ಕೂರೋನ ಇನ್ನೆಷ್ಟೂ ಅಂತಾ ಮನೆಯೊಳಗೇ ಕೂರೋಣಾ?

ಚೀನಾದ ದೇಶದ ವುಹಾನ್ ಪಟ್ಟಣದಲ್ಲಿ ಬಾವಲಿಗಳಿಂದ ಮೊದಲು ಕಾಣಿಸಿಕೊಂಡ ಕೂರೋನ ಎಂಬ ಮಹಾಮಾರಿ ಸೋಂಕು ನೋಡ ನೋಡುತ್ತಿದ್ದಂತೆಯೇ ಕೆಲವೇ ಕೆಲವು ದಿನಗಳಲ್ಲಿ ಪ್ರಪಂಚಾದ್ಯಂತ ತನ್ನ ಕಬಂಧ ಬಾಹುಗಳನ್ನು ಚಾಚಿ ಲಕ್ಷಾಂತರ ಜನರನ್ನು ಬಲಿ ತೆಗೆದುಕೊಂಡಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಈ ಸೋಂಕು ನಮ್ಮ ದೇಶದಲ್ಲಿ ಹರಡಬಾರದೆಂಬ ಮುಂಜಾಗೃತಾ ಕ್ರಮವಾಗಿ ಆರಂಭದಲ್ಲಿ ಏಪ್ರಿಲ್ 14 ರವಗೆ ದೇಶಾದ್ಯಂತ ಲಾಕ್ ಡೌನ್ ಮಾಡಲಾಗಿ, ಪರಿಸ್ಥಿತಿ ಸುಧಾರಿಸದ ಕಾರಣ ಅದನ್ನು ಎರಡನೆಯ ಬಾರಿಗೆ ಮೇ 3 ರವರೆಗೆ ವಿಸ್ತರಿಸಲಾಗಿದೆ. ಈಗ ಬಲ್ಲ… Read More ಕೂರೋನ ಇನ್ನೆಷ್ಟೂ ಅಂತಾ ಮನೆಯೊಳಗೇ ಕೂರೋಣಾ?

ಭಜರಂಗಿ ಮಹೇಂದ್ರ ಕುಮಾರ್

ಅದು ತೊಂಭತ್ತರ ಕಡೆಯ ದಿನಗಳು ಮತ್ತು ಎರಡು ಸಾವಿರ ಇಸ್ವಿಯ ಆರಂಭದ ದಿನಗಳು. ರಾಜ್ಯದಲ್ಲಿ ಭಜರಂಗ ದಳ ಉಚ್ಛ್ರಾಯ ಸ್ಥಿತಿಯಲ್ಲಿದ್ದ ದಿನಗಳು. ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಲಕ್ಷಾಂತರ ಯುವಕರು ಭಜರಂಗ ದಳಕ್ಕೆ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದರು. ಅಂತಹ ಯುವಕರಲ್ಲಿ ಚಿಕ್ಕಮಗಳೂರಿನ ಮೂಲದ ಮಹೇಂದ್ರ ಕುಮಾರು ಅತ್ಯಂತ ವೇಗವಾಗಿ ಪ್ರವರ್ಧಮಾನಕ್ಕೆ ಬಂದಂತಹ ಯುವಕ. ತನ್ನ ನಡೆ ನುಡಿ, ವಾಗ್ಪಟುತ್ವತೆ, ಪ್ರಖರ ಹಿಂದುತ್ವ ಮತ್ತು ಉಗ್ರ ಹೋರಾಟದ ಫಲವಾಗಿ ಮಹೇಂದ್ರ ಕುಮಾರ್ ನೋಡ ನೋಡುತ್ತಿದ್ದಂತೆಯೇ ಬಜರಂಗದ ರಾಜ್ಯ ಸಂಚಾಲಕರಾಗಿ ಹೋದರು.… Read More ಭಜರಂಗಿ ಮಹೇಂದ್ರ ಕುಮಾರ್

