ಶ್ರೀ ಕೇದಾರನಾಥ

ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಮತ್ತು ಚಾರ್ ಧಾಮ್ ನಲ್ಲಿ ಒಂದಾದ ಶ್ರೀ ಕೇದಾರನಾಥನ 2024ರ ದರ್ಶನ ಮೇ 10ರಂದು ಆರಂಭವಾದ ಹಿನ್ನೆಲೆಯಲ್ಲಿ, ಶ್ರೀ ಕೇದಾರನಾಥ್ ದೇವಾಲಯದ ಐತಿಹ್ಯ, ವಾಸ್ತುಶಿಲ್ಪ ಮತ್ತು ಸ್ಥಳ ಪುರಾಣದ ಜೊತೆ ಕೇದಾರನಾಥ ಮತ್ತು ಕರ್ನಾಟಕದ ನಡುವೆ ಇರುವ ಅವಿನಾಭಾವ ಸಂಬಂಧದ ಕುರಿತಾದ ಅಪೂರ್ವ ಮಾಹಿತಿಗಳು ಇದೋ ನಿಮಗಾಗಿ… Read More ಶ್ರೀ ಕೇದಾರನಾಥ

ರಾಮೇಶ್ವರದಲ್ಲೊಂದು ವಿಭೀಷಣನ ದೇಗುಲ

ರಾಮೇಶ್ವರ ಎಂದ ತಕ್ಷಣ ನಮ್ಮ ಮನಸ್ಸಿನಲ್ಲಿ ಮೂಡುವುದೇ ಶ್ರೀರಾಮಚಂದ್ರನಿಂದ ಮರಳಿನಿಂದ ನಿರ್ಮಿಸಲ್ಪಟ್ಟ ಶಿವನ ಲಿಂಗ ಮತ್ತು ನಳ ಮತ್ತು ನೀಲರ ಜೊತೆಯಲ್ಲಿ ತನ್ನ ಕಪಿಸೇನೆಯ ಸಹಾಯದೊಂದಿಗೆ ಧನುಷ್ಕೋಟಿಯಿಂದ ಲಂಕೆಯ ನಡುವಿನ ಸಮುದ್ರಕ್ಕೆ ಕಟ್ಟಿದ ರಾಮಸೇತು. ನಿಜ ಹೇಳಬೇಕೆಂದರೆ ಈ ಎರಡೂ ಪವಿತ್ರ ಕ್ಷೇತ್ರಗಳ ಹೊರತಾಗಿ ಇನ್ನೂ ಹತ್ತು ಹಲವಾರು ಕುತೂಹಲಕಾರಿ ಸ್ಥಳಗಳಿದ್ದು, ಅಂತಹವುಗಳಲ್ಲಿ ಒಂದಾದ ಶ್ರೀ ಕೋದಂಡರಾಮಸ್ವಾಮಿ ದೇವಾಲಯದ ಬಗ್ಗೆ ನಾವಿಂದು ತಿಳಿಯೋಣ ಬನ್ನಿ. ಶ್ರೀ ರಾಮಚಂದ್ರ ಪ್ರಭು ತನ್ನ ಚಿಕ್ಕಮ್ಮ ಕೈಕೇಯಿಗೆ ಕೊಟ್ಟ ಭಾಷೆಯಂತೆ, 14ವರ್ಷ… Read More ರಾಮೇಶ್ವರದಲ್ಲೊಂದು ವಿಭೀಷಣನ ದೇಗುಲ

ರಮ್ಮನಹಳ್ಳಿ ಮಾರಮ್ಮ ಜಾತ್ರೆ (ಲಕ್ಷ್ಮೀ ಜಾತ್ರೆ)

ಹಬ್ಬ ಹರಿದಿನ ಮತ್ತು ಜಾತ್ರೆಗಳಲ್ಲಿ ಹೆಣ್ಣು ಮಕ್ಕಳದ್ದೇ ಕಾರುಬಾರಾದರೆ, ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರಿನಿಂದ ಕೇವಲ ೮ ಕಿ.ಮೀ ದೂರದಲ್ಲಿರುವ ರಮ್ಮನಗಳ್ಳಿಯಲ್ಲಿ ಮಾತ್ರಾ, ಜಾತ್ರೆ ನಡೆಯುವ ೧೫ ದಿನಗಳ ಕಾಲ ಊರ ಗಂಡುಮಕ್ಕಳು ಹೆಣ್ಣಿನ ವೇಷ ಧರಿಸಿ, ಆ ಊರಿನ ಗ್ರಾಮದೇವತೆ ಮಾರಮ್ಮನನ್ನು ಸಂತುಷ್ಟಗೊಳಿಸುವ ವಿಶಿಷ್ಟವಾದ ಆಚರಣೆಯ ಜೊತೆ ಇನ್ನೂ ಹಲವಾರು ಆಶ್ಚರ್ಯಕರ ಆಚರಣೆಗಳ ಸಂಪೂರ್ಣ ವಿವರಗಳು ಇದೋ ನಿಮಗಾಗಿ… Read More ರಮ್ಮನಹಳ್ಳಿ ಮಾರಮ್ಮ ಜಾತ್ರೆ (ಲಕ್ಷ್ಮೀ ಜಾತ್ರೆ)

