ಸಾಧನೆ

ಬಹಳ ಹಿಂದೆ , ಜೀವನದಲ್ಲಿ ನಮ್ಮ‌ ಸಾಧನೆ ಹೇಗಿರಬೇಕೆಂದರೆ, ನಾಲ್ಕಾರು ಜನರ ಮಧ್ಯೆ ನಮ್ಮ ಉಪಸ್ಥಿತಿಗಿಂತ, ನಮ್ಮ ಅನುಪಸ್ಥಿತಿ ಎದ್ದು‌‌ ಕಾಣುವಂತಿರಬೇಕು ಎಂದು ಬರೆದಿದ್ದೆ. ಇಂದು ಅಕ್ಷರಶಃ ಅದರ ಪ್ರಾತ್ಯಕ್ಢತೆಯನ್ನು ನೋಡುವ ಸುವರ್ಣಾವಕಾಶ ದೊರೆಯುವಂತಾಯಿತು. 28 ಮೇ 1883 ರಲ್ಲಿ ಮಹಾರಾಷ್ಟ್ರದ ಭಾಗೂರ್ ಎಂಬ ಸಣ್ಣ ಗ್ರಾಮದಲ್ಲಿ ಜನಿಸಿದ ವಿನಾಯಕ ದಾಮೋದರ ಸಾವರ್ಕರ್ ಅವರ ಬಗ್ಗೆ ಸರಿಯಾಗಿ ತಿಳಿದವರಿಗಿಂತ ತಿಳಿಯದವರೇ ಹೆಚ್ಚಿನವರಿದ್ದಾರೆ.  ಬಹುಶಃ ಪ್ರಪಂಚದಲ್ಲಿ ಅಷ್ಟು ದೀರ್ಘಕಾಲದ ಕಠಿಣ ಶಿಕ್ಷೆ ಮತ್ತು ನಿಂದನೆಯನ್ನು ಬದುಕಿದ್ದಾಗಲೂ ಮತ್ತು ಸತ್ತ… Read More ಸಾಧನೆ

ಬಾಳೇಹಣ್ಣಿನ ಜಾಮೂನು

ಸಾಧಾರಣವಾಗಿ ಎಲ್ಲರ ಮನೆಯಲ್ಲಿಯೂ ಸಂಭ್ರಮವನ್ನು  ಸಿಹಿತಿಂಡಿಯನ್ನು ಪರಸ್ಪರ  ಹಂಚಿತಿನ್ನುವ ಮೂಲಕ ಸಂಭ್ರಮಿಸುವುದು ವಾಡಿಕೆ. ಹಾಗೆ ಸಿಹಿತಿಂಡಿಯನ್ನು ತಯಾರಿಸುವ ವೇಳೆ ಥಟ್ ಅಂತಾ ನೆನಪಾಗೋದೇ ಜಾಮೂನು.  ಅಂಗಡಿಯಲ್ಲಿ ಸಿಗುವ instant jamun mix  ತಂದು ಮಾಡುವ ಬದಲು ಮನೆಯಲ್ಲಿಯೇ ಇರುವ ಬಾಳೇಹಣ್ಣು ಮತ್ತು ಉದ್ದಿನಬೇಳೆ ಬಳಸಿ  ಅತ್ಯಂತ ರುಚಿಕರವಾದ  ಬಾಳೇಹಣ್ಣಿನ ಜಾಮೂನು ತಯಾರಿಸುವ ವಿಧಾನವನ್ನು  ನಮ್ಮ ನಳಪಾಕದಲ್ಲಿ ತಿಳಿದು ಕೊಳ್ಳೋಣ. ಸುಮಾರು 20-30 ಬಾಳೇಹಣ್ಣಿನ ಜಾಮೂನು ಮಾಡಲು ಬೇಕಾಗುವ ಸಾಮಗ್ರಿಗಳು ಉದ್ದಿನ ಬೇಳೆ – 1 ಬಟ್ಟಲು ಸಕ್ಕರೆ… Read More ಬಾಳೇಹಣ್ಣಿನ ಜಾಮೂನು

