಳೆ. ತಮ್ಮ ಸುದೀರ್ಘ ಸಭೆಯ ಸಮಯದಲ್ಲಿ ಏನಾದರೂ ಅವಶ್ಯತೆ ಆದಲ್ಲಿ ಸಹಾಯಕ್ಕಿರಲಿ ಎಂದು ಪರಿಚಾರಕೆಯನ್ನು ರಾಜ ನೇಮಿಸಿರುತ್ತಾನೆ. ಹೆಣ್ಣು ತಾನೇ ಏನು ಮಾಡಬಲ್ಲಳು? ಅವಳಿಂದ ಯಾವುದೇ ರೀತಿಯ ಭಯ ಇರುವುದಿಲ್ಲ ಎಂಬ ಧೋರಣೆಯಿಂದ ರಾಜ, ರಾಜಭಟರ ಜಾಗದಲ್ಲಿ ಪರಿಚಾರಿಕೆಯನ್ನು ನೇಮಿಸಿಕೊಂಡಿರುತ್ತಾನೆ. ಆದರೆ ಆಕೆಯೇ ಆತನ ಪಾಲಿಗೆ ಮಗ್ಗುಲ ಮುಳ್ಳಾಗಿ ಕಾಡಿರುತ್ತಾಳೆ..

ಇಷ್ಟೆಲ್ಲ ಪೀಠಿಕೆ ಏಕೆ ಬೇಕಾಯಿತು ಎಂದರೆ, ನಮ್ಮ ದೇಶದಲ್ಲಿಯೂ ಸದ್ಯದ ಪರಿಸ್ಥಿತಿ ಇದಕ್ಕೆ ಹೊರತಾಗಿಲ್ಲ.

ನಮ್ಮ ದೇಶದಲ್ಲೇ ಹುಟ್ಟಿ, ಇಲ್ಲಿಯ ಅನ್ನ ತಿಂದು ನೀರು ಕುಡಿದು ಬೆಳೆದು, ನಮ್ಮ ಸರ್ಕಾರೀ ಖರ್ಚಿನಲ್ಲಿ ವಿದ್ಯಾಭ್ಯಾಸ ಮಾಡಿ ಬೆಳೆಯುವ ಸಮಯದಲ್ಲಿ ಯಾವುದೋ ಧೋರಣೆಗಳಿಗೋ ಇಲ್ಲವೇ ಸಿದ್ಧಾಂತಗಳಿಗೋ ಬಲಿಯಾಗಿ ನಮ್ಮ ದೇಶದ ವಿರುದ್ಧವೇ ಹೋರಾಡುವ ಹಿತಶತೃಗಳ ಕಾಟ ಬಹಳವಾಗಿ ಬಿಟ್ಟಿವೆ.

ತೊಂಭತ್ತರ ಸಮಯದಲ್ಲಿ ಭಾರತ, ಪಾಕೀಸ್ಥಾನದ ವಿರುದ್ಧ ಕಾರ್ಗಿಲ್ಲಿನಲ್ಲಿ ಯುದ್ಧ ಮಾಡುತ್ತಿರುತ್ತದೆ. ಗುಡ್ಡದ ಮೇಲೆ ಕುಳಿತಂತಹ ಪಾಕಿಗಳನ್ನು ಭಾರತೀಯ ಸೈನ್ಯ ಕೆಳಗಿನಿಂದಲೇ ಬಗ್ಗು ಬಡಿಯಲು ಹರಸಾಹಸ ಪಡುತ್ತಿದ್ದರೆ ಬರ್ಕಾ ದತ್ ಎಂಬ್ ಮೂರ್ಖ ಹೆಂಗಸು, ಅಲ್ಲಿ ನಡೆಯುತ್ತಿದ್ದ ಪ್ರತಿಯೊಂದು ನಡೆಗಳನ್ನು ತನ್ನ ಟಿವಿಯ ನೇರಪ್ರಸಾರದಲ್ಲಿ ತೋರಿಸುತ್ತಿರುತ್ತಾಳೆ. ನೆರೆ ರಾಷ್ಟ್ರ ಸುಲಭವಾಗಿ ಆಕೆ ತೋರಿಸುತ್ತಿದ್ದಕ್ಕೆ ಅನುಗುಣವಾಗಿ ತನ್ನ ಸೈನಿಕರಿಗೆ ನಿರ್ದೇಶನ ಮಾಡಿ ನಮ್ಮ ಸೈನಿಕರ ಮೇಲೆ ಬಾರೀ ಪ್ರಮಾಣದಲ್ಲಿ ಆಕ್ರಮಣ ಮಾಡುತ್ತಿರುತ್ತಾರೆ.

