ಬೆಲಗೂರು ಬಿಂಧು ಮಾಧವ ಶರ್ಮ ಅವಧೂತರು

ನಮ್ಮ ಸನಾತನ ಧರ್ಮದಲ್ಲಿ ತಂದೆ, ತಾಯಿ, ಸೂರ್ಯ ಮತ್ತು ಚಂದ್ರರಂತಹ ಪ್ರತ್ಯಕ್ಷ ದೇವರುಗಳ ಹೊರತಾಗಿ ಶ್ರದ್ಧಾ ಭಕ್ತಿಗಳಿಂದ ಪೂಜಿಸುವುದೇ ಗುರು ಪರಂಪರೆ. ನಮ್ಮ ಸನಾತನ ಧರ್ಮದ ಮೂಲ ಅಡಗಿರುವುದೇ ಗುರು ಪರಂಪರೆಯಾಗಿದ್ದು ಈ ದೇಶದಲ್ಲಿ ಈಗಾಗಲೇ ಲಕ್ಷಾಂತರ ಗುರುಗಳು ಮತ್ತು ಅವಧೂತರುಗಳು ಬಂದು ಹೋಗಿದ್ದಾರೆ. ಅವಧೂತ ಎಂಬುದು ಸಂಸ್ಕೃತದಿಂದ ಬಂದ ಪದವಾಗಿದ್ದು, ಭಾರತೀಯ ಧರ್ಮಗಳಲ್ಲಿ ಅಹಂಕಾರ-ಪ್ರಜ್ಞೆ, ದ್ವಂದ್ವತೆ ಮತ್ತು ಸಾಮಾನ್ಯ ಲೌಕಿಕ ಕಾಳಜಿಗಳನ್ನು ಮೀರಿದ ಮತ್ತು ಪ್ರಮಾಣಿತ ಸಾಮಾಜಿಕ ಶಿಷ್ಟಾಚಾರವನ್ನು ಪರಿಗಣಿಸದೆ ವರ್ತಿಸುವ ಒಂದು ರೀತಿಯ ಅತೀಂದ್ರಿಯವಾದ… Read More ಬೆಲಗೂರು ಬಿಂಧು ಮಾಧವ ಶರ್ಮ ಅವಧೂತರು

ದೈವ ಸಂಕಲ್ಪ

ಈಗಾಗಲೇ ಹತ್ತು ಹಲವಾರು ಬಾರಿ ಬಾರಿ ತಿಳಿಸಿರುವಂತೆ ಬೆಂಗಳೂರಿನ ವಾಸಿಯಾಗಿದ್ದರೂ ನಮ್ಮೂರು ಹಾಸನ ಜಿಲ್ಲೆಯ, ಚೆನ್ನರಾಯಪಟ್ಟಣದ ಬಾಳಗಂಚಿ. ಸುಮಾರು ಮೂರ್ನಾಲ್ಕು ಸಾವಿರ ಜನರು ವಾಸಿಸುವ ಕೃಷಿಪ್ರಧಾನವಾದ ಗ್ರಾಮವಾದರೂ, ನಮ್ಮೂರಿನಲ್ಲಿರುವ ದೇವಾಲಯಗಳ ಸಂಖ್ಯೆ ಹತ್ತಕ್ಕೂ ಹೆಚ್ಚು. ನಮ್ಮೂರ ಗ್ರಾಮದೇವತೆಯ ಹಬ್ಬ ಪ್ರತೀ ವರ್ಷ ಯುಗಾದಿ ಕಳೆದು ಹದಿನೈದು ದಿನಗಳ ನಂತರ ಬರುವ ಗುರುವಾರ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಮೂರುವಾರಗಳ ಕಾಲ ಅದ್ದೂರಿಯಾಗಿ ನೂರಾರು ವರ್ಷಗಳಿಂದ ಸಂಭ್ರಮ ಸಡಗರಗಳಿಂದ ಆಚರಿಸಿಕೊಂಡು ಬರಲಾಗುತ್ತಿದೆ. ದುರಾದೃಷ್ಟವಷಾತ್ ಈ ಬಾರೀ ಕೋವಿಡ್ ಮಹಾಮಾರಿಯ ಕಾರಣದಿಂದಾಗಿ… Read More ದೈವ ಸಂಕಲ್ಪ