ಕೂರೋನಾ ಮತ್ತು ಕಾಂಗ್ರೇಸ್

ಕೂರೋನಾ ಮಹಾಮಾರಿಯಿಂದಾಗಿ ಇಡೀ ಪ್ರಪಂಚವೇ ನಲುಗಿ ಹೋಗಿದೆ. ಜಗತ್ತಿನ ಅತ್ಯಂತ ಮುಂದುವರಿದ ಅದೆಷ್ಟೋ ದೇಶಗಳಲ್ಲಿ ಜನರು ದೀಪದ ಹುಳುವಿನಂತೆ ರಸ್ತೆಗಳಲ್ಲಿ ದಿಕ್ಕು ದಿಸೆಯಿಲ್ಲದೇ ಸಾವನ್ನಪ್ಪುತ್ತಿದ್ದಾರೆ.  ಆದರೆ ಜನಸಂಖ್ಯೆಯಲ್ಲಿ ವಿಶ್ವದ ಎರಡನೇ ಅತಿ ದೊಡ್ಡದಾದ ರಾಷ್ಟ್ರವಾದ ನಮ್ಮ ದೇಶದಲ್ಲಿ  ಪರಿಸ್ಥಿತಿ  ವಿಭಿನ್ನವಾಗಿದೆ.  ಇದಕ್ಕೆ ತದ್ವಿರುದ್ಧವಾಗಿದೆ.  ಪರಿಸ್ಥಿತಿ ಕೈ ಜಾರುವ ಮುನ್ನವೇ ಪ್ರಧಾನಿಗಳು ದೇಶಾದ್ಯಂತ  ಲಾಕ್ ಡೌನ್ ಹೇರಿದ ಪರಿಣಾಮ, ಕೆಲವು ಅವಿವೇಕಿಗಳ ಹೊರತು ಪಡಿಸಿ,  ಬಹುತೇಕರು ಮನೆಯಲ್ಲಿಯೇ ಭಧ್ರವಾಗಿದ್ದ ಕಾರಣ,   ಕೊರೋನಾದ  ದುಷ್ಪರಿಣಾಮ ಅಷ್ಟೇನೂ ಭಯಂಕರವಾಗಿರದೇ, ಪರಿಸ್ಥಿತಿ ನಿಯಂತ್ರಣದಲ್ಲಿತ್ತು. … Read More ಕೂರೋನಾ ಮತ್ತು ಕಾಂಗ್ರೇಸ್

ಇಂದೋರಿನ ಪಿತೃಪರ್ವತದ ವಿರಾಟ್ ವೀರಾಂಜನೇಯ

ಮಧ್ಯಪ್ರದೇಶದ ಇಂದೋರಿನ ಪಿತೃಪರ್ವತದಲ್ಲಿ ನಿರ್ಮಾಣವಾಗುತ್ತಿರುವ ವಿರಾಟ್ ವೀರಾಂಜನೇಯನ ವಿಗ್ರಹದ ಮುಂದೆ ನಿಂತಿದ್ದೇವೆ. ಸರಿ ಸುಮಾರು 62 ಅಡಿ ಅಗಲ, 66 ಅಡಿ ಎತ್ತರದ, 90 ಟನ್ ತೂಕದ ಸುಮಾರು 10 ಕೋಟಿ ವೆಚ್ಚದಲ್ಲಿ ಸಾರ್ವಜನಿಕರ ಸಹಕಾರದಿಂದ ನಿರ್ಮಿಸಲಾಗುತ್ತಿರುವ ಈ ಅಷ್ಟಧಾತು ಲೋಹದಿಂದ ತಯಾರಿಸಿರುವ ಧ್ಯಾನ ಭಂಗಿಯಲ್ಲಿ ಕುಳಿತಿರುವ ಪ್ರಪಂಚದ ಅತಿ ದೊಡ್ದ ಹನುಮಂತನ ಪ್ರತಿಮೆಯ ನಿರ್ಮಾಣ ಭರದಿಂದ ಸಾಗಿದೆ. ಈ ಪ್ರತಿಮೆಯನ್ನು ಹವಾಮಾನದಿಂದ ರಕ್ಷಿಸಲು ವಿಶೇಷವಾಗಿ ಹೊಳಪು ನೀಡಲಾಗಿದೆ. ರಾಜಸ್ಥಾನದ ಜೈಪುರದಲ್ಲಿ ಈ ವಿಗ್ರಹದ ಬಿಡಿ ಭಾಗಗಳನ್ನು… Read More ಇಂದೋರಿನ ಪಿತೃಪರ್ವತದ ವಿರಾಟ್ ವೀರಾಂಜನೇಯ

