ಸಂತ ಶ್ರೇಷ್ಠ ಶ್ರೀ ರಾಜಾರಾಮರ ಜಯಂತಿ

ಹದಿನೇಳನೇ ಶತಮಾನದಲ್ಲಿ ಪರಕೀಯರ ಆಕ್ರಮಣಕ್ಕೆ ತುತ್ತಾದ ನಮ್ಮ ದೇಶ ಧಾರ್ಮಿಕವಾಗಿಯೂ ಮತ್ತು ಸಂಸ್ಕೃತಿಕವಾಗಿಯೂ ಅಧೋಗತಿಯಲ್ಲಿ ಸಾಗುತ್ತಿದ್ದಾಗ ಶ್ರೀಮಾರ್ತಾಂಡ ದೀಕ್ಷೀತರು ಮತ್ತು ಲಕ್ಷ್ಮೀದೇವಿಯವರ ತಪಸ್ಸಿನ ಫಲವಾಗಿ ದೈವಾನುಗ್ರಹದಿಂದ ದೈವಾಂಶ ಸಂಭೂತರಾಗಿ ಶ್ರೀ ಚಿದಂಬರ ಮಹಾಸ್ವಾಮಿಗಳು ಮುರುಗೋಡದಲ್ಲಿ ಜನಿಸಿದರು. ತಮ್ಮ ಆಧ್ಯಾತ್ಮಿಕ ಶಕ್ತಿಯಿಂದ ಬಹಳ ಬೇಗ ಅಪಾರ ಭಕ್ತವೃಂದವನ್ನು ಗಳಿಸಿದ ಮಹಾಸ್ವಾಮಿಗಳು ತಮ್ಮ ಲೀಲೆಯಿಂದ ಕಾಲ ಕಾಲಕ್ಕೆ ಮಳೆ ಬೆಳೆ ಆಗುವಂತೆ ನೋಡಿಕೊಂಡು ಎಲ್ಲರೂ ಸುಸಂಸ್ಕೃತರಾಗಿ, ಸುಭೀಕ್ಷವಾಗಿರುವಂತೆ ನೋಡಿಕೊಂಡರು. ಅವರು ಬೆಳೆಸಿದ ಅನೇಕ ಶಿಷ್ಯವೃಂದದಲ್ಲಿ ಸಂತ ಶ್ರೇಷ್ಠ ರಾಜಾರಾಮರು ಅಗ್ರಗಣ್ಯರು.… Read More ಸಂತ ಶ್ರೇಷ್ಠ ಶ್ರೀ ರಾಜಾರಾಮರ ಜಯಂತಿ

ಪರಿಶ್ರಮ

ಮೊನ್ನೆ RCB ಮತ್ತು MI ನಡುವೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯ ರೋಚಕವಾಗಿತ್ತು. ಚೆನ್ನೈ ತಂಡ ಹಿಂದೆ ಮೊದಲನೇ ಪಂದ್ಯದಲ್ಲಿ ಕೇವಲ 70 ರನ್ ಗಳಿಸಿ ಅಲೌಟ್ ಆಗಿ ಸುಲಭವಾಗಿ ಪಂದ್ಯ ಸೋತಿದ್ದ ಕೋಹ್ಲಿ ಪಡೆ ಈ ಬಾರಿ ಟಾಸ್ ಗೆದ್ದು ಮುಂಬೈ ತಂಡಕ್ಕೆ ಮೊದಲು ಬ್ಯಾಟ್ ಮಾಡಲು ಹೇಳಿ 187 ರನ್ ಗಳಿಗೆ ಅವರನ್ನು ನಿರ್ಬಂಧಿಸಿ, ಬ್ಯಾಟ್ ಮಾಡಲು ಬಂದ RCB 20 ಓವರ್ಗಳಲ್ಲಿ ಕೇವಲ 181 ರನ್ ಗಳಿಸಲು ಸಾಧ್ಯವಾಗಿ 6 ರನ್… Read More ಪರಿಶ್ರಮ

