ಸಿದ್ದಗಂಗಾ ಶ್ರೀಗಳು

ಒಂದೂರಲ್ಲೊಬ್ಬ ನಾಸ್ತಿಕನಿದ್ದ. ಅವನು ದೇವರನ್ನೂ ನಂಬುತ್ತಿರಲಿಲ್ಲ ಹಾಗೆಯೇ ಜ್ಯೋತಿಷಿಗಳನ್ನೂ ನಂಬುತ್ತಿರಲಿಲ್ಲ. ಹೇಗಾದರೂ ಮಾಡಿ ಜ್ಯೋತಿಷಿಗಳ ಬಂಡವಾಳವನ್ನು ಬಯಲು ಮಾಡಬೇಕೆಂದು ಹವಣಿಸುತ್ತಿದ್ದ. ಒಂದು ದಿನ ಅವನ ಸ್ನೇಹಿತನ ಮನೆಗೆ ಹೋಗಿದ್ದಾಗ ಅವರ ಮನೆಗೆ ಬಂದಿದ್ದ ಪ್ರಖ್ಯಾತ ಜ್ಯೋತಿಷಿಗಳನ್ನು ಇವನಿಗೆ ಪರಿಚಯಿಸಲಾಯಿತು. ಇಂತಹದ್ದೇ ಸುಸಂಧರ್ಭವನ್ನು ಎದುರು ನೋಡುತ್ತಿದ್ದ ಅವನಿಗೆ ರೊಟ್ಟಿ ಜಾರಿ ತುಪ್ಪಕ್ಕೇ ಬಿದ್ದಹಾಗಾಯಿತು.  ಹಾಗೆಯೇ ಜ್ಯೋತಿಷಿಗಳನ್ನು ಮಾತಿಗೆಳೆದು ನನ್ನಲ್ಲಿ ಒಂದು ಸಮಸ್ಯೆಯಿದೆ ಅದನ್ನು ಸ್ವಲ್ಪ ಬಗಹರಿಸುವಿರಾ ಎಂದು ಕೇಳಿದ. ಅವನ ಮುಖವನ್ನು ಒಮ್ಮೆ ದಿಟ್ಟಿಸಿ ನೋಡಿದ ಜ್ಯೋತಿಷಿಗಳು ಮುಗುಳ್ನಗೆಯಿಂದ… Read More ಸಿದ್ದಗಂಗಾ ಶ್ರೀಗಳು

ನಿರ್ಮಲ ಸೀತಾರಾಮನ್ ಅವರ ಸಂವಾದ ಕಾರ್ಯಕ್ರಮ

ಬೆಂಗಳೂರಿನ ವಿದ್ಯಾರಣ್ಯಪುರದ ಚಿಂತಕರ ಚಾವಡಿಯ ಆಶ್ರಯದಲ್ಲಿ ಇಂದು ದ್ವಾರಕ ಕನ್ವೆಂಷನ್ ಹಾಲ್ನಲ್ಲಿ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮ ಕಿಕ್ಕಿರಿದು ತುಂಬಿದ್ದ ದೇಶಭಕ್ತ ಆಭಿಮಾನಿಗಳ ಸಮ್ಮುಖದಲ್ಲಿ ಅತ್ಯಂತ ಸ್ಪೂರ್ತಿದಾಯಕವಾಗಿ ನರೆವೇರಿತು. ನಿರ್ಮಲ ಸೀತಾರಾಮ್ ಅವರು ಕಾರ್ಯಕ್ರಮಕ್ಕೆ ಆಗಮಿಸುವವರೆಗೂ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ಇಂದಿನ ಮನ್ ಕೀ ಬಾತ್  ಮುದ್ರಿತ ಕಾರ್ಯಾಕ್ರಮವನ್ನು ತದೇಕ ಚಿತ್ತದಿಂದ ಆಲಿಸುತ್ತಿದ್ದ  ನೆರೆದಿದ್ದ ನೂರಾರು  ಕಾರ್ಯಕರ್ತರು, ನಿರ್ಮಲಾ ಸೀತಾರಾಮನ್ ಅವರು ಆಗಮಿಸುತ್ತಿದ್ದಂತೆಯೇ ಮುಗಿಲು ಮುಟ್ಟುವ ಹಾಗೇ ಬೊಲೋ ಭಾರತ್ ಮಾತಾ ಕೀ ಜೈ ಮತ್ತು… Read More ನಿರ್ಮಲ ಸೀತಾರಾಮನ್ ಅವರ ಸಂವಾದ ಕಾರ್ಯಕ್ರಮ

