ಬೇಲೂರಿನ ಕನ್ನಡದ ಅಂಗಡಿ ಶ್ರೀ ತೀರ್ಥಂಕರ್

ಕನ್ನಡ ರಾಜ್ಯೋತ್ಸವದ ಸಂಧರ್ಭದಲ್ಲಿ ಬೇಲೂರಿನ ಡಾ. ರಾಜಕುಮಾರ್ ಅಭಿಮಾನಿ ಸಂಘದ ಅಧ್ಯಕ್ಷರಾದ ತೀರ್ಥಕಂರ್ ಅವರು ತಮ್ಮ ಅಂಗಡಿ ಶ್ರೀ ಮಾರುತಿ ಸ್ಟೋರ್ಸ್ ನಲ್ಲಿ ಮಾರಾಟ ಮಾಡುವ ಎಲ್ಲಾ ವಸ್ತುಗಳನ್ನು ಹಳದಿ ಮತ್ತು ಕೆಂಪು ಬಣ್ಣದ್ದಾಗಿಸಿ ಬಹಳ ವೈಶಿಷ್ಟ್ಯಪೂರ್ಣವಾಗಿ ಆಚರಿಸುವ ಪರಿಯನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಬೇಲೂರಿನ ಕನ್ನಡದ ಅಂಗಡಿ ಶ್ರೀ ತೀರ್ಥಂಕರ್

ಭುವನಗಿರಿ ಶ್ರೀ ಭುವನೇಶ್ವರಿ ದೇವಾಲಯ

ಎಲ್ಲರಿಗೂ ತಿಳಿದಿರುವಂತೆ ತಾಯಿ ಭುವನೇಶ್ವರಿ ದೇವಿಯನ್ನು  ಕರ್ನಾಟಕದ ರಾಜ್ಯ ದೇವತೆ ಅರ್ಥಾತ್ ಕನ್ನಡ ದೇವತೆ ಎಂದು ಪೂಜಿಸಲಾಗುತ್ತದೆ. ಇಂತಹ ಭುವನೇಶ್ವರಿ ದೇವಿಯು ಪಾರ್ವತಿ ದೇವಿಯ ಹತ್ತು ಮಹಾ ವಿದ್ಯಾ ದೇವತೆಗಳಲ್ಲಿ ಒಬ್ಬಳಾಗಿದ್ದು, ನಾಲ್ಕನೆಯವಳಾಗಿ ತಾಯಿ ದುರ್ಗೆಯ ಒಂದು ಅಂಶವಾಗಿದ್ದಾಳೆ. ಭುವನೇಶ್ವರಿ ಎಂಬುದು ಸಂಸ್ಕತ ಪದವಾಗಿದ್ದು ಭುವನ ಎಂದರೆ ವಿಶ್ವ ಎಂಬರ್ಥವಾಗಿದ್ದು ಭುವನೇಶ್ವರಿ ಎಂದರೆ ವಿಶ್ವಕ್ಕೇ ಒಡತಿ ಅರ್ಥಾತ್  ವಿಶ್ವಕ್ಕೇ ತಾಯಿ ಎಂಬ ಅರ್ಧವಿದೆ. ಇಂತಹ ಭುವನೇಶ್ವರಿಯ  ಸುಮಾರು ಸಾವಿರ ವರ್ಷಗಳಷ್ಟು ಇತಿಹಾಸವಿರುವ ದೇವಾಲಯವು  ಉತ್ತರ ಕನ್ನಡ ಜಿಲ್ಲೆಯ… Read More ಭುವನಗಿರಿ ಶ್ರೀ ಭುವನೇಶ್ವರಿ ದೇವಾಲಯ

ನವೆಂಬರ್ ಕನ್ನಡಿಗರು

ನೆನ್ನೆ ರಾತ್ರಿ ಮುಗಿದು ಇವತ್ತು ಬೆಳಕು ಹರಿಯುತ್ತಿದ್ದಂತೆಯೇ, ನವೆಂಬರ್ ತಿಂಗಳು ಮುಗಿದು ಡಿಸೆಂಬರ್ ತಿಂಗಳು ಬಂದೇ ಬಿಟ್ಟಿತು. ಯಾಕೇ ಅಂದರೆ ಕಾಲ ಎಂದಿಗೂ ನಿಲ್ಲೋದಿಲ್ಲ. ಅದರ ಪಾಡಿಗೆ ಅದು ಹೋಗ್ತಾನೇ ಇರುತ್ತದೆ. ಇವತ್ತಿಗೆ ಮೂವತ್ತು ದಿನಗಳ ಹಿಂದೆ ಸರಿಯಾಗಿ ನವೆಂಬರ್ ಒಂದನೇ ತಾರೀಖು, ಸಮಸ್ತ ಕನ್ನಡಿಗರ ಕನ್ನಡ ರಾಜ್ಯೋತ್ಸವದ ಸಂಭ್ರಮವನ್ನು ಹೇಳಲೂ ಸಾಧ್ಯವೇ ಇಲ್ಲಾ.ಇನ್ನು ನಮ್ಮ ಉಟ್ಟು ಖನ್ನಡ ಓಲಾಟಗಾರರಿಗೆ ಮತ್ತು ನಮ್ಮ ರಾಜಕೀಯ ಧುರೀಣರಿಗಂತೂ ನವೆಂಬರ್ 1 ರಿಂದ 30ನೇ ತಾರೀಖಿನವರೆಗೂ ಪುರುಸೊತ್ತೇ ಇರುಲಿಲ್ಲ. ಎಲ್ಲೆಲ್ಲಿ… Read More ನವೆಂಬರ್ ಕನ್ನಡಿಗರು

