ಪ್ರಧಾನಿಗಳ ಇಂದಿನ ಲೇಹ್ ಭೇಟಿಯ ಹಿಂದಿರುವ ಕೂತಹಲಕಾರಿ ಸಂಗತಿಗಳು

ಕಳೆದ ತಿಂಗಳು ಜೂನ್ 15ದಂದು ಭಾರತ ಮತ್ತು ಚೀನಾ ಸೈನಿಕರ ನಡುವೆ ಲಢಾಕ್ಕಿನ ಗಾಲ್ವಾನ್ ಎಂಬ ಪ್ರದೇಶದಲ್ಲಿ ಪರಸ್ಪರ ಘರ್ಷಣೆ ನಡೆದಿದ್ದು, ಈ ಘರ್ಷಣೆಯಲ್ಲಿ ಭಾರತದ 20 ಸೈನಿಕರು ಹುತಾತ್ಮರಾಗಿದ್ದರೆ, ಅದಕ್ಕೆ ಪ್ರತ್ಯುತ್ತರವಾಗಿ ಚೀನಾದೇಶದ 40ಕ್ಕೂ ಅಧಿಕ ಸೈನಿಯರನ್ನು ಯಮಪುರಿಗೆ ಅಟ್ಟಿದದ್ದು ಈಗ ಇತಿಹಾಸವಾಗಿದೆ. ಈ ಸಂಘರ್ಷದ ಇಡೀ ವಿಶ್ವವೇ ಏಷ್ಯಾದಲ್ಲಿ ಶಾಂತಿ ಸೌಹಾರ್ಧತೆಯನ್ನು ಕಾಪಾಡಿಕೊಂಡು ಬರಲು ಸಲಹೆ ನೀಡುತ್ತಿದ್ದರೆ, ಭಾರತ ಮತ್ತು ಚೀನಾ ದೇಶಗಳ ವಿದೇಶಾಂಗ ಸಚಿವರುಗಳು ಮತ್ತು ರಾಜತಾತಂತ್ರಿಕ ಅಧಿಕಾರಿಗಳ ನಡುವೆ ಗಡಿಯಲ್ಲಿ ಶಾಂತಿಯನ್ನು… Read More ಪ್ರಧಾನಿಗಳ ಇಂದಿನ ಲೇಹ್ ಭೇಟಿಯ ಹಿಂದಿರುವ ಕೂತಹಲಕಾರಿ ಸಂಗತಿಗಳು

ಅಚ್ಚುತಾ ಅನಂತಾ ಗೋವಿಂದಾ. ಭಾಗ-2

ಇಡೀ ವಿಮಾನದಲ್ಲಿದ್ದ ಪ್ರಯಾಣಿಕರೆಲ್ಲರೂ ಭಯಭೀತರಗಿದ್ದಾಗ ಸ್ಯಾಮ್ ಕೂಡ ಕೆಲ ಕಾಲ ಗಲಿಬಿಲಿಗೊಂಡಿದ್ದ. ಅದೇ ಸಮಯದಲ್ಲಿ ಸ್ಯಾಮ್ ಗೆ ಯಾವುದೇ ಸಮಸ್ಯೆಗಳು ಎದುರಾದರೂ ಅಚ್ಚುತಾ, ಅನಂತಾ, ಗೋವಿಂದಾ ಎಂದು ಭಕ್ತಿಯಿಂದ ಪ್ರಾರ್ಥಿಸಿದರೆ ಬಂದ ಕಷ್ಟಗಳೆಲ್ಲವೂ ಸುಲಭವಾಗಿ ಪರಿಹಾರವಾಗುತ್ತದೆ ಎಂದು  ತನ್ನ ಅಜ್ಜಿ ಹೇಳಿಕೊಟ್ಟ ದಿವ್ಯ ಮಂತ್ರ ನೆನಪಾಯಿತು. ಕೂಡಲೇ ಎದ್ದು ನಿಂತು ಎತ್ತರದ ಧ್ವನಿಯಲ್ಲಿ  ಎಲ್ಲರೂ ಇಲ್ಲಿ ಸ್ವಲ್ಪ ಗಮನವಿಟ್ಟು ಕೇಳಿ, ಅನಗತ್ಯವಾಗಿ ಭಯ ಪಡದಿರಿ. ನನ್ನ ಬಳಿ ಅದಕ್ಕೆ ಪರಿಹಾರವಿದೆ ಮತ್ತು ನಾನು ಜಪಿಸುವುದನ್ನು ನೀವೂ ಸಹಾ… Read More ಅಚ್ಚುತಾ ಅನಂತಾ ಗೋವಿಂದಾ. ಭಾಗ-2

