ಅಳಿಲು ಸೇವೆ

ಅದು ಎಂಭತ್ತನೇ ದಶಕದ ಆರಂಭದ ದಿನಗಳು. ನಾನಾಗ ಇನ್ನೂ ಮಿಡ್ಲ್ ಸ್ಕೂಲಿನಲ್ಲಿ ಓದುತ್ತಿದ್ದೆ. ಅದೊಂದು ರಾತ್ರಿ ನನ್ನ ತಂಗಿಗೆ ಜ್ವರ ಬಂದಿದ್ದ ಕಾರಣ ಆಕೆಯನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಆಕೆಯನ್ನು ಸೈಕಲ್ಲಿನ ಮುಂದುಗಡೆಯ ಬಾರ್ ಮೇಲಿನ ಚಿಕ್ಕ ಸೀಟಿನಲ್ಲಿ ಕೂರಿಸಿಕೊಂಡು ಮನೆಗೆ ಹಿಂತಿರುಗುವಾಗ ಇಳಿಜಾರಿನಲ್ಲಿ ಆಕೆ ಅಚಾನಕ್ಕಾಗಿ ಸೈಕಲ್ ಮುಂದಿನ ಚಕ್ರಕ್ಕೆ ತನ್ನ ಕಾಲು ಕೊಟ್ಟ ಪರಿಣಾಮ ಆಕೆಯ ಕಾಲಿನ ಹಿಮ್ಮಡಿ ಕಿತ್ತು ಬಂದು ಎಂಟು ಹತ್ತು ಹೊಲಿಗೆ ಹಾಕಿದ್ದಲ್ಲದೇ ಸಣ್ಣ ಪುಟ್ಟ ಗಾಯಗಳಾಗಿದ್ದವು. ಸೈಕಲ್ಲಿನಿಂದ ಕೆಳಗೆ… Read More ಅಳಿಲು ಸೇವೆ

ಗಜ ಗಾಂಭೀರ್ಯ

ಆದೊಂದು ರಾಜನ ಅರಮನೆಯಲ್ಲಿ ಪಟ್ಟದಾನೆ ಮತ್ತು ಅರಮನೆಯಲ್ಲಿದ್ದ ನಾಯಿ ಎರಡೂ ಒಂದೇ ಸಮಯದಲ್ಲಿ ಗರ್ಭಿಣಿಯಾದವು. ಅದಾಗಿ ಮೂರು ತಿಂಗಳ ನಂತರ ಆ ನಾಯಿ ಆರು ನಾಯಿಮರಿಗಳಿಗೆ ಜನ್ಮ ನೀಡಿತು. ಮತ್ತೆ ಆರು ತಿಂಗಳ ನಂತರ ಅದೇ ನಾಯಿ ಪುನಃ ಗರ್ಭಿಣಿಯಾಗಿ ಆರು ಮರಿಗಳಿಗೆ ಜನ್ಮ ನೀಡಿ ಒಟ್ಟು ಒಂಬತ್ತು ತಿಂಗಳುಗಳೊಳಗೆ ಒಂದು ಡಜನ್ ನಾಯಿಮರಿಗಳಿಗೆ ಜನ್ಮ ನೀಡಿತು ಮತ್ತು ಅದರ ಹೆರಿಗೆಯ ಕಾರ್ಯ ಹಾಗೇ ಮುಂದುವರೆಯಿತು. ಆನೆ ಗರ್ಭಿಣಿಯಾಗಿ ಹದಿನೆಂಟು ತಿಂಗಳು ಕಳೆದರೂ ಪ್ರಸವವಾಗದಿದ್ದನ್ನು ನೋಡಿದ ನಾಯಿಗೆ… Read More ಗಜ ಗಾಂಭೀರ್ಯ

ಕೂರೂನ ಮಾರಕವೋ? ಇಲ್ಲವೇ ಪೂರಕವೋ?

