ಮೇಜರ್ ಸಂದೀಪ್ ಉನ್ನಿಕೃಷ್ಣನ್ ಹುಟ್ಟಿದ ಹಬ್ಬ

ದೇಶದ ಜನರ ರಕ್ಷಣೆಗೆ ಪ್ರಾಣ ಕೊಟ್ಟ ವೀರ ಸೇನಾನಿ. ತನ್ನ ಸಂಬಳವನ್ನೇ ಬಡವರಿಗಾಗಿ ಬಳಸುತ್ತಿದ್ದ ಆ ಮಹಾನ್ ಚೇತನದ ಜಯಂತಿಯನ್ನು ಇಂದು 15.03.2019 ಗುರುವಾರದಂದು ಸಂಜೆ 5 ಘಂಟೆಗೆ ಯಲಹಕಂದ ಹಾರೋಹಳ್ಳಿಯ ಬಳಿಯಲ್ಲಿರುವ ಇಸ್ರೋ ಲೇಔಟ್ನಲ್ಲಿ ಅವರ ಮನೆಯಲ್ಲಿ ರಾಷ್ಟ್ರಭಕ್ತರ ಸಮ್ಮುಖದಲ್ಲಿ ಆಚರಿಸಲಾಗುತ್ತಿದೆ. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಬೆಂಗಳೂರು ದಕ್ಷಿಣ ಡಿ.ಸಿ.ಪಿ.ಯಾಗಿರುವ ಶ್ರೀ ಅಣ್ಣಾಮಲೈ ಅವರು ನಮ್ಮೊಂದಿಗೆ ಇರಲಿದ್ದಾರೆ. || ವಿಶೇಷ ಆಹ್ವಾನಿತರು || 1. ಶ್ರೀಮತಿ ಬಸವಣ್ಣೆವ್ವ ಕುಲಕರ್ಣಿ- ಕಾರ್ಗಿಲ್ ವೀರಯೋಧ ಹುತಾತ್ಮ ಶ್ರೀ… Read More ಮೇಜರ್ ಸಂದೀಪ್ ಉನ್ನಿಕೃಷ್ಣನ್ ಹುಟ್ಟಿದ ಹಬ್ಬ

ಪ್ರಜಾಪ್ರಭುತ್ವ ಅಂದರೆ ಕುಟುಂಬ ರಾಜಕಾರಣವೇ?

ಸಾವಿರಾರು ವರ್ಷಗಳ ಕಾಲ ಪ್ರಪಂಚಾದ್ಯಂತ ರಾಜ ಮಹಾರಾಜರ ಆಳ್ವಿಕೆಯೇ ಜಾರಿಗೆಯಲ್ಲಿತ್ತು. ರಾಜನ ಮರಣಾನಂತರ ಆತನ ಮಗನೋ ಇಲ್ಲವೇ ಆತನ ಸಂಬಂಧೀಕರೇ ಆ ರಾಜ್ಯಕ್ಕೆ  ಉತ್ತರಾಧಿಕಾರಿಯಾಗಿ ಆಡಳಿತ ವಂಶಪಾರಂಪರ್ಯವಾಗಿ ನಡೆಯುತ್ತಲಿತ್ತು. ಅಂದು ರಾಜ ಪ್ರತ್ಯಕ್ಶ ದೇವತಾ ಎಂದೇ ಭಾವಿಸಿದ್ದರು. ಆದರೆ ಕಾಲ ಕ್ರಮೇಣ ಕೆಲ ರಾಜರುಗಳ, ಮತ್ತವರ ಸಾಮಂತರ ದೌರ್ಜ್ಯನ್ಯಕ್ಕೆ , ದುರಾಡಳಿತಕ್ಕೆ ಮತ್ತು  ಸರ್ವಾಧಿಕಾರಿತನದಿಂದ ಬೇಸತ್ತು  ಜನ ದಂಗೆ ಎದ್ದ ಪರಿಣಾಮವಾಗಿಯೇ ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರವಾಗಿಯೇ  ಇರುವಂತಹ ಪ್ರಜಾಪ್ರಭುತ್ವಕ್ಕೆ ನಾಂದಿಯಾಯಿತು.  ಈ ಮಾದರಿಯಲ್ಲಿ  ಪ್ರಜೆಗಳೇ ನೇರವಾಗಿ ತಮ್ಮ… Read More ಪ್ರಜಾಪ್ರಭುತ್ವ ಅಂದರೆ ಕುಟುಂಬ ರಾಜಕಾರಣವೇ?