ಅದೇ ರೀತೀ, ಜಲ ಮಾರ್ಗದಲ್ಲಿ ಅಕ್ರಮವಾಗಿ ಮುಂಬೈ ಪ್ರವೇಶಿಸಿದ ಕೆಲ ಪಾಕೀಸ್ಥಾನದ ಉಗ್ರರು, ಮನಸೋ ಇಚ್ಚೆ ಜನರ ಮೇಲೆ ಗುಂಡನ್ನು ಹಾರಿಸಿ, ಮುಂಬೈ ಪ್ರತಿಷ್ಟಿತ ತಾಜ್ ಹೋಟೆಲ್ ಪ್ರವೇಶಿಸಿ, ಇಡೀ ಹೋಟೆಲನ್ನು ಆಕ್ರಮಿಸಿಕೊಂಡು ಬಿಡುತ್ತಾರೆ. ಇದಕ್ಕೆ ಪ್ರತಿಯಾಗಿ ಭಾರತೀಯ ಸೇನೆ ಹೋಟೆಲ್ ಸುತ್ತುವರೆದು ಹೋಟೆಲ್ಲಿನಲ್ಲಿರುವ ಉಗ್ರರನ್ನು ಸೆದೆಬಡಿಯಲು ನಾನಾರೀತಿಯ ಯೋಜನೆಗಳನ್ನು ರೂಪಿಸುತ್ತಿದ್ದರೆ ಸಾಗರೀಕಾ ಘೋಶ್ ಎಂಬ ವಿಕೃತ ಮನಸ್ಸಿನ ಹೆಂಗಸು ಹೊರಗೆ ನಡೆಯುತ್ತಿದ್ದ ಪ್ರತಿಯೊಂದು ನಡೆಗಳನ್ನು ತನ್ನ ಟಿವಿಯ ಮೂಲಕ ನೇರಪ್ರಸಾರ ಮಾಡುತ್ತಿದ್ದರೆ, ಒಳಗಿದ್ದ ಉಗ್ರರು ಅದಕ್ಕೆ ಪ್ರತಿರೋಧವಾಗಿ ತಮ್ಮ ಕಾರ್ಯಾಚರಣೆಯನ್ನು ನಿರ್ವಹಿಸುತ್ತಿರುತ್ತಾರೆ.

ಜಾಗತಿಕ ಮಟ್ಟದಲ್ಲಿ ನಮ್ಮ ದೇಶದ ಚಿತ್ರಣವನ್ನು ಕೆಟ್ಟದಾಗಿ ಚಿತ್ರಿಸಲು ಸದಾಕಾಲವೂ ಕಠಿ ಬದ್ದವಾಗಿರುವ ಅರುಂಧತಿ ರಾಯ್, ಬೃಂದಾ ಕಾರೇಟ್ ಹೀಗೆ ಹೇಳುತ್ತಾ ಹೋದಂತೆಲ್ಲಾ ಪಟ್ಟಿ ದೊಡ್ಡದಾಗುತ್ತಲೇ ಹೋಗುತ್ತದೆ.

JNU

ಜನರ ತೆರಿಗೆ ಹಣದಲ್ಲಿ ಸರ್ಕಾರದಿಂದ ಧನಸಹಾಯ ಪಡೆಯುವ ಜೆಎನ್‌ಯು, ಅಲಿಘಡ್ , ಇಸ್ಲಾಮಿಯಾ, ಉಸ್ಮಾನಿಯಾ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ಕನ್ಹಯ್ಯ ಕುಮಾರ್, ರೋಹಿತ್ ವೇಮುಲ, ಶಿರ್ಜೀಲ್ ಮುಂತಾದವರು ವಿದ್ಯಾರ್ಥಿಗಳ ಸೋಗಿನಲ್ಲಿ ಆಂತರಿಕ ದಂಗೆಯನ್ನು ಎಬ್ಬಿಸಿ ಭಾರತದಿಂದ ಸ್ವಾತಂತ್ರ್ಯವನ್ನು ಬಯಸುತ್ತಿದ್ದರೆ ಹಾರ್ದಿಕ್ ಪಟೇಲ್, ಅಲ್ಪೇಶ್ ಠಾಕೂರ್ ಮತ್ತು ಜಿಗ್ನೇಶ್ ಮೆಹ್ವಾನಿ ಯಂತಹವರು ಯುವ ನಾಯಕರ ಸೋಗಿನಲ್ಲಿ ಜಾತಿ ಆಧಾರಿತವಾಗಿ ದೇಶದ ಜನರನ್ನು ಎತ್ತಿ ಕಟ್ಟಿ ಭಾರತವನ್ನು ಒಳಗಿನಿಂದ ಛಿದ್ರಗೊಳಿಸಲು ಹರಸಾಹಸ ಪಡುತ್ತಿದ್ದಾರೆ.