ಅರೇ ಚೈನಾದ ವುಹಾನ್ ನಗರದಲ್ಲಿ ಆರಂಭವಾಗಿ ಕೆಲವೇ ಕೆಲವು ದಿನಗಳಲ್ಲಿ ಇಡೀ ವಿಶ್ವಾದ್ಯಂತ ಹರಡಿರುವ ಕೂರೂನ ವೈರಸ್ಸನ್ನು ಮಹಾಮಾರಿ ಎಂದು ಎಲ್ಲರೂ ಬಣ್ಣಿಸಿ ಅದು ಮಾರಕವೇ ಸರಿ ಎಂದು ಸಾಕಷ್ಟು ಕಠೋರ ಸುದ್ದಿಗಳನ್ನು ಕೇಳುತ್ತಿರುವಾಗ ಇದೇನು ಪೂರಕ ಎಂದು ಶೀರ್ಷಿಕೆ ಇದಯಲ್ಲಾ? ಎಂದು ಆಶ್ವರ್ಯವಾಗುತ್ತಿದಯಲ್ಲವೇ? ಕರೋನ ಸೋಂಕಿನಿಂದಾಗಿ ಜಾಗತಿಕವಾಗಿ ಆಗುತ್ತಿರುವ ಸಾಕಷ್ಟು ಅಡ್ಡ ಪರಿಣಾಮಗಳು ಇಡೀ ಜಗತ್ತಿನ ಆರ್ಥಿಕ ಪರಿಣಾಮಗಳನ್ನು ಅಲ್ಲಾಡಿಸುತ್ತಿರುವುದು ಖಂಡಿತವಾಗಿಯೂ ಸತ್ಯವಾದರೂ, ಕೂರೂನಾದಿಂದ ಆಗಿರಬಹುದಾದ ಅಥವಾ ಆಗಬಹುದಾ ಅನಾಹುತಗಳ ಮಧ್ಯೆಯೇ, ಅದರಿಂದ ಒಂದಷ್ಟು ಒಳ್ಳೆಯ ಪರಿಣಾಮಗಳನ್ನು… Read More ಕೂರೂನ ಮಾರಕವೋ? ಇಲ್ಲವೇ ಪೂರಕವೋ?

ಜನತಾ ಕರ್ಫ್ಯೂ

ನಮಗೆಲ್ಲರಿಗೂ ಈಗಾಗಲೇ ತಿಳಿದಿರುವಂತೆ ದಿನಾಂಕ 22.03.2020, ಬೆಳಿಗ್ಗೆ 7 ರಿಂದ ರಾತ್ರಿ 9 ಘಂಟೆಯವರೆಗೂ ಸಮಸ್ತ ಭಾರತೀಯರು ಸ್ವಯಂಪ್ರೇರಿತರಾಗಿ ಮನೆಯಲ್ಲಿಯೇ ಇರಬೇಕೆಂದು ನಮ್ಮ ದೇಶದ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿಯವರು ರಾಷ್ಟ್ರವನ್ನುದ್ದೇಶಿಸಿ ದಿನಾಂಕ 19.03.2020 ರಂದು ರಾತ್ರಿ 8.00 ಘಂಟೆಗೆ ಮಾಡಿದ ಭಾಷಣದಲ್ಲಿ ಕೋರಿಕೊಂಡಿದ್ದಾರೆ. ಬಹಳಷ್ಟು ಜನರಿಗೆ ಒಂದು ಕೇವಲ 14 ಘಂಟೆಗಳ ಅವಧಿಯವರೆಗೆ ಮನೆಯಲ್ಲಿದ್ದರೆ ಮಾರಕ ಸೋಂಕು ಕರೋನವನ್ನು ತಡೆಗಟ್ಟ ಬಹುದೇ? ಹಾಗಿದ್ದಲ್ಲಿ ಇದನ್ನು ಪ್ರಪಂಚಾದ್ಯಂತ ಈಗಾಗಲೇ ಮಾಡುತ್ತಿರಲಿಲ್ಲವೇ ಎಂಬ ಕುಹಕ ಮಾತುಗಳನ್ನಾಡುತ್ತಿದ್ದಾರೆ. ಹಾಗಾಗಿ ಇದು… Read More ಜನತಾ ಕರ್ಫ್ಯೂ

ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ

ಏಳು ಕೋಟಿ ಕನ್ನಡಿಗರು ಇರುವ ಈ ಕರ್ನಾಟಕದ ಕನ್ನಡ ಪರ ಹೋರಾಟಗಾರರು ಪರಸ್ಪರ ನಂಬಿಕೆ, ವಿಶ್ವಾಸ ಮತ್ತು ಹೊಂದಾಣಿಕೆಗಳೇ ಇಲ್ಲದೇ, ತಮ್ಮ ತಮ್ಮ ಅಹಂ ಮತ್ತು ಅಸ್ತಿತ್ವಕ್ಕಾಗಿ ಪದೇ ಪದೇ ಕರ್ನಾಟಕ ಬಂದ್ ಕರೆ ನೀಡುವುದು ಎಷ್ಟು ಸರಿ? ಈ ರೀತಿಯ ಬಂದ್ ನಿಂದ ಸಾಧಿಸುವುದಾದರೂ ಏನು?… Read More ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ

ಧರ್ಮ ಸಹಿಷ್ಣುತೆ ಮತ್ತು ಜಾತ್ಯಾತೀತತೆ

ಮೊನ್ನೆ ಪೇಜಾವರ ಶ್ರೀಗಳು ವಿಧಿವಶರಾದಾಗ ಅವರ ಬಗ್ಗೆಯೇ ನಮ್ಮ ಸ್ನೇಹಿತರೆಲ್ಲಾ ಸೇರಿ ಅವರ ಸಾನಿಧ್ಯದ ನೆನಪನ್ನು ಮೆಲುಕು ಹಾಕುತ್ತಿದ್ದಾಗ ಶ್ರೀ ನಮ್ಮ ಜಾಲಹಳ್ಳಿಯ ವಿನಾಯಕ ಸೇವಾ ಮಂಡಳಿಯ ಗಣೇಶೋತ್ಸವಕ್ಕೆ ಬಂದದ್ದು ಅಲ್ಲಿ ನಮಗೆ ಮಾರ್ಗದರ್ಶನ ಮಾಡಿದ್ದರ ಕುರಿತು ಮಾತನಾಡುತ್ತಿದ್ದಾಗ, ಅದೇ ಸಮಯದಲ್ಲಿ ಆದಿಚುಂಚನಗಿರಿಯ ಮಠಾಧೀಶರಾಗಿದ್ದ ಶ್ರೀ ಶ್ರೀ ಶ್ರೀ ಬಾಲಗಂಗಾಧರ ಸ್ವಾಮಿಗಳ ಕುರಿತಂತೆಯೂ ವಿಷಯ ಪ್ರಸ್ತಾಪವಾಗಿ ಅವರು ಜಾಲಹಳ್ಳಿಗೆ ಬಂದಿದ್ದಾಗ ನಡೆದ ಒಂದು ವಿಶಿಷ್ಟ ಅನುಭವವನ್ನು ನಮ್ಮೊಂದಿಗೆ ಹಂಚಿಕೊಂಡದ್ದು ಸದ್ಯದ ಪರಿಸ್ಥಿತಿಗೆ ಪ್ರಸ್ತುತವಾಗಿರುವ ಕಾರಣ ನಿಮ್ಮೊಂದಿಗೆ ಹಂಚಿಕೊಳ್ಳಲು… Read More ಧರ್ಮ ಸಹಿಷ್ಣುತೆ ಮತ್ತು ಜಾತ್ಯಾತೀತತೆ

ಈ ಶತಮಾನದ ಮಕ್ಕಳನ್ನು ರೂಪಿಸುವಲ್ಲಿ ನಾವು ಎಡವುತ್ತಿದ್ದೇವೆಯೇ?

ಕಳೆದ ವಾರಾಂತ್ಯದಲ್ಲಿ ಮನೆಗೆ ಅವಶ್ಯಕವಿದ್ದ ತರಕಾರಿಗಳನ್ನು ಕೊಳ್ಳಲು ರಸ್ತೆಯ ಬದಿಯಲ್ಲಿದ್ದ ವ್ಯಾಪಾರಿಗಳ ಬಳಿ ಹೋಗಿದ್ದೆ. ನಮಗೆ ಬೇಕಾದ ತರಕಾರಿಗಳನ್ನೆಲ್ಲಾ ಕೊಂಡು ದುಡ್ಡು ಎಷ್ಟಾಯಿತು ಎಂದೆ? ಅಲ್ಲಿ ವ್ಯಾಪಾರ ಮಾಡುತ್ತಿದ್ದ ಸುಮಾರು 18-20ರ ವಯಸ್ಸಿನ ತರುಣ ತರಕಾರಿ ಕೊಡುವಾಗ ಇದ್ದ ಚುರುಕು ಲೆಕ್ಕ ಹಾಕುವಾಗ ತಡಕಾಡತೊಡಗಿದ್ದ. ಕಡೆಗೆ ಕ್ಯಾಲುಕ್ಯುಲೇಟರ್ ಸಹಾಯದಿಂದ ಲೆಖ್ಖಾ ಹಾಕಿ ಅಂಕಲ್ 235 ಆಯ್ತು ಎಂದ. ಸರಿ ಎಂದು 500 ರೂಪಾಯಿ ಕೊಟ್ಟರೆ ಪುನಃ ಕ್ಯಾಲುಕ್ಯುಲೇಟರ್ ತೆಗೆದುಕೊಂಡು 500-235 ಲೆಖ್ಖ ಹಾಕಿ ಚಿಲ್ಲರೆ 265 ರೂಗಳನ್ನು… Read More ಈ ಶತಮಾನದ ಮಕ್ಕಳನ್ನು ರೂಪಿಸುವಲ್ಲಿ ನಾವು ಎಡವುತ್ತಿದ್ದೇವೆಯೇ?

