ಶ್ರೇಯಾಂಕಾ ಪಾಟೀಲ್ ಮತ್ತು ಈ ಸಲ ಕಪ್ ನಮ್ದು

IPLನಲ್ಲಿ, RCB ತಂಡದವರು ಈ ಸಲಾ ಕಪ್ ನಮ್ದೇ.. ನಮ್ದೇ ಅಂತ ಹೇಳ್ತಾ ಇದ್ರೂ, ಕಪ್ ಗೆಲ್ಲಲು ಪರದಾಡುತ್ತಿರುವಾಗಲೇ, ಈ ಬಾರಿ RCB ಮಹಿಳಾ ತಂಡದವರು, ಭರ್ಜರಿಯಾಗಿ ಪ್ರಶಸ್ತಿಯನ್ನು ಗೆಲ್ಲುವುದರ ಹಿಂದೆ ಕನ್ನಡತಿ ಶ್ರೇಯಾಂಕ ಪಾಟೀಲಳ ಕೊಡುಗೆ ಅಪಾರವಾಗಿದ್ದು, ಆಕೆಯ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯ ಇದೋ ನಿಮಗಾಗಿ… Read More ಶ್ರೇಯಾಂಕಾ ಪಾಟೀಲ್ ಮತ್ತು ಈ ಸಲ ಕಪ್ ನಮ್ದು

ಖೇಲ್ ಖೋಜ್ ದೇಸೀ ಆಟಗಳ ಉತ್ಸವ

ನಮ್ಮ ದೇಶದಲ್ಲಿ ಆಟ ಎಂದರೆ ಕೇವಲ ಕ್ರಿಕೆಟ್, ಪುಟ್ ಬಾಲ್, ವಾಲಿಬಾಲ್, ಟೆನ್ನಿಸ್ ಗಳಷ್ಟೇ ಸೀಮಿತವಾಗಿ, ನಮ್ಮ ಗ್ರಾಮೀಣ ಸೊಗಡಿನ ಆಟಗಳಾದ ಮರಕೋತಿ, ಬುಗರಿ, ಚಿನ್ನಿ ದಾಂಡು, ಗೋಲಿ ಮುಂತಾದ ಆಟಗಳು ನೇಪತ್ಯಕ್ಕೆ ಸರಿದು ಹೋಗಿರುವ ಸಂಧರ್ಭದಲ್ಲಿ ಸುಮಾರು 34+ ದೇಸೀ ಆಟಗಳನ್ನು ಒಂದೇ ಸ್ಥಳದಲ್ಲಿ ಆಡಿಸುವಂತಹ ಖೇಲ್ ಖೋಜ್ ಎಂಬ ವಿನೂತನ ಕ್ರೀಡೋತ್ಸವವನ್ನು ರೇವಾ ವಿಶ್ವವಿದ್ಯಾಲಯವು ಇದೇ ಶನಿವಾರ ಫೆಬ್ರವರಿ 10, 2024 ರಂದು ಆಯೋಜಿಸಲಾಗಿದ್ದು ಅದರ ಸಂಪೂರ್ಣ ವಿವರಗಳು ಇದೋ ನಿಮಗಾಗಿ… Read More ಖೇಲ್ ಖೋಜ್ ದೇಸೀ ಆಟಗಳ ಉತ್ಸವ

ಏಂಜಿಲೋ ಮ್ಯಾಥ್ಯೂಸ್ ಟೈಮ್ ಔಟ್

ಶ್ರೀಲಂಕ ಮತ್ತು ಬಾಂಗ್ಲಾ ದೇಶಗಳ ನಡುವಿನ ವಿಶ್ವಕಪ್ಪಿನ 38ನೇ ಪಂದ್ಯದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಮೊತ್ತ ಮೊದಲ ಬಾರಿಗೆ ಟೈಮ್ ಔಟ್ ಅದ ಆಟಗಾರ ಎಂಬ ವಿಲಕ್ಷಣ ದಾಖಲೆಗೆ ಪಾತ್ರರಾದ ಶ್ರೀಲಂಕದ ಆಲ್‌ರೌಂಡರ್ ಏಂಜೆಲೊ ಮ್ಯಾಥ್ಯೂಸ್ ಕುರಿತಾದ ಅಪರೂಪದ ಮಾಹಿತಿಯ ಜೊತೆಗೆ ಕ್ರಿಕೆಟ್ಟಿನ ವಿವಿಧ ರೀತಿಯ ಔಟ್ ಗಳು ಕುರಿತಾದ ವಿಶೇಷವಾದ ಲೇಖನ ಇದೋ ನಿಮಗಾಗಿ… Read More ಏಂಜಿಲೋ ಮ್ಯಾಥ್ಯೂಸ್ ಟೈಮ್ ಔಟ್