ಅತ್ಮನಿರ್ಭರ್( ಸ್ವಾಭಿಮಾನಿ) ಇಡ್ಲಿ ಅಜ್ಜಿ

ಕೂರೋನಾ ಮಹಾಮಾರಿಯಿಂದಾಗಿ ಇಡೀ ವಿಶ್ವವೇ ಲಾಕ್ ಡೌನ್ ಆಗಿರುವ ಪರಿಣಾಮ ವಿಶ್ವಾದ್ಯಂತ ಅನೇಕರು ಕೆಲಸ ಕಳೆದುಕೊಂಡಿದ್ದಾರೆ ಮತ್ತು ಎಲ್ಲಾ . ದೇಶಗಳ ಆರ್ಥಿಕ ಪರಿಸ್ಥಿತಿ ಶೋಚನೀಯವಾಗಿದೆ. ಇಂತಹ ಸಂದರ್ಭದಲ್ಲಿ ಕೆಂದ್ರ ಮತ್ತು ರಾಜ್ಯ ಸರ್ಕಾರ ನಾನಾ ರೀತಿಯ ಆರ್ಥಿಕ ಪರಿಹಾರಗಳನ್ನು ಕೊಡುತ್ತಿರುವಾಗ , ಅದನ್ನು ಜಾತಿಗಳಿಗೆ ಸಮೀಕರಿಸಿ, ನಮ್ಮ ಜಾತಿಗೆ ಸಿಕ್ಕಿಲ್ಲ. ನಮ್ಮ ಪಂಗಡಗಳಿಗೆ ಸಿಕ್ಕಿಲ್ಲ ಎಂದು ಹಾದಿ ಬೀದಿಯಲ್ಲಿ, ಮಾಧ್ಯಮಗಳ ಮುಖಾಂತರ, ಸಾಮಾಜಿಕ ಜಾಲತಾಣಗಳಲ್ಲಿ ಆಯಾಯಾ ಪಂಗಡಗಳ ನಾಯಕರುಗಳು ವಿರೋಧ ಪಕ್ಷದ ರಾಜಕೀಯ ಧುರೀಣರು, ಬಾಯಿ… Read More ಅತ್ಮನಿರ್ಭರ್( ಸ್ವಾಭಿಮಾನಿ) ಇಡ್ಲಿ ಅಜ್ಜಿ