ಬಾಳಗಂಚಿ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದ ಕುಂಭಾಭಿಷೇಕ

ದಿನಾಂಕ 27.03.2024 ಬುಧವಾರ, ಪಾಲ್ಗುಣ ಮಾಸದ ಬಹುಳ ಬಿದಿಗೆಯಂದು ‌ದಕ್ಷಿಣಾಮ್ನಾಯ ಶೃಂಗೇರಿ ಶಾರದಾ ಪೀಠದ ಜಗದ್ಗುರುಗಳಾದ ಶ್ರೀ ಶ್ರೀ ವಿಧುಶೇಖರ ಭಾರತೀ ಸ್ವಾಮಿಗಳ ಅಮೃತಹಸ್ತದಿಂದ ನಡೆದ ಬಾಳಗಂಚಿ ಗ್ರಾಮದ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದ ಪುನರ್ ಪ್ರತಿಷ್ಠಾ ಕುಂಭಾಭಿಷೇಕ ಮಹೋತ್ಸವದ ಸುಂದರ ಕ್ಷಣಗಳು ಇದೋ ನಿಮಗಾಗಿ… Read More ಬಾಳಗಂಚಿ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದ ಕುಂಭಾಭಿಷೇಕ

ಮುಡುಕುತೊರೆ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಬ್ರಹ್ಮರಥೋತ್ಸವ

ತಲಕಾಡಿನ ಬಳಿಯ ಮುಡುಕುತೊರೆ ಯಲ್ಲಿ ಪ್ರತೀ ಮಾಘ ಮಾಸದಲ್ಲಿ ಎರಡು ವಾರಕ್ಕೂ ಅಧಿಕ ಸಮಯ ನಡೆಯುವ ಅದ್ದೂರಿಯ ವಿಶ್ವವಿಖ್ಯಾತ ಶ್ರೀ ಮಲ್ಲಿಕಾರ್ಜುನಸ್ವಾಮಿಯ ಬ್ರಹ್ಮರಥೋತ್ಸವ ಮತ್ತು ದನಗಳ ಜಾತ್ರೋತ್ಸವ ದ ಕುರಿತಾದ ಸವಿವರಗಳು ಇದೋ ನಿಮಗಾಗಿ… Read More ಮುಡುಕುತೊರೆ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಬ್ರಹ್ಮರಥೋತ್ಸವ

ರಾಮನಗರದ ಶ್ರೀ ರಾಮ ದೇವರಬೆಟ್ಟ

ಬೆಂಗಳೂರಿನಿಂದ ಕೇವಲ 50 ಕಿಮೀ ದೂರದಲ್ಲಿರುವ ರಾಮನಗರಕ್ಕೆ ಆ ಹೆಸರು ಬರಲು ಕಾರಣವೇನು?
ಅಲ್ಲಿನ ರಾಮದೇವರ ಬೆಟ್ಟಕ್ಕೂ ಕಿಷ್ಕಿಂದೆಯ ಸುಗ್ರೀವನಿಗೂ ಯಾವ ಬಾದರಾಯಣ ಸಂಬಂಧ? ಆ ಪ್ರದೇಶದಲ್ಲಿ ಕಾಗೆಗಳು ಏಕಿಲ್ಲಾ? ಎಂಬೆಲ್ಲಾ ಕುತೂಹಲ ಮಾಹಿತಿಗಳು ಇದೋ ನಿಮಗಾಗಿ… Read More ರಾಮನಗರದ ಶ್ರೀ ರಾಮ ದೇವರಬೆಟ್ಟ