ತಾನು ಕಳ್ಳ ಪರರ ನಂಬ

ನೆನ್ನೆ ಮುಂಜಾನೆ ರಾಜ್ಯಾದ್ಯಂತ ಕೆಲ ಭ್ರಷ್ಟ ಸರಕಾರಿ ಇಂಜಿನೀಯರುಗಳು ಮತ್ತು  ಗುತ್ತಿಗೆದಾರರ ಮನೆಗಳ ಮೇಲೆ  ಐಟಿ ದಾಳಿ ನಡೆದಿರುವುದು ಈಗ ಜಗಜ್ಜಾಹೀರಾತಾಗಿದೆ. ದಾಳಿಯಾಗಿರುವುದು ಹಾಸನ, ಮಂಡ್ಯ, ಕನಕಪುರ,  ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಯಲ್ಲಾದರೂ ಅದರ ಪರಿಣಾಮ ಮತ್ತು ಪ್ರತಿಭಟನೆ ಬೆಂಗಳೂರಿನಲ್ಲಿ ಆಗುತ್ತಿರುವುದು ನಿಜಕ್ಕೂ ಹಾಸ್ಯಾಸ್ಪದವಾಗಿದೆ. ಅದರಲ್ಲೂ ಮುಖ್ಯಮಂತ್ರಿಯ ಮತ್ತು ಉಪ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಇಡೀ ಸರ್ಕಾರವೇ ಈ ದಾಳಿಯ ವಿರುದ್ಧ ಐಟಿ ಸಂಸ್ಥೆಯ ಎದುರು ಪ್ರತಿಭಟನೆ ನಡೆಸಿದ್ದಲ್ಲದೆ, ಅನಾವಶ್ಯಕವಾಗಿ ಪ್ರಧಾನಿಗಳನ್ನೂ, ಬಿಜೆಪಿಯರವನ್ನು ಇದು ರಾಜಕೀಯ ಪ್ರೇರಿತ ಧಾಳಿ… Read More ತಾನು ಕಳ್ಳ ಪರರ ನಂಬ

ಮೋದಿ ಮತ್ತೊಮ್ಮೆ

ಒಂದು ಎರಡು ಮತದಾನಕ್ಕೆ ಹೊರಡು ಮೂರು ನಾಲ್ಕು ಅದು ನಿನ್ನದೇ ಹಕ್ಕು ಐದು ಆರು ತುಸು ಜಾಣ್ಮೆಯ ತೋರು ಏಳು ಎಂಟು ಅದು ಪ್ರಜಾಪ್ರಭುತ್ವದ ನಂಟು ಒಂಭತ್ತು ಹತ್ತು ಯೋಗ್ಯರಿಗೆ ಗುಂಡಿ ಒತ್ತು   ಒಂದರಿಂದ ಹತ್ತರವರೆಗಿನ ಆಟವು ಹೀಗಿತ್ತು ಮೋದಿಯವರನ್ನು ಮತ್ತೆ ಪ್ರಧಾನಿ ಮಾಡಿಯಾಗಿತ್ತು.   ಜಿ. ಪಿ. ರಾಜರತ್ನಂ ಅವರಲ್ಲಿ ಕ್ಷಮೆ ಕೋರುತ್ತೇನೆ