ಮಣ್ಣಿನ ಋಣ

ಮೊನ್ನೆ ಶಿವರಾತ್ರಿಯ ಹಬ್ಬದ ಪ್ರಯುಕ್ತ ಮಲ್ಲೇಶ್ವರದ ಕಾಡುಮಲ್ಲೇಶ್ವರ ಮತ್ತು ದಕ್ಷಿಣ ಮುಖ ನಂದಿ ತೀರ್ಥ ದೇವಸ್ಧಾನಕ್ಕೆ ಹೋಗಿದ್ದೆ. ಆ ದೇವಸ್ಥಾನಗಳ ಸುತ್ತ ಮುತ್ತಲಿನ ಪ್ರದೇಶಗಳನ್ನು ನೋಡುತ್ತಿದ್ದಾಗ. ನಮಗೆ ಋಣವಿದ್ದಿದ್ದಲ್ಲಿ ಇದೇ ಜಾಗದಲ್ಲಿ ನಮ್ಮ ಮನೆ ಇರಬೇಕಿತ್ತು. ನಾವುಗಳು ಐಶಾರಾಮ್ಯಾವಾಗಿ ಇರಬಹುದಿತ್ತೇನೋ ಎಂದು ಯೋಚಿಸಲು ಕಾರಣವಿಷ್ಟೆ. ನಮ್ಮ ತಾತ ದಿ. ಗಮಕಿ ನಂಜುಂಡಯ್ಯನವರು ಖ್ಯಾತ ವಾಗ್ಗೇಯಕಾರರು, ಸಾಹಿತಿಗಳು ಮತ್ತು ಅತ್ಯುತ್ತಮ ಗಮಕಿಗಳು. ಮೇಲಾಗಿ ನಮ್ಮ ಊರಾದ ಬಾಳಗಂಚಿಯ ಶಾನುಭೋಗರೂ ಹೌದು. ಆಗಿನ ಕಾಲದಲ್ಲಿ ಅಲ್ಲಿಂದ ಬೆಂಗಳೂರಿನ ಸಾಹಿತ್ಯ ಪರಿಷತ್ತು… Read More ಮಣ್ಣಿನ ಋಣ

ನಮ್ಮ ದೇಶದ ಸ್ವಾತಂತ್ಯ್ರ ಒಂದು ಪಕ್ಷದ ಭಿಕ್ಷೆಯೇ?