ಕರ್ನಾಟಕದ ಕೃಷ್ಣಶಿಲೆ ಅಯೋಧ್ಯೆಯ ಬಾಲ ರಾಮನಾದ ರೋಚಕತೆ

ಕರ್ನಾಟಕ ಎಂದರೆ ಥಟ್ ಅಂತಾ ನೆನಪಾಗೋದೇ ಶಿಲ್ಪಕಲೆಗಳ ಬೀಡು. ಬೇಲೂರು ಹಳೇಬೀಡು, ಹಂಪೆ, ಐಹೋಳೆ ಬದಮಿ, ಪಟ್ಟದ ಕಲ್ಲು, ಶ್ರವಣಬೆಳಗೊಳ, ಸೋಮನಾಥಪುರದಂತಹ ಸುಂದರವಾದ ಕಲ್ಲಿನ ಕೆತ್ತನೆಯ ಪ್ರದೇಶ. ಅದೇ ರೀತಿ ರಾಮಯಣ ಎಂದ ತಕ್ಷಣ ರಾಮ ಸೀತೆ ಲಕ್ಷ್ಮಣರ ಜೊತೆ ನೆನಪಾಗೋದೇ ರಾಮನ ಪರಮ ಭಕ್ತ ರಘುವೀರ ಸಮರ್ಥ ಹನುಮಂತ. ಹೀಗೆ ಭಾರತ ದೇಶ ಅಸ್ಮಿತೆ ಮತ್ತು ಅಸ್ತಿತ್ವದೊಂದಿಗೆ ಕರ್ನಾಟಕದ ಅವಿನಾಭಾವ ಸಂಬಂಧ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದ್ದು. 2024ರ ಜನವರಿ 22ರಂದು ಅಯೋಧ್ಯೆಯಲ್ಲಿ ರಾಮಲಲ್ಲನ ಪ್ರಾಣಪ್ರತಿಷ್ಠಾಪನೆ… Read More ಕರ್ನಾಟಕದ ಕೃಷ್ಣಶಿಲೆ ಅಯೋಧ್ಯೆಯ ಬಾಲ ರಾಮನಾದ ರೋಚಕತೆ

ಕರ್ನಾಟಕದಲ್ಲಿ ರಾಮಾಯಣದ ಕುರುಹುಗಳು

ಹಿಂದೂಗಳಿಗೆ ರಾಮಾಯಣ ಪವಿತ್ರವಾದ ಪುರಾಣವಾಗಿದ್ದು, ಪ್ರಭು ಶ್ರೀರಾಮನನ್ನು ಪ್ರಪಂಚಾದ್ಯಂತ ಕೋಟ್ಯಾಂತರ ಜನರು ಆರಾಧಿಸುತ್ತಾರೆ. ಆದರೆ ರಾಮಾಯಣ ಎಂಬುದು ಕಟ್ಟು ಕಥೆಯಾಗಿದ್ದು ಅಂತಹದ್ದು ನಮ್ಮ ದೇಶದಲ್ಲಿ ನಡೆದೇ ಇಲ್ಲಾ ಎಂದು ವಾದಿಸುವವರಿಗೆ ಪುರಾವೆ ನೀಡುವಂತೆ ಕರ್ನಾಟಕದಲ್ಲೇ ರಾಮಾಯಣದ ಅನೇಕ ಕುರುಹುಗಳಿದ್ದು ಅವುಗಳಲ್ಲಿ ಕೆಲವು ಪ್ರಮುಖ ಸ್ಥಳಗಳನ್ನು ತಿಳಿಯೋಣ ಬನ್ನಿ.… Read More ಕರ್ನಾಟಕದಲ್ಲಿ ರಾಮಾಯಣದ ಕುರುಹುಗಳು

ಇಸ್ಕಾನ್ ಶ್ರೀ ರಾಧಾ ಕೃಷ್ಣ ದೇವಾಲಯ

ಸಾಧಾರಣವಾಗಿ ಹೊರ ಊರುಗಳಿಂದ ಬೆಂಗಳೂರಿಗೆ ಬರುವ ಪ್ರವಾಸಿಗರನ್ನು ಈ ಹಿಂದೆ ಬೆಂಗಳೂರು ರೈಲ್ವೇ ನಿಲ್ದಾಣ, ವಿಧಾನ ಸೌಧ, ಲಾಲ್ ಭಾಗ್ ಮತ್ತು ಕಬ್ಬನ್ ಪಾರ್ಕ್ ಗಳಿಗೆ ಕರೆದುಕೊಂಡು ಹೋಗಿ ತೋರಿಸುತ್ತಿದ್ದರೆ, 90ರ ದಶಕದಲ್ಲಿ ಬೆಂಗಳೂರಿನ ರಾಜಾಜಿನಗರದ ಆರಂಭದಲ್ಲಿ ಇಸ್ಕಾನ್ ದೇವಾಲಯ ನಿರ್ಮಾಣವಾದ ಕೂಡಲೇ, ಬೆಂಗಳೂರಿಗೆ ಬರುವ ಪ್ರವಾಸಿಗರ ಪಟ್ಟಿಯಲ್ಲೀ ಈ ದೇವಾಲಯವೂ ಸೇರಿಕೊಂಡಿದೆ ಏಂದರೂ ತಪ್ಪಾಗದು. ಬೆಂಗಳೂರಿಗೇ ಕಿರೀಟಪ್ರಾಯವಾದ ಅತ್ಯಂತ ಸುಂದರವಾದ ಇಸ್ಕಾನಿನ ಶ್ರೀ ರಾಧಾ ಕೃಷ್ಣ ದೇವಾಲಯದ ಕುರಿತಾಗಿ ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ… Read More ಇಸ್ಕಾನ್ ಶ್ರೀ ರಾಧಾ ಕೃಷ್ಣ ದೇವಾಲಯ