ರಾಷ್ಟ್ರೋತ್ಥಾನ ಶಾಲೆಯ ರಾಜ್ಯೋತ್ಸವ ಆಚರಣೆ

ರಾಜ್ಯೋತ್ಸವದ ಹೆಸರಿನಲ್ಲಿ ಕನ್ನಡ ಚಲನಚಿತ್ರಗಳ ಅರ್ಥವೇ ಇಲ್ಲದ ಅಸಂಬದ್ಧ ಹಾಡುಗಳಿಗೆ ಅಷ್ಟೇ ಅಸಹ್ಯಕರವಾಗಿ ಮೈ ಕೈ ಕುಲುಕಿಸುತ್ತಾ ನರ್ತಿಸುವುದೇ ಸಾಂಸ್ಕೃತಿಕ ಕಾರ್ಯಕ್ರಮ ಎಂದು ಭಾವಿಸಿರುವವರಿಗೆ ಬೆಂಗಳೂರಿನ ಥಣಿಸಂದ್ರ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ ಶಾಲೆಯಲ್ಲಿ ವೈಭವದ ವಿಜಯನಗರ ಸಾಮ್ರಾಜ್ಯ ಎಂಬ ವಿಷಯಾಧಾರಿತವಾದ ಅದ್ಭುತ ಕಾರ್ಯಕ್ರಮದ ಮೂಲಕ 67ನೇ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಿದ ಸಡಗರ ಸಂಭ್ರಮ ಇದೋ ನಿಮಗಾಗಿ… Read More ರಾಷ್ಟ್ರೋತ್ಥಾನ ಶಾಲೆಯ ರಾಜ್ಯೋತ್ಸವ ಆಚರಣೆ

ಕನ್ನಡದ ರಕ್ಷಣೆಯನ್ನು ಗುತ್ತಿಗೆ ನೀಡಿದ್ದೇವೆಯೇ?

ಪ್ರತೀ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಸಂಭ್ರಮದಿಂದ ನಾಡಹಬ್ಬದ ದಸರವನ್ನು ಆಚರಿಸಿದ ನಂತರ ಎಲ್ಲರ ಚಿತ್ತ ಮುಂದಿನ ತಿಂಗಳ ನವೆಂಬರ್-1 ನೇ ತಾರೀಖಿನತ್ತ ಎಂದರೂ ಅತಿಶಯೋಕ್ತಿಯೇನಲ್ಲ. ಸ್ವಾತ್ರಂತ್ರ್ಯಾ ನಂತರ 1956 ರ ನವೆಂಬರ್-1 ರಂದು, ಮದ್ರಾಸ್, ಮುಂಬಯಿ, ಹೈದರಾಬಾದ್ ಪ್ರಾಂತ್ಯಗಳಲ್ಲಿ ಹರಿದು ಹಂಚಿಹೋಗಿದ್ದ ಕನ್ನಡ ಮಾತನಾಡುವ ಪ್ರದೇಶಗಳನ್ನು ಒಗ್ಗೂಡಿಸಿ ಮೈಸೂರು ರಾಜ್ಯವನ್ನು ಮಾಡಲಾಯಿತು. ಆನಂತರ 1973 ನವೆಂಬರ್-1 ರಂದು ಮೈಸೂರು ರಾಜ್ಯವನ್ನು ಕನ್ನಡಿಗರು ಇರುವ ಕರುನಾಡು ಅರ್ಥಾತ್ ಕರ್ನಾಟಕ ಎಂದು ಹೆಸರಿಸಿದ ಸಂಭ್ರಮವೇ ನಾವೆಲ್ಲರೂ ಆಚರಿಸುವ ಕನ್ನಡ ರಾಜ್ಯೋತ್ಸವ… Read More ಕನ್ನಡದ ರಕ್ಷಣೆಯನ್ನು ಗುತ್ತಿಗೆ ನೀಡಿದ್ದೇವೆಯೇ?