ಫುಟ್ಬಾಲ್ ದಂತ ಕಥೆ ಜರ್ಸಿ #10, ಪೀಲೆ

ಬ್ರೆಜಿಲ್ಲಿನ ಸಾಮಾನ್ಯ ಕಪ್ಪು ಜನರ ಹುಡುಗ, ತನ್ನ ಅಮೋಘವಾದ ಆಟದಿಂದಾಗಿ ತನ್ನ ದೇಶ ಬ್ರಿಜಿಲ್ಲಿಗೆ ಮೂರು ಬಾರಿ ವಿಶ್ವಕಪ್ ಗೆಲ್ಲಿಸಿಕೊಡುವ ಮೂಲಕ ವಿಶ್ವವಿಖ್ಯಾತನಾಗಿದ್ದ ಪುಟ್ಬಾಲ್ ಆಟಗಾರ ಪೀಲೆ ನೆನ್ನೆ ಸಂಜೆ ನಿಧನರಾಗಿರುವುದು ನಿಜಕ್ಕೂ ಬೇಸರ ಸಂಗತಿಯಾಗಿದೆ. ಪೀಲೆ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಕಿರು ಪರಿಚಯ ಇದೋ ನಿಮಗಾಗಿ… Read More ಫುಟ್ಬಾಲ್ ದಂತ ಕಥೆ ಜರ್ಸಿ #10, ಪೀಲೆ

ಕೃಷ್ಣಮಾಚಾರಿ ಶ್ರೀಕಾಂತ್ (ಚೀಕಾ)

ಗವಾಸ್ಕರ್ ಅವರ ನಿಧಾನಗತಿಯ ದೃಢ ಬ್ಯಾಟಿಂಗ್, ಗುಂಡಪ್ಪ ವಿಶ್ವನಾಥ್ ಅವರ ಆಕರ್ಷಕ ಬ್ಯಾಟಿಂಗ್ ದಿನಗಳಲ್ಲಿ ತಮ್ಮದೇ ಆದ ಅಪೂರ್ವ ರೀತಿಯಾದ ಹೊಡೀ ಬಡೀ ಶೈಲಿಯ ಬ್ಯಾಟಿಂಗ್ ನಿಂದ ಭಾರತೀಯ ಕ್ರಿಕೆಟ್ಟಿಗೆ ಒಂದು ರೀತಿಯ ವಿಶೇಷ ಮೆರುಗನ್ನು ತಂದು ಕೊಡುವ ಮೂಲಕ ಇಂದಿಗೂ ಸಹಾ ಕೋಟ್ಯಾಂತರ ಕ್ರಿಕೆಟ್ ಪ್ರೇಮಿಗಳ ಹೃದಯದಲ್ಲಿರುವ ಕೃಷ್ಣಮಾಚಾರಿ ಶ್ರೀಕಾಂತ್ ಅವರ ಕ್ರಿಕೆಟ್ ಜಗತ್ತಿನ ಏಳು ಬೀಳುಗಳ ಸುಂದವಾದ ಇಣುಕು ನೋಟ ಇದೋ ನಿಮಗಾಗಿ… Read More ಕೃಷ್ಣಮಾಚಾರಿ ಶ್ರೀಕಾಂತ್ (ಚೀಕಾ)