ಇತ್ತೀಚೆಗೆ  ಪಶ್ಚಿಮ ಬಂಗಳದ  ಕಾಂಗ್ರೇಸ್ ನಾಯಕನೊಬ್ಬ ಭಾರತ್ ಮಾತಾ ಕೀ ಜೈ ಎನ್ನುವುದು ಕಾಂಗ್ರೇಸ್ ಸ್ವತ್ತು ಇದನ್ನು ಬೇರೆಯವರಾರು ಹೇಳಬಾರದು ಎಂಬ ಉದ್ದಟತನವನ್ನು ತೋರಿದರೆ, ಅವರ ಪಕ್ಷದ ರಾಷ್ಟ್ರೀಯ ಆಧ್ಯಕ್ಷರು, ಲೋಕಸಭೆಯ ವಿರೋಧ ಪಕ್ಷದ ನಾಯಕರಿಂದ ಹಿಡಿದು,  ಮಂಡ್ಯಾದ ಪದ್ಮಾವತಿ ರಮ್ಯಾವರೆಗೂ ದೇಶಕ್ಕೆ ಸ್ವಾತಂತ್ರ್ಯವನ್ನು ತಂದು ಕೊಟ್ಟಿದ್ದು ಕಾಂಗ್ರೇಸ್ ಪಕ್ಷ ಮಾತ್ರ.  ಸ್ವಾತಂತ್ಯ್ರ  ಹೋರಾಟ ಸಂದರ್ಭದಲ್ಲಿ ಇತರೇ ಪಕ್ಷದವರ ಕಾಣಿಕೆ ಇಲ್ಲ ಎಂಬ ಹಸೀ ಸುಳ್ಳನೇ  ಬಾರಿ ಬಾರಿ ಹೇಳುತ್ತಾ  ಅದನ್ನೇ ನಿಜವಾಗಿಸಲು ಹೊರಟಿರುವುದು ನಿಜಕ್ಕೂ ಆಘಾತಕಾರಿಯಾಗಿದೆ.… Read More ನಮ್ಮ ದೇಶದ ಸ್ವಾತಂತ್ಯ್ರ ಒಂದು ಪಕ್ಷದ ಭಿಕ್ಷೆಯೇ?

ಇದೇನು ಸಭ್ಯತೆ, ಇದೇನು ಸಂಸ್ಕೃತಿ

ಯತ್ರ ನಾರ್ಯಸ್ತು ಪೂಜ್ಯಂತೆ ತತ್ರ ರಮಂತೇ ದೇವತಾ: | ಯತ್ರೈತಾಸ್ತು ನ ಪೂಜ್ಯಂತೆ ಸರ್ವಾಸ್ತತ್ರಾಫಲಾ ಕ್ರಿಯಾ | ಅಂದರೆ ಎಲ್ಲಿ ಸ್ತ್ರೀಯರನ್ನು ಗೌರವಿಸಲಾಗುತ್ತದೆಯೋ, ಅಲ್ಲಿ ದೇವತೆಗಳು ಸಂತುಷ್ಟರಾಗಿರುತ್ತಾರೆ ಎನ್ನುತ್ತದೆ ನಮ್ಮ ಶಾಸ್ತ್ರಗಳು. ಅಹಲ್ಯ, ದ್ರೌಪತಿ, ಕುಂತಿ, ತಾರ ಮಂಡೋದರಿಯರಂತಹ ಪತಿವ್ರತೆಯರು ಜನ್ಮಿಸಿದ ನಾಡು ನಮ್ಮ ನಾಡು. ಪರ ಪುರುಷರೊಂದಿಗೆ ಸಂಭಾಷಣೆ ಮಾಡುವಾಗ ಸೆರೆಗಿನಿಂದ ಇಡೀ ಮುಖವನ್ನೇ ಮುಚ್ಚಿಕೊಂಡು ತಲೆ ಬಗ್ಗಿಸಿಯೇ ಮಾತನಾಡಿಸುವ ಸಂಸ್ಕೃತಿ ನಮ್ಮದು. ಪತಿಯೇ ತನ್ನ ಮುಂದೆ ನಿಂತಿದ್ದರೂ ಪತಿಯನ್ನು ತಲೆ ಎತ್ತಿನೋಡದೆ ಮಗನ ಅಂತ್ಯಕ್ರಿಯೆಗೆ… Read More ಇದೇನು ಸಭ್ಯತೆ, ಇದೇನು ಸಂಸ್ಕೃತಿ