ದೆಹಲಿಯ ಮಹಾನಗರ ಪಾಲಿಕೆಯ ಸದಸ್ಯನಾದ ತಾಹಿರ್ ಹುಸೇನ್ ವಿನಾಕಾರಣ ಜನರನ್ನು ರೊಚ್ಚಿಗೆಬ್ಬಿಸಿ ಸರ್ಕಾರಿ ಮತ್ತು ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ಹಾನಿ ಮಾಡಿದ್ದಲ್ಲದೇ ದೇಶದ ರಾಜಧಾನಿಯನ್ನು ಕೆಲದಿನಗಳ ಕಾಲ ಹೊತ್ತಿ ಉರಿಸುತ್ತಾನೆ.

tabligi2

ಸರ್ಕಾರದ ಆದೇಶವನ್ನೂ ಧಿಕ್ಕರಿಸಿ ಅಕ್ರಮವಾಗಿ ವಿದೇಶಗಳಿಂದ ಸಾವಿರಾರು ಸಂಖ್ಯೆಯಲ್ಲಿ ತಬ್ಲಿಘಿಗಳನ್ನು ದೆಹಲಿಗೆ ಕರೆಯಿಸಿ ಜಮಾತ್‌ ಧಾರ್ಮಿಕ ಸಭೆ ನಡೆಸಿ, ದೇಶಾದ್ಯಂತ ಈ ಪ್ರಮಾಣದಲ್ಲಿ ಕೂರೋನಾ ಹಬ್ಬಿಸಲು ಕಾರಣೀಭೂತನಾದವನೇ ಮೌಲಾನಾ ಸದ್

ಕೂರೋನಾ ಸೋಂಕನ್ನು ಪರೀಕ್ಷಿಸಲು ಹೋದ ಪೋಲೀಸರು, ವೈದ್ಯರು ದಾದಿಯರು ಮತ್ತು ಆಶಾ ಕಾರ್ಯಕರ್ತರ ಮೇಲೆ ಧಾಳಿ ನಡೆಸಿ ಅವರನ್ನು ಅವಾಚ್ಯ ಪದಗಳಿಂದ ನಿಂದಿಸುವಂತಹ ವಿಕೃತ ಮತಾಂಧರು

Stonepelging

ದೇಶವಿರೋಧಿಗಳು ನೀಡುವ ಎಂಜಲು ಕಾಸಿಗೆ ತಮ್ಮನ್ನು ಕಾಯಲು ಬಂದ ತಮ್ಮದೇ ದೇಶದ ಸೈನಿಕರ ವಿರುದ್ಧವೇ ಕಲ್ಲನ್ನು ತೂರುವ ಮತ್ತು ಅವರ ವಿರುದ್ಧ ಬಾಂಬ್ ಸ್ಪೋಟಿಸುವ ದಿಕ್ಕು ತಪ್ಪಿದ ಕಾಶ್ಮೀರೀ ಯುವಕರುಗಳು.