ಕೆರೆಯ ನೀರನು ಕೆರೆಗೆ ಚಲ್ಲುವ ಸ್ಯಾಡಿಯೊ ಮಾನೆ

ಆಫ್ರಿಕನ್ ಖಂಡದ ಸೆನೆಗಲ್ ಎಂಬ ದೇಶದ ಅತ್ಯದ್ಭುತ ಫುಟ್ಬಾಲ್ ವೃತ್ತಿ ಪರ ಆಟಗಾರನಾದ ತಮ್ಮ ಒತ್ತುವಿಕೆ, ಡ್ರಿಬ್ಲಿಂಗ್ ಮತ್ತು ವೇಗಕ್ಕೆ ಹೆಸರುವಾಸಿಯಾಗಿ ಆಫ್ರಿಕ ಖಂಡದ ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾದ, ತಮ್ಮ ಸಂಪಾದನೆಯಿಂದ ವರ್ಷಕ್ಕೆ $14 ಮಿಲಿಯನ್ ಹಣವನ್ನು ತಮ್ಮ ದೇಶದಲ್ಲಿ ಅಗತ್ಯ ಇರುವವರಿಗೆ ದಾನ ಮಾಡಲೆಂದೇ ಮೀಸಲಾಗಿಡುವ ಮೂಲಕ ಹೆಸರುವಾಸಿಯಾಗಿರುವ ಸ್ಯಾಡಿಯೊ ಮಾನೆ ಅವರ ವ್ಯಕ್ತಿ ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯ ಇದೋ ನಿಮಗಾಗಿ… Read More ಕೆರೆಯ ನೀರನು ಕೆರೆಗೆ ಚಲ್ಲುವ ಸ್ಯಾಡಿಯೊ ಮಾನೆ

ಕತಾರ್ ವಿಶ್ವಕಪ್ ಪುಟ್ಬಾಲ್ ಪಂದ್ಯಾವಳಿಯ ಅಲ್ ರಿಹ್ಲಾ ಚಂಡುಗಳ ವಿಶೇಷತೆಗಳು

ಪುಟ್ಬಾಲ್ ಆಟ ಆಟಗಾರರ ಕಾಲ್ಚಳಕದ ಅನುಗುಣವಾಗಿ ಅತ್ಯಂತ ವೇಗವಾಗಿ ಆಡುವ ಆಟವಾಗಿದ್ದು, ಚಂಡಿನ ಚಲನವಲನದ ಬಗ್ಗೆ ನಿಖರವಾದ ತೀರ್ಪು ನೀಡುವುದು ತುಸು ತ್ರಾಸವಾಗಿರುವುದನ್ನು ಮನಗಂಡ FIFA, ಈ ಬಾರಿಯ ಕತಾರ್ ವಿಶ್ವಕಪ್ ಪಂದ್ಯಾವಳಿಯಲ್ಲಿ ವಿಶೇಷ ತಂತ್ರಜ್ಣಾನ ಅಳವಡಿಸಿರುವ ಅಲ್ ರಿಹ್ಲಾ ಚಂಡುಗಳನ್ನು ಬಳಸುತ್ತಿರುವುದು ವಿಶೇಷವಾಗಿದೆ.

ಹಾಗಾದರೆ ಈ ಅಲ್ ರಿಹ್ಲಾ ಚಂಡುಗಳ ವಿಶೇಷತೆ ಏನು? ಅದನ್ನು ಆವಿಷ್ಕರಿಸಿದವರು ಯಾರು? ಈ ಚಂಡುಗಳು ಪಂದ್ಯಗಳ ಫಲಿತಾಂಶದ ಮೇಲೆ ಯಾವ ರೀತಿಯಾಗಿ ಪರಿಣಾಮ ಬೀರುತ್ತದೆ ಎಂಬುದರ ಸವಿವರ ಇದೋ ನಿಮಗಾಗಿ… Read More ಕತಾರ್ ವಿಶ್ವಕಪ್ ಪುಟ್ಬಾಲ್ ಪಂದ್ಯಾವಳಿಯ ಅಲ್ ರಿಹ್ಲಾ ಚಂಡುಗಳ ವಿಶೇಷತೆಗಳು