ವಿವಾಹ ವಾರ್ಷಿಕೋತ್ಸವ

ರೀ ಉಮಾ ಹೇಗಿದ್ದೀರೀ? ಮನೆಯವರೆಲ್ಲಾ ಚೆನ್ನಾಗಿದ್ದಾರಾ? ನೀವು ಬಿಡಿ. ಚಿಕ್ಕ ವಯಸ್ಸಿನಲ್ಲಿಯೇ ಹೆಣ್ಣುಮಕ್ಕಳಿಗೆ ಮದುವೆ ಮಾಡಿ ಜವಾಬ್ದಾರಿಯನ್ನು ಮುಗಿಸಿಕೊಂಡು ನೆಮ್ಮದಿಯಾಗಿ ಮೊಮ್ಮಕ್ಕಳ ಜೊತೆ ಆಟಾವಾಡ್ತಾ ಇದ್ದೀರಿ. ಹೆಣ್ಣು ಮಕ್ಕಳಿಗೇನೋ ಮದುವೆ ಮಾಡಿಬಿಟ್ರಿ ಆದರೆ ಮಗನಿಗೆ ಮದುವೇ ಮಾಡೋದಿಲ್ವಾ? ಅವನಿಗೂ ಚಿಕ್ಕ ವಯಸ್ಸಿನಲ್ಲೇ ಮದುವೆ ಮಾಡಿಬಿಡಿ ಮಗ, ಸೊಸೆ ಜೊತೆ ಸುಂದರವಾಗಿರುತ್ತೆ ನಿಮ್ಮ ಸಂಸಾರ. ಅಯ್ಯೋ ನಮಗೂ ಅದೇ ಅಸೆ ರೀ .ಆದ್ರೆ ಅವನೇ ಇನ್ನೂ ಇಷ್ಟು ಬೇಗ ಬೇಡ. ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು. ಕೈ ತುಂಬಾ ಸಂಪಾದನೆ… Read More ವಿವಾಹ ವಾರ್ಷಿಕೋತ್ಸವ

ಮನೆ ಮದ್ದು

ವಿದ್ಯಾರಣ್ಯ ಪುರ ಮಂಥನದ ಇಂದಿನ ಕಾರ್ಯಕ್ರಮ ನಿಗಧಿತ ಸಮಯದಂತೆ ಮನೆ ಮದ್ದು ಕಾರ್ಯಕ್ರಮದ ವಕ್ತಾರರಾದ *ಡಾ. ಎ. ಎಸ್ ಚಂದ್ರಶೇಖರ್* ಮತ್ತು ಅಧ್ಯಕ್ಷತೆ ವಹಿಸಿದ್ದ *ಶ್ರೀಮತಿ ಜಿ. ಸ್ವಪ್ನರ* ಅಮೃತ ಹಸ್ತದಿಂದ ಭಾರತಮಾತೆಗೆ ಪುಷ್ಪಾರ್ಚನೆ ಮತ್ತು ಶ್ರೀಮತಿ ಪ್ರೀತಿ ಜಯಂತ್ ಅವರ ಸುಶ್ರಾವ್ಯ ಕಂಠದ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಇತ್ತೀಚಿನ ಜೀವನ ಶೈಲಿ ಮತ್ತು ಆಹಾರ ಪದ್ದತಿ(Junkfood), ಕಲಬೆರಕೆ ಅಡುಗೆ ಎಣ್ಣೆ, ಆಹಾರ ಪದಾರ್ಧಗಳಿಂದಾಗಿ ಪ್ರತಿಯೊಬ್ಬರೂ ಒಂದಲ್ಲಾ ಒಂದು ರೋಗದಿಂದ ನರಳುವಂತಾಗಿದೆ. ಇದರ ಸಲುವಾಗಿ ಪ್ರತೀ ಬಾರಿಯೂ… Read More ಮನೆ ಮದ್ದು