ತಾನೋಬ್ಬ ಅತೀ ಬುದ್ಧಿವಂತ ಎಂದು ಸದಾಕಾಲವೂ ಅತ್ಮರತಿ ಮಾಡಿಕೊಳ್ಳುವ ಬುದ್ಧ ಮತ್ತು ಭಗವಾನ್ ಮಹಾವೀರ್ ನಡುವಿನ ವ್ಯತ್ಯಾಸವನ್ನೂ ಅರಿಯದ ನಾನು ಹಿಂದೂ ಎನ್ನುವಂತಹ ಪುಸ್ತಕ ಬರೆದು ತನ್ನ ಹಿಂದೂ ಅಸ್ಮಿತೆಯನ್ನು ಪ್ರತಿಪಾದಿಸಿಕೊಳ್ಳಲು ಹೆಣಗಾಡುವ, ಹೇಳಬೇಕಾದದ್ದನ್ನು ನೇರವಾಗಿ ಹೇಳದೇ, ಸದಾ ಕ್ಲಿಷ್ಟಕರವಾಗಿಯೇ ಹೇಳುವ ಶಶಿ ತರೂರ್ ಎಂಬ ಸಾಂಸದ, ಅಮೇರಿಕಾದಲ್ಲೆಲ್ಲೋ ಪೆಟ್ರೋಲ್ ಬೆಲೆ ಕಡಿಮೆಯಾದರೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಕಡಿಮೆ ಏಕಾಗಲಿಲ್ಲಾ ವಿತಂಡ ವಾದವನ್ನು ಪ್ರತಿಪಾದಿಸಿ ಜನರ ದಿಕ್ಕನ್ನು ತಪ್ಪಿಸುತ್ತಿದ್ದಾರೆ.

ಕ್ರಿಕೆಟ್ ಆಟಗಾರನಾಗಿ ಪ್ರವರ್ಧಮಾನಕ್ಕೆ ಬಂದು ಬಿಜೆಪಿ ಸಂಸದನಾಗಿ ನಂತರ ವಯಕ್ತಿಕ ಕಾರಣಗಳಿಗೆ ಕಾಂಗ್ರೇಸ್ ಸೇರಿದೊಡನೇ ಇದ್ದಕ್ಕಿದ್ದಂತೆಯೇ ದೆವ್ವ ಮೆಟ್ಟಿದ ಹಾಗೆ ದೇಶವಿರೋಧಿಯಾದ ನವಜೋತ್ ಸಿಂಗ್ ಸಿದ್ದು. ತನ್ನ ಕ್ರಿಕೆಟ್ ಸಹ ಆಟಗಾರ ನೆರೆರಾಷ್ಟ್ರದ ಪ್ರಧಾನಿ ಆದನೆಂದು ಖುದ್ದಾಗಿ ಪಾಕೀಸ್ಥಾನಕ್ಕೆ ಅಭಿನಂದಿಸಲು ಹೋಗಿ ಅಲ್ಲಿಯ ಸೈನ್ಯಾಧಿಕಾರಿಯ ಹೆಗಲು ಮೇಲೆ ಕೈಹಾಕಿಕೊಂಡು ನಮ್ಮ ದೇಶದ ಸೈನ್ಯವು ಕೇವಲ ಅಲ್ಕಸಂಖ್ಯಾತರನ್ನು ಕೊಲ್ಲಲು ಮಾತ್ರ ಸಮರ್ಥವಾಗಿದೆ ಹೊರತು ಇನ್ನೇನೂ ಇಲ್ಲ ಎನ್ನುವಂತಹ ಉದ್ಧಟತನದ ಮಾತನ್ನು ಆಡುತ್ತಾನೆ.

ಅದೇ ಪಕ್ಷದ ಮತ್ತೊಬ್ಬ ಹಿರಿಯ ನಾಯಕ ಮಣಿ ಶಂಕರ್ ಆಯ್ಯರ್ ಗುಪ್ತವಾಗಿ ಶತೃರಾಷ್ಟ್ರ ಪಾಕೀಸ್ಥಾನಕ್ಕೆ ಹೋಗಿ ದೇಶದ ಪ್ರಧಾನ ಮಂತ್ರಿಗಳನ್ನು ಸೋಲಿಸಲು ಸಾಧ್ಯವಾದರೆ ಸಾಯಿಸಲು ಪಾಕಿಗಳ ಬೆಂಬಲವನ್ನು ಕೋರಿದ್ದು ಈಗ ರಹಸ್ಯವಾಗಿ ಏನೂ ಉಳಿದಿಲ್ಲ