ಏಕದಂತ ಮಿತ್ರ ವೃಂದ ಕನ್ನಡ ರಾಜ್ಯೋತ್ಸವ

ಅಲ್ಲಿ ಹಾರ ತುರಾಯಿಗಳಿರಲಿಲ್ಲ. ಬಾಜಾ ಭಜಂತ್ರಿಯ ಅಬ್ಬರವಿರಲಿಲ್ಲ. ಹೇಳಿಕೊಳ್ಳುದಕ್ಕೆ ದೊಡ್ಡವರಾರು ಇರರಲಿಲ್ಲ. ಅಲ್ಲಿದ್ದ ಬಹುತೇಕರು ಸಣ್ಣ ವಯಸ್ಸಿನ ಮಕ್ಕಳೇ. ಇನ್ನೂ ಹೇಳಬೇಕೆಂದರೆ  ಅಲ್ಲಿದ್ದವರ ಹೆಚ್ಚಿನ ಮಾತೃಭಾಷೆ ಕನ್ನಡವೇ ಆಗಿರಲಿಲ್ಲ. ಆದರೂ ಅವರೆಲ್ಲರೂ ಸುಲಲಿತವಾಗಿ ಕನ್ನಡ ಮಾತನಾಡುವ ಮೂಲಕ  ಕನ್ನಡಿಗರೇ ಆಗಿದ್ದರು  ಮತ್ತು  ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಿಸಲು ಕಠಿ ಬದ್ದರಾಗಿದ್ದರು. ಹೌದು. ನೆನ್ನೆ ಬೆಳಿಗ್ಗೆ  ಬೆಂಗಳೂರಿನ ತಿಂಡ್ಲುವಿನ ವಿಶ್ವೇಶ್ವರಯ್ಯ ಬಡಾವಣೆಯ ಏಕದಂತ ಮಿತ್ರ ವೃಂದದ ಸಣ್ಣ ವಯಸ್ಸಿನ ಮಕ್ಕಳು ತಮ್ಮ ಪೋಷಕರೊಡಗೂಡಿ ಕರುನಾಡ ಹೆಮ್ಮೆಯ ಹಬ್ಬ  ಕರ್ನಾಟಕ… Read More ಏಕದಂತ ಮಿತ್ರ ವೃಂದ ಕನ್ನಡ ರಾಜ್ಯೋತ್ಸವ

64ನೇ ಕನ್ನಡ ರಾಜ್ಯೋತ್ಸವದ ಆಚರಣೆ

ಬೆಂಗಳೂರಿನ ವಿದ್ಯಾರಣ್ಯಪುರದ ಶ್ರೀಗಂಧ ಕನ್ನಡ ಸಂಘದ ವತಿಯಿಂದ 64ನೇ ಕನ್ನಡ ರಾಜ್ಯೋತ್ಸವ ಸಂಭ್ರಮ ಮತ್ತು ಸಡಗರಗಳಿಂದ ಅಧ್ಧೂರಿಯಾಗಿ ಮತ್ತು ಅರ್ಥಪೂರ್ಣವಾಗಿ ನೆರವೇರಿತು. ಕಾರ್ಯಕ್ರಮವನ್ನು  ಸ್ಥಳೀಯ ಮುಖಂಡರುಗಳಾದ ಶ್ರೀಯುತ ತಿಂಡ್ಲು ಬಸವರಾಜ್ ಅವರ ಸಮ್ಮುಖದಲ್ಲಿ ಶ್ರೀ ಹರಿಯವರು ಹಳದಿ ಮತ್ತು ಕೆಂಪು ಬಣ್ಣದ ಕನ್ನಡ ಧ್ವಜವನ್ನು ತಿಂಡ್ಲುವಿನ ಬಸವೇಶ್ವರ ಪ್ರತಿಮೆಯ ಆವರಣದಲ್ಲಿ  ಆರೋಹಣ ಮಾಡುವುದರ ಮೂಲಕ ಉಧ್ಘಾಟಿಸಲಾಯಿತು. ನಂತರ ಎಲ್ಲರ ಒಕ್ಕೊರಲಿನ ಕಂಠಗಳಿಂದ  ಸುಂದವಾಗಿ ಮೂಡಿಬಂದ ನಾಡ ಗೀತೆ ಜೈ ಭಾರತ ಜನನಿಯ ತನುಜಾತೆ ಎಲ್ಲರ ಗಮನ ಸೆಳೆಯಿತು. … Read More 64ನೇ ಕನ್ನಡ ರಾಜ್ಯೋತ್ಸವದ ಆಚರಣೆ