ಹರಿಕಥಾ ಸಾಮ್ರಾಟ ಗಮಕಿ ಬಾಳಗಂಚಿ ನಂಜುಂಡಯ್ಯನವರು

ಅದೊಂದು ಕುಗ್ರಾಮ. ಹೆಸರಿಗಷ್ಟೇ ಅಗ್ರಹಾರ ಎಂದಿದ್ದರೂ, ಇದ್ದದ್ದು ಎಂಕ, ನಾಣಿ, ಸೀನ ಅಂತಾ ಹತ್ತಾರು ಸಂಪ್ರದಾಯಸ್ಥರ ಮನೆ. ಕೃಷಿ ಪ್ರಧಾನವಾಗಿದ್ದ ಆ ಊರಿನಲ್ಲಿ ಶಾಸ್ತ್ರೀಯ ಸಂಗೀತ ಮತ್ತು ಸಾಹಿತ್ಯದ ಗಂಧವೇ ಇಲ್ಲದಿದ್ದರೂ ಜನಪದ ಸಾಹಿತ್ಯಕ್ಕೇನು ಕೊರತೆ ಇರಲಿಲ್ಲ. ಅಂತಹ ಊರಿನಲ್ಲೊಂದು ಅನರ್ಘ್ಯ ರತ್ನದಂತೆ, ತಾಯಿಯ ಕಡೆಯ ದೂರ ಸಂಬಧಿಯೊಬ್ಬರು ಮಾಡುತ್ತಿದ್ದ ಗಮಕ ವಾಚನದಿಂದ ಆಕರ್ಷಿತರಾಗಿ, ಮಹಾಭಾರತದ ಏಕಲವ್ಯನಂತೆ, ದೈವದತ್ತವಾದ ಶರೀರ ಮತ್ತು ಶಾರೀರದಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ಹರಿಕಥೆ, ಗಮಕ ವಾಚನ, ವ್ಯಾಖ್ಯಾನವಲ್ಲದೇ, ನಾಟಕದ ಮಟ್ಟುಗಳು ಮತ್ತು… Read More ಹರಿಕಥಾ ಸಾಮ್ರಾಟ ಗಮಕಿ ಬಾಳಗಂಚಿ ನಂಜುಂಡಯ್ಯನವರು

ಶಾಂತಾ ರಂಗಸ್ವಾಮಿ

ಬ್ರಿಟೀಷರು ಭಾರತವನ್ನು ಬಿಟ್ಟು ಹೋದರೂ, ಭಾರತೀಯರು ಬ್ರೀಟಿಷರಿಂದ ಕಲಿತ ಇಂಗ್ಲೀಷ್ ಭಾಷೆ, ಅವರ ವೇಷ ಭೂಷಣ ಮತ್ತು ಎಲ್ಲದ್ದಕ್ಕಿಂತಲೂ ಹೆಚ್ಚಾಗಿ ಅವರು ಕಲಿಸಿಕೊಟ್ಟ ಕ್ರಿಕೆಟ್ ಆಟವನ್ನು ಅಪ್ಪಿ ಮುದ್ದಾಡುತ್ತಿದ್ದೇವೆ. ಇತ್ತೀಚೆಗಂತೂ ಭಾರತದಲ್ಲಿ ಕ್ರಿಕೆಟ್ ಎನ್ನುವುದು ಒಂದು ರೀತಿಯ ಧರ್ಮವಾಗಿದೆ ಎಂದರೂ ತಪ್ಪಾಗಲಾರದು. ಈ ರೀತಿಯ ಬದಲಾವಣೆಯಾದದ್ದು ಕಪಿಲ್ ದೇವ್ ಅವರ ತಂಡ 1983ರ ವರ್ಲ್ಡ್ ಕಪ್ ಗೆದ್ದ ನಂತರ ಎನ್ನುವುದು ಗಮನಿಸಬೇಕಾದ ಅಂಶ ಅದಕ್ಕೂ ಮೊದಲು ಕ್ರಿಕೆಟ್ ವಿಶ್ವ ಕ್ರಿಕೆಟ್ ಜಗತ್ತಿನಲ್ಲಿ ಭಾರತ ಆಟಕ್ಕುಂಟು ಲೆಕ್ಕಕ್ಕಿಲ್ಲ. ಎಪ್ಪತ್ತರ… Read More ಶಾಂತಾ ರಂಗಸ್ವಾಮಿ

ಗೊರೂರು ರಾಮಸ್ವಾಮಿ ಅಯ್ಯಂಗಾರ್

ಗೊರೂರು ರಾಮಸ್ವಾಮಿ ಅಯ್ಯಂಗಾರ್ ಹಾಸನ ಜಿಲ್ಲೆಯ ಹೊಳೇನರಸೀಪುರ ತಾಲ್ಲೂಕಿನ ಹೇಮಾವತಿ ನದಿಯ ತಟದಲ್ಲಿರುವ ಗೊರೂರು ಎಂಬ ಗ್ರಾಮದಲ್ಲಿ ಶ್ರೀನಿವಾಸ ಅಯ್ಯಂಗಾರ್ ಮತ್ತು ಲಕ್ಷಮ್ಮ ದಂಪತಿಗಳಿಗೆ 1904ರ ಜುಲೈ 4ರಂದು ರಾಮಸ್ವಾಮಿ ಅಯ್ಯಂಗಾರ್ ಅವರು ಜನಿಸುತ್ತಾರೆ. ಓದಿನಲ್ಲಿ ಬಹಳ ಚುರುಕಾಗಿದ್ದ ರಾಮಸ್ವಾಮಿಗಳು ತಮ್ಮ ಹಳ್ಳಿಯಲ್ಲಿಯೇ ಲೋಯರ್ ಸೆಕೆಂಡರಿ ಶಿಕ್ಷಣವನ್ನು ಮುಗಿಸಿದ ಉನ್ನತ ವ್ಯಾಸಂಗಕ್ಕಾಗಿ ಹಾಸನದ ಸರ್ಕಾರಿ ಪ್ರೌಢಶಾಲೆಗೆ ಸೇರಿಕೊಂಡು ವ್ಯಾಸಂಗ ಮಾಡುತ್ತಿದ್ದ ಸಮಯದಲ್ಲಿ ಗಾಂಧೀಯವರ ಅಸಹಕಾರ ಚಳುವಳಿಯಿಂದ ಆಕರ್ಷಿತರಾಗಿ ಶಿಕ್ಷಣಕ್ಕೆ ವಿದಾಯ ಹೇಳಿದ್ದಲ್ಲದೇ, ಗಾಂಧಿಯವರ ಪರಮ ಅನುಯಾಯಿಯಾಗಿ ಅವರ… Read More ಗೊರೂರು ರಾಮಸ್ವಾಮಿ ಅಯ್ಯಂಗಾರ್