ಗರೀಬೀ ಹಟಾವೋ

ಮೊನ್ನೆ ಬೆಳಿಗ್ಗೆ ಇದ್ದಕ್ಕಿದ್ದಂತೆಯೇ ಸ್ವಘೋಷಿತ ಯುವರಾಜ,  ರಾಹುಲ್ ಗಾಂಧಿ ಅಕ್ಕ ಪಕ್ಕದಲ್ಲಿ ಕರಟಕ ಧಮನಕಳಂತೆ ಸುರ್ಜಿವಾಲ ಮತ್ತು ವೇಣುಗೋಪಾಲ್ ಅವರುಗಳನ್ನು ಕೂರಿಸಿಕೊಂಡು,  ತಮ್ಮ ಪಕ್ಷವನ್ನು ಅಧಿಕಾರಕ್ಕೆ ತಂದಲ್ಲಿ,  ದೇಶದ 20% ಬಡವರಿಗೆ ಪ್ರತಿ ತಿಂಗಳು 6000 ರೂಪಾಯಿಗಳಂತೆ  ವರ್ಷಕ್ಕೆ 72000 ರೂಪಾಯಿಗಳನ್ನು ಕನಿಷ್ಠ ಆದಾಯದ ರೂಪದಲ್ಲಿ ಉಚಿತವಾಗಿ ಸರ್ಕಾರದ ವತಿಯಿಂದ ಕೊಡುತ್ತೇವೆ ಎಂದು ಪತ್ರಿಕಾ ಗೋಷ್ಟಿಯಲ್ಲಿ  ಪ್ರಕಟಿಸಿದಾಗ, ದೇಶದ ಆರ್ಥಿಕ ಪರಿಸ್ಥಿತಿಯನ್ನು ಅರಿತಿರುವ  ನೆರೆದಿದ್ದ ಪತ್ರಕರ್ತರೆಲ್ಲರೂ ಒಮ್ಮೆಲೆ ರಾಹುಲ್  ತಲೆ ಸರಿ ಇದೆಯೇ, ಯಾವುದಾದರೂ ನಶೆಯಲ್ಲಿದ್ದಾರೆಯೇ? ಆಥವಾ… Read More ಗರೀಬೀ ಹಟಾವೋ

ಸಂಸಾರ V/S ಸಂಸ್ಕಾರ

2019ರ ಲೋಕಸಭಾ ಚುನಾವಣೆಯ ಕಾವು ದೇಶಾದ್ಯಂತ ಚುರುಕಾಗುತ್ತಿದೆ. ನಮ್ಮ ರಾಜ್ಯದಲ್ಲಿ ಏಪ್ರಿಲ್ ತಿಂಗಳಿನ 18 ಮತ್ತು 23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು ಈಗಾಗಲೇ ನಾಮಪತ್ರ ಸಲ್ಲಿಕೆಯಾಗಿದೆ. ಪ್ರಸಕ್ತ ದೋಸ್ತಿ ಸರ್ಕಾರಗಳು ನಾಲ್ಕೈದು ವಾರಗಳವರೆಗೆ ಕಿತ್ತಾಡಿ ಕೊನೆಗೆ 20 ಕಾಂಗ್ರೇಸ್ಸಿಗೆ ಮತ್ತು 12 ಕ್ಕೆ ಜೋತು ಬಿದ್ದು ಕೊನೆಗೆ 8 ಸ್ಥಾನಗಳಿಗೆ ಜೆಡಿಎಸ್ ಒಪ್ಪಿಕೊಂಡಿತಾದರೂ, ಅದಕ್ಕೆ 4 ಸ್ಥಾನಕ್ಕಿಂತಲೂ ಅಧಿಕ ಅಭ್ಯರ್ಥಿಗಳನ್ನು ಹಾಕಲು ಪರದಾಡಿದ್ದು ನಿಜಕ್ಕೂ ಹಾಸ್ಯಾಸ್ಪದವಾಗಿದೆ. ಹಾಗೆ ನಾಮ ಪತ್ರ ಸಲ್ಲಿಸಿದ 4 ಸ್ಥಾನಗಳಲ್ಲಿ ಒಂದೇ… Read More ಸಂಸಾರ V/S ಸಂಸ್ಕಾರ