ದೀಪಾವಳಿ

ದೀಪಾವಳಿ ಹೇಳಿ ಕೇಳಿ ಬೆಳಕಿನ ಹಬ್ಬ ಇಲ್ಲಿ ಮಡಿ ಹುಡಿ ಆಚಾರ ವಿಚಾರಗಳಿಗೆ ಹೆಚ್ಚಿನ ಪ್ರಾಶಸ್ತ್ಯ ಕೊಡುವುದರಿಂದ ಮಕ್ಕಳಿಗೂ ದೀಪಾವಳಿ ಎಂದರೆ ಅಚ್ಚು ಮೆಚ್ಚು. ನಮ್ಮ ಮನೆಯಲ್ಲಿಯೂ ನಾವೆಲ್ಲಾ ಸಣ್ಣವರಿದ್ದಾಗ ದೀಪಾವಳಿ ಹಬ್ಬ ಬರುವ ಎರಡು ತಿಂಗಳ ಮುಂಚೆಯೇ ನಮ್ಮ ಮನೆಯಲ್ಲಿ ಸಂಭ್ರಮದ ವಾತಾವರಣ. ಏಕೆಂದರೆ ಆಗ ನಮ್ಮ ಮನೆಯಲ್ಲಿ ಪಟಾಕಿ ಚೀಟಿಯನ್ನು ನಡೆಸುತ್ತಿದ್ದೆವು. ಪ್ರತೀ ತಿಂಗಳು ಕೆಲ ನಿರ್ಧಿಷ್ಟ ಮೊತ್ತದ ಹಣವನ್ನು ಆರು ತಿಂಗಳು ಕಟ್ಟಿದ ನಂತರ ದೀಪಾವಳಿ ಹಬ್ಬಕ್ಕೆ ಕೆಲ ವಾರಗಳ ಮುಂಚೆ ಕಟ್ಟಿದ… Read More ದೀಪಾವಳಿ

ಹರ್ಷದ ಕೂಳಿಗೆ ವರ್ಷದ ಕೂಳನ್ನು ಕಳೆದುಕೊಳ್ಳದಿರೋಣ

ಅದೊಂದು ರಾಜ್ಯ. ಅಲ್ಲಿಯ ರಾಜ ಅತ್ಯಂತ ಪ್ರಜಾಸ್ನೇಹಿ. ಆ ರಾಜನ ಆಳ್ವಿಕೆಯಲ್ಲಿ ಪ್ರಜೆಗಳೆಲ್ಲಾ ಸುಭಿಕ್ಷದಿಂದಿದ್ದರು. ಅದೊಂದು ಹಾಗೇ ತನ್ನ ಮಂತ್ರಿಯೊಂದಿಗೆ ಸಾಧಾರಣವಾಗಿ ಮಾತನಾಡುತ್ತಾ, ನನ್ನ ರಾಜ್ಯದ ಪ್ರಜೆಗಳೆಲ್ಲಾ ನನ್ನ ಆಳ್ವಿಕೆಯಿಂದ ಸುಖಃವಾಗಿದ್ದಾರೆ. ಅವರಿಗೆ ನನ್ನ ಮೇಲೆ ಅಪಾರ ಆಭಿಮಾನವಿದೆ ಮತ್ತು ನನ್ನ ಸಹಾಯಕ್ಕೆ ಬರಲು ಸದಾ ಸಿದ್ಧರಿರುತ್ತಾರೆ ಮತ್ತು ನಾನು ಹೇಳಿದ್ದನ್ನು ಶಿರಸಾ ವಹಿಸಿ ಪಾಲಿಸುತ್ತಾರೆ ಅಲ್ಲವೇ ಎಂದು ಹೇಳಿದನು. ಅದಕ್ಕೊಪ್ಪದ ಮಂತ್ರಿ ರಾಜಾ, ನಿಮ್ಮ ಮೊದಲ ಎರಡು ವಾಕ್ಯಗಳು ನಿಜ. ಅದನ್ನು ನಾನೂ ಒಪ್ಪುತ್ತೇನೆ. ಆದರೆ… Read More ಹರ್ಷದ ಕೂಳಿಗೆ ವರ್ಷದ ಕೂಳನ್ನು ಕಳೆದುಕೊಳ್ಳದಿರೋಣ