ನಮ್ಮೂರು ಬಾಳಗಂಚಿ ಗ್ರಾಮದ ಹಬ್ಬ

ಹಾಸನ ಜಿಲ್ಲೆಯ, ಚೆನ್ನರಾಯಪಟ್ಟಣ ತಾಲೂಕಿನ, ಹಿರೀಸಾವೆ ಹೋಬಳಿಯ ಬಳಿಯ ಪುಟ್ಟದಾದ ಹಳ್ಳಿಯೇ ಬಾಳಗಂಚಿ. ಸುಮಾರು ಮೂರ್ನಾಲ್ಕು ಸಾವಿರದವರೆಗೂ ಜನಸಂಖ್ಯೆ ಇರುವಂತಹ ಹಳ್ಳಿ. ಹಲವರು ಈಗಾಗಲೇ ಕೆಟ್ಟು ಪಟ್ಟಣಕ್ಕೆ ಸೇರು ಎನ್ನುವಂತೆ ನಗರ ಪ್ರದೇಶಗಳಿಗೆ ವಲಸೆ ಹೋಗಿಯಾಗಿದೆ. ಹೆಸರಿಗಷ್ಟೇ ಚಿಕ್ಕದಾದರೂ ಇತಿಹಾಸ ಇಣುಕಿ ನೋಡಿದರೆ ಗುರು ವಿದ್ಯಾರಣ್ಯರ ತವರೂರು ಎಂದು ಖ್ಯಾತಿ ಹೊಂದಿದೆ. ಇನ್ನು ಕೆಲವರು ಗುರು ವಿದ್ಯಾರಣ್ಯರು ವಾಸಿಸಿದ ಸ್ಥಳವೆಂದು ಇಲ್ಲವೇ ತಪಸ್ಸನ್ನು ಮಾಡಿದ ಪ್ರದೇಶವೆಂದೂ ಹೇಳುತ್ತಾರೆ. ಈ ಹಳ್ಳಿಯಲ್ಲಿ ಸುಮಾರು ಹತ್ತು ಹದಿನೈದಕ್ಕೂ ಹೆಚ್ಚಿನ ದೇವಸ್ಥಾನಗಳಿದ್ದು… Read More ನಮ್ಮೂರು ಬಾಳಗಂಚಿ ಗ್ರಾಮದ ಹಬ್ಬ

ತಾತ ಮೊಮ್ಮಗನ ಸಂಬಂಧ- ಅನುಬಂಧ

ಶಂಕರ ಆಗಿನ್ನು ಚಿಕ್ಕ ಹುಡುಗ. ನಾಲ್ಕನೇಯದೋ ಇಲ್ಲವೇ ಐದನೆಯ ತರಗತಿಯಲ್ಲಿ ಓದುತ್ತಿದ್ದ. ಅದೊಂದು ದಿನ ಸಂಜೆ ಊರಿನಿಂದ ಅವರ ಮನೆಗೆ Father is serious. Start immediately ಎನ್ನುವ ಸಂದೇಶವಿದ್ದ ಟೆಲಿಗ್ರಾಂ ಬಂದಿತು. ಸರಿ ಆಷ್ಟು ಹೊತ್ತಿನಲಲ್ಲಿ ಮಕ್ಕಳನ್ನು ಎಲ್ಲಿಗೆ ಬಿಟ್ಟು ಹೋಗುವುದು ಎಂದು ತಿಳಿದು ಶಂಕರ, ಅವನ ತಂಗಿಯರನ್ನೂ ಕರೆದುಕೊಂಡು ಶಂಕರನ ತಂದೆ ಮತ್ತು ತಾಯಿ ಊರಿಗೆ ಹೋಗಲು ಮೆಜೆಸ್ಟಿಕ್ ಬಸ್ ಹತ್ತಿ , ಆಗಿನ್ನೂ ಟೆಲಿಫೋನ್ ಇಲ್ಲದಿದ್ದರಿಂದ ಮಲ್ಲೇಶ್ವರದಲ್ಲಿಯೇ ಶಂಕರನ ತಂದೆ ಇಳಿದು ಅವರ… Read More ತಾತ ಮೊಮ್ಮಗನ ಸಂಬಂಧ- ಅನುಬಂಧ

ಮಣ್ಣಿನ ಋಣ

ಮೊನ್ನೆ ಶಿವರಾತ್ರಿಯ ಹಬ್ಬದ ಪ್ರಯುಕ್ತ ಮಲ್ಲೇಶ್ವರದ ಕಾಡುಮಲ್ಲೇಶ್ವರ ಮತ್ತು ದಕ್ಷಿಣ ಮುಖ ನಂದಿ ತೀರ್ಥ ದೇವಸ್ಧಾನಕ್ಕೆ ಹೋಗಿದ್ದೆ. ಆ ದೇವಸ್ಥಾನಗಳ ಸುತ್ತ ಮುತ್ತಲಿನ ಪ್ರದೇಶಗಳನ್ನು ನೋಡುತ್ತಿದ್ದಾಗ. ನಮಗೆ ಋಣವಿದ್ದಿದ್ದಲ್ಲಿ ಇದೇ ಜಾಗದಲ್ಲಿ ನಮ್ಮ ಮನೆ ಇರಬೇಕಿತ್ತು. ನಾವುಗಳು ಐಶಾರಾಮ್ಯಾವಾಗಿ ಇರಬಹುದಿತ್ತೇನೋ ಎಂದು ಯೋಚಿಸಲು ಕಾರಣವಿಷ್ಟೆ. ನಮ್ಮ ತಾತ ದಿ. ಗಮಕಿ ನಂಜುಂಡಯ್ಯನವರು ಖ್ಯಾತ ವಾಗ್ಗೇಯಕಾರರು, ಸಾಹಿತಿಗಳು ಮತ್ತು ಅತ್ಯುತ್ತಮ ಗಮಕಿಗಳು. ಮೇಲಾಗಿ ನಮ್ಮ ಊರಾದ ಬಾಳಗಂಚಿಯ ಶಾನುಭೋಗರೂ ಹೌದು. ಆಗಿನ ಕಾಲದಲ್ಲಿ ಅಲ್ಲಿಂದ ಬೆಂಗಳೂರಿನ ಸಾಹಿತ್ಯ ಪರಿಷತ್ತು… Read More ಮಣ್ಣಿನ ಋಣ