ಅಚ್ಚುತಾ ಅನಂತಾ ಗೋವಿಂದಾ. ಭಾಗ-1

ಭಾರತದ ದೇಶದಲ್ಲಿ ಅದೋಂದು ಸಣ್ಣ ಗ್ರಾಮ. ಆ ಗ್ರಾಮದಲ್ಲೊಬ್ಬ ವೃದ್ದ ದಂಪತಿಗಳು ವಾಸಿಸುತ್ತಿದ್ದರು. ಮನೆಯ ಹತ್ತಿರವೇ ನದಿಯೊಂದು ಹರಿಯುತ್ತಿದ್ದ ಕಾರಣ ಅವರ ಭಾವಿಯಲ್ಲಿ ಕೇವಲ  10 ಅಡಿಗಳ ಆಳದಲ್ಲಿಯೇ ನೀರಿದ್ದರಿಂದ  ಅವರ  ಮನೆಯ  ಸುತ್ತಲೂ ಮಾವು, ತೆಂಗು, ಹಲಸಿನ ಮರಗಳಲ್ಲದೇ ದಿನ ನಿತ್ಯ ಪೂಜೆಗೆ ಬೇಕಾಗುವಂತಹ ಹೂವಿನ ಗಿಡಗಳಲ್ಲದೇ, ಮನೆಗೆ ಅವಶ್ಯಕವಾಗಿದ್ದ ತರಕಾರಿಗಳನ್ನೂ ತಮ್ಮ ಕೈತೋಟದಲ್ಲಿಯೇ ಬೆಳೆಯುತ್ತಾ ಆನಂದಮಯ ಜೀವನವನ್ನು ನಡೆಸುತ್ತಿದ್ದರು. ಇದಲ್ಲದೇ ಅವರ ಬಳಿ ಭತ್ತ ಬೆಳೆಯುವ ಫಲವತ್ತದ ಸಾಕಷ್ಟು ಗದ್ದೆಯಿದ್ದು ಜೀವನಕ್ಕೇನೂ ಕೊರತೆ ಇರರಲಿಲ್ಲವಾದರೂ,… Read More ಅಚ್ಚುತಾ ಅನಂತಾ ಗೋವಿಂದಾ. ಭಾಗ-1