ನುಚ್ಚಿನುಂಡೆ ಮತ್ತು ದೊಡ್ಡಪತ್ರೆ ತಂಬುಳಿ

ಕರ್ನಾಟಕದ ಅತ್ಯಂತ ಸಾಂಪ್ರದಾಯಿಕವಾದ, ಪೌಷ್ಟಿಕರವಾದ ಮತ್ತು ಅಷ್ಟೇ ರುಚಿಕರವಾದ ತಿಂಡಿಯಾದ ನುಚ್ಚಿನುಂಡೆ ಮತ್ತು ಅದರ ಜೊತೆ ನೆಂಚಿಕೊಳ್ಳಲು ದೊಡ್ಡೀಪತ್ರೆ ತಂಬುಳಿಯನ್ನು ಸಾಂಪ್ರದಾಯಕವಾಗಿ ಮನೆಯಲ್ಲಿಯೇ ಹೇಗೆ ತಯಾರಿಸಬಹುದು ಎಂಬುದನ್ನು ನಮ್ಮ ಅನ್ನಪೂರ್ಣಾ ಮಾಲಿಯ ಮೂಲಕ ತಿಳಿಸುಕೊಳ್ಳೋಣ. ಸುಮಾರು 3-4 ಜನರಿಗೆ ಸಾಕಾಗುವಷ್ಟು ನುಚ್ಚಿನುಂಡೆ ತಯಾರಿಸಲು ಬೇಕಾಗುವ ಸಾಮಗ್ರಿಗಳು • ತೊಗರೀಬೇಳೆ – 1 ಬಟ್ಟಲು • ಕಡಲೇಬೇಳೆ- 1 ಬಟ್ಟಲು • ಹೆಸರುಬೇಳೆ – 1 ಬಟ್ಟಲು • ತೆಂಗಿನ ಕಾಯಿ ತುರಿ – 1 ಬಟ್ಟಲು •… Read More ನುಚ್ಚಿನುಂಡೆ ಮತ್ತು ದೊಡ್ಡಪತ್ರೆ ತಂಬುಳಿ

ನಿಜಕ್ಕೂ ಸೋನಿಯಾಗಾಂಧಿ ಪ್ರಶ್ನಾತೀತರೇ?

ಸೋನಿಯಾಗಾಂಧಿಯವರ ಮೂಲ ಹೆಸರನ್ನು ರಿಪಬ್ಲಿಕ್ ಟಿವಿಯ ಪ್ರಧಾನ ಸಂಪಾದಕ ಅರ್ಣಾಬ್ ಗೋಸ್ವಾಮಿ ತಮ್ಮ ಕಾರ್ಯಕ್ರಮದಲ್ಲಿ ಹೇಳಿದ್ದನ್ನೇ ಸಹಿಸಿಕೊಳ್ಳದ ಕಟ್ಟರ್ ಕಾಂಗ್ರೇಸ್ಸಿಗರು ಕೂಡಲೇ ವ್ರಗ್ರರಾಗಿ ದೇಶಾದ್ಯಂತ ಅರ್ಣಾಬ್ ವಿರುದ್ಧ ನೂರಾರು ಕೇಸ್ಗಳನ್ನು ಹಾಕಿದ್ದಲ್ಲದೇ, ಆತನ ಮೇಲೆ ಹಲ್ಲೆಗಳನ್ನು ಮಾಡಿದ್ದು ಇನ್ನೂ ಮಾಸದಿರುವ ಸಂದರ್ಭದಲ್ಲಿಯೇ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು PMcare ಬಗ್ಗೆ ಅಪಮಾನಿಸಿ ದೇಶದ ಜನರಿಗೆ ತಪ್ಪು ಸಂದೇಶ ನೀಡುತ್ತಿರುವ ಸೋನಿಯಾ ಗಾಂಧಿ ವಿರುದ್ದ ಸಾಗರ ಪೋಲಿಸ್ ಠಾಣೆಯಲ್ಲಿ FIR ದಾಖಲು ಮಾಡಿರುವ ವಕೀಲರು… Read More ನಿಜಕ್ಕೂ ಸೋನಿಯಾಗಾಂಧಿ ಪ್ರಶ್ನಾತೀತರೇ?

ರಾಹುಲ್ ಗಾಂಧಿ ಮತ್ತು ರಘುರಾಮ್ ರಾಜನ್ ನಡುವಿನ ಸಂಬಂಧವೇನು?