1983 ಕ್ರಿಕೆಟ್ ವರ್ಲ್ಡಕಪ್, ಭಾರತದ ಯಶೋಗಾಥೆ

ಜೂನ್‌ 25, 1983, ಆಗ ನಾನು‌ ಎಂಟನೇ‌ ತರಗತಿಯಲ್ಲಿ‌ ಓದುತ್ತಿದೆ.‌ ಸಾಧಾರಣ ಮಧ್ಯಮ ಕುಟುಂಬದವರಾಗಿದ್ದ ನಮಗೆ ಸ್ವಂತ‌ ಟಿವಿ ಹೊಂದುವುದು ಕಷ್ಟಕರವಾದ ದಿನವದು. ಅಲ್ಲೋ ಇಲ್ಲೋ ಒಬ್ಬೊಬ್ಬರ ‌ಮನೆಯಲ್ಲಿ, ಕೋನಾರ್ಕ್ ಅಥವಾ ಸಾಲಿಡೇರ್ ಅಥವಾ ಡಯೋನೋರಾ ಅಥವಾ ಬಿಪಿಎಲ್ ಕಂಪನಿಗಳ ಕಪ್ಪು ಬಿಳಿಪಿನ ಟಿವಿ ಇರುತ್ತಿದ್ದ ಕಾಲವದು. ಮೂಗಿಗಿಂತ ಮೂಗಿನ ನತ್ತೇ ಭಾರವೆಂಬಂತೆ, ಟಿವಿಗಿಂತ ಆಂಟೆನಾ ಬಾರೀ ದೊಡ್ಡದಾಗಿರುತ್ತಿತ್ತು. ಮನೆಯ ಮೇಲಿನ ಆಂಟೆನಾದ ಗಾತ್ರದಿಂದಲೇ ಮನೆಯವರ ಸಿರಿತನ ಗುರುತಿಸುತ್ತಿದ್ದ ಕಾಲವದು. ಶಾಲೆ ಮುಗಿಸಿ ಮನೆಗೆ ಬಂದ ನನಗೆ… Read More 1983 ಕ್ರಿಕೆಟ್ ವರ್ಲ್ಡಕಪ್, ಭಾರತದ ಯಶೋಗಾಥೆ

ಅಹಂ

ಅದೊಂದು ಮಧ್ಯಮ ವರ್ಗದ ಕುಟುಂಬ. ಯಜಮಾನರು ಖಾಸಗೀ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಮನೆಯೊಡತಿ ಅಪ್ಪಟ ಗೃಹಿಣಿ. ಇರುವ ಒಬ್ಬನೇ ಒಬ್ಬ ಮಗನನ್ನು ಹೊಟ್ಟೆ, ಬಟ್ಟೆ ಕಟ್ಟಿ  ಸಾಕಿ ಸಲಹಿ ಒಳ್ಳೆಯ ವಿದ್ಯಾವಂತನನ್ನಾಗಿ ಮಾಡಿದರು. ಆ ಹುಡುಗನೂ ಅಷ್ಟೇ  ತಂಬಾ ಬುದ್ಧಿವಂತ. ಕಠಿಣ ಪರಿಶ್ರಮದಿಂದ ಓದಿ ಐದಂಕಿ ಸಂಬಳ ಪಡೆಯುವಷ್ಟು ಎತ್ತರಕ್ಕೆ ಬೆಳೆದ. ವಯಸ್ಸಿಗೆ ಬಂದ ಮಗನಿಗೆ ವಧು ಅನ್ವೇಷಣೆಗಾಗಿ ವಧುವರ ಕೇಂದ್ರಕ್ಕೆ  ಹೋಗಿದ್ದರು. ಅದೇ  ಸಮಯಕ್ಕೆ  ಊರಿನ ಮತ್ತೊಂದು ಭಾಗದಲ್ಲಿದ್ದ ಇನ್ನೊಂದು ಮಧ್ಯಮ ವರ್ಗದ ಕುಟುಂಬದ ಒಬ್ಬಳೇ … Read More ಅಹಂ

ಕಿರಿ ಕಿರಿಯೋ ಇಲ್ಲವೇ ಕ್ರಿಕೆಟ್ಟೋ

ವ್ಯಾಪಾರಕ್ಕೆಂದು ಭಾರತಕ್ಕೆ ಬಂದ ಬ್ರಿಟಿಷರು ಭಾರತದ ಸಂಪತ್ತನ್ನು ಕೊಳ್ಳೆ  ಹೊಡೆದ್ದದ್ದಲ್ಲದೆ, ನಮ್ಮ ಸಂಸ್ಕೃತಿ, ಸಂಪ್ರದಾಯ, ಶಿಕ್ಷಣ ಪದ್ದತಿ, ಗುಡಿ ಕೈಗಾರಿಕೆ, ಕೃಷಿ ಮತ್ತು ಹೈನುಗಾರಿಕೆಯನ್ನು ಹಾಳು ಗೆಡವುದರ ಜೊತೆ ಜೊತೆಗೆ ನಮ್ಮ ಜನರಿಗೆ ಅತ್ಯಂತ ಸೋಮಾರೀ ಆಟವಾದ ಕ್ರಿಕೆಟ್ಟನ್ನು ಕಲಿಸಿಕೊಟ್ಟು ಹೋದದ್ದು ನಮ್ಮ ದೇಶದ ಪರಮ ದೌರ್ಭಾಗ್ಯವೇ ಸರಿ.   ಆರಂಭದಲ್ಲಿ  ಕ್ರಿಕೆಟ್ಟನ್ನು  ಬಹಳ ಸಂಭಾವಿತರ ಆಟ ಎಂದೇ ಬಣ್ಣಿಸಲಾಗುತ್ತಿದ್ದರೂ ಇಂದು ಬೆಟ್ಟಿಂಗ್ ದಂಧೆ ಮತ್ತು ಆಟಗಾರರ ಕಳ್ಳಾಟಗಳಿಂದ ಕಳಂಕ ಗೊಂಡಿದೆ.  ಭಾರತ 1983ರ ಪೃಡೆಂಷಿಯಲ್ ವರ್ಲ್ಡ್ ಕಪ್… Read More ಕಿರಿ ಕಿರಿಯೋ ಇಲ್ಲವೇ ಕ್ರಿಕೆಟ್ಟೋ