ಉನ್ನತ ಮಟ್ಟದ ಅಧಿಕಾರದಲ್ಲಿದ್ದಾಗ ದೇಶದ ಸಂಪತ್ತನ್ನು ಸ್ವತಃ ಲೂಟಿ ಹೊಡೆದ ಚಿದಂಬರಂ, ಕಲ್ಮಡಿ, ಅಜಮ್ ಖಾನ್ ಅಂತಹವರು, ಮಲ್ಯ, ಚೋಕ್ಸಿ, ನೀರವ್ ಮೋದಿ ಅಂತಹವರಿಗೆ ಲೂಟಿ ಹೊಡೆಯಲು ಯಥಾ ಶಕ್ತಿ ಸಹಾಯ ಮಾಡಿ ವೃದ್ಧ ನಾರೀ ಪತಿವ್ರತಾ ಎನ್ನುವಂತೆ ಭ್ರಷ್ಟಾಚಾರದ ವಿರುದ್ಧ ಮಾತನಾಡುತ್ತಿದ್ದಾರೆ

ವಯಸ್ಸು ಐವತ್ತಾದರೂ ಯುವ ನಾಯಕ, ಭಾವೀ ಪ್ರಧಾನಿ ಎಂದು ಕಳೆದ ಹತ್ತು ವರ್ಷಗಳಿಂದಲೂ ಜನರನ್ನು ನಂಬಿಸಲು ಹೋಗಿ ವಿಫಲರಾಗಿರುವ ಚಿರಯೌವನಿಗ, ಅವಿವಾಹಿತ ರಾಹುಲ್ ಗಾಂಧಿ write off ಮತ್ತು waveoff ನಡುವಿನ ವೆತ್ಯಾಸ ಅರಿವಿದ್ದರೂ, ಜಾಣ ಕುರುಡನಂತೆ, ದೇಶ ಬಿಟ್ಟು ಓಡಿ ಹೋದವರ ಸಾಲವನ್ನು ಮನ್ನಾಮಾಡಿದ ಸರ್ಕಾರ ರೈತರ ಸಾಲವನ್ನೇಕೆ ಮನ್ನಾ ಮಾಡಲಿಲ್ಲ ಎಂದು ಗದ್ದಲ ವೆಬ್ಬಿಸಲು ಹೊರಟಿದ್ದಾನೆ.

ಪ್ರಪಂಚಾದ್ಯಂತ ಕೂರೋನ ಮಹಾಮಾರಿಯ ಸೋಂಕನ್ನು ತಡೆಯಲು ಲಾಕ್ ಡೌನ್ ಎಂಬುದು ಪ್ರಭಲ ಅಸ್ತ್ರ ಎಂಬುದನ್ನು ಪ್ರತ್ಯಕ್ಷವಾಗಿ ಮಾಡಿ ತೋರಿಸಿ, ಎಲ್ಲರೂ ನೆಮ್ಮದಿಯಿಂದ ಮನೆಯಲ್ಲಿ ಇರೀ ಎಂದು ಪ್ರಧಾನಿಗಳು ಪರಿ ಪರಿಯಾಗಿ ಬೇಡಿಕೊಂಡರೂ, ಈ ದೇಶದ ಕಾನೂನಿಗೆ ನಾವು ತಲೆ ಬಾಗೋದಿಲ್ಲ ಎಂದೂ ಎಗ್ಗಿಲ್ಲದೇ ಅಂಡೆಲೆಯುತ್ತಿರುವ ಕೆಲ ಮತಾಂಧ ಪುಂಡರು, ಲಾಕ್ ಡೌನ್ ಸಮಯದಲ್ಲಿಯೂ ಮದ್ಯವನ್ನು ಕಳ್ಳಸಾಗಣೆ ಮಾಡಲು ಹೋಗಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕೆಲ ಸಮಾಜ ಘಾತಕ ಕೃತ್ಯಗಳು ನಮ್ಮ ಕಣ್ಣ ಮುಂದೆಯೇ ಇದೆ.

