ಮಾರ್ಚ್ 30, ವಿಶ್ವ ಇಡ್ಲಿ ದಿನ

ದಕ್ಷಿಣ ಭಾರತದ ಸಾಂಪ್ರದಾಯಿಕ ಉಪಹಾರವಾದ ಇಡ್ಲಿಯು ಇಂದು ಅಂತರಾಷ್ಟ್ರೀಯ ಮಟ್ಟದಲ್ಲೂ ಮಾನ್ಯತೆ ಪಡೆದು ವಿಶ್ವವಿಖ್ಯಾತವಾಗಿದ್ದು ಪ್ರಪಂಚದ ಮೂಲೆ ಮೂಲಗಳಲ್ಲಿಯೂ ಲಭ್ಯವಿರುವುದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ. ಪ್ರತೀ ವರ್ಷದ ಮಾರ್ಚ್ 30 ರಂದು ವಿಶ್ವ ಇಡ್ಲಿ ದಿನವನ್ನು ಆಚರಿಸುವುದರ ಹಿಂದಿರುವ ರೋಚಕತೆ ಮತ್ತು ಇಡ್ಲಿಯ ಇತಿಹಾಸದ ಕುರಿತಾದ ಅನುರೂಪ ಮತ್ತು ಅಪರೂಪದ ಮಾಹಿತಿಗಳು ಇದೋ ನಿಮಗಾಗಿ… Read More ಮಾರ್ಚ್ 30, ವಿಶ್ವ ಇಡ್ಲಿ ದಿನ

ವಿದ್ಯಾರ್ಥಿ ಭವನ, ಗಾಂಧಿಬಜಾರ್

ಮನೆಯಲ್ಲಿ ಎಷ್ಟೇ ಚೆನ್ನಾಗಿ ದೋಸೆ ಮಾಡಿದ್ದರೂ, ಹೋಟೆಲ್ಲಿನ ಮಸಾಲೆ ದೋಸೆ ಎಂದಾಕ್ಷಣ ಎಲ್ಲರ ಬಾಯಿಯಲ್ಲಿ ನೀರೂರುತ್ತದೆ. ಈ ಸ್ವಾತ್ರಂತ್ರ್ಯೋತ್ಸವದ ಸಂದರ್ಭದಲ್ಲಿ, ಬೆಂಗಳೂರಿನ ಗಾಂಧಿಬಜಾರ್ ನಲ್ಲಿರುವ ಸುಮಾರು 75+ ವರ್ಷಗಳಷ್ಟು ಹಳೆಯದಾದ ವಿದ್ಯಾರ್ಥಿ ಭವನದ ವೈಶಿಷ್ಟ್ಯಗಳ ಜೊತೆ ಆ ಹೋಟೆಲ್ಲಿಗೆ ಶುಕ್ರವಾರದಂದೇ ವಾರದ ರಜಾ ಇರುವ ಹಿಂದಿರುವ ರಾಷ್ಟ್ರೀಯ ಭಾವನೆಯನ್ನು ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.… Read More ವಿದ್ಯಾರ್ಥಿ ಭವನ, ಗಾಂಧಿಬಜಾರ್

ಅಧ್ಭುತವಾದ ಇಡ್ಲಿಗಳು!

ಅದು ಸ್ವಾತಂತ್ರ್ಯ ಪೂರ್ವದ ದಿನಗಳು ಅದೊಂದು ದಿನ ಅಯ್ಯರ್ ಎಂಬ ವ್ಯಕ್ತಿ ಮತ್ತು ಬ್ರಿಟಿಷ್ ವ್ಯಕ್ತಿಯೊಬ್ಬ ಮದ್ರಾಸ್ನಿಂದ ಕಲ್ಕತ್ತಾಗೆ ಹೌರಾ ಮೇಲ್ ನಲ್ಲಿ ಮೊದಲನೇ ದರ್ಜೆಯ ಕೋಚ್ ನಲ್ಲಿ ಪ್ರಯಾಣಿಸುತ್ತಿದ್ದರು. ನಿಗಧಿಯಂತೆ ರೈಲು ರಾತ್ರಿ 8 ಗಂಟೆಗೆ ಮದ್ರಾಸ್ ಸೆಂಟ್ರಲ್‌ನಿಂದ ಹೊರಟಿತು. ಮಾರನೇ ದಿನ ಬೆಳಿಗ್ಗೆ 7 ಗಂಟೆಗೆಯ ಹೊತ್ತಿಗೆ ವಿಜಯವಾಡ ತಲುಪಿತ್ತು. ಇಬ್ಬರೂ ಸಹಾ ತಮ್ಮ ಪ್ರಾರ್ಥರ್ವಿಧಿಗಳನ್ನು ಮುಗಿಸಿ, ಬ್ರಿಟಿಷ್ ವ್ಯಕ್ತಿ ಅಲ್ಲಿಯೇ ಸ್ಟೇಷನ್ನಿನಲ್ಲಿ ಸಿಕ್ಕ ರುಚಿಕರವಾದ ಉಪಹಾರವನ್ನು ಮಾಡಿದರೆ, ಅಯ್ಯರ್ ತನ್ನ 4-ಹಂತದ ಟಿಫಿನ್… Read More ಅಧ್ಭುತವಾದ ಇಡ್ಲಿಗಳು!