ಯಾವುದೇ ದೇಶದಲ್ಲಿ ಆಡಳಿತ ಪಕ್ಷ ಸಮರ್ಥವಾಗಿ ಕಾರ್ಯನಿರ್ವಹಿಸಲು ಸಮರ್ಥವಾದ ವಿರೋಧ ಪಕ್ಷಗಳ ಅಗತ್ಯವೂ ಇರುತ್ತದೆ. ವಿರೋಧ ಪಕ್ಷಗಳು ಸದಾ ಕಾವಲು ನಾಯಿಯಂತೆ ಕಾಯುತ್ತಾ ಆಡಳಿತ ಪಕ್ಷದ ಪ್ರತಿಯೊಂದು ನಡೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಾ , ದೇಶದ ಹಿತದೃಷ್ಟಿಯಿಂದ ಆಡಳಿತ ಪಕ್ಷದ ನಡೆಗಳನ್ನು ಎಚ್ಚರಿಸುವ ಕಾರ್ಯ ನಿರ್ವಹಿಸುತ್ತದೆ. ದುರಾದೃಷ್ಟವಷಾತ್ ಕಳೆದ ಆರು ವರ್ಷಗಳಿಂದ, ಭಾರತ ದೇಶದಲ್ಲಿ ನಮರ್ಥವಾದ ವಿರೋಧಪಕ್ಷ ಅಥವಾ ನಾಯಕನ ಕೊರತೆ ಎದ್ದು ಕಾಣುತ್ತಿದ್ದೆ. ಪ್ರಾದೇಶಿಕ ಪಕ್ಷಗಳು ಕೇವಲ ತಮ್ಮ ರಾಜ್ಯದ ಹಿತದೃಷ್ಟಿಯನ್ನು ಗಮನದಲ್ಲಿಟ್ಟು ಹೋರಾಡುತ್ತಿವೆಯೇ ಹೊರತು ಸಮಗ್ರ… Read More ರಾಹುಲ್ ಗಾಂಧಿ ಮತ್ತು ರಘುರಾಮ್ ರಾಜನ್ ನಡುವಿನ ಸಂಬಂಧವೇನು?

ದಿಢೀರ್ ಚಕ್ಕುಲಿ

ಚಕ್ಕುಲಿ ನಮ್ಮ ದಕ್ಷಿಣಭಾರತೀಯರ ಅಚ್ಚುಮೆಚ್ಚಿನ ಕುರುಕಲು ತಿಂಡಿ. ಜೊತೆಗೆ ಸಾಂಪ್ರದಾಯಿಕ ತಿಂಡಿಯೂ ಹೌದು. ಎಲ್ಲಾ ಶುಭ ಸಮಾರಂಭಗಳಲ್ಲಿ ಮುತ್ತೈದೆಯರಿಗೆ ಚಕ್ಕುಲಿ ಉಂಡೆ ಬಾಗಣಕೊಟ್ಟಲ್ಲಿ ಮಾತ್ರವೇ ಆ ಕಾರ್ಯಕ್ರಮ ಯಶಸ್ವಿಯಾಗೋದು. ಹಿಂದಿನ ಕಾಲದಲ್ಲೆಲ್ಲಾ ಗೋಕುಲಾಷ್ಠಮಿ ಅಥವಾ ಮನೆಯ ಸಮಾರಂಭಕ್ಕಿಂತ ಒಂದು ತಿಂಗಳಿಗಿಂತಲೂ ಮುಂಚೆಯೇ ಅಕ್ಕಿ ಮತ್ತು ಉದ್ದಿನ ಬೇಳೆಯನ್ನು ತೊಳೆದು ಒಣಗಿಸಿ, ಅದನ್ನು ಬೆಚ್ಚಗೆ ಹುರಿದು ಸಮ ಪ್ರಮಾಣದಲ್ಲಿ ಬೆರೆಸಿ, ಬೀಸೋ ಕಲ್ಲಿನಿಂದಲೋ ಇಲ್ಲವೇ ಫ್ಲೋರ್ ಮಿಲ್ಲಿನಲ್ಲಿ ಪುಡಿಮಾಡಿಸಿಟ್ಟು ಸಮಾರಂಭಕ್ಕಿಂತ ಒಂದು ವಾರಕ್ಕೆ ಮುಂಚೆಯೇ ನೆಂಟರಿಷ್ಢರು ಮತ್ತು ಅಕ್ಕ… Read More ದಿಢೀರ್ ಚಕ್ಕುಲಿ