ಭಾರತೀಯ ಹಾಕಿಯ ದಂತಕಥೆ ಮತ್ತು ಹಾಕಿ ಮಾಂತ್ರಿಕ ಧ್ಯಾನ್ ಚಂದ್

ಅದು 1936 ಇಡೀ ಪ್ರಪಂಚದಲ್ಲಿ ತಾನು ಹೆಚ್ಚು ನಾನು ಹೆಚ್ಚು ಎನ್ನುವ ಉತ್ತುಂಗಕ್ಕೇರಿದ ರಾಜಕೀಯ ಬೆಳವಣಿಗೆಗಳ ಪರ್ವ. ಇಡೀ ಪ್ರಪಂಚವೇ ಭಾರಿ ಆರ್ಥಿಕ ಕುಸಿತ ಎದುರಿಸುತ್ತಿದ್ದರೂ, ಜರ್ಮನಿಯನ್ನು ಆಳುತ್ತಿದ್ದ ಅಡಾಲ್ಫ್ ಹಿಟ್ಲರ್ ತನ್ನ ರಾಷ್ಟ್ರ ಉಳಿದೆಲ್ಲಾ ರಾಷ್ಟ್ರಗಳಿಗಿಂತಲೂ ಅತ್ಯಂತ ಶಕ್ತಿಶಾಲಿ ರಾಷ್ಟ್ರವೆಂದು ಪ್ರಸ್ತುತಪಡಿಸಲು ತನ್ನೆಲ್ಲಾ ತಾಂತ್ರಿಕ ಮತ್ತು ಮಿಲಿಟರಿ ಶಕ್ತಿಯನ್ನು ಫಣಕ್ಕಿಟ್ಟಿದ್ದಂತಹ ಕಾಲ. 1932ರಲ್ಲಿ ಅಮೇರಿಕಾದ ಲಾಸ್ ಏಂಜಲೀಸ್ ನಡೆದ ಓಲಂಪಿಕ್ಸ್ ಕ್ರೀಡಾಕೂಟಕ್ಕಿಂತಲೂ ಅತ್ಯಂತ ವಿಜೃಂಭಣೆಯಿಂದ ತನ್ನ ದೇಶದಲ್ಲಿ ನಡೆಯಬೇಕೆಂದು 1936 ರಲ್ಲಿ ಬರ್ಲಿನ್ ನಗರದಲ್ಲಿ ಓಲಂಪಿಕ್ಸ್… Read More ಭಾರತೀಯ ಹಾಕಿಯ ದಂತಕಥೆ ಮತ್ತು ಹಾಕಿ ಮಾಂತ್ರಿಕ ಧ್ಯಾನ್ ಚಂದ್

ವಿದ್ಯಾರಣ್ಯಪುರದ 2022ರ ಯೋಗ ದಿನಾಚರಣೆ

ಎಂಟು ವರ್ಷಗಳ ಹಿಂದೆ 2014ರಲ್ಲಿ ನಮ್ಮ ಹೆಮ್ಮೆಯ ಪ್ರಧಾನಿಗಳು ವಿಶ್ವಸಂಸ್ಥೆಯಲ್ಲಿ ಯೋಗದ ಈ ಯೋಗದ ಉಪಯುಕ್ತತೆಯನ್ನು ತಿಳಿಸಿ, ಅದರ ಸದುಪಯೋಗವನ್ನು ಇಡೀ ವಿಶ್ವವೇ ಸದ್ಬಳಿಕೆ ಮಾಡಿಕೊಳ್ಳುವ ಹಾಗೆ ಕಾರ್ಯಕ್ರಮವನ್ನು ರೂಪಿಸುವ ಬಗ್ಗೆ ಪ್ರಸ್ತಾಪನೆ ಮಾಡಿದಕ್ಕೆ ಸುಮಾರು 140ಕ್ಕೂ ಹೆಚ್ಚು ರಾಷ್ಟ್ರಗಳೂ ಒಕ್ಕೊರಿಲಿನಿಂದ ಬೆಂಬಲಿಸಿದ ಪರಿಣಾಮವಾಗಿಯೇ ಪ್ರತೀ ವರ್ಷ ಜೂನ್ 21ರಂದು ವಿಶ್ವ ಯೋಗದಿನಾಚರಣೆಯನ್ನು ಆಚರಿಸಲು ನಿರ್ಧರಿಸಲಾಯಿತು. ಇದರ ಭಾಗವಾಗಿಯೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಸಮಿತಿ ಬೆಂಗಳೂರು ಆಶ್ರಯದಲ್ಲಿ ವಿದ್ಯಾರಣ್ಯಪುರದಲ್ಲೂ ಸತತವಾಗಿ 5 ವರ್ಷಗಳ ಕಾಲ ನಿರಂತರವಾಗಿ ಬಹಳ… Read More ವಿದ್ಯಾರಣ್ಯಪುರದ 2022ರ ಯೋಗ ದಿನಾಚರಣೆ