ಬಡವರ ಮಕ್ಕಳು ಬೆಳೀ ಬೇಕು ಕಣ್ರಯ್ಯ

ಬಡವರ ಮಕ್ಕಳಿಗೂ ಉತ್ತಮ ಅವಕಾಶಗಳನ್ನು ಕಲ್ಪಿಸಿಕೊಟ್ಟಲ್ಲಿ ಅವರು ಸಹಾ ಉತ್ತಮವಾಗಿ ಜೀವಿಸಬಲ್ಲರು ಎಂಬುದಕ್ಕೆ ಕಳೆದ ಭಾನುವಾರ ನಾನು ಭಾಗವಹಿಸಿದ್ದ ಹುಟ್ಟು ಹಬ್ಬವೇ ಸಾಕ್ಷಿಯಾಗಿದ್ದು ಆ ಸುಂದರ ಕ್ಷಣಗಳು ಇದೋ ನಿಮಗಾಗಿ… Read More ಬಡವರ ಮಕ್ಕಳು ಬೆಳೀ ಬೇಕು ಕಣ್ರಯ್ಯ

ಪುರೋಹಿತರ ಪರದಾಟ

ಬಹಳ ದಿನಗಳ ತರುವಾಯು ಮಕ್ಕಳು ಮನೆಯಲ್ಲಿ ಅಮ್ಮಾ ಮಾಡುವ ರುಚಿ ರುಚಿಯ ಅಡುಗೆಯ ಹೊರತಾಗಿಯೂ ಹೊರಗಡೆ ಊಟ ಮಾಡುವ ಆಸೆ ವ್ಯಕ್ತ ಪಡಿಸಿದ ಕಾರಣ ಕಳೆದ ವಾರಾಂತ್ಯದಲ್ಲಿ ಮಡದಿ, ಮಗಳು ಮತ್ತು ಮಗನೊಂದಿಗೆ ರಾತ್ರಿ ಊಟಕ್ಕೆಂದು ಸ್ವಲ್ಪ ದೂರದ ಹೊಸಾ ಹೋಟೆಲ್ ಒಂದಕ್ಕೆ ಹೋದೆವು. ಭಾನುವಾರವಾದ್ದರಿಂದ ಹೋಟೇಲ್ ಬಹುತೇಕ ಭರ್ತಿಯಾಗಿತ್ತು ಸ್ವಲ್ಪ ಮಬ್ಬಾಗಿಯೂ ಇತ್ತು. ಹಾಗಾಗಿ ಖಾಲಿ ಇರುವ ಜಾಗವನ್ನು ಹುಡುಕುತ್ತಿದ್ದಾಗ, ಒಬ್ಬರನ್ನು ನೋಡಿದ ತಕ್ಷಣ, ಎಲ್ಲೋ ನೋಡಿದ ನೆನಪು ಆದರೆ ಸರಿಯಾಗಿ ಸ್ಮೃತಿಗೆ ಬರುತ್ತಿರಲಿಲ್ಲ. ಅವರೂ… Read More ಪುರೋಹಿತರ ಪರದಾಟ

ಕಾಫೀ ಪುರಾಣ

ಶಂಕರನ ಮನೆಯವರು ಒಟ್ಟು ಕುಟುಂಬದವರು.  ಮನೆಯಲ್ಲಿ ಮಕ್ಕಳ ಸಂಖ್ಯೆಯೂ ಅಧಿಕವೇ. ಹಾಗೆಯೇ ಮನೆಗೆ ಬಂದು  ಹೋಗುವವರು ತುಸು ಹೆಚ್ಚೇ.  ಬಂದವರಿಗೆ ಕಾಫೀ ತಿಂಡಿ, ಊಟೋಪಚಾರ ಮಾಡುವುದು ಅವರ ಮನೆಯಲ್ಲಿ  ನಡೆದು ಬಂದ ಸಂಪ್ರದಾಯ. ಹಾಗೆ ಪ್ರತೀ ಬಾರಿ ಕಾಫೀ ಮಾಡಿದಾಗಲೂ ಮಕ್ಕಳೂ ಕಾಫಿ ಕುಡಿಯಲು ಬಯಸುವುದು ಸಹಜ.  ಹಾಗಾಗಿ ಸುಮ್ಮನೆ ಬಂದು ಹೋದವರೆಲ್ಲರ ಜೊತೆಯೂ ಕಾಫಿ ಕುಡಿಯುತ್ತಾ ಹೋದರೆ ಮಕ್ಕಳಿಗೆ ಕಾಫಿ ಚಟವಾಗುತ್ತದೆ ಎಂದು ತಮ್ಮ ಮುಂದಿನ ಪೀಳಿಗೆಯ ಮಕ್ಕಳಿಗೆ ಕಾಫೀ ಅಭ್ಯಾಸ ಮಾಡಿಸದೇ ಇದ್ದರೆ ಮಕ್ಕಳ… Read More ಕಾಫೀ ಪುರಾಣ