ಪ್ರಜಾಪಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು

ಶ್ರೀ ರಮೇಶ್ ಕುಮಾರ್ ಅವರಿಗೆ ಮಾನ್ಯ ಕರ್ನಾಟಕ ವಿಧಾನಸಭಾಧ್ಯಕ್ಷರು, ವಿಧಾನಸೌಧ. ಮಾನ್ಯ ಸಭಾಧ್ಯಕ್ಷರೇ, ಚುಂಚೋಳಿ ಕ್ಷೇತ್ರದ ಕಾಂಗ್ರೇಸ್ ಶಾಸಕರಾದ ಶ್ರೀ ಉಮೇಶ್ ಜಾದವ್ ಅವರು ತಮ್ಮ ವಯಕ್ತಿಯ ಕಾರಣಗಳಿಂದಾಗಿ ಕೆಲವು ದಿನಗಳ ಹಿಂದೆ ಖುದ್ದಾಗಿ ತಮ್ಮ ಮನೆಗೆ ಆಗಮಿಸಿ ತಮ್ಮ ವಿಧಾನಸಭಾ ಸದ್ಯಸ್ಯಕ್ಕೆ ರಾಜಿನಾಮೆ ಕೊಟ್ಟಿದ್ದು ಎಲ್ಲರಿಗೂ ತಿಳಿದ ವಿಷಯ. ಒಳ್ಳೆಯ ಜ್ಞಾನಿಗಳೂ, ವಾಗ್ಮಿಗಳೂ ಮತ್ತು ಅತ್ಯುತ್ತಮ ಸಂಸದೀಯ ಪಟುವಾದ ನೀವು ಅವರ ರಾಜೀನಾಮೆಯನ್ನು ಸ್ವೀಕರಿಸಿ ಕಾನೂನಿನ ಪ್ರಕಾರ ಆದಷ್ಟು ಬೇಗನೇ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಅವರಿಗೆ… Read More ಪ್ರಜಾಪಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು

ಕಾಮನ ಹುಣ್ಣಿಮೆ / ಹೋಳಿ ಹಬ್ಬ

ಶಿಶಿರ ಋತುವಿನ ಫಾಲ್ಗುಣ ಮಾಸದ ಪೌರ್ಣಿಮೆ ದಿನದಂದು ದೇಶಾದ್ಯಂತ ಅತ್ಯಂತ ಸಡಗರ ಸಂಭ್ರಮಗಳಿಂದ ಆಚರಿಸಲ್ಪಡುವ ಕಾಮನ ಹುಣ್ಣಿಮೆ, ವಸಂತ ಹುಣ್ಣಿಮೆ ಅರ್ಥಾತ್ ಹೋಳಿ/ಹೋಲಿ ಹಬ್ಬದ ಪೌರಾಣಿಕ ಹಿನ್ನಲೆ ಮತ್ತು ಅದರ ಆಚರಣೆ ಸವಿವರಗಳು ಇದೋ ನಿಮಗಾಗಿ… Read More ಕಾಮನ ಹುಣ್ಣಿಮೆ / ಹೋಳಿ ಹಬ್ಬ

ಐಪಿಎಲ್ ಅಬ್ಬರ

ಈಗ ಎಲ್ಲರ ಬಾಯಿಯಲ್ಲೂ ಒಂದೇ ಮಾತು, ಟಿಕೆಟ್ ಸಿಕ್ತಾ?

ರಾಜಕಾರಣಿಗೆ ಚುನಾವಣೆಯಲ್ಲಿ ಸ್ಪರ್ಥಿಸಲು ಟಿಕೆಟ್ ಚಿಂತೆಯಾದರೆ, ಕ್ರಿಕೆಟ್ ಪ್ರೇಮಿಗಳಿಗೆ, IPL ಟಿಕೆಟ್ ಚಿಂತೆ.

ಈ ರೀತಿ IPL ಟಿಕೆಟ್ಗಾಗಿ‌ ಪರದಾಡಿ, ಸಿಕ್ಕ ಟಿಕೆಟ್ ಕೂಡಾ ಕೈ ತಪ್ಪಿ ಹೋಗಿ, ಮತ್ತೆ ಫೀನಿಕ್ಸ್ ನಂತೆ ಸಿಕ್ಕಿ, ಮತ್ತೆ ಗೋಜಲಿಗೆ ಸಿಕ್ಕಿಕೊಂಡ ನಮ್ಮ ರೋಚಕತೆ ಇದೋ ನಿಮಗಾಗಿ… Read More ಐಪಿಎಲ್ ಅಬ್ಬರ