ದೇವಸ್ಥಾನಗಳ ದಾಸೋಹ

ನನ್ನ ಹಿಂದಿನ ದೇವಾಲಯಗಳು ಶ್ರದ್ಧಾ ಕೇಂದ್ರಗಳೋ ಇಲ್ಲವೇ ಪ್ರವಾಸೀ ತಾಣಗಳೋ ಲೇಖನದಲ್ಲಿ ವಿವರಿಸಿರುವಂತೆ ನಮ್ಮ ಪೂರ್ವಜರು ದೇವಾಲಯಗಳನ್ನು ದಟ್ಟವಾದ ಕಾಡು ಮೇಡುಗಳಲ್ಲಿ, ಎತ್ತರದ ಬೆಟ್ಟಗಳ ಮೇಲೆ ದೇವಸ್ಥಾನಗಳನ್ನು ನಿರ್ಮಿಸುತ್ತಿದ್ದರು. ಆಗೆಲ್ಲಾ ಈಗಿನಂತೆ ವಾಹನಗಳ ಸೌಕರ್ಯವಿರದಿದ್ದ ಕಾರಣ ಭಕ್ತಾದಿಗಳು ಶ್ರದ್ಧಾ ಭಕ್ತಿಗಳಿಂದ ವಾರಾನು ಗಟ್ಟಲೆ, ಇನ್ನೂ ಕೆಲವರು ತಿಂಗಳಾನುಗಟ್ಟಲೆ ನಡೆದುಕೊಂಡೇ ಕಾಡು ಮೇಡುಗಳು, ಹಳ್ಳ ಕೊಳ್ಳಗಳನ್ನು ದಾಟಿ ದೇವರ ದರ್ಶನಕ್ಕೆಂದು ಪುಣ್ಯಕ್ಷೇತ್ರಗಳಿಗೆ ಬಂದು ನಾಲ್ಕೈದು ದಿನಗಳು ಅಲ್ಲಿಯೇ ತಂಗಿ ಮನಸೋ ಇಚ್ಚೆ ದೇವರ ದರ್ಶನ ಪಡೆದು ಪುನಃ ತಮ್ಮ… Read More ದೇವಸ್ಥಾನಗಳ ದಾಸೋಹ

ಎಲ್ಲಾ ಸಮಸ್ಯೆಗಳಿಗೂ ಪರಿಹಾರವಿದೆ.

ಎಲ್ಲರಿಗೂ ಗೊತ್ತಿರುವಂತೆ ಅಮೇರಿಕಾದ ಜನರಲ್ ಮೋಟಾರ್ಸ್ ವಾಹನಗಳ ತಯಾರಿಕೆಯಲ್ಲಿ ಅತ್ಯಂತ ಪುರಾತನವಾದ ಮತ್ತು ಅಷ್ಟೇ ದೊಡ್ಡ ಹೆಸರನ್ನು ಗಳಿಸಿದೆ. ಆ ಕಂಪನಿಯ ವಾಹನಗಳನ್ನು ಹೊಂದಲು ಇಂದಿಗೂ ಜನ ಹೆಮ್ಮೆ ಪಡುತ್ತಾರೆ. ಆದರೆ ಆಂತಹ ಜನರಲ್ ಮೋಟಾರ್ಸ್ ಕಂಪನಿಯನ್ನೇ ಒಂದು ವೆನಿಲ್ಲಾ ಐಸ್ ಕ್ರೀಮ್ ಗೊಂದಲಕ್ಕೀಡು ಮಾಡಿದಂತಹ ಜನರಲ್ ಮೋಟಾರ್ಸ್ ಗ್ರಾಹಕ ಮತ್ತು ಅದರ ಗ್ರಾಹಕ-ಆರೈಕೆ ಕಾರ್ಯನಿರ್ವಾಹಕರ ನಡುವೆ ನಡೆದ ಒಂದು ನೈಜ ರೋಚಕವಾದ ಪ್ರಸಂಗವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಅದೊಂದು ದಿನ ಜನರಲ್ ಮೋಟಾರ್ಸ್‌ನ ಕಂಪನಿಯ ಫಾನ್ಟಿಯಾಕ್ ಕಾರನ್ನು… Read More ಎಲ್ಲಾ ಸಮಸ್ಯೆಗಳಿಗೂ ಪರಿಹಾರವಿದೆ.