ಬೆಂಗಳೂರಿನ ಎಂ ಜಿ ರಸ್ತೆಯ ಬೃಂದಾವನ್ ಹೋಟೆಲ್

ಬೆಂಗಳೂರಿನ ಎಂ.ಜಿ. ರಸ್ತೆಯ ಪಾಶ್ಚಾತ್ಯ ಸಂಸ್ಕೃತಿಯ ನಡುವೆಯೂ ಅಪ್ಪಟ ದಕ್ಷಿಣ ಭಾರತೀಯ ಆಹಾರಗಳ ಜೊತೆಗೆ ರುಚಿಕರವಾದ ಊಟವನ್ನು ಜನಸಾಮಾನ್ಯರಿಗೂ ಕೈ ಗೆಟುಕುವ ಬೆಲೆಯಲ್ಲಿ ಉಣಬಡಿಸುತ್ತಿದ್ದಂತಹ ಗತ ವೈಭವದ ಬೃಂದಾವನ್ ಹೋಟೆಲ್ ಕುರಿತಾಗಿ ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಬೆಂಗಳೂರಿನ ಎಂ ಜಿ ರಸ್ತೆಯ ಬೃಂದಾವನ್ ಹೋಟೆಲ್

ಅತ್ಮನಿರ್ಭರ್( ಸ್ವಾಭಿಮಾನಿ) ಇಡ್ಲಿ ಅಜ್ಜಿ

ಕೂರೋನಾ ಮಹಾಮಾರಿಯಿಂದಾಗಿ ಇಡೀ ವಿಶ್ವವೇ ಲಾಕ್ ಡೌನ್ ಆಗಿರುವ ಪರಿಣಾಮ ವಿಶ್ವಾದ್ಯಂತ ಅನೇಕರು ಕೆಲಸ ಕಳೆದುಕೊಂಡಿದ್ದಾರೆ ಮತ್ತು ಎಲ್ಲಾ . ದೇಶಗಳ ಆರ್ಥಿಕ ಪರಿಸ್ಥಿತಿ ಶೋಚನೀಯವಾಗಿದೆ. ಇಂತಹ ಸಂದರ್ಭದಲ್ಲಿ ಕೆಂದ್ರ ಮತ್ತು ರಾಜ್ಯ ಸರ್ಕಾರ ನಾನಾ ರೀತಿಯ ಆರ್ಥಿಕ ಪರಿಹಾರಗಳನ್ನು ಕೊಡುತ್ತಿರುವಾಗ , ಅದನ್ನು ಜಾತಿಗಳಿಗೆ ಸಮೀಕರಿಸಿ, ನಮ್ಮ ಜಾತಿಗೆ ಸಿಕ್ಕಿಲ್ಲ. ನಮ್ಮ ಪಂಗಡಗಳಿಗೆ ಸಿಕ್ಕಿಲ್ಲ ಎಂದು ಹಾದಿ ಬೀದಿಯಲ್ಲಿ, ಮಾಧ್ಯಮಗಳ ಮುಖಾಂತರ, ಸಾಮಾಜಿಕ ಜಾಲತಾಣಗಳಲ್ಲಿ ಆಯಾಯಾ ಪಂಗಡಗಳ ನಾಯಕರುಗಳು ವಿರೋಧ ಪಕ್ಷದ ರಾಜಕೀಯ ಧುರೀಣರು, ಬಾಯಿ… Read More ಅತ್ಮನಿರ್ಭರ್( ಸ್ವಾಭಿಮಾನಿ) ಇಡ್ಲಿ ಅಜ್ಜಿ

ಹೆಸರುಬೇಳೆ ಇಡ್ಲಿ

ಇಡ್ಲಿ ಎಂದರೆ ಎಲ್ಲರ ಕಣ್ಣುಮುಂದೆ ಬರುವುದೇ ಹಬೆಯಲ್ಲಿ ಬೇಯಿಸಿದ, ಉಬ್ಬಿದ ಬಿಸಿ ಬಿಸಿಯಾದ ಮೃದುವಾದ ದಕ್ಷಿಣ ಭಾರತದ ಪ್ರಖ್ಯಾತವಾದ ತಿಂಡಿ. ಇಂತಹ ಇಡ್ಲಿಯ ಜೊತೆಗೆ ರುಚಿಕರವಾದ ಕಾಯಿ ಚಟ್ನಿ ಮತ್ತು ಸಾಂಬಾರ್ ಇದ್ದರಂತೂ ಬೇರಾವ ತಿಂಡಿಯೂ ಮನಸ್ಸಿಗೆ ಬೇಡ ಎನ್ನಿಸುತ್ತದೆ ಎಂದರೆ ಸುಳ್ಳಲ್ಲ. ಯಾವುದೇ ರೀತಿಯ ಎಣ್ಣೆ ಅಥವಾ ಜಿಡ್ಡಿಲ್ಲದೇ ಕೇವಲ ಅಕ್ಕಿ ಮತ್ತು ಉದ್ದಿನ ಬೇಳೆಯ ಸರಿಯದ ಪ್ರಮಾಣದ ಮಿಶ್ರಿತವಾಗಿ ಹಬೆಯಲ್ಲಿ ಬೆಂದು ಸರಿಸಮಾನದ ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್ ಇರುವ ಅತ್ಯಂತ ಕಡಿಮೆ ಕ್ಯಾಲೋರಿ ಇರುವ,… Read More ಹೆಸರುಬೇಳೆ ಇಡ್ಲಿ