ಅತ್ಯಾಚಾರಕ್ಕೆ ಧರ್ಮವಿಲ್ಲ.

  ಮೊನ್ನೆ ಹೈದರಾಬಾದಿನ ಬಳಿ ಪಶುವೈದ್ಯೆ ಪ್ರಿಯಾಂಕ ರೆಡ್ಡಿಯ ಮೇಲೆ ನಡೆದೆ ಅಮಾವೀಯವಾದ ಅತ್ಯಾಚಾರ ಮತ್ತು ಬರ್ಬರವಾದ ಹತ್ಯೆ ನಿಜಕ್ಕೂ ದೇಶಾದ್ಯಂತ ತಲ್ಲಣ ಎಬ್ಬಿಸಿದೆ. ಗಾಂಧೀಜೀಯವರು ಕಂಡ ರಾಮ ರಾಜ್ಯ ಕನಸಿನಲ್ಲಿ ನಿರ್ಜನ ಪ್ರದೇಶದಲ್ಲಿ ರಾತ್ರಿ 12ಗಂಟೆಯ ಹೊತ್ತಿಗೂ ಒಬ್ಬ ಹೆಂಗಸು ಹೋಗುವಂತಾದಾಗ ಮಾತ್ರವೇ ನಿಜವಾದ ಸ್ವಾತಂತ್ಯ್ರ ಎಂದಿದ್ದಾರೆ. ರಾತ್ರಿ 12ಗಂಟೆ ಬಿಡಿ, ಮಧ್ಯಾಹ್ನ 12ಗಂಟೆಯ ಹೊತ್ತಿಗೆ ಹೊರಗೆ ಹೋದ ಹೆಣ್ಣುಮಗಳು ಸುರಕ್ಷಿತವಾಗಿ ಹಿಂದುರಿಗಿ ಬರುವುದೂ ಈಗ ದುಸ್ತರವಾಗಿದೆ. ನಮ್ಮ ಇಂದಿನ ಶಿಕ್ಷಣ ಪದ್ದತಿ, ಅತಿಯಾದ ಪಾಶ್ವಾತ್ಯ… Read More ಅತ್ಯಾಚಾರಕ್ಕೆ ಧರ್ಮವಿಲ್ಲ.

ಎಲ್ಲರೂ ಮಾಡುವುದು ಹೊಟ್ಟೆಗಾಗಿ

ಅನ್ನಂ ಪರಬ್ರಹ್ಮ ಸ್ವರೂಪ ಎಂದು ಎರಡು ಹೊತ್ತಿನ ಊಟಕ್ಕೂ ಗತಿ ಇಲ್ಲದವರಿಗಾಗಿ ನಮ್ಮ ಮಠ ಮಂದಿರಗಳಲ್ಲಿ ಅನ್ನ ದಾಸೋಹ ಎನ್ನುವ ಸುಂದರ ಪರಿಕಲ್ಪನೆ ನಿಧಾನವಾಗಿ ಮಾಯವಾಗುತ್ತಾ, ಅನ್ನವನ್ನೇ ಮಾರಾಟ ಮಾಡುವ ವ್ಯವಸ್ಥೆ ಆರಂಭವಾದ ಪರಿಣಾಮ ನಮ್ಮ ಅಡುಗೆ ಮನೆಗಳಲ್ಲಿ ಒಲೆಯನ್ನೇ ಹಚ್ಚದಿರುವಂತಹ ಆಘಾತಕಾರಿಯ ಕರಾಳ ವಾಸ್ತವಿಕತೆ ಇದೋ ನಿಮಗಾಗಿ… Read More ಎಲ್ಲರೂ ಮಾಡುವುದು ಹೊಟ್ಟೆಗಾಗಿ