ಕಡಲೇಕಾಯಿ ಬಾತ್

ಮನೆಯಲ್ಲಿ ಅದೇ ಚಿತ್ರಾನ್ನ, ಮೊಸರನ್ನ, ಪಲಾವ್, ಮೆಂತ್ಯಾಬಾತ್, ಫ್ರೈಡ್ ರೈಸ್ ಜೀರಾರೈಸ್ ಇಲ್ಲವೇ ಘೀರೈಸ್ ಮುಂತಾದ ಅನ್ನದ ತಿಂಡಿಗಳನ್ನು ತಿಂದು ಬೇಸರವಾಗಿದ್ದಾಗ, ಬದಲಾವಣೆಯಾಗಿ ನಾವು ತಿಳಿಸಿಕೊಡುವ ಅತ್ಯಂತ ಸರಳವಾದ ಕಡಲೇಕಾಯಿ ಬಾತ್ ಮಾಡಿಕೊಡಿ. ಖಂಡಿತವಾಗಿಯೂ ನಿಮ್ಮ ಕುಟುಂಬದವರೆಲ್ಲರೂ ಇಷ್ಟ ಪಟ್ಟು ಮತ್ತಷ್ಟು ಮತ್ತು ಮಗದಷ್ಟು ತಿನ್ನದೇ ಇದ್ದರೆ ನೋಡಿ. ಸುಮಾರು 4-5 ಜನರು ಸವಿಯಬಹುದಾದಷ್ಟು ಕಡಲೇಕಾಯಿ ಬಾತ್ ತಯಾರಿಸಲು ಬೇಕಾಗುವ ಸಾಮಗ್ರಿಗಳು ಕಡಲೆಕಾಯಿ ಬೀಜ – 2 ಬಟ್ಟಲು ಎಳ್ಳು – 1 ಚಮಚ (ಬಿಳಿ ಅಥವಾ… Read More ಕಡಲೇಕಾಯಿ ಬಾತ್

ಶ್ರೀ ಕುದ್ಮುಲ್ ರಂಗರಾಯರು

ಬ್ರಿಟೀಷರು ಭಾರತೀಯರನ್ನು ಒಡೆದು ಆಳುವ ನಿಟ್ಟಿನಲ್ಲಿ ಬಿತ್ತಿಹೋದ ಜಾತಿ ಮತ್ತು ಸಾಮಾಜಿಕ ಅಸಮಾನತೆ ಎಂಬ ಕಳೆ ಈಗ ದೇಶದಲ್ಲಿ ಜ್ವಲಂತ ಸಮಸ್ಯೆಯಾಗಿ ಕಾಡುತ್ತಿರುವ ಸಂದರ್ಭದಲ್ಲಿ ಸಾಮಾಜಿಕ ಅಸಮಾನತೆಯ ಪಿಡುಗನ್ನು ತೊಡೆದು ಹಾಕುವುದರಲ್ಲಿ ತಮ್ಮದೇನೂ ಕಿಂಚಿತ್ ಪಾತ್ರವಿರದಿದ್ದರೂ ತಮ್ಮ ಬಾಯಿ ಚಪಲ ಮತ್ತು ಸುತ್ತಮುತ್ತಲಿನ ವಂದಿಮಾಗಧರ ಚೆಪ್ಪಾಳೆಗಾಗಿ ದಲಿತರು, ಬಲಿತರು ಎಂಬ ವಿತಂಡವಾದವನ್ನು ಮಂಡಿಸಿ ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡುವುತ್ತಿರುವವರೇ ಹೆಚ್ಚಾಗಿರುವಾಗ ಈ ಸಂದರ್ಭದಲ್ಲಿ ಸುಮಾರು ಸುಮಾರು 150 ವರ್ಷಗಳ ಹಿಂದೆಯೇ ದೀನ ದಲಿತರ ಸೇವೆಗಾಗಿಯೇ ತಮ್ಮ ಸರ್ವಸ್ವವನ್ನೂ ಮುಡಿಪಾಗಿಟ್ಟಿದ್ದ… Read More ಶ್ರೀ ಕುದ್ಮುಲ್ ರಂಗರಾಯರು

