ಕನ್ಯಾದಾನ ಎಂಬುದು ಮರೀಚಿಕೆ ಆಗಲಿದೆಯೇ?

ಪುರುಷರಿಗಿಂತಲೂ ತಾವೇನೂ ಕಡಿಮೆ ಇಲ್ಲಾ ಎಂಬ ಅಂಧ ಪಾಶ್ಚಾತ್ಯೀಕರಣದ ಪ್ರಭಾವದಿಂದಾಗಿ ಪುರುಷ ದ್ವೇಷಿಗಳಾಗುತ್ತಿರುವ ಹೆಣ್ಣು ಮಕ್ಕಳಿಂದಾಗಿ, 2030ರ ಹೊತ್ತಿಗೆ ವಿಶ್ವದ 45% ಹುಡುಗಿಯರು ಅವಿವಾಹಿತರಾಗಿಯೇ ಉಳಿದು, ಶಾಸ್ತ್ರೋಕ್ತವಾಗಿ ಗಂಗಾಜಲದಿಂದ ಧಾರೆ ಎರೆದು ಮಗಳನ್ನು ಅಳಿಯನಿಗೆ ಕನ್ಯಾದಾನ ಮಾಡುತ್ತಿದ್ದ ಪದ್ದತಿ ಇನ್ನು ಮುಂದೆ ಮರೀಚಿಕೆಯಾಗುತ್ತಿರುವ ಕಥೆ-ವ್ಯಥೆ ಇದೋ ನಿಮಗಾಗಿ… Read More ಕನ್ಯಾದಾನ ಎಂಬುದು ಮರೀಚಿಕೆ ಆಗಲಿದೆಯೇ?

ಸಮಾಜ ಸೇವಕ ಸಾಯಿರಾಂ ಗೋಪಾಲಕೃಷ್ಣ ಭಟ್

ಸ್ಥಿತಿವಂತರು ಬಡವರಿಗೆ ಹಣವನ್ನು ಹಂಚುವ ಮೂಲಕ ಸಮಾಜ ಸೇವಕರಾಗುವುದಿಲ್ಲ. ತಾವು ಕೊಡುವ ಹಣ ಸತ್ಪಾತ್ರರಿಗೆ ಸೇರುತ್ತಿದೆಯೇ ಎಬುದರ ಅರಿವಿರಬೇಕು. ಕೇರಳ ಮತ್ತು ಕರ್ನಾಟಕದ ಕರಾವಳಿಯ ಭಾಗದಲ್ಲಿ ೩೦೦ಕ್ಕೂ ಹೆಚ್ಚಿನ ಮನೆಗಳ ನಿರ್ಮಾಣ, ೯೫೦ಕ್ಕೂ ಹೆಚ್ಚಿನ ಆರೋಗ್ಯ ಶಿಬಿರಗಳ ಹೊತೆಗೆ ಲೆಕ್ಕವಿಲ್ಲದಷ್ಟು ಜನರಿಗೆ ಆರ್ಥಿಕ ನೆರವನ್ನು ನೀಡಿ ಎಲ್ಲರಿಗೂ ಹತ್ತಿರವಾಗಿದ್ದ ಕಾಸರಗೋಡು ಮೂಲದ ಮಾನವೀಯ ಹೋರಾಟಗಾರ ಶ್ರೀ ಸಾಯಿರಾಂ ಗೋಪಾಲಕೃಷ್ಣ ಭಟ್ ಅವರ ವ್ಯಕ್ತಿ ಮತ್ತು ವ್ಯಕ್ತಿತ್ವ ಪರಿಚಯವನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ತಿಳಿಸುವ ಸಣ್ಣ ಪ್ರಯತ್ನ. … Read More ಸಮಾಜ ಸೇವಕ ಸಾಯಿರಾಂ ಗೋಪಾಲಕೃಷ್ಣ ಭಟ್

ಮದುವೆಯ ಈ ಬಂಧ ಅನುರಾಗದ ಅನುಬಂಧ

ಮದುವೆ ಎನ್ನುವುದು ಕೇವಲ ಗಂಡು ಹೆಣ್ಣಿನ ಒಗ್ಗೂಡಿಸುವಿಕೆಯಲ್ಲದೇ ಅದು ಆ ಎರಡು ಕುಟುಂಬಗಳ ನಡುವೆ ಸಂಬಂಧವನ್ನು ಬೆಸೆಯುವುದಲ್ಲದೇ ಆ ಎರಡೂ ಕುಟುಂಬಗಳ ಮುಂದಿನ ಗುಣ ನಡುವಳಿಕೆಗಳನ್ನು ಮುಂದಿನ ತಲಮಾರಿಗೂ ಮುಂದುವರೆಸಿಕೊಂಡು ಹೋಗುವ ಸುಂದರವಾದ ಸಂದರ್ಭವಾಗಿದೆ. ಮದುವೆ ಎನ್ನುವುದು ಉಚ್ಚರಿಸಲು ಕೇವಲ ಮೂರೇ ಅಕ್ಷರಗಳಾದರೂ ಅದರ ಹಿಂದಿರುವ ಕಷ್ಟವನ್ನು ಅರಿತೇ ಮದುವೇ ಮಾಡಿ ನೋಡು, ಮನೆ ಕಟ್ಟಿ ನೋಡು ಎಂಬುವ ಗಾದೆಯನ್ನೇ ನಮ್ಮ ಹಿರಿಯರು ಮಾಡಿದ್ದಾರೆ. ಸುಮಾರು ವರ್ಷಗಳ ಹಿಂದೇ ಇದೇ ದಿನ ಎಲ್ಲಾ ಎಡರು ತೊಡರುಗಳನ್ನೂ ಮೀರಿ… Read More ಮದುವೆಯ ಈ ಬಂಧ ಅನುರಾಗದ ಅನುಬಂಧ