ಕಳೆದು ಹೋದ ಉಂಗುರ

ಅದು ಎಂಭತ್ತರ ದಶಕ. ಗಮಕ ಕಲೆ ನಮ್ಮ ತಂದೆಯವರಿಗೆ ನಮ್ಮ ತಾತ ಗಮಕಿ ನಂಜುಂಡಯ್ಯನವರಿಂದಲೇ ಬಂದಿತ್ತಾದರೂ, ಶೈಕ್ಷಣಿಕವಾಗಿ ಅಧಿಕೃತವಾದ ಪದವಿಯೊಂದು ಇರಲಿ ಎಂದು ಮಲ್ಲೇಶ್ವರದ ಗಾಂಧೀ ಸಾಹಿತ್ಯ ಸಂಘದಲ್ಲಿ ಗುರುಗಳಾದ ಶ್ರೀ ನಾರಾಯಣ್ ಅವರು ನಡೆಯುತ್ತಿದ್ದ ಗಮಕ ಪಾಠ ಶಾಲೆ ಮೂಲಕ ಗಮಕ ವಿದ್ವತ್ ಪರೀಕ್ಷೆಯನ್ನು ಕಟ್ಟಿದ್ದರು. ಪರೀಕ್ಷೆ ಎಲ್ಲವೂ ಸುಲಲಿತವಾಗಿ ಮುಗಿದು ಎಲ್ಲರೂ ಅತ್ಯುತ್ತಮವಾದ ಫಲಿತಾಂಶ ಪಡೆದಿದ್ದ ಕಾರಣ ಅದರ ಸಂಭ್ರಮಾಚರಣೆಗೆಂದು ಕುಟುಂಬ ಸಮೇತವಾಗಿ ಎಲ್ಲಾದರೂ ಪ್ರವಾಸಕ್ಕೆ ಹೋಗಬೇಕೆಂದು ನಿರ್ಧರಿಸಿ, ಅದೊಂದು ಭಾನುವಾರ ಬೆಳಿಗ್ಗೆ 9.00ಘಂಟೆಯ… Read More ಕಳೆದು ಹೋದ ಉಂಗುರ

ಹರಕೆ

ತಮ್ಮ ನಾನಾ ರೀತಿಯ ಇಚ್ಚೆಗಳನ್ನು ಈಡೇರಿಸಲು ಭಗವಂತನ ಬಳಿ ಬೇಡಿಕೊಳ್ಳುವ ಸಮಯದಲ್ಲಿ ಭಕ್ತಿಯಿಂದ ಭಗವಂತನಿಗೆ ಏನದರೊಂದು ಕಾಣಿಕೆಯನ್ನು ಸಮರ್ಪಿಸುತ್ತೇನೆಂದು ಕೇಳಿಕೊಳ್ಳುವುದು ನಮ್ಮಲ್ಲಿರುವ ವಾಡಿಕೆ. ಆ ರೀತಿಯಾಗಿ ಕೇಳಿಕೊಳ್ಳುವ ಪದ್ದತಿಯನ್ನೇ ಹರಕೆ ಎನ್ನುತ್ತಾರೆ. ಒಂದು ಪಕ್ಷ ಅವರ ಆಭಿಪ್ಸೆಗಳು ಅವರ ಇಚ್ಚೆಯ ಅನುಗುಣವಾಗಿ ಈಡೇರಿದ ಸಮಯದಲ್ಲಿ ತಾವು ಕಟ್ಟಿಕೊಂಡ ಹರಕೆಯನ್ನು ಭಕ್ತಿಯಿಂದ ಭಗವಂತನಿಗೆ ಸಮರ್ಪಿಸಿ ಧನ್ಯತಾಭಾವನೆಯನ್ನು ಪಡೆಯುತ್ತಾರೆ. ಈ ರೀತಿಯಾಗಿ ಹರಕೆ ಹೊತ್ತ ಸಮಯದಲ್ಲಾದ ಮೋಜಿನ ಸಂಗತಿಯೇ ಇಂದಿನ ಕಥಾವಸ್ತು. ಶ್ಯಾಮರಾಯರು ಅಂದಿನ ಕಾಲಕ್ಕೇ ಎಸ್. ಎಸ್.ಎಲ್.ಸಿ ಫಸ್ಟ್… Read More ಹರಕೆ