ಕರ್ನಾಟಕದ ಭಗೀರಥ ಶ್ರೀ ಕಲ್ಮನೆ ಕಾಮೇಗೌಡರು

ಕರ್ನಾಟಕದ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ದಾಸನದೊಡ್ಡಿ ಗ್ರಾಮದ ಅನಕ್ಷರಸ್ಥ ಕುರಿ ಕಾಯುವ ವೃತ್ತಿಯನ್ನು ಮಾಡುವ 84 ವರ್ಷ ಕುರುಬ ಕಲ್ಮನೆ ಕಾಮೇಗೌಡ ಎಂಬ ಹೆಸರು ಬಹುಶಃ ಅವರ ಊರು ಅಥವಾ ಅವರ ತಾಲ್ಲೂಕಿನ ಹೊರತಾಗಿ ಹೊರಗಿನವರಿಗೆ ಹೆಚ್ಚಾಗಿ ಪರಿಚಯವೇ ಇರಲಿಲ್ಲ. ಆದರೆ ನಮ್ಮ ಹೆಮ್ಮೆಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ತಮ್ಮ ಮನ್ ಕಿ ಬಾತ್  ನಲ್ಲಿ ಈ ವ್ಯಕ್ತಿಯ ಬಗ್ಗೆ  ಯಾವಾಗ ಮಾತನಾಡಿದರೋ ಆ ಕೂಡಲೇ ಅವರ ಹೆಸರು ದೇಶಾದ್ಯಂತ ಪರಿಚಿತವಾಗಿ ಗೂಗಲ್ಲಿನಲ್ಲಿ… Read More ಕರ್ನಾಟಕದ ಭಗೀರಥ ಶ್ರೀ ಕಲ್ಮನೆ ಕಾಮೇಗೌಡರು

ದೇವಾಲಯಗಳು ಶ್ರದ್ಧಾ ಕೇಂದ್ರಗಳೋ ಇಲ್ಲವೇ ಪ್ರವಾಸೀ ತಾಣಗಳೋ?

ಇವತ್ತು ಬೆಳ್ಳಂಬೆಳಿಗ್ಗೆ ಎದ್ದಕೂಡಲೇ ಆತ್ಮೀಯ ಮಿತ್ರರಾದ ಶ್ರೀ ಅಜಯ್ ಶರ್ಮಾರವರು ದೇವಾಲಯದ ಜೀರ್ಣೋದ್ಧಾರದ ನೆಪದಲ್ಲಿ ಪ್ರಕೃತಿಯ ಮೇಲೆ ಎಗ್ಗಿಲ್ಲದೇ ನಡೆಸುತ್ತಿರುವ ಅತ್ಯಾಚಾರಗಳ ಬಗ್ಗೆ ತೀವ್ರವಾಗಿ ನೊಂದು ಬರೆದ ಲೇಖನ ಓದಿ ನಿಜಕ್ಕೂ ಮನಸ್ಸಿಗೆ ಬಹಳ ಖೇದವುಂಟಾಗಿ ನಮ್ಮ ಪೂರ್ವಜರು ದೇವಾಲಯಗಳನ್ನು ಏಕೆ ಕಟ್ಟುತ್ತಿದ್ದರು? ಮತ್ತು ನಾವುಗಳು ದೇವಾಲಯಕ್ಕೇ ಹೋಗಿ ದೇವರ ದರ್ಶನವನ್ನೇಕೆ ಪಡೆಯಬೇಕು? ಎಂಬದರ ಕುರಿತು ನನಗೆ ತಿಳಿದಿರುವಷ್ಟರ ಮಟ್ಟಿಗೆ ನಿಮ್ಮೊಂದಿಗೆ ಹಂಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇನೆ. ನಮ್ಮ ಸನಾತನ ಹಿಂದೂ ಧರ್ಮದಲ್ಲಿ ದೇವರಿಗೆ ಮಹತ್ವವನ್ನು ಕೊಟ್ಟಿರುವ ಕಾರಣ… Read More ದೇವಾಲಯಗಳು ಶ್ರದ್ಧಾ ಕೇಂದ್ರಗಳೋ ಇಲ್ಲವೇ ಪ್ರವಾಸೀ ತಾಣಗಳೋ?