ಗಮಕ ವಿದ್ವಾನ್, ಹರಿಕಥಾ ಸಾಮ್ರಾಟ, ಖ್ಯಾತ ವಾಗ್ಗೇಯಕಾರ ಬಾಳಗಂಚಿ ಶ್ರೀ ನಂಜುಡಯ್ಯನವರು

ಸೆಪ್ಟೆಂಬರ್ ೫ ಭಾರತದ ಮಾಜಿ ರಾಷ್ಟ್ರಪತಿಗಳಾದ ಸರ್ವಪಲ್ಲಿ ರಾಧಾಕೃಷ್ಣರವರ ಜಯಂತಿ. ಇದನ್ನು ನಾವು ಪ್ರೀತಿಯಿಂದ ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸುತ್ತಾ ಬಂದಿದ್ದೇವೆ. ಇತ್ತೀಚೆಗಷ್ಟೇ ಶ್ರೀಯುತ ರಾಧಾಕೃಷ್ಣರವರು ನನ್ನ ಪ್ರಾಣ ಸ್ನೇಹಿತ ಹರಿಯವರ ಅಜ್ಜನ  ಸೋದರತ್ತೆಯ ಮಗ  ಎಂದು ತಿಳಿದುಬಂದಿದ್ದರಿಂದ ಶ್ರೀಯುತರು ನಮ್ಶ ಹತ್ತಿರದ ಸಂಬಂಧಿಯೇನೂ ಎನ್ನುವ ಭಾವನೆ ಮೂಡುತ್ತಲಿದೆ.   ನಮ್ಮ ಸಂಸ್ಕೃತಿಯಲ್ಲಿ  ತಂದೆ ತಾಯಿಯರ  ನಂತರದ ಸ್ಥಾನವನ್ನು ಗುರುಗಳಿಗೇ ಮೀಸಲಿಟ್ಟಿದ್ದೇವೆ.  ಮನೆಯೇ ಮೊದಲ ಪಾಠಶಾಲೆ  ತಂದೆ, ತಾಯಿಯರೇ ಮೊದಲ ಗುರುಗಳಾಗಿ, ಬಾಲ ಪಾಠಗಳನ್ನು ಕಲಿಸಿಕೊಟ್ಟರೂ ವ್ಯವಸ್ಥಿತವಾಗಿ ವಿದ್ಯೆಯನ್ನು ಕಲಿತು… Read More ಗಮಕ ವಿದ್ವಾನ್, ಹರಿಕಥಾ ಸಾಮ್ರಾಟ, ಖ್ಯಾತ ವಾಗ್ಗೇಯಕಾರ ಬಾಳಗಂಚಿ ಶ್ರೀ ನಂಜುಡಯ್ಯನವರು

ಪುನರ್ಜನ್ಮ

ಶಂಕರ ಮೊನ್ನೆ ದೇವಸ್ಥಾನಕ್ಕೆ ಹೋಗಿ, ದೇವರ ದರ್ಶನಕ್ಕೆ ಸರದಿಯ ಸಾಲಿನಲ್ಲಿ ನಿಂತಿದ್ದಾಗಲೇ,  ಶಂಕರಾಚಾರ್ಯವಿರಚಿತ ಎಂ.ಎಸ್. ಸುಬ್ಬಲಕ್ಷ್ಮಿಯವರ ಸುಶ್ರಾವ್ಯ ಕಂಠದ ಭಜಗೋವಿಂದಂ ಭಜಗೋವಿಂದಂ ಶ್ಲೋಕ ಕೇಳುತ್ತಲೇ ಅವನಿಗೆ ತಾನು ಸಣ್ಣನಿದ್ದಾಗ ಅವನ ತಾತ ಆ ಶ್ಲೋಕಗಳನ್ನು ಹೇಳಿಕೊಡುತ್ತಿದ್ದದ್ದು  ಮತ್ತು ಅದರ ಜೊತೆ ಹೇಳಿದ ಸುಂದರ ಪ್ರಸಂಗವೊಂದು ನೆನಪಿಗೆ ಬಂತು.  ಆಗ  ಶಂಕರನಿಗೆ ಏಳೆಂಟು ವರ್ಷಗಳಿರಬಹುದು . ಪರೀಕ್ಷೆ ಮುಗಿದು ಬೇಸಿಗೆ ರಜಾ ಬಂದಿತೆಂದರೆ ತಾತನ ಮನೆಗೆ ಹೋಗುವುದಕ್ಕೆ ಅವನಿಗೆ ಪಂಚ ಪ್ರಾಣ. ಅದೇ ರೀತೀ ಅವನ ತಾತನೂ ಅಷ್ಟೇ.… Read More ಪುನರ್ಜನ್ಮ