ಹೀಗೆ ಆಂತರಿಕ ದೇಶದ್ರೋಹಿಗಳ ಪಟ್ಟಿಯನ್ನು ಮಾಡುತ್ತಾ ಹೋದರೆ ಇಡೀ ದಿನವೇ ಸಾಲಲಾರದು. ದೇಶ ಎಂದರೆ ಕೇವಲ ಸರ್ಕಾರವಲ್ಲ. ಸಾಂವಿಧಾನಾತ್ಮಕವಾಗಿ ಆಯ್ಕೆಯಾದ ಸರ್ಕಾರವನ್ನು ವಿರೋಧಿಸುವ ಹಕ್ಕು ಎಲ್ಲರಿಗೂ ಇದೆ. ಆಡಳಿತ ನಡೆಸುತ್ತಿರುವ ಕೆಲ ನಾಯಕರ ವಿರುದ್ಧ ಸೈದ್ಧಾಂತಿಕ ಭಿನ್ನಭಿಪ್ರಾಯಗಳು ಇರಲೂ ಬಹುದು ಆದರೆ ದೇಶ ವಿಪತ್ತಿನಲ್ಲಿದ್ದಾಗ ಎಲ್ಲಾ ರೀತಿಯ ವಿರೋಧಾಭಾಸಗಳನ್ನು ಬದಿಗಿಟ್ಟು ದೇಶದ ಪರವಾಗಿ ಒಗ್ಗಟ್ಟಾಗಿ ವಿಪತ್ತನ್ನು ಎದುರಿಸ ಬೇಕೇ ಹೊರತು ದೇಶವಿರೋಧಿ ಕೃತ್ಯವನ್ನು ಎಸೆಗುತ್ತಾ ಶತೃಗಳಿಗೆ ನೆರವಾಗುವುದು ಒಳ್ಳೆಯ ಲಕ್ಷಣವಲ್ಲ. ಜನ್ಮ ಕೊಟ್ಟ ತಾಯಿ ಮತ್ತು ಆಶ್ರಯ ನೀಡಿದ ದೇಶಕ್ಕೆ ದ್ರೋಹ ಬಗೆದವರನ್ನು ಯಾವ ಭಗವಂತನೂ ಕ್ಷಮಿಸಲಾರ.

ಸದ್ಯದ ಪರಿಸ್ಥಿತಿಯಲ್ಲಿ ಹೊರಗಿನ ಶತೃಗಳನ್ನು ಗುರುತಿಸಿ ಅವರನ್ನು ಸೂಕ್ತ ರೀತಿಯಲ್ಲಿ ಮಟ್ಟ ಹಾಕಬಹುದಾಗಿದೆ ಆದರೆ, ದೇಶದಲ್ಲಿಯೇ ಇದ್ದು ಕೊಂಡು ದೇಶ ವಿರೋಧಿ ಕೃತ್ಯವನ್ನೆಸೆಗುವ ಹಿತಶತೃಗಳನ್ನು ಕಂಡು ಹಿಡಿದು ಅವರನ್ನು ಶಿಕ್ಷಿಸುವುದು ನಿಜಕ್ಕೂ ಕಷ್ಟಸಾಧ್ಯವಾಗಿದೆ.

ಏನಂತೀರೀ?

ನಿಮ್ಮವನೇ ಉಮಾಸುತ

4 thoughts on “ಹಿತಶತೃಗಳು

  1. ಸರಕಾರಕ್ಕೆ ಗೊತ್ತಿದೆ. ಇಂಥ ಹಿತಶತ್ರುಗಳನ್ನು ಬಗ್ಗುಬಡಿಯಲು ಷಂಡತನ ತೋರುತ್ತಿರುವುದು ದುರದೃಷ್ಟಕರ. ಸಾರ್ವಜನಿಕರೇ ಇಂತ ಕೃತ್ಯ ಮಾಡುವವರ ದಮನ ಕಾರ್ಯ ಕೈಗೊಳ್ಳಬೇಕು ಅಷ್ಟೇ

    Liked by 1 person

    1. ನಿಮ್ಮ‌ ಅಭಿಪ್ರಾಯಕ್ಕೆ ನನ್ನ ಸಹಮತವೂ ಇದೆ. ಇಂತಹ ಹಿತಶತ್ರುಗಳನ್ನು ಬಗ್ಗುಬಡಿಯುವುವ ಇಚ್ಛಾಶಕ್ತಿಯನ್ನು‌ ನಮ್ಮನಾಳುತ್ತಿರುವ ನಾಯಕರು‌ ಈ ಕೂಡಲೇ ರೂಢಿಸಿಕೊಳ್ಳ ಬೇಕಷ್ಟೇ.

      Like

  2. ಭಾರತದ ಹಿತಶತ್ರುಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದ್ದೀರಾ……. ಧನ್ಯವಾದಗಳು. 🙏🏻

    ಪ್ರತಿಯೊಬ್ಬ ಭಾರತೀಯನೂ ಈ ವಿಷಯದಲ್ಲಿ ಜಾಗೃತರಾಗಬೇಕು.
    ದೇಶ ಮೊದಲು ಎನ್ನುವ ಮನೋಭಾವ ಬೆಳೆಸಿಕೊಳಬೇಕು.

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s