ಕೈಂಕರ್ಯ

ಸೇವೆ ಎಂದರೆ ಕೇವಲ ಹಣದಿಂದ ಮಾತ್ರವೇ ಮಾಡಬೇಕು ಎಂದೇನಿಲ್ಲ ಮತ್ತು ಮಾಡಿದ ಸೇವೆಯನ್ನು ಜಗಜ್ಜಾಹೀರಾತು ಮಾಡುವ ಅವಶ್ಯಕತೆಯೂ ಇಲ್ಲ. ಇಲ್ಲಿ ಯಾರು? ಏನೇನು? ಎಷ್ಟೆಷ್ಟು? ಹೇಗೆ ಸೇವೆ ಮಾಡಿದರು ಅನ್ನೋದರ ಕುರಿತು ಚರ್ಚಿಸಿದರೆ, ಅವರು ಮಾಡಿದ ಸೇವೆಗೆ ಅಪಮಾನ ಮಾಡಿತಂತೆ. ಅವರವರು ಮಾಡಿದ ಸೇವೆ ಅವರಿಗೇ ಮತ್ತು ಭಗವಂತನಿಗೆ ಗೊತ್ತಾದರೆ ಸಾಕು. ಬಲಗೈಯಲ್ಲಿ ಕೊಟ್ಟದ್ದು ಎಡಗೈಗೂ ತಿಳಿಯದ ಹಾಗೆ ಮಾಡಿದರೇನೇ ಕೈಂಕರ್ಯ/ಸೇವೆ ಅನ್ನೋದು.… Read More ಕೈಂಕರ್ಯ

ಇತ್ತೀಚಿನ ದಿನಗಳಲ್ಲಿ ಭಾರತೀಯರು ಮೋದಿಯವರನ್ನು ಮತ್ತು ಬಿಜೆಪಿಯನ್ನು ಇಷ್ಟ ಪಡುತ್ತಿಲ್ಲವೇ?

ಇತ್ತೀಚಿನ ದಿನಗಳಲ್ಲಿ ಬಹುಪಾಲು ಭಾರತೀಯರು ಶ್ರೀ ನರೇಂದ್ರ ಮೋದಿಯನ್ನು ಇಷ್ಟಪಡುತ್ತಿಲ್ಲ ಎಂದು ಖಡಾ ಖಂಡಿತವಾಗಿ ಹೇಳಲಾಗುವುದಿಲ್ಲವಾದರೂ, ಭಾರತೀಯರು ಬಿಜೆಪಿಯಿಂದ ಸ್ವಲ್ಪ ಅಂತರವನ್ನು ಕಾಪಾಡಿಕೊಳ್ಳಲು ಬಯಸುತ್ತಿದ್ದಾರೆ ಎಂದು ಮಾತ್ರ ಹೇಳಬಲ್ಲೆ. ಅದಕ್ಕೆ ಉತ್ತರವನ್ನು ಹುಡುಕುವುದು ತುಂಬಾ ಸುಲಭ. ಪ್ರಧಾನಿಗಳಾಗಿ ಮೋದಿಯವರ ಕಾರ್ಯತತ್ಪರತೆಯನ್ನು ದೇಶ ವಿದೇಶಗಳಲ್ಲಿ ಇರುವ ಕೋಟ್ಯಾಂತರ ಭಾರತೀಯರು ಬಹಳವಾಗಿ ಇಷ್ಟು ಪಡುತ್ತಾರೆ. ದಿನದ ಹದಿನೆಂಟು ಗಂಟೆಗಳ ಕಾಲ ದೇಶಕ್ಕಾಗಿಯೇ ನಿಸ್ವಾರ್ಥವಾಗಿ ದುಡಿಯುತ್ತಿರುವುದನ್ನು ಜನರು ಗೌರವಿಸುತ್ತಾರೆ. ನಿಜವಾಗಿಯೂ ಮೋದಿಯವರು ಪ್ರಧಾನಿಗಳಾದ ಮೇಲೆ ನಮ್ಮ ವಿದೇಶೀ ಬಾಂಧವ್ಯ ಬಹಳಷ್ಟು ಸುಧಾರಣೆಯಾಗಿದೆ.… Read More ಇತ್ತೀಚಿನ ದಿನಗಳಲ್ಲಿ ಭಾರತೀಯರು ಮೋದಿಯವರನ್ನು ಮತ್ತು ಬಿಜೆಪಿಯನ್ನು ಇಷ್ಟ ಪಡುತ್ತಿಲ್ಲವೇ?

ಕಾಲ ಹೀಗೇ  ಇರುವುದಿಲ್ಲ

ಸ್ವಲ್ಪ ದಿನಗಳಾದ ನಂತರ, ಯಾರೂ ನಮ್ಮಲ್ಲಿ ಈ ವಿಷಯಗಳ ಬಗ್ಗೆ ವಿಚಾರಿಸುವುದೇ ಇಲ್ಲಾ ನೀವು ಎಷ್ಟು ಹಣ ಸಂಪಾದಿಸಿದ್ದೀರೀ? ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಎಷ್ಟು? ನಿಮ್ಮಲ್ಲಿ ಎಷ್ಟು ಮತ್ತು ಯಾವ ಕಾರುಗಳಿವೆ? ಅಂತಾ, ಅದರ ಬದಲು ಎಲ್ಲರೂ ಕೇಳುವುದು ಕೇವಲ ಎರಡೇ ಪ್ರಶ್ನೆಗಳು ನಿಮ್ಮ ಆರೋಗ್ಯ ಹೇಗಿದೆ? ನಿಮ್ಮ ಮಕ್ಕಳು ಏನು ಮಾಡ್ತಾ ಇದ್ದಾರೆ? ಹಾಗಾಗಿ ಈ ಕರೋನಾ ಲಾಕ್ ಡೊನ್ ಸಮಯದಲ್ಲಿ ಚೆನ್ನಾಗಿ ಊಟ ತಿಂಡಿ ಮಾಡಿ, ಸ್ವಲ್ಪ ವ್ಯಾಯಾಮಾನೂ ಮಾಡಿ , ಮನೆಯಿಂದ ಹೊರಗೆ… Read More ಕಾಲ ಹೀಗೇ  ಇರುವುದಿಲ್ಲ

ಹೈಡ್ರಾಕ್ಸಿಕ್ಲೋರೊಕ್ವಿನ್

ಹೈಡ್ರಾಕ್ಸಿಕ್ಲೋರೊಕ್ವಿನ್ ಈ ಮಾತ್ರೆಗೆ ಇದ್ದಕ್ಕಿದ್ದಂತೆಯೇ ಜಗತ್ತಿನಾದ್ಯಂತ ಬೇಡಿಕೆ ಬಂದು ಬಿಟ್ಟಿದೆ. ಮಹಾಮಾರಿ ಕೂರೋನಾ ಸೋಂಕಿಗೆ ಇನ್ನೂ ಯಾವುದೇ ಮದ್ದನ್ನು ಕಂಡು ಹಿಡಿಯದ ಕಾರಣ ಹೈಡ್ರಾಕ್ಸಿಕ್ಲೋರೊಕ್ವಿನ್ ಔಷಧಿ ಸ್ವಲ್ಪ ಮಟ್ಟಿಗೆ ಈ ಮಹಾಮಾರಿಯನ್ನು ತಹಬಂದಿಗೆ ತರುತ್ತದೆ ಎಂದು ಕಂಡು ಕೊಂಡಿರುವ ಪರಿಣಾಮ ಅಮೇರೀಕ, ಇಟಲಿ, ಜರ್ಮನಿ ಹೀಗೇ ನಾನಾ ದೇಶಗಳು ಭಾರತಕ್ಕೆ ಹೈಡ್ರಾಕ್ಸಿಕ್ಲೋರೊಕ್ವಿನ್ ಮಾತ್ರೆಗಳನ್ನು ರಫ್ತುಮಾಡುವಂತೆ ಗೋಗರಿಯುತ್ತಿವೆ. ವಸುದೈವ ಕುಟುಬಕಂ ಎಂಬ ತತ್ವದಡಿಯಲ್ಲಿ ನಮ್ಮ ದೇಶವೂ ಈ ಎಲ್ಲಾ ದೇಶಗಳಿಗೂ ಹೈಡ್ರಾಕ್ಸಿಕ್ಲೋರೊಕ್ವಿನ್ ಮಾತ್ರೆಗಳನ್ನು ರಫ್ತು ಮಾಡಲು ಒಪ್ಪಿಕೊಂಡಿರುವುದು ನಿಜಕ್ಕೂ… Read More ಹೈಡ್ರಾಕ್ಸಿಕ್ಲೋರೊಕ್ವಿನ್

ವಿಶ್ವ ಆರೋಗ್ಯ ದಿನಾಚರಣೆ

ವಿಶ್ವ ಆರೋಗ್ಯ ದಿನವು ಜಾಗತಿಕ ಆರೋಗ್ಯ ಜಾಗೃತಿ ದಿನವಾಗಿದ್ದು, ಪ್ರತಿವರ್ಷ ಏಪ್ರಿಲ್ 7 ರಂದು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಇತರ ಸಂಬಂಧಿತ ಸಂಸ್ಥೆಗಳ ಸಹಯೋಗದೊಂದಿಗೆ ಆಚರಿಸಲಾಗುತ್ತದೆ. ಆರೋಗ್ಯದ ಕಾಳಜಿ ಕುರಿತಾಗಿ ವಿಶ್ವಾದ್ಯಂತ ಜನಸಾಮಾನ್ಯರಲ್ಲಿ ಅರಿವು ಮೂಡಿಸಲು ವಿಶ್ವ ಆರೋಗ್ಯ ಸಂಸ್ಥೆ ಪ್ರತಿ ವರ್ಷವೂ ಏಪ್ರಿಲ್ 7 ರಂದು ವಿಶ್ವ ಆರೋಗ್ಯ ದಿನ ವೆಂದು ಆಚರಿಸುತ್ತದೆ. ಈ ದಿನದಂದು ಸಾರ್ವಜನಿಕರಿಗೆ ಆರೋಗ್ಯ ಮತ್ತು ಹಲವಾರು ಕೆಡುಕುಗಳ ಬಗ್ಗೆ ಮಾಹಿತಿ ಮತ್ತು ಮಾರ್ಗದರ್ಶನ ನೀಡಲಾಗುತ್ತದೆ. ನೈರ್ಮಲ್ಯ ಯುಕ್ತ ಸಮಾಜಕ್ಕೆ… Read More ವಿಶ್ವ ಆರೋಗ್ಯ ದಿನಾಚರಣೆ

ನಿಮಗಿದು ಗೊತ್ತೆ?

ನಮ್ಮ ಭಾರತ ದೇಶದಲ್ಲಿ 545 ಲೋಕಸಭಾ ಸದಸ್ಯರುಗಳು 245 ರಾಜ್ಯಸಭಾ ಸಂಸದರು 4120 ಶಾಸಕರು ಹೀಗೇ ಒಟ್ಟಾರೆಯಾಗಿ 4910 ಸಾರ್ವಜನಿಕ ಪ್ರತಿನಿಧಿಗಳು ನಮ್ಮನ್ನು ಪ್ರತಿನಿಧಿಸುತ್ತಿದ್ದಾರೆ. ಜನರಿಂದ, ಜನರಿಗಾಗಿ, ಜನರಿಗೋಸ್ಕರವಾಗಿಯೇ ಆಯ್ಕೆಯಾದ ಈ ಜನಪ್ರತಿನಿಧಿಗಳು ಕಾಲಕಾಲಕ್ಕೆ ಸರ್ಕಾರದಿಂದ ಮಾಸಿಕ ಸಂಬಳ, ಆ ಭತ್ಯೆ, ಈ ಭತ್ಯೆ ಎಂದು ಲಕ್ಷಾಂತರ ರೂಪಾಯಿಗಳನ್ನು ಜನರ ತೆರಿಗೆಯ ರೂಪದಲ್ಲಿ ಸಂಗ್ರಹವಾದ ಹಣದಿಂದ ಪಡೆಯುತ್ತಿದ್ದಾರೆ. ನೆರೆ ಬರಲಿ ಬರ ಬರಲಿ, ಸೋಂಕುಗಳ ಹಾವಳಿ ಇರಲಿ ಇವರ ಭತ್ಯೆಗಳಿಗೆ ಮತ್ತು ಸೌಲಭ್ಯಗಳಿಗೆ ಯಾವುದೇ ಕುಂದು ಕೊರತೆಯಂತೂ… Read More ನಿಮಗಿದು ಗೊತ್ತೆ?

ಎಲೆಮರೆ ಕಾಯಿಗಳು

ನಮಗೆಲ್ಲರಿಗೂ ತಿಳಿದಿರುವಂತೆ ಮಹಾಮಾರಿ ಕೊರೋನ ಚೀನಾದೇಶದಲ್ಲಿ ಆರಂಭವಾಗಿ ಐರೋಪ್ಯ ದೇಶಗಳಲ್ಲಿ ಅಟ್ಟಹಾಸ ಮೆರೆದು ಈಗ ಭಾರತದ ಕಡೆ ತನ್ನ ಕೆನ್ನಾಲಿಗೆ ಬೀರಲು ಸಿದ್ಧವಾಗುತ್ತಿದೆ. ಅದನ್ನು ತಡೆಯಲು ನಮ್ಮ ಸರ್ಕಾರವೂ ಕೂಡ ಏಪ್ರಿಲ್ 15ರ ತನಕ ಇಡೀ ದೇಶವನ್ನೇ ಲಾಕ್ ಡೌನ್ ಮಾಡಿದೆ. ಹಾಗಾಗಿ ಕೋಟ್ಯಾಂತರ ದಿನಗೂಲಿ ನೌಕರಿಗೆ ಮತ್ತು ಬಡಬಗ್ಗರಿಗೆ ದಿನ ನಿತ್ಯದ ಕೂಳಿಗೆ ತೊಂದರೆಯಾಗುತ್ತಿದ್ದದ್ದನ್ನು ಮನಗಂಡು ಪ್ರಧಾನಿಗಳೂ ಸಹಾ ಕೋಟ್ಯಾಂತರ ರೂಪಾಯಿಗಳ ನೆರವನ್ನು ಘೋಷಿಸಿದ್ದಾರೆ ಮತ್ತು ದೇಶವಾಸಿಗಳಿಂದ ಈ ಮಹತ್ಕಾರ್ಯಕ್ಕೆ ತಮ್ಮ ಅಳಿಲು ಸೇವೆ ಸಲ್ಲಿಸಲು… Read More ಎಲೆಮರೆ ಕಾಯಿಗಳು