ನಿತ್ಯೋತ್ಸವ ಕವಿ ಕೆ. ಎಸ್. ನಿಸಾರ್ ಅಹಮದ್

ಸಾಮಾನ್ಯವಾಗಿ ಯಾವುದೇ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವಾಗಲೀ, ಅಥವಾ ಸುಗಮ ಸಂಗೀತ ಅಥವಾ ರಸಸಂಜೆ/ಆರ್ಕೆಸ್ಟ್ರಾಗಳಲ್ಲಿ ಆಯಾಯಾ ಗಾಯಕ/ಗಾಯಕಿಕರು ತಮ್ಮ ಇಷ್ಟ ಪಟ್ಟ ಲೇಖಕರ ಹಾಡುಗಳನ್ನು ಹಾಡುವುದು ಸಹಜ. ಆದರೆ ಬಹುತೇಕ ಸುಗಮ ಸಂಗೀತಗಾರರು ಒಬ್ಬ ಗಾಯಕರ ಹಾಡನ್ನು ತಮ್ಮ ಪ್ರತೀ ಕಾರ್ಯಕ್ರಮಗಳಲ್ಲಿ ಹಾಡುತ್ತಾರೆಂದರೆ ಆ ಕವಿಯ ಕವನಗಳು ಹೇಗಿರುತ್ತದೆ ಎಂಬುದಕ್ಕೆ ಅತ್ಯುತ್ತಮ ಉದಾಹರಣೆ. ಅದು ಜೋಗದ ಸಿರಿಯಾಗಿರಬಹುದು, ಕುರಿಗಳು ಸಾರ್ ಕುರಿಗಳು ಅಥವಾ ಬೆಣ್ಣೆ ಕದ್ದಾ ನಮ್ಮ ಕೃಷ್ಣಾ ಇರಬಹುದು. ಹೇ ಇಷ್ಟೆಲ್ಲಾ ಪೀಠಿಕೆ ಹಾಕಿದ ಮೇಲೆ ಇವತ್ತಿನ… Read More ನಿತ್ಯೋತ್ಸವ ಕವಿ ಕೆ. ಎಸ್. ನಿಸಾರ್ ಅಹಮದ್

ನಾ. ಡಿಸೋಜ

ನಾ. ಡಿಸೋಜಾ. ಆವರ ಮಾತೃಭಾಷೆ ಕೊಂಕಣಿ ಆದರೂ ಅಪ್ಪಟ ಕನ್ನಡಿಗ, ಆಚರಿಸುವುದು ಕ್ರೈಸ್ತ ಧರ್ಮವಾದರೂ ಅಪ್ಪಟ ಭಾರತೀಯ. ಕೇವಲ ಕವಿಯಲ್ಲದೇ, ಅಪ್ಪಟ ಪರಿಸರವಾದಿಯಾದ ನಾ. ಡಿಸೋಜಾವರು ಭಾನುವಾರ 2025ರ ಜನವರಿ 5ರ ರಾತ್ರಿ ನಿಧನರಾಗಿರುವುದು ಬಹಳ ದುಃಖಕರವಾದ ವಿಷಯವಾಗಿದ್ದು ಅವರ ವ್ಯಕ್ತಿ ವ್ಯಕ್ತಿತ್ವ ಮತ್ತು ಸಾಧನೆಗಳ ಕುರಿತಾಗಿ ತಿಳಿಯೋಣ ಬನ್ನಿ.… Read More ನಾ. ಡಿಸೋಜ

ಗಾನ ಗಾರುಡಿಗ ಮೈಸೂರು ಅನಂತಸ್ವಾಮಿ

ಕನ್ನಡ ಸುಗಮ ಸಂಗೀತದ ಪ್ರವರ್ತಕರಾಗಿ ಕನ್ನಡದ ಬಹುತೇಕ ಕವಿಗಳ ಭಾವಗೀತೆಗಳಿಗೆ ಧ್ವನಿಯಾಗಿದ್ದ ಶ್ರೀ ಪಿ ಕಾಳಿಂಗರಾಯರ ಕುರಿತು ಹಿಂದಿನ ಮಾಲಿಕೆಯಲ್ಲಿ ಪರಿಚಯ ಮಾಡಿಕೊಂಡ ಮೇಲೆ ನಾವಿಂದು ಅವರ ಉತ್ತರಾಧಿಕಾರಿಗಳ ಪರಿಚಯ ಮಾಡಿಕೊಳ್ಳಲೇ ಬೇಕಲ್ಲವೆ? ತಮ್ಮ ಅದ್ಭುತ ಗಾಯನ ಮತ್ತು ರಾಗ ಸಂಯೋಜನೆಗಳಿಂದ ಸುಗಮ ಸಂಗೀತ ಕ್ಷೇತ್ರದ ಅನುಭಿಷಕ್ತ `ದೊರೆಯಾಗಿ ಮೆರೆದವರು, ಮ್ಯಾಂಡೊಲಿನ್, ತಬಲ, ಕೊಳಲು, ಹಾರ್ಮೋನಿಯಂ ಮುಂತಾದ ವಾದ್ಯಗಳನ್ನು ಸುಲಲಿತವಾಗಿ ನುಡಿಸಬಲ್ಲವರೂ ಮತ್ತು ಕವನಗಳನ್ನು ರಚಿಸಬಲ್ಲ ಸಾಮರ್ಥ್ಯ ಹೊಂದಿದ್ದಂತಹ ಶ್ರೀ ಮೈಸೂರು ಅನಂತಸ್ವಾಮಿಗಳ ಬಗ್ಗೆ ನಾವಿಂದು ಅರಿತುಕೊಳ್ಳೋಣ.… Read More ಗಾನ ಗಾರುಡಿಗ ಮೈಸೂರು ಅನಂತಸ್ವಾಮಿ

ಗಾಯನ ಚಕ್ರವರ್ತಿ ಪಿ ಕಾಳಿಂಗರಾವ್

ಮನುಷ್ಯರಿಗೆ ಸುಖಃ ಇಲ್ಲವೇ ದುಃಖದ ಸಂದರ್ಭದಲ್ಲಿ ಎಲ್ಲಿಯಾದರೂ ಯಾರಾದರೂ ಸ್ರುಶ್ರಾವ್ಯವಾದ ಸಂಗೀತ ಕೇಳಿದೊಡನೆಯೇ ಅವರ ಮನಸ್ಸು ಹಗುರವಾಗುವುದು. ಅದು ಶಾಸ್ತ್ರೀಯ ಸಂಗೀತವಿರಬಹುದೂ, ಚಿತ್ರಗೀತೆಗಳಾಗಿರಬಹುದು, ಜನಪದ ಗೀತೆಗಳಿರಬಹುದು ಇಲ್ಲವೇ ಭಾವ ಗೀತೆಗಳಿರಬಹುದು ಈ ರೀತಿಯಾಗಿ ಎಲ್ಲಾ ಸಂಗೀತದ ಪ್ರಾಕಾರಗಳಲ್ಲಿಯೂ ಸಿದ್ಧಹಸ್ತರಾಗಿದ್ದ ಸುಮಾರು ಮೂರು ದಶಕಗಳ ಕಾಲ ಕರ್ನಾಟಕದ ಸಂಗೀತ ಪ್ರಿಯರನ್ನು ರಂಜಿಸಿದ ಪಿ ಕಾಳಿಂಗರಾವ್ ಎಲ್ಲರ ಪ್ರೀತಿಯ ಕಾಳಿಂಗ ರಾಯರ ಬಗ್ಗೆ ನಾವಿಂದು ತಿಳಿದುಕೊಳ್ಳೋಣ. ಉಡುಪಿ ಜಿಲ್ಲೆಯ ಆರೂರಿನ ನಾರಾಯಣರಾವ್‌ (ಪಾಂಡೇಶ್ವರ ಪುಟ್ಟಯ್ಯ) ಮತ್ತು ನಾಗರತ್ನಮ್ಮ ದಂಪತಿಗಳಿಗೆ 31-8-1914ರಲ್ಲಿ… Read More ಗಾಯನ ಚಕ್ರವರ್ತಿ ಪಿ ಕಾಳಿಂಗರಾವ್

ಜಾನಪದ ಜಂಗಮ ಎಸ್. ಕೆ. ಕರೀಂ ಖಾನ್

1962ರಲ್ಲಿ ಸ್ವರ್ಣಗೌರಿ ಎಂಬ ಪೌರಾಣಿಕ ಕನ್ನಡ ಚಲನಚಿತ್ರ ಬಿಡುಗಡೆಯಾಗುತ್ತದೆ. ಆ ಚಿತ್ರದ ಅಷ್ಟೂ ಹಾಡುಗಳು ಮತ್ತು ಸಂಭಾಷಣೆ ಜನರ ಮನಸ್ಸೂರೆಗೊಂಡು ಚಲನಚಿತ್ರವೂ ಅತ್ಯಂತ ಯಶಸ್ವಿಯಾಗಿ, ದಿನಬೆಳಗಾಗುವುದರೊಳಗೆ ಆ ಚಿತ್ರದ ಸಾಹಿತಿ ಕರ್ನಾಟಕಾದ್ಯಂತ ಮನೆ ಮಾತಾಗುತ್ತಾರೆ. ಮುಂದೆ ಆ ಹಾಡುಗಳ ರಚನೆಗಾಗಿ ರಾಷ್ಟ್ರಪ್ರಶಸ್ತಿಯೂ ದೊರಕುತ್ತದೆ. ಒಬ್ಬ ಸಹೃದಯ ಕವಿ, ಸ್ವಾಭಿಮಾನಿ, ಸ್ವಾತಂತ್ರ್ಯ ಹೋರಾಟಗಾರ, ಅಪ್ಪಟ ಗಾಂಧೀವಾದಿ,ಜಾನಪದ ತಜ್ಞ, ಸುಶ್ರಾವ್ಯ ಹಾಡುಗಾರ, ಸರ್ವ ಧರ್ಮ ಸಹಿಷ್ಣುಗಾಳಾಗಿದ್ದ ಶ್ರೀ ಎಸ್. ಕೆ. ಕರೀಂ ಖಾನ್ ಆವರ ಬಗ್ಗೆ ತಿಳಿದುಕೊಳ್ಳೋಣ. ಅಫ್ಘಾನಿಸ್ಥಾನದ ಕಾಬೂಲ್‌ನ… Read More ಜಾನಪದ ಜಂಗಮ ಎಸ್. ಕೆ. ಕರೀಂ ಖಾನ್

ರೆವರೆಂಡ್ ಫರ್ಡಿನ್ಯಾಂಡ್‌ ಕಿಟೆಲ್‌

ದೂರದ ಜರ್ಮನಿಯಿಂದ ಕ್ರೈಸ್ತ ಮತ ಪ್ರಚಾರಕರಾಗಿ ಭಾರತಕಕ್ಕೆ, ಅದರಲ್ಲೂ ಕರ್ನಾಟಕಕ್ಕೆ ಬಂದು, ಕನ್ನಡಿಗರಿಗಿಂತಲೂ ಹೆಚ್ಚಾಗಿ ಕನ್ನಡ ಕಲಿತು, ಕನ್ನಡಕ್ಕೊಂದು ಶಾಶ್ವತವಾದ ನಿಘಂಟನ್ನು ರಚಿಸಿಕೊಟ್ಟ ಶ್ರೀ ರೆವರೆಂಡ್ ಫರ್ಡಿನ್ಯಾಂಡ್‌ ಕಿಟೆಲ್‌ ಕುರಿತಾದ ಅಪರೂಪದ ಮಾಹಿತಿಗಳು ಇದೋ ನಿಮಗಾಗಿ… Read More ರೆವರೆಂಡ್ ಫರ್ಡಿನ್ಯಾಂಡ್‌ ಕಿಟೆಲ್‌

ನವ್ಯ ಕವಿ ಗೋಪಾಲಕೃಷ್ಣ ಅಡಿಗ

ತಮ್ಮ ಸೈದ್ಧಾಂತಿಕ ನಿಲುವುಗಳಿಂದಾಗಿಯೇ ಅನೇಕ ಮಾನ ಸನ್ಮಾನಗಳು ಮತ್ತು ಪ್ರಶಸ್ತಿಗಳಿಂದ ವಂಚಿತರಾದರೂ, ನೂರಾರು ನವ್ಯ ಲೇಖಕರಿಗೆ ಅಂದಿಗೂ ಇಂದಿಗೂ ಪ್ರೇರಣಾದಾಯಿಗಳಾಗಿರುವ ಶ್ರೀ ಎಂ. ಗೋಪಾಲ ಕೃಷ್ಣ ಅಡಿಗರು ೧೦೬ನೇ ಜಯಂತಿಯಂದು ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಕಿರುನೋಟ ಇದೋ ನಿಮಗಾಗಿ… Read More ನವ್ಯ ಕವಿ ಗೋಪಾಲಕೃಷ್ಣ ಅಡಿಗ

ಕನ್ನಡದ ಕಣ್ವ  ಬಿ.ಎಂ.ಶ್ರೀಕಂಠಯ್ಯ

ಕರುಣಾಳು ಬಾ ಬೆಳಕೆ ಮಸುಕಿದೀ ಮಬ್ಬಿನಲಿ ಕೈ ಹಿಡಿದು ನಡೆಸೆನ್ನನು| ಇರುಳು ಕತ್ತಲೆಯ ಗವಿ ಮನೆ ದೂರ ಕನಿಕರಿಸಿ ಕೈ ಹಿಡಿದು ನಡೆಸೆನ್ನನು|| ಈ ಹಾಡನ್ನು ಕೇಳದಿರುವ ಕನ್ನಡಿಗನೇ ಇಲ್ಲ ಎಂದರೂ ತಪ್ಪಾಗಲಾರದು. ಈ ಕವಿತೆ ಮೂಲತಃ ಆಂಗ್ಲ ಸಾಹಿತಿ ಶ್ರೀ ನ್ಯೂಮನ್ ಅವರು ಬರೆದ Lead Kindly Light ಎಂಬ ಕವಿತೆಯ ಕನ್ನಡದ ಅನುವಾದ ಎಂದರೆ ಆಶ್ವರ್ಯವಾಗುತ್ತದಲ್ಲವೇ? ಹೌದು ಇಂಗ್ಲೀಷ್ ಭಾಷೆಯ ಅನೇಕ ಸುಪ್ರಸಿದ್ದ ಕೃತಿಗಳನ್ನು ಕನ್ನಡದ ಸೊಗಡಿಗೆ ತಕ್ಕಂತೆ ಇಲ್ಲಿಯ ಸಂಸ್ಕೃತಿಗೆ ಹೊಂದುವಂತೆ ಕನ್ನಡಕ್ಕೆ… Read More ಕನ್ನಡದ ಕಣ್ವ  ಬಿ.ಎಂ.ಶ್ರೀಕಂಠಯ್ಯ

ಮಾಸ್ತಿ ವೆಂಕಟೇಶ ಐಯ್ಯಂಗಾರ್

ನಾನಿಂದು  ದೇಶದ ಕಾಫೀ ಕಣಜ ಕೊಡಗಿಗೆ ಕಛೇರಿಯಿಂದ ವಿಹಾರ್ಥವಾಗಿ ಬಂದಿದ್ದೆ.  ಎಲ್ಲರಂತೆ ಸುಮ್ಮನೇ ಜಾಗಗಳನ್ನು ನೋಡುತ್ತ ಹೋಗದೇ,  ಅಲ್ಲಿಯ ಸಂಸ್ಕೃತಿ,  ಇತಿಹಾಸ, ಭಾಷೆ ಜನರ ಬಗ್ಗೆ ತಿಳಿಯುವುದು ನನ್ನ ವಾಡಿಕೆ.   ಒಂದು ಪಕ್ಷ ಅದು ಕುತೂಹಲವಾಗಿದ್ದಲ್ಲಿ ಅದನ್ನು ಎಲ್ಲರೊಡನೆ ಹಂಚಿಕೊಳ್ಳುವ ಸ್ವಭಾವ ನನ್ನದು ಇಂದು ಕೊಡಗಿನ ಕುರಿತು ವಿಚಾರಿಸುತ್ತಿದ್ದಾಗ, ಸ್ವಾತಂತ್ರ್ಯಪೂರ್ವ ಕೊಡಗೇ ಒಂದು ಸಣ್ಣ ರಾಜ್ಯವಾಗಿದ್ದು  ಕೊಡಗನ್ನು ಆಳುತ್ತಿದ್ದ ಚಿಕವೀರ ರಾಜೇಂದ್ರನನ್ನು ಟಿಪ್ಪು ಸುಲ್ತಾನ್ ಮೋಸದಿಂದ ಸೋಲಿಸಿ ಸಾವಿರಾರು ಕೊಡವರನ್ನು ಹತ್ಯೆಗೈದು ಕೊಡಗನ್ನು ಮೈಸೂರು ಸಂಸ್ಥಾನಕ್ಕೆ ಸೇರಿಸಿಕೊಂಡು… Read More ಮಾಸ್ತಿ ವೆಂಕಟೇಶ ಐಯ